710. ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭)


ಡಾನ್ಸ್ ರಾಜ ಡಾನ್ಸ್ ಚಲನಚಿತ್ರದ ಹಾಡುಗಳು 
  1. ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....
  2. ಈ ನಮ್ಮಾ ಬಾಳೆ.. ಸಂಗೀತವೂ
  3. ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್  
  4. ನಾ ಆಡಲು ಈ ಭೂಮಿ ಆದೀತು 
  5. ಇಲ್ಲಿ ನೀನೂ ಅಲ್ಲಿ ನಾನೂ 
  6. ಓ ನಮಃ ಶಿವಾಯ 
ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ.

ಕೋರಸ್ : ಆಅ ..
ಗಂಡು : ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....               ಕೋರಸ್ : ಆಅ
ಗಂಡು : ಅಮ್ಮಾ...  ಅಮ್ಮಾ.... ನಿನ್ನ ತ್ಯಾಗಕೇ..                 ಕೋರಸ್ : ಆಅ .
ಗಂಡು : ಸರಿ ಸಾಟಿ ಯಾರು ಇಲ್ಲಾ...   ನಿನಗಿಂತ ದೇವರಿಲ್ಲಾ...
            ಸರಿ ಸಾಟಿ ಯಾರು ಇಲ್ಲಾ...   ನಿನಗಿಂತ ದೇವರಿಲ್ಲಾ...
            ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....

ಕೋರಸ್ : ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ
                ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ ಹ್ಹಾ..ಓಓಓಓಓ
ಗಂಡು : ನೀ ಕೊಟ್ಟ ಪ್ರಾಣವನ್ನು ... ನಿನಗಾಗಿ ನೀಡುವಾಗ  ನಾ ಕಾಣದ ಆನಂದವೂ
            ನೀ ಕೊಟ್ಟ ಪ್ರಾಣವನ್ನು ..(ಆಆಆ) . ನಿನಗಾಗಿ ನೀಡುವಾಗ (ಆಆಆ) ನಾ ಕಾಣದ (ಆಆಆ) ಆನಂದವೂ
            ನೂರಾರು ಜನ್ಮದಲ್ಲೂ ... ನೀ ಹಾಡೋ ಲಾಲಿ ಹಾಡೇ 
            ನಾನಿಂದು ಕೇಳಬೇಕು ಸಂತೋಷ ಹೊಂದಬೇಕು  
            ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....

ಕೋರಸ್ : ಆಆಆ..  ಆಆಆ..  ಆಆಆ..  ಆಆಆ..  ಆಆಆ.. 
ಗಂಡು : ಈ ನಿನ್ನ ಕಂದ... ಜಾರಿ ಭೂಮಿಗೆ ಬಂದವಳೇ ನೀ ನೋಡಿದ ಆ ನೋವಿಗೇ
           ಈ ನಿನ್ನ ಕಂದ... (ಆಆಆ) ಜಾರಿ ಭೂಮಿಗೆ ಬಂದವಳೇ(ಆಆಆ) ನೀ ನೋಡಿದ(ಆಆಆ) ಆ ನೋವಿಗೇ
           ಈ ನೋವು ಸಾಟಿ ಏನೂ... ಇನ್ನೇಕೆ ಅಳುವೇ ನೀನು 
           ನಾ ಭಾಗ್ಯಶಾಲಿ ಆದೇ ನಾ ಪುಣ್ಯವಂತನಾದೆ  
           ಅಮ್ಮಾ... ಅಮ್ಮಾ... ನಿನ್ನ ಪ್ರೇಮಕೇ ....(ಆಆಆ)
           ಅಮ್ಮಾ...  ಅಮ್ಮಾ.... ನಿನ್ನ ತ್ಯಾಗಕೇ... (ಆಆಆ)
          ಸರಿ ಸಾಟಿ ಯಾರು ಇಲ್ಲಾ...   ನಿನಗಿಂತ ದೇವರಿಲ್ಲಾ...
          ಸರಿ ಸಾಟಿ ಯಾರು ಇಲ್ಲಾ...   ನಿನಗಿಂತ ದೇವರಿಲ್ಲಾ...
------------------------------------------------------------------------------------------------------------------------

ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ಈ ನಮ್ಮಾ ಬಾಳೆ.. ಸಂಗೀತವೂ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ. ಚಿತ್ರಾ 

ಗಂಡು : ಈ ನಮ್ಮಾ ಬಾಳೆ.. ಸಂಗೀತವೂ
           ಈ ನಮ್ಮಾ ಬಾಳೆ.. ಸಂಗೀತವೂ ಸಂಗೀತದಿಂದ ಸಂತೋಷವೂ
           ಆನಂದವಾದರೇನು ನೋವಿಂದ ಬೆಂದರೇನು
           ಆನಂದವಾದರೇನು ನೋವಿಂದ ಬೆಂದರೇನು  ಈ ನಮ್ಮಾ ಬಾಳೆ.. ಸಂಗೀತವೂ

ಗಂಡು : ಇಂಪಾದ ರಾಗ ಶೃತಿ ಸೇರಿದಾಗ ನೂರಾರು ಭಾವ ಕನಸೇರಿದಾಗ
ಹೆಣ್ಣು : ಇಂಪಾದ ರಾಗ ಶೃತಿ ಸೇರಿದಾಗ ನೂರಾರು ಭಾವ ಕನಸೇರಿದಾಗ
ಗಂಡು : ಸಂಸಾರವೆಂಬ
ಹೆಣ್ಣು : ಈ ದೋಣಿಯಲಿ ಒಲವಿಂದ ನಾವು ಜೊತೆಗೂಡಿದಾಗ
ಇಬ್ಬರು : ಈ ನಮ್ಮಾ ಬಾಳೆ.. ಸಂಗೀತವೂ ಸಂಗೀತದಿಂದ ಸಂತೋಷವೂ

ಗಂಡು : ಕಲ್ಲಾದರೇನು ಮುಳ್ಳಾದರೇನು ಸಂಗೀತದಿಂದ ಹೂವಾಗದೇನು
ಹೆಣ್ಣು : ಕಲ್ಲಾದರೇನು ಮುಳ್ಳಾದರೇನು ಸಂಗೀತದಿಂದ ಹೂವಾಗದೇನು
ಹೆಣ್ಣು : ಈ ನಿಮ್ಮ ಪ್ರೀತಿ             ಗಂಡು : ಈ ಪ್ರೇಮ ಜ್ಯೋತಿ
ಹೆಣ್ಣು : ಇರುವಾಗ ಇನ್ನೂ           ಗಂಡು :  ನಮಗೇನು ಭೀತಿ 
ಹೆಣ್ಣು : ಈ ನಮ್ಮಾ ಬಾಳೆ.. ಸಂಗೀತವೂ
ಗಂಡು : ಆ... ಸಂಗೀತದಿಂದ ಸಂತೋಷವೂ
ಹೆಣ್ಣು : ಆನಂದವಾದರೇನು ನೋವಿಂದ ಬೆಂದರೇನು
ಗಂಡು : ಆನಂದವಾದರೇನು ನೋವಿಂದ ಬೆಂದರೇನು
ಇಬ್ಬರು : ಲಾಲಾಲಲಲಲಲಲಾ ಲಾಲಾಲಲಲಲಲಲಾ ಲಾ... ಲಾ... ಲಾ.. ಲ...  
------------------------------------------------------------------------------------------------------------------------

ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ನೀವೇ ನನ್ನ ತಾಯಿ ತಂದೇ ಎಂದೂ ಬಂದೆ ಇಲ್ಲಿಗೇ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ.

ಕೋರಸ್ :  ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್    ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್
                ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್
ಗಂಡು : ನೀವೇ ನನ್ನ ತಾಯಿ ತಂದೇ ಎಂದೂ ಬಂದೆ ಇಲ್ಲಿಗೇ
            ನಿಮ್ಮ ಕಂದ  ಆಡೋ ಚಂದ ನೋಡಿ ಹರಸಿ ಎನ್ನುವೆ...

ಗಂಡು : ಹೊಸದಾಗಿ ನಿಮ್ಮನ್ನಿಂದು ನೋಡಿದೆ...  (ಆಹಾ..  ಆಹಾ)
            ಹಿತವಾಗಿ ಹಾಡು ಬಯಕೆ ಬಂದಿದೆ.. ...  (ಆಹಾ..  ಆಹಾ)
            ಮನಸಲ್ಲಿ ಇದ್ದ ಭಯವು ಓಡಿದೆ... ...  (ಆಹಾ..  ಆಹಾ)
           ಎದೆಯಲ್ಲಿ ನೂರು ಆಸೆ ಮೂಡಿದೆ ... ...  (ಆಹಾ..  ಆಹಾ)
           ನನ್ನ ಈ ನಾಡಿನ, ನನ್ನ ಈ ಮಣ್ಣಿನ ಸೌಂದರ್ಯ ಇಂದು ನೋಡಿದೇ...
           ಎಲ್ಲೂ ಶ್ರೀಗಂಧವೇ ಎಲ್ಲೂ ಬಂಗಾರವೇ ಆನಂದ ತುಂಬಿ ಹಾಡಿದೇ...ಯ್ಯಾ..
           ನೀವೇ ನನ್ನ ತಾಯಿ ತಂದೇ ಎಂದೂ ಬಂದೆ ಇಲ್ಲಿಗೇ
           ನಿಮ್ಮ ಕಂದ  ಆಡೋ ಚಂದ ನೋಡಿ ಹರಸಿ ಎನ್ನುವೆ...

ಗಂಡು : ಇನ್ನೆಂದು ಇಲ್ಲೇ  ನಾನು ನಿಲ್ಲುವೇ ... (ಆಹಾ..  ಆಹಾ)
           ನಿಮ್ಮನ್ನು ಪ್ರೀತಿಯಿಂದ ಗೆಲ್ಲುವೇ... (ಆಹಾ..  ಆಹಾ)
           ಸಂತೋಷದಿಂದ ಹಿಗ್ಗಿ ಹಾರುವೇ.. (ಆಹಾ..  ಆಹಾ)
           ಆಕಾಶ ಭೂಮಿ ಒಂದೇ ಮಾಡುವೆ... (ಆಹಾ..  ಆಹಾ)
           ಕಲ್ಲು ನೀರಾಗಲೀ... ಬಳ್ಳಿ ಹೂವಾಗಲೀ ಸಂಗೀತವನ್ನೂ... ಕೇಳುತಾ...
           ಕಡಲು ಮೇಲುಕ್ಕಲಿ ಆಕಾಶ ಮುಟ್ಟಲೀ.. ಕುಣಿದಾಟವನ್ನು ನೋಡುತಾ... ಯ್ಯಾ...
          ನೀವೇ ನನ್ನ ತಾಯಿ ತಂದೇ ಎಂದೂ ಬಂದೆ ಇಲ್ಲಿಗೇ
          ನಿಮ್ಮ ಕಂದ  ಆಡೋ ಚಂದ ನೋಡಿ ಹರಸಿ ಎನ್ನುವೆ...
ಕೋರಸ್ :  ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ (ಹೇಹೇ .. )
                ಡ್ಯಾನ್ಸ್ ಡ್ಯಾನ್ಸ್(ಶೋ ಶೋ ) ರಾಜ ಡ್ಯಾನ್ಸ್ (ಮೂವ್ ಮೂವ್ )  ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್
ಗಂಡು :     ಹೇಯ್.... ನೀವೇ ನನ್ನ ತಾಯಿ ತಂದೇ ಎಂದೂ ಬಂದೆ ಇಲ್ಲಿಗೇ
                ನಿಮ್ಮ ಕಂದ  ಆಡೋ ಚಂದ ನೋಡಿ ಹರಸಿ ಎನ್ನುವೆ... ಯ್ಯಾ...    
-------------------------------------------------------------------------------------------------------------------------

ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ನಾ ಆಡಲು ಈ ಭೂಮಿ ಆದೀತು
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್ಪಿ.ಬಿ. 


ಕೋರಸ್ : ಗೆಳೆಯಾ.. ಅಡು.. ಅಡು..ಅಡು..ಅಡು..ಅಡು..ಅಡು..ಅಡು..ಅಡು..
ಗಂಡು : ಹ್ಹ.. ಹ್ಹ   ಹ್ಹ.. ಹ್ಹ   ಹ್ಹ.. ಹ್ಹ ನಾ ಆಡಲೂ.. ಈ ಭೂಮಿ ಆಡಿತು..
            ನಾನೊಬ್ಬ ಡ್ಯಾನ್ಸರ್ ನನಗಿಲ್ಲ ಮಾಸ್ಟರ್ ಬೇಕೇ ಬ್ರೇಕ್ ಡಾನ್ಸ್..  ಶಾಕ್ ಶೇಕ್ ಡಾನ್ಸ್
            ರಾಕ್ ಆಂಡ್ ರೋಲ್ ಏನ್ ಬೇಕ್ ಹೇಳೋ ..
            ಕೂಗಾಡಿ ಹಾಕೂ ಹೆಜ್ಜೇ ಬೇಕಿಲ್ಲ ಇದಕ್ಕೆ ಗೆಜ್ಜೇ ಸ್ವರ್ಗ ನೋಡಿ ಕುಣಿಯುತ ನೀವೆಲ್ಲಾ ನೋವು ಮರೆಯುತ
            ಈ ಆಟದಲಿ ಹೊಸ ವೇಗದಲೀ ಏನೊಂದು ಗತ್ತೂ .. ಮೈ ಸುತ್ತುತಿದೆ ತಲೆ ಸುತ್ತುತಿದೆ ಹೊಸ ಒಂದು ಮತ್ತೂ
            ಆ ಗುಂಗಿನಲಿ ಆಕಾಶದಲೀ ನಾ ತೇಲೋ ಹೊತ್ತು ಈ ರಾಜನಿಗೇ ಸರಿಸಾಟಿ ಇಲ್ಲ ಎಲ್ಲಾರಗೂ ಗೊತ್ತೂ..

ಕೋರಸ್ : ಗೆಳೆಯಾ.. ಅಡು.. ಅಡು..ಅಡು..ಅಡು..ಅಡು..ಅಡು..ಅಡು..ಅಡು..
ಗಂಡು : ಹ್ಹ.. ಹ್ಹ   ಹ್ಹ.. ಹ್ಹ   ಹ್ಹ.. ಹ್ಹ  ನಾ ಆಡಲೂ.. ಈ ಭೂಮಿ ಆಡಿತು..
            ನಾ ಟೀನೇಜರ್ ಈಗ ತಾನೇ ಮೇಜರ್ ಸ್ಟ್ರೀಟ್ ಡ್ಯಾನ್ಸರ್ ಇಲ್ಲಿ ಸ್ವೀಟ್ ಡ್ಯಾನ್ಸರ್ ಇಲ್ಲಿ
             ಯಾರ ಹಂಗೂ ಇಲ್ಲ ನಂಗೇ ನಾನೇ ಎಲ್ಲಾ.. ತಾಳಕ್ಕೆ ಸಾಕೂ ಡಬ್ಬಾ ..
             ಕುಣಿತಾನೇ ನಂಗೇ ಹಬ್ಬ ಎಲ್ಲಾ ಒಂದು ತಮಾಷಾ ಇದರಲ್ಲೇ ನಂಗೇ ಸಂತೋಷ..
             ಈ ಬೀದಿನಲೂ ಸ್ಟೇಜ್ ಆಗಿರಲೂ ಬೇಕಿಲ್ಲ ಲೈಟೂ
             ಕೈ ತಟ್ಟೋ ಜನ ಪ್ರೋತ್ಸಾಹ ಕೊಡೋ ಅದೇ ನನ್ನ ರೇಟೂ ..
             ಆಡೋದೇ ಗುರಿ ಆಡೋದೇ ಸುಖ ಅದೇ ಬಂತು ರೈಟು
             ಈ ಆಟದಲೇ ನಾ ಗೆಲ್ಲುವೇನೂ ಈ ಬಾಳ ಫೈಟೂ ...
              ನಾ ಆಡಲೂ.. ಈ ಭೂಮಿ ಆಡಿತು..ತತತತ ... ಯ್ಯಾ.. . ಯ್ಯಾ..ಯ್ಯಾ..
------------------------------------------------------------------------------------------------------------------------

ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ಎಲ್ಲಿ ನೀನೂ ಅಲ್ಲಿ ನಾನೂ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್ಪಿ.ಬಿ.  ಎಸ್. ಜಾನಕೀ 


ಗಂಡು : ಎಲ್ಲೀ ನೀನೂ (ಲಾಲಾಲಾಲಾ ) ಅಲ್ಲಿ ನಾನೂ (ಲಾಲಾಲಾಲಾ )
ಹೆಣ್ಣು : ದೇಹ ನಾನೂ ಪ್ರಾಣ ನೀನೂ
ಗಂಡು : ಅಗಲಿಸಲಾರರೂ ನನ್ನನ್ನೂ .. ನಿನ್ನನ್ನೂ ...
ಹೆಣ್ಣು  : ಎಲ್ಲೀ ನೀನೂ (ಲಾಲಾಲಾಲಾ ) ಅಲ್ಲಿ ನಾನೂ (ಲಾಲಾಲಾಲಾ )
ಗಂಡು : ದೇಹ ನಾನೂ ಪ್ರಾಣ ನೀನೂ
ಹೆಣ್ಣು : ಅಗಲಿಸಲಾರರೂ ನನ್ನನ್ನೂ .. ನಿನ್ನನ್ನೂ ...
         
ಕೋರಸ್ : ಲಲಲಲ ಲಲಲಲ ಲಾಲಾಲಾಲಾ
ಗಂಡು : ಆ ಮೋಡದಾಚೇ ನೀನ್ ಇದ್ದರೂ ಪಾತಾಳದಲ್ಲೇ ಬಚ್ಚಿಟ್ಟರೂ ಬಿಡೆನಾ ನಿನ್ನನ್ನೂ ಇವನೂ ಧೀರನು
ಹೆಣ್ಣು : ನಾ ನಿನ್ನ ನಂಬಿ ಬಂದಾಗಲೇ ಈ ನನ್ನ ಹೃದಯ ತಂದಾಗಲೇ ಅರಿತೇ ನಿನ್ನನ್ನೂ ಮರೆತೇ ನನ್ನನ್ನು
          ರಾಜಾ ... ರಾಜಾ ..
ಗಂಡು : ಎಂದೆಂದೂ ಜೊತೆಯಾಗೂ ನೀನೂ ..
ಹೆಣ್ಣು  : ಎಲ್ಲೀ ನೀನೂ (ಲಾಲಾಲಾಲಾ ) ಅಲ್ಲಿ ನಾನೂ (ಲಾಲಾಲಾಲಾ )
ಗಂಡು : ದೇಹ ನಾನೂ ಪ್ರಾಣ ನೀನೂ
ಹೆಣ್ಣು : ಅಗಲಿಸಲಾರರೂ ನನ್ನನ್ನೂ .. ನಿನ್ನನ್ನೂ ...

ಕೋರಸ್ : ಲಲಲಲ ಲಲಲಲ ಲಾಲಾಲಾಲಾ
ಗಂಡು : ನೀ ಬೆಳ್ಳಿ ತೊಟ್ಟಿಲ ಮಗುವಾದರೂ ನಾ ಬೀದಿ ಮಣ್ಣಿನ ಹೂವಾದರೂ
            ಒಲವಾ ಕಂಡೇವೂ ಬೆರೆತೂ ಹೋದೆವು
ಹೆಣ್ಣು : ಏಳೇಳು ಜನ್ಮದ ಅನುಬಂಧವೂ ನಾವಿಂದೂ ಮಾಡಿದ ನಿಜ ಪುಣ್ಯವೂ
           ಜೊತೆಗೆ ತಂದಿತು ಒಲವೂ ಮೂಡಿತು
ಗಂಡು : ರಾಧಾ... ರಾಧಾ..
ಹೆಣ್ಣು : ಎಂದೆಂದೂ ಜೊತೆಯಾದೇ ನಾನೂ ..
ಗಂಡು  : ಎಲ್ಲೀ ನೀನೂ (ಲಾಲಾಲಾಲಾ ) ಅಲ್ಲಿ ನಾನೂ (ಲಾಲಾಲಾಲಾ )
ಹೆಣ್ಣು  : ದೇಹ ನಾನೂ ಪ್ರಾಣ ನೀನೂ  ಅಗಲಿಸಲಾರರೂ
ಗಂಡು : ನನ್ನನ್ನೂ ..              ಹೆಣ್ಣು : ನಿನ್ನನ್ನೂ ...
------------------------------------------------------------------------------------------------------------------------

ಡ್ಯಾನ್ಸ್ ರಾಜ ಡ್ಯಾನ್ಸ್ (೧೯೮೭) - ಓ ನಮಃ ಶಿವಾಯ 
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ. 


ಕೋರಸ್ : ಓಂ ನಮಃ ಶಿವಾಯಃ   ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
ಗಂಡು : ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
ಕೋರಸ್ : ತಾರಾ..ತಾರಾ..ತಾರಾ.. ತಾರಾ..ತಾರಾ..ತಾರಾ..
ಗಂಡು : ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ ) ಜಗವೆಲ್ಲಾ ಹುಡುಕಿದೇ ತಾನೇ
            ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ ) ಜಗವೆಲ್ಲಾ ಹುಡುಕಿದೇ ತಾನೇ
            ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ

ಕೋರಸ್ : ಓಂ ಓಂ ಓಂ ಓಂ
ಗಂಡು : ಬಾನೂ ಭೂಮಿಯೇನೂ ಎಲ್ಲೇ ಹೋದರೇನೋ ಶಾಂತಿ ಕಾಣದಾದೇ ಏತಕೋ..
           ಮಂತ್ರ ತಂತ್ರ ಏಕೇ ..  ನೂರು ಆಸೇ ಏಕೇ .. ಶಾಂತಿ ಇಲ್ಲದಾಗ ವ್ಯರ್ಥವೋ
           ನೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
           ನೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
           ಓಂ ನಮಃ ಶಿವಾಯಃ   (ಓಂ ಓಂ ಓಂ )   ಓಂ ನಮಃ ಶಿವಾಯಃ  (ಓಂ ಓಂ ಓಂ )

ಗಂಡು : ಬಾಳು ಒಂದು ಆಟ ದಿನವೂ ನೂರು ನೋಟ ಎಲ್ಲಾ ದೇವನಾಟ ಕಾಣೆಯಾ..  
            ಸೋಲು ಎಂದರೇನೂ .. ಗೆಲುವೂ ಎಂದರೇನೂ .. ಎಲ್ಲಾ ಒಂದೇ ಎಂದೂ ಬಲ್ಲೆಯಾ
            ರೋಷವೂ ಏತಕೆ ದ್ವೇಷವೂ ಏತಕೆ
            ರೋಷವೂ ಏತಕೆ ದ್ವೇಷವೂ ಏತಕೆ
            ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
            ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ ) ಜಗವೆಲ್ಲಾ ಹುಡುಕಿದೇ ಕಾಣೆ... ತಟಟತ
            ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ ) ಜಗವೆಲ್ಲಾ ಹುಡುಕಿದೇ ಕಾಣೆ
            ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
---------------------------------------------------------------------------------------------------------------------- 

No comments:

Post a Comment