1385. ನಾವು ಯಾರಿಗೇನೂ ಕಡಿಮೆ (೧೯೮೩)




ನಾವು ಯಾರಿಗೇನೂ ಕಡಿಮೆ ಚಲನಚಿತ್ರದ ಹಾಡುಗಳು
  1. ಸಂತೋಷ ಮನಸಿನಲಿ ತುಂಬಿದೇ 
  2. ನಗುವಿನ ಅಲೆಯಲಿ ತೇಲಿ ಬಾ 
  3. ನಾ ಹಾಡುವೇ ತಣಿಸಲೂ 
  4. ನಾನೂ ಯಾರಿಗೇನೂ ಕಡಿಮೆ
ನಾವು ಯಾರಿಗೇನೂ ಕಡಿಮೆ (೧೯೮೩) - ಸಂತೋಷ ಮನಸಿನಲಿ ತುಂಬಿದೇ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್. ಎನ್. ಜಯಗೋಪಾಲ್, ಎಂ.ಎನ್. ವ್ಯಾಸರಾಯ, ಗಾಯನ: ಎಸ್‌. ಪಿ.ಬಿ, ಎಸ್. ಜಾನಕೀ, ಬೆಂಗಳೂರು ಲತಾ

ಹೆಣ್ಣು : ಸಂತೋಷ... 
ಗಂಡು : ಮನಸಿನಲಿ ತುಂಬಿದೆ.. ಸಂಗೀತ 
ಹೆಣ್ಣು : ಒಲವಿನಲಿ ಹಾಡಿದೇ .. 
ಹೆಣ್ಣು : ಸಂತೋಷ ಮನಸಿನಲಿ ತುಂಬಿದೆ 
ಗಂಡು : ಸಂಗೀತ ಒಲವಿನಲಿ ಹಾಡಿದೇ .. 
ಹೆಣ್ಣು : ಸಂಗಾತಿಯ ಸವಿ ಪ್ರೇಮದ 
          ಸಂಗಾತಿಯ ಸವಿ ಪ್ರೇಮದ ಸಿಹಿ ಮಾತಿನ ಒಗಟಲ್ಲಿಯೇ 
          ನೂರಾಸೇ ಗರಿಕೆದರಿ ಹಾರಾಡಿದೇ .. 
ಗಂಡು : ಸಂತೋಷ ಮನಸಿನಲಿ ತುಂಬಿದೆ 
ಹೆಣ್ಣು : ಸಂಗೀತ ಒಲವಿನಲಿ ಹಾಡಿದೇ .. 

ಹೆಣ್ಣು : ಹೃದಯದ ಬಾಗಿಲೂ ತಟ್ಟುತ್ತ ನಿಂತವನೇ 
          ಕಣ್ಣಲೀ ಸೊಗಸಿನ ಕನಸನೂ ತಂದವನೇ .. 
ಗಂಡು : ಕತೆಯಲಿ ವೀಣೆಯ ಮೀಟುತ ನಿಂತವಳೇ 
            ಹಗಲಲಿ ಚಂದ್ರನ ಕಾಂತಿಯ ತಂದವಳೇ 
ಹೆಣ್ಣು : ಲಲಲಾ ಲಲಾಲಾಲಲ್ಲಲ್ಲಲಾಲಲ (ಲಲಲಲಾಲಾಲಲ್ಲಲ್ಲಲಾಲಲ )
           ಪ್ರೀತಿಯ ಕಾವ್ಯಕೇ ಹೊಸ ಹೊಸ ಅನುಭವ ಮುನ್ನುಡಿ ಬರೆದವನೇ 
ಗಂಡು : ಅರಿಯದ ಭಾವಕೇ ರಸಮಯ ಸ್ನೇಹದ ಕನ್ನಡಿ ಹಿಡಿದವಳೇ 
ಹೆಣ್ಣು : ಸಂತೋಷ ಮನಸಿನಲಿ ತುಂಬಿದೆ 
ಗಂಡು : ಸಂಗೀತ ಒಲವಿನಲಿ ಹಾಡಿದೇ .. 

ಗಂಡು : ಮೇಘದ ಸೊಬಗನೂ ಉರುಳಲಿ ಪಡೆದವಳೇ 
            ಶಿಲ್ಪಿಗೆ ಕಲ್ಪನೆ ಚೆಲುವಲೀ ತಂದವಳೇ 
ಹೆಣ್ಣು : ಬಡತನ ಸಿರಿತನ ಭೇಧವ ಮುರಿದವನೇ 
          ಗೆಳೆತನ ಬೆಳೆಸುತ ಉಸಿರಲಿ ಬೆರೆತವನೇ 
ಗಂಡು : ಲಲಲಾ ಲಲಾಲಾಲಲ್ಲಲ್ಲಲಾಲಲ (ಲಲಲಲಾಲಾಲಲ್ಲಲ್ಲಲಾಲಲ )
            ಕವಿತೇ ನಾನೇ ಭೂವಿನೇ ನಾನೇ ಎಂದೂ ನಿನ್ನವನೇ 
ಹೆಣ್ಣು : ವಚನವ ನೀಡಿದ ಬಾಳನು ಬೆಳಗಿದೆ ಎಂದಿಗೂ ನಿನ್ನವಳೇ 
ಗಂಡು : ಸಂತೋಷ            ಹೆಣ್ಣು : ಸಂಗೀತ 
ಗಂಡು : ಸಂತೋಷ            ಹೆಣ್ಣು : ಸಂಗೀತ 
ಗಂಡು : ಸಂತೋಷ            ಹೆಣ್ಣು : ಸಂಗೀತ 
--------------------------------------------------------------------------------------------------------------

ನಾವು ಯಾರಿಗೇನೂ ಕಡಿಮೆ (೧೯೮೩) - ನಗುವಿನ ಅಲೆಯಲಿ ತೇಲಿ ಬಾ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಎಂ.ಎನ್. ವ್ಯಾಸರಾಯ, ಗಾಯನ: ಎಸ್‌. ಪಿ.ಬಿ, ಎಸ್. ಜಾನಕೀ, 

ಹೆಣ್ಣು : ಹೂಂ ..ಹೂಂ .ಹೂಂ .ಹೂಂ .ಹೂಂ .
ಗಂಡು : ನಗುವಿನ ಅಲೆಯಲಿ ತೇಲಿ ಬಾ ಹರುಷದ ಬಾನಲಿ ಹಾರಿ ಬಾ 
            ನಗುವಿನ ಅಲೆಯಲಿ ತೇಲಿ ಬಾ (ಆ.. ಆಹಾಹಾ)  
            ಹರುಷದ ಬಾನಲಿ ಹಾರಿ ಬಾ (ಆ.. ಆಹಾಹಾ) 
            ನನ್ನೆದೆಯ ಕೂಡಿದನು ಸೇರೂ ಬಾ (ಆಅಅಅಅ )
            ಮರೆಯದ ರಾಗವ ನೀ ಹಾಡು ಬಾ (ಆಅಅಅಅ )
            ಬಾ (ಆಅಅಅ ) ಬಾ (ಆಅಅಆ) ಬಾ  (ಸರಿಗಮಪ ಪಮಗರಿಸನಿಸ )

 ಗಂಡು : ಮೂಡಿದ ಮಲ್ಲಿಗೆ ಹೂವೂ ಹೀರಿದು ಹಾಕುವೇ ಬೇಕೇ 
             ಕೊಡುವೇ ಒಂದನೂ ಈಗ ಕೇಳಲೂ ನಾಚಿಕೆ ಏಕೇ .. 
             ಕೆಂಪು ತುಟಿಯನ್ನೂ ನೀ ಕಚ್ಚಲೇಕೆ ಕೆನ್ನೇ ಕೆಂಪಾಗಿ ನೀ ನಿಲ್ಲಲೇಕೆ 
             ಸೆರಗ ಅಂಚನ್ನೂ ನೀ ತಿರುಚಲೇಕೆ ಹೀಗೆ ನೆಲವನ್ನೂ ನೀ ನೋಡಲೇಕೆ 
             ಒಳಗೊಂದು ಹೊರಗೊಂದು ಬೇರೆಂದೂ ನನ್ನ ಮನ ತೆರೆತೆರೆ ತೆರೆ ನೋಡು ಬಾ 
            ನಗುವಿನ ಅಲೆಯಲಿ ತೇಲಿ ಬಾ (ಆ.. ಆಹಾಹಾ)  
            ಹರುಷದ ಬಾನಲಿ ಹಾರಿ ಬಾ (ಆ.. ಆಹಾಹಾ) 
            ನನ್ನೆದೆಯ ಕೂಡಿದನು ಸೇರೂ ಬಾ (ಆಅಅಅಅ )
            ಮರೆಯದ ರಾಗವ ನೀ ಹಾಡು ಬಾ (ಆಅಅಅಅ )
            ಬಾ (ಆಅಅಅ ) ಬಾ ಬಾ  (ಆಅಅಆ) ಬಾ  (ಸರಿಗಮಪ ಪಮಗರಿಸನಿಸ )

ಗಂಡು : ಬ್ರಹ್ಮ ಹಾಕಿದ ಗಂಟೂ ಎಂದೂ ಬಿಡಿಸದ  ನಂಟೂ 
            ನಮ್ಮನೂ ಅಗಲಿಸುವಂತ ಶಕ್ತಿ ಯಾರಿಗೇ ಉಂಟೂ 
            ಇನ್ನೂ ನಿನ್ನಲ್ಲಿ ಸಂದೇಹ ಏನೂ ನಿನ್ನ ಜೊತೆ ಬಿಟ್ಟು ಇರಲಾರೇ ನಾನೂ 
            ಎಂದೂ ಬಾಳಲ್ಲಿ ನಗಬೇಕೂ ನೀನೂ ನಮ್ಮ ಒಲವೆಂದೂ ಸಿಹಿಯಾದ ಜೇನೂ .. 
            ಮಡಿಕೇರಿ ಮುಂಜಾನೇ ಮಂಜಂತೇ .. ಸುಡು ಸುಡು ದೇಹ ಬಿಸಿ ವಿರಹವ ನೀಗೂ ಬಾ 
            ನಗುವಿನ ಅಲೆಯಲಿ ತೇಲಿ ಬಾ (ಆ.. ಆಹಾಹಾ)  
            ಹರುಷದ ಬಾನಲಿ ಹಾರಿ ಬಾ (ಆ.. ಆಹಾಹಾ) 
            ನನ್ನೆದೆಯ ಕೂಡಿದನು ಸೇರೂ ಬಾ (ಆಅಅಅಅ )
            ಮರೆಯದ ರಾಗವ ನೀ ಹಾಡು ಬಾ (ಆಅಅಅಅ )
            ಬಾ (ಆಅಅಅ ) ಬಾ  (ಆಅಅಆ) ಬಾ  (ಅಹ್ಹಹ್ಹಹ್ಹಹ್ಹ ) ಹೂಂ ಹೂಂ 
-------------------------------------------------------------------------------------------------------------

ನಾವು ಯಾರಿಗೇನೂ ಕಡಿಮೆ (೧೯೮೩) - ನಾ ಹಾಡುವೇ ತಣಿಸಲೂ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಎಂ.ಎನ್. ವ್ಯಾಸರಾಯ, ಗಾಯನ: ಬೆಂಗಳೂರು ಲತಾ 

ನಾ ಹಾಡುವೇ ತಣಿಸಲೂ .. ನಾ ಕುಣಿಯುವೇ ಒಲಿಸಲೂ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ ಅಹ್ಹಹ್ಹಹ್ಹಹ್ಹ.. 
ನಾ ಹಾಡುವೇ ತಣಿಸಲೂ .. ನಾ ಕುಣಿಯುವೇ ಒಲಿಸಲೂ 

ಈ ಕಣ್ಣಿನ ಕುಡಿ ನೋಟಕೇ ... ಈ ಬಳುಕುವ ಮೈ ಮಾಟಕೇ .. 
ಈ ಕಣ್ಣಿನ ಕುಡಿ ನೋಟಕೆ ಈ ಬಳುಕುವ ಮೈ ಮಾಟಕೆ 
ಮನಸ್ಸೂ ಕರಗದೇ.. ಒಲವೂ ಮೂಡದೇ.. ಅರಳಿದ ಹೂವಿದೇ .. ದುಂಬಿಯೂ ಹಾರದೇ .. 
ಮಧುವಿನ ಸಿಹಿಯನೂ ಹಿರದೇ ಬಿಡುವುದೇ 
ಮೈಯ್ಯಲ್ಲಿ ಕಸಿವಿಸಿ ಏತಕೋ ಈ ಪರೀ .. (ಹ್ಹಾ.. ಹೂರೋ ಹೋಯ್ )
ನಾ ಹಾಡುವೇ ತಣಿಸಲೂ .. ನಾ ಕುಣಿಯುವೇ ಒಲಿಸಲೂ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ 
ಸೆಳೆಯುವೇ ಕಣ್ಣಲೀ..  ಮರೆಸುವೇ ಅಹ್ಹಹ್ಹಹ್ಹಹ್ಹ.. 

ನೀ ಬಯಸುವೇ ಇಲ್ಲಿ ಏತಕೇ .. ನೀ ಬಯಸಿಹ ನನ್ನ ನಾಚಿಕೇ ... 
ನೀ ಬಯಸುವೇ ಇಲ್ಲಿ ಏತಕೇ .. ನೀ ಬಯಸಿಹ ನನ್ನ ನಾಚಿಕೇ ... 
ತನವೂ ಸೋತಿದೆ ಎದೆಯಲಿ ಕಾಡಿದೆ ಬಿಸಿಲಿನ ತಾಪಕೇ ಹೂವೂ ಬಾಡದೇ .. 
ನೀ ಬಂದರೇ ಸನಿಹಕೇ ನೋವೂ ಕರಗದೇ 
ಮೈಯ್ಯಲ್ಲಿ ಕಸಿವಿಸಿ ಏತಕೋ ಈ ಪರೀ .. (ಹ್ಹಾ.. ಹೋಯ್  ಹೂಯ್ ಹ್ಹೂ )
ನಾ ಹಾಡುವೇ ತಣಿಸಲೂ .. ನಾ ಕುಣಿಯುವೇ ಒಲಿಸಲೂ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ 
ಸೆಳೆಯುವೇ ಕಣ್ಣಲೀ..  ಮರೆಸುವೇ ನಗೆಯಲೀ ಅಹ್ಹಹ್ಹಹ್ಹಹ್ಹ.. 
------------------------------------------------------------------------------------------------------------------

ನಾವು ಯಾರಿಗೇನೂ ಕಡಿಮೆ (೧೯೮೩) - ನಾನೂ ಯಾರಿಗೇನೂ ಕಡಿಮೆ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಎನ್. ಜಯಗೋಪಾಲ, ಗಾಯನ: ಎಸ್‌. ಪಿ.ಬಿ, 

ಲೇ..ಯೇ .. ಲೇ.. ಲೇ.. ನಾನೂ ಯಾರಿಗೇನೂ ಕಡಿಮೆ ನೀನೂ ಏನೆಂದೂ ತಿಳಿದೇ 
ಹಣವನೂ ಗಳಿಸಿ ಬಂದಿರುವೇ ಒಲವನು ಅರಸಿ ನಿಂದಿರುವೇ .. 
ನಾನೂ ಯಾರಿಗೇನೂ ಕಡಿಮೆ 

ಕೂರಿಸಿ ನಿನ್ನ ಕಾರಲ್ಲಿ..  ಕುಡಿಸುವೇ ಕಾಫಿ ಬಾರಲ್ಲಿ.. ಆಹ್ಹಾ..ಹೇಹೇ..  ಆ.. 
ಕೂರಿಸಿ ನಿನ್ನ ಕಾರಲ್ಲಿ ಕುಡಿಸುವೇ ಕಾಫಿ ಬಾರಲ್ಲಿ 
ತೊಡಿಸುವೇ ನೆಕ್ಲೇಸ್ ಕೊರಳಲ್ಲಿ ಬಿದ್ದರೇ ಕುರಿಗಳೂ ಹಳ್ಳದಲ್ಲಿ.. 
ನಾನೂ ಯಾರಿಗೇನೂ ಕಡಿಮೆ ನೀನೂ ಏನೆಂದೂ ತಿಳಿದೇ 
ಹಣವನೂ ಗಳಿಸಿ ಬಂದಿರುವೇ ಒಲವನು ಅರಸಿ ನಿಂದಿರುವೇ .. 
ನಾನೂ ಯಾರಿಗೇನೂ ಕಡಿಮೆ 

ಮದುವೆಗೇ ವಯಸ್ಸಿನ ಮಿತಿಯಿಲ್ಲ... ಬ್ರೋಕರ್ ವೃತ್ತಿಗೇ ಕೊನೆಯಿಲ್ಲಾ.. 
ಮದುವೆಗೇ ವಯಸ್ಸಿನ ಮಿತಿಯಿಲ್ಲ... ಬ್ರೋಕರ್ ವೃತ್ತಿಗೇ ಕೊನೆಯಿಲ್ಲಾ.. 
ಜಾತಕ ಒಂದೂ ಬೇಕಿಲ್ಲಾ ತಲೆಯೂ ಇದ್ದರೇ ಸಾಕಲ್ಲ... 
ನಾನೂ ಯಾರಿಗೇನೂ ಕಡಿಮೆ ನೀನೂ ಏನೆಂದೂ ತಿಳಿದೇ 
ಹಣವನೂ ಗಳಿಸಿ ಬಂದಿರುವೇ ಒಲವನು ಅರಸಿ ನಿಂದಿರುವೇ .. 
ನಾನೂ ಯಾರಿಗೇನೂ ಕಡಿಮೆ 

ಉಡಿಸುವೇ ಪಿತಾಂಬರದ ಅಂಚೂ ಖರ್ಚಾದರೇ ತಲೆಯೊಳಗಿನ ಸಂಚೂ 
ಉಡಿಸುವೇ ಪಿತಾಂಬರದ ಅಂಚೂ ಖರ್ಚಾದರೇ ತಲೆಯೊಳಗಿನ ಸಂಚೂ 
ಈ ಮನ ಒಲಿದರೇ ಸಾಕೂ ಮನೆ ಕಟ್ಟುವುದೆಷ್ಟರ ಮಾತೂ .. ಅಹ್ಹಹ್ಹ.. 
ನಾನೂ ಯಾರಿಗೇನೂ ಕಡಿಮೆ ನೀನೂ ಏನೆಂದೂ ತಿಳಿದೇ 
ಹಣವನೂ ಗಳಿಸಿ ಬಂದಿರುವೇ ಒಲವನು ಅರಸಿ ನಿಂದಿರುವೇ .. 
ಲಾಲಾಲರಲಲ್ಲಲ್ಲಲಲಾ ಏ .. ಲೇ ಲಾಲಾಲರಲಲ್ಲಲ್ಲಲ 
ಏ ಹ್ಹಾ.. ಲಾಲಾಲರಲಲ್ಲಲ್ಲಲಲಾ ಲಲಲಲಾ ಲಾಲಾಲರಲಲ್ಲಲ್ಲಲಲಾ 
----------------------------------------------------------------------------------------------------------------

No comments:

Post a Comment