612. ನೆನಪಿರಲಿ (೨೦೦೫)


ನೆನಪಿರಲಿ ಚಲನಚಿತ್ರದ ಹಾಡುಗಳು
  1. ಕೂರಕ್ ಕುಕ್ಕ್ರಳ್ಳಿ ಕೆರೆ
  2. ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
  3. ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
  4. ಹೇ ಬೆಳದಿಂಗಳೇ ಹಿಂಬಾಲಿಸದಿರು
  5. ಹೇ..ಜೀವಗಳ ಒಲವೇ
  6. ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ  
ನೆನಪಿರಲಿ (೨೦೦೫) - ಕೂರಕ್ ಕುಕ್ಕ್ರಳ್ಳಿ ಕೆರೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಾಡಿದವರು: ಎಸ್ ಪಿ ಬಾಲು

ಅರೆ ಯಾರ್ರಿ ಹೆದರ್ಕೊಳ್ಳೋರು ಬೆದರ್ಕೊಳ್ಳೋರುಪೇಚಾಡೋರು ಪರದಾಡೋರು  
ಮರಗಳ್ ಮರೆನಲ್ ಮಾತಾಡೋರು ಮಾರ್ನಿಂಗ್ ಶೋನಲ್ ಪಿಸುಗುಟ್ಟೋರು
ಮೈಸೂರಂತ ಜಿಲ್ಲೇಲಿದ್ದು ಕಣ್ಣಿಗ್ ಬೇಕಾದ್ ನೋಟ ಇದ್ದು
ಹಳೆ ರಾಜರು ಅಪ್ಪಣೆ ಇದ್ದು  ಪ್ರೀತಿ ಮಾಡೋಕ್ ಜಾಗ್ಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ರಿ ಬನ್ರಿ ನೋಡ್ರಿ ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ

ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ  ತೇಲ ಕಾರಂಜಿ ಕೆರೆ .....ವಾ ವಾ
ಕೂರಕ್ ಕುಕ್ಕ್ರಳ್ಳಿ ಕೆರೆ ತೇಲ ಕಾರಂಜಿ ಕೆರೆ ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ....ವಾ ವಾ ಎಡ್ಮುರಿಲಿ ಜಪ ತಪ.....ವಾ ವಾ
ಬಲ್ಮುರಿಲಿ ಪೂಜೆ ನೆಪ ಎಡ್ಮುರಿಲಿ ಜಪ ತಪ ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್ ಪಟ್ನ ಸೌತಿನಲ್ಲಿ ನಂಜನ್ಗೂಡು ಪೂಜೆಗೆ ಲವ್ ಪೂಜೆಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ ಮನಸು ಬಿಚ್ ಕೊಳ್ರಿ ಮರ ಮರ ಮರದ ಮರೇಲಿ
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ
ಎ ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು 
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ
ಕೆ ಆರ್ ಎಸ್ ಲಿ ಕೆಫೆ ಮಾಡಿ ಬ್ಲಫ್ಫಿನಲ್ಲಿ ಬಫೆ ಮಾಡಿ ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್ ಇಲ್ದಿದ್ರೆ ಒಂಟಿ ಕೊಪ್ಪಲ್ ಲವ್ವಿಗೆ ಈ ಲವ್ವಿಗೆ 
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮ
ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ  ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು
ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ ಲವ್ವಿಗೆ ಸ್ವೀಟ್ ಲವ್ವಿಗೆ
ನರಸಿಂಹಸ್ವಾಮಿ ಪದ್ಯ ಇದೆ ಅನಂತ್ ಸ್ವಾಮಿ ವಾದ್ಯ ಇದೆ ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
--------------------------------------------------------------------------------------------------------------------------

ನೆನಪಿರಲಿ (೨೦೦೫)  - ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಾಡಿದವರು: ಸೌಮ್ಯ ರಾವ್, ಅನೂಪ್, ಅನುಪಮ


ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಷಟ್ಪದಿ ಚೌಪದಿ ಯಾವುದರಲೀ ಈ ಕವನ
ಮನಸೆ ಮಹಾ ಮರ್ಕಟ  ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ ಆಸೆ ತಿಮಿಂಗಿಲ

ಮಳೆಗೆ ಮನೆ ಮಣ್ಣಿನೊಳಗೆ   ಮಳೆ ಮನಸು ಇದೆ ಗಾಳಿಯೊಳಗೆ
ಸುಖದ ಬಹುಮಾನ ಓ ಚಿತ್ತ ಕೊಡುವಂತ
ಪಂಚ ಭೂತಗಳ ಜರಿವುದೆಂತೋ ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ
ಮನಸೆ ಮಹಾ ಮರ್ಕಟ ಸನಿಹ ಮಹಾ ಪ್ರೇರಕ
ಚಿತ್ತ ಮಹಾ ಚಂಚಲ ಮನ್ಮಥ ಸಮಯ ಸಾಧಕ

ಇಂದು ಗೆಲ್ಲು ಇಂದ್ರಿಯಗಳ  ಕೊಲ್ಲು ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ ಕುಣಿವ ತನುವೊಳಗೆ
ಕಹಿಯ ವಿಷಘಳಿಗೆ ತರುವುದೆಂತೋ ಕಣ್ಣು ಮುಚ್ಚಿದರು ಕಾಣೋ ಸ್ವರ್ಗವನು
ಸವಿಯೋ ಹೆಣ್ಣೆದೆಯ ಜರಿವುದೆಂತೋ ದ್ರೌಪದಿ........

ಬಯಕೆ ಬೆಂಕಿ ಬಲೆಯಾಗಿದೆ  ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ
ಮನಸೆ ಮಹಾ ಮರ್ಕಟ  ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ ತಿಳಿಯೋ ಹೆಣ್ಣ ಹಂಬಲ ದ್ರೌಪದಿ.......
-------------------------------------------------------------------------------------------------------------------------

ನೆನಪಿರಲಿ (೨೦೦೫) - ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಾಡಿದವರು: ವಿಜಯ್ ಏಸುದಾಸ್

ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ ಅದೆಲ್ಲ ನಾ ಕಂಡೆ ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ ಈ ತಾಜಾ ತನುವಿನಲ್ಲಿ
ಬೇಲೂರ ಬಾಲೇರ ಭಾರ ಕಂಬಗಳಲ್ಲಿ ಚೆಲುವಿನ ಭಾರಾನೋ ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ ಸೊಂಪಾದ ಪಾದಗಳಲ್ಲಿ

ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ
ಸೊಗ್ಗುಂಟು....ಸಿಗ್ಗುಂಟು
ಸೊಗ್ಗುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ದೊಣುಕುಂಟು
ಈ ತಾಜಾ ತರುಣಿಯಲ್ಲಿ ಈ ನಾರಿ ನಡುವಿನಲ್ಲಿ

ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟ ಅನ್ನತಾಳೆ
ಅಪ್ಪಿಕೊಂಡರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ ತಣಿಯುತಾಳೆ ಮಣಿಯುತಾಳೆ

ಎಲ್ಲಕ್ಕೂ.....ಆಶ್ಚರ್ಯ..... ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ
ನಾನೊಂದು ಟೈಟಾನಿಕ್ ಬೋಟಾದೆ ಸುಖದಲ್ಲಿ
ಒಡೆದೋದೆ ಮುಳುಗೋದೆ ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ ಈ ಕನ್ಯಾ ಕಡಲಿನಲ್ಲಿ  ಲ ಲ ಲ ......
-------------------------------------------------------------------------------------------------------------------------

ನೆನಪಿರಲಿ (೨೦೦೫)  - ಹೇ ಬೆಳದಿಂಗಳೇ ಹಿಂಬಾಲಿಸದಿರು
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಾಡಿದವರು: ಹೇಮಂತ ದಿವ್ಯ ರಾಘವನ್

ಹೇ ಬೆಳದಿಂಗಳೇ ಹಿಂಬಾಲಿಸದಿರು ಪ್ರೀತಿಯ ಪಯಣಕೆ ಒತ್ತಾಯಿಸದಿರು
ಏನು ಕಾರಣ ಕೇಳಬಹುದ - ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ - ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ - ಎಸ್ ಎಸ್ ಎಸ್!! ಆಯ್ ಎಮ್ ಇನ್ ಲವ್ 
ಮಾತಿಗೆ ತಪ್ಪೋದು ದ್ರೋಹ ತಾನೇ - ಎಸ್ ಎಸ್ ಎಸ್ ಆಯ್ ನೌ ದ್ಯಾಟ್ 

ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಜ್........
ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ
ಹೇ ಬೆಳದಿಂಗಳೇ ಹೃದಯ ಸುಡದಿರು  ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ - ಹೇಯ್ ಹೇಯ್ ಹೇಯ್ ಹೇಯ್ ಯು ಕೂಲ್ 
ತ್ಯಾಗದ ಸ್ವಾರ್ಥಿ ನಾನೀಗ - ಹೇಯ್ ಹೇಯ್ ಹೇಯ್ ಯೂ ಫ್ರಾಡ್ 
ನಾವಾಗಲಿ ನೀವಾಗಲಿ ಗೆಳೆಯರಾಗಲಿ ಬಳಗವಾಗಲಿ

ಗುರುಗಳಾಗಲಿ ಋಷಿಗಳಾಗಲಿ ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಜ್........
ಇದು ಹೃದಯಗಳ ವಿಷಯ, ಈ ವಿಷಯ ವಿಷ ವಿಷಯ
------------------------------------------------------------------------------------------------------------------------

ನೆನಪಿರಲಿ (೨೦೦೫) - ಹೇ ಜೀವಗಳ ಒಲವೆ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಾಡಿದವರು: ಚಿತ್ರ, ಚೇತನ್

ಹೇ ಜೀವಗಳ ಒಲವೆ ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ  ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....ನೆನಪಿರಲಿ ನೆನಪಿರಲಿ....
ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ.....

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....ನೆನಪಿರಲಿ ನೆನಪಿರಲಿ.....

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗನ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ.......

ಲವ್ ಇಸ್ ಸೋಲ್ ಬಟ್ ನಾಟ್ ಒನ್ 
ಲವ್ ಇಸ್ ಒನ್ ಬಟ್ ನಾಟ್ ಅಲೋನ್ 
ಲವ್ ಇಸ್ ಗಾಡ್ ಬಟ್ ನಾಟ್ ಎ  ಸ್ಟೋನ್ 

ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ 
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ
ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ......

ಆಯ್ ಎಮ್ ಲವ್ ಲವ್ ಇಸ್ ಲೈಫ್  
 ಆಯ್ ಎಮ್ ಲವ್ ಲವ್ ಇಸ್ ಫೀಲ್ 
ಆಯ್ ಎಮ್ ಲವ್ ಲವ್ ಇಸ್ ಬ್ಯೂಟಿ 

ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ ಅಶ್ವವಲ್ಲ ಮಾಯಾ ಜಿಂಕೆಯಲ್ಲ
ಆಸೆಯೆಂದು ಪ್ರೀತಿಯಲ್ಲ
ಲವ್ ಇಸ್ ಸೋಲ್ ಬಟ್ ನಾಟ್ ಒನ್ 
ಲವ್ ಇಸ್ ಒನ್ ಬಟ್ ನಾಟ್ ಅಲೋನ್ 
ಲವ್ ಇಸ್ ಗಾಡ್ ಬಟ್ ನಾಟ್ ಎ  ಸ್ಟೋನ್ 
----------------------------------------------------------------------------------------------------------------------

ನೆನಪಿರಲಿ (೨೦೦೫) - ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ  
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ  ಗಾಯನ: ಚಿತ್ರ ಕೆ.

ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  ಪುಶ್ಪಕೂಲಕ್ಕು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!
ಇಂದು ಬಾನಿಗೆಲ್ಲ ಹಬ್ಬ  ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  ಪುಶ್ಪಕೂಲಕ್ಕು ಹಬ್ಬ!

ಈ ... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ.. ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ..।। ೨ ।।
ಕಣ್ಗಳೆ ಗಾಜಿನ ಪರದೆಯು
ಇಂದು ಉಸಿರಿಗೆ ಹಬ್ಬ  ಉಬ್ಬುವೆದೆಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!

ಇಂದು ಮರಳಿಗೆ ಹಬ್ಬ  ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ  ಅಪ್ಪೊ ಅಲೆಗು ಹಬ್ಬ
ಓ ... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ.. ನೆನಪಿಗೆ.. ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ ।।೨।।
ಸೊಗಸಿಗೆ ಚೆಲುವಿನ ಹೆಸರಿದೆ
ಇಂದು ಚೆಲುವಿಗೆ ಹಬ್ಬ  ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!
----------------------------------------------------------------------------------------------------------------

No comments:

Post a Comment