1328. ನೀ ನಕ್ಕಾಗ (೧೯೮೫)


ನೀ ನಕ್ಕಾಗ ಚಲನಚಿತ್ರದ ಹಾಡುಗಳು
  1. ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ..
  2. ಆನೆ ಹೊಟ್ಟೆ ಡುಮ್ಮಾ
  3. ಪ್ರೀತಿಯ ಬನದಲ್ಲಿ
  4. ಒಲವಿನ ನೋವಿಗೇ..
ನೀ ನಕ್ಕಾಗ (೧೯೮೫) - ಬನದಲ್ಲಿ ಕೋಗಿಲೆ ಕೊಳದಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಎಂ.ಎನ್.ವ್ಯಾಸರಾವ, ಗಾಯನ : ಎಸ್.ಪಿ.ಬಿ

ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ ...ಆಹಾಹಾ...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ
ಮನದಲ್ಲಿ ಯಾರನೂ ಕೂಗಿ ...ಓಓಓ
ಮನದಲ್ಲಿ ಯಾರನೂ ಕೂಗಿ ...ಆಆಆ
ಕಲಕಲ ಮಾಡುತಿದೇ...ಚಿಲಿಪಿಲಿ ಹಾಡುತಿದೇ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೇ..ಎಲ್ಲೆಲ್ಲೂ ಆನಂದ... ಹೋಯ್...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ
ಮನದಲ್ಲಿ ಯಾರನೂ ಕೂಗಿ ...ಓಓಓ
ಮನದಲ್ಲಿ ಯಾರನೂ ಕೂಗಿ ...ಆಆಆ

ಕೇಳೇ..ನನ್ನ ಗೆಳತೀ.....ಗೆಳತೀ..ನೀ..ಈಗಲೇ...ಓಯ್
ಕಣ್ಣಿನ ಕಾಡಿಗೆ ಬಾ ಎಂದಿದೆ  ಕುಂಕುಮ ಹಣೆಯಲಿ ರಂಗೇರಿದೇ
ಮುದ್ದಾದ ಮೂಗೂತಿ ಮಿಂಚಾಡಿದೆ
ಆಸೆಯ ಗೊಂಚಲು ತೂಗಾಡಿದೆ
ಮಾತೆಲ್ಲ ಮೌನಕ್ಕೆ ಶರಣಾಗಿರೇ..
ಪ್ರೀತಿಯ ಇಂಚರ ಎದೆ ತುಂಬಿದೆ
ಎದೆಯಲ್ಲಿ ಠುವ್ವಿ ಠುವ್ವಿ ಮನದಲ್ಲಿ
ಸುವ್ವಿ ಸುವ್ವಿ ತನುವಲ್ಲಿ ಆಡಿದೆ ತೂಗೀ...ಆಆಆ...

ಕಾಣೆ ನನ್ನ ಸಂಗಾತೀ.....ಸಂಗಾತೀ..ನೀನೆಲ್ಲೇ....ಹೋಯ್..
ಮರೆಯಲ್ಲಿ ಅರಳಿದ ಮಂದಾರವೇ..
ಹೂ ನಗೆ ನಂದನ ನಿಂದಾಗಿದೇ...
ನಲಿಯುವ ನವಿಲೇ..ನೀನಾಗಿರೇ...
ಕುಣಿಯುವ ಮಯೂರ ನಾನಾಗುವೇ..
ಚೆಲುವಿನ ಸಿರಿಯೇ ನೀನಾಗಿಹೇ..
ಒಲವಿನ ಸೆಳೆಯ ನಾ ತಂದಿಹೇ..
ಅರೇ..ನದಿಯಾಗಿ ಹೊಮ್ಮಿ ಹೊಮ್ಮಿ... ನವಿಲಾಗಿ ಚಿಮ್ಮಿ ಚಿಮ್ಮಿ
ಮನವೆಲ್ಲ ಹಾಡಿದೆ ಕೂಗಿ...ಆಆಆ.. ಓ ಓಓ..
ಕಲಕಲ ಮಾಡುತಿದೇ...ಚಿಲಿಪಿಲಿ ಹಾಡುತಿದೇ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೇ..ಎಲ್ಲೆಲ್ಲೂ ಆನಂದ... ಹೋಯ್...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ ...ಆಹಾಹಾ...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೇ
ಮನದಲ್ಲಿ ಯಾರನೂ ಕೂಗಿ ...ಓಓಓ
ಮನದಲ್ಲಿ ಯಾರನೂ ಕೂಗಿ ...ಆಆಆ
-----------------------------------------------------------------

ನೀ ನಕ್ಕಾಗ (೧೯೮೫) -  ಆನೆ ಹೊಟ್ಟೆ ಡುಮ್ಮಾ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಎಂ.ಎನ್.ವ್ಯಾಸರಾವ, ಗಾಯನ : ಎಸ್.ಪಿ.ಬಿ,ಎಸ್.ಜಾನಕೀ

ಗಂಡು: ಆನೆ ಹೊಟ್ಟೆ ಡುಮ್ಮಣ್ಣ ನಾನು ಅಂತಾ ಹೇಳ್ತೀಯಾ..
            ಏನೇ..ಕೊಳಕಿ ಗೊಣ್ಣೆ ಪೋರಕೆ ಕೋಟ್ರೆ ಬಿಳ್ತಿಯಾ
             ಆನೆ ಹೊಟ್ಟೆ ಡುಮ್ಮಣ್ಣ ನಾನು ಅಂತಾ ಹೇಳ್ತೀಯಾ..
             ಏನೇ..ಕೊಳಕಿ ಗೊಣ್ಣೆ ಪೋರಕೆ ಕೋಟ್ರೆ ಬಿಳ್ತಿಯಾ
ಹೆಣ್ಣು: ಮುದ್ದು ಪ್ಲಾನ್ ಮನುಷ್ಯ ಹುಡುಗಿ ನೋಡು ನೀ ಪಕ್ಕ..
          ಈ ಡುಮ್ಮಾ.. ಡುಮ್ಮಾ.. ಬರತಾಳಪ್ಪಾ ನಮ್ಮಮ್ಮಾ..
ಗಂಡು: ಆನೆ ಹೊಟ್ಟೆ ಡುಮ್ಮಣ್ಣ ನಾನು ಅಂತಾ ಹೇಳ್ತೀಯಾ..
            ಏನೇ..ಕೊಳಕಿ ಗೊಣ್ಣೆ ಪೋರಕೆ ಕೋಟ್ರೆ ಬಿಳ್ತಿಯಾ

ಗಂಡು: ಸ್ಕೂಲಿಂದ ಕದ್ದು ಆಟಕ್ಕೆ ಎದ್ದು ನಾನಾಗಲ್ಲ ಬಿದ್ದು
           ಓಡುತ್ತಾ ನಿನ್ನ ಹತ್ರ ಬಂದೇ... ಫಾರ್ಮ್ ಸುತ್ತೋಣ
           ಬಾ ಮರ ಹತ್ತೋಣ ಮರ ಕೋತಿ ಆಡೋಣ
           ಸ್ಕೂಲಲ್ಲಿ ಏನಿದೇ ಹೇಳೇ....
ಹೆಣ್ಣು: ಹೋಗಲೇ ದಡ್ಡ ನೀನೇಂತೂ ಪೆದ್ದ ಹೋದನೂ ಶಿಕ್ಷೇ
           ಆಗುವೇ.. ನೀ ಎಮ್ಮೇ ಕೋಣ ಬೈದರೇ ನಿನ್ನಮ್ಮ
           ಹೋಡೆದರೇ ನನ್ನನ್ನೂ ಆ ಗತಿ ಬೇಡಪ್ಪಾ ಹೋಗೋಣ
            ಕ್ಲಾಸೀಗೇ ಜಾಣ
ಗಂಡು: ಪಾಠ ಬೇಡ ಹೋಗೇ       ಹೆಣ್ಣು: ಆಟ ಸಾಕು ಬಾರೋ
ಗಂಡು: ಕಾಟ ಕೋಡಬೇಡ.         ಹೆಣ್ಣು: ಹಠ ಮಾಡಬೇಡಪ್ಪಾ
ಗಂಡು: ಹೋಡಿತೀನೀ ನೋಡು 
ಹೆಣ್ಣು: ಬಡಿತೀನೀ ನೋಡು ಬರದಿದ್ದರೇ ಬಿದ್ದಿರೂ ಆನೆ ಹೊಟ್ಟೆ
           ನೀ ಡುಮ್ಮಾ
ಗಂಡು: ಹೊಟ್ಟೆ ಡುಮ್ಮಣ್ಣ ನಾನು ಅಂತಾ ಹೇಳ್ತೀಯಾ..(ಆಹಾ)
          ಏನೇ..ಕೊಳಕಿ ಗೊಣ್ಣೆ ಪೋರಕೆ ಕೋಟ್ರೆ ಬಿಳ್ತಿಯಾ
          (ಅಯ್ಯಯ್ಯೋ)

ಹೆಣ್ಣು: ನಿನ್ನ ಸೈಕಲೂ ಪಂಚರನ್ನ ಅನ್ನಯ್ಯ.. ನಿನ್ನಾ ಸಹವಾಸ
           ಕೇಳ್ತಾರಲ್ಲೋ..ಸುಳ್ಳಯ್ಯಾ..
           ನಿನ್ನ ಸೈಕಲೂ ಪಂಚರನ್ನ ಅನ್ನಯ್ಯ.. ನಿನ್ನಾ ಸಹವಾಸ
           ಡೆಂಜರೋಲ್ಲೂ..ಸುಳ್ಳಯ್ಯಾ..
ಗಂಡು; ಸಾರೀ.. ನಾ ಕೇಳ್ತೀನೀ..ಸೀರೆಯನ್ನೂ ತರ್ತೀನೀ..
            ಸಾರೀ.. ನಾ ಕೇಳ್ತೀನೀ..ಸೀರೆಯನ್ನೂ ತರ್ತೀನೀ..
            ಬದುಕೇ ದುಡ್ಡಿಲ್ಲ ತಾಳಿ ಮಾರಿ ತರ್ತೀನಿ
ಹೆಣ್ಣು: ನನ್ನ ಬಾಳಲ್ಲಿ ಹಸಿರಾಗೀ ನೀ ಬಂದೇ
ಗಂಡು: ನನ್ನ ಎದೆಯಲ್ಲಿ ಉಸಿರಾಗಿ ನೀ  ನಿಂತೇ...
ಹೆಣ್ಣು: ನನ್ನ ಬಾಳಲ್ಲಿ ಹಸಿರಾಗೀ ನೀ ಬಂದೇ
ಗಂಡು: ನನ್ನ ಎದೆಯಲ್ಲಿ ಉಸಿರಾಗಿ ನೀ  ನಿಂತೇ...
ಹೆಣ್ಣು: ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..
ಗಂಡು: ರಾಮಚಂದ್ರಸ್ವಾಮಿ..... ಆಂಜನೇಯ ಸ್ವಾಮಿ
           ಕಾಪಾಡಿಸಿ... ಸೇವ್ ಹರ್....
ಹೆಣ್ಣು: ನೀನೇ ತಾನೇ ಮಾಡಿ ದೇವರ್ನಾಕೇ ಬೇಡತೀ....
           ಆಸ್ಪತ್ರೆಗೆ ಹೋಗೋಣ.. ನಡೀ..ಆಸ್ಪತ್ರೆ ಸೇರೋಣ..
ಗಂಡು: ನಿನ್ನ ನಗು ಮಾಸದೇ ನೋವು ತಾಕದೇ ನಮ್ಮ ಪ್ರೇಮಿ
            ಪ್ರೇ ಕಣ್ಣಲ್ಲಿ
ಹೆಣ್ಣು: ಹೊತ್ತು ಮೀರಿ ಹೋಗಿದೆ ನೋವು ಜಾಸ್ತಿಯಾಗಿದೆ
           ನೀ ಇನ್ನೂ ಇತ್ಲೇ ನಿಲ್ಲೀ...

ಗಂಡು: ಅಬ್ಬಬ್ಬಾಬ್ಬಾ.. ಆರತಿಗೊಂದು ಕೀರ್ತಿಗೊಂದು ಸಾಕು
           ಎಂದು ಹೇಳಿ ಬಂದ್ರೇ.. ಮಕ್ಕಳನ್ನೂ ಒಂದೊಂದೇ
           ಒಂದೊಂದೇ ಹೇರುವೇ ಸಂಜೀವಿನಿಯರ ನಿಂಗಿ
           ನಿನ್ನೇ ಹೇಗೆ ಮಾಡಲಿ ಸಂದಿ ಹೆಣ್ಣಿನಲ್ಲಿ ನಾ ಚಿಂದಿಯಾಗಿ
           ಹೋದೆ..ಬೇಡ..ಬೇಡ..ಬೇಡ..ಬೇಡ...ಬೇಡ..ಸಾಕಪ್ಪಾ
ಎಲ್ಲರು: ಯಾವಾಗ ಅದನ ರಚನೆ ಮಾಡ್ತೀಯಾ ನೀನೂ
             ಯಾವಾಗ ಬೇರರ ಸಂಗಡ ಆಡ್ತೀಯಾ....
             ಯಾವಾಗ ಅದನ ರಚನೆ ಮಾಡ್ತೀಯಾ ನೀನೂ
             ಯಾವಾಗ ಬೇರರ ಸಂಗಡ ಆಡ್ತೀಯಾ....
-----------------------------------------------------------------

ನೀ ನಕ್ಕಾಗ (೧೯೮೫) -    ಪ್ರೀತಿಯ ಬನದಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಸೀ.ಎಸ್.ಮಂಜು, ಗಾಯನ : ಎಸ್.ಪಿ.ಬಿ

ಆ..ಪ್ರೀತಿಯ ಬನದಲ್ಲಿ ನಿನ್ನಾ ಹೆಸರಾ ಹೇಳೀ...
ಹೂವೊಂದು ಅರಳಿತು ನಗುತಾ...
ತಣ್ಣನೆ ತಂಗಾಳಿ.. ಮೆಲ್ಲನೇ..ಮೈ ಸವರೀ...
ಹೇಳಿತೂ..ಈಗೊಂದೂ ಕಥೆಯ..
ನೀ..ನಕ್ಕಾಗ... ನೀ ನಕ್ಕಾಗ...

ಮುಂಜಾನೆ ಮಂಜು ಬಂಜಾದ ನೆಲವಾ...
ತೊಳೆಯುವ ಪನ್ನೀರನಲ್ಲಿ ...ಆಆಆ..ಓಓಓ...
ಬೆಟ್ಟದ ಮೂಡಿಗೆ ಮೂಡಿದ ಸೂರ್ಯ ಹಚ್ಚಿಟ್ಟ ಪಂಜೊಂದನಿಲ್ಲಿ
ಮೆಲ್ಲನೆ.. ನಾಚಿತ್ತೂ...ಹೂವೂ ಕೆಂಪಾಗಿ ಬನವೆಲ್ಲಾ...
ಮಾಡಿತು ಕೊನೆದೂ..ನೀ..ನಕ್ಕಾಗ.. ನೀ..ನಕ್ಕಾಗ..

ಅಲೆ ಅಲೆಯಾಗಿ ಎಲೆಯಲ್ಲಾ ಆಡೀ....
ಉಯ್ಯಾಲೆ ಆಡಿತೂ..ಒಲವೂ..ಓಓಓ..
ಕಾಮನಬಿಲ್ಲಿಗೆ.. ಮಲ್ಲಿಗೆಹಾರ ಹಿಡಿದಾದ ಈ ಲೋಕವೂ..
ಬಂಗಾರವಾಗಿತ್ತೂ... ಶೃಂಗಾರ ಬೇಕೆಂದೂ...
ಮುಂಗಾರೂ ಸುರಿಸಿತು ಮುತ್ತೂ.,... ನೀ..ನಕ್ಕಾಗ...
ನೀ..ನಕ್ಕಾಗ...ನೀ..ನಕ್ಕಾಗ...
-----------------------------------------------------------------

ನೀ ನಕ್ಕಾಗ (೧೯೮೫) -   ಒಲವಿನ ನೋವಿಗೇ..
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಎಂ.ಎನ್.ವ್ಯಾಸರಾವ, ಗಾಯನ : ಎಸ್.ಪಿ.ಬಿ

ಒಲವಿನ ನೋವಿಗೇ....ಯಾರೇನೂ ಹೇಳುವರೂ...
ಹೃದಯದ ಬಡಿದೂ....ಈ ಎಲೆಯಾಗಿ  ಇಂದೂ..
ಯಾಕೇ ಕಾದಿದೆ ನಡಿ ಪ್ರೇಮ ಕಟ್ಟದೂ...
ಕಲ್ಲಿಗೇ.. ಈ ಸುಮ್ಮನೇ...ಅತ್ತರೇ.....
ಸಂತೋಷ ಸಂದರ್ಭದಲ್ಲಿ ಶೋಕ ಗೀತೆ ಹಾಡ್ತೀಯಾ...ಇಂದೂ..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸೂ..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸೂ..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸೂ..
ಪ್ರೀತಿಯಲ್ಲಿ ಎಂಥಾ....ವಿಧಿಯೇ...ನೀನೇಕೇ ಕಹಿಯಾದೇ...

ನೀ ನಗುವಾಗ ತೇಲಿ ತೇಲಿ ಈ ನನ್ನ ಜೀವಾ...
ನಗುವಾಗ ತೇಲಿ ತೇಲಿ ಈ ನನ್ನ ಜೀವಾ...
ಮರೆಸಿತು ನನ್ನ ನೋವ ನೀ ತಂದ ಭಾವ ಒಲವೇ...ಏಏಏ...
ಬಯಕೆ ಎಲ್ಲೇ ದಾಟಿ ನಾ ನಡೆದು ಹೋದೆ ಹೃದಯಕೆ ಬೆಂಕಿ
ಗಾಳಿ ನೀ ಬಿಸಿ ಹೋದೆ ಅಂದು ಖಾಲಿ ಗೂಡಾಗಿದೆ
ನಗೆ ಹಕ್ಕಿ ಹಾರೋಗಿದೇ...ನಗುನೇ.. ಹುಸಿಸುಳ್ಳಾದರೂ
ಅನ್ನದಾ ಆಹ್ ಇಂಗೂ ಇದೇ ಓ ನನ್ನ ಜೀವಾ...
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸೂ..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸೂ..
ಪ್ರೀತಿಯಲ್ಲಿ ಎಂಥಾ....ವಿಧಿಯೇ...ನೀನೇಕೇ ಕಹಿಯಾದೇ.

ನಾ ಅಳುವಾಗ ಖಾಲಿ ಪ್ರೀತಿ ನೀ ನನ್ನ ನೋವಾ...
ಅಳುವಾಗ ಖಾಲಿ ಖಾಲಿ ನೀ ನನ್ನ ಲೋಕಾ...
ಬರಡಾಗಿ ನನ್ನ ಜೀವಾ ನಾನಾದೇ..ಮೂಕ.. ಓಲವೇ...ಏಏಏ...
ಮನಸ್ಸಿನ ಮೌನಾ ಮೀಟಿ ಶೃತಿಯಾದೇ ನೀನೂ
ಅನುರಾಗ ನೀ ತೋರಿಸಿ ಎದೆಪಾನ ನೀ ನಿಂದಿಸಿ
ಸೆರೆ ಮಾಡಿ ನೀ ಬಂಧಿಸಿ ಮರೆಯಾಗಿ ನೀ ವಂಚಿಸಿ
ಓ..ನನ್ನ ಜೀವಾ...
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸೂ..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸೂ..
ಪ್ರೀತಿಯಲ್ಲಿ ಎಂಥಾ....ವಿಧಿಯೇ...ನೀನೇಕೇ ಕಹಿಯಾದೇ.
-----------------------------------------------------------------

No comments:

Post a Comment