1357. ನಮ್ಮೂರ ಹುಡುಗ (೧೯೯೮)


ನಮ್ಮೂರ ಹುಡುಗ ಚಲನಚಿತ್ರದ ಹಾಡುಗಳು
  1. ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
  2. ನಮ್ಮೂರ ಹುಡ್ಗಾ ನಾನು
  3. ಖುಲ್ಲಂ ಖುಲ್ಲಾ ಲವ್ ಮಾಡು
  4. ಅಂಬಾಲೇಲೇ.. ತಾಂಬುಲೇಲೇ
  5. ತೂಗುಮಣಿ ತೂಗು
  6. ಏನ್ ಚಂದ ಏನ್ ಚಂದ 
  7. ಕೋಲನ್ನ ಕೋಲೇ..
ನಮ್ಮೂರ ಹುಡುಗ (೧೯೯೮) - ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ರಾಜೇಶ್ ಕೃಷ್ಣನ್

ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ
ಝರಿ ಝರಿ ನೀರ ಝರಿ ಇಳೆಯ ಸಿಂಗಾ..ರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ

ಯುಗವು ಯುಗವು ಎಷ್ಟೊಂದು ಸಂದರು ನೀ
ಮತ್ತೇ ಮತ್ತೇ ಹುಟ್ಟಿ ಬರೋ ಜೀವಕಾಸರೆ
ಜನುಮ ಜನುಮ ತೆತ್ತೋರ ಅಮ್ಮನು ನೀ
ಪಾಪಿಗಳ ಕ್ಷೇಮಿಸುವೇ ನೀ ಸಿರಿ ವಸುಂಧರೆ
ಹಲವು ಜೀವ ರಾಶಿ ರಾಶಿ ಬರಲಿ ದಿನವು
ಮಮತೆ ನೀಡಿ ಮುದ್ದು ಮಾಡುವೇ
ಕಡಲೆ ಇರಲಿ ಕಾಡೇ ಇರಲಿ ಮಡಿಲ
ಒಳಗೇ ಎಲ್ಲೇ ಇರಲಿ ಅನ್ನವುಣಿಸುವೇ

ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ
ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ

ಹುಲಿಯು ಹಸುವು ಗಿಳಿ-ಮೈನಾ ಕೋಗಿಲೆಯೋ
ಮಲ್ಲೆ-ಜಾಜಿ ಸೇವಂತಿಗೆ ಚೆಲುವ ಮೀನ್ಗಳು
ಜಗದಲಿರುವ ಎಲ್ಲಾ ಈ ಜೀವಿಗಳು
ನನ್ನ ಪ್ರೀತಿ ಮುದ್ದು ಮುದ್ದು ಗೆಳೆಯ ಬಳಗವು
ಚಿಗುರು-ತಳಿರು ಕಲ್ಪವೃಕ್ಷ ಕಾಮಧೇನು
ನೀಡಿ ಸಲಹುತಿರುವೆ ನಮ್ಮನು
ಹಕ್ಕಿ ಪ್ರಾಣಿ ಹಸಿರು ಉಸಿರ ನಡುವೆ
ಜನಿಸಿ ಧನ್ಯ ನಾನೇ ಪುಣ್

ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ..
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ
ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೇ ನಮ್ಮುಸಿರು ಪ್ರಾಣ ನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೋ ಜೀವನದಿ
----------------------------------------------------------------------------

ನಮ್ಮೂರ ಹುಡುಗ (1998) - ನಮ್ಮೂರ ಹುಡ್ಗಾ ನಾನು
ಸಂಗೀತ: ವಿ.ಮನೋಹರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ: ರಾಜೇಶ್ ಕೃಷ್ಣನ್

----------------------------------------------------------------------------

ನಮ್ಮೂರ ಹುಡುಗ (1998) - ಖುಲ್ಲಂ ಖುಲ್ಲಾ ಲವ್ ಮಾಡು
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ 

----------------------------------------------------------------------------

ನಮ್ಮೂರ ಹುಡುಗ (1998) - ಅಂಬಾಲೇಲೇ.. ತಾಂಬುಲೇಲೇ
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ಬಿ.ಆರ್.ಛಾಯ, ಶಂಕರ ಶಾನಭಾಗ 

ಗಂಡು : ಆಆಆ... ಆಆಆ.. ಆಆಆ... ಆಆಆ.. 
ಹೆಣ್ಣು : ಹೇಹೇಹೇಹೇ ... ಹೇಹೇಹೇಹೇ ... 
ಗಂಡು : ಅಂಬೂಲಲೇ.. ತಾಂಬೂಲಲೇ.. ಅಂಬಾರದ ಬಾಗಿನಲೇ .. 
            ಉತ್ತರ ಉತ್ತರ ಒಗಟಿಗೇ ಉತ್ತರ.. ಹೇಳಲೇ ಒಂದೇ ಸಲ.. 
            ಬೆಚ್ಚಟ್ಟಿ ಬಿಚ್ಚಿಟ್ಟರೇ.. ತುಂಬಕೋ ನೀರಾಗೋ ಯಾರೇ ನೀ ಬಾಲಿಕೇಳಾ ....    
ಹೆಣ್ಣು : ಸಿಂಗಾರದ ಶೂರಮಣಿ ನನ್ನಾಸೆಯಾ ಪ್ರೇಮಮಣಿ   
           ಉತ್ತರ ಉತ್ತರ ಒಗಟಿಗೇ ಉತ್ತರ.. ಕೋಟಿಗೆ ಒಂದೇ ಸಲ.. 
           ನಾರೀ ಕೇಳನ್ನಾರೇ ಎಳನೀರ ಕೇಳಯ್ಯಾ ಓ ನನ್ನ ಹೃದಯ ಕಳ್ಳ.. 

ಕೋರಸ್ : ಓಲಲ್ಲಲ್ಲೇ ..  ಓಲಲ್ಲಲ್ಲೇ ..  ಓಲೇಲೇ ..  ಓಲೇಲೇ ..ಲೇಲೇ ..  
ಗಂಡು : ಸಿಂಗಾರದ ರಾಜಕುಮಾರೀ ಹೇಳೇ ನನ್ನಾ ಪ್ರಾಣ ಸಿರಿ 
            ಊರದ ಕಲ್ಲಾಗೇ ಮೈಯೆಲ್ಲಾ ಅರಳಿಸಿ ಇವಳೇಲ್ಲಾ ಕಾಯುವಳೂ  
            ಎಲ್ಲಾರೂ ಮಾಲಿ ಕಟ್ಟಿಸಿದ ಹಾರನ್ನ ಹಿಡಿಯುವಳ್ಯಾರವಳೂ .. 
ಹೆಣ್ಣು : ಮುತ್ತೂರಿನ ರಾಜಕುಮಾರ ಕೇಳೋ ನನ್ನ ಪ್ರೇಮ ಸ್ವರ 
          ಇರುಳೆಲ್ಲಾ ಕೊಳದಲ್ಲಿ ಚಂದ್ರನ ಕಾಯುವ ನೈದಿಲೇ ಹೂವಗಳೋ.. 
          ಮೈಯೆಲ್ಲಾ ಅರಳಿಸಿ ತಿಂಗಳ ಕನಸಿನ ಹಾಲನ್ನ ಹೀರುವಳೋ 

ಗಂಡು : ಮಯಪುರ ಮೇನಕೆ ಮಾತಾಡೋ ಶೀಲಾಬಾಲಿಕೆಯೇ .. 
            ಹಸಿರಂಗಿ ತೊಟ್ಟವ ತಾಂಬೂಲ ತುಟಿಯ ಜ್ಯೋತಿಷಿ ಯಾರವನೂ.... 
            ಮೈಯೆಲ್ಲಾ ಕೆಂಪಿನ ದುಂಡಾನೇ ಹೆಣ್ಣಿನ ಮೈಯ್ಯೆಲ್ಲಾ ಕಚ್ಚುವನೋ.. 
ಹೆಣ್ಣು : ತುಂಟಾಟದ ಶೂರ ಮಲ್ಲ ಉತ್ತರವನ್ನೂ ಕೇಳೂ ನಲ್ಲ.. 
          ಹಸಿರಂಗಿ ತೊಟ್ಟವ  ತಾಂಬೂಲ ಬಣ್ಣದ ಹದ್ದಿನ ಗಿಳಿಯವ.. 
          ದುಂಡುದುಂಡು ಮಾದೇವ ಮಾವಿನ ಹಣ್ಣನ್ನೂ ಕಚ್ಚುತ್ತ ತಿನ್ನುವವ.. 
 
ಗಂಡು : ಅಂಬೋ ರಂಬೋ ಭೋರ್ಗರೆವ ಭೂಮಿ ತಲೆ ಹಾರಿ ಬರುವಾ 
            ಸಾವಿನ ಸರಪಿಳ್ಳ ನೀಲಿಯ ಪೀಡೆಯ ಮಹಾರಾಜ ಯಾರವನೂ .. 
            ಅವನನ್ನೂ ಕೂಡೋಕೆ ಓಡೋಡಿ ಹೋಗುವ ಕಾಣಿರಿ ಯಾರವಳೂ.. 
ಹೆಣ್ಣು : ಭಲೇ ಭಲೇ ಸಾವಿರಲೇ ನೀಲ ಬಣ್ಣದ ಸೊರಗಿನಲೇ 
          ಈಜುತ್ತಾ ಬರುವತ್ತ ಹಾರುತ ಬಣ್ಣವ ಕಾಲಮ್ಮ ಹಾರದನೂ 
          ಅವನನ್ನೂ ಸೇರಲೂ ನದಿಯಾಗೇ ಓಡುವ ಕಾಮಿನಿ ನೀರವಳೂ .. 
ಕೋರಸ್ : ಓ ಓ ಓ ಓ ಓ ಓ ಓ ..  ಓ ಓ ಓ ಓ ಓ ಓ ಓ ..  ಓ ಓ ಓ ಓ ಓ ಓ ಓ ..  ಓ ಓ ಓ ಓ ಓ ಓ ಓ ..  
ಗಂಡು : ಪ್ರಾಣೇಶ್ವರೀ ಸೂಜಿಮುಖಿ ಪ್ರಾಣೇಶ್ವರ ಮುಳ್ಳು ಮುಖ 
            ಎಲ್ಲರ ನಲಿಯೋ ಹಾಗ್  ಕೋಗಿನ ಹೆಂಡಿರ ಗಂಡಿಬೀರಿ ಗಂಡನ್ಯಾರೋ 
            ಮಟಮಟ ಮಧ್ಯಾನ್ಹ ಮತ್ತೊಮ್ಮೆ ನಡುರಾತ್ರಿ ಮುದ್ದಾಡೋ ಜೋಡಿ ಯಾರೋ 
ಹೆಣ್ಣು : ದುಂಡು ದುಂಡು ಮನೆಯೊಳಗೇ ಹನ್ನೆರಡೂ ಜನ ಪುಂಡರಿಗೇ 
          ಮುದ್ದಾಡಿ ಬಂಧ್ಹೋಗೋ ಕೈಯ್ಯಾರ್ ತೊಳಕೊಳ್ಳೋ ಅಪ್ಪನಾ ಹಾಗೇ ಕಣೋ 
          ಊಟಕ್ಕೇ ಎರಡಹೊತ್ತು ಮುದ್ದಾಡೋ ಕಣ್ಣುಳ್ಳ ಸಹನೆಯ ಅಮ್ಮ ಕಣೋ 
ಕೋರಸ್ : ಹೋಯ್ ಹೋಯ್  ಹೋಯ್  ಹೋಯ್  
----------------------------------------------------------------------------

ನಮ್ಮೂರ ಹುಡುಗ (1998) - ತೂಗುಮಣಿ ತೂಗು
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ಮಂಜುಳಾ ಗುರುರಾಜ 

----------------------------------------------------------------------------

ನಮ್ಮೂರ ಹುಡುಗ (1998) - ಏನ್ ಚಂದ ಏನ್ ಚಂದ 
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ವಿಷ್ಣು 

----------------------------------------------------------------------------

ನಮ್ಮೂರ ಹುಡುಗ (1998) - ಕೋಲನ್ನ ಕೋಲೇ..
ಸಂಗೀತ: ಸಾಹಿತ್ಯ  ವಿ. ಮನೋಹರ್, ಗಾಯನ: ರಾಜೇಶ್ ಕೃಷ್ಣನ್

----------------------------------------------------------------------------

No comments:

Post a Comment