ನಾಗರ ಮಹಿಮೆ ಚಲನ ಚಿತ್ರದ ಹಾಡುಗಳು
- ಮಣ್ಣಿನಾ ಮಕ್ಕಳಾ ಸುಖಶಾಂತಿಗೆ ಸಂತೋಷ ನೀಡೋದು ಸಂಕ್ರಾತಿಯೇ
- ಭಾವರಾಗ ಮಿಲನ ಸ್ವರ ಕವನ ನಾದಬ್ರಹ್ಮ ಚರಣ
- ದಯವೇ ಇರದ ಈ ಲೋಕವೂ ಸಾಧುಗಳು ನರಕ
- ಕಾಣದಾದೆ ಜ್ಯೋತಿಯ ತೋರೋ ನೀನೇ ದಾರಿಯ
- ಶಂಕರ ತಲೆಯ ಮೇಲೆ ಗಂಗೆಯನಿಟ್ಟ
ಸಂಗೀತ : ಇಳಿಯರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಇಳಿಯರಾಜ, ಎಸ್.ಜಾನಕೀ
ಗಂಡು : ಮಣ್ಣಿನ ಮಕ್ಕಳಾ ಸುಖಶಾಂತಿಗೆ ಸಂತೋಷ ನೀಡೋದು ಸಂಕ್ರಾತಿಯೇ
ಈ ದಿನವೇ ಸುದಿನ ನಮ್ಮ ಬಾಳಿಗೆ ಕೈ ಮುಗಿದು ಬೇಡೋಣ ಸಮೃದ್ದಿಗೇ
ತಕಥೈಯ್ಯ ತಕಥೈಯ್ಯ ಕುಣಿಯೋಣ ಸುತ್ತ ನೋಡಿ
ಸುಗ್ಗಿ ಬಣ ಒಟ್ಟಾಗಿ ಹಿಗ್ಗಿನಿಂದ ಹಾಡುವ ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಹೆಣ್ಣು : ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ ಭೂಮಿಯೇ ತಾಯಿದೇವರೆನ್ನುವಾ
ತಕಥೈಯ್ಯ ತಕಥೈಯ್ಯ ಕುಣಿಯೋಣ ಸುತ್ತ ನೋಡಿ
ಸುಗ್ಗಿ ಬಣ ಒಟ್ಟಾಗಿ ಹಿಗ್ಗಿನಿಂದ ಹಾಡುವ ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಗಂಡು : ಭೂಮಿಯ ಜೀವಿಗಳ ಭಾರವ ಹೊತ್ತಿರಲು ಭೂಮಿಯ ನಂಬಿದರೆ ಬಾಳುವೆ ನುಂಗಿರಲೂ
ಹೆಣ್ಣು : ಭೂದೇವಿ ನಕ್ಕಾಗ ನಮಗೆ ಎಲ್ಲೆಲ್ಲೂ ವೈಭೋಗವೇ
ಗಂಡು : ಅಂಥಾ ದೇವಿಯೇ ನಮ್ಮ ತಾಯಿಯು
ಹೆಣ್ಣು : ತಾಯಿ ಸೇವೆಯೇ ನಮ್ಮ ಭಾಗ್ಯವೂ
ಗಂಡು : ಆ ತಾಯಿ ನೀಡೋ ಅನ್ನ ನಮ್ಮ ಪಾಲಿಗೆ ಚಿನ್ನ
ಇಬ್ಬರು : ಆಹ್ ಎಲ್ಲರಿಗೂ ಈ ಪುಣ್ಯ ಎಲ್ಲುಂಟು ಹೇಳ್ರೋ ಅಣ್ಣ
ತಕಥೈಯ್ಯ ತಕಥೈಯ್ಯ ಕುಣಿಯೋಣ ಸುತ್ತ ನೋಡಿ
ಸುಗ್ಗಿ ಬಣ ಒಟ್ಟಾಗಿ ಹಿಗ್ಗಿನಿಂದ ಹಾಡುವ ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಗಂಡು : ಮಣ್ಣಿನ ರಾಜ್ಯದಲೇ ಎಲ್ಲರ ರಾಗಿಗಳು ಮಣ್ಣಿನ ಆಸೆಯಲಿ ಇಲ್ಲದ ರಾಜ್ಯಗಳು
ಹೆಣ್ಣು : ಹುಟ್ಟೋರ ಬಾಳೆಲ್ಲ ಕೊನೆಗಾಣೊದು ಮಣ್ಣಲ್ಲಿಯೇ
ಗಂಡು : ಆಆಹ್ ಮಣ್ಣೇ ಇಲ್ಲದೇ ಲೋಕ ಇಲ್ಲವೋ
ಹೆಣ್ಣು : ಲೋಕ ಇಲ್ಲದೇ ಯಾರು ಇಲ್ಲವೋ
ಗಂಡು : ಹಿಂಗಿದ್ರೂ ಮಣ್ಣೇ ಮಾನ
ಹೆಣ್ಣು : ಈ ಹಳ್ಳಿಯಿಂದ್ಲೇ ಅನ್ನ
ಗಂಡು : ಆ ದಿಲ್ಲಿಗೂ ಆಧಾರ ಕೇಳೋ ಅಣ್ಣ
ತಕಥೈಯ್ಯ ತಕಥೈಯ್ಯ ಕುಣಿಯೋಣ ಸುತ್ತ ನೋಡಿ
ಸುಗ್ಗಿ ಬಣ ಒಟ್ಟಾಗಿ ಹಿಗ್ಗಿನಿಂದ ಹಾಡುವ ಎಂದೆಂದೂ ಕುಗ್ಗದ್ದಾಂಗೆ ಆಡುವಾ
-------------------------------------------------------------------------------------------------------------------------
ನಾಗರ ಮಹಿಮೆ (೧೯೮೪) - ಭಾವರಾಗ ಮಿಲನ ಸ್ವರ ಕವನ ನಾದಬ್ರಹ್ಮ ಚರಣ
ಸಂಗೀತ : ಇಳಿಯರಾಜ, ಸಾಹಿತ್ಯ : ಆರ್.ಏನ್. ಜಯಗೋಪಾಲ ಗಾಯನ : ಎಸ್.ಪಿ.ಬಿ
ಭಾವರಾಗ ಮಿಲನ ಸ್ವರಕವನ ನಾದ ಬ್ರಹ್ಮ ಚರಣ
ಭಾವರಾಗ ಮಿಲನ ಸ್ವರಕವನ ನಾದ ಬ್ರಹ್ಮ ಚರಣ
ಆರಾಧನಾ ಭಾವರಾಗ ಮಿಲನ ಸ್ವರ ಸ್ವರ ಕವನ ನಾದ ಬ್ರಹ್ಮಚರಣ
ಆರಾಧನಾ ಭಾವರಾಗ ಮಿಲನ ಸ್ವರ ಸ್ವರ ಕವನ ನಾದ ಬ್ರಹ್ಮಚರಣ
ಆ ಕಾವ್ಯ ಪ್ರಣವಾ ಮೃದು ತಾನಾ .. ಆಆಆ... ಆಆಆ..
ಯೋಗ ಸುಧೆ ಶೃತಿಯ ರಸಮಾನ ಜೀವ ನಿವೇದನ ಈ ಗಾನಾ
ಯೋಗ ಸುಧೆ ಶೃತಿಯ ರಸಮಾನ ಜೀವ ನಿವೇದನ ಈ ಗಾನಾ
ಮಾಣಿಕ್ಯ ವೀಣಾ ಪಾಣಿಯ ಕರದ ಕಂಕಣ ತಂದ
ಅಂದಚಂದ ನಿನಗಾಗಿ ಶೃಂಗಾರ ಶಿವೆಯೂ ನಾಟ್ಯವ ಮಾಡೇ
ಗೆಜ್ಜೆಯ ನಾದ ಕೇಳಿ ಶಿವ ಕುಣಿದ ದೈವವೇ ನಾದವು ನಾದವೇ ವೇದವೂ
ಸತ್ಯದ ನಿರ್ಮಲ ಸುಂದರ ರೂಪವು ಗಾನವೇ ಪೂಜೆಯು ಶಂಕರನೇ ಒಲಿಸುವ ನಿಜ ಪರಿಯ
ತಾರಿಣಿ ನಿಸದ ಮಾದಸನಿ ಪದಗಮಗ ಗರಿಸಸ ಮಗರಿ ರಿರಿದ ಸಾರಿನಿಸ ದನಿ ಮಗ ನಿದಮ
ಸನಿದ ಗರಿಸ ಸಾರಿನಿಸ ದನಿ ಮದ ಗಮನಿ ನಿಸದನಿ ಮದ ಗಮ ದಮ ತರಿಕಿಟತೋಮ್
ಶಿಲ್ಪಿ ಉಳಿಯಲ್ಲಿ ಕಲ್ಲ ಶೃತಿಯಲ್ಲಿ ಚಿತ್ರ ಸೆಳೆವಂಥ ನಾದ
ನೀರ ಅಲೆಯಲ್ಲಿ ದುಂಬಿ ಕರೆಯಲ್ಲೇ ಮೈಯ್ಯ ಮರೆವಂಥ ಮೊದ
ಹೆಣ್ಣ ಮೈಮಾಟ ಸೊಂಟ ತೂಗಾಟ ಭಂಗಿ ಕಣ್ತುಂಬಿದಾಗ
ಕಲ್ಲ ಶಿಲ್ಪಕ್ಕೆ ಜೀವ ಬಂದಾಗ ಆಸೇ ಮೇಳೈಸಿದಾಗ ಜೀವನವೇ ಸ್ವರರಾಗವೂ ... ಆಆಆ... ಆಆಆ...
ತಧಿಕ ತರಿಗಿಡತೋಮ್
--------------------------------------------------------------------------------------------------------------------------
ನಾಗರ ಮಹಿಮೆ (೧೯೮೪) - ದಯವೇ ಇರದ ಈ ಲೋಕವೂ ಸಾಧುಗಳು ನರಕ
ಸಂಗೀತ : ಇಳಿಯರಾಜ, ಸಾಹಿತ್ಯ : ಹುಣಸೂರ ಕೃಷ್ಣಮೂರ್ತಿ ಗಾಯನ :
ದಯವೇ ಇರದ ಈ ಲೋಕವೂ ಸಾಧುಗಳ ನರಕ
ದಯವೇ ಇರದ ಈ ಲೋಕವೂ ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ ಪುಣ್ಯವೇ ಮಾಡರು ಶಿವ
ಲೋಕ ಬೇಧ ಹಾಕಿ ಜಾಲ ಏನೀ ಲೀಲೆ ಯಾಕೀ ಶೂಲ
ದೀನ ದಾನಿಯ ಬೇಧಗಳ ನ್ಯಾಯ ಹಾಳಾಗಿದೆ
ತಾಳ್ಮೆ ಎಲ್ಲ ಧೂಳಾಗಿದೆ ಶಾಂತಿ ಭ್ರಾಂತಿ ನಿಂತೋಗಿದೆ
ದಯವೇ ಇರದ ಈ ಲೋಕವೂ ಸಾಧುಗಳ ನರಕ
ಯಾರು ಏನು ಏಕೆ ಎಂಬ ಮಾತು ನೀತಿ ಪ್ರೇಮ ಇರದೇ
ಒಂದೇ ಬಾಳು ಸಾಧಿಸದೇ ನ್ಯಾಯ ಹಾಳಾಗಿದೆ
ಎಲ್ಲಾ ಒಂದೇ ಎಂಬ ಶಾಂತಿ ಭ್ರಾಂತಿ ನಿಂತೂ ಧೂಳಾಗಿದೆ ಶಿವನೇ
ದಯವೇ ಇರದ ಈ ಲೋಕವೂ ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ ಪುಣ್ಯವೇ ಮಾಡರು ಶಿವ
ದಯವೇ ಇರದ ಈ ಲೋಕವೂ ಸಾಧುಗಳ ನರಕ
-------------------------------------------------------------------------------------------------------------------------ದಯವೇ ಇರದ ಈ ಲೋಕವೂ ಸಾಧುಗಳ ನರಕ
ಸಂಗೀತ : ಇಳಿಯರಾಜ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ
ಕಾಣದಾದೆ ಜ್ಯೋತಿಯ ಟೊರೊ ನೀನೇ ದಾರಿಯ
ನನ್ನ ದೈವ ಕೋಪ ತೋರಿ ದೂರವಾಗಿ ಹೋದೆಯಾ
ನನ್ನ ಮೇಲೆ ಪ್ರೀತಿಯನ್ನು ನೀನು ತೋರೆಯಾ
ಆದಿಶೇಷ ದಾರಿ ತೋರೋ ತಂದೆ ಬಾರೋ ದಾರಿ ತೋರೋ
ನೂರಾರು ಸೇವೆ ನಾ ಮಾಡಿ ಬಂದೆ ಎಂದಿನ ನೋವ ನಾನೀಗ ತೊರೆದೆ
ನಿನ್ನಾಣೆ ನಾನು ನಿರ್ದೋಷಿ ತಾನೇ ಈ ಭಾಧೆ ಇನ್ನು ಬಂತೇಕೋ ಕಾಣೆ
ನಾಗನೇ ನಿನ್ನ ನ್ಯಾಯವಿದೇನೂ ಭಕ್ತಳ ದೂರು ಕೇಳದೇನೂ
ಧಾಟಿಯ ಮೀರಿ ಹೋದೆ ಕ್ರೂರಿ ನಾನು ನಾರಿ ಕಾಣೆ ದಾರಿ ನಾಗ
ಆಶಾಭಂಗ ನಾಗರಾಜ ದೈವ ತೇಜ
ಏನೇನೋ ಕನಸ ನಾ ಕಂಡೇನಲ್ಲ ಮುಂದಿನ ಹಾದಿ ನೀ ತೊರೆಯಲ್ಲಿ
ನನ್ನಾಸೆ ಹೂವು ಇಂದೇಕೋ ದೂರ ಬಾಳಲ್ಲಿ ಬಂತು ಗಾಡಾಂಧಕಾರ
ನನ್ನಲ್ಲಿ ನಿನ್ನ ಈ ಮುನಿಸೇಕೆ ದೈವವೇ ನೀನೇ ಸಾಧಿಸಬೇಕೇ
ಎಂಥ ಪಾಪ ಏನೀ ಶಾಪ ಶಾಪ ಎಲ್ಲ ನಾಶ ನಾಗ
ದಾರಿ ತೋರೋ ನಾಗರಾಜ ದೈವ ತೇಜ
ದಾರಿ ತೋರೋ ನಾಗರಾಜ ದೈವ ತೇಜ
ತೂಗಿಸಿ ತೊಟ್ಟಿಲ ತುಂಬಿಸಿ ನನ್ನೆದೆ ತಾಪವ ತಂದೆಯೋ ಈಗ
ನನ್ನಲ್ಲಿ ನಿನ್ನಲ್ಲಿ ಇಂತಹ ಪಂಥವು ಇಂದಿಗೂ ಏಕೋ ನಾಗ
ಅಂದಚಂದದ ನಂದನ ವನವು ತಾಳದ ಸಿಡಿಲನ ವೇಗ
ದೀನರ ಕಾಯುವ ದೈವದ ರಕ್ಷಣೆ ಬಾಳಲಿ ಬಾರದೆ ಬೇಗ
ನೌಕೆಯು ಮುಳುಗಿದೆ ನೀರಿನಲಿ ಬಾಳುವೆ ತುಂಬಿದೆ ಶೋಕದಲಿ
ವರವೋ ಒಲವೋ ನೋವೋ ನಲಿವೋ ಬಿಡೆ ನಾ ಚರಣ ಕೊಡು ನೀ ವಚನ
ದಹಿಸೆ ತಾಪ ದಹಿಸೆ ಶಾಪ ಬೆಳಕ ಹರಿದು ಬಾರೋ ತಂದೆ ಬಾರೋ ಆದಿಶೇಷ ದಾರಿ ತೋರೋ
ಬಾರೋ ತಂದೆ ಬಾರೋ ಆದಿಶೇಷ ದಾರಿ ತೋರೋ
-------------------------------------------------------------------------------------------------------------------------
ನಾಗರ ಮಹಿಮೆ (೧೯೮೪) - ಶಂಕರ ತಲೆಯ ಮೇಲೆ ಗಂಗೆಯನಿಟ್ಟ
ಸಂಗೀತ : ಇಳಿಯರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ
??????????...
-------------------------------------------------------------------------------------------------------------------------
ಸಂಗೀತ : ಇಳಿಯರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ
??????????...
-------------------------------------------------------------------------------------------------------------------------
No comments:
Post a Comment