1365. ನಮ್ಮೂರ ರಾಜ (೧೯೮೮)

ನಮ್ಮೂರ  ರಾಜ ಚಲನಚಿತ್ರದ ಹಾಡುಗಳು 
  1. ಆಕಾಶ ಅಂಗೈಲೀ 
  2. ಚಂಡಿಯೇ ಚಾಮುಂಡಿಯೇ 
  3. ತಂಜಾವೂರೂ ಮೇಳ 
  4. ಅನುರಾಗವೇನೋ ಆನಂದವೇನೋ 
  5. ಮಾವ ಮಾವ ಮುದ್ದಿನ ಮಾವ 
  6. ಕಿಲಾಡಿ ಜೋಡಿ ಜೋಡಿ ಜೋಡಿ 
ನಮ್ಮೂರ  ರಾಜ (೧೯೮೮) - ಆಕಾಶ ಅಂಗೈಲೀ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ 

ಗಂಡು : ಆಕಾಶ ಅಂಗೈಲೀ ಬಂತು ನನ್ನಂಗೇ ತೂರಾಡೋ ಅಂತೂ 
            ಭೂಮಿಗೂ ಮತ್ತು ಬಂತೇನೂ ಮನಸು ಎಲ್ಲೋ ತೇಲಿಹೋಯ್ತು 
            ನಾನು ಯಾರೋ ಮರೆತೇ ಹೋಯ್ತು ಯಾರಿಲ್ಲ ಹೇಳೋಕೆ ಏಕೆ ಹೀಗಾಯ್ತು 
            ಹಾಡುವುದೇ ತಾಳ ಹಾಡುವುದೇ ರಾಗ ಆಡುವುದೇ ಆಟ ಗುಂಗು ಬಂದಾಗ 
ಹೆಣ್ಣು : ಈ ನನ್ನ ಹೃದಯ ಕರಿಗಿಹೊಯ್ತು  ಸೆರಗೆಲ್ಲೋ ದೂರ ಹಾರೋಯ್ತು 
           ಎಲ್ಲೋ ಹುಡುಕೋಣ ಬಾ ಹಾರೋದೆ ಗಾಳೀಲಿ ನನ್ನ ಹಿಡಿ ಬೇಗ ಬಾ ಬಾ 
ಗಂಡು : ಹಿಡಿದಾಗ ನೀ ಅಂಟಿಕೊಂಡೇ ಬಿಡಿಸೋಕೆ ನನಗಾಗದಂದೇ ಏನೋ ಈ ಮಂತ್ರವೂ 
            ಹೀಗೇನೆ ಒಂದಾಗಿ ಹೆಜ್ಜೆ ಹಾಕೋಣ ಬಾ ಬಾ ಬಾ 
ಹೆಣ್ಣು : ದಮ್ಮಯ್ಯ ಬೇಗ ದೂರ ಮಾಡಣ್ಣ      
ಗಂಡು : ಆಕಾಶ ಅಂಗೈಲೀ ಬಂತು ನನ್ನಂಗೇ ತೂರಾಡೋ ಅಂತೂ 
            ಭೂಮಿಗೂ ಮತ್ತು ಬಂತೇನೂ ಮನಸು ಎಲ್ಲೋ ತೇಲಿಹೋಯ್ತು 
            ನಾನು ಯಾರೋ ಮರೆತೇ ಹೋಯ್ತು ಯಾರಿಲ್ಲ ಹೇಳೋಕೆ ಏಕೆ ಹೀಗಾಯ್ತು 
            ಹಾಡುವುದೇ ತಾಳ ಹಾಡುವುದೇ ರಾಗ ಆಡುವುದೇ ಆಟ ಗುಂಗು ಬಂದಾಗ 

ಗಂಡು : ಈ ಸೊಂಟ ಬಳಕೋ ಹೊತ್ತಲ್ಲಿ ಏನೇನೋ ಆಸೆ ನನ್ನಲ್ಲಿ 
            ಯಾರು ಈ ಸುಂದರಿ ನೀ ಹೀಗೆ ನಕ್ಕಾಗ ಮುತ್ತು ಚೆಲ್ಲಿದೆ 
ಹೆಣ್ಣು : ಈ ರೂಪ ಎಲ್ಲೂ ಕಂಡಿಲ್ಲ ಮೈ ಕಟ್ಟು ಸಾಟಿ ಯಾರಿಲ್ಲ 
          ಯಾರು ಈ ಸುಂದರ ಈ ಜಾಣ ಈ ಪ್ರಾಣ ನಿನ್ನ ವಶವಾಯಿತು 
ಗಂಡು : ಈ ತೋಳು ನಿನ್ನಾ ಸೆರೆ ಮಾಡಿತು 
            ಆಕಾಶ ಅಂಗೈಲೀ ಬಂತು ನನ್ನಂಗೇ ತೂರಾಡೋ ಅಂತೂ 
            ಭೂಮಿಗೂ ಮತ್ತು ಬಂತೇನೂ ಮನಸು ಎಲ್ಲೋ ತೇಲಿಹೋಯ್ತು 
            ನಾನು ಯಾರೋ ಮರೆತೇ ಹೋಯ್ತು ಯಾರಿಲ್ಲ ಹೇಳೋಕೆ ಏಕೆ ಹೀಗಾಯ್ತು 
            ಹಾಡುವುದೇ ತಾಳ ಹಾಡುವುದೇ ರಾಗ ಆಡುವುದೇ ಆಟ ಗುಂಗು ಬಂದಾಗ 
--------------------------------------------------------------------------------------------------------- 

ನಮ್ಮೂರ  ರಾಜ (೧೯೮೮) - ಚಂಡಿಯೇ ಚಾಮುಂಡಿಯೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ  

ಗಂಡು : ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
            ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
            ನಿನ್ನಾಟ ಇನ್ನೂ ನಡೆಯೋದಿಲ್ಲ ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 

ಗಂಡು : ರೋಷ ಏಕಮ್ಮಾ ದ್ವೇಷ ಸಾಕಮ್ಮಾ 
            ಬಿಂಕ ಬೇಡಮ್ಮಾ ಈ ಕೊಂಕು ನಿಂಗಮ್ಮ ಹೀಗೇಕೆ ಹಾರಾಡುವೇ 
            ಹೆಣ್ಣು ತಗ್ಗಿ ನಡೆಯಬೇಕು ಪ್ರೀತಿ ನೀ ಪಡೆಯಬೇಕು 
            ಗಂಡು ನೀನಲ್ಲಾ ಈ ಮೀಸೆ ನಿನಗಿಲ್ಲ ಸ್ಟೈಲೂ ಬೇಕಿಲ್ಲಾ ಬರಿ ಶೋಕಿ ಸರಿಯಲ್ಲ 
            ಈ ವೇಷ ನಿನಗಲ್ಲವೇ ಕುಂಕುಮವಿಟ್ಟು ಬಳೆಯನು ತೊಟ್ಟು ಹೂವು ನೀ ಮುಡಿಯಬೇಕು 
            ಆಗ ಹೆಣ್ಣಾಗುವೇ.. ನೀ 
            ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
            ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
            ನಿನ್ನಾಟ ಇನ್ನೂ ನಡೆಯೋದಿಲ್ಲ ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 

ಗಂಡು : ಹೊನ್ನು ಬೆಳೆವ ಜನರ ನೀನೆಂದು ಹಳಿಯ ಬೇಡ 
            ಹಳ್ಳಿಯಿಂದ ಡಿಲ್ಲಿ ನೀ ಇದನು ಮರೆಯಬೇಡ ಅರಿತಾಗ ಆನಂದವೇ       
            ಹಣದ ಬೆಲೆಯನು ಗುಣದ ಬೆಲೆಯನು ತಿಳಿಯಲೇ ಬೇಕಮ್ಮ ನೀನು 
            ಮನೆಯೇ ಮೊದಲ ಶಾಲೆ ನೀ ಅಲ್ಲಿ ಏನು ಕಲಿತೆ 
            ವಿನಯದಿಂದ ವಿದ್ಯೆ ಎಂಬುವುದನ್ನು ಮರೆತೇ ಕೇಳೋರು ಯಾರಿಲ್ಲವೇ
            ನಿನ್ನ ಕೈಯನು ಹಿಡಿದ ಗಂಡನು ಒಂದಾಗಿ ಇರಲಾರನು ಕೊನೆಗೆ ತಿನ್ನತೀಯಾ ಮಣ್ಣೂ  
            ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
            ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
            ನಿನ್ನಾಟ ಇನ್ನೂ ನಡೆಯೋದಿಲ್ಲ ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
---------------------------------------------------------------------------------------------------------- 

ನಮ್ಮೂರ  ರಾಜ (೧೯೮೮) - ತಂಜಾವೂರೂ ಮೇಳ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಗಂಡು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
            ಶುಭಯೋಗ ಬಳಿ ಬಂದಿದೆ  ಎಲ್ಲೆಲ್ಲೂ ಸಂತೋಷ ತುಂಬಲಿ 
            ಮನೆಯಲ್ಲಿ ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 

ಹೆಣ್ಣು : ಕಣ್ಣಂದ ಹೆಣ್ಣಿಂದ ಮನದಲ್ಲಿ ಆನಂದ ನಡೆದಾಗ ನುಡಿದಾಗ ಮಲ್ಲಿಗೆ ಸೌಗಂಧ 
ಗಂಡು : ಸಿರಿದೇವಿ ಮಗಳಾಗಿ ಈ ಮನೆಗೆ ಬಂದಾಳೆ ಇದು ಎಂಥ ಅನುಬಂಧ 
            ಚೆಲುವಯ್ಯ ಬರ್ತಾನೇ ಸಂಭ್ರಮ ತರ್ತಾನೆ ಕಂಡಾಗ ನಿನ್ನಂದ ಕಣ್ ಕಣ್ ಬಿಡ್ತಾನೇ .. 
ಹೆಣ್ಣು : ನಿನ್ನ ಕೈಯ ಹಿಡಿದಂಥ ಆ ಗಂಡೇ ಧೀಮಂತ ಜಗದಲ್ಲಿ ಪುಣ್ಯವಂತನೇ 
ಗಂಡು : ದೇವರು ನಿನಗೆ ಅನುಗಾಲ ಸುಖವನ್ನು ನೀಡಲಿ ಮಗಳೇ.. 
            ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
            ಶುಭಯೋಗ ಬಳಿ ಬಂದಿದೆ  ಎಲ್ಲೆಲ್ಲೂ ಸಂತೋಷ ತುಂಬಲಿ 
            ಮನೆಯಲ್ಲಿ ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 

ಗಂಡು : ಬಾಗಿಲಿಗೆ ಮಾವಿನ ತೋರಣ ಕಟ್ಟೋಣ ಹೂವಿನ ಹಾರವ ಕಟ್ಟೋಣ 
            ಅಂಗಳದ ತುಂಬಾ ರಂಗಿನ ರಂಗೋಲಿ ಹಾಕೋಣ 
            ಬಗೆ ಬಗೆ ಅಡಿಗೆಯನು ಮಂದಿಗೆ ಬಡಿಸೋಣ ಬೀಗರ ಸಂತಸ ಪಡಿಸೋಣ    
            ಒಳ್ಳೆಯ ಲಗ್ನ ನೋಡಿ ಮದುವೇ ಮಾಡೋಣ 
ಹೆಣ್ಣು : ಪ್ರೀತಿವಾತ್ಸಲ್ಯ ಎಂದೂ ಮರೆಯೇ ನಾ ಎಲ್ಲೇ ಇರಲಿ ನಿಮ್ಮಯ ಆಸೆಯಂತೇ ಬಾಳುವೇ 
ಗಂಡು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
            ಶುಭಯೋಗ ಬಳಿ ಬಂದಿದೆ  ಎಲ್ಲೆಲ್ಲೂ ಸಂತೋಷ ತುಂಬಲಿ 
            ಮನೆಯಲ್ಲಿ ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 
--------------------------------------------------------------------------------------------------------- 

ನಮ್ಮೂರ  ರಾಜ (೧೯೮೮) -  ಅನುರಾಗವೇನೋ ಆನಂದವೇನೋ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ಚಿತ್ರಾ 

ಗಂಡು : ಅನುರಾಗವೇನೋ ಆನಂದವೇನೋ ನಿನ್ನಂದ ನಾ ನೋಡಿದೆ 
            ಬದುಕು ಹಾಡಾಗಲೂ ನೆರವು ನೀ ನೀಡಿದೆ 

ಗಂಡು : ಕಣ್ಣಲ್ಲಿ ತುಂಬಿಕೊಂಡೆ ಮನದಲ್ಲಿ ತುಂಬಿಕೊಂಡೆ 
           ಇರುಳೆಲ್ಲ ಕನಸಲ್ಲಿ ಕಾಡಿದೆ ಬಂಗಾರಿ ನಿನ್ನ ಆಗೋ ಹೊಸ ಆಸೆ ನನ್ನಲ್ಲಿ ತಂದೆ 
ಹೆಣ್ಣು : ಕಿಡಿಯಂಥ ಮಾತಿನಲೀ ಸುಡುವಂಥ ನೋಟದಲ್ಲಿ ಹಿತವನ್ನೇ ಗೆಳೆಯನೇ ನೋಡಿದೆ 
          ನಿನ್ನನ್ನೂ ಕೂಡಿ ಒಲವಿಂದ ಹಾಡಿ ಸಂತೋಷ ಕಾಣೋಕೆ ಬಂದೆ 
ಗಂಡು : ಬಾಳಿನಲಿ ಕಾಣದಿಹ ಸಂಭ್ರಮ ನೀ ತಂದೆ 
            ಅನುರಾಗವೇನೋ ಆನಂದವೇನೋ ನಿನ್ನಂದ ನಾ ನೋಡಿದೆ 
            ಬದುಕು ಹಾಡಾಗಲೂ ನೆರವು ನೀ ನೀಡಿದೆ 

ಗಂಡು :  ನಿನ್ನನ್ನು ನೋಡಿದಾಗ ಮೈಯ್ಯನ್ನೂ ಮುಟ್ಟಿದಾಗ ಮಿಂಚೊಂದು ತನುವಲ್ಲಿ ಓಡಲು 
             ಸಂಕೋಚ ಸಾಕು ಇನ್ನೇನೂ ಬೇಕು ಎಂಬಾಸೆ ನನ್ನಲ್ಲಿ ಬಂತು 
             ಉದ್ದಂಥ ಮಾತು ಏಕೇ ಉದ್ದನ್ನೇ ನೀಡಬೇಕೆ ಇನ್ನೆನ್ನೂ ಬಯಕೆಯ ಮೂಡಿದೆ 
             ಒಂದೊಂದೇ ಹೇಳು ಒಂದೊಂದೇ ಕೇಳು ನಿನ್ನಾಸೆ ಪೊರೈಸುವೆ 
ಹೆಣ್ಣು : ಬಾ ಇನಿಯಾ ಬಾ ಸನಿಯ ಕೇಳುವ ಒಂದೊಂದೇ 
            ಅನುರಾಗವೇನೋ ಆನಂದವೇನೋ ನಿನ್ನಂದ ನಾ ನೋಡಿದೆ 
            ಬದುಕು ಹಾಡಾಗಲೂ ನೆರವು ನೀ ನೀಡಿದೆ 
--------------------------------------------------------------------------------------------------------- 

ನಮ್ಮೂರ  ರಾಜ (೧೯೮೮) - ಮಾವ ಮಾವ ಮುದ್ದಿನ ಮಾವ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ 

ಮಾವಾ ಮಾವಾ ಮುದ್ದಿನ ಮಾವ ಬಾರಯ್ಯ ಪೂಜೆಗೆ ಹೊತ್ತಾಯಿತು 
ಈ ರಾತ್ರಿಯ ನವರಾತ್ರಿಯ ನಂಗು ನಿಂಗು ಶಿವರಾತ್ರಿಯ 
ಮಾವಾ ಮಾವಾ ಮುದ್ದಿನ ಮಾವ ಬಾರಯ್ಯ ಪೂಜೆಗೆ ಹೊತ್ತಾಯಿತು 
ಈ ರಾತ್ರಿಯ ನವರಾತ್ರಿಯ ನಂಗು ನಿಂಗು ಶಿವರಾತ್ರಿಯ 

ನಿನ್ನೇ ರಾತ್ರಿ ನಿನ್ನಾಟ ಏನು ಚೆನ್ನ ಹಣ್ಣುಗಾಯಿ ನೀರುಗಾಯಿ ಮಾಡಿ ನನ್ನಾ 
ನಿನ್ನಾ ತುಂಟಾಟ ತೋರಿದೆ ಇಂದು ಕೊಡೊ ಅಂತ ಓಟ ನಿನ್ನ ಕಾಲು 
ನನ್ನ ಕೈಲಿ ತಪ್ಪದಂತೆ ನಿನ್ನ ಸೋಲು ಹೆಣ್ಣು ನಿಂಗಾಗಿ ಕಾದಿದೆ 
ಹೊವ ಮಂಚಕ್ಕೆ ಸುಖದಾ ಸ್ವರ್ಗಕೆ ಕಣ್ಣು ನಿನ್ನನ್ನೂ ಕಾದಿದೆ 
ಮಾವಾ ಮಾವಾ ಮುದ್ದಿನ ಮಾವ ಬಾರಯ್ಯ ಪೂಜೆಗೆ ಹೊತ್ತಾಯಿತು 
ಈ ರಾತ್ರಿಯ ನವರಾತ್ರಿಯ ನಂಗು ನಿಂಗು ಶಿವರಾತ್ರಿಯ 

ಗಂಡು ಹೆಣ್ಣು ಸೇರುವಾಗ ಸಾಕ್ಷಿ ಬೇಕೇ ಹೀಗೆ ನಿಲ್ಲಬೇಕೆ 
ನನ್ನ ಸೌಂದರ್ಯ ಗೆದ್ದಿದೆ ನನ್ನ ಕಣ್ಣಿನಲ್ಲೂ ನಿನ್ನ ರೂಪ ನೋಡು 
ಕೆಂಪು ತುಟಿಯ ಸವಿಯ ಜೇನ ಹೀರಿ ನೋಡು ನಿನ್ನ ಮಧುಚಂದ್ರ ಇಲ್ಲಿದೇ .. 
ನನ್ನ ಮೈ ಬೆಂಕಿ ನಿನ್ನ ಸೋಕಿ ತಂಪು ಆಗೋಕೆ ಬೇಡಿದೆ 
ಮಾವಾ ಮಾವಾ ಮುದ್ದಿನ ಮಾವ ಬಾರಯ್ಯ ಪೂಜೆಗೆ ಹೊತ್ತಾಯಿತು 
ಈ ರಾತ್ರಿಯ ನವರಾತ್ರಿಯ ನಂಗು ನಿಂಗು ಶಿವರಾತ್ರಿಯ 
---------------------------------------------------------------------------------------------------------- 

ನಮ್ಮೂರ  ರಾಜ (೧೯೮೮) - ಕಿಲಾಡಿ ಜೋಡಿ ಜೋಡಿ ಜೋಡಿ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ 

ಗಂಡು : ಕಿಲಾಡಿ ಜೋಡಿ ಜೋಡಿ ಜೋಡಿ ಕಿಲಾಡಿ ಜೋಡಿ 
            ಹೇಳಿದ ಕೆಲಸ ಮಾಡದೇ ಹೋದರೇ ಒದೆಯುವೇವು ನೋಡಿ 
ಹೆಣ್ಣು : ಅರೆರೇ .. ಗೆಳೆಯ ಬಾರೋ.. ಅರೆರೇ .. ದಡಿಯಾ ಬಾರೋ  
          ನಾ ಹೇಳೋ ಕೆಲಸವನ್ನು ಮಾಡೋ ಹೇ ಮಾಡಿದ್ದು ಮುಗಿದ ಮೇಲೆ ಓಡೋ  
          ಕರೆದಾಗ ಬರಬೇಕು ಕೈ ಕಟ್ಟಿ ನಿಲ್ಲಬೇಕು ತಲೆ ತಗ್ಗಿಸಿ ನಡೆಯಬೇಕು ರಾಮ 
          ವಾರಕ್ಕೇ ಒಂದೇ ದಿನ ವಿರಾಮ 
ಗಂಡು : ಬಟ್ಟೆಯ ಒಗಿಬೇಕು ಕಟ್ಟೆಯ ತೊಳಿಯಬೇಕು ಹೇಳಿದ್ದು ಮಾಡ್ಬೇಕೂ 
           ಸೌದೆಯ ಕಡಿಬೇಕು ಸೌಟನ್ನು ಹಿಡಿಯಬೇಕು ಅಡಿಗೆಯ ಮಾಡ್ಬೇಕು 
           ಆವಾಗ್ಲೇ ಎರಡು ಹೊತ್ತು ಊಟ ಇಲ್ಲಿದ್ರೆ ಕೊಡುವೆ ನಾನು ಕಾಟ 
           ಹೋ .. ಪ್ರೀತಿ ಇಲ್ಲ ಸ್ನೇಹ ಇಲ್ಲ ದೊಡ್ಡೋರನ್ನೇ ಮಾತೇ ಇಲ್ಲ ದಾಕ್ಷಿಣ್ಯ ನನಗೇನೂ ಇಲ್ಲ 
           ನಿನ್ನ ಮಗಳೇ ಹಗೆಯಾದಾಗ ನನ್ನವಳೇ ಎದುರಾದಾಗ 
           ಮಗಳು ಎನ್ನೋ ಮಮಕಾರಕ್ಕೇ ಅರ್ಥವೇ ಇಲ್ಲ ಪ್ರೀತಿವಾತ್ಸಲ್ಯವೂ ವ್ಯರ್ಥವೂ ಎಲ್ಲಾ 
ಕೋರಸ್ : ನಿನ್ನ ಮಗಳೇ ಹಗೆಯಾದಾಗ ನನ್ನವರು ಯಾರು ಇಲ್ಲ ಹೋಯ್ 
                ಕುದುರೆ ಸವಾರಿಯ ಬಲು ಚೆನ್ನ ಬಲು ಚೆನ್ನ ನೀನೇನು ಬಲ್ಲೇ 
                ಮಜವನ್ನು ಹಾರಾಡ್ತಿದ್ದೇ ಹೋರಾಡ್ತಿದ್ದೇ ಇನ್ನಾದ್ರೂ ಕಲಿಯೋ ಬುದ್ದಿಯನ್ನ 
ಹೆಣ್ಣು : ಮಾತೊಂದು ಹೇಳುವೇ ಹತ್ತಿರ ಹತ್ತಿರ ಬಾ ಗುಟ್ಟೊಂದ ಕೇಳುವೆ ಮೆತ್ತಗೆ ಮೆತ್ತಗೆ ಬಾ 
           ಇಡ್ಲಿ ದೋಸೆ ಹಿಟ್ಟನ್ನೂ ರುಬ್ಬಬೇಕೂ 
ಕೋರಸ್ : ಬಿಸಿಲಾದರೇನು ಮಳೆಯಾದರೇನು ನಾ ಮಾಡಿದ ಕರ್ಮಾ 
                ಮಾಡುವುದು ಏನು ಅನುಭವಿಸಬೇಕು ಸೋದರಾ ಸೋದರ 
ಗಂಡು : ಸೋಪನ್ನೂ ಚೆನ್ನಾಗಿ ಹಾಕು ಬಿಳುಪಾಗಿ ಬಟ್ಟೆ ಕಾಣಬೇಕೂ 
            ನೀಲಿಯ ಹಾಕ್ಬಿಟ್ರೇ ಥಳಥಳನೇ ಹೊಳೆಯುತ್ತೇ ಈ ಟೆರ್ಲಿನ ಸ್ಲಾಕೂ 
ಕೋರಸ್ : ಹೊಟ್ಟೆಗೇ ಹಾಕೋದಿಲ್ಲ ಬಟ್ಟೆಗೆ ಸಾಲದಲ್ಲ 
                ನಮಗೇನೂ ಗತಿ ಬಂತೋ ಅಯ್ಯೋ ರಾಮ  
                ಸಂಬಳ ಅನ್ನೋದಿಲ್ಲ ಗಿಂಬಳ ಗೊತ್ತೆಯಿಲ್ಲ ದುಡ್ಡಿಗೆ ಹಾಕಿಬಿಟ್ರು ಪಂಗನಾಮ 
ಕೋರಸ್ : ಹೇಹೇಹೇ.. ಸಗಣಿಯ ಎತ್ತಿರೋ ಬೆರಣಿಯ ತಟ್ಟಿರೋ 
                ಹೇಳಿದ್ದು ಮಾಡಿರೋ ದಂಡಪಿಂಡಗಳ  ಇಲ್ದಿದ್ರೇಡೀತೀವಿ ಬೀದಿ 
                ನಾಯಿಗಳ ಕಟ್ಟಿದ್ರೆ ತಳ್ತೀವಿ ಏಂಜಲ್ ಕಾಗೆಗಳ ಹೇಹೇಹೇಹೇ .. 
---------------------------------------------------------------------------------------------------------- 

No comments:

Post a Comment