ನನ್ನವರು ಚಿತ್ರದ ಹಾಡುಗಳು
- ಬೆಳಕನು ಚೆಲ್ಲಿ
- ನಿನಗಾಗಿ ನಾನು
- ಜೇಬಿನಲ್ಲಿ ಇರಬೇಕು ರೂಪಾಯಿ
- ಏ ... ಪಮ್ಮಿ ಏ... ನಿಮ್ಮಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ
ಹೆಣ್ಣು : ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ... ದೀಪಾವಳಿ
ಕೋರಸ್ : ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ... ದೀಪಾವಳಿ
ಎಲ್ಲರು : ಆನಂದ ನೀಡುವ ಹಬ್ಬ ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ ನನ್ನವರ ಸೇರುವ ಹಬ್ಬ
ಹೆಣ್ಣು : ಕತ್ತಲೆಯ ಸೀಳಿ ಬಂತು ಹೊಳಪಿನ ರಂಗವಲ್ಲಿ
ಎಲ್ಲರು : ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ... ದೀಪಾವಳಿ
ದಿಬ್ಬದ ಮೇಲೆ ಉಬ್ಬುತ ಕುಣಿವ ಸಾವಿರ ಕಣ್ಣಿನ ನವಿಲಿನ ಗರಿಯ
ದಿಬ್ಬದ ಮೇಲೆ ಉಬ್ಬುತ ಕುಣಿವ ಸಾವಿರ ಕಣ್ಣಿನ ನವಿಲಿನ ಗರಿಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ಅಹ್ಹಹ್ಹಾ... ನೀನೂ.. ನೀನೇನೂ ಕೊಡ್ತಿಯೋ
ಶೃಧೆಯ ವಹಿಸಿ ಬಣ್ಣದಿ ಬಿಡಿಸಿದ ನಿನ್ನದೇ ಚಿತ್ರದ ಅರಳಿ ಎಲೆಯ
ಶೃಧೆಯ ವಹಿಸಿ ಬಣ್ಣದಿ ಬಿಡಿಸಿದ ನಿನ್ನದೇ ಚಿತ್ರದ ಅರಳಿ ಎಲೆಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನೀವೂ ಕೊಟ್ಟ ಕಾಣಿಕೆಯ ಮರೆಯೇನು ನಾನೆಂದೂ.. ಮರೆಯೇನು ನಾನೆಂದೂ..
ನಿಮ್ಮ ಪ್ರೀತಿ ಐಸಿರಿಯಾ ನೆನೆಯುವೇ ಎಂದೆಂದೂ... ನೆನೆಯುವೇ ಎಂದೆಂದೂ
ಎಲ್ಲರು : ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ... ದೀಪಾವಳಿಆನಂದ ನೀಡುವ ಹಬ್ಬ ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು ಹೊಳಪಿನ ರಂಗವಲ್ಲಿ
ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ... ದೀಪಾವಳಿ... ದೀಪಾವಳಿ
--------------------------------------------------------------------------------------------------------------------------
ನನ್ನವರು (೧೯೮೬) - ನಿನಗಾಗಿ ನಾನು
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಗಂಡು : ಹೇಹೇ... (ಅಹ್ಹಹಾ .. ) ಓ.. (ಅಹ್ಹಹಾ .. ) ಲಾಲಲಾ ಅಹಹಾ (ಅಹ್ಹಹಾ .. )
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ನಿನಗಾಗಿ ನಾನು ಗಂಡು : ನನಗಾಗಿ ನೀನು
ಹೆಣ್ಣು : ಈ ಲೋಕದ ಚಿಂತೆ ಮರೆತು ರಂಗಾಗಿದೆ ಸಂತೋಷ
ಗಂಡು :ಈ ರಾಗದ ಶಂಕೆ ಕಂಡು ದೂರಾಗಿದೆ ಸಂಕೋಚ
ಹೆಣ್ಣು : ಮಾತು ಮೌನ ಮೀರುತಲೀ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಮಾತು ಮೌನ ಮೀರುತಲೀ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಏಕೋ ಗಂಡು : ಏನೋ
ಹೆಣ್ಣು : ಜೀವ ಗಂಡು : ಭಾವ
ಇಬ್ಬರು : ದಿನ ದಿನ ಕ್ಷಣ ಕ್ಷಣ ಸವಿಯುವ ಬಾಳೂ
ಗಂಡು : ನಿನಗಾಗಿ ನಾನು ನನಗಾಗಿ ನೀನು
ಹೆಣ್ಣು : ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ನಿನಗಾಗಿ ನಾನು ಗಂಡು : ನನಗಾಗಿ ನೀನು
ಹೆಣ್ಣು : ಈ ಮೋಹದ ಮಿಂಚು ಹೊಳೆದು ಒಂದಾಗಿದೆ ಹೂ ಮಂಚ
ಗಂಡು : ಈ ದಾಹದ ಹಾದಿ ತೆರೆದು ಮುಂಬಾಗಿದೆ ಉಲ್ಲಾಸ
ಹೆಣ್ಣು : ನೋಟದೋಟ ಕೂಡುತಲಿ ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ನೋಟದೋಟ ಕೂಡುತಲಿ ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ಆಸೆ.. ಗಂಡು : ಬಾಷೆ
ಹೆಣ್ಣು : ಅಂದ .. ಗಂಡು : ಚೆಂದ
ಇಬ್ಬರು : ಹೊಸ ಹೊಸ ಸಿಹಿ ಸವಿ ತಂದಿದೆ ಪ್ರೀತಿ
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು ಈ ಬಂಧ ಅನುರಾಗದಾ ಸಂಬಂಧ
--------------------------------------------------------------------------------------------------------------------------ಗಂಡು : ನಿನಗಾಗಿ ನಾನು ನನಗಾಗಿ ನೀನು ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ಅಹ್ಹಹ್ಹಹಾ ಗಂಡು : ಲಲಲ್ಲಲ್ಲಾ ಲಲಲಲಾಲಾಲಾ
ನನ್ನವರು (೧೯೮೬) - ಜೇಬಿನಲ್ಲಿ ಇರಬೇಕು ರೂಪಾಯಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಶ್ಯಾಮ ಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ.
ವ್ಹಾರೆವ್ಹಾ... ವ್ಹಾರೆವ್ಹಾ... ವ್ಹಾರೆವ್ಹಾ..ವ್ಹಾ ವ್ಹಾರೆವ್ಹಾ..ವ್ಹಾ
ಜೇಬಲಿ ಇರಬೇಕು ರೂಪಾಯಿ ರೂಪಾಯಿ ಇಲ್ದವನೂ ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ ಯಾರೂ ಇಲ್ಲಿ ದೊಡ್ಡರಲ್ಲಾ
ಹೂಂಹೂಂ ಯಜಮಾನನೇ ಇಲ್ಲಿ ರೂಪಾಯಿ.. ರೂಪಾಯಿ... ಹೇಹೆಹೆ
ಜೇಬಲಿ ಇರಬೇಕು ರೂಪಾಯಿ ರೂಪಾಯಿ ಇಲ್ದವನೂ ಬಡಪಾಯಿ
ಜೇಬಲಿ ಇರಬೇಕು ರೂಪಾಯಿ ರೂಪಾಯಿ ಇಲ್ದವನೂ ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ ಯಾರೂ ಇಲ್ಲಿ ದೊಡ್ಡರಲ್ಲಾ
ಹೇಹೇಹೇಹೇ ಯಜಮಾನನೇ ಇಲ್ಲಿ ರೂಪಾಯಿ.. ರೂಪಾಯಿ... ಹೇಹೆಹೆ
ಲೋಕು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ ಲಜ್ಜೆ ಬಿಟ್ಟು ಹೊಗಳೋದೆಲ್ಲಾ ದುಡ್ಡಿಗಾಗಿ
ಲೋಕು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ ಲಜ್ಜೆ ಬಿಟ್ಟು ಬೊಗಳೋದೆಲ್ಲಾ ದುಡ್ಡಿಗಾಗಿ
ಪ್ರೀತಿ ಪ್ರೇಮ ಸ್ನೇಹದ ಸೋಗು ದುಡ್ಡಿಗಾಗಿ ಇಂಥ ಜನರ ನಂಬಬೇಕು ದಡ್ಡರಾಗಿ
ಝಣ ಝಣ ಹಣವಾ ತೋರಿಸಬೇಕು ಬೆರಳಲಿ ಜನವ ಆಡಿಸಬೇಕು
ಝಣ ಝಣ ಹಣವಾ ತೋರಿಸಬೇಕು ಬೆರಳಲಿ ಜನವ ಆಡಿಸಬೇಕು
ಗ್ಲಾಸಿಗೆ ಗ್ಲಾಸು ಸೇರಿಸಬೇಕು ಓಹ್ಹೋಹ್ಹೋಹ್ಹೋಹೋ... ಚಿಯರ್ಸ್...ಆಗಲೇ ಮಾನವ ನಿನಗೆ ಗೌರವ ಅಹ್ಹಹ್ಹಹ್ಹ..
ಜೇಬಲಿ ಇರಬೇಕು ರೂಪಾಯಿ ರೂಪಾಯಿ ಇಲ್ದವನೂ ಬಡಪಾಯಿ .. ಅಹ್ಹಹ್ಹಹ್ಹ..
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೇ ಇಲ್ಲಿ ಸ್ವಂತ ಮನೆಯೂ ಬೇಕೂ
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೇ ಇಲ್ಲಿ ಸ್ವಂತ ಮನೆಯೂ ಬೇಕೂ
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದೂ
ಆದರೂನು ಆಸ್ತಿ ಮಾಡೋ ದಾಹ ಇಂಗದು
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದೂ
ಆದರೂನು ಆಸ್ತಿ ಮಾಡೋ ದಾಹ ಇಂಗದು
ಹಣವನು ಗಳಿಸೋ ಸಾಹಸ ಬೇಕೋ.. ಹ್ಹಾ...ಮಹಡಿಗೆ ಮಹಡಿ ಏರಿಸಬೇಕು
ಹಣವನು ಗಳಿಸೋ ಸಾಹಸ ಬೇಕೋ.. ..
ಮಹಡಿಗೆ ಮಹಡಿ ಏರಿಸಬೇಕು
ಜಗದೊಳು ಎಲ್ಲರ ಮೀರಿಸಬೇಕು.. ಅಂಡರ್ ಸ್ಟಾಂಡ್
ಆಗಲೇ ಮಾನವ ನಿನಗೇ ಗೌರವ ಹೇಹೇಹೇ
ಜೇಬಲಿ ಇರಬೇಕು ರೂಪಾಯಿ ರೂಪಾಯಿ ಇಲ್ದವನೂ ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ ಯಾರೂ ಇಲ್ಲಿ ದೊಡ್ಡರಲ್ಲಾ.. ಹಹ್ಹಹ್ಹಾ ..
ಯಜಮಾನನೇ ಇಲ್ಲಿ ರೂಪಾಯಿ.. ರೂಪಾಯಿ... ಹೇಹೆಹೆ
ರೂಪಾಯಿ ರೂಪಾಯಿ ಮನಿ ಮನಿ ಮನಿ ರಪ್ಪಪ್ಪಪ್ಪಪಪ ರೂಪಾಯಿ
ರುರುರೂರೂಪಾಯಿ ರಪ್ಪಪ್ಪಪ್ಪಪಪ ರೂಪಾಯಿರೂಪಾಯಿ
--------------------------------------------------------------------------------------------------------------------------
ನನ್ನವರು (೧೯೮೬) - ಏ... ಪಮ್ಮಿ ಏ... ನಿಮ್ಮಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ.
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೇ ಸಾಕು ಲವ್ವು ಮಾಡುವೇ...
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ.. ಸ್ವಾಮಿ
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ......
ಮೈಸೂರ ಬಾಲೇ ಮಲ್ಲಿಗೇ ಮಾಲೆ ಮಂಗಳೂರ ಹೆಣ್ಣೂ ಮೀನಿನ ಕಣ್ಣೂ
ಲಂಗದ ಬೆಡಗಿ ಕಾರವಾರ ಹುಡುಗಿ ನಾಜೂಕು ನಾರಿ ಬೆಳಗಾವಿ ಪೋರಿ
ಬೆಂಗಳೂರು ಬಿಜಾಪುರೂ ಬೀದರ್ ದಾವಣಗೇರಿ ಕೋಲಾರ್ ಕಲಬುರ್ಗಿ ಹೊಸಪೇಟ್ ಅರಸಿಕೇರಿ
ಊರು ಊರಿನ ಬೀದಿ ಬೀದಿಯಲು ಕಣ್ಣೂ ಸೆಳೆಯುವಾ ಕನ್ಯೆಯೂರೀಹರೂ
ಮೈಸೂರ ಬಾಲೇ ಮಲ್ಲಿಗೇ ಮಾಲೆ ಮಂಗಳೂರ ಹೆಣ್ಣೂ ಮೀನಿನ ಕಣ್ಣೂ
ಲಂಗದ ಬೆಡಗಿ ಕಾರವಾರ ಹುಡುಗಿ ನಾಜೂಕು ನಾರಿ ಬೆಳಗಾವಿ ಪೋರಿ
ಬೆಂಗಳೂರು ಬಿಜಾಪುರೂ ಬೀದರ್ ದಾವಣಗೇರಿ ಕೋಲಾರ್ ಕಲಬುರ್ಗಿ ಹೊಸಪೇಟ್ ಅರಸಿಕೇರಿ
ಊರು ಊರಿನ ಬೀದಿ ಬೀದಿಯಲು ಕಣ್ಣೂ ಸೆಳೆಯುವಾ ಕನ್ಯೆಯೂರೀಹರೂ
ಒಬ್ಬಳಾದರೂ ಸಿಕ್ಕರೇ ಸಾಕು ಲವ್ವು ಮಾಡುವೇ...
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ.. ದೇವಾ
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ...... ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೇ ಸಾಕು ಲವ್ವು ಮಾಡುವೇ...
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ.. ಜೈ ಬಜರಂಗ ಬಲೀ...
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ.... ಹೂ.. ಹೂ ಹ್ಹಾ..
ಹೇ..ಹೇ.. ಹೇ..
ಈ ಹುಡುಗಿ ನೋಡು ಧಾರವಾಡ ಫೇಡೆ ಈ ತಂಟ ಕನ್ಯೆ ಮಂಡ್ಯದ ಬೆಣ್ಣೆ
ದುರ್ಗದ ಹೆಣ್ಣು ಸ್ವರ್ಗದ ಹಣ್ಣು ಹೂವಲ್ಲಿ ನಡುವೂ ಹುಬ್ಬಳ್ಳಿ ಚೆಲುವು
ಬಳ್ಳಾರಿ ಬೇಲೂರು ಮಡಿಕೇರಿ ಕುಂದಾಪುರೂ ಶಿವಮೊಗ್ಗ ಹಾಸನ ತುಮುಕೂರು ತಿಪುಟೂರ
ಊರು ಊರಿನ ಬೀದಿ ಬೀದಿಯಲು ಕಣ್ಣೂ ಸೆಳೆಯುವಾ ಕನ್ಯೆಯೂರೀಹರೂ
ಹೇ..ಹೇ.. ಹೇ..
ಈ ಹುಡುಗಿ ನೋಡು ಧಾರವಾಡ ಫೇಡೆ ಈ ತಂಟ ಕನ್ಯೆ ಮಂಡ್ಯದ ಬೆಣ್ಣೆ
ದುರ್ಗದ ಹೆಣ್ಣು ಸ್ವರ್ಗದ ಹಣ್ಣು ಹೂವಲ್ಲಿ ನಡುವೂ ಹುಬ್ಬಳ್ಳಿ ಚೆಲುವು
ಬಳ್ಳಾರಿ ಬೇಲೂರು ಮಡಿಕೇರಿ ಕುಂದಾಪುರೂ ಶಿವಮೊಗ್ಗ ಹಾಸನ ತುಮುಕೂರು ತಿಪುಟೂರ
ಊರು ಊರಿನ ಬೀದಿ ಬೀದಿಯಲು ಕಣ್ಣೂ ಸೆಳೆಯುವಾ ಕನ್ಯೆಯೂರೀಹರೂ
ಒಬ್ಬಳಾದರೂ ಸಿಕ್ಕರೇ ಸಾಕು ಲವ್ವು ಮಾಡುವೇ... ಹ್ಹಾ
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ.. ಜೈ ಹನುಮಾನ್
ಆಂಜನೇಯಾ ಸ್ವಾಮಿ ನಿನಗೆ ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ ಏ.. ಡುಮ್ಮಿ...... ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಕೊನೆಗೂ ನನಗೆ ದಕ್ಕಲಿಲ್ಲವೋ
ಆಂಜನೇಯಾ ಸ್ವಾಮಿ ನಿನಗೆ ಕರುಣೆಯಿಲ್ಲವೋ ... ಅಹ್ಹಹ್ಹ..
ಆಂಜನೇಯಾ ಸ್ವಾಮಿ ನಿನಗೆ ಕರುಣೆಯಿಲ್ಲವೋ ... ಹ್ಹಹ್ಹಹಹ್ಹ.. ಹೋ ಹೋ
--------------------------------------------------------------------------------------------------------------------------
No comments:
Post a Comment