1250. ನಮ್ಮ ಭೂಮಿ(೧೯೮೯)


ನಮ್ಮ ಭೂಮಿ ಚಲನಚಿತ್ರದ ಹಾಡುಗಳು 
  1. ಪುಸ್ತಕವ ಓದು ಮೆಲ್ಲನೇ 
  2. ಓ ಜೂಲಿ ಜೂಲಿ 
  3. ರಾತ್ರಿಯೂ ರಾತ್ರಿಯೂ 
ನಮ್ಮ ಭೂಮಿ(೧೯೮೯) - ಪುಸ್ತಕವ ಓದು ಮೆಲ್ಲನೇ
ಸಂಗೀತ : ಇಳೆಯರಾಜ ಸಾಹಿತ್ಯ : ಕುಣಿಗಲ್ ನಾಗಭೂಷಣ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ

ಹೆಣ್ಣು : ಪುಸ್ತಕವ ಓದು ಮೆಲ್ಲನೇ ಪ್ರತಿ ಪಂಕ್ತಿಯಲ್ಲೂ ಮೈಯ್ಯ ಜುಮ್ಮೆನೇ
          ನೀ  ಪುಸ್ತಕವ ಓದು ಮೆಲ್ಲನೇ ಪ್ರತಿ ಪಂಕ್ತಿಯಲ್ಲೂ ಮೈಯ್ಯ ಜುಮ್ಮೆನೇ
          ಪುಟ ಪುಟ ಜೇನಿನಂತೇ .. ಸೊಗಸಿನ ಸ್ವರ್ಗವಂತೇ ..
          ಇದು ಯಾವ ಕವಿ ಕಾಣದಂತ ರಸಿಕತೆ ಕಾವ್ಯವಂತೇ ..
          ಪುಸ್ತಕವ ಓದು ಮೆಲ್ಲನೇ ... ಆಆಆಅ...

ಹೆಣ್ಣು : ಯೌವ್ವನದ ಹಾಸಿಗೆಯ ಮೇಲೆ ಚೆಲುವೆಂಬ ಹೂವಿನ ಮಾಲೇ ಕಾದಿದೇ ... ರಸಿಕನೇ.. ಬೇಗನೇ ಬಾರಾ
          ಸಿಹಿಯಾದ ಕೆನ್ನೆಗಳೆರಡೂ ಸವಿಯಾದ ಕೆಂದುಟಿಯಂತೆ ಮಧುವಿನ ಔತಣ ತಂದಿದೇ ಬಾರಾ
          ಹೊಚ್ಚ ಹೊಸದೂ ಇಂಥ ವೇಳೆ ಬಿಟ್ಟರಿಗ ಮತ್ತೇ ಸಿಗದು
          ಹೂವ ಒಡಲೂ ಘಟ್ಟಿಯಾಗಿ ಮುಟ್ಟಬೇಡ  ನೋವೂ ತಾಳದೂ
          ತೋಳನ್ನೂ ನೀನೇ ನೀಡು ಮುತ್ತಂದ ನೀನೇ ನೀಡು ಮೈಯ್ಯಿ ನೋಡು ಬೆಂಕಿ ಹಾಗೇ ..
          ತಾಳಲಾರೇ ಇಂಥ ಬೇಗೆ ನನ್ನ ನಿನ್ನ ಆಸೆಯನ್ನ ಪೂರ್ತಿ ಮಾಡೂ ಈಗ ಚಿನ್ನ
          ಪುಸ್ತಕವ ಓದು ಮೆಲ್ಲನೇ

ಗಂಡು : ಬಳೆ ನಾದ ಕೇಳಿದರೇನೂ ಕುಡಿನೋಟ ಬೀಸಿದರೇನೂ ಬಲೆಯಲಿ ಬೀಳದು ನನ್ನೆದೇ ನೀನೂ
            ಕರೆಯೋಲೇ ನೀಡಿದರೇನೂ ರಸಮಂಚ ಹಾಸಿದರೇನೂ ಹೆಣ್ಣಿನ ಸಂಗವ ಬೇಡನೂ ನಾನೂ
            ಹೆಣ್ಣ ಸೊಬಗೂ ಕಣ್ಣ ಮುಂದೇ ಆಡಿದಾಗ ನೋಡಿ ನಲಿವೇ
            ಕಂಡ ಬಳಿಕ ಸಾಕೂ ಸಾಕೂ ಎಂದೂ ನಾನು ದೂರ ಇರುವೇ
            ಸುಖವಾದ ಸಂಗೀತ  ಕೇಳಲೂ ಸಂತೋಷ
           ಒಂಟಿ ಮರ ಎಂದೂ ಜೋಡಿ ಆಸೆ ನೀಗೂ ನೀನೂ ಮೋಡಿ ಮಾಡಬೇಡ ಚಿನ್ನ ಬಿಟ್ಟಬಿಡೂ ಆಸೆಯನ್ನ
           ಪುಸ್ತಕದ ರುಚೀ ಏನಿದೇ ಅದು ಮುಟ್ಟಲಿಲ್ಲ ಇಂದೂ ನನ್ನದೇ
           ಈ ಪುಸ್ತಕದ ರುಚೀ ಏನಿದೇ ಅದು ಮುಟ್ಟಲಿಲ್ಲ ಇಂದೂ ನನ್ನದೇ
           ಕಂಗಳಲ್ಲಿ ಮೋಹವಿಲ್ಲ ನನ್ನಲೇನೋ ದಾಹವಿಲ್ಲ ಹೆಣ್ಣ ಸಂಗ ಮಾಡಲಿಲ್ಲ ಪ್ರೀತಿಯಿಂದ ಬೆಂದೋದಿಲ್ಲ
           ಪುಸ್ತಕದ ರುಚೀ ಏನಿದೇ.... ಆಆಆ
------------------------------------------------------------------------------------------------------------------

ನಮ್ಮ ಭೂಮಿ(೧೯೮೯) - ಓ ಜೂಲಿ ಜೂಲಿ
ಸಂಗೀತ : ಇಳೆಯರಾಜ ಸಾಹಿತ್ಯ : ಕುಣಿಗಲ್ ನಾಗಭೂಷಣ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ

ಹೆಣ್ಣು : ಓ.. ಜೂಲಿ ಜೂಲಿ ಹೇ.. ಜಾಲೀ ಜಾಲೀ
          ಸುಖದೇ ಕುಣಿವಾ ನಗುತಾ ನಲಿವ ಮನವ ಬೆರೆವ ಜೊತೆಗೇ ಮೆರೆವ..  ಬಾ.. ಬಾ... ಬಾ..
          ಬನದ ಪ್ರಗತಿ ಕೋಗಿಲೆಯೂ ಹಾಡಿ ಅದನೂ ಸೊಗಸಿನವಿಲಾಡಿ ಈ ಜಿಂಕೆ ಚಿಮ್ಮಿ ಕುಣಿದಾಡಿ
          ಇದುವೇ ಸ್ವರ್ಗ ನೋಡೇ.. ಓ.. ಜೂಲಿ ಜೂಲಿ ಹೇ.. ಜಾಲೀ ಜಾಲೀ

ಕೋರಸ್ : ಹಾರುವಾ ಹಾಡುವಾ ಹೋಗುವಾ ಉತ್ಸವ ಕಾಡಲೀ ...
               ಕಾಡನೂ ಮೇಡನೂ ನಾಡನೂ ಕಾಣುವಾ ಕಣ್ಣಲೀ .. 
               ಬಟ್ಟೆಯೋ ಬೊಂಬೆಯೋ ಬಗೇ ಬಗೇ ಬಂದಿದೇ ಎಲ್ಲವೂ ಇಲ್ಲಿಗೇ
               ಟೂರೀಜಂಗಾಗಿ ತಪ್ಪಿಸುವಾ ಹಕ್ಕಿಯ ಹಾಗೆಯೇ ಹಾರುವಾ  
               ಹಾರುವಾ ಹಾಡುವಾ ಹೋಗುವಾ ಉತ್ಸವ ಸುತ್ತುವಾ ಕಾಡಲೀ ...
ಗಂಡು : ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ... ಹಾರುವಾ ಹಾಡುವಾ ಹೋಗುವಾ ಉತ್ಸವ  ಆಹಾಹಾ.....
            ಹಾರುವಾ ಹಾಡುವಾ ಹೋಗುವಾ ಉತ್ಸವ  ಆಹಾಹಾ.....ಲಲಲಲ್ಲಲಾ .. ಲಲಲಲ್ಲಲಾ
            ಲಲಲಲ್ಲಲಾ ಲಲಲಲ್ಲಲಾ ಲಲಲಲ್ಲಲಾ ಆದರೇ .. ನೀವೂ ನನ್ನ ಗುಲಾಮರೂ

ಹೆಣ್ಣು :  ನನ್ನಾಸೇ ಗೆಳತಿಯರೇ  ನಿಮ್ಮ ಎಲ್ಲೆಂದೂ ನಾ ಹುಡುಕುವೇ
           ದಾರಿಯ ತೋರಿಸು ನೀ ದೇವಾ ನಿನ್ನನ್ನೂ ನಾ ಬೇಡುವೇ
           ಕಣ್ಣೂ ನೀರಾರೇ ಮನ ಹೋರಾಡೆ ಒಂಟಿ ಹೂವಾಗೀ ಇಲ್ಲಿ ನಾ ಬಾಳ್ವೆ ದೇವಾ ಕಾಪಾಡು
           ನನ್ನಾಸೇ ಗೆಳತಿಯರೇ  ನಿಮ್ಮ ಎಲ್ಲೆಂದೂ ನಾ ಹುಡುಕುವೇ
              
ಹೆಣ್ಣು : ಬಾನಲಿ ದೇವತೇ ಹಾಗೆಯೇ ಹಾರಿದೇ ಇಂದೂ ನಾ
ಕೋರಸ್ : ಲಲ್ಲಲಾ .. ಆಆಆ ... ಆಆಆ
ಹೆಣ್ಣು : ಮತ್ತೇ ನಾವ್ ಎಲ್ಲರೂ ಸೇರಲೂ ಬೇಡಿದೆ ದೇವನಾ
ಕೋರಸ್ : ಲಲ್ಲಲಾ .. ಆಆಆ ... ಆಆಆ
ಹೆಣ್ಣು : ಮಾಲಿನಿ ಮೈಥಿಲೀ ಓಡಿ ಬಾ.. ಕಾಮಿನಿ ಭಾಮಿನೀ ಇಲ್ಲೀ ಬಾ..
          ಮನೆಗೇ ನಾವೆಲ್ಲರೂ ಹೋಗುವಾ.. ಕಾರ್ಯವ ಸಾಧಿಸಿ ಗೆಲ್ಲುವಾ
          ಬಾನಲಿ ದೇವತೇ ಹಾಗೆಯೇ ಹಾರಿದೇ ಇಂದೂ ನಾ

ಗಂಡು : ಅಹ್ಹಹ್ಹಹ್ಹಾ..   ಅಹ್ಹಹ್ಹಹ್ಹಾ..     
ಹೆಣ್ಣು : ಮಂತ್ರಕೇ ತಂತ್ರಕೇ ಮಾಯಕೆ ಜಾಲಕೆ ಅಂಜನಾ..
ಕೋರಸ್ : ಲಲ್ಲಲಾ .. ಆಆಆ ... ಆಆಆ
ಹೆಣ್ಣು : ನನ್ನಯ ಅದ್ಭುತ ಶಕ್ತಿಯ ತೋರುವೇ ಈಗ ನಾ
ಕೋರಸ್ : ಲಲ್ಲಲಾ .. ಆಆಆ ... ಆಆಆ
ಹೆಣ್ಣು : ಗೆಲ್ಲುವೇ ಈಗಲೇ ನಿನ್ನ ನಾ...  
          ಗೆಲ್ಲುವೇ ಈಗಲೇ ನಿನ್ನ ನಾ...  ನಾಯಿಯ ರೂಪವ ತಾಳೂ ನೀ ...       
           ನಾಯಿಯ ರೂಪವ ತಾಳೂ ನೀ ...       
ಕೋರಸ್ : ಅಹ್ಹಹಹಹಹಹ್ಹಹ್ಹಹಹ ... ಅಹ್ಹಹಹಹಹಹ್ಹಹ್ಹಹಹ ... ಅಹ್ಹಹಹಹಹಹ್ಹಹ್ಹಹಹ ...
                ಲಲ್ಲಲಾ .. ಲಲ್ಲಲಾ .. ಲಲ್ಲಲಾ .. ಲಲ್ಲಲಾ .. ಲಲ್ಲಲಾ ..
------------------------------------------------------------------------------------------------------------------

ನಮ್ಮ ಭೂಮಿ(೧೯೮೯) - ರಾತ್ರಿಯೂ ರಾತ್ರಿಯೂ
ಸಂಗೀತ : ಇಳೆಯರಾಜ ಸಾಹಿತ್ಯ : ಕುಣಿಗಲ್ ನಾಗಭೂಷಣ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ

ಗಂಡು : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು
ಹೆಣ್ಣು : ಹಗಲಲಿ ಹಗಲಲಿ ಅದು ನಿದಿರೆಯ ಗೈಯ್ಯುವುದೂ ..
ಗಂಡು : ಹಾಲೂ ತಿಂಗಳೋ ಹೂವ ಕಂಗಳೋ
ಹೆಣ್ಣು : ಸೀರೆ ಧರಿಸುತ ಭುವಿಗೇ ಬಂದಿತೋ
ಗಂಡು : ನನ್ನ ನಿನ್ನ ಮನದೇ ಆಸೇ ತಂದಿತೋ
ಹೆಣ್ಣು : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು

ಕೋರಸ್ : ಲಾಲಲಲ್ಲಲಾಲ ಲಾಲಲಲ್ಲಲಾಲ ಲಾಲಲಲ್ಲಲಾಲ ಲಾಲಲಲ್ಲಲಾಲ
ಹೆಣ್ಣು : ಬಾನ ಲೋಕ ರಾಜ ಮಾರ್ಗದೀ ದೇವಲೋಕ ಐರಾವತ ಬರಲೂ ಉತ್ಸವ
ಗಂಡು : ನಾನು ನೀನೂ ಆನೆ ಮೇಲಡಿ ಬಂದರೇನೇ ಬಾಣ ಬೀರುಸು ಸೊಬಗೂ ವೈಭವ..
ಹೆಣ್ಣು : ನೂರು ರಂಗಿನ ಬಣ್ಣ ಜಾಲವೂ .. ಸ್ವಪ್ನರಾಗದ ತಾಳಮೇಳವೂ
ಗಂಡು : ರಾಜರಾಜನ ರಾಣಿ ಅಲ್ಲವೇ .. ಚೈತ್ರ ಋತುವಿನ ದೇವಿ ಅಲ್ಲವೇ
ಹೆಣ್ಣು : ಅಂದ ಚೆಂದ ತುಂಬಿದ ರೂಪ ಶಿಲ್ಪ ನೋಡಿದ ಆಡುತಾ ಕೂಡುವಾ ಬಾ..
ಗಂಡು : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು
ಹೆಣ್ಣು : ಹಗಲಲಿ ಹಗಲಲಿ ಅದು ನಿದಿರೆಯ ಗೈಯ್ಯುವುದೂ ..
ಗಂಡು : ಹಾಲೂ ತಿಂಗಳೋ ಹೂವ ಕಂಗಳೋ
ಹೆಣ್ಣು : ಸೀರೆ ಧರಿಸುತ ಭುವಿಗೇ ಬಂದಿತೋ
ಗಂಡು : ನನ್ನ ನಿನ್ನ ಮನದೇ ಆಸೇ ತಂದಿತೋ
ಹೆಣ್ಣು : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು

ಕೋರಸ್ : ಲಾ... ಲಾ...ಲಾ...ಲಲಲ್ಲಲಾಲಲಾ...ಲಾ... ಲಾಲಲಲ್ಲಲಾಲ ಲಾ...ಲಾ...ಲಾಲಲ.. ಲಾ...ಲಾ...
ಗಂಡು : ಮೋಡ ನೋಡು ಮೆತ್ತೆ ಹಾಸಿದೇ ಮಳೆಯ ಬಿಲ್ಲೂ ಏಳು ಬಣ್ಣ ಹೂನಗೆ ಚೆಲ್ಲಿದೇ ..
ಹೆಣ್ಣು :  ತಂಪು ತಂಪು ಗಾಳಿ ಬೀಸಿದೆ ತಾಪದಿಂದ ಸುಡುವ ಮೈಯ್ಯಿಗೇ ಸೌಖ್ಯ ತಂದಿದೇ ..
ಗಂಡು : ಮಿಂಚೂ ಬಳ್ಳಿಯೂ ನಾಟ್ಯ ಆಡಿದೇ ಮೌನ ಕಾವ್ಯವೇ ನೋಟದಲ್ಲಿದೇ
ಹೆಣ್ಣು : ಬೆಳ್ಳಿ ತಾರೆಯೂ ಸ್ನೇಹ ತಂದಿದೇ .. ದೀಪ ಜ್ಯೋತಿಯ ಜಾಲ ಬೆಳಗಿದೆ
ಗಂಡು : ಕಾಮದೇವ ಕೂಗಿದ ಹೂವ ಬಾಣ ಕಾಡಿದೇ ಯೌವ್ವನ ಕಾದಿದೇ ಬಾ..
ಹೆಣ್ಣು  : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು
ಗಂಡು : ಹಗಲಲಿ ಹಗಲಲಿ ಅದು ನಿದಿರೆಯ ಗೈಯ್ಯುವುದೂ ..
ಹೆಣ್ಣು : ಹಾಲೂ ತಿಂಗಳೋ ಹೂವ ಕಂಗಳೋ
ಗಂಡು : ಸೀರೆ ಧರಿಸುತ ಭುವಿಗೇ ಬಂದಿತೋ
ಹೆಣ್ಣು : ನನ್ನ ನಿನ್ನ ಮನದೇ ಆಸೇ ತಂದಿತೋ
ಗಂಡು : ರಾತ್ರಿಯೂ.. ರಾತ್ರಿಯೂ ಅದೂ ಮಲಗದು ಮಲಗದು
------------------------------------------------------------------------------------------------------------------

No comments:

Post a Comment