748. ರಾಂಬೋ ೨ (೨೦೧೮)



ರಾಂಬೋ ೦೨ ಚಲನಚಿತ್ರದ ಹಾಡುಗಳು 
  1. ಕೂಗಿ ಕೂಗಿ ಕರೆಯುತಿರು 
  2. ಎಲ್ಲಿ ಕಾಣ್ ಎಲ್ಲಿ ಕಾಣೆನೋ  
  3. ಹುಡುಗಿ ಯಾಕ್ ಹಿಂಗಾಡ್ತಿ 
  4. ಯವ್ವಯವ್ವ ಯವ್ವ ಇವ್ನ ಪ್ರೀತೆ ಮಾಡೇ ಯವ್ವಾ 
  5. ಬೇಡ ಮಗ ದಮ್ಮೂ ಸುಟ್ಕೊಳ್ತೀಯಾ ಬುಮ್ಮು  
  6.  ಕೂಗಿ ಕೂಗಿ ಕರೆಯುತಿರು ಕಣ್ಣ ಹನಿಯ 
ರಾಂಬೋ ೨ (೨೦೧೮) - ಕೂಗಿ ಕೂಗಿ ಕರೆಯುತಿರು 
ಸಂಗೀತ : ಅರ್ಜುನ  ಜನ್ಯ  ಸಾಹಿತ್ಯ : ಸಂತೋಷ ನಾಯ್ಕ್, ಗಾಯನ : ಮೆಹಬೂಬ ಸಾಬ್

ಕೂಗಿ ಕೂಗಿ ಕರೆಯುತ್ತಿರೋ ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತಿರೋ ಮನದ ನೋವು ಮನ ಮುಟ್ಟದೆ
ಕೈಯ್ಯ ಮುಗಿವೆ ನಾ ಹೇಗಾದರೂ ನೀ ನನ್ನ ಜೊತೆಯೇ ಇರು
ಕಾಲ ನಿನ್ನ ಬೇಡುವೆನು  ಸ್ವಲ್ಪ ಹಿಂದೆ ಸರಿದುಬಿಡು
ಸುಂದರ ಕ್ಷಣಗಳನ್ನು ಮರಳಿಕೊಡು

ಬೇಕಾ ನಿಂಗೆ ಕೇಳಿ ತಗೋ ನನ್ನ ಜೀವ ನೀಡುವೆನು
ನಿನ್ನ ವೇಳಾಪಟ್ಟಿಯನ್ನು ತಿದ್ದಿ ಇದು
ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನ ಬಿಟ್ಟು
ಯಾರು ಇಲ್ಲ ಇಂದು ನನಗೆ ಹಿಂದೂ ಮುಂದು
ಬಿಟ್ಟೋಗ್ಬೇಡ ನನ್ನ ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ ಬಿಟ್ಟೋಗ್ಬೇಡ

ಓ ನನ್ನ ದೇವತೆ ಇರದೆ ನೀ ಜೊತೆ ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ ನಾನಾದೆ ಆಟಿಕೆ ಹೃದಯ ಏತಕ್ಕೆ ನಿನಗಿಲ್ಲ  
ದೇವರಿಗೂ ನಾನು ಶಾಪ ಹಾಕಿರುವೆ ಅಷ್ಟು ಕೋಪ 
ಹೋಗ ಬೇಡ ಚಿನ್ನ ಒಂಟಿ ಮಾಡಿ ನನ್ನ…
ಬಿಟ್ಟೋಗ್ಬೇಡ ನನ್ನ ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ ಬಿಟ್ಟೋಗ್ಬೇಡ….
-----------------------------------------------------------------------------------------------------------------------

ರಾಂಬೋ ೨ (೨೦೧೮) - ಎಲ್ಲಿ ಕಾಣ್ ಎಲ್ಲಿ ಕಾಣೆನೋ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಯೋಗರಾಜ ಭಟ್, ಗಾಯನ : ಪುನೀತ ರಾಜಕುಮಾರ


ಎಲ್ಲಿ ಕಾಣ್ ಎಲ್ಲಿ ಕಾಣೆನೋ ನಾನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿಕಾಣೆನೋ 
ಅಲ್ಲಿ ಕಾಣೆ ಇಲ್ಲ ಕಣೇನೋ ನಾನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ 
ಎಲ್ಲಿ ಕಾಣೆ ಎಲ್ಲಿ ಕಾಣೆನೋ ನಾನ್ ಹುಡುಗೀನ ಎಲ್ಲಿ ಕಾಣೆ ಎಲ್ಲಿ ಕಾಣೆನೋ

ಬಟ್ಟೆ ಬ್ಯಾರೆ ಹಾಕಿಕೊಂಡ ಸನ್ನಿ ಲಿಯೋನ್ ಫ್ಯಾನೂ ನಾನೂ 
ಜಕ್ಕುನಕ ಜಕ್ಕುನ ಜಕ್ಕುನಕ ಜಕ್ಕುನ 
ನಂಬಿ ಬಿಡಿ ನಾನೊಂದ್ ತರ ಕರ್ನಾಟಕ ಸಲ್ಮಾನ್ ಖಾನೂ 
ಇನ್ನು ನಂಗೆ ಮದುವೆ ಆಗಿಲ್ಲ ಬೀದಿಲಿರೋ ಮಕ್ಳು ನಂದಲ್ಲ 
ಯಾಕೋ ನಾನ್ ಯಾರು ನಂಬಲ್ಲ 
ಎಲ್ಲಿಕಾನ್ ಎಲ್ಲಿಕಾನೇನೋ ನಾನ್ ಹುಡುಗೀನ ಎಲ್ಲಿಕಾನ್ ಎಲ್ಲಿಕಾಣೆನೋ
ಅಲ್ಲಿ ಕಾಣ ಇಲ್ಲಿ ಕಾಣೆನೋ ನಾನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 

ತಾಳಿ ಚೈನೂ ಜೇಬಲ್ಲೆ ಆಯ್ತೆ ಮಂಚ ದಿಂಬು ಆರ್ಡರ್ ಕೊಟ್ಟವ್ನೆ 
ಎಮರ್ಜೆನ್ಸಿ ಕುತ್ಗೆ ಚಾಚೋರು ಓಡಿ ಬನ್ನಿ ಬಿಟ್ಟಿ ಬಿದ್ದವ್ನೆ 
ನಾನೋಬ್ನೆ ಪರ್ಫೆಟ್ಟೂ ಮಾಡಬೇಡಿ ನೆಗ್ಲೇಟೂ 
ಮಧ್ವೆ ಆಗಿ ಒಂದೇ ಒಂದ್ ಸಲ ಕೈಗೆ ಕೊಡುವೆ ನೂರು ಮಕ್ಕಳ 
ಫಸ್ಟ್ ನೈಟೂ ರೆಡಿ ಮಾಡ್ಕೊಳ್ಳ.... 
ಎಲ್ಲಿ ಕಾಣೆ ಎಲ್ಲಿ ಕಾಣೆನೋ ನಾನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 
ಅಲ್ಲಿ ಕಾಣೆ ಇಲ್ಲ ಕಣೇನೋ ನಾನ್ ಹುಡುಗೀನ ಎಲ್ಲಿ ಕಾಣ್ ಎಲ್ಲಿ ಕಾಣೆನೋ 

ಬ್ಯಾಗಲ್ ಎರರಡು ಸೀರೆ ಹಾಕೊಂಡು ಆಟೋ ಏರಿ ಆಗೋಣ ಜೂಟು 
ಲೇಸು ಬಾಡಿಗೆ ಸಿಂಗಲ್ ಬೆಡ್‌ರೂಮೂ ಕುಟುಂಬ ಇಷ್ಟೇ ಯಾಕ್ರಮ್ಮಾ ಲೇಟೂ 
ನಿಮ್ಗ ಯಾಕೆ ತಿಳಿಯಲ್ಲ ಚಳಿಗಾಲ ಮುಗಿದಿಲ್ಲ 
ಬ್ಯೂಟಿ ಉಂಟು ಬುದ್ದಿ ನಿಮಗಿಲ್ಲ ನಮ್ದು ಬಿಡ್ರಿ ಎರಡು ನಮ್ಗಿಲ್ಲ 
ನಾನ್ ಕೈಲಿನ್ನು ತಡಿಯಾಕ್ ಆಗ್ತಿಲ್ಲಾ 
ಎಲ್ಲಿಕಾನ್ ಎಲ್ಲಿಕಾಣೆನೋ ನಾನ್ ಹುಡುಗೀನ ಎಲ್ಲಿಕಾನ್ ಎಲ್ಲಿಕಾಣೆನೋ 
ಅಲ್ಲಿಕಾನ್ ಇಲ್ಲಿಕಾಣೆನೋ ನಾನ್ ಹುಡುಗೀನ ಎಲ್ಲಿಕಾನ್ ಎಲ್ಲಿಕಾಣೆನೋ
--------------------------------------------------------------------------------------------------------------------------

ರಾಂಬೋ ೨ (೨೦೧೮) - ಹುಡುಗಿ ಯಾಕ್ ಹಿಂಗಾಡ್ತಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಶಿವೂ ಬೇರಾಗಿ ಗಾಯನ : ರವೀಂದ್ರ ಸೋರಗಾವಿ, ಶಮಿತಾ ಮಲ್ನಾಡ್

ಗಂಡು : ಹೇ ಹುಡಿಗಿ ಯಾಕ್ ಹಿಂಗ್ ಆಡ್ತಿ ಈ ಮಾತಲ್ಲೆ ಮಳ್ಳ ಮಾಡ್ತಿ
           ವರ್ಷ ಆತೊ ಹಿಂಗೆ ಆಡ್ತಿ ನೀ ಸಿಗವಲ್ಲೆ ಕೈಗೆ
ಹೆಣ್ಣು : ಏ ಹುಡುಗ ಯಾಕೊ ಕರಿತಿ ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
         ದಿನಕೊಂದು ಡೈಲಾಗ್ ಹೊಡಿತಿ ಹೆಂಗೈತೆ ಮೈಗೆ
ಗಂಡು : ನಿನ್ನ ನಡುವು ಸಣ್ಣ ಐತಿ ನಡಿಗೆ ಕಣ್ಣು ಕುಕ್ಕೈತಿ
           ನಿನ್ನ ಗುಂಗ ಏರೈತಿ ಮನ್ಸು ಮಂಗ್ಯ ಆಗೈತಿ
          ನನ್ನ ತಲಿಯ ಕೆಡಿಸೈತಿ...  ಹೇ ಹುಡಿಗಿ...  

ಹೆಣ್ಣು : ಏನ್ ಮಾವ            ಗಂಡು : ಚುಟು ಚುಟು
ಹೆಣ್ಣು : ಎಲ್ಲಿ?
ಗಂಡು : ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ
           ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ

ಗಂಡು : ಜಾತ್ರೆ ಜಾಗರಣಿಯಾಗೆ ಸಂತೆ ಬಜಾರ್‍ದಾಗ
           ಸಾಲ ಕೊಟ್ಟವನಂಗ ಕಾಡ್ತೀ..ಹಾಂ... 
           ಕಣ್ಣಲ್ಲೆ ಮಿಸ್ಕ್‍ಕಾಲೂ ಕೊಡುತೀ
           ಊರ್ ತುಂಬ ಹುಡ್ಗೀರ್ ಇದ್ರು ನಿನ್ನ ಮ್ಯಾಲ ನನ್ನನೆದುರು
          ಮನಸಿದ್ರು ಇಲ್ದಾಂಗ ನುಲಿತೀ ಇದನ್ಯಾವ ಶಾಲ್ಯಾಗ ಕಲೀತೀ
ಹೆಣ್ಣು : ಮನಸಲ್ಲೆ ಹುಡುಗ ಮಸಾಲೆ ಅರೀತಿ ಸಿಕ್ಕಲ್ಲೆ ಸೀಜ ಮಾಡಕ್ಕೆ ಬರತೀ
          ನಿನ್ನ ನೋಟಕ ಮೈಮಾಟಕ ಬ್ಯಾಲೆನ್ಸಾ ತಪತೈತಿ
ಗಂಡು : ಹೇ ಹುಡಿಗಿ                        ಹೆಣ್ಣು : ಏನ್ ಮಾವ
ಗಂಡು : ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ
           ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ

ಗಂಡು : ಊರ್ ಹಿಂದೆ ಬಾಳೆ ತೋಟ ಊರ್ ಮುಂದೆ ಖಾಲಿ ಸೈಟ
           ಇದಕ್ಕೆಲ್ಲ ನಿನಾಗ ಒಡತಿ ಮತ್ಯಾಕ ಅನುಮಾನ ಪಡತಿ
ಹೆಣ್ಣು  : ಶೋಕಿಗೆ ಸಾಲ ಮಾಡಿ ತಂದೀದಿ ಬುಲ್ಲೆಟ್ ಗಾಡಿ
           ನನ್ನೋಡಿ ಡಬಲ್ ಹಾರ್ನ್ ಹೊಡಿತಿ ಊರಾಗ ನೀನೆಷ್ಟ್ ಮೆರಿತಿ
ಗಂಡು : ಊರಾಗ ನಂದೊಂದ್ ಲೆವೆಲ ಐತಿ ದಾರ್ಯಾಗ್ ನಿಂತು ಯಾಕ ಬೈತಿ
ಹೆಣ್ಣು : ಇಷ್ಟ್ ಕಾಡತಿ ಮಳ್ಳ ಮಾಡತಿ ಮನಸ್ಯಾಂಗ ತಡಿತೈತಿ... ಮಾವ
ಗಂಡು : ಏನ್ ಹುಡ್ಗಿ
ಹೆಣ್ಣು : ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ
          ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ
          ಚುಟು ಚುಟು ಅಂತೈತಿ ನನಗೆ ಚುಮು ಚುಮು ಆಗ್ತೈತಿ
----------------------------------------------------------------------------------------------------------------------

ರಾಂಬೋ ೨ (೨೦೧೮) - ಯವ್ವಯವ್ವ ಯವ್ವ ಇವ್ನ ಪ್ರೀತೆ ಮಾಡೇ ಯವ್ವಾ 
ಸಂಗೀತ : ಅರ್ಜುನ  ಜನ್ಯ  ಸಾಹಿತ್ಯ : ವಿ.ನಾಗೇಂದ್ರಪ್ರಸಾದ್  ಗಾಯನ : ವಿಜಯ ಪ್ರಕಾಶ 

Yavva Yavva Yavva
Ivn Preethe Maade Yavva
Yavva Yavva Yavva
Nee Haaku Ivnge Dovevva Dovevva

Yavva Yavva Yavva
Maadammi Neenu Lovevva
Yavva Yavva Yavva
Preethsoke Ninge Novva Novvaa

Neenu Matthe Matthe Otthabeku
Mettha Metthagotthabeku
Othlebeku Like-u

Nanna Kaddu Kaddu Nodadidre
Muddu Muddu Maadadidre
Maadebidtheen Strike-U
Neene Nuttu Naane Bolt-u..Tu Tu Tu Tu

Yavva Yavva Yavva
Neen Nan Dovevva Dovevva
Yavva Yavva Yavva
Maadu Love Love Love Lovevva

Neenu Bisi Bisi Bisi Bisi Rediator-u
Thadi Thadi Thadi Thadi Haakthini Water-u
Bhale Bhale Speed Ide Nanna Motor-u
Summane Kemmade Thabbiko Nannede

Haadonova Prema Lokada Songu
Haadvva Haadvva
Bike-U Kalsthini Ningu
Marriage Haagoke
Honeymoon Hogake
Garage Maadbidthini

Yavva Yavva Yavva
Neen Nan Dovevva Dovevva
Yavva Yavva Yavva
Maadu Love Love Love Lovevva

Aha Kila Kila Kila Kila Kamala Neenu
Kuchu Kuchu Kuchu Kuchu Hastha Naanu
Thene Thene Thene Thene Hotthu Naavu
Baaravva Hoguva Auto-Li Kooruva

Neene Kane Nanna Aadhar Card-u
Nodavva Kelavva
Maadodilla Naanu Endu Fraud-u
Sullavva
Yes Andre Saakamma GST Katbittu
Naa Ninna Love Maadthini

Yavva Yavva Yavva
Neen Nan Dovevva Dovevva
Yavva Yavva Yavva
Maadu Love Love Love Lovevva

Thana Dhumthadhumtha Thana Dhumdhumdhum
Dhumthadhumtha Thana Dhumdhumdhum
Dhumthadhumtha Thana Dhumdhumdhum Thara Rara Thara Rara Ra..

------------------------------------------------------------------------------------------------------------------------

ರಾಂಬೋ ೨ (೨೦೧೮) - ಬೇಡ ಮಗ ದಮ್ಮೂ ಸುಟ್ಕೊಳ್ತೀಯಾ ಬುಮ್ಮು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಮುತ್ತು ಗಾಯನ : ಅದಿತಿ ಸಾಗರ

ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬುಮ್ಮು ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು
ಹೊಡಿ ಧುಂ ಧುಂ ಧುಂ
ನಶೆಯಲ್ಲಿ ಬಾಡಿ ತೇಲಾಡಂಗ್ ಮಾಡಿ ಮಾಡೋನೆ ಮೋಡಿ ಮೇಲಕುಂತವ್ನ ನೋಡಿ
ಸಪ್ಪಲಿ ಮೋಜಿನ ಸಂತೆ ರೀ.... ಹಿಡಿಯಲಿ ಶಿವನಿಗೆ ಹತ್ರ ರೀ... ಬಾಂಗಿ ಹಚ್ಚೀರೀ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೇ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಳೆ ಭುಂ

ವಿಶ್ವೇಶ್ವರಾಯ ಮಹಾದೇವಾಯ ತ್ರಯಮ್ಬಕಾಯ ತ್ರಿಪುರಾಂತಕಾಯ
ತ್ರಿಕಾಲಾಗ್ತ್ನಿ ಕಾಲಾಯ ಕಾಲಾಗ್ನಿ ರುದ್ರಾಯಾ ನೀಲಕಂಠಾಯ ಮೃತ್ಯುಂಜಾಯ
ಸರ್ವೇಶ್ವರಾಯ ಸದಾಶಿವಾಯ ಶ್ರೀಮಾನ್ ಮಹಾದೇವಾಯ ನಮಃ ನಮಃ ನಮಃ ನಮಃ

ಧೂಮಿಗೇ ಧರ್ಮ ಇಲ್ಲಾ ಸೊಪ್ಪಿಗೆ ಸಂಘ ಇಲ್ಲಾ
ಧೋಬಿಗೆ ಸಾಟಿ ಇಲ್ಲ ಹಿಡಿದು ಹೇಳಿ ಭುಂ ಭುಂ ಬೋಲಾ
ಭುಂ ಭುಂ ಬೋಲಾ ಭುಂ ಭುಂ ಬೋಲಾ ಭುಂ ಭುಂ ಬೋಲಾ

ಗಾಂಜಗೇ ಮೂರು ಮೂಲ ಭಂಗಿಗೆ ಭಕ್ತಿ ಮೂಲ
ಭೂಮಿಗೆ ಭಂಗಿ ಸಾಲ ಕೊಟ್ಟೋವ್ನಲ್ಲ ಶಿವನೇ ಎಲ್ಲ
ಭುಂ ಭುಂ ಬೋಲೇನಾಥ ಭಂಗಿ ಪ್ರಿಯನೇ
ಆಶು ಭಾಷೆಯಲಿ ನಲಿದಾದೋ ನಂಟು ಇಟ್ಟವ್ನೆ
ಸವಿ ಸೊಪ್ಪಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ
ಗಾಂಜ ಸೊಪ್ಪಿಗೆ ದಾಸರೇ ಹಚ್ಚಿ ಭಂಗಿನೇ
ಹಂಗಾತಾ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೇ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಗಿ ಹೇಳಿ ಭುಂ ಬೋಲೇ ಭುಂ

ಭಂಗಿಗೆ ಲೈಸೆನ್ಸ್ ಇಲ್ಲಾ ಕೇಸ್ ಆದ್ರೆ ಬೇಲ್ -ಯೇ ಇಲ್ಲಾ 
ಹೊಡಿಯೋಕೆ ರೂಲಸೇ ಇಲ್ಲಾ ಆಗ್ತಿವಲ್ಲ ಹತ್ತರೀ ಸಾಲ 
ಭೂಮಿನೇ ಶಿವನ ಯಾತ್ರ ಕೈಲಾಸ ಅವನ ಛತ್ರ 
ಸೊಪ್ಪಲ್ಲೇ ಶಾಂತಿಯ ಮಂತ್ರ ಹೊಡೆದೋರೆಲ್ಲ ಅವನ ಪುತ್ರ
ಮೂರು ಲೋಕ ಸುತ್ತಿ ಬಂದ ಶಿವನೇ ಮುಕ್ಕೋಟಿ ದೇವರಿಗೂ ಸತ್ಯ ಹೇಳವ್ನೆ 
ಈ ಬ್ರಹ್ಮಾಂಡ ಸುತ್ತೋದು ನಶೇದಿಂದಾನೆ ಇನ್ಯಾಕೆ ಕಾಯೋದು ಹಚ್ಚಿ ಭಂಗಿನೇ 
ಹಂಗಾತಾ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೇ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಗಿ ಹೇಳಿ ಭುಂ ಬೋಲೇ ಭುಂ
ಬೇಡ ಮಗ ಧಮ್ಮು ಸುಟ್ಕೊಳ್ತಿಯ ಬುಮ್ಮು 
ತುಂಬಿ ಚಿಲಮ್ಮು ಹಚ್ಚಿಬಿಡಿ ಧಮ್ಮು
--------------------------------------------------------------------------------------------------------------------------

ರಾಂಬೋ ೨ (೨೦೧೮) - ಕೂಗಿ ಕೂಗಿ ಕರೆಯುತಿರು ಕಣ್ಣ ಹನಿಯ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಸಂತೋಷ ನಾಯ್ಕ, ಗಾಯನ : ಮೆಹಬೂಬ ಸಾಬ್

ಕೂಗಿ ಕೂಗಿ ಕರೆಯುತ್ತಿರೋ ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತಿರೋ ಮನದ ನೋವು ಮನ ಮುಟ್ಟದೆ
ಕೈಯ್ಯ ಮುಗಿವೆ ನಾ ಹೇಗಾದರೂ ಹೋಗದಿರು
ನೀ ನನ್ನ ಜೊತೆಯೇ ಇರು ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…
ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…
ಕೂಗಿ ಕೂಗಿ ಕರೆಯುತ್ತಿರೋ ಕಣ್ಣ ಹನಿಯ ದನಿ ಕೇಳದೆ

ಕಾಲ ನಿನ್ನ ಬೇಡುವೆನು ಸ್ವಲ್ಪ ಹಿಂದೆ ಸರಿದು ಬಿಡು
ಸುಂದರ ಕ್ಷಣಗಳನ್ನು ಮರಳಿ ಕೊಡು
ಬೇಕ ನಿಂಗೆ ಕೇಳಿ ತಗೋ ನನ್ನ ಜೀವ ನೀಡುವೆನು
ನಿನ್ನ ವೇಳಾಪಟ್ಟಿಯನ್ನು ತಿದ್ದಿ ಇಡು
ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನ ಬಿಟ್ಟು
ಯಾರು ಇಲ್ಲ ಇಂದು ನನಗೆ ಹಿಂದೆ ಮುಂದು
ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…
ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…

ಓ ನನ್ನ ದೇವತೆ ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ ನಾನಾದೆ ಆಟಿಕೆ
ಹೃದಯ ಏತಕ್ಕೆ ನಿನಗಿಲ್ಲ
ದೇವರಿಗೂ ನಾನು ಶಾಪ ಹಾಕಿರುವೆ ಅಷ್ಟು ಕೋಪ
ಹೋಗ ಬೇಡ ಚಿನ್ನ ಒಂಟಿ ಮಾಡಿ ನನ್ನ
ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…
ಬಿಟ್ಟೋಗ್ಬೇಡ… ನನ್ನ ಬಿಟ್ಟೋಗ್ಬೇಡ…
--------------------------------------------------------------------------------------------------------------------------

No comments:

Post a Comment