1108. ಮೊಮ್ಮಗ (೧೯೯೭)

ಮೊಮ್ಮಗ ಚಿತ್ರದ ಹಾಡುಗಳು 
  1. ಶ್ರೀ ರಂಗನು ಕಣ್ಣು ಮುಚ್ಚಿ 
  2. ಮಹಾರಾಜಾ ರಾಜಶ್ರೀ 
  3. ಅಕ್ಕ ತಂಗಿ ಇಬ್ಬರೂ 
  4. ಡೋಲು ಡೋಲು ನನ್ನ ತನು ಡೋಲು 
  5. ಓ..ಹೂಗಳೇ 
  6. ಕೇರಿ ಏರಿ ಮ್ಯಾಲೇ 
  7. ಹೇ.. ಗುಮ್ಮ ಲಕ್ಕಡಿ 
  8. ಹುಟ್ಟುತ್ತಾ ಒಂದು ಕೊಂಬೂ 
  9. ಅಮ್ಮನಿಗಾಗಿ ಕರ್ಣ ಸೋತ 
  10. ಬಾರೋ ಅಣ್ಣ ಬಾರೋ ತಮ್ಮ 
ಮೊಮ್ಮಗ (೧೯೯೭) - ಶ್ರೀರಂಗನು ಕಣ್ಣು ಮುಚ್ಚಿ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ :  ಚಿತ್ರಾ

ಹೆಣ್ಣು : ಶ್ರೀ ರಂಗನು ರಂಗನು ಕಣ್ಮುಚ್ಚಿ ಶಂಭೋ ಶಿವ ಕಣ್ಮುಚ್ಚಿ
         ನದಿಯೆಲ್ಲಾ ಕಣ್ಮುಚ್ಚಿ ಕಡಲೆಲ್ಲಾ ಕಣ್ಮುಚ್ಚಿ ಲೋಕಾನೇ ಕಣ್ಮುಚ್ಚಿ ಮಲಗಿದರೂ
         ಎದ್ದವನೆದ್ದವನೇದ್ದವನೊಬ್ಬ ಹೆಂಗೆಂಗೆದ್ದವನೆಂದರೇ ಅಬ್ಬಾ
         ಒಗಟು ಹೇಳೂರೊಳಗವನೇ ಒಗಟು ಬಿಡಿಸರೊಳಗವನೇ
         ಒಗಟು ಹೇಳೂರೊಳಗವನೇ ಒಗಟು ಬಿಡಿಸರೊಳಗವನೇ ಯಾರವನ್ಯಾರವನ್ಯಾರನ್ಯಾರವನು
         ನಿದ್ದೆ ಮಾಡದೇ ಎದ್ದೇ ಇರುವುದೂ ಉಸಿರಮ್ಮಾ ನಮ್ಮ ಉಸಿರಮ್ಮಾ
--------------------------------------------------------------------------------------------------------------------------

ಮೊಮ್ಮಗ (೧೯೯೭) - ಮಹಾರಾಜಾ ರಾಜಶ್ರೀ ಭುವನ ಭಾಗ್ಯಶ್ರೀ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಮಹಾರಾಜ ರಾಜಶ್ರೀ ಭುವನ ಭವ್ಯ ಭಾಗ್ಯಶ್ರೀ ಅರಿರಾಯರ ಗಂಡ ಭೇರುಂಡಾ
ಹೇಹೇಹೇ... ಶ್ರೀ ಕೃಷ್ಣದೇವರಾಯರ ಅಮೃತ ಹಸ್ತ ಸನ್ಮಾನಿತ ಪಕ್ಷಿಧಾಮ ಕ್ಷೇತ್ರ ಕ್ಷೇಮ ಢಣಾಯಕ
ಅನ್ನದಾನಿ ಧರ್ಮಪ್ಪನ ಮಗ ಗುರುವಪ್ಪ ಪೊನ್ನದಾನಿ ಗುರವಪ್ಪನಾ ಮಗ ಕನಕಪ್ಪ
ಪುಣ್ಯದಾನಿ ಕನಕಪ್ಪನಾ ಮೊಮ್ಮಗ ಸೂರಪ್ಪ...  ಸೂರಪ್ಪ.... ಸೂರಪ್ಪ ಸುಗುಣಶೀಲ ಸೂರಪ್ಪಾ
ನಿನ್ನ ಹೃದಯಾರವಿಂದಕ್ಕೆ ಈ ಕುರುಡು  ಕವಿಯ ಕೋಟಿ ಶರಣಪ್ಪಾ
ಆಕಾಶದಾ ಆರದ ದೀಪ ಸೂರಪ್ಪ ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ
ಹಣ್ಣಲೇ ನಾನು ಚಿಗುರೆಲೆ ನೀನು ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗೂ ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನೂ
ಆಕಾಶದಾ ಆರದ ದೀಪ ಸೂರಪ್ಪ ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ

ಪ್ರತಿ ಧ್ಯಾನದ ಪ್ರತಿ ಕಣದಲೀ ತಿನ್ನೋರ ಹೆಸರಿದೆ ಬಲ್ಲೆಯಾ
ನನ್ನ ಹೆಸರಿನ ಅನ್ನ ಕಾಣಿಸು ದಯೇ ತೋರಿ ಬರೆವೆಯಾ
ನನಗೆ ವಯಸ್ಸಿಲ್ಲಾ ಮನಸು ಮುದಿಯಲ್ಲಾ ಕಣ್ಣು ಕಾಣಲ್ಲಾ ಕಂಠ ಹಿಂಗಿಲ್ಲಾ
ಮಣ್ಣು ಸೇರುವ ಘಳಿಗೆವರೆಗೂ ಹಸಿವ ಮರೆಯುವೆನು ನಿನ್ನ ಅನ್ನ ನೆನೆಯುವೇನೂ
ಆಕಾಶದಾ ಆರದ ದೀಪ ಸೂರಪ್ಪ ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ

ಅಳುತಾ ಹುಟ್ಟಿ ನಗುತಾ ಬೆಳೆಯೋ ಮಕ್ಕಳು  ಜಗದಲಿ
ಹುಟ್ಟೋ ದಿವಸ ಬಂದಾ ಅಳುವೂ ನಿಂತಿಲ್ಲಾ ನನ್ನ ಬಾಳಲಿ
ಅಭಯ ಹಸ್ತವಿರೋ ರಾಜನಂತಿರುವೇ ದಯವ ತೋರಿಸುವ ದೇವರಾಗಿರುವೇ
ನೀನೇ ತಾಯಿ ನೀನೇ ನೀನೇ ನನ್ನ ಮಗ ತಲೆ ಕಾಯೋ ಮೊಮ್ಮಗ
ಆಕಾಶದಾ ಆರದ ದೀಪ ಸೂರಪ್ಪ ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ
ಹಣ್ಣಲೇ ನಾನು ಚಿಗುರೆಲೆ ನೀನು ನಿನ್ನ ನೆರಳಿನಲಿ ನಾನು ಇರಲೇನು
ಉದುರಿ ಹೋಗುವ ಘಳಿಗೆವರೆಗೂ ಚಿಂತೆ ಮರೆಯುವೆನು ನಿನ್ನ ನೆರಳ ನೆನೆಯುವೆನೂ
ಆಕಾಶದಾ ಆರದ ದೀಪ ಸೂರಪ್ಪ ಹತ್ತೂರಿಗೂ ಮುದ್ದಿನ ಮೊಮ್ಮಗ ನೀನಪ್ಪಾ
--------------------------------------------------------------------------------------------------------------------------

ಮೊಮ್ಮಗ (೧೯೯೭) - ಅಕ್ಕ ತಂಗಿ ಇಬ್ಬರು
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ

ಅಕ್ಕ ತಂಗಿ ಇಬ್ಬರೂ ಒಂದೇ ಜಂತೀಲಿ ಆವ್ರೇ
ಒಂದೇ ರೂಪಾ ಇದ್ರೂ ಜಗಳಾ ಆಡ್ತಾವ್ರೇ ಯಾರವರ್ಯಾರವರ್ಯರವರಮ್ಮಾ..
ಕುರುಡೀನಮ್ಮ ಇವರಮ್ಮ ತಕ್ಕ ಪಕ್ಕಾಡಿ ತಾರಾ ಪಕ್ಕಾಸು
ಮುಳ್ಳಿನ ಮಧ್ಯ ನಿಂತವರಿವರಿವರ್ಯಾರಮ್ಮಾ
ತಕ್ಕ ಪಕ್ಕಾಡಿ ಅಂದ್ರೇ ತಕ್ಕಡಿ ತರಾಸು ತಕ್ಕಡೀ
--------------------------------------------------------------------------------------------------------------------------

ಮೊಮ್ಮಗ (೧೯೯೭) - ಡೋಲು ಡೋಲು ನನ್ನ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ

ಹೆಣ್ಣು : ಡೋಲು ಡೋಲು ನನ್ನ ಮನ ಡೋಲು ಓಓಓಓಓಓಓಓಓ...
ಗಂಡು : ಡೋಲು ಡೋಲು ನನ್ನ ತನು ಡೋಲು
ಹೆಣ್ಣು : ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು

ಗಂಡು : ಉಪ್ಪಿನೆಸರಾ ಉಂಡ ನಾಲಿಗೇಲಿ ಕೆಂಪು ಖಾರಾ ನೆತ್ತಿಗೇರೋ ಹಾಂಗೇ
ಹೆಣ್ಣು : ಸೋನೇ ಮಳೆಯಾ ಮುಂಜಾನೆಯಾಗೆ ಕಾಸಿ ಸೋಸಿದಾ ಕಾಫಿ ಹೀರೊ ಹಾಂಗೆ
ಗಂಡು : ಹಿಟ್ ಮ್ಯಾಲೆ ಅವರೆಕಾಳ್    ಹೆಣ್ಣು : ಹಿಟ್ ಮ್ಯಾಲೆ ಅವರೆಕಾಳ್
ಗಂಡು : ಮಜ್ಜಿಗೇಲಿ ಸೌತೇಹೋಳ ನೀರೂರಿ ನುಂಗೋವಾಂಗೆ ಈ ಇನ್ನ ಅಂದಾನಾ
            ತಿಂದು ತೇಗೋ ಆಸೆ ನಿಂಗೇ....   ಡೋಲು ಡೋಲು ನನ್ನ ಮನ ಡೋಲು ಓಓಓಓಓ....
ಹೆಣ್ಣು : ಡೋಲು ಡೋಲು ನನ್ನ ತನು ಡೋಲು
ಗಂಡು : ಮುಂಜಾನೆ ಹೊತ್ತಿನಾ ಮಂಜೇನಾ ಮುತ್ತಿನ ಸಂಗಾನು ಸೌಖ್ಯಾನಾ ಕಂಡ ತೆನೆ ನಾನು 
ಹೆಣ್ಣು : ಹಿಂಡಿಯಿಟ್ಟರೆ ಎತ್ತೋ ಎಳೆಯೋ ಹಾಂಗೇ ಸೊಪ್ಪು ಸಿಕ್ಕರೇ ಆಡು ಹಾಡೋ ಹಾಂಗೇ 
          ಸುಳಿವು ಸಿಕ್ಕರೇ ಹುಂಜ ಕೂಗೋಹಾಂಗೆ 
ಗಂಡು : ಕಬ್ಬು ಸಿಕ್ಕರೆ ಆನೆ ನುಗ್ಗೋ ಹಾಂಗೇ 
ಹೆಣ್ಣು : ಬಿಸಿಲಾಗೇ ಹೊಂಗೆಯಾಂಗೆ 
ಗಂಡು : ಎಳನೀರು ಗಂಜಿಯಂಗೇ ಬಿಸಿಲಾಗೆ ಹೊಂಗೆಯಂಗೆ 
            ಎಳನೀರು ಗಂಜಿಯಂಗೇ ಈ ನಿನ್ನ ರೂಪಾನಾ ಹೀರೋಕೆ ಆಸೆ ನಂಗೇ 
ಹೆಣ್ಣು : ಡೋಲು ಡೋಲು ನನ್ನ ಮನ ಡೋಲು ಓಓಓಓಓಓಓಓಓ...
ಗಂಡು : ಡೋಲು ಡೋಲು ನನ್ನ ತನು ಡೋಲು
ಹೆಣ್ಣು : ಹೆಪ್ಪಾದ ಮೊಸರಾಗೇ ಬೆಣ್ಣೆ ತೇಲಿ ಬಂದಂಗೇ ರೊಟ್ಟಿ ಮ್ಯಾಲೇ ಬಿದ್ದಂಗೇ ಬಿತ್ತು ನಿನ್ನ ಮುತ್ತು 
ಹೆಣ್ಣು : ಡೋಲು ಡೋಲು ನನ್ನ ಮನ ಡೋಲು ಓಓಓಓಓಓಓಓಓ...
ಗಂಡು : ಡೋಲು ಡೋಲು ನನ್ನ ತನು ಡೋಲು
--------------------------------------------------------------------------------------------------------------------------

ಮೊಮ್ಮಗ (೧೯೯೭) - ಓ..ಹೂಗಳೇ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ರಾಜೇಶಕೃಷ್ಣ, ಚಿತ್ರಾ

ಗಂಡು : ಓ.. ಹೂಗಳೇ ಒಂದು ಒಗಟು ಹೇಳಲೇ ನೀವು ಎಂಥಾ ಜಾಣೆರಂಥ ನೋಡಲೇ
ಹೆಣ್ಣು : ಓ... ದುಂಬಿಯೇ ಜೋಕೇ ಸಿಕ್ಕಿ ಬಿದ್ದಿಯೇ ಎಂದೂ ಅಂಡದಲ್ಲೂ ಅರಿವು ಕಂಡಿಯೋ
ಗಂಡು : ಜಯವಾಗಲೀ ಕಲ್ಯಾಣವಾಗಲೀ ನಿಮ್ಮ ಅಂದ ಚಂದ ಬುದ್ದಿ ಮಂದ ಒನ್ ಟೂ ಥ್ರೀ ಫೋರ್
           ಕೈ ಇದ್ದರೂ ಬೆರಳಿಲ್ಲಾ  ಕಾಲಿದ್ದರೂ ನಡೆ ಇಲ್ಲಾ ಬೆನ್ನಿದ್ದರೂ ಹೊಟ್ಟೆಯಲ್ಲ ತಡಿ ಮುಗಿದಿಲ್ಲ
           ತಳಾ ಇದ್ದರೂ ತಲೆ ಇಲ್ಲಾ ಭುಜ ಇದ್ದರೂ ತೊಳಿಲ್ಲಾ ದೇಹವಿದ್ದರೂ ಉಸಿರಿಲ್ಲಾ ಇವನು ನರನಲ್ಲಾ...
         ಹ್ಹಾಂ ... ಕುರ್ಚಿಗೇ ತಲೆಯಿಲ್ಲಾ ಈ ಕುರ್ಚಿಗೇ ಬೆರಳಿಲ್ಲಾ ಹೊಟ್ಟೆ ತೊಳಿಲ್ಲಾ ಈ ಕುರ್ಚಿಗೇ ಉಸಿರಿಲ್ಲಾ
ಹೆಣ್ಣು : ಅಹ್ ಹೂಗಳೇ ಮೈತುಂಬ ಒಡವೆಗಳೇ ಬುದ್ದಿ ಬೀರೂಲ್ಲಿಟ್ಟು ಬಂದ್ರಾ ಮಕ್ಕಳೇ
ಗಂಡು : ಅಹ್ ಹೂವೂಗಳೇ  ಉಪ್ಪಿನಕಾಯಿ ಜಾಡಿಗಳೇ ನಿಮಗೆ ಅಡಿಗೆ ಮನೆ ಬೆಸ್ಟು ಮಕ್ಕಳೇ...

ಗಂಡು : ನಮಗೆ ಆಟಾ ಪಾಠಾನೂ ಒಗಟಲ್ಲೇ ಮಾತೆಲ್ಲಾ ಒಗಟಲ್ಲೇ
            ಅಡಿಗೆ ಮಾಡೋದು ಬಡಿಸೋದು ಒಗಟಲ್ಲೇ ತಿನ್ನೋದು ಒಗಟಲ್ಲೇ ...
ಹೆಣ್ಣು : ಹೆಣ್ಣೇ ತಾನೇ ಬ್ರಹ್ಮಾಂಡದೊಗಟು ಹೇಳಯ್ಯ ನಮಗೇ ಮುಂದಿನ ಒಗಟೂ
ಗಂಡು : ನೀರಿನೊಳಗಡೆ ಅಲ್ಲಾಡಿ ತಿರುಗಿ ತಿರುಗಿ ಉಳ್ಳಾಡಿ ಬೆಂದು ಬಂದಳು ಪರದಾಡಿ ಬಡವನಾ ಲೇಡಿ
            ಹಾಲು ಮೊಸರು ಮುಟ್ಟಲ್ಲ ಉಪ್ಪು ಹುಳಿಯು ತಿನ್ನಲ್ಲ ಜನ್ಮದುಪವಾಸಿ ಒಡನಾಡಿ ಯಾರು ಈ ಲೇಡೀ ...
            ರೀ... ಬಿಟ್ಟ ಮಡಿಕೇರಿ.... ರೀ... ಬಿಟ್ಟ ಗಡಿಗೇರಿ ಮಡಿಕೆ ಗಡಿಗೆನೇ ಬಡವರ ಕುಲನಾರೀ ...
ಹೆಣ್ಣು : ಅಹ್ ಹೂವೂಗಳೇ  ಅಲಂಕಾರ ಬೊಂಬೆಗಳೇ ನಿಮಗೆ ಗಂಟು ಮೂಟೆ ಗಾಡಿ ಕಟ್ಟಲೇ..
ಗಂಡು : ಆಹ್ ಹೂಗಳೇ ನಿಮಗೇ ಸೀರೆ ದಕ್ಕದು ಇದ್ದು ಉಂಡುಕೊಂಡು ಹೋಗಿ ಮಕ್ಕಳೇ ..

ಗಂಡು : ಜರಿಯ ರೇಷ್ಮೆ ಉಟ್ಟೋರೆಲ್ಲಾ ಸೀರೆ ಮೈಸೂರ ರಾಣಿಯಲ್ಲ  ಮಳೆಯ ಹನಿಯಲ್ಲ ಸ್ವಾತಿ ಮುತ್ತು ಅಲ್ಲ
           ಎಲ್ಲರೂ ಸತಿಯಲ್ಲ ನೇಕಾರ ನೆನದ ಚಿತ್ತಾರದಂತೇ
ಹೆಣ್ಣು : ಓ.. ಹೂಗಳೇ ಮಾತಾಡಿ ಹೂಗಳೇ ನನ್ನ ಆಸೆಯಲ್ಲ ಹೇಳಿ ಹೂಗಳೇ
         ಓ.. ಹೂಗಳೇ ಕಾಪಾಡಿ ಹೂಗಳೇ ನಾನು ಸೋಲದಂತೆ ಮಾಡಿ ಹೂಗಳೇ
ಗಂಡು : ಜಯವಾಗಲಿ ಕಲ್ಯಾಣವಾಗಲೀ ನಿನ್ನ ಅಂದ ಚಂದ ಬುದ್ದಿ ಚೆಂದವ್ವ ... ಒನ್ ಟೂ ಥ್ರೀ ಫೋರ್
            ಸೂರ್ಯನಿಟ್ಟ ಕೋಪಕ್ಕೇ ಚಂದ್ರನಿಟ್ಟ ಪ್ರೇಮಕ್ಕೇ ಪಿ[ಪ್ರಾಣ ಇಟ್ಟ ಸಾಯಕ್ಕೆ ಕೇಳು ಮುಂದಕ್ಕೇ...
            ಸಾಯದೇನೆ ಹುಟ್ಟಕ್ಕೇ ಮುಂಜಾನೆಲಿ ಫಲಿಸಕ್ಕೆ ಯಾವುದಿಟ್ಟ ಹೇಳಮ್ಮಾ  ಹೆಣ್ಣು ಜೀವಕ್ಕೇ
ಹೆಣ್ಣು : ಕನಸಿಗೇ ಕೊನೆಯಿಲ್ಲಾ ಕನಸಿಗೆ ಮೊದಲಿಲ್ಲ ಹೆಣ್ಣಿನ ಮನಸಿನಲಿ ಕನಸಿಗೇ ಸಾವಿಲ್ಲ
ಗಂಡು : ಓ.. ಕೋಮಲೇ.. ಒಂದು ಸಿಟೀ ಹಾಕಲೇ ... ಓ.. ಕೋಮಲೇ.. ಒಂದು ಮಾತು ಕೇಳಲೇ ...
--------------------------------------------------------------------------------------------------------------------------

ಮೊಮ್ಮಗ (೧೯೯೭) - ಕೇರಿ ಏರಿ ಮ್ಯಾಲೆ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ 

ಹೆಣ್ಣು : ಕೆರೆ ಏರಿ ಮಾಲೆ ಅಂದಾ ಬಾಯಿ ತುಂಬಾ      ಗಂಡು : ಗೌರಿ ಗೌರಿ
ಹೆಣ್ಣು : ಶಿವಾ ಶಿವಾ ಅನ್ನೋ ಅವನಾ ಎದೆ ತುಂಬಾ    ಗಂಡು : ಗೌರಿ ಗೌರಿ
ಹೆಣ್ಣು : ಹೋಗಿ ಬಂತು ಗೌರಿ ಜೀವಾ ಶಿವನ ಹಿಂದೆ ಹಾರಿ ಹಾರಿ

ಹೆಣ್ಣು : ಸಂತೆಯಾಗೇ ಜಡೆಯಾ ಜಗ್ಗಿ ಕಿವಿಲಂದ     ಗಂಡು : ಗೌರಿ ಗೌರಿ
ಹೆಣ್ಣು : ಮೆಲ್ಲ ಮೆಲ್ಲ ಗಲ್ಲ ಗಿಲ್ಲಿ ತುಟಿಲಂದ           
ಗಂಡು : ಗೌರಿ ಗೌರಿ .. ಗೌರೀ .... ಓ.. ಗೌರಿ ನಿನ್ನ ಮಾತೆ ಪ್ರೇಮಗೀತೆ ಸಾಕು ಮಾಡೇ ಮೌನವಾ
           ಮುಂಗಾರುಳೆಂಬಾ ಕಾರಿರುಳ್ಳಲ್ಲಿ   ಚಂದ್ರಮುಖಿ ನೀನು ಮೌನ ಗೌರಿ
ಹೆಣ್ಣು :  ಪದ ಕಟ್ಟೋ ಹೈದಾ ಅಂದಾ ಕದಾ ತೇಗಿ    ಗಂಡು : ಗೌರಿ ಗೌರಿ
ಹೆಣ್ಣು : ತನ್ನಂತಾನೆ ತೆರೆದೊಯ್ತಾಮ್ಮಾ ಎದೆ ಕದ ಜಾರಿ ಜಾರೀ
ಹೆಣ್ಣು : ಕೆರೆ ಏರಿ ಮಾಲೆ ತಿರುಗಿ ಅಂದಾ ಪ್ರೀತಿಯಿಂದ     ಗಂಡು : ಗೌರಿ ಗೌರಿ
ಹೆಣ್ಣು : ಶಿವಾ ಶಿವಾ ಅನ್ನೋ ಅವನಾ ಎದೆ ತುಂಬಾ         ಗಂಡು : ಗೌರಿ ಗೌರಿ
ಹೆಣ್ಣು : ಗೌರಿ... ನಿನ್ನ ಎರಡು ತುಟಿಗಳ ದಡದಲ್ಲಿ ಹರಿದು ಬರುವ ನಗುವಿನ ನದಿಯಲಿ
          ನೀರು ನುಂಗಿದ ದೋಣಿಯಾದೆನು ಮುಳುಗಿ ಮುಳುಗಿ ತೇಲಿ ಮುಳುಗುತಿರುವೆನು ಕಾಪಾಡಮ್ಮಾ ಕಾಪಾಡಮ್ಮಾ
ಹೆಣ್ಣು : ಗೌರಿ ಒಂದು ಬೋಂಬೆ ನೀಡೇ ಅಂದಾಗವನು ಓಕೇ ಅಂದೇ 
          ಮಾತನಾಡೋ ಬೋಂಬೆ ಅಂದಾ ಓಕೆ ಆಮ್ಯಾಕೆ ಅಂದೇ     ಗಂಡು : ಗೌರಿ ಗೌರಿ 
ಗಂಡು : ನಿನ್ನ ರೂಪ ಪ್ರೇಮ ದೀಪ ಸಾಕುಮಾಡೇ ಕತ್ತಲಾ 
            ಸೂರ್ಯನು ಬೇಡ ಚಂದ್ರನು ಬೇಡ ಹಗಲಿರುಳು ನೀನೇ ಗಾನ ಗೌರಿ 
ಹೆಣ್ಣು : ಮತ್ಸ್ಯ ಯಂತ್ರ ಹೊಡೆದು ಅಂದಾ ಸರಿಯೇನೇ       ಗಂಡು : ಗೌರಿ ಗೌರಿ 
ಹೆಣ್ಣು : ಶಿವನ ಬಿಲ್ಲು ಮುರಿದಾ ಅವನಾ ಗಂಡ ಅಂದ ಕೋಟಿ ಬಾರಿ 
          ಕೆರೆ ಏರಿ ಮ್ಯಾಲೆ ನನ್ನಾ ಬೆನ್ನಾ ಹಿಂದೆ              ಗಂಡು : ಗೌರಿ ಗೌರಿ 
ಹೆಣ್ಣು : ಕೇಳಿ ಕೇಳಿ ಅಯ್ಯೋ ಅನಿಸಿ ಮುತ್ತು ಕೊಟ್ಟೆ ಮೊದಲನೇ ಬಾರಿ 
--------------------------------------------------------------------------------------------------------------------------

ಮೊಮ್ಮಗ (೧೯೯೭) - ಹೇ.. ಗುಮ್ಮಲಕ್ಕಡಿ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ

ಗಂಡು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ಕೇಳ್ ಕೇಳ್ ಬೆಪ್ಪು ತಕ್ಕಡಿ
           ಒಂಟಿ ತಕ್ಕಾಡಿ ತೂಗಲ್ಲ ಒಂಟಿ ಗಾಲಿ ಒಡಲ್ಲಾ .. ಆಆಆ .. ಆಆಆ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬೆಪ್ಪುತಕ್ಕಡಿ
          ಒಲೆ ಇಲ್ಲದೇ ಗೂಡಿಲ್ಲ ಒಳ್ಳೆ ಗಂಡ ಇಲ್ಲದೆ ಹೆಂಡ್ತಿ ಇಲ್ಲ ಆಆಆ.... ಆಆಆ...
ಗಂಡು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ     ಕೇಳ್ ಕೇಳ್ ಬೆಪ್ಪು ತಕ್ಕಡಿ
            ಹಣ ಇಲ್ಲದೆ ಜೇಬಿಲ್ಲ ನಾರಿ ನಡ ಇಲ್ಲದೆ ಡಾಬಿಲ್ಲ ಆಆಆ... ಆಆಆ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬೆಪ್ಪುತಕ್ಕಡಿ
          ಒನಕೆ ಇಲ್ಲದೆ ಒಳ್ಳಿಲ್ಲ ಹಳ್ಳ ಕೊಳ್ಳ ಇಲ್ಲದೇ ನೀರಿಲ್ಲ ಆಆಆ.... ಆಆಆ.. 

ಗಂಡು : ಊರಿಗೆ ಬಂದಾ ಹೆಣ್ಣು ನೀ ನೀರಿಗೇ ಬರಾಕೇನು 
            ಹೀಟಿಗೆ ಬಂದಾ ಹೈನು ಕೂತು ನಿದ್ದೆ ಹೋದವೇನು 
ಹೆಣ್ಣು : ಗದ್ದೆ ಮಧ್ಯೆ ಹೋಗಿ ನಿರೋದ್ದೇ ಅಂದರೇನು
         ನಾಟಿ ನೆಡಾಕ್ ನಿಂತು ನಡ ನೋವು ಅಂದರೇನು
ಗಂಡು : ನೂಲತ್ತಿ ಕಾಟನ್ ಸೀರೆ ಸೋಬನಕ್ಕೆ ಸುತ್ತಿಸುತ್ತಾರೇ
           ಸೋಸ್ ಗಂಜಿ ಇಕ್ಕಿದ ಸೀರೆ ಸುಕ್ಕಲ್ ಮಗ್ಗಲ ಎಣಿಸ್ತಾರೇ
           ಜೋಡ ಮಂಚಕ ಮಡಿಗಿದ ಮತ್ತೆ ತಳಾ ಬುಡಾ ತಡಕ್ತಾರೆ ಚಿಲಕ ಜಡಿ ಮನಗೂ ನಡಿ ಹೇಹೇಹೇಹೇ ...
ಗಂಡು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ  ಕೇಳ್ ಕೇಳ್ ಬೆಪ್ಪು ತಕ್ಕಡಿ
            ಸಿಪ್ಪೆ ಇಲ್ಲದ ಕಾಯಿಲ್ಲ ಉಪ್ಪು ಖಾರ ಮೆಚ್ಚದ ಬಾಯಿಲ್ಲ ... ಆಆಆಅ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬೆಪ್ಪುತಕ್ಕಡಿ
           ಗಿಣಿ ಕಚ್ಚದ ಹಣ್ಣಿಲ್ಲ ಮುತ್ತು ಒಳ್ಳೆ ಅನ್ನುವ ಹೆಣ್ಣಿಲ್ಲ ... ಆಆಆಆ...

ಹೆಣ್ಣು : ಮೊಳ ಹಾಕಿದ ಮಾಲೇಲಿ ದೇವರಾ ಗುಣಾ ಅಳಿಯೋದಾ
ಗಂಡು : ವಿಷ್ಯಾ ಇಲ್ಲದ ಬಾಣಾನಾ ಶ್ರೀರಾಮ ತಪ್ಪು ತಿಳಿಯೋಣ
ಹೆಣ್ಣು : ಶಿವ ನೀಡಿದ ಭಾಗ್ಯಾನಾ ಎಡಗಾಲಿಂದಾ ಒಡೆಯೋದು
ಗಂಡು : ಪುಟಾ ಇಟ್ಟ ಚಿನ್ನಾನಾ ನಾ ದುಡುಕಿ ತಿಪ್ಪೆಗೆಸೆಯೋದಾ
ಹೆಣ್ಣು : ಹಸೆ ಏರಿ ಬಂದಾ ಮ್ಯಾಲೆ ಹೆಂಡ್ರೆ ಲೋಕಾ ಅಂತಾನಂತೆ
ಗಂಡು : ಲೋಕದೊಳಗೆ ಲೋಕ ಕಂಡ ಸದಾಶಿವ ಆಗ್ತಾನಂತೇ ಚಿಲಕ ಜಡಿ ಮನಗೂ ನಡಿ ಹೇಹೇಹೇಹೇ ...
           ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ಬಾರೆ ಬಾರೆ ಮುಂಡು ಮುಕ್ಕಡಿ
           ಮರ ಹತ್ತದ ಮಂಗಿಲ್ಲ ಮಂಗಾಟ ಆಡದ ಗಂಡಿಲ್ಲ ಬಾ.. ಬಾ.. ಬಾ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬಾರಾ ಬಕ್ಕಡಿ
          ಸುಖ ಉಂಡರು ತೇಗಿಲ್ಲ ಮನದೊಟ್ಟೆ ತುಂಬಿಸ ಗೋತ್ತಿಲ್ಲ... ಬಾ... ಬಾ..

ಹೆಣ್ಣು : ಕಾಲ ಮಿಂಚಿನೊಡೆಯನೇ ನನ್ನ ಅಳೆದುಕೋ ಕಣ್ಣಂಚು ನೋಡಿಕೋ
          ಒಳಸಂಚು ತಿಳಿದುಕೋ ಇಂಚಿಂಚು ಬಳಸಿಕೋ ನನ್ನ ಪ್ರೀತಿ ನೆಂಚಿಕೋ
ಗಂಡು : ಎದೆಯ ಬೀಗದೊಡತಿಯೇ ಕಹಿಯ ಕಳೆದುಕೋ ಪ್ರೀತಿನಾ ಹೆಣೆದುಕೊ
            ಬುಟ್ಟಿಯ ಮಾಡಿಕೋ ಬಾಳ ಬೆಲ್ಲ ತುಂಬಿಕೋ ಸಿಹಿ ಸುಖ ತಂದುಕೋ
ಹೆಣ್ಣು : ಮನಸು ಎತ್ತೋ ಹೋಯ್ತು            ಗಂಡು : ಹೊತ್ತೆಷ್ಟೋ ಕಾಣದಾಯ್ತು
ಹೆಣ್ಣು : ಮಾತು ಮಾಗಿ ಹೋಯ್ತು              ಗಂಡು : ರತಿಯಾಸೆ ರಾಗವಾಯ್ತು ಆ.... ಆ..
ಹೆಣ್ಣು : ಮನ ಇದ್ದರೇ ಸಾಕು ಕಾಮನಾ ಕಟ್ಟೇ ಹಾಕು
ಗಂಡು : ಬೇಕು ಅಂದರೇ ಬೇಕು ಬೇಡೆಂದರೇ ಬೀಗ ಹಾಕು ನೂಲತ್ತಿ ಕಾಟನ್ ಸೀರೆ ಸೋಬನಕ್ಕೆ ಸುತ್ತಿಸುತ್ತಾರೇ
            ಸೋಸ್ ಗಂಜಿ ಇಕ್ಕಿದ ಸೀರೆ ಸುಕ್ಕಲ್ ಮಗ್ಗಲ ಎಣಿಸ್ತಾರೇ
            ಜೋಡ ಮಂಚಕ ಮಡಿಗಿದ ಮತ್ತೆ ತಳಾ ಬುಡಾ ತಡಕ್ತಾರೆ ಚಿಲಕ ಜಡಿ ಮನಗೂ ನಡಿ ಲೇ...ಲೇ...ಲೇ...
           ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ಕೇಳ್ ಕೇಳ್ ಬೆಪ್ಪು ತಕ್ಕಡಿ
           ಸಿಪ್ಪೆ ಇಲ್ಲದ ಕಾಯಿಲ್ಲ ಉಪ್ಪು ಖಾರ ಮೆಚ್ಚದ ಬಾಯಿಲ್ಲ ... ಆಆಆಅ...
ಹೆಣ್ಣು : ಹೇ.. ಗುಮ್ಮಾಲಕ್ಕಡಿ ಗುಮ್ತಲಕ್ಕಡಿ ನಾನೊಬ್ಬಳು ಬೆಪ್ಪುತಕ್ಕಡಿ
         ಗಿಣಿ ಕಚ್ಚದ ಹಣ್ಣಿಲ್ಲ ಮುತ್ತು ಒಳ್ಳೆ ಅನ್ನುವ ಹೆಣ್ಣಿಲ್ಲ ... ಆಆಆಆ...
--------------------------------------------------------------------------------------------------------------------------

ಮೊಮ್ಮಗ (೧೯೯೭) - ಹುಟ್ಟುತ್ತಾ ಒಂದು ಕೊಂಬು
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಲ್.ಏನ್.ಶಾಸ್ತ್ರೀ

ಹುಟ್ಟುತ್ತಾ ಎರಡು ಕೊಂಬು ಮ್,ಮುಳುಗುತ್ತಾ ಎರಡು ಕೊಂಬು
ಬೆಳೆದಂಗೇ ಕೊಂಬೆ ಇರದ ಹೆಸರನ್ನು ಹರಿಗೆ ತುಂಬೋ ನಾನಾರು ನಿನಗಾಗ ಹೊಳೆಯುವುದು
ನನ್ನಾ ಕಾಯಕ ಏನೆಂದೂ ತಿಳಿಯುವುದೂ ಬದುಕಿರುವಂತೇ ಸ್ವರ್ಗಕ್ಕೆ ಹೋದಾ
ರಾಜನ ಚೊಚ್ಚಲ ಮಗನಾದ ಊರ ಒಲೆಯಲ್ಲಿ ಬೆಂಕಿ ಬಲೆಯಲ್ಲಿ
ಜಗದ ಜಂಜಡದ ನುಂಗೋ ನೆಲದಲ್ಲಿ ರಾತ್ರಿ ಹಗಲು ನಿದ್ದೆ ಕೆಟ್ಟವನ್ಯಾರಮ್ಮಾ...
ಸುಡುಗಾಡಲೂ ಸತ್ಯ ಸುಡದವನ್ಯಾರಮ್ಮಾ ಸತ್ಯಕ್ಕಾಗಿ ಸತಿಯಾ ಕೊಂದವನ್ಯಾರಮ್ಮಾ...
--------------------------------------------------------------------------------------------------------------------------

ಮೊಮ್ಮಗ (೧೯೯೭) - ಅಮ್ಮನಿಗಾಗಿ ಕರ್ಣ ಸೋತ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಅಮ್ಮನಿಗಾಗಿ ಕರ್ಣ ಸೋತ ಅಪ್ಪನಿಗಾಗಿ ರಾಮ ಸೋತ
ಹಾಲಿಗಾಗಿ ನಾನು ಸೋತೇ ಕಂದಾ ಅಂದ ಲಾಲಿಗೇ ನಾನು ಸೋತೇ ..
ಅಮ್ಮನಿಗಾಗಿ ಕರ್ಣ ಸೋತ ಅಪ್ಪನಿಗಾಗಿ ರಾಮ ಸೋತ
ಹಾಲಿಗಾಗಿ ನಾನು ಸೋತೇ ಕಂದಾ ಅಂದ ಲಾಲಿಗೇ ನಾನು ಸೋತೇ ..

ಬಿಡಿಸಲಾಗದ ಒಗಟುಗಳು ಬಾಳಿನಲ್ಲಿನ ಬಂಧುಗಳು
ಮರೆಯಲಾಗದ ದೈವಗಳೂ ಪ್ರೀತಿ ಎರೆಯುವಾ ಪಾತ್ರಗಳು
ದೇವರೇ ಬಂದು ದೈನದಿ ನಿಂದು ದೇಹಿ ಎನುವಾಗ
ಸೋಲುವುದೇ ಸಹಜಾ ಇನ್ನೇನಿದೆಯೋ ಮನುಜಾ
ಅಮ್ಮನಿಗಾಗಿ ಕರ್ಣ ಸೋತ ಅಪ್ಪನಿಗಾಗಿ ರಾಮ ಸೋತ
ಹಾಲಿಗಾಗಿ ನಾನು ಸೋತೇ ಕಂದಾ ಅಂದ ಲಾಲಿಗೇ ನಾನು ಸೋತೇ ..

ಧರ್ಮರಾಯನು ಜೂಜಿನಲೀ ರಾವಣಾಸುರನು ಹೆಣ್ಣಿನಲಿ
ಕೌರವೇಶ್ವರನು ವಿಜಯದಲಿ ಕೃಷ್ಣಾ ಸೋತ ಸಂಧಾನದಲೀ
ಎಲ್ಲರು ಒಮ್ಮೆ ಸೋಲಲೇ ಬೇಕು ಜ್ಞಾನೋದಯಕ್ಕಾಗಿ
ಸ್ವರ್ಗಕೂ ಮೇಲೂ ಕರ್ಣನ ಸೋಲು
ಸ್ವರ್ಗಕೂ ಮೇಲೂ ಕರ್ಣನ ಸೋಲು
ಅಮ್ಮನಿಗಾಗಿ ಕರ್ಣ ಸೋತ ಅಪ್ಪನಿಗಾಗಿ ರಾಮ ಸೋತ
ಸೋಲದ ಬಾಳಿಲ್ಲಾ ಕರ್ಣ ರಾಮ ಸೋಲಿಗೆ ಸೋಲಲಿಲ್ಲ
ಹಾಲಿಗಾಗಿ ನಾನು ಸೋತೇ ಕಂದಾ ಅಂದ ಲಾಲಿಗೇ ನಾನು ಸೋತೇ .. 
--------------------------------------------------------------------------------------------------------------------------

ಮೊಮ್ಮಗ (೧೯೯೭) - ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಶಿವ ಬ್ರಹ್ಮ ಹರಿಯ ಶಿಶುರೂಪ ಮಾಡಿ ತೊಟ್ಟಿಲಲ್ಲಿ ತೂಗೋ ತಾಯ್ ಕುಲವೇ...
ಹೆಗಲಲ್ಲಿ ಹೊತ್ತು ನಿಮ್ಮನ್ನು ತೂಗೇ ಹರಕೇನ ಹರಸಿ ದೈವಗಳೇ
ಬಲ ನೀಡಿರಮ್ಮಾ... (ಉಘೇ ಉಘೇ ) ಛಲ ನೀಡಿರಮ್ಮಾ ... (ಉಘೇ ಉಘೇ )
ನಿಮ್ಮೆಸರ ಪೂಜೆ ಹುಸಿ ಹೋಗದಮ್ಮಾ ಭುಜದಾ ಭಾರ ಹೂವಿನ ಹಾರ ಉಘೇ... ಉಘೇ...
ಬಾರೋ ಅಣ್ಣ ಬಾರೋ ತಮ್ಮ ...
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ
ಉಘೇ ಎನ್ನಿರೋ (ಹೇಹೇಹೇಹೇ ) ಹೆಜ್ಜೆ ಹೆಜ್ಜೆಗೇ  (ಹೇಹೇಹೇಹೇ ) ಸಿದ್ಧಿ ಸಿಕ್ಕಲಿ ದದ್ದಿ ಬುದ್ದಿಗೇ (ಹೇಹೇಹೇಹೇ )
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ

ತೊಳಲಿ ಹೊತ್ತವರು ಕೆಲದಾಳುಗಳು ಆಡುವ ನನ್ನ ವಯಸ್ಸಿನಲೀ (ಹೇಹೇಹೇಹೇ )
ನಡುವಲಿ ಹೊತ್ತರು ಬಂಧು ಬಾಂಧವರೂ ಅಳುವ ನನ್ನ ವಯಸ್ಸಿನಲಿ (ಹೇಹೇಹೇಹೇ )
ಹೊಟ್ಟೆ ಒಳಗೆ ಹೊತ್ತು ಎಲ್ಲಾ ಶಕುತಿ ಇತ್ತು ನನ್ನಾ ಹೆತ್ತಾ ತಾಯಿ 
ಅಂಥಾ ತಾಯಿಯನ್ನು ಹೆತ್ತಾ ತಾಯಿಯನ್ನು ಹೊತ್ತೇ ಹೆಗಲಿನಲ್ಲಿ ನಾ ಹೊತ್ತೇ ಹೆಗಲಿನಲ್ಲಿ 
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ 
ಉಘೇ ಎನ್ನಿರೋ (ಹೇಹೇಹೇಹೇ ) ಹೆಜ್ಜೆ ಹೆಜ್ಜೆಗೇ  (ಹೇಹೇಹೇಹೇ ) ಸಿದ್ಧಿ ಸಿಕ್ಕಲಿ ದದ್ದಿ ಬುದ್ದಿಗೇ (ಹೇಹೇಹೇಹೇ )
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ 

ಪ್ರೇಮಿಯಾದೆನು ಗಂಡನಾದೇನೂ ತಪ್ಪಿಗೆ ತೀರ್ಪು ಹೇಳಿದೇನೂ 
ದಾನಿಯಾದೆನು ಮೌನಿಯಾದೆನು ಕಾಯುವ ಕಾಯಕ ಮಾಡಿದೆನು 
ಒಂದೇ ಬದುಕಿನಲಿ ಇಷ್ಟೂ ವೇಷದಲಿ ಕಂಡೇ ಕಷ್ಟಾ ನಷ್ಟ 
ಬಾರೋ ಮನೆ ಮಗಾ ಊರ ಮೊಮ್ಮಗ ಅನ್ನೋ ವೇಷಾ ಇಷ್ಟ ಅದಕೆ ಬರಲಿ ಕೋಟಿ ಕಷ್ಟ 
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ 
ಉಘೇ ಎನ್ನಿರೋ (ಹೇಹೇಹೇಹೇ ) ಹೆಜ್ಜೆ ಹೆಜ್ಜೆಗೇ  (ಹೇಹೇಹೇಹೇ ) ಸಿದ್ಧಿ ಸಿಕ್ಕಲಿ ದದ್ದಿ ಬುದ್ದಿಗೇ (ಹೇಹೇಹೇಹೇ )
ಬಾರೋ ಅಣ್ಣ ಬಾರೋ ತಮ್ಮ ಮೇಲುಕೋಟೆಗೇ ವೈರಮುಡಿಯಂತೆ ನಮ್ಮ ಚೆಲುವಾಂಬೆಗೇ
ಬಾರೆ ಅಕ್ಕ ಬಾರೆ ತಂಗಿ ಮೇಲುಕೋಟೆಗೆ ವೈರಮುಡಿಯಂತೆ ನಮ್ಮ ಚೆಲುವಾಂಬೆಗೆ 
--------------------------------------------------------------------------------------------------------------------------

No comments:

Post a Comment