747. ಕೃಷ್ಣ ನೀ ಕುಣಿದಾಗ (೧೯೮೯)

ಕೃಷ್ಣ ನೀ ಕುಣಿದಾಗ ಚಲನಚಿತ್ರದ ಹಾಡುಗಳು 
  1. ಈ ಕಾಲು ನೊಂದು ಕುಣಿಯದೇ ಸೋತಾಗ
  2. ಮಿಂಚಂತೆ ಬಂದೆ ಮನದಲ್ಲಿ ನಿಂದೆ
  3. ಪ್ರಾಯ ಬಂದರೇ ಯಾಕೋ ಅದು ಯಾಕೋ 
  4. ಆಡುವೆನೂ ನಿಮಗಾಗಿ ಕುಣಿದಾಡುವೆನೂ 
  5. ಈ ರಾಧೇ ಜೀವ 
  6. ಢಮ ಢಮರು 
  7. ಧೀಮ್ ತನನ 
ಕೃಷ್ಣ ನೀ ಕುಣಿದಾಗ (೧೯೮೯) - ಈ ಕಾಲು ನೊಂದು ಕುಣಿಯದೇ ಸೋತಾಗ
ಸಂಗೀತ : ವಿಜಯಾನಂದ   ಸಾಹಿತ್ಯ : ಆರ್.ಎನ್.  ಜಯಗೋಪಾಲ್ ಗಾಯನ : ಎಸ್ಪಿ.ಬಿ.

ಕೋರಸ್ : ಆಆಆ... ಆಆಆ... ಆಆಆ... ಆಆಆ....
ಗಂಡು : ಈ ಕಾಲು ನೊಂದು ಕುಣಿಯದೇ ಸೋತಾಗ
           ಈ ಕಾಲು ನೊಂದು ಕುಣಿಯದೇ ಸೋತಾಗ ಈ ಗೆಜ್ಜೆ ನಾದ ಕೇಳದೇ ಹೋದಾಗ
           ನನ್ನ ಜೀವ ಕ್ಷಣವೂ ನಿಲ್ಲದೂ ನನ್ನ ಹಾಡು ಇನ್ನೂ ಕೇಳದು
           ನನ್ನ ಜೀವ ಕ್ಷಣವೂ ನಿಲ್ಲದೂ ನನ್ನ ಹಾಡು ಇನ್ನೂ ಕೇಳದು
           ಎಲ್ಲಿ ನೀನು ಅಲ್ಲೇ ನಾನು ಇನ್ನೂ ಇಲ್ಲಿ ನಾನು ನಿಲ್ಲೇನೂ
           ಈ ಕಾಲು ನೊಂದು ಕುಣಿಯದೇ ಸೋತಾಗ ಈ ಗೆಜ್ಜೆ ನಾದ ಕೇಳದೇ ಹೋದಾಗ ಆ... ಆ...

ಕೋರಸ್ : ಆಆಆ... ಆಆಆ... ಆಆಆ... ಆಆಆ....
ಗಂಡು : ವೀಣೆ ತಂತಿಯನು ಬೆರಳು ಮುಟ್ಟದಿರೇ ಸ್ವರವೂ ಬರುವುದೇನು
            ಯಾರು ಕೊಳಲಿನಲಿ ಉಸಿರ ತುಂಬದಿರೇ ನಾದ ತರುವುದೇನು
            ತನುವಲ್ಲಿ ನೀನು ಉಸಿರಾದರೇ  ಉಸಿರಾದ ನೀನೇ ದೂರಾದರೇ
            ಕಣ್ಣು ಕಾಣುವುದೇ ನಿಲ್ಲಲ್ಲಾಗುವುದೇ ನುಡಿಯೇ ನನ್ನ ಸಿರಿಯೇ
            ನಿನ್ನ ನೋಡದಿರೇ ಜೀವ ನಿಲ್ಲುವುದೇ ಚೆಲುವೆ ಒಲವೇ ನುಡಿಯೇ
            ಜೇನಾದ ಮನಸಿಂದು ಕಲ್ಲಾಯಿತು ವಿಷವಾಯಿತೋ
            ಜೇನಾದ ಮನಸಿಂದು ಕಲ್ಲಾಯಿತು ವಿಷವಾಯಿತೋ
            ಸ್ನೇಹವ ತೋರಿದೆ ಪ್ರೇಮವ ತುಂಬಿದೆ ಆಸೆಯ ತೋರುತಾ ಕಣ್ಮರೆಯಾದೇ
            ಈ ಕಾಲು ನೊಂದು ಕುಣಿಯದೇ ಸೋತಾಗ ಈ ಗೆಜ್ಜೆ ನಾದ ಕೇಳದೇ ಹೋದಾಗ ಆ... ಆ... 
ಕೋರಸ್ :  ತಾನ ತನ್ನಾ ತಹನ ತಹನ ತಾನನನ ತಾನ  ತಾನ ತನ್ನಾ ತಹನ ತಹನ ತಾನನನ ತಾನ
                 ತಾನ ತನ್ನಾ ತಹನ ತಹನ ತಾನನನ ತಾನ

ಗಂಡು : ಪ್ರೀತಿ ದೇವತೆ ಪ್ರೇಮ ಮೂರ್ತಿ ಮರೆಯಲಾರೆ ನಿನ್ನ
            ನನ್ನ ಮನಸಿನಲಿ ನನ್ನ ಹೃದಯದಲ್ಲಿ ಬೆರೆತು ಹೋದ ನಿನ್ನ
            ಬದುಕಲ್ಲಿ ತಂದೆ ಹೊಸ ಸ್ಫೂರ್ತಿಯಾ ನಿನ್ನಿಂದ ಕಂಡೆ ಹೊಸ ಶಾಂತಿಯಾ
            ನನ್ನ ಕಂಬನಿಯ ಹನಿಯು ಬರೆಯುವುದು ನಮ್ಮ ಪ್ರಣಯ ಕಥೆಯಾ
            ನನ್ನ ಸಾವಿನಲಿ ಇನ್ನೂ ಮರೆಯುವೆನು ಬಾಳು ತಂದ ವ್ಯಥೆಯಾ
            ವಿಧಿರಾಯ ದಯೆ ತೋರು  ಸಾಕಿನ್ನು ಕಣ್ಣೀರು
            ವಿಧಿರಾಯ ದಯೆ ತೋರು  ಸಾಕಿನ್ನು ಕಣ್ಣೀರು
            ಮಾಡಿದ ಪಾಪವ ನೀಡಿದ ಶಾಪವ ಕಾರಣ ಕಾಣೆನು ಮನ್ನಿಸು ನನ್ನನು
           ಈ ಕಾಲು ನೊಂದು ಕುಣಿಯದೇ ಸೋತಾಗ ಈ ಗೆಜ್ಜೆ ನಾದ ಕೇಳದೇ ಹೋದಾಗ
           ನನ್ನ ಜೀವ ಕ್ಷಣವೂ ನಿಲ್ಲದೂ ನನ್ನ ಹಾಡು ಇನ್ನೂ ಕೇಳದು
           ನನ್ನ ಜೀವ ಕ್ಷಣವೂ ನಿಲ್ಲದೂ ನನ್ನ ಹಾಡು ಇನ್ನೂ ಕೇಳದು
           ಎಲ್ಲಿ ನೀನು ಅಲ್ಲೇ ನಾನು ನಾನು ನಿಲ್ಲೇನೂ
           ಈ ಕಾಲು ನೊಂದು ಕುಣಿಯದೇ ಸೋತಾಗ ಈ ಗೆಜ್ಜೆ ನಾದ ಕೇಳದೇ ಹೋದಾಗ
-------------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಮಿಂಚಂತೆ ಬಂದೆ ಮನದಲ್ಲಿ ನಿಂದೆ
ಸಂಗೀತ : ವಿಜಯಾನಂದ   ಸಾಹಿತ್ಯ : ಆರ್.ಎನ್.  ಜಯಗೋಪಾಲ್ ಗಾಯನ : ಎಸ್ಪಿ.ಬಿ.

ಹೇ... ಹೇ... ಹೇ... ಹೇ... ಹೇ... ಹೇ...
ಆಆಆ..... (ಆಆಆ.....) ಆಆಆ.... (ಆಆಆ.....)
ಮಿಂಚಂತೆ ಬಂದೆ ಮನದಲ್ಲಿ ನಿಂದೆ ಹೊಸ ಭಾವ ಒಂದು ತಂದೆ
ರಾಧಾ.... ರಾಧಾ ನೀ ಬಂದಾಗ... ಆ..ಆ...ಆ.. ರಾಧಾ ನೀ ಬಂದಾಗ...
ಈ ಜೀವ ತೇಲಿ ಸಂತೋಷದಲ್ಲಿ  ಹಾರಾತಿಂದೂ ಬಾನಲಿ..
ರಾಧಾ...ರಾಧಾ ನೀ ಬಂದಾಗ...  ರಾಧಾ ನೀ ಬಂದಾಗ...  ಆಆಆ... ... ಆಆಆ...

ಕೋರಸ್ : ಆಆಆ.....ಆಆಆ.....ಆಆಆ.....ಆಆಆ.....
ಗಂಡು : ಕುಣಿವಂಥ ಲಯಕೆ ಸ್ವರ ಸೇರೀತಿಗ  ಮುಳ್ಳಾದ ದಾರಿ ಹೂವಾಯಿತೀಗ
           ಬರಡಾದ ಬದುಕು ಚಿಗುರಾಯಿತೀಗ  ನೀ ತಂದೆ ಮನದೇ ಹಿತವಾದ ರಾಗ
           ಯಾವ ಮಂತ್ರವಿದೋ... ಇನ್ಯಾವ ಮೋಡಿ ಇದೋ ಏಳು ಜನ್ಮಗಳ... ನಿಜ ಸತ್ಯ ಬಂದವಿದೋ
           ಬಂದಾಗ ಬಾಳಿ ನಿಂದಾಗ ಕುಣಿವೆ ನಲಿವೆ ನಗುವೇ ಜಗ ಮರೆವೇ ...
           ಮಿಂಚಂತೆ ಬಂದೆ ಮನದಲ್ಲಿ ನಿಂದೆ ಹೊಸ ಭಾವ ಒಂದು ತಂದೆ
           ರಾಧಾ.... ರಾಧಾ ನೀ ಬಂದಾಗ... ಆ..ಆ...ಆ.. ರಾಧಾ ನೀ ಬಂದಾಗ...

ಕೋರಸ್ : ಆಆಆ.....ಆಆಆ.....ಆಆಆ.....ಆಆಆ.....
ಗಂಡು: ನೀ ದೂರ ಹೋಗೆ ಇದು ಏನು ಬೇಗೆ ನನಗಾದುದಿಲ್ಲಾ ಹಿಂದೆಂದೂ ಹೀಗೆ
           ಒಡಲೊಂದು  ಆಸೆ ಕಡಲಾಯಿತು ಈಗ ಆ ಕಣ್ಣ ನೋಟ ಏದೇ ನಾಟಿದಾಗ
           ಪ್ರೀತಿ ಇದು ಏನಲೋ ಇದು ಸ್ನೇಹ ಸುಧೆ ಹೊನಲು
           ತಾರುಣ್ಯ ಸೆಳೆತ ತಂಡ ಸುಖ ಭಾವನೆ ಏನಲೋ
          ಬಂದಾಗ ಬಳಿ ನಿಂದಾಗ ಕುಣಿವೆ ನಲಿವೆ ನಗುವೇ ಜಗವ ಮರೆವೇ...
          ಮಿಂಚಂತೆ ಬಂದೆ ಮನದಲ್ಲಿ ನಿಂದೆ ಹೊಸ ಭಾವ ಒಂದು ತಂದೆ
          ರಾಧಾ.... ರಾಧಾ ನೀ ಬಂದಾಗ... ಆ..ಆ...ಆ..ರಾಧಾ ನೀ ಬಂದಾಗ...
-------------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಪ್ರಾಯ ಬಂದರೇ ಯಾಕೋ ಅದು ಯಾಕೋ
ಸಂಗೀತ : ವಿಜಯಾನಂದ   ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿ.ಬಿ. ಚಿತ್ರಾ

ಗಂಡು : ಪ್ರಾಯ ಬಂದರೇ ಯಾಕೋ ಅದು ಯಾಕೋ ಹೊತ್ತೇ ಹೋಗೋಲ್ಲಾ...
ಹೆಣ್ಣು : ದಿಂಬು ಹಾಸಿಗೆ ಇದ್ದರೂ ಮಲಗಿದ್ದರೂ ನಿದ್ದೆ ಬರೋಲ್ಲ
ಗಂಡು : ನಿದ್ದೆ ಕೊಡದ ಕನಸುಗಳೂ
ಹೆಣ್ಣು : ಕಾಡೋ ಮನದ ಬಯಕೆಗಳೂ...
ಗಂಡು : ಮಾತೇ ಕೇಳೋಲ್ಲ...
ಹೆಣ್ಣು : ಪ್ರಾಯ ಬಂದರೇ ಯಾಕೋ ಅದು ಯಾಕೋ ಹೊತ್ತೇ ಹೋಗೋಲ್ಲಾ...

ಹೆಣ್ಣು : ಹೂವಾಗಿ ದುಂಬಿಯ ಜೋತೆಗೇ ತೂಗಾಡುವಾಸೆ
          ತಾನಾಗಿ ಸುರಿವ ಮಳೆಗೆ ಮೈ ನಿಡುವಾಸೆ
ಗಂಡು : ಏನಿದು ಎಕಿದು ನರಗಳಲಿ ಆ.. ವೇಗ
           ಮಿಡಿದಿದೇ ಹೃದಯವನು ಯಾವ ನಾದ ಈ ರಾಗ
ಹೆಣ್ಣು : ನೆರೆ ಬಂದ  ನೀರಿನಂತೆ ಕಾರಂಜೀ ದೀಪದಂತೇ  ಆಸೆ ಉಕ್ಕಿದೇ
          ಪ್ರಾಯ ಬಂದರೇ ಯಾಕೋ ...(ಆ)  ಅದು ಯಾಕೋ (ಹೂಂ) ಹೊತ್ತೇ ಹೋಗೋಲ್ಲಾ...
ಗಂಡು : ದಿಂಬು ಹಾಸಿಗೆ ಇದ್ದರೂ...(ಆ)   ಮಲಗಿದ್ದರೂ...(ಆ).  ನಿದ್ದೆ ಬರೋಲ್ಲ
ಹೆಣ್ಣು : ನಿದ್ದೆ ಕೊಡದ ಕನಸುಗಳೂ ಆ....
ಗಂಡು : ಕಾಡೋ ಮನದ ಬಯಕೆಗಳೂ...ಆ...
ಹೆಣ್ಣು : ಮಾತೇ ಕೇಳೋಲ್ಲ...

ಗಂಡು : ನೂರಾರು ಹೂವಿನ ಬಾಣ ಬಂದೇರಿಗಿದೆ 
            ಸಾವಿರದ ಮಿಂಚಿನ ನೋವ ತಾ ತಂದಿದೇ 
ಹೆಣ್ಣು : ಇಬ್ಬರೂ ಸೇರದೇ ಹೋಗದು ಈ ತಾಪ 
          ಮನ್ಮಥ ನೀಡಿದ ಪ್ರೇಮಿಗಳಿಗೆ ಶಾಪ 
ಗಂಡು : ಇದು ಎಂಥ ಮೋಹ ಕಾಣೇ ಅಹ್ಹಹ್ಹ .. ಹೊಸದೆನೆಗೆ ಪ್ರೇಮದಾಣೆ ತಾಳಲಾರೆನಾ... 
           ಪ್ರಾಯ ಬಂದರೇ ಯಾಕೋ ...(ಆ ) ಅದು ಯಾಕೋ (ಆಆ )ಹೊತ್ತೇ ಹೋಗೋಲ್ಲಾ...
ಹೆಣ್ಣು : ದಿಂಬು ಹಾಸಿಗೆ ಇದ್ದರೂ...   ಮಲಗಿದ್ದರೂ....  ನಿದ್ದೆ ಬರೋಲ್ಲ
ಗಂಡು : ನಿದ್ದೆ ಕೊಡದ ಕನಸುಗಳೂ ಆ....
ಹೆಣ್ಣು : ಕಾಡೋ ಮನದ ಬಯಕೆಗಳೂ...ಆ...
ಗಂಡು : ಮಾತೇ ಕೇಳೋಲ್ಲ...
ಹೆಣ್ಣು : ಪ್ರಾಯ ಬಂದರೇ ಯಾಕೋ ...
ಗಂಡು : ಆ  ಅದು ಯಾಕೋ
ಇಬ್ಬರು : ಹೊತ್ತೇ ಹೋಗೋಲ್ಲಾ...
----------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಆಡುವೆನೂ ನಿಮಗಾಗಿ ಕುಣಿದಾಡುವೆನೂ
ಸಂಗೀತ : ವಿಜಯಾನಂದ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. 

ಆಆಆ ... ಆಡುವೇನೂ ನಿಮಗಾಗಿ
ಆಡುವೇನೂ ನಿಮಗಾಗಿ ಕುಣಿದಾಡುವೆನೂ ನಿಮಗಾಗಿ
ಬೀಸಿಲೋ ಇಲ್ಲ ನೆರಳೋ ಮಳೆಯೋ ಇಲ್ಲ ಸಿಡಿಲೋ
ಅನುದಿನ ಜೊತೆಯಲಿ ನೀವಿರಲೂ .. ಮನಸಿಗೇ ಹುರೂಪನೂ ತಂದಿರಲೂ
ಆಡುವೇನೂ ನಿಮಗಾಗಿ ಕುಣಿದಾಡುವೆನೂ ನಿಮಗಾಗಿ

ಈ ನಾಡು ಬಲು ಸೊಗಸಾಗಿದೇ ಈ ನಮ್ಮ ನುಡಿ ಸವಿಯಾಗಿದೇ
ಈ ನಾಡು ಬಲು ಸೊಗಸಾಗಿದೇ ಈ ನಮ್ಮ ನುಡಿ ಸವಿಯಾಗಿದೇ
ಲತೆಗಳಲೀ ಹೂವೂ ನಗುತಲಿರೇ ಭೃಮರಗಳು ಗೀತೆಯ ಹಾಡುತಿರೇ
ಕಾಡೆಲ್ಲ ಶ್ರೀಗಂಧದಿಂದ ಕಂಪನ್ನೂ ಚೆಲ್ಲಾಡಿ ನಲಿದಿರೇ ..
ಮಣ್ಣೆಲ್ಲಾ ಬಂಗಾರವಾಗಿ ಶ್ರೀದೇವಿ ಹಾಡುತ್ತ ಕುಣಿದಿರೇ
ಕನ್ನಡದ ದಾಗಿರತಕಿಟ ಥಾ.. ಈ ನೆಲವೂ ದಾಗಿರತಕಿಟತಾಕಿಟ ಥಾ
ಕನ್ನಡದ ಈ ನೆಲವು ಎಂಥಾ ಚೆಂದ ಎಂದೂ ನಾನೂ .. ಆಆಆ...
ಆಡುವೇನೂ ನಿಮಗಾಗಿ ಕುಣಿದಾಡುವೆನೂ ನಿಮಗಾಗಿ

ಧೀಮ್.. ತಕಧಿಮ್.. ಥೈ ತರಿಕಿಟ ಥೈ ...
ಈ ನಾಟ್ಯ ನನ್ನ ಬದುಕಾಗಿದೇ ಈ ಗೆಜ್ಜೆ ಧನಿ ಉಸಿರಾಗಿದೆ ..
ಈ ನಾಟ್ಯ ನನ್ನ ಬದುಕಾಗಿದೇ ಈ ಗೆಜ್ಜೆ ಧನಿ ಉಸಿರಾಗಿದೇ ..
ಕೋಗಿಲೆಯೂ ಹಾಡಿ ನಲಿವಂತೇ ... ನವಿಲುಗಳೂ ಕೂಗಿ ಕುಣಿವಂತೇ ..
ಬಾಳೆಲ್ಲಾ ಆನಂದದಿಂದ ನಿಮ್ಮಲ್ಲಿ ಒಂದಾಗಿ ನಲಿಯುವೇ
ಆ ಬಾನೂ ಈ ಭೂಮಿ ಸೇರಿ ಒಂದಾಗಿ ಹೋದಂತೇ ಕುಣಿಯುವೇ
ಮೈಮನವ ದಿದಾ ದಿಗದಿಘತೈ ಮರೆಸುವೆನೂ ದಿದಾ ದಿಗದಿಗಥೈ
ಮೈಮನವ ಮರೆಸುವೆನೂ ಕಾಣದಂತ ಹರುಷ ತಂದೂ ..
ಆಆಆ.. ಆಆಆ.. ಆಡುವೇನೂ ನಿಮಗಾಗಿ ಕುಣಿದಾಡುವೆನೂ ನಿಮಗಾಗಿ
ಬೀಸಿಲೋ ಇಲ್ಲ ನೆರಳೋ ಮಳೆಯೋ ಇಲ್ಲ ಸಿಡಿಲೋ
ಅನುದಿನ ಜೊತೆಯಲಿ ನೀವಿರಲೂ .. ಮನಸಿಗೇ ಹುರೂಪನೂ ತಂದಿರಲೂ
----------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಈ ರಾಧೇ ಜೀವ
ಸಂಗೀತ : ವಿಜಯಾನಂದ ಸಾಹಿತ್ಯ : ಹಂಸಲೇಖ ಗಾಯನ :  ಚಿತ್ರಾ

ಹೆಣ್ಣು : ಈ ರಾಧೇ ಜೀವ ಕುಣಿದಾಡಿತೀಗ ನಿನ್ನಲ್ಲಿ ಒಂದಾಯಿತು
          ಈ ರಾಧೇ ಜೀವ ಕುಣಿದಾಡಿತೀಗ ನಿನ್ನಲ್ಲಿ ಒಂದಾಯಿತು
          ಕಣ್ಣೀರೂ ಹೋಗಿ ಪನ್ನೀರು ಬಂತೂ  
          ಕಣ್ಣೀರೂ ಹೋಗಿ ಪನ್ನೀರು ಬಂತೂ ಒಡಲಲಿ ತಂತೂ ಮಿಂಚೂ .. ಕೃಷ್ಣ....
          ಕೃಷ್ಣ ನೀ ಕುಣಿದಾಗ..    ಕೃಷ್ಣ ನೀ ಕುಣಿದಾಗ.. 
ಕೋರಸ್ : ಆಆಆ... ಆಆಆ....ಆಆಆ.... ಆಆಆ...

ಹೆಣ್ಣು : ನೀನಿರುವಲ್ಲಿ ನಿಜ ಬೃಂದಾವನ ನೀ ಆಡೋ ಮಾತೇ ಸವಿವೆಳೋ ಜಾಣ
          ನಿನ್ನಯ ಮನಸೂ ಕೆನೆಹಾಲಿನಂತೇ ನೀ ನಗುವಾಗ ಸಿಹಿ ಜೇನಿನಂತೇ ..
          ಒಲಿದೇ ಸೆಳೆವೇ ನಿನ್ನ ನಾಟ್ಯದಲ್ಲಿ ಕಲಿತೇ ಬೆರೆತೆ ನಿನ್ನ ತಾಳದಲ್ಲಿ
          ಜೀವನ ಹಾಡಾಯಿತೂ ..  ಕೃಷ್ಣ....
          ಕೃಷ್ಣ ನೀ ಕುಣಿದಾಗ..    ಕೃಷ್ಣ ನೀ ಕುಣಿದಾಗ.. 
          ಈ ರಾಧೇ ಜೀವ ಕುಣಿದಾಡಿತೀಗ ನಿನ್ನಲ್ಲಿ ಒಂದಾಯಿತು

ಕೋರಸ್ : ಆಆಆ... ಆಆಆ....ಆಆಆ.... ಆಆಆ...   
ಹೆಣ್ಣು : ಆ ನಿನ್ನ ಕೊಳಲು ನಾನಾಗಲೇನೋ ಆ ಕಾಲ ಗೆಜ್ಜೇ ಇಂಪಾಗಲೇನೋ
          ನೀನಾಡುವಾಗ ನಾ ಆಡುವಾಸೇ ಮೈಯನೂ ಮರೆತೂ ತೇಲಾಡುವಾಸೇ
          ಮನಸೂ ಮನಸೂ ಒಂದಾದಾಗ ಒಲವೂ ಚಿಗುರಿ ಹಸಿರಾದಾಗ
          ನನ್ನದೇ ತೂಗಾಡಿತೂ... ಕೃಷ್ಣ....
          ಕೃಷ್ಣ ನೀ ಕುಣಿದಾಗ..    ಕೃಷ್ಣ ನೀ ಕುಣಿದಾಗ.. 
          ಈ ರಾಧೇ ಜೀವ ಕುಣಿದಾಡಿತೀಗ ನಿನ್ನಲ್ಲಿ ಒಂದಾಯಿತು
          ಈ ರಾಧೇ ಜೀವ ಕುಣಿದಾಡಿತೀಗ ನಿನ್ನಲ್ಲಿ ಒಂದಾಯಿತು
          ಕಣ್ಣೀರೂ ಹೋಗಿ ಪನ್ನೀರು ಬಂತೂ  
          ಕಣ್ಣೀರೂ ಹೋಗಿ ಪನ್ನೀರು ಬಂತೂ ಒಡಲಲಿ ತಂತೂ ಮಿಂಚೂ .. ಕೃಷ್ಣ....
          ಕೃಷ್ಣ ನೀ ಕುಣಿದಾಗ..    ಕೃಷ್ಣ ನೀ ಕುಣಿದಾಗ.. 
----------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಢಮ ಢಮರು
ಸಂಗೀತ : ವಿಜಯಾನಂದ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಚಿತ್ರಾ

ಕೋರಸ್ : ಆಆಆ.. ಆಆಆ... ಆಆಆ...
ಗಂಡು : ಢಮ ಢಮರು ಢಮ ಢಮರು ಶಿವನಾಡಿ ತಾಂಡವವ ಮೂಜಗವೂ ಕಂಪಿಸಿತು ಭಯದೇ.. ಕುಣಿದೂ
            ಢಮ ಢಮರು ಢಮ ಢಮರು ಶಿವನಾಡಿ ತಾಂಡವವ ಮೂಜಗವೂ ಕಂಪಿಸಿತು ಭಯವೇ..
            ಭೃಮ ಖಗಣ ನಡುನಡುವೇ ಗಗನವಿದು ಗುಡುಗುಡುಗೇ ಸಾಗರದ ಅಲೇ ಉಕ್ಕೀ ಬರಲೂ
            ಭೃಮ ಖಗಣ ನಡುನಡುವೇ ಗಗನವಿದು ಗುಡುಗುಡುಗೇ ಸಾಗರದ ಅಲೇ ಉಕ್ಕೀ ಬರಲೂ
            ಢಮ ಢಮರು ಢಮ ಢಮರು ಶಿವನಾಡಿ ತಾಂಡವವ ಮೂಜಗವೂ ಕಂಪಿಸಿತು ಭಯವೇ..

ಕೋರಸ್ : ಆಆಆ.. ಆಆಆ... ಆಆಆ...
ಹೆಣ್ಣು : ಈ ರೋಷವೇಕೆ ತಲೇ ಶಾಂತಿಯ ಈ ಗೌರಿಯ ಮಾತನ್ನೂ ಕೇಳೂ .. (ಆಆ )
          ಈ ರುಧ್ರರೂಪ ತೊರೆ ಈಗಲೇ ನೀ ಸೌಮ್ಯನಾಗೂ ಕೃಪಾಳೂ .. (ಆಆ ) 
          ಪಾರ್ವತಿ ಹೃದಯ ರಾಜೇಶ್ವರ ನೀ ಪ್ರೇಮ ಮಳೆ ಚೆಲ್ಲೂ ಬಾ  .. (ಆಆ )
          ತಾರುಣ್ಯ ಮೂರ್ತಿ ಗಂಗಾಧರ ನಗೇ ಗಂಗೇ ನೀ ಹರಿಸೂ ಬಾ ..  .. (ಆಆ )
ಗಂಡು : ಡಿಮ್ ಡಿಮವು ಮೊಳಗಿರಲೀ ನಟರಾಜ ಕುಣಿಯೇ.. ಸೃಸ್ಟಿಸ್ತುತಿ ಲಯಕಾರ್ಯ ಸಭ್ದತೆಯ ಪಡೆಯೇ  
            ಡಿಮ್ ಡಿಮವು ಮೊಳಗಿರಲೀ ನಟರಾಜ ಕುಣಿಯೇ.. ಸೃಸ್ಟಿಸ್ತುತಿ ಲಯಕಾರ್ಯ ಸಭ್ದತೆಯ ಪಡೆಯೇ  
            ಪ್ರಳಯಯವಿದೂ (ಆಆಆ) ಅಂತ್ಯವಿದೂ (ಆಆಆ) ಮೈಮರೆತು ಕುಣಿಯುತಿಹ ಪರಶಿವನ ಸರಸವಿದು  
ಹೆಣ್ಣು : ಢಮ ಢಮರು ಢಮ ಢಮರು ಶಿವನಾಡಿ ತಾಂಡವವ ಮೂಜಗವೂ ಕಂಪಿಸಿತು ಭಯವೇ.. ಕುಣಿದೂ
            ಭೃಮ ಖಗಣ ನಡುನಡುವೇ ಗಗನವಿದು ಗುಡುಗುಡುಗೇ ಸಾಗರದ ಅಲೇ ಉಕ್ಕೀ ಬರಲೂ
            
ಕೋರಸ್ : ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ..
ಹೆಣ್ಣು: ನಿನ್ನೊಮ್ಮೆ ನಗಲು ಜಗ ನಲಿವುದೂ ಎಲ್ಲೆಲ್ಲೂ ಸಂತೋಷ ತುಂಬಿ
          ಹರ ನಿನ್ನ ಒಲುಮೆ ವರಕ್ಕಾಗಿಯೇ ಕಾದಿಹುದೂ ನಿನ್ನನ್ನೇ ನಂಬಿ
          ಓ ಬಸ್ಮಧಾರಿ ಚಾರ್ಮುಂಭರ ತ್ರಿಪುರಾರೀ ನೀ ನೊಲಿದು ಬಾ
          ಕೈಲಾಸ ಪತಿಯೇ ಪರಮೇಶ್ವರ ಮೂಜಗವ ಕಾಪಾಡು ಬಾ
ಗಂಡು : ಕಾಮನನು ಗೆಲಿದವನ ಪೂಜೆಯಲಿ ಗೇಲಿವೆ ಮೂಜಗದ ಪಾರ್ಥನೆಗೇ ನಾನಿಂದೂ ಒಲಿದೇ
           ಕಾಮನನು ಗೆಲಿದವನ ಪೂಜೆಯಲಿ ಗೇಲಿವೆ ಮೂಜಗದ ಪಾರ್ಥನೆಗೇ ನಾನಿಂದೂ ಒಲಿದೇ
           ಶಕ್ತಿಯೂರಲೀ  ಪರಶಿವನ ದೇವತೆಯಲಿ ಅರ್ಥವನೂ ನಾ ನಿನಗೇ ತಂದಿರುವೇ ..
ಹೆಣ್ಣು : ಢಮ ಢಮರು ಢಮ ಢಮರು ಶಿವ ಕುಣಿಯೇ ಶಾಂತಿಯಲಿ ಮೂಜಗವೂ ಆಡುತಿರೇ ಜೊತೆಗೇ
ಗಂಡು : ಕುಣಿದೂ..  ಢಮ ಢಮರು ಢಮ ಢಮರು ಶಿವ ಕುಣಿಯೇ ಶಾಂತಿಯಲಿ ಮೂಜಗವೂ ಆಡುತಿರೇ ಜೊತೆಗೇ
ಹೆಣ್ಣು : ಭೃಮ ಖಗಣ ಹಾಡಿರಲೂ ಗಗನವದು ಮಳೆಗೆರೆಯೇ ಭೂಮಿಯದು ಸಂತಸದೀ ನಲಿಯೇ
ಗಂಡು ಭೃಮ ಖಗಣ ಹಾಡಿರಲೂ ಗಗನವದು ಮಳೆಗೆರೆಯೇ ಭೂಮಿಯದು ಸಂತಸದೀ ನಲಿಯೇ
ಇಬ್ಬರು :  ಢಮ ಢಮರು ಢಮ ಢಮರು ಶಿವ ಕುಣಿಯೇ ಶಾಂತಿಯಲಿ ಮೂಜಗವೂ ಆಡುತಿರೇ ಜೊತೆಗೇ
ಕೋರಸ್ : ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ.. ಆ..
----------------------------------------------------------------------------------------------------------------------

ಕೃಷ್ಣ ನೀ ಕುಣಿದಾಗ (೧೯೮೯) - ಧೀಮ್ ತನನ
ಸಂಗೀತ : ವಿಜಯಾನಂದ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಚಿತ್ರಾ

ಗಂಡು : ಧಾ.. ಧಾ.. ಧಾ .. ಧಾ.. ಧಾಧಾಧಾಧಾ.. ಧಾಘಡ್ ಧಾಘಡ್  ಧಾಘಡ್  ಧಾಘಡ್  ಧೀತ್
            ನಗಿಣ ಧಿಥ್ ನಗಿಣ ಧಿಥ್ ನಗಿಣ ನಗಿಣ ಝಣ ಝಣ ಝಣಣಣಣಣ ಧಿದ್ ನಾಗಿನ್ 
           ಧಿಥ್ ನಗಿಣ ಧಿಥ್ ನಗಿಣ ನಗಿಣ ಝಣ ಝಣ ಝಣಣಣಣಣ ಧಿದ್ ನಾಗಿನ್ 
           ಧೀಮ್ ತನನನನ...  ಧೀಮ್ ತನನನನ...
           ಧೀಮ್ ತನನನನ...ಧೀಮ್ ತನನನನ... ಧೀಮ್ ತನನನನ...ತನನ...ತನನ  ಧೀಮತ್  ಧೀಮತ್... 
           ಆಡೋ ನನ್ನ ಕಾಲಿಗೇ ಸ್ಫೂರ್ತಿಯಾದ ನೀನೂ ಹೋದೇ ಎಲ್ಲಿಗೇ ..
           ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
           ನಗುತಿಹ ಮುಖದ ಚೆಲುವು ಮರೆಯದು ಮನಸೂ ಕ್ಷಣವೂ ಎಲ್ಲಿರುವೇ ..
           ಧೀನನನ ಧೀನನನ ಧೀನನನ ಧೀನನನ
           ಧೀಮ್ ತನನನನ...  ಧೀಮ್ ತನನನನ...
           ಧೀಮ್ ತನನನನ...ಧೀಮ್ ತನನನನ... ಧೀಮ್ ತನನನನ...ತನನ...ತನನ  ಧೀಮತ್  ಧೀಮತ್... 
           ಆಡೋ ನನ್ನ ಕಾಲಿಗೇ ಸ್ಫೂರ್ತಿಯಾದ ನೀನೂ ಹೋದೇ ಎಲ್ಲಿಗೇ .. 

ಗಂಡು : ನೆಲೆಸಿದೇ ಎದೆಯಾಳದೇ ಕಣ ಕಣದೇ  ಒಲವಿನ ಶೃತಿ ಮೀಟಿದೇ ನಗೆಯ ಸ್ವರದೇ..
            ಕನಸಿನ ಕಥೆ ನೂರನೂ ನೀ ಬರೆದೆ ಇರುಳಲಿ ಮರೆಯಾಗುತ ನನ್ನ ತೊರೆದೇ ..
            ಹೃದಯವ ಸೀಳಿದೆಯಾ ಮಿಡಿಸಿದೇ ಕಂಬನಿಯಾ ಪ್ರೀತಿಯ ಹೂವಿದನೂ ಮಣ್ಣಲ್ಲಿ ಹಾಕಿದೆಯಾ
            ತಕಿಟ ತಕಿಟ..  ತಕಧಿಮಿ ತನಕಜಂ... ತನಕಜಂ....   ತನ್
           ಧೀಮ್ ತನನನನ...  ಧೀಮ್ ತನನನನ...
           ಧೀಮ್ ತನನನನ...ಧೀಮ್ ತನನನನ... ಧೀಮ್ ತನನನನ...ತನನ...ತನನ  ಧೀಮತ್  ಧೀಮತ್... 
           ಆಡೋ ನನ್ನ ಕಾಲಿಗೇ ಸ್ಫೂರ್ತಿಯಾದ ನೀನೂ ಹೋದೇ ಎಲ್ಲಿಗೇ ..
           ತಕಧಿಮಿ ತಕಿಟ ತಕಿಟ..  ತಕಧಿಮಿ ತಕಿಟ ತಕಿಟ.. 
           ನಗುತಿಹ ಮುಖದ ಚೆಲುವು ಮರೆಯದು ಮನಸೂ ಕ್ಷಣವೂ ಎಲ್ಲಿರುವೇ ..
           ಧೀನನನ ಧೀನನನ ಧೀನನನ ಧೀನನನ
           ಧೀಮ್ ತನನನನ...  ಧೀಮ್ ತನನನನ...
           ಧೀಮ್ ತನನನನ...ಧೀಮ್ ತನನನನ... ಧೀಮ್ ತನನನನ...ತನನ...ತನನ  ಧೀಮತ್  ಧೀಮತ್... 
           ಆಡೋ ನನ್ನ ಕಾಲಿಗೇ ಸ್ಫೂರ್ತಿಯಾದ ನೀನೂ ಹೋದೇ ಎಲ್ಲಿಗೇ .. 

ಗಂಡು : ಆಆಆ... ಆಆಆ.... ಆಆಆ... ಆಆಆ... ಆಆಆ.. ಆಆಆ... 
           ಹೃದಯದ ಈ ವೇದನೇ ಕೇಳಿಸದೇ ಎಲ್ಲಿಹ ಸಂಗಾತಿಯ ಬಳಿ ನೀ ಬರದೇ 
           ಪ್ರೀತಿಯ ಮಾತೆಲ್ಲವೂ ಮರೆತಿಹುದೇ .. ಜೀವನ ಬರಡಾಗಿದೆ ಜೊತೆ ನೀ ಇರದೇ.. 
           ಕಂಗಳೂ ಬಾಡುತಿದೇ ದಾರಿಯೂ ಕಾಯುತಿದೇ 
           ಕಾಲ್ಗಳೂ ಸೋಲುತಿದೆ ಹೆಜ್ಜೆಯೂ ನಿಲ್ಲುತಿದೇ 
           ತಕಿಟ ತಕಿಟ..  ತಕಧಿಮಿ ತನಕಜಂ... ತನಕಜಂ....   ತನ್
           ಧೀಮ್ ತನನನನ...  ಧೀಮ್ ತನನನನ...
           ಧೀಮ್ ತನನನನ...ಧೀಮ್ ತನನನನ... ಧೀಮ್ ತನನನನ...ತನನ...ತನನ  ಧೀಮತ್  ಧೀಮತ್... 
           ಆಡೋ ನನ್ನ ಕಾಲಿಗೇ ಸ್ಫೂರ್ತಿಯಾದ ನೀನೂ ಹೋದೇ ಎಲ್ಲಿಗೇ ..
----------------------------------------------------------------------------------------------------------------------

No comments:

Post a Comment