723. ಸಂಜು ವೆಡ್ಸ್ ಗೀತಾ (೨೦೧೧)

ಸಂಜು ವೆಡ್ಸ್ ಗೀತಾ ಚಲನಚಿತ್ರದ ಹಾಡುಗಳು 
  1. ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
  2. ಸಂಜು ಮತ್ತು ಗೀತಾ ಸೇರಬೇಕು (ಶ್ರೇಯ ಘೋಷಾಲ್ )
  3. ನಲ್ಲೆ ನಲ್ಲೆ 
  4. ಒಮ್ಮೆ ಬಾರೋ 
  5. ರಾವಣ ಸೀತೇನ ಕದ್ದ 
  6. ಸಂಜು ಮತ್ತು ಗೀತಾ ಸೇರಬೇಕು (ಸೋನು ನಿಗಮ್ )
  7. ಸಂಜು ಮತ್ತು ಗೀತಾ ಸೇರಬೇಕು (ಯುಗಳ ಗೀತೆ )
ಸಂಜು ವೆಡ್ಸ್ ಗೀತಾ (೨೦೧೧) - ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಸಂಗೀತ :  ಜೆಸ್ಸಿ ಗಿಫ್ಟ್  ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್ 

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ.. ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ

ಜೀವನ.. ಈ ಕ್ಷಣ .. ಶುರುವಾದಂತಿದೆ..
ಕನಸಿನ ಊರಿನ ಕದ  ತೆರೆಯುತ್ತಿದೆ...
ಅಳಬೇಕು ಒಮ್ಮೆ ಅಂತನಿಸಿದೆ... ಖುಷಿಯೀಗ ಮೀರಿ ಮೀರಿ
ಮಧುಮಾಸದಂತೆ ಕೈಚಾಚಿದೆ... ಹಸಿರಾಯ್ತು   ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ...  
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ.. ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ

ಸಾವಿನ.. ಅಂಚಿನ.. ಬದುಕಂತಾದೆ ನೀನು
ಸಾವಿರ..  ಸೂರ್ಯರ... ಬೆಳಕಂತಾದೆ ನೀನು
ಕೊನೆಯಾಸೆ ಒಂದೇ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲೂ ನೀ ಹೀಗೆಯೇ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ...  
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ.. ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
------------------------------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ಸಂಜು ಮತ್ತು ಗೀತಾ ಸೇರಬೇಕು 
ಸಂಗೀತ :  ಜೆಸ್ಸಿ ಗಿಫ್ಟ್  ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್ 

ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕಿಂತ ನೀನೆ ನನ್ನ ಸ್ವಂತ ಇರುವಾಗ ನಾನು ಚಿಂತೆಯೇನು
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಹುರುಳೊ ಧನಿ ತರವೆ
ನಗಬಾರದೆ ನಗಬಾರದೆ ನನ್ನೊಲವೆ
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು

ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡೆಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ ನಿನ್ನ ಈ ಕಣ್ಣಲಿ ಇದೆ ಕೊನೆಯ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ
ಮಳೆಯ ಹನಿ ಹುರುಳೊ ಧನಿ ತರವೆ
ನಗಬಾರದೆ ನಗಬಾರದೆ ನನ್ನೊಲವೆ
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು

ಕಂಡಿಲ್ಲ ಯಾರು ಆ ದೇವರನ್ನು ಇರಬಹುದು ಏನು ನಿನ್ನಂತೆ ಅವನು
ಗೆಳೆಯ ಎಂದರೆ ಅದಕು ಹತ್ತಿರ ಇನಯ ಎಂದರೆ ಅದಕು ಎತ್ತರ
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆ ಜಗದಾಚೆಗು ಜೊತೆಗೆ ಸಾಗುವೆ
ಕಡಲೆಲ್ಲವ ಅಲೆ ಸುತ್ತುವ ತರವೆ
ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೆ
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು
----------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ನಲ್ಲೇ ನಲ್ಲೇ
ಸಂಗೀತ : ಜೆಸ್ಸಿ ಗಿಫ್ಟ್ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಟಿಪ್ಪು

ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸು
ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ

ಮನಸ್ಸೀಗ ಮಾಡುತಿದೆ ಒಂದು ಕಾಲ ತಪಸ್ಸು
ಒಲವೀಗ ಬೇಕು ಅಂತು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆ ಅಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೇ ಸಮನೆ ಹೃದಯ ಚಲನೆ ನಾ
ನಿಲಿಸೊ ಚೆಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸಾ ರೂಪ ಕಣ್ಣು ಜೋಡಿ ದೀಪ ಯಾರೇ ನೀನು ಚೆಲುವೆ
ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ

ಬರೀ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೆ ನನ್ನ ಅಮ್ಮನಿಗೆ ಅಮ್ಮನಾಗಬೇಕು
ನನ್ನ ಬಾಳನ್ನು ತಿದ್ದೊ ಬ್ರಹ್ಮನಾಗಬೇಕು
ಬಾರೇ ಬೇಗ ಸೇರೋ ಯೋಗ ನೀಡೆ ಈಗ
ನೀಡಲೆಂದ ಪ್ರೀತಿತಂದೆ ಕಣ್ಮಮುಂದೆ ಬಾ ಬಾ ಬಾ ಬಾ ಬಾ
ಹೋಗೋ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ ಪರಿಚಯವಾಗುವೆ
ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸು
----------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ಒಮ್ಮೆ ಬಾರೋ
ಸಂಗೀತ : ಜೆಸ್ಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್

ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ನೀನಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರು ಸುಲಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ ರಂಗೋಲಿಯು ಬರೆದೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಅದೇ ಹಾದಿ ತುಳಿವಾಗ ಎದೆಯಲ್ಲಿ ನೂರು ನೋವು
ಇಳೆ ಸಂಜೆ ಕಳೆವಾಗ ಸುಳಿದಂತೆ ಇಲ್ಲಿ ಸಾವು
ಅಸುನೀಗೊ ಮುನ್ನ ನಿನ್ನನು ತುಸು ನೋಡಲು ಕಾದೀಹೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
----------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ರಾವಣ ಸೀತೆ ಕದ್ದ
ಸಂಗೀತ : ಜೆಸ್ಸಿ ಗಿಫ್ಟ್ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಜೆಸ್ಸಿ ಗಿಫ್ಟ್

ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು
ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ
ಇಂದು ಹೆಣ್ಣು ಅಂದ್ರೆ ದೇವಂತರ ವ್ಯಾಪಾರ
ಅಂದು ಮಣ್ಣು ಅಂದ್ರೆ ತಾಯಿಗಿಂತ ಗ್ರೇಟು
ಇಂದು ಮಣ್ಣು ಅಂದ್ರೆ ಬರೀ ಸೈಟು ಫೈಟು
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು

ನಾರಿ ಮದನಾರಿ ದ್ರೌಪದಮ್ಮ ತಗೊಳಿಲ್ಲ ಕೇರು
ಸೀರೆ ಬದಲಾಗಿ ಚೂಡಿದಾರ ಹಾಕೊಂಡಿದ್ರೆ ಇತ್ತ ಡೇಂಜರು?
ಅಲಲೇ ಕೃಷ್ಣ ಎಲ್ರನ್ನ ಸೇರಿಸಿ ಬ್ಲಡ್ ಶೆಡ್ ನಿಲ್ಸಿ
ಕ್ರಿಕೆಟ್ ಆಟ ಆಡಿಸಿ ಯಾರೊ ಒಬ್ರನ್ನ ಗೆಲ್ಲಿಸಿ
ಸಂಧಾನ ಮಾಡದೆ ಯುದ್ದನ್ ಮಾಡ್ಸಿದ
ತಲೇನೆ ಓಡ್ಸದೇ ತಲೆಗಳ ಎತ್ತಿಸಿದ
ಬಾಲ್ ಅಲ್ಲಿ ಮುಕ್ಸೋದ ಬೇಲ್ ವರೆಗೂ ತಂದುಬಿಟ್ಟ
ಒಳಗೊಳಗೇ ತಂದಿಟ್ಟು ಮಿಲಿಟರಿನೇ ಕರೆಸಿಬಿಟ್ಟ
ರಾಮ ಡೀಲು ಕೊಟ್ಟ ಬಂದ ಲಂಕೇನೆ ಸುಟ್ಟ
ಯಾರೊ ಜಕ್ಕು ಇಟ್ಟ ಕೌರವಂಶ ಟಾ ಟಾ
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ
ಕಾರಣ ರಿಯಲ್ ಎಸ್ಟೇಟು ಲೇಡಿ ಒಬ್ಬ ಲೇಡಿ
ಲವ್ ಅಲ್ ಬಿದ್ದೆ ಬಿಟ್ಲು ಡುಯೆಟ್ ಹಾಡಿ ನೋಡಿ ಅಲ್ ನೋಡಿ

ಕೊಟ್ಟ ಉಂಗುರ ಕಳ್ಕೊಂಡಿದ್ದು ಬಲೇ ಟ್ರ್ಯಾಜಡಿ
ಅಲೆಲೆ ಲಾಲುಬಾಗಿನೊಳಗೆ ಎಚ್ಚರ ತಪ್ಪೋ ಸಲುಗೆ
ಇವಳ ಕೈಯಲ್ಲಿ ಪಾಪು ಅವನ ಸಿಲ್ಲಿ ಆಪು
ಮಾರ್ನಿಂಗ್ ನೈಸ್ ಅಲ್ಲಿ ಮಧ್ಯಾಹ್ನ ಐಸ್ ಅಲ್ಲಿ
ಇವ್ನಿಂಗ್ ಕಿಸ್ ಅಲ್ಲಿ ಮುಕ್ತಾಯ ಕೇಸ್ ಅಲ್ಲಿ
ನವರಂಗಿಯ ಆಟನೆ ಆಡೋದು ಕಲಿಯುಗ 
ಇಲ್ಲಿ ಕೆಟ್ಟದ್ದು ಬಿಟ್ಟಾಕಿ ಒಳ್ಳೇದು ಕಲಿ ಮಗ ಈಗ
ಬ್ರಹ್ಮ ಆಸೆನ ಕೊಟ್ಟ ಹೆಣ್ಣು ಗಂಡಿಗೆ
ಪಾಸು ಫೈಲ್ ಅನ್ನ ಕೊಟ್ಟ ಅರ್ರೆ ಯಾಕೆ ಹೀಗೆ? 
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು
----------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ಸಂಜು ಮತ್ತು ಗೀತಾ 
ಸಂಗೀತ : ಜೆಸ್ಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್ 

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…

ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ…
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…

ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ… ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ ಬಾರೇ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೇ ಜೀವ ತುಂಬು ಹಾಗೆ
ಉಸಿರಾಡುವ ಶವವಾದೆ ನಾ… ನೀನು ಇಲ್ಲದೇ
ಮಳೆ ನಿಂತರೂ ಮರದಾ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
----------------------------------------------------------------------------------------------------

ಸಂಜು ವೆಡ್ಸ್ ಗೀತಾ (೨೦೧೧) - ಸಂಜು ಮತ್ತು ಗೀತಾ 
ಸಂಗೀತ : ಜೆಸ್ಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್ , ಶ್ರೇಯ ಘೋಷಾಲ್ 

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…

ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ…
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…

ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ… ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ
ಉಸಿರಾಡುವ ಶವವಾದೆ ನಾ… ನೀನು ಇಲ್ಲದೇ
ಮಳೆ ನಿಂತರೂ ಮರದಾ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..
---------------------------------------------------------------------------------------------------

No comments:

Post a Comment