ನನ್ನ ರೋಷ ನೂರು ವರುಷ ಚಲನಚಿತ್ರದ ಹಾಡುಗಳು
- ನಡೆ ನಡೆ ಮುಂದಕ್ಕೇ
- ಹೇ.. ಕಮಲಾ ಹೇ..ವಿಮಲಾ
- ಬಯಸಿದ ಉಡುಗರೇ ಕೊಡಲು ಸಂಕೋಚವೇ
- ತೊಟ್ಟಿಗೆ ತೊಟ್ಟು ಗಂಟಲಾಗೆ ಬಿಟ್ಟು
- ದಿನ ದಿನ ಕ್ಷಣ ಕ್ಷಣ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ ಎಸ್.ಜಾನಕೀ
ಗಂಡು : ಹೇ.. ರಾಮು ಹೇ.. ಸೋಮು ಹೇ.. ರಂಗ ಹೇ.. ಸಿಂಗ
ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
ರಾಮನ ಹಳ್ಳಿಯ ರಾಜಕುಮಾರಿ ಕೋಮಲ ಕೆನ್ನೆಯ ಈ ಸುಕುಮಾರಿ
ಬಂದಾಳೆ ನಮ್ಮೂರಿಗೇ ಹೋರಾಟಾಳೆ ಮೆರವಣಿಗೆ

ಗಂಡು : ಹೂವಂತೇ ನಾಜೂಕು ಹೆಣ್ಣೋ ಬಿಸಿಲಲ್ಲಿ ಬಾಡೀತು ಪಾಪ
ಬಾಣವೋ ಆ ನಿನ್ನ ನೋಟ ಮೂಗಿನ ತುದಿಯಲ್ಲೇ ಕೋಪ
ಬೆಂಕಿ ಸುಟ್ಟಾಗ ಚಿನ್ನಕೆ ಮೆರುಗೂ ಕೋಪ ಬಂದಾಗ ಹೆಣ್ಣಿಗೆ ಸೊಬಗು
ಬೇಡಮ್ಮ ನಿನಗಿಂಥ ರೋಷ
ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
ಗಂಡು : ಅಯ್ಯಯ್ಯೋ ಈ ಜಾರಿ ಕಲ್ಲೂ ನಡೆಯೋಕೆ ಬಲು ಕಷ್ಟವೇನು
ಚುಚ್ಚಿತು ಕಾಲಿಗೆ ಮುಳ್ಳು ಹೂವನ್ನು ನಾ ಹಾಸಲೇನು
ಸಾಗದು ಇಲ್ಲಿ ಪಟ್ಟದ ಥಳಕು ಹಳ್ಳಿಗೆ ಬೇಕು ಕಷ್ಟದ ಬದುಕು
ಬಿಡಬೇಕು ಈ ನಿನ್ನ ಜಂಭ
ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
ರಾಮನ ಹಳ್ಳಿಯ ರಾಜಕುಮಾರಿ ಕೋಮಲ ಕೆನ್ನೆಯ ಈ ಸುಕುಮಾರಿ
ಬಂದಾಳೆ ನಮ್ಮೂರಿಗೇ ಹೋರಾಟಾಳೆ ಮೆರವಣಿಗೆ
ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
ರಾಮನ ಹಳ್ಳಿಯ ರಾಜಕುಮಾರಿ ಕೋಮಲ ಕೆನ್ನೆಯ ಈ ಸುಕುಮಾರಿ
ಬಂದಾಳೆ ನಮ್ಮೂರಿಗೇ ಹೋರಾಟಾಳೆ ಮೆರವಣಿಗೆ
ನಡೆ ನಡೆ ನಡೆ ನಡೆ ಮುಂದಕ್ಕೇ ಗಾಳಿ ವೇಗಕ್ಕೆ ಊರು ಸೇರೋಕೆ
--------------------------------------------------------------------------------------------------------
ನನ್ನ ರೋಷ ನೂರು ವರುಷ (೧೯೮೦) - ಹೇ.. ಕಮಲಾ ಹೇ..ವಿಮಲಾ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಹೇ.. ಕಮಲಾ ಹೇ.. ವಿಮಲಾ ಹೇ.. ಸೀತಾ ಹೇ..ಗೀತಾ
ಬಿಡು ಬಿಡು ಬಿಡು ಬಿಡು ಓ ಭೂಪ ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ ಆಯಿತೇ ತಪ್ಪು ಲೆಕ್ಕವದೆಲ್ಲಾ
ಹೇ ರಾಮ ಹೀಗಾಯಿತೇ ಈ ಗುಟ್ಟು ರಟ್ಟಾಯಿತೇ
ವೇಷವ ಹಾಕಿದರೇನು ಹುಲಿಯೆಂದು ಹುಲ್ ತಿನ್ನೋದಿಲ್ಲ
ಮೋಸವ ಮಾಡಿದರೂನೂ ಈ ಹೆಣ್ಣು ಬದಲಾಗೋದಿಲ್ಲ
ಮಾಲಿಕನಂತೋ ಸೇವಕನಂತೋ
ಮಾವನ ಮಗನೋ ಮಧುಮಗ ನೀನೋ ಬೇಡಪ್ಪ ನಿನಗಿಂಥ ಬಿಂಕ
ಬಿಡು ಬಿಡು ಬಿಡು ಬಿಡು ಓ ಭೂಪ ನಿನ್ನ ಈ ಕೋಪ ಬಲ್ಲೆ ಪ್ರತಾಪ
ಜಾಗೀರುದಾರರ ಅಳಿಯ ತೋಳಿಬಾರೋ ಕುದುರೆ ಲಾಯ
ಊರ್ವಶಿ ಪತಿಯಾಗೋ ಗಂಡು ನೀ ಪುಸ್ಸೇನ್ನೋ ಫಿರಂಗೀ ಗುಂಡು
ರಾಯರ ಕುದುರೆ ಆಯಿತೇ ಕತ್ತೆ ಕಣ್ಣಲ್ಲಿ ಏಕೋ ಕೋಪವು ಮತ್ತೆ ತಪ್ಪಾಯ್ತು ಅನ್ನಪ್ಪ ಸಾಕು
ಬಿಡು ಬಿಡು ಬಿಡು ಬಿಡು ಓ ಭೂಪ ನಿನ್ನ ಈ ಕೋಪ ಬಲ್ಲೆ ಪ್ರತಾಪ
ನಿನ್ನಯ ಬೆಳೆಯು ಬೇಯಲೇ ಇಲ್ಲ ಆಯಿತೇ ತಪ್ಪು ಲೆಕ್ಕವದೆಲ್ಲಾ
ಹೇ ರಾಮ ಹೀಗಾಯಿತೇ ಈ ಗುಟ್ಟು ರಟ್ಟಾಯಿತೇ
--------------------------------------------------------------------------------------------------------
ನಿನ್ನಯ ಬೆಳೆಯು ಬೇಯಲೇ ಇಲ್ಲ ಆಯಿತೇ ತಪ್ಪು ಲೆಕ್ಕವದೆಲ್ಲಾ
ಹೇ ರಾಮ ಹೀಗಾಯಿತೇ ಈ ಗುಟ್ಟು ರಟ್ಟಾಯಿತೇ
--------------------------------------------------------------------------------------------------------
ನನ್ನ ರೋಷ ನೂರು ವರುಷ (೧೯೮೦) - ಬಯಸಿದ ಉಡುಗರೇ ಕೊಡಲು ಸಂಕೋಚವೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ ಎಸ್.ಜಾನಕೀ
ಗಂಡು : ಬಯಸಿದ ಉಡುಗೊರೆ ಕೊಡಲು ಸಂಕೋಚವೇ
ಹೆಣ್ಣು : ಮದುವೆಯಾ ಶುಭದಿನ ಬರಲಿ ನಾ ನೀಡುವೆ
ಗಂಡು : ಬಯಸಿದ ಉಡುಗೊರೆ ಕೊಡಲು ಸಂಕೋಚವೇ
ಹೆಣ್ಣು : ಮದುವೆಯಾ ಶುಭದಿನ ಬರಲಿ ನಾ ನೀಡುವೆ
ಗಂಡು : ಬರಲಿಹ ಸವಿದಿನ ನೆನಪಲಿ ನಲಿಯುವ ನಾವಾಡೀ
ಹೆಣ್ಣು : ಆಗುವ ಗಗನದೆ ಮುಗಿಲನು ದಾಟುವ ಬಾನಾಡಿ

ಗಂಡು : ಆಸೆಯ ಕಡಲ ಅಲೆಯಲಿ ತೇಲಿ
ಹೆಣ್ಣು : ಪ್ರೇಮ ದ್ವೀಪವ ತೀರವ ಸೇರಿ
ಇಬ್ಬರು : ಒಲವಿನ ರಾಜ್ಯದೇ ಮೆರೆಯುವಾ
ಬಯಸಿದ ಉಡುಗೊರೆ ಕೊಡಲು ಸಂಕೋಚವೇ
ಮದುವೆಯಾ ಶುಭದಿನ ಬರಲಿ ನಾ ನೀಡುವೆ
ಹೆಣ್ಣು : ವಾಲಗ ಊದುವ ಸಮಯದೇ ಮರೆವೇನು ನಾ ನನ್ನ
ಗಂಡು : ಮಂತ್ರವ ಘೋಷದ ನಡುವೆಯೇ ಬೆರೆವೆನು ನಾ ನಿನ್ನ

ಹೆಣ್ಣು : ನಮ್ಮದೇ ಗೂಡಲ್ಲಿ ಬಾಳುವ ಹರುಷದೇ ಒಂದಾಗಿ
ಗಂಡು : ನಮ್ಮದೇ ಲೋಕದೇ ದಿನಗಳ ಕಳೆಯುವ ಹಾಯಾಗೀ
ಗಂಡುಗಳಾರೂ ... ಹೆಣ್ಣುಗಳಾರೂ ..
ಹೆಣ್ಣು : ಆಹ್ಹಾ.. ಆರತಿಗೊಂದು.. ಕೀರುತಿಗೊಂದು
ಗಂಡು : ಮಮತೆಯ ಹೂಗಳ ಬೆಳೆಸುವಾ..
ಬಯಸಿದ ಉಡುಗೊರೆ ಕೊಡಲು ಸಂಕೋಚವೇ
ಹೆಣ್ಣು : ಮದುವೆಯಾ ಶುಭದಿನ ಬರಲಿ ನಾ ನೀಡುವೆ
--------------------------------------------------------------------------------------------------------
ನನ್ನ ರೋಷ ನೂರು ವರುಷ (೧೯೮೦) - ತೊಟ್ಟಿಗೆ ತೊಟ್ಟು ಗಂಟಲಾಗೆ ಬಿಟ್ಟು
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ತೊಟ್ಟಿಗೆ ತೊಟ್ಟು ಗಂಟ್ಲಾಗೇ ಬಿಟ್ಟು ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ ನೀ ಕಾಣದ ರಂಗಿದೇ ಹೆಣ್ಣಿನಲಿ

ಒಳಗಡೆ ಇಳಿದಾಗ ಏನೋ ಮತ್ತು ಅನುಭವ ಆದೋನ್ಗೆ ಮಜವು ಗೊತ್ತು

ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ಮರೆತೋಗುತ್ತೆ ಎಲ್ಲಾ ಅಂತಾ ಹೊತ್ತು
ತೊಟ್ಟಿಗೆ ತೊಟ್ಟು ಗಂಟ್ಲಾಗೇ ಬಿಟ್ಟು ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ ನೀ ಕಾಣದ ರಂಗಿದೇ ಹೆಣ್ಣಿನಲಿ
ಉರಿದಂಗೆ ಆದ್ರೂನೂ ಒಳಗಡೆ ಎಲ್ಲಾ ಆರಿಸೋಕೆ ಸ್ವಲ್ಪನೂ ಆಸೇ ಇಲ್ಲಾ

ಗುಂಡಿನ ಗಮ್ಮತ್ತು ಅಲ್ಲೇ ಎಲ್ಲಾ
ಗುಂಡಿನ ಗಮ್ಮತ್ತು ಅಲ್ಲೇ ಎಲ್ಲಾ ಕುಡಿದವರಿಗೇ ಪ್ರಪಂಚ ಲೆಕ್ಕಾ ಎಲ್ಲಾ
ತೊಟ್ಟಿಗೆ ತೊಟ್ಟು ಗಂಟ್ಲಾಗೇ ಬಿಟ್ಟು ಲೊಟ್ಟೆಯ ಹಾಕು ಅಲ್ಲಿದೆ ಗುಟ್ಟು
ಮಧುಪಾನದ ಗುಂಗಿದೆ ಕಣ್ಣಿನಲಿ ನೀ ಕಾಣದ ರಂಗಿದೇ ಹೆಣ್ಣಿನಲಿ
-------------------------------------------------------------------------------------------------------
ನನ್ನ ರೋಷ ನೂರು ವರುಷ (೧೯೮೦) - ದಿನ ದಿನ ಕ್ಷಣ ಕ್ಷಣ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ ಎಸ್.ಜಾನಕೀ
ಹೆಣ್ಣು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ ಕಾಯುತ ಸೋತಿದೆ ಕಣ್ಣೂ ನೀ ಕಾಣೆಯಾ
ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
ಗಂಡು : ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ ಬೆಂಕಿಯ ಬೇಗುದಿಯಲ್ಲೇ ಬೆಂಡಾದೇನಾ
ಚುಕ್ಕಾಣಿಯೂ ಇಲ್ಲದ ದೋಣಿಯ ಹಾಗೇ ಈ ಜೀವನ
ಹೆಣ್ಣು : ಪೂಜಿಸುವೇ.. ಸೇವಿಸುವೇ.. ಹೃದಯದೆ ನಿನ್ನಾ ಹಗಲಿರುಳು
ಗಂಡು : ಎದುರಿಸುವೇ ಜಗವನ್ನೇ.. ನನ್ನಯ ಸಂಗ ನೀನಿರಲೂ
ಹೆಣ್ಣು : ಚಳಿಗಾಳಿಯೂ ಬರಲೀ ಒಲವೊಂದಿರಲೀ ಎಂದೆಂದಿಗೂ
ಕನಸುಗಳಾ ರಂಗೀನಲಿ ಬಾಳಿಗೆ ಹಾಕುವ ರಂಗೋಲೀ ..
ಗಂಡು : ಸಂತಸದಾ ಚಿಲುಮೆಯಿರಲೀ ಮೀಯುವಾ ಬಾರಾ ನಾವಿಲ್ಲಿ
ಹೆಣ್ಣು : ಮಳೆ ಬಿಲ್ಲನ್ನೂ ಏರಿ .. ಭೂಮಿಗೇ ಜಾರಿ ನಾವಾಡುವ
ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ ಕಾಯುತ ಸೋತಿದೆ ಕಣ್ಣೂ ನೀ ಕಾಣೆಯಾ
ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ ಬೆಂಕಿಯ ಬೇಗುದಿಯಲ್ಲೇ ಬೆಂಡಾದೇನಾ
ಚುಕ್ಕಾಣಿಯೂ ಇಲ್ಲದ ದೋಣಿಯ ಹಾಗೇ ಈ ಜೀವನ
ಗಂಡು : ಅಪ್ಸರೆಯೋ .. ಮೋಹಿನಿಯೋ .. ನನ್ನದೇ ಆಳುವ ದೇವತೆಯೋ
ಹೆಣ್ಣು : ಕವಿದಿರುವ .. ಮೋಡಗಳ ಚದುರಿಸ ಬಂದ ಆ ರವಿಯೋ
ಈ ಜೀವನ ಬನಕೆ ಚೈತ್ರದ ತಂದ ವಾಸಂತಿಯೋ ..
ಇಬ್ಬರು : ದಿನ ದಿನ ಕ್ಷಣ ಕ್ಷಣ ನಿನಗಾಗಿಯೇ ಕಾಯುತ ಸೋತಿದೆ ಕಣ್ಣೂ ನೀ ಕಾಣೆಯಾ
ನೀನಾಡಿದ ಒಲವಿನ ಸವಿಮಾತೆಲ್ಲಾ ನೀ ಮರೆತೆಯಾ ..
ದಿನ ದಿನ ಕ್ಷಣ ಕ್ಷಣ ಎದೆಯಲ್ಲಿಹ ಬೆಂಕಿಯ ಬೇಗುದಿಯಲ್ಲೇ ಬೆಂಡಾದೇನಾ
ಚುಕ್ಕಾಣಿಯೂ ಇಲ್ಲದ ದೋಣಿಯ ಹಾಗೇ ಈ ಜೀವನ
--------------------------------------------------------------------------------------------------------
No comments:
Post a Comment