1339. ಯಜಮಾನ (೨೦೧೯)


ಯಜಮಾನ ಚಲನಚಿತ್ರದ ಹಾಡುಗಳು 
  1. ಬಸಣ್ಣಿ ಬಾ ಬಸಣ್ಣಿ ಬಾ ಬಜಾರು ನಮ್ದ ಇವತ್ತು ಬಸಣ್ಣಿ ಬಾ
  2. ನಿಂತ ನೋಡು ಯಜಮಾನ.
  3. ಶಿವಾನಂದ ಶಿವಾನಂದಿ
  4. ಒಂದು ಮುಂಜಾನೇ ಹಂಗೇ ಸುಮ್ಮನೆ
  5. ಹತ್ರಪಯಿಗ್ ಓಂದ್ ಹತ್ರುಪೈಗ್ ಓಂದ್ 
ಯಜಮಾನ (೨೦೧೯) - ಬಸಣ್ಣಿ ಬಾ ಬಸಣ್ಣಿ ಬಾ ಬಜಾರು ನಮ್ದ ಇವತ್ತು ಬಸಣ್ಣಿ ಬಾ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿ.ಹರಿಕೃಷ್ಣ, ವರ್ಷಾ   

ಕೋರಸ್ : ನಾ ಚಿಲ್ಲರ್ ಬೇಬೀ ..ನಾ  ಚಿಲ್ಲರ್ ಬೇಬೀ ..ನಾ ಚಿಲ್ಲರ್ ಬೇಬೀ  ನಾಚೇ ..
ಹೆಣ್ಣು : ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು ಗೆಜ್ಜಿ ಕಟ್ಟೀನಿ
         ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಗಂಡು : ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
           ನಿಮ್ಮ ಹೆಜ್ಜಿ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕಂಡ್ವಿ
           ನಿಮಗೆ ಶೇಕು ಹ್ಯಾಂಡು ಕೊಡಬೇಕಂತ ಕೈ ತೊಳಕಂಡ್ವಿ
           ಬಸಣ್ಣಿ ಬಾ..  ಬಸಣ್ಣಿ ಬಾ...  ಬಜಾರು ನಮ್ದ ಇವತ್ತು ಬಸಣ್ಣಿ ಬಾ..
           ಬಸಣ್ಣಿ ಬಾ ಬಸಣ್ಣಿ ಬಾ  ಬಸಣ್ಣಿ ಬಾ ಬಾ ಬಾ ಬಸಣ್ಣಿ ಬಾ
ಹೆಣ್ಣು : ಪಿಕ್ಸು ಮಾಡಲಕ ಸಂಬಂಧಾನ ಅದಕ ಬಂದೀನಿ
          ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ

ಗಂಡು : ಬೆಂಕಿ ಪೆಟ್ಟಿಗೆ ಕಡ್ಡಿ ಹಂಗ ಒಣಗೀವಿ ನಾವು
ಹೆಣ್ಣು : ಗೀರ್ಯರ ಗೀರ ಸುಟ್ಟು ಹೋಕ್ಕಣಿ
ಗಂಡು : ಬರಗಾಲ್ದಾಗ ಸೀಕ್ರೆಟ್ ಆಗಿ ಬೆಳಸೀವಿ ಹೂವು
ಹೆಣ್ಣು : ನಂಗಾರ ನೀಡ ದೊಡ್ಡೋಳಾಕ್ಕಣಿ
ಗಂಡು ಸಾಕಾಗೋಗೈತಿ ಎಡವಟ್ತಿ ನೀನು
ಹೆಣ್ಣು : ಸರ್ಕಾರಿ ಸಾಲಿ ಪ್ರಾಡಕ್ಟು ನಾನು
ಗಂಡು : ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
           ಲಾಸ್ಟು ಬೆಂಚಿನ ಮ್ಯಾಗೆ ಫಸ್ಟು ಗೆಳತಿ ಹೆಸುರು ಕೆತ್ತಿದ್ವಿ
          ನೀನು ಅವತ್ತು ಸಿಗ್ಬಾರ್ದಿತ್ತ ಹುಡುಗಿ ಚೆನ್ನಾಗಿರ್ತಿದ್ವಿ
         ಇರ್ಲಿ ಬಾ ಬಸಣ್ಣಿ ಬಾ ಬಜಾರು ನಮ್ದ ಇವತ್ತು ಬಸಣ್ಣಿ ಬಾ
         ಬಸಣ್ಣಿ ಬಾ  ಬಸಣ್ಣಿ ಬಾ ಬಸಣ್ಣಿ ಬಾ ಬಾ ಬಾ ಬಸಣ್ಣಿ ಬಾ
ಹೆಣ್ಣು : ಮಿಕ್ಸು ಮಾಡಬ್ಯಾಡ ಕಣ್ಣು ಕಣ್ಣು ಸುಟ್ಟು ಹೋಕ್ತಿನೀ
         ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ

ಗಂಡು : ಇಳಕಲ್ ಸೀರಿ ಮೊಳಕಾಲ್ ಮ್ಯಾಗ ಯಾತಕ ಉಡಬೇಕು
ಹೆಣ್ಣು : ಪ್ಯಾಸನ್ ಅಂದ್ರು ಅದಕ ಉಟ್ಟೀನಿ 
ಗಂಡು : ಮಕಮಲ್ ಟೋಪಿ ನಮ್ಮ ತಲಿಮ್ಯಾಲ್ ಯಾಕ ಇಡಬ್ಯಾಕು
ಹೆಣ್ಣು : ಸಿಂಗಲ್ ಆಗಿ ಸಿಕ್ರ ಹೇಳ್ತನಿ
ಗಂಡು : ಬುಕ್ಕು ಮಾಡೇನಿ ನಾ ಇನ್ನೆಲ್ಲೊ ಛತ್ರ
ಹೆಣ್ಣು : ಸೀಮ್ಯಾಗಿಲ್ಲದ್ದು ಏನೈತಿ ಅಕಿ ಹತ್ರ
ಗಂಡು : ಆಕಿ ನಾಟಿ ಬ್ಯೂಟಿ ಸೈಡಿನಿಂದ ಥೇಟು ಸಿರಿದೇವಿ
           ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ ಪ್ರೀತಿ ಮಾಡೇವಿ
          ನೀವು ಬಂದೀರಂತ ನಿಯತ್ತು ಸಲುಪು ಸೈಡೀಗೆ ಇಟ್ಟಿದ್ವಿ
          ಇರ್ಲಿ ಬಾ ಬಸಣ್ಣಿ ಬಾ ಬಜಾರು ನಮ್ದ ಇವತ್ತು ಬಸಣ್ಣಿ ಬಾ
          ಬಸಣ್ಣಿ ಬಾ ಬಸಣ್ಣಿ ಬಾ ಬಸಣ್ಣಿ ಬಾ ಬಾ ಬಾ ಬಸಣ್ಣಿ ಬಾ
---------------------------------------------------------------------------------------------------------

ಯಜಮಾನ (೨೦೧೯) - ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಸಂತೋಷ ಆನಂದರಾಮ, ಗಾಯನ : ವಿಜಯಪ್ರಕಾಶ 

ಯಾರೇ ಬಂದರೂ.. ಎದುರ್ಯಾರೇ ನಿಂತರೂ.. ಪ್ರೀತಿ ಹಂಚುವ ಯಜಮಾನ..
ಜೀವ ಹೋದರೂ .. ಜಗವೇನೆ ಅಂದರೂ ಮಾತು ತಪ್ಪದ ಯಜಮಾನ..
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ..ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಯಾರೇ ಬಂದರೂ.. ಎದುರ್ಯಾರೇ ನಿಂತರೂ.. ಪ್ರೀತಿ ಹಂಚುವ ಯಜಮಾನ..

ಒಬ್ಬನೇ ಒಬ್ಬ.. ನಮಗೆಲ್ಲ ಒಬ್ಬನು ಯಾರ ಹೆತ್ತ ಮಗನೋ ನಮಗಾಗಿ ಬಂದನು..
ಮೇಲೂ ಕೀಳು ಗೊತ್ತೇ ಇಲ್ಲ ಬಡವನು ಗೆಳೆಯಾನೇ
ಶ್ರೀಮಂತಿಕೆ ತಲೆಹತ್ತೆ ಇಲ್ಲ.. ಹತ್ತೂರ ಒಡೆಯನೇ..ನಿನ್ನ ಹೆಸರು.. ನಿಂದೆ ಬೆವರು..
ತಾನು ಬೆಳೆದು ತನ್ನವನ್ನು ಬೆಳೆಸೋ ಆ ಗುಣ..
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಯಾರೇ ಬಂದರೂ.. ಎದುರ್ಯಾರೇ ನಿಂತರೂ.. ಪ್ರೀತಿ ಹಂಚುವ ಯಜಮಾನ..

ಬಿರುಗಾಳಿ ಎದುರು ನಗುವಂತ ದೀಪ.. ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ..
ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ.. ಬಾಳಿನಲ್ಲಿ ಎಂದಿಗೂ ನಿನ್ ಹೆಸರೇ ಸವ್ವಾಲು..
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
-----------------------------------------------------------------------------------------

ಯಜಮಾನ (೨೦೧೯) - ಶಿವಾನಂದ ಶಿವಾನಂದಿ ಹರಿ ಹರಿ ಮೊರಿಲ್ಥರಾ ಹರಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಚೇತನಕುಮಾರ, ಗಾಯನ : ಶಶಾಂಕ ಶೇಷಗಿರಿ, ಕಾಲಭೈರವ, ಸಂತೋಷ ವೆಂಕಿ, ಚಿಂತನ ವಿಕಾಸ್ 

ಗಂಡು : ಶಿವನಂದೀ...  ಶಿವನಂದೀ...
            ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ.. ನಂದಿ
            ಢಮ ಢಮ ಢಮರುಗ ಮೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ... ನಂದಿ
            ನಡೆದರೇ ದೇವರೂ ವೈಭವ ಜೋರೂ ತಡೆಯೂರು ಯಾರೂ ಆಭರ್ಟ ನೋಡು
            ಊರಿಗೇ ಇವನೂ ಚಿನ್ನದ ಕಲಶ ಕೃಷ್ಣನ ಕಣ್ಣನಾ ಹೋಲುವ ಮನುಷಾ
            ಸೇನೆಯಾ ನಿಲ್ಲಿಸೋ ಧೈರ್ಯದಾ ರಭಸ ಲಾಲಿಗೇ ಸೋಲುವ ಮಗುವ ಮನಸಾ
            ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ.. ನಂದಿ
            ಢಮ ಢಮ ಢಮರುಗ ಮೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ... ನಂದಿ

ಗಂಡು : ಎಂಟೆದೆ ಭಂಟ ಇವನೆನೇ ತೋಳಿಗೂ ತೋಳು ಕೊಡುತಾನೇ ಇವನಂದೆರೆ ಶಿವನಿಗೂ ಇಷ್ಟಾನೇ
           ಕಲ್ಲನು ಕರಗಿಸೋ ಭೂಪಾನೇ ಶಾಂತಿಯಾ ಮಂತ್ರವ ಹೇಳ್ತಾನೇ ಊರಿಗೇ ನೆರಳಾಗಿ ಇರುತ್ತಾನೇ
           ತೊಡೆತಟ್ಟೋರ್ಯಗೆಲ್ಲಾ ಜಗಜಟ್ಟಿ ಮಲ್ಲ ಸಾಮ್ರಾಟ ಇವನೂ ಸಾಟಿ ಯಾರಿಲ್ಲಾ
           ಶತಕೋಟಿಗೊಬ್ಬ ಹೆಮ್ಮೆಯ ಅರಸ ಇವನೂ ನಮಗೂ ಮಣ್ಣಿಗೂ ಹರುಷಾ
           ಊರಿಗೇ ಇವನು ಚಿನ್ನದಾ ಕಲಶ ಕೃಷ್ಣನ ಕಾಣಣ್ಣ ಹೋಲುವಾ ಮನುಷ
           ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ.. ನಂದಿ

ಗಂಡು : ಚಿನ್ನಕ್ಕೂ ನಾಚಿಕೆ ತರುತ್ತಾನೇ ವಜ್ರದ ವರ್ಚಸ್ಸ ಇವನೆನೇ  ನಂಬಿಕೆಗೇ ಇನ್ನೊಂದು ಹೆಸರೇನೇ
           ಬೆವರಲಿ ಬದುಕನು ಕಟ್ಟತ್ತಾನೇ ಹಸಿವಿಗೆ ತುತ್ತುನೂ ಕೋಡುತ್ತಾನೆ ಪ್ರೀತಿಯ ಪರ್ವತ ಇವನೆನೇ
           ಚಾಲುಕ್ಯರ ಛಲವೂ ಹೊಯ್ಸಳರ ಬಲವು ಕದಂಬರ ಒಲವು ಆ ಗಂಗರ ಗುಣವೂ
           ಭುವಿಗೇ ಇವನು ಮುತ್ತಿನ ಕಣಜ ದೇವರೂ ಕೂಡಾ ಮೆಚ್ಚುವಾ  ಸಹಜ
           ಊರಿಗೇ ಇವನೂ ಚಿನ್ನದ ಕಲಶ ಕೃಷ್ಣನ ಕಣ್ಣನಾ ಹೋಲುವ ಮನುಷಾ
           ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ.. ನಂದಿ
           ಢಮ ಢಮ ಢಮರುಗ ಮೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ...
------------------------------------------------------------------------------------------------------------------------

ಯಜಮಾನ (೨೦೧೯) - ಒಂಡು ಮುಂಜನೇ ಹಂಗೇ ಸುಮ್ಮನೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್ 

ಹೆಣ್ಣು : ಆಆಆ.. ಓಓಓ .. ಆಆಆ....
ಗಂಡು : ಒಂದು ಮುಂಜಾನೇ ಹಂಗೇ ಸುಮ್ಮನೆ ನಾವು ಹೋಗುವ ಬಾರೇ
            ದಾರಿಯಿದ್ದಷ್ಟು ದೂರ ಹೋಗುವಾ ಬೇಡ ಅನ್ನೋರು ಯಾರೇ
           ನನ್ನ ತಾರೆ ನಿನ್ನಾ ಮೇಲೇ ಗೋಲಿ ಆಡಿತಿದ್ದಾ ವಯಸ್ಸಲ್ಲೇ ಪ್ರೀತಿ
           ಶುರುವಾಗೋಯ್ತು ನೀ ಕಾಣೋ...  ಎಲ್ಲಾ ಕನಸಾ ಮಾಡುವೇನು ನಾನು ನನಸ
           ದಾಸಾ ನಿಂಗೇ ಖಾಸಾ
           ಒಂದು ಮುಂಜಾನೇ ಹಂಗೇ ಸುಮ್ಮನೆ ನಾವು ಹೋಗುವ ಬಾರೇ
           ದಾರಿಯಿದ್ದಷ್ಟು ದೂರ ಹೋಗುವಾ ಬೇಡ ಅನ್ನೋರು ಯಾರೇ

ಗಂಡು : ಯಾರಿಲ್ಲದ ಊರಲ್ಲಿ ಒಂದು ನದಿ ದಂಡೇಲಿ ನಾವೊಂದು ಪುಟ್ಟ ಮನೆ ಮಾಡಿ
ಹೆಣ್ಣು : ಬೆಳದಿಂಗಳ ರಾತ್ರೀಲಿ ನಕ್ಷತ್ರದಾ ಹೋದಕೇಯಲಿ ನಾನೀರುವೇ ನಿನ್ನಾ ಮಡಿಲಲ್ಲಿ
ಗಂಡು : ನಿನಗೇ ನಾನು ನನಗೇ ನೀನೂ
ಹೆಣ್ಣು : ನನ್ನಾ ಜಗದಾ ದೊರೆಯು ನೀನು
ಗಂಡು : ರಾಣೀ... ಬಾರೇ  ನಿನೀರದೇ ಒಂದು ನಿಮಿಷಾ ಇರಲಾರ ನಿನ್ನಾ ಅರಾಸಾ
            ದಾಸಾ ನಿಂಗೇ ಖಾಸಾ
           ಒಂದು ಮುಂಜಾನೇ ಹಂಗೇ ಸುಮ್ಮನೆ ನಾವು ಹೋಗುವ ಬಾರೇ
           ದಾರಿಯಿದ್ದಷ್ಟು ದೂರ ಹೋಗುವಾ ಬೇಡ ಅನ್ನೋರು ಯಾರೇ

ಹೆಣ್ಣು : ಸಿಹಿಮುತ್ತಿನ ಕಂದಾಯ ಪ್ರತಿನಿತ್ಯವೂ ಸಂದಾಯ ಮಾಡೋನು ಮರಿಬೇಡ ಇಂದೂ
ಗಂಡು : ಒಂದೇ ಕಡೆ ಒತ್ತಾಯ ನಿಂಗೇ ಹಣೆ ಬಿಂದಿಯಾ ದಿನ ನಿತ್ಯಯಿಡು ಕೆಲಸ ನಂದೂ
           ನನ್ನದೇ ಕಣ್ಣು ತಗಲು ಭಯವೇ
ಹೆಣ್ಣು : ಕಣ್ಣು ಮುಚ್ಚು ಅಲ್ಲು ಸಿಗುವೇ
ಗಂಡು : ರಾಣೀ... ಬಾರೇ ... ಕಾವೇರಿ ಕಾಯೋ ಕೆಲಸ ಮಾಡುವನು ಎಲ್ಲ್ಲಾ ದಿವಸಾ
           ದಾಸಾ ನಿಂಗೇ ಖಾಸಾ
----------------------------------------------------------------------------------------------------------

ಯಜಮಾನ (೨೦೧೯) - ಒಂಡು ಮುಂಜನೇ ಹಂಗೇ ಸುಮ್ಮನೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ ಗಾಯನ : ವಿಜಯಪ್ರಕಾಶ 

ಕೋರಸ್ :  ಅಲೆಲೆಲೇ... ಅಲೆಲೆಲೇ...ಓ ಅಲೆಲೆಲೇ...ಓ ವೆಲ್ಕಮ್ ಸುಲ್ತಾನ್ ಪೆಟ್  
                 ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
                 ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರುಪೈಗ್ ಓಂದ  ಹತ್ರುಪೈಗ್ ಓಂದ
ಗಂಡು : ಬಾಳೊಂದು ಹರಳೆಣ್ಣೆ ಪೇಟೆ ಇಲ್ಲ ಒಬ್ಬೊಬ್ಬ ಒಂದೊಂದ ತೀಠೆ ...
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು : ದಮ್ಮಿದ್ದವನೂ ಆಡ್ತಾನೇ ಬೇಟೆ ಇಲ್ಲದಿದ್ದವನೂ ಮಾವಿನಾಕಾಯಿ ವಾಟೇ              
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು : ಎಲ್ಲಾರೂ ವ್ಯಾಪಾರ್ ಇಡ್ರಿರೊಕ್ಕಾ ಕಾಸಿದ್ದರೇ ಕೀರ್ತಿನೂ ಕೇಜಿ ಲೆಕ್ಕಾ
            ಹಳೆ ತಕ್ಕಡಿ ಮುಳ್ಳು ಜಿಂದಗೀ ಆಗೊಯ್ತು ಮರ್ಯಾದೆ ಸಸ್ತಾ ಮಾಲು
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು : ಶೇಕೂ ಮಾಡಿ ಹೇಳೂ ಕೈಯೀ ಕಾಲೂ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು : ಬಾಳೊಂದು ಹರಳೆಣ್ಣೆ ಪೇಟೆ ಇಲ್ಲ ಒಬ್ಬೊಬ್ಬ ಒಂದೊಂದ ತೀಠೆ ...
            ದಮ್ಮಿದ್ದವನೂ ಆಡ್ತಾನೇ ಬೇಟೆ ಇಲ್ಲದಿದ್ದವನೂ ಮಾವಿನಾಕಾಯಿ ವಾಟೇ              

ಗಂಡು : ಹಾಳಾಗೋ ಐಡಿಯಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಉದ್ದಾರದ ಐಡಿಯಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಯಾರಿಗುಂಟೂ ಯಾರಿಗಿಲ್ಲಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಎಲ್ಲೂ ಸಿಗೋದಿಲ್ಲ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಲಾಸ್ಟೂ ಬೆಂಚಲ್ಲಿ ಕುಂತವನೂ  ದೊಡ್ಡ ಕಂಪನಿಗೇ ಯಜಮಾನ
            ಫಸ್ಟ್ ಬೆಂಚಿನ ಸ್ಟುಡೆಂಟೂ ಸೇಮೂ ಕಂಪನಿಲೀ ಜವಾನ
            ಲೈಫೂ ಗೊತ್ತಾಗಿ ದಡ್ರೆಲ್ಲಾ ಸ್ಕೂಲು ಬಿಟ್ರು
            ಪಾಪಾ ಬುದ್ದಿವಂತರೂ ಪೇಪರ್ ಬರೇದೂ ಕೆಟ್ರು
            ಹಳೇ ಕ್ಲಾಸೂ ರೂಮೂ ಜಿಂದಗೀ.. ಅಗೊಯ್ತು ತಿಳುವಳಿಕೆ ಸ್ವಸ್ತಾ ಮಾಲು
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು : ವಿದ್ಯೇ ಬುದ್ದಿ ಎರಡೂ ಬಂಪರ್ ಸೇಲೂ..  


ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  

ಗಂಡು : ತುತ್ತು ಅನ್ನಾ ಬೇಕಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ತೊಟ್ಟು ನೀರು ಬೇಕಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಬಿಟ್ಟಿ ಬೆವರು  ಬೇಕಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಸುಟ್ಟ ಉಸರೂ ಬೇಕಾ
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ  
ಗಂಡು : ಹಸಿವು ಅಗುತ್ತೇ ಬಡವನಿಗೇ ಹೊಟ್ಟೇ ತುಂಬದೋನು ಶ್ರೀಮಂತ
            ಮೇಲು ಕೀಳೆಂಬ ಆಟಕ್ಕೆ ಅಂಪೈರ್ ಆಗಿಬಿಟ್ನಾ ಭಗವಂತ
            ಗುರು ಯಾವುನ ಕಂಡ ಹಿಡಿದಾ ದುಡ್ಡು ಕಾಸು
            ಹೋಸ ನೋಟನ್ನೂ ಕೇಳಿತಿದೆ ತೊಟ್ಲು ಕೂಸು
           ಬರಿ ಬಿಸಿನೆಸ್ ಆಯ್ತು ಜಿಂದಗೀ ಆಗೊಯ್ತು ಮನುಷ್ಯತ್ವ ಸಸ್ತಾ  ಮಾಲು
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
ಗಂಡು :  ಶ್ರೀ ಸಾಮನ್ಯನ ಹೃದಯ ಕಚ್ಛಾ ಮಾಲು
ಕೋರಸ್ : ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ ಹತ್ರಪಯಿಗ್ ಓಂದ  ಹತ್ರುಪೈಗ್ ಓಂದ
----------------------------------------------------------------------------------------------------------------------

No comments:

Post a Comment