- ಸಂಡೇ ಸರೋಜಾ ಮಂಡೇ ಮಿಸ್ ರೋಜಾ
- ಅಲ್ಲಿ ನೋಡಲು ರಾಮ
- ರಾಮ ಮಂತ್ರವ ಜಪಿಸು
- ಕದ್ದು ಕದ್ದು ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
- ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
- ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ
- ಯಾವುದೂ ಸತ್ಯಾ .. ಯಾವದೂ ಮಿತ್ಯಾ ತಿಳಿಯದು ಸಾಗಿದೇ ಜೀವನ ಚಕ್ರ
ನಾನೆಂದೂ ನಿಮ್ಮವನೇ (೧೯೯೩) - ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ವನಜಾ.. ಜಲಜಾ.. ಗಿರಿಜಾ.. ಹ್ಹಹ್ಹಾ...
ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಟೂಸ್ಡೇ ತನುಜಾ ವೆನ್ಸಡೇ ಲೀ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ ಒಹೋ..
ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲೀ ಗಿರಿಜಾ ಫ್ರೈಡೆಲೀ ಜಲಜಾ ಸಾಕಂತೇ ಎಲ್ಲರಿಗೂ ನಾನೇ ರಾಜಾ.. ರಾಜಾ
ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಟೂಸ್ಡೇ ತನುಜಾ ವೆನ್ಸಡೇ ಲೀ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ ಒಹೋ..
ಜೊತೆಯಲ್ಲಿ ಹಾಡುವಾಗ ಮಜಾ ಮಜಾ
(ಹೂ ಅಪ್ ಅಪ್ ಹೂ ಅಪ್ ಅಪ್ ಹೂ ಅಪ್ ಅಪ್ ಹೂ ಅಪ್ ಅಪ್ ಹೂ ಅಪ್ ಅಪ್ )
ಮೋಜೂ ಮಾಡೋ ಏಜಿನಲ್ಲಿ ನಾವೆಲ್ಲಾ ಕ್ರೇಜಿಗಳೂ
ಪ್ರೀತಿಯೆಂಬ ಬೇಡಿ ಕೊಟ್ಟ ಪ್ರೇಮದ ಖೈದಿಗಳೂ
ಅಂಕೆಯೂ ನಮಗಿಲ್ಲಾ... ಶಂಕೆಯೂ ಬೇಕಿಲ್ಲಾ
ಲೈಫ್ ಎಂಜಾಯ್ ಮಾಡೋದೇ ಗುರಿಯಾಗಿದೇ ..
(ರೂರುರೂರು ಜೂಜುಜುಜು ಲಾಲಾಲಾಲಲ್ಲಲ್ಲಲ್ಲಲಾ )
ಜಾಲಿ ಮಾಡೋ ಬೇಲಿ ಯಾಕೇ ಫ್ರೀ ಬರ್ಡ್ಸ್ ನಾವೂಗಳೂ
ಲಕ್ಕಿ ಚಾನ್ಸ್ ಸಿಕ್ಕಿದಾಗ ರೋಮ್ಯಾನ್ಸಿನ ಆಟಗಳೂ
ರೋಮಾಂಚದಾನಂದಾ ತಂದಾಗ ನಿನ್ನಿಂದಾ
ಈ ಮನದ ಆಸೆಗಳೂ ಮಿತಿಮೀರಿದೇ.. ಅಹ್ಹಹ್ಹಾ..
ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಟೂಸ್ಡೇ ತನುಜಾ ವೆನ್ಸಡೇ ಲೀ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ ಆಆಆ....
ಜೊತೆಯಲ್ಲಿ ಹಾಡುವಾಗ ಮಜಾ ಮಜಾ
(ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ ಚ್ )
ಲಲಲಲಾಲಾಲ (ಹೇಯ್) ಲಲಲಲಾಲಾಲ (ಹೋ )
ಲಲಲಲಾಲಾಲ ಲಲಲಲಾಲಾಲ (ಪಪ್ಪಪ್ಪಾಪಪ ಪಪ್ಪಪ್ಪಪಪ )
ಲಲಲಲಲ ಯ್ಯಯ್ಯಯ್ಯಯ್ಯಾ (ಉಹ್ಹೂ.. ಉಹ್ಹೂ..) ಯ್ಯಯ್ಯಯ್ಯಯ್ಯಾ
ನನ್ನ ಬಾಳತೊಟದಲ್ಲಿ ನೀವೇಲ್ಲಾ ಹೂವುಗಳೂ
ನಗುತಾ ಅರಳಿ ಬಂದರೇನೇ ನನಗಾಗೇ ನೀವುಗಳೂ
ಟೀನೇಜು ಹುಡುಗಿಯರೂ ಬಳುಕಾಡೇ ಬೆಡಗಿಯರೂ
ಈ ಫ್ರೆಂಡೂ ಲೋಕದಲೀ ಇನ್ನೆಲ್ಲಿದೇ... ಹೇಹೇ
ನನ್ನ ಹಾರ್ಟ್ ಬೀಟಿನಲ್ಲಿ ಬೀಟಿಲ್ಸ್ ಹಾಡಿದಂತೇ
ಡಾರ್ಲಿಂಗ್ ಇದ್ರೇ ಜೊತೆಯಲ್ಲಿ ಜಾಕಪಾಟ್ ಹೊಡೆದಂತೇ
ಈ ಲೋಕ ಹೀಗೀದ್ರೆ... ಆ ಸ್ವರ್ಗ ನಮಗೇಕೇ ..
ಥ್ರಿಲ್ ಲವ್ವೂ ಮಾಡೋಣ ವ್ಯಥೇ ಇಲ್ಲದೇ .. ಹೇಹೇಹೇ ..
ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಟೂಸ್ಡೇ ತನುಜಾ ವೆನ್ಸಡೇ ಲೀ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ ಹೇಹೇಹೇ....
ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲೀ ಗಿರಿಜಾ ಫ್ರೈಡೆಲೀ ಜಲಜಾ ಸಾಕಂತೇ ಎಲ್ಲರಿಗೂ ನಾನೇ ರಾಜಾ.. ರಾಜಾ
ಸಂಡೇ ಸರೋಜಾ ಮಂಡೇ ಮಿಸ್ ರೋಜಾ
ಟೂಸ್ಡೇ ತನುಜಾ ವೆನ್ಸಡೇ ಲೀ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ ಹೇ...
ಜೊತೆಯಲ್ಲಿ ಹಾಡುವಾಗ ಮಜಾ ಮಜಾ.. ಆಹಾ..
---------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ಅಲ್ಲಿ ನೋಡಲು ರಾಮ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲೀ ನೋಡಿದರೂ ಅಲ್ಲೆಲ್ಲಾ ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ...
ರಾವಣನ ಮೂಲ ಬಲ ಕಂಡು ಕಪೀ ಸೇನೆ
ರಾವಣನ ಮೂಲ ಬಲ ಕಂಡು ಕಪೀ ಸೇನೆ ಆವಾಗಲೇ ಬೆದರಿ ಓಡಿದವೂ
ಈ ವೇಳೆ ನರನಾಗಿ ಇರಬಾರದೆಂಬೇನಿಸಿ ದೇವರಾಮಚಂದ್ರ ಜಗವೆಲ್ಲ ತಾನಾದ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲೀ ನೋಡಿದರೂ ಅಲ್ಲೆಲ್ಲಾ ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ...
ಅವನಿಗೇ ಈವ ರಾಮ ಇವನಿಗೇ ಅವ್ ರಾಮ
ಅವನಿಗೇ ಈವ ರಾಮ ಇವನಿಗೇ ಅವ್ ರಾಮ ಅವನಿಯೊಳಿಪರಿ ರೂಪವುಂಟೇ
ಲವ ಮಾತ್ರವೇ ಅಸುರ ದುರುಳರೆಲ್ಲರೂ ಅವರವರೇ ಹೊಡೆದಾಡಿ ಹತರಾಗಿ ಹೋದರೂ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲೀ ನೋಡಿದರೂ ಅಲ್ಲೆಲ್ಲಾ ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ... ಆಆಆ
ಹುನುಮದಾದಿ ಸಾಧು ಜನರೂ ಅಪ್ಪಿಕೊಂಡೂ..
ಹುನುಮದಾದಿ ಸಾಧು ಜನರೂ ಅಪ್ಪಿಕೊಂಡೂ..
ಕುಣಿಕುಣಿದಾಡಿದರೂ ಹರುಷದಿಂದಾ.. ಕ್ಷಣದಲ್ಲೀ ಪುರಂದರ.. ಆಆಆ ಆಆಆ
ಕ್ಷಣದಲ್ಲೀ ಪುರಂದರ ವಿಠಲರಾಯನೂ ಕೊನೆಕೊನೆಯನು ತಾನೊಬ್ಬನಾಗಿ ನಿಂತಾ ..
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲೀ ನೋಡಿದರೂ ಅಲ್ಲೆಲ್ಲಾ ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ... ಆಆಆ
---------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ರಾಮ ಮಂತ್ರವ ಜಪಿಸು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ಆಆಆ.. ಆ ಮಂತ್ರ ಈ ಮಂತ್ರ ಮೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ ಈ ಮಂತ್ರ ಮೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ ಜಲಜಪಾಣಿ ನಿತ್ಯ ಜಪಿಸುವ ಮಂತ್ರ
ತನುಷ ಪರ್ವತಕ್ಕಿದೂ ಕುಡೀಷವಾಗಿಹ ಮಂತ್ರ ಸುಲಭದಿಂದಲೀ ಮೋಕ್ಷ ಸೂರೆಗೊಂಬುವ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ ಈ ಮಂತ್ರ ಮೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ಸ್ನಾನ ಮೌನಂಗಳಿಗೇ ಸಾಧನದ ಮಂತ್ರ ಜ್ಞಾನಿಗಳೂ ಮನದಿ ಧ್ಯಾನಿಪ ಮಂತ್ರ
ಈ ನಗೂ ಅಂಗಳ ಇಂಗಿಸುವಾ ಮಂತ್ರ ಏನೆಂದೇ ವಿಭೀಷಣನೇ ಪಟ್ಟಗಟ್ಟಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ನಿಸರಿಮರಿ ರಿಮಪನಿಪ ಮಪನಿ ಪನಿಸ ನಿಸರಿ ಸರಿಮ ನಿಗಮ ಮದನಿ
ನಿಸರಿನಿಸ ಪ ಪನಿಸ ಮಪರಿ ಮಪರಿಮ ಸಸಮರಿ ರಿರಿಪಮ ಮಪನಿಸ ಸಸನಿನಿ
ತಾಂ ತಕ್ಕೂ ತಕ್ಕಜನೂ ತಕಧಿಮಿ ತಕಝನೂ ತಧಿಗಿಣತೋಮ್ ತಧಿಗಿಣತೋಮ್ ತಧಿಗಿಣತೋಮ್
ಧಗಿಧಗಿತ್ ತಕ್ಕ ತರಗಿಡತ್ ಧಗಿಧಗಿತ್ ತಕ್ಕ ತರಗಿಡತ್ ಧಾತಿತ್ತ ತರಗಿಡತಕ ಧಾತಿತ್ತ ತರಗಿಡತಕ
ಸಕಲ ವೇದಂಗಳಿಗೇ ..ಸಾರವೇ ನಿಪ ಮಂತ್ರ ಮುಕುತಿ ಮಾರ್ಗಕೇ.. ಇದೇ ಮೂಲ ಮಂತ್ರ
ಭಕುತಿರ ಸೆಕೆ ಬಟ್ಟೇ .. ಪುಣ್ಯ ತೋರುವ ಮಂತ್ರ ಸುಖ ನಿಧೀ .. ಪುರಂದರ.. ಆಆಆ... ಆಆಆ
ಸುಖ ನಿಧೀ .. ಪುರಂದರ ವಿಠಲನ ಮಹಾ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ ಈ ಮಂತ್ರ ಮೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ... ಹೇ.. ಮನುಜಾ... ಹೇ.. ಮನುಜಾ...
---------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ಕದ್ದು ಕದ್ದು ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಕೃಷ್ಣಾ.... ಗಂಡು : ರಾಧಾ....
ಹೆಣ್ಣು : ಕೃಷ್ಣಾ.... ಗಂಡು : ರಾಧಾ....
ಹೆಣ್ಣು : ನಿಂಗೇ ಒಂದೂ ಹ್ಯಾಪೀ ನ್ಯೂಸ್ ಗಂಡು : ನಿಂಗೂ ಒಂದೂ ಹ್ಯಾಪೀ ನ್ಯೂಸ್
ಹೆಣ್ಣು : ಮೊದಲು ನಾನ್ ಹೇಳ್ತಿನೀ ... ಗಂಡು : ಇಲ್ಲಾ.. ನಾನ್ ಹೇಳ್ತಿನೀ ..
ಹೆಣ್ಣು : ನೋ ನೋ ನೋ ಲೇಡಿಸ್ ಫಸ್ಟ್ ಗಂಡು : ಹ್ಹಾಂ ... ಸರಿ ನೀನೇ ಹೇಳೂ..
ಹೆಣ್ಣು : ಕದ್ದೂ ಕದ್ದೂ ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
ನಮ್ಮ ಅಪ್ಪ ಅಮ್ಮಾ ಒಪ್ಪಿಕೊಂಡೂ ನಿಮ್ಮ ಅಪ್ಪಅಮ್ಮಾ ಒಪ್ಪಿಕೊಂಡೂ ಗಂಡ ಹೆಂಡತಿ ಆಗ್ತಿವಲ್ಲಾ...
ಗಂಡು : ನಾನ್ ಹೇಳೋದೂ ಅದೇ...
ಕದ್ದೂ ಕದ್ದೂ ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ..
ನಮ್ಮ ಅಪ್ಪ ಅಮ್ಮಾ ಒಪ್ಪಿಕೊಂಡೂ ನಿಮ್ಮ ಅಪ್ಪಅಮ್ಮಾ ಒಪ್ಪಿಕೊಂಡೂ ಗಂಡ ಹೆಂಡತಿ ಆಗ್ತಿವಲ್ಲಾ...
ಹೆಣ್ಣು : ಕದ್ದೂ ಕದ್ದೂ ಗಂಡು : ಪ್ರೀತಿ ಮಾಡೋ
ಹೆಣ್ಣು : ಕಳ್ಳಾಟ ಬೇಕಾಗಿಲ್ಲಾ.. ಗಂಡು : ಕಳ್ಳಾಟ ಬೇಕಾಗಿಲ್ಲಾ.. ಹ್ಹಾಂ ...
ಗಂಡು : ಡ್ಯೂಯೆಟ್ ಅಂದ್ರೇ ಸತ್ವೀ... ಬೆಟ್ಟಗುಡ್ಡ ಹತ್ತೀ.. ಮರ ಸುತ್ತ ಬೇಕಾಗಿಲ್ಲಾ..
ಹೂವೂ ನೀನೆಂಬಾ ದುಂಬಿ ನಾನೆಂಬಾ ಸೊಗಸನ್ನೂ ಸಾಮೀತ್ಯ ಸಾಕಲ್ಲಾ..
ಹೆಣ್ಣು : ಹಾಗಾದರೇ ಏನ್ಮಾಡಬೇಕೂ ..
ಗಂಡು : ಜೋಕ್ ಕಟ್ ಮಾಡ್ಬೇಕೂ.. ಮಾಡ್ಲಾ.. (ಹ್ಹಾಂ )
ಒಬ್ಬ ಗಂಡ ಹೆಂಡತಿಯಿದ್ದರಂತೇ ಇಬ್ಬರೂ ಬೇರೆಬೇರೆ ಊರಲ್ಲಿದರಂತೇ
ಗಂಡ ಹೆಂಡತಿಗೇ ಪ್ರತಿ ತಿಂಗಳೂ ಸಾವಿರದ ಐದನೂರು ರೂಪಾಯಿ ಕಳಿಸಿದ್ದನಂತೇ..
ಒಂದ್ ಸಲ ಗಂಡ ಕಾಗದ ಬರೆದನಂತೇ .. ಈ ಸಲ ನನ್ನ ಕೈಲೀ ದುಡ್ಡು ಕಳಿಸೋಕ್ಕ ಆಗಲಿಲ್ಲಾ
ಅದಕ್ಕ್ ಬದಲೂ ಸಾವಿರದ ಐದನೂರು ಸಿಹಿ ಮುತ್ತುಗಳನ್ನ ಕಳಿಸಿದ್ದೀನಿ ಡಿಯರ್ ಅಂತಾ
ಅದಕ್ಕೇ ಅವಳೂ ಏನ್ ಬರೆದಳಂತೇ ಗೋತ್ತಾ ...
ಸರೀ ಬಿಡಿ ಹಾಲನೊಂಗೂ.. ಮೊಸರನೊಂಗೂ.. ಮನೆ ಓನರನೊಂಗೂ ಎಲ್ಲರಿಗೂ
ಮುತ್ತೇ ಕೊಟ್ಟೂ ಅಡ್ಜೆಸ್ಟ್ ಮಾಡ್ತೀನಿ ಅಂತಾ.. (ಅಹ್ಹಹ್ಹಹ್ಹ) ಅಹ್ಹಹ್ಹಹ್ಹ (ಅಹ್ಹಹ್ಹ)
ಲಲಲ್ಲಲ್ಲಾ.. (ಲಲಲ್ಲಲ್ಲಾ..) ಲಲಲ್ಲಲಲಲಲಲ ಲಲ್ಲಲ್ಲಲ್ಲಾಲ್ಲಾ.. (ಲಲಲ್ಲಲ್ಲಾಲಲಲಲಾ ..)
ಕೋರಸ್ : ಒನ್ ಟೂ ಥ್ರೀ ಫೋರ್
ಹೆಣ್ಣು : ರೋಬಟನಂತೇ ನಡೆದೂ ಸಿಕ್ಕಾಪಟ್ಟೇ ನಗೆದೂ ಡಾನ್ಸ್ ಮಾಡಬೇಕಾಗಿಲ್ಲಾ..
ಡ್ರಿಲ್ ಮಾಡುತಾ ಥ್ರಿಲ್ ನೋಡುವಾ ಚೆಲ್ಲಾಟ ನಮಗಿನ್ನೂ ಬೇಕಿಲ್ಲಾ..
ಗಂಡು : ಸುಮ್ಮನೇ ಇರೋಕ ಆಗಲ್ಲಾ.. ಆಆಅಹ್ಹಹ್ಹಹಾ..
ಹೆಣ್ಣು : ಈ ಸಲ ನಾ ಜೋಕ್ ಹೇಳ್ತಿನೀ ..
ಒಬ್ಬ ಗಂಡಹೆಂಡತಿ ತುಂಬಾ ಹುಡುಗಾಟ ಆಡ್ತಾ ಇದ್ದರಂತೇ
ಒಂದ್ ಸಲ ಹೆಂಡತಿ ನಿದ್ದೇ ಮಾಡ್ತಿದ್ದಾಗ ಗಂಡ ಬಂದು ಅವಳನ್ನ ತಬ್ಬಿಕೊಂಡೂ
ಹೇ.. ನಾನ್ ಪಕ್ಕದ ಮೆನೆ ರಮೇಶ ಅಂದನಂತೇ..
ಅವಳು ಗಾಭರಿಯಿಂದ ಪಟಾರ್ ಅಂತಾ ಅವನ ಕಪಾಳಕ್ಕೇ ಹೋಡದೂ ದೂರ ಸರಿದಬಿಟ್ಟಳಂತೇ
ಆಮೇಲೇ ನೋಡಿದರೇ.. ಗಂಡಾ.. ನಾನೇನ ಹೀಗೇ ಮಾಡಬೇಕೆಂದುಕೊಂಡಿದ್ದರೇ
ಒಂದ್ ಸಲ ಗಂಡ ನಿದ್ದೇ ಮಾಡ್ತಾ ಇದ್ದಾಗ ಅವಳೂ ಬಂದೂ ತಬ್ಬಿಕೊಂಡೂ..
ನಾನೂ ಪಕ್ಕದ್ಮನೇ ಉಷಾ ಅಂದಳಂತೇ.. ಅದಕ್ಕ ಅವನೂ ..
ಹಾಗಾ .. ನನ್ನ ಹೆಂಡತೀ ಹ್ಯಾಗಿದ್ದರೂ ಹಾಲಿಗೇ ಹೋಗಿದ್ದಾಳೇ
ಅವಳೂ ಬಾರೋ ಅಷ್ಟರಲ್ಲೇ ನಾವಿಬ್ಬರೂ... ಅಂತಾ ಹೇಳೀದ್ದೇ ಎಳಕೊಂಡೂ .. (ಥೂ.. ನಿನ್ನಾ)
ಅಹ್ಹಹ್ಹಹ್ಹಹ್ಹಾ (ಅಹ್ಹಹ್ಹಹ್ಹಹ್ಹಾ)
ಹೆಣ್ಣು : ಕದ್ದೂ ಕದ್ದೂ ಗಂಡು : ಪ್ರೀತಿ ಮಾಡೋ
ಹೆಣ್ಣು : ಕಳ್ಳಾಟ ಬೇಕಾಗಿಲ್ಲಾ.. ಗಂಡು : ನಿಮ್ಮ ಅಪ್ಪಅಮ್ಮಾ ಒಪ್ಪಿಕೊಂಡೂ
ಹೆಣ್ಣು : ನಿಮ್ಮ ಅಪ್ಪಅಮ್ಮಾ ಒಪ್ಪಿಕೊಂಡೂ
ಇಬ್ಬರು : ಗಂಡ ಹೆಂಡತಿ ಆಗ್ತಿವಲ್ಲಾ...
ಕದ್ದೂ ಕದ್ದೂ ಪ್ರೀತಿ ಮಾಡೋ ಕಳ್ಳಾಟ ಬೇಕಾಗಿಲ್ಲಾ.. ಕಳ್ಳಾಟ ಬೇಕಾಗಿಲ್ಲಾ..
---------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ಆಹ್ಹಾಹ್ಹಾಹಾ.. ಆಹ್ಹಾಹ್ಹಾಹಾ.. ಆಆಆ..
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೇ.. ಬಾರೇ ..
ಒಲಿದಾಗ ನೀನೂ ರಸ ಕಾಮಧೇನೂ ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೇ.. ಬಾರೇ ..
ನಂತಂತನಂತ ತರನನನನ ನಂತಂತನಂತ ತನನನನನ
ಸಗಸಗ ಪಾಮಗ ಮಪಮಪ ನಿಪಮಗ ಪನಿಸರಿ ಮಪನಿಸ ಗಮಪನಿ ಆಆಆ....
ಕಾದಿದೇ ಮಂಚವೂ ನೀಡಲು ಔತಣ..
ಕಾದಿದೇ ಮಂಚವೂ ನೀಡಲು ಔತಣ ಬೇಕಿದೇ ಬೆಚ್ಚನೆ ಕಾವೂ ನೀಗಿಸೇ ತಲ್ಲಣ..
ಬೇರೇ ಯಾವ ಹೆಣ್ಣನ್ನೂ ಎಂದಿಗೂ ನೋಡೇನೂ
ಸೇಬಿನ ಕೆನ್ನೆಯೂ ಎದುರಿಗೇ ಮಿಂಚಿದೆ ತೊಂಡೆಯ ತುಟಿಗಳೆಲ್ಲಾ ಬಯಕೆಯ ಕೆಣಕಿದೇ
ತಿನ್ನಲ್ಲೂ ನೀಡದೇ ನನ್ನ ಉಪವಾಸ ಹಾಕಿದೇ.. ಏಕಿಂಥ ಕೋಪ ಮೊದಲ ರಾತ್ರಿಯಲ್ಲೀ .. ಆಆಆ
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೇ.. ಬಾರೇ ..
ಒಲಿದಾಗ ನೀನೂ ರಸ ಕಾಮಧೇನೂ ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ಮಾಡಿದ ತಪ್ಪಿಗೇ ಕಾಲನೂ ಒತ್ತುವೇ..
ಮಾಡಿದ ತಪ್ಪಿಗೇ ಕಾಲನೂ ಒತ್ತುವೇ.. ಮುತ್ತಿನ ಹೆಂಡತಿಗೆಂದೂ ದಾಸನೇ ನಾಗೂವೇ
ದೇವರ ಆಣೆಗೂ ನೀ ನನ್ನ ದೇವಿಯೂ...
ಕೃಷ್ಣನೂ ಆಗದೇ ರಾಮನೇ ಆಗುವೇ ... ಯಜ್ಞದ ಪಶುವಿನಂತೇ ಏತಕೇ ಕೊಲ್ಲುವೇ ..
ನಿನ್ನನ್ನೂ ಸೇರಲೂ .. ಪ್ರಾಣವೇ ನೀಡುವೇ.. ಬಾಳಸಂಗಾತಿ ನಾನೆಂದೂ ಮರೆಯೇ... ಆಆಆ
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೇ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೇ.. ಬಾರೇ ..
ಒಲಿದಾಗ ನೀನೂ ರಸ ಕಾಮಧೇನೂ ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸೀ ..
---------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ ಬೆಚ್ಚಗಿರೂ ನಾನಿರುವೇ ನನ್ನಾಸೇ ಹೂವೇ ..
ರೆಪ್ಪೆಗಳ ಮುಚ್ಚಿದರೇ .. ಸಕ್ಕರೆಯ ಕನಸಗಳೂ ಅಪ್ಪುವವೂ ನೀ ಮಲಗೂ ಮುದ್ದಾದ ಮಗುವೇ..
ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ ಬೆಚ್ಚಗಿರೂ ನಾನಿರುವೇ ನನ್ನಾಸೇ ಹೂವೇ ..
ತಂಟೆಗಳ ನೀ ಮಾಡೀ ತುಂಟತನ ತೋರಿಸಿದೇ
ತಂಟೆಗಳ ನೀ ಮಾಡೀ ತುಂಟತನ ತೋರಿಸಿದೇ ಯಾವ ನಂಟೋ ನಾ ಕಾಣೇ ಅಂತೂ ನನ್ನ ಸೋಲಿಸಿದೇ..
ಕಲ್ಲು ಮನ ಕರಗಿಸಿದೇ.. ಕಣ್ಣುಗಳ ತೋರಿಸಿದೇ .. ಅಕ್ಕರೆಯ ಸೆಲೆಯಾಗಿ ನೂರು ಭಾವ ಮೂಡಿಸಿದೇ..
ಅಕ್ಕರೆಯ ಸೆಲೆಯಾಗಿ ನೂರು ಭಾವ ಮೂಡಿಸಿದೇ..
ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ ಬೆಚ್ಚಗಿರೂ ನಾನಿರುವೇ ನನ್ನಾಸೇ ಹೂವೇ ..
ರೆಪ್ಪೆಗಳ ಮುಚ್ಚಿದರೇ .. ಸಕ್ಕರೆಯ ಕನಸಗಳೂ ಅಪ್ಪುವವೂ ನೀ ಮಲಗೂ ಮುದ್ದಾದ ಮಗುವೇ..
ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ ಬೆಚ್ಚಗಿರೂ ನಾನಿರುವೇ ನನ್ನಾಸೇ ಹೂವೇ ..
ಬೇಡವೆಂದೂ ದೂಡಲಾರೇ.. ಬೇಕೂ ಎಂದು ಹೇಳಲಾರೇ
ಬೇಡವೆಂದೂ ದೂಡಲಾರೇ.. ಬೇಕೂ ಎಂದು ಹೇಳಲಾರೇ ಯಾವ ದೈವ ಕಟ್ಟಿದನೋ ನನ್ನ ನಿನ್ನ ಸಂಬಂಧ..
ತಬ್ಬಲಿಯೂ ನೀನಲ್ಲಾ .. ಹೆಬ್ಬುಲಿಯೂ ನಾನಲ್ಲಾ... ಮಾತುಗಳ ಮೀರಿಸಿದ ಯಾವುದೀ ಅನುಬಂಧ..
ಮಾತುಗಳ ಮೀರಿಸಿದ ಯಾವುದೀ ಅನುಬಂಧ..
ಅತ್ತ ಇತ್ತ ನೋಡದಿರೂ ಅತ್ತೂ ಹೊರಳಾಡದಿರೂ ಬೆಚ್ಚಗಿರೂ ನಾನಿರುವೇ ನನ್ನಾಸೇ ಹೂವೇ ..
ರೆಪ್ಪೆಗಳ ಮುಚ್ಚಿದರೇ .. ಸಕ್ಕರೆಯ ಕನಸಗಳೂ ಅಪ್ಪುವವೂ ನೀ ಮಲಗೂ ಮುದ್ದಾದ ಮಗುವೇ..
ಆಆಆ... ಆಹಹ್ಹಾಹ್ಹಹ್ಹಾ ಆಆಆ
--------------------------------------------------------------------------------------
ನಾನೆಂದೂ ನಿಮ್ಮವನೇ (೧೯೯೩) - ಯಾವುದೂ ಸತ್ಯಾ .. ಯಾವದೂ ಮಿತ್ಯಾ ತಿಳಿಯದು ಸಾಗಿದೇ ಜೀವನ ಚಕ್ರ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ನಿಜವ ತಿಳಿಯದ ಒಂದೂ ನಿಜದ ಭ್ರಮೆಯಲೀ ಇನ್ನೊಂದೂ
ನಿಜವ ತಿಳಿದರೂ ತಿಳಿಸಲಾಗದು ಮತ್ತೊಂದೂ
ಈ ಮನಸಗಳ ನಡುವೇ ಸಿಲುಕಿಹ ಹಸುಳೆಯೂ ಒಂದೂ ..
ಯಾವುದೂ ಸತ್ಯಾ .. ಯಾವದೂ ಮಿತ್ಯಾ ತಿಳಿಯದು ಸಾಗಿದೇ ಜೀವನ ಚಕ್ರ
ಸಂದೇಹ ಸುಳಿಗೇ ನಾನಾ ಪಾತ್ರ ಸಿಲುಕುತ್ತ ತೊಳಲಾಡಿವೇ ..
ಯಾವುದೂ ಸತ್ಯಾ .. ಯಾವದೂ ಮಿತ್ಯಾ ತಿಳಿಯದು ಸಾಗಿದೇ ಜೀವನ ಚಕ್ರ
ನಿಜವನ್ನೂ ಬಯಸೋಳು ಇಲ್ಲುಂಟು ನಿಜವನ್ನೂ ಬಲ್ಲವಳೂ ಅಲ್ಲಂಟೂ
ನಿಜವನ್ನೂ ಬಯಸೋಳು ಇಲ್ಲುಂಟು ನಿಜವನ್ನೂ ಬಲ್ಲವಳೂ ಅಲ್ಲಂಟೂ
ಈ ಇಬ್ಬರಲ್ಲಿ ನೀನೊಬ್ಬ ಸಿಲುಕಿ ತೆರೆದಾ ಮನಸೂ ಬಿರುಕಾಯಿತು
ವಿಷದಾ ಹೆಡೆಯಾ ನೆರಳಾಯಿತು ಎಂಥಾ ಶಿಕ್ಷೇ ನಿನಗಾಯಿತು
ಯಾವುದೂ ಸತ್ಯಾ .. ಯಾವದೂ ಮಿತ್ಯಾ ಎಲ್ಲಿಯೂ ಸಾಗಿದೇ ಜೀವನ ಚಕ್ರ
ಒಡಲಲ್ಲಿ ಬರಿ ನೋವೂ ಇಂದುಟೂ .. ಒಡನಾಡೋ ಬಾಳಾಯ್ತ ಕಗ್ಗಂಟೂ ..
ಒಡಲಲ್ಲಿ ಬರಿ ನೋವೂ ಇಂದುಟೂ .. ಒಡನಾಡೋ ಬಾಳಾಯ್ತ ಕಗ್ಗಂಟೂ ..
ಕಣ್ಣೀರ ಜೊತೆಗೇ ನಿನಗಾಯ್ತು ನಂಟೂ ಮಗವು ಒಂದೂ ಒಗಟಾಯಿತು
ಒಲವೂ ಒಂದು ಘನೆ ಆಯಿತು ನೋವೇ ನಿನ್ನ ನೆಲೆಯಾಯಿತು
ಯಾವುದೂ ಸತ್ಯಾ .. ಯಾವದೂ ಮಿತ್ಯಾ ಎಲ್ಲಿಯೂ ಸಾಗಿದೇ ಜೀವನ ಚಕ್ರ
ಓ ದೇವ ಕಾಪಾಡು ಆ ಜೀವವಾ.. ಸರಿ ಮಾಡೂ ಬೇಗುದಿಯ ಈ ಭಾವವಾ
ಓ ದೇವ ಕಾಪಾಡು ಆ ಜೀವವಾ.. ಸರಿ ಮಾಡೂ ಬೇಗುದಿಯ ಈ ಭಾವವಾ
ಈ ಜೋಡಿಯನ್ನೂ.. ನೀ ಕೂಡಿಸಿನ್ನೂ.... ಅವಳ ಜೀವಾ ಉಳಿದಾಗಲೇ..
ಇವಳಾ ನಿಜವಾ ತಿಳಿದಾಗಲೇ.. ಇವರ ಮನಕೇ ಸುಖ ಶಾಂತಿಯೂ ..
ಯಾವುದೂ ಸತ್ಯಾ .. ಯಾವದೂ ಮಿತ್ಯಾ ಎಲ್ಲಿಯೂ ಸಾಗಿದೇ ಜೀವನ ಚಕ್ರ
ಸಂದೇಹ ಸುಳಿಗೇ ನಾನಾ ಪಾತ್ರ ಸಿಲುಕುತ್ತ ತೊಳಲಾಡಿವೇ ..
ಸಿಲುಕುತ್ತ ತೊಳಲಾಡಿವೇ .. ...
---------------------------------------------------------------------------------------
No comments:
Post a Comment