1302. ನೀಲಾ (2001)


ನೀಲಾ ಚಲನಚಿತ್ರದ ಹಾಡುಗಳು
  1. ಆ..ಮೇರು ಈ ಮೇರು ಆಸೆಯ ಹೂ ತೇರು
  2. ಎದೆಯಾಗ ಎಕತಾರಿ‌ ನರನರವು ಕಿನ್ನೂರಿ
  3. ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
  4. ಕಣ್ಣನು ಮುಚ್ಚಬಹುದು
  5. ಚಿತ್ತಿ ಸುರಿಮಳೆಯಂತೆ ಚಿತ್ತಾರಿ
  6. ತೆರೆ ತೆರೆಯೆ ನಿನ್ನಾ ದಾರಿ
  7. ಕೊಟ್ಟ ದನಿಯ ಕೊಟ್ಟಂತೆ
  8. ಈ ನಾಡ ಮಣ್ಣಿನಲ್ಲಿ ಹೂವಾಗಿ
  9. ಧೋ..ಧೋ..ಸುರಿ ಮಳೆಯು
  10. ಹೆಜ್ಜೆ ಹೆಜ್ಜೆ ಗೆಜ್ಜೆ ಗೆಜ್ಜೆ
ನೀಲಾ (2001) -  ಆ..ಮೇರು ಈ ಮೇರು ಆಸೆಯ ಹೂ 
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಕೋಟಿಗನಳ್ಳಿ ರಾಮಯ್ಯ, ಗಾಯನ: ವಾಣಿಜಯರಾಮ, ರಾಜೇಶ

ಹೆಣ್ಣು: ಆಆಆ.... ಆ ಮೇರು ಈ ಮೇರು ಆಸೆಯ ಹೂ ತೇರು
           ಏಳೆ ಏಳೇಯೋ ಬಸವಣ್ಣ ತುಂಬೈತೇ ಕಣ್ಣಾ
           ಎಷ್ಟೊಂದು ಬಣ್ಣ
ಇಬ್ಬರು: ತುಂಬೈತೆ ಕಣ್ಣಾ ಎಷ್ಟೊಂದು ಬಣ್ಣ
ಗಂಡು: ಆ ಗಾಲಿ ಈ ಗಾಲಿ ಉರುಳುರುಳಿ ಸಾಗಲಿ
            ಜೋಗುಳದ ನೆನಪಿರಲಿ ಜೀವಕ್ಕೆ ಜೊತೆ ಇರಲಿ
ಹೆಣ್ಣು: ತುಂಬೈತೆ ಕಣ್ಣಾ ಎಷ್ಟೊಂದು ಬಣ್ಣ

ಹೆಣ್ಣು: ಆ.. ಊರು ಈ ಊರು ತಿರುಗಿದರು ಈ ಸೂರು
           ಎಲ್ಲೈತೋ ನನ್ನೂರು ಸಿಗದಲ್ಲಾ ತವರೂರು
ಇಬ್ಬರು: ತುಂಬೈತೆ ಕಣ್ಣಾ ಎಷ್ಟೊಂದು ಬಣ್ಣ

ಗಂಡು: ಊರೂರು ತವರೂರು ಎಲ್ಲಾರು ನಮ್ಮೋರು
ಇಬ್ಬರು: ಊರೂರು ತವರೂರು ಎಲ್ಲಾರು ನಮ್ಮೋರು
ಹೆಣ್ಣು: ಕನಸಿಗರೇ ಗೆಲ್ಲೋರು ಉಯ್ಯೋಣ ಈ ತೇರು
ಗಂಡು: ತುಂಬೈತೆ ಕಣ್ಣಾ ಎಷ್ಟೊಂದು ಬಣ್ಣ
ಹೆಣ್ಣು: ಆಆಆ.... ಆ ಮೇರು ಈ ಮೇರು ಆಸೆಯ ಹೂ ತೇರು
           ಏಳೆ ಏಳೇಯೋ ಬಸವಣ್ಣ ತುಂಬೈತೇ ಕಣ್ಣಾ
           ಎಷ್ಟೊಂದು ಬಣ್ಣ
ಇಬ್ಬರು: ತುಂಬೈತೆ ಕಣ್ಣಾ ಎಷ್ಟೊಂದು ಬಣ್ಣ
--------------------------------------------------------------------

ನೀಲಾ (2001) -  ಎದೆಯಾಗ ಎಕತಾರಿ‌ ನರನರವು ಕಿನ್ನೂರಿ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ವಾಣಿಜಯರಾಮ, ಹೇಮಂತ

ಹೆಣ್ಣು: ಆಆಆ.. ಎದೆಯಾಗ ಎಕತಾರಿ ನರನರವು ಕಿನ್ನೂರಿ
          ಕಲ್ಲರಳಿ ಹೂವಾಗಿ ಚೆಂದೋಳ್ಳಿ ಪದವಾಗಿ
          ಒಲಿದೊಲಿದು ಓ ಮಾಯೆ ಹಾಡಾಗು ಬಾ ತಾಯೆ..
          ಆಆಆಆ.. ಕಣ್ಣಾಗು ನಾಳೆಗೆ ದನಿಯಾಗು ನೋವಿಗೆ
          ಮನ ಮನವು ಚಿಗುರುವ ಅರಿವಿದುವೆ ಓ.. ಕಂದ
          ಪದ ಪದವೂ ಹಾಡೆಸುವಾ ಇದ ನಂಬು ಬಾಳವ್ವ

ಹೆಣ್ಣು: ಚಿತೈರಲೋ ಕೂಸ ಮೇಲೆ ಕವಿದ‌ ಕತ್ತಲು ಕಳೆದ ಲೀಲೆ
           ಅರಿವು ನೀನೆ ಗುರುವು ನೀನೆ ನಾದ ಡಮರು
            ನುಡಿದಿರೇನೆ ಮಂಟೆ ಸ್ವಾಮಿ ಮಾಯಗಾರ ಬಾರೋ
            ಈ‌ಮಗಳದೆಗೆ ಬಾರಾ..

ಹೆಣ್ಣು: ಏರಿ ಕೆರೆಯ ತಡೆದಂತೆ ನನ್ನ ತಡೆದ ಎಲೆ ಜೀವನ
            ಜೀವಕ್ಕಿದು ಸಂಜೀವ ಏರಿ ಒಡೆದು ನೀರ್
            ಹರಿಯುವಾಗ ತನ್ನ ಬಯಲಿಗೂ ಹೇಳದೆ ಸಾಗಿ
            ಹರಿಯತವ್ವ ನೀರ ರಭಸ ಹಾರಿ ಹಾರಿತು ದೂರ ಹಂಸ
            ತನುವಿನೊಳಗನು ದಿನವು ಇದು ಎನ್ನ ಮನಕ್ಕೊಂದು
            ಮಾತ ಹೇಳದೆ ಹೋದೆ ಹಂಸ
--------------------------------------------------------------------

ನೀಲಾ (2001) -  ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ಎಲ್.ಎನ್.ಶಾಸ್ತ್ರೀ, ಶ್ರೀನಿವಾಸ

ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ಹಾಡೆವು ನಾಲಿಗೆ ಕಥನ ಒಡೆಯ ತಂದಾನ ತನನ
ತಂದಾನ ತನನ.. ತಂದಾನ ತನನ.. ತಂದಾನ ತನನ

ಆಹಾ ನಿಮ್ಮ ತಂದೆ ಎಂಥಾ ಮಹಾತ್ಮರೆಂದರೇ ಹೇಳವ್ವಾ
ದಿಕ್ಕಿಲ್ಲದವರಿಗೆ ತಂದೆ ಅವರಿಗೆ ಬಡವ ಬಲ್ಲಿದರು ಒಂದೇ
ನ್ಯಾಯ ಧರ್ಮಗಳು ಅವರ ಹಿಂದೆ ಅಂಥವರು ಲಕ್ಷ ಲಕ್ಷ
ಹುಟ್ಟಬೇಕು ಮುಂದೆ ಅವರೆಂಥಾ ಕೊಡಗೈ ದೊರೆ ಎಂದರೆ
ಹೇಳಪ್ಪ.. ಭೂದಾನ ಗೋದಾನ ಅನ್ನದಾನ ವಸ್ತ್ರದಾನ
ಇಂಥಾ ಸಕಲ ದಾನಗಳನು ನೀಡಿದ ನಮ್ಮೊಡೆಯರ ಮನೆಯಲ್ಲಿ
ಹಾಲು ಹೊಳೆಯಾಗಿ ಸಾಗಿ ಬೆಣ್ಣೆ ಬೆಟ್ಟಾವು ಆಗಿ
ಬಿದಿರು ತೊಟ್ಟಿಲು ತೂಗಿ ಮನೆ‌ ಒಂದು ಸಾವಿರವಾಗಿ
ಧಾನ್ಯದ ರಾಶಿ ರಾಶಿ ಆಕಾಶ ಮುಟ್ಟಲೇ ಹೋಗಿ
ಬೆಳ್ಳಿ ‌ಬಂಗಾರ ಉಕ್ಕಿ ಕುಲ ಕೀರ್ತಿ ಹೊಳೆಯ ಚುಕ್ಕಿ
ಹಾಡೆವು ನಾಲಿಗೆ ಕಥನ ಒಡೆಯ ತಂದಾನ ತನನ
ತಂದಾನ ತನನ.. ತಂದಾನ ತನನ.. ತಂದಾನ ತನನ

ಆಹಾ ನಿಮ್ಮ ಪಾಳೇಗಾರನ ವಂಶ ವೃಕ್ಷ  ಎಂಥಾ ಘನವಾದದ್ದೆಂದರೆ ನಿಮ್ಮಜ್ಜನ ಮುತ್ತಜ್ಜನ ಅಜ್ಜ
 ಆದಿಗ ಅಪ್ಪರಾಯ ಅಪ್ಪರಾಯನ ಜೋಡಿ ಕುಡಿಗಳು
ಹನುಮಂತರಾ ಸಿಂಗೂರಾಯ
ಹನುಮಂತರಾಯ ವಂಶ ಕುಡಿ ಚಿಕ್ಕರಾಯ ರಂಗರಾಯ
ಬಪ್ಪಣ್ಷರಾಯ ಚೆಲುವರಾಯ ಆಹ್..
ಚೆಲುವರಾಯನ ಐಕೈಕ ವಂಶದ ಕುಡಿ ಅಪ್ಪ ಸಂತ ನಂತರ
ಹುಟ್ಟಿದ ನಮ್ಮ ಧಣಿ
ಪಾಳೇಗಾರ ಜಗದೇವರಾಯ ಎಂಥಾವನೆಂದರೇ..
ಆಹ್ ಅದಲ್ಲವೇ ಮಹಾ ಪುರುಷರ ಜನ್ಮರಹಸ್ಯ
ಸರ್ವ ಶಕ್ತಿಗಳಲ್ಲಿ ಗಜಶಕ್ತಿಯೇ ದೊಡ್ಡ ಶಕ್ತಿ
ಸರ್ವ ಗರ್ಭಗಳಲ್ಲಿ ಗಜ ಗರ್ಭವೇ ದೀರ್ಘ ಗರ್ಭ
ತಾಯಿಯ ಗರ್ಭದಲ್ಲಿ ಹೆಚ್ಚು ಕಾಲ ಇರುವಂಥ ಬಾಗ್ಯ
ಕೋಟಿಗೊಬ್ಬರಿಗೇ ಅಂಥ ಅಪರೂಪ ಪುಣ್ಯಶಾಲಿ
ನಮ್ಮ ಜಗದೇವರಾಯ ಎಂಥಾವರೆಂದರೇ..
ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೇ
ಗುಡುಗು ಮಿಂಚಿನ ಸಾರ ಭೂಮಿಯ ಗೀಳ ಗೀಳ
ಸೋಲಿಲ್ಲ ಸಾವಿಲ್ಲ ಸರಿಸಾಟಿ ಯಾರು ಇಲ್ಲ
ಹಾಡೆವು ನಾಲಿಗೆ ಕಥನ ಒಡೆಯ ತಂದಾನ ತನನ
ತಂದಾನ ತನನ.. ತಂದಾನ ತನನ.. ತಂದಾನ ತನನ
ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ಹಾಡೆವು ನಾಲಿಗೆ ಕಥನ ಒಡೆಯ ತಂದಾನ ತನನ
ತಂದಾನ ತನನ.. ತಂದಾನ ತನನ.. ತಂದಾನ ತನನ
--------------------------------------------------------------------

ನೀಲಾ (2001) -  ಕಣ್ಣನು ಮುಚ್ಚಬಹುದು
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ವಾಣಿಜಯರಾಮ,

ಕಣ್ಣನು ಮುಚ್ಚಬಹುದು...
ಕಣ್ಣನು ಮುಚ್ಚಬಹುದು... ಚಂದಮಾಮ
ಕನಸನೇ ಬಚ್ಚಿಡಬಹುದೇ ಚಂದಮಾಮ

ಗೆದ್ದೆ ಗೆಲ್ಲುವೆ ಎಲ್ಲಾ ಹೂ ನಗೆಯಲ್ಲೇ
ಲೋಕವೇ ಅಡಗುದಿಲ್ಲವೇ ಇಬ್ಬನಿಯಲಿ
ಬೋಗಸೆ ಪ್ರೀತಿಯೆ ಕಡಲು ಸಾಕು ನಗುತಾ ಬಾಳಲು
ಕಣ್ಣನು ಮುಚ್ಚಬಹುದು... ಚಂದಮಾಮ
ಕನಸನೇ ಬಚ್ಚಿಡಬಹುದೇ ಚಂದಮಾಮ

ಒದ್ದೆ ಕಣ್ಣಲು ಕೋಟಿ ಕಾಮನಬಿಲ್ಲು
ಗೀತವೇ ಮಿಡಿಯುವುದಿಲ್ಲವೇ ಚಿಲಿಪಿಲಿಯಲ್ಲೂ
ಉದರಿ ಹೋದರು ತರಗೆಲೆ ನಾಳೆಗೆ ಮೂಡಲೇ ಚಿಗುರಲೆ
ಕಣ್ಣನು ಮುಚ್ಚಬಹುದು... ಚಂದಮಾಮ
ಕನಸನೇ ಬಚ್ಚಿಡಬಹುದೇ ಚಂದಮಾಮ
--------------------------------------------------------------------

ನೀಲಾ (2001) -  ಚಿತ್ತಿ ಸುರಿಮಳೆಯಂತೆ ಚಿತ್ತಾರಿ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ಬದ್ರಿ ಪ್ರಸಾದ್

ಚಿತ್ತಿ ಸುರಿಮಳೆಯಂತೆ ಚಿತ್ತಾರಿ ಹಕ್ಕಿಯಂತೆ
ಮತ್ತೇರಿ ದುಂಬಿಯಂತೆ ಝಲ್ಲ ಝಲ್ಲನೇ ಹರಿಸೆ ಭಾವಗಂಗೆ
--------------------------------------------------------------------

ನೀಲಾ (2001) -  ತೆರೆ ತೆರೆಯೆ ನಿನ್ನಾ ದಾರಿ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ಬದ್ರಿ ಪ್ರಸಾದ್

ತೆರೆಮೆರೆಯ ನಿನ್ನಾ ದಾರಿ ಹಿಡಿದಂತೆ ಏಕತಾರಿ
ಹಾಡು ಜೀವದ ಜೀವದ ರಾಗ ಕತ್ತಲೆ ಬೆಳದಿಂಗಳೊಂದಿಗೆ
ಕತ್ತಲೆ ಬೆಳದಿಂಗಳೊಂದಿಗೆ
--------------------------------------------------------------------

ನೀಲಾ (2001) -  ಕೊಟ್ಟ ದನಿಯ ಕೊಟ್ಟಂತೆ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ವಾಣಿಜಯರಾಮ, 

ಕೊಟ್ಟ ದನಿಯ ಕೊಟ್ಟಂತೆ ನೀ ಕಸಿದೆ ಈ ಕೂಸ ಮೇಲೆ
ಯಾಕೆ ಮುನಿದೆ ಹರಿಯಬೇಕು ಮತ್ತೇ ಮತ್ತೆ
ಹರಿಯ ನಿನ್ನ ಹೆಜ್ಜೆ ಹೊಳೆಯಂತೆ

-------------------------------------------------------------------

ನೀಲಾ (2001) -   ಈ ನಾಡ ಮಣ್ಣಿನಲ್ಲಿ ಹೂವಾಗಿ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ವಸುಂಧರಾದಾಸ

ಹೆಣ್ಣು: ತಂದಾನ ತಂದಾನ....ತಂದಾನ
            ತಂದಾನ ತಂದಾನ ತಂದಾನ
ಕೋರಸ್: ತಂದಾನ ತನನ ತಂದಾನ ತನನ ತಂದಾನ
ಹೆಣ್ಣು: ತಂದಾನ ತನನ ತಂದಾನ ತನನ
           ತಂದಾನ ತನನ ತಂದಾನ ತನನ
           ಈ ನಾಡ ಮಣ್ಣಿನಲ್ಲಿ ಮಂದಾರ ಜನಗಳ ಕಥೆಯ
           ಹೂವಿನ ಗಿಡಗಳಲಿ ಹೂವಾಗಿ ಅರಳಿದೋರ
           ಹಣ್ಣಾಗಿ ಉದುರಿದೋರ ಕಥೆಯೊಂದ ಹೇಳುತೀವಿ
           ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ಕೋರಸ್: ತಂದಾನ ತನನ ತಂದಾನ ತನನ ತಂದಾನ

ಹೆಣ್ಣು: ಇತಿಹಾಸ ಪುಟಗಳಲ್ಲಿ ಹೂತು ಹೋದ ಕಥೆಗಳನ್ನ
           ನಮ್ಮ ಜನರ ಎದೆಗಳಲ್ಲಿ ಮೌನವಾದ ಕಥೆಗಳನ್ನ
           ಉಳ್ಳವರಿ ಸೇರಿ ಹೋದ ದುಡಿವವರ ಸುಕ್ಕುಯನ್ನ
           ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ಕೋರಸ್: ತಂದಾನ ತನನ ತಂದಾನ ತನನ ತಂದಾನ

ಹೆಣ್ಣು: ಧರೆಗೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
           ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
           ಹಾಡೇವು ನಾಲಿಗೆ ಕಥನ ಒಡೆಯ
ಕೋರಸ್: ತಂದಾನ ತನನ ತಂದಾನ ತನನ ತಂದಾನ

ಹೆಣ್ಣು: ಆಹ್ ನಮ್ಮ ಪಾಳೇಗಾರ ವಂಶವೃಕ್ಷ
           ಎಂಥಾ ಘನವಾದದ್ದೆಂದರೆ ಆಹಾ..ಆಹಾ..
           ಪಾಳೇಗಾರ ಚೆಲುವರಾಯರ ಏಕೈಕ ವಂಶ ಕುಡಿ
           ಓಹೋ..ಹಕ್ಕುದಾರ ಅಪ್ಪ ಸತ್ತ ಹನ್ನೆರಡು ತಿಂಗಳಿಗೆ
           ಹುಟ್ಟಿದ ನಮ್ಮ ಧಣಿ ಜಗದೇವರಾಯ ..ಹೌದೇನವ್ವಾ
           ಕಣ್ಣಂದೂರು ಪಾಳೆಗಾರರ ವಂಶದ ಕುಡಿ..ಆಹಾ
           ಅಪ್ಪ ಸತ್ತ ಹನ್ನೆರಡು ತಿಂಗಳಿಗೆ ಹುಟ್ಟಿದಂತ ...ಹೌದಾ
           ಈ ನಮ್ಮ ಜಗದೇವರಾಯ ಎಂಥಾವರೆಂದರೆ...ಓ
           ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೆ
           ಗುಡುಗು ಮಿಂಚಿನ ಥರ ಭೂಮಿಯ ಗೀಳ ಗೀಳ
ಕೋರಸ್: ತಂದಾನ ತನನ ತಂದಾನ ತನನ ತಂದಾನ
               ತಂದಾನ ತನನ ತಂದಾನ ತನನ ತಂದಾನ
--------------------------------------------------------------------

ನೀಲಾ (2001) -  ಧೋ..ಧೋ..ಸುರಿ ಮಳೆಯು
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಕೋಟಿಗನಳ್ಳಿ ರಾಮಯ್ಯ, ಗಾಯನ: ವಾಣಿಜಯರಾಮ, ಪಲ್ಲವಿ, ಎಲ್.ಎನ್.ಶಾಸ್ತ್ರೀ

ಹೆಣ್ಣು: ಧೋ..ಧೋ..ಸುರಿ ಮಳೆಯು...
           ಧೋ..ಧೋ..ಸುರಿ ಮಳೆಯು...
           ಧರಣಿಗೆ ಬರುವಾಗ ಧುಮ್ಮಿಕ್ಕಿ ಸುರಿವಾಗ
           ಸಾಗಿತ್ತು ಒಂಟ್ಟೆತ್ತಿನಗಾಡಿ ಮುತ್ತಂಥ ಜೀವಿಗಳೂ
           ಉರಾಗಿ ಸುತ್ತಾಡಿ ಕತ್ತಾಲ ದಾರಿಯು ದೂರ
ಕೋರಸ್: ಧೀಮ್ ತಕ ತಕ ತಕ ಧೀಮ ತಕ ತಕ ತಕ

ಹೆಣ್ಣು: ಆ‌ ಸೀಮೆ ದಾಟಿ ಈ ಸೀಮೆ ದಾಟಿ ಆ ಊರ ದಾಟಿ
           ಈ ಊರ ದಾಟಿ ಆ ಎತ್ತಿನ ಗಾಡಿ
           ಎಲ್ಲಿ ಬಂತಪ್ಪಾ ಅಂದ್ರೇ
ಕೋರಸ್: ಎಲ್ಲಿಗೆ ಬಂತವ್ವ ತಾಯೇ...

ಹೆಣ್ಣು: ಕಣ್ಣಂತೆ ಕಣ್ಣಾದ ಊರು ... ಸರಿ
           ಊರಲ್ಲಿ ನಾಗಾರ ಸೂರು... ಸರಿ
           ಕನಸಿಗಳೇ ಕಣ್ಣಾದ ತೇರು..ಸರಿ
           ತೇರನ್ನೂ ಎಳೆಯುವ ಭಾರಾನು ಯಾರೋ
           ಮಾವಾರು ನೀವೇನ ಬಾರೋ...
           ಕನ್ನಡಿ ಕೊಳದಲ್ಲಿ ನೆರಳನು ನೋಡಿ
           ನಗುತಾರೆ ಚಂದ್ರ ಚಕೋರಿ
           ಚೆನ್ನಾಗಿ ಕಾದೈತೆ ಮಾರನ ಮೋಡಿ
           ಪ್ರೀತಿಗೇ ಪ್ರೀತಿಯೆ ಜೋಡಿ
           ನೀರಲ್ಲಿ ನೀರಾಗಿ ಬಾಲೆ ಮರೆತಾಳೋ ಚಿನ್ನದ ಓಲೆ
           ಆ ಬಾಲೆಯ ಮಿನುವಲ್ಲಿ ಧರಣಿ
           ಋತುವಾಗಿ ನಾಚಿದಳು ತರುಣಿ
ಗಂಡು: ಓಹೋ..ಹೋ..ಓಓಓಓ ಓಹೋ..ಹೋ..ಓಓಓಓ
ಹೆಣ್ಣು: ಆಕಾಶದಿ ಬಾಳೇ ವನವು ವನದಲ್ಲಿ ನಿಂಬೆ ಗಿಡವು
           ಆ ಮುಳ್ಳೆ ಎದೆಗೆ ನಾಟಿತೊ ಪ್ರಾಣಕಾಂತಾ
           ಮುದ್ದಾಗಿ ನೀ ಬಾರೋ..
ಗಂಡು: ಓ.. ಬಾಲೆ ಎಲ್ಲೆ ಬಾಲೆ ವಾಲೆ ಎಲ್ಲೆ ವಾಲಾಗ ಹೊಂಬಾಳೆ
           ವಾಲೆ ಎಲ್ಲೆ
ಹೆಣ್ಣು: ಬಾಲೆ ಅಲ್ಲ ಕಣೋ ಅದೇ ನನ್ನ ಹೃದಯ
           ಪ್ರೇಮಲೋಕಕೆ ಒಯ್ಯೋ ಉಯ್ಯಾಲೆ
ಕೋರಸ್: ಉಯ್ಯಾಲೆ.. ಉಯ್ಯಾಲೆ.. ಸುವ್ವಾಲೆ.. ಸುವ್ವಾಲೆ
ಹೆಣ್ಣು: ಆಹಾ ಎಂಥಾ ಜೋಡಿ ಎಂಥಾ‌ ಜೋಡಿ
           ಜೀವ ಜೀವ ಸೇರಿ ಹಾಲು ಜೇನು ಕೂಡಿದಂತ ಜೋಡಿ
ಕೋರಸ್: ಮುಂದೆನಾಯ್ತೆವ್ವಾ ಮುಂದೆನಾಯ್ತು 
                ಮುಂದೆನಾಯ್ತೆವ್ವಾ     
ಹೆಣ್ಣು: ಯಾವ ಕಣ್ಣ ಸಿಡಿಲಾಗಿ ಬಿತ್ತೋ ಸೈ
          ಯಾರದೆಯಾ ವಿಷಯಕ್ಕೆ ಸಂತೋ.. ಸೈ
          ಹಗಲೇಯ ಸೂರ್ಯನ ನುಂಗಿ ರಾತ್ರಿ ಚಂದ್ರನ ಕೊಂದು
          ಚುಕ್ಕಿಗಳ ಚೆಲ್ಲಾಡಿ ದಿಕ್ಕುಗಳ ಈಜಾಡಿ
          ಪ್ರೀತಿಯ ಎದೆಗೇನೆ ಇಟ್ಟಾರು ಬೆಂಕಿ
          ಪ್ರೀತಿಯ ಎದೆಗೇನೆ ಇಟ್ಟಾರು ಬೆಂಕಿ
        ಆ..ಆ..ಆ..ತಂದೆ ಹೆಣೆದಾ ಬಲೆಯಲ್ಲಿ ಅಯ್ಯೋ ಹೆಣವಾಗಿ
        ಬಂದಾನೋ ಯಾವ್ ತಾಯಿ ಮಗನಮ್ಮ
        ಯಾರ್ ಹೆತ್ತ ಮಗನೋ ಯಾಕಾಗಿ ಹೆಣದವಾದನೋ
        ಯಾಕಾಗಿ ಹೆಣದವಾದನೋ
--------------------------------------------------------------------

ನೀಲಾ (2001) -  ಹೆಜ್ಜೆ ಹೆಜ್ಜೆ ಗೆಜ್ಜೆ ಗೆಜ್ಜೆ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಲಕ್ಷ್ಮಿಪತಿ ಕೋಲಾರ, ಗಾಯನ: ವಸುಂಧರದಾಸ

ಹೆಣ್ಣು: ಹೆಜ್ಜೆ.. ಹೆಜ್ಜೆ ..ಗೆಜ್ಜೆ.. ಗೆಜ್ಜೆ..
           ಹೆಜ್ಜೆ ಹೆಜ್ಜೆ ಮಾತಾಡು ಗೆಜ್ಜೆ ಗೆಜ್ಜೆ ಮಾತಾಡು
           ಮಾತಾಡು ಮನವೆ ಮುತ್ತಿನ ಜೊತೆಯೆ
           ಹೆಜ್ಜೆ ಹೆಜ್ಜೆ ಮಾತಾಡು
ಕೋರಸ್: ತಂದಾನ್ ಹೇ..ಹೇ..ತಂದಾನ್ ತಂದಾನ್
                ಸೈ..ಸೈ ಸೈ ಸೈ ಸೈ ಸೈ

ಹೆಣ್ಣು: ಗೀಗೀ ಗೀಗೀ  ಪದವಾಡು ಜೋಗಿ
ಕೋರಸ್: ಗೀಯ ಗೀಯ ಗಾಗೀಯ ಗೀಯ
ಹೆಣ್ಣು: ಕೂಗಿ ಕೂಗಿ ಕನಸಾಗಿ ಕೂಗಿ
ಕೋರಸ್: ಗೀಯ ಗೀಯ ಗಾಗೀಯ ಗೀಯ
ಹೆಣ್ಣು: ಎದೆಯ ಚಿಲುಮೆಗಳು ಉಕ್ಕಿ
           ಹಗಲೇ ಬೆಳಗ್ಯಾವೋ ಬೆಳ್ಳಿ ಚುಕ್ಕಿ
           ಸೋಲೋ ಮಾತಾಡು ಛಲವೇ ಮಾತಾಡು
           ಹೆಜ್ಜೆ ಹೆಜ್ಜೆ ಮಾತಾಡು ಗೆಜ್ಜೆ ಗೆಜ್ಜೆ ಮಾತಾಡು
           ಮಾತಾಡು ಮನವೆ ಮುತ್ತಿನ ಜೊತೆಯೆ
           ಹೆಜ್ಜೆ ಹೆಜ್ಜೆ ಮಾತಾಡು

ಹೆಣ್ಣು: ಸುವ್ವಿ ಸುವ್ವಿ ಸೋಬಾನೆ ಜೋಗಿ
ಕೋರಸ್: ಸುವ್ವಿ ಸುವ್ವಾಲೆ ಸುವ್ವಿ
ಹೆಣ್ಣು: ಲಾಲಿ ಜೋಲಿ ಈ ಭೂಮಿ ಹಾಡಿ
ಕೋರಸ್: ಸುವ್ವಿ ಸುವ್ವಾಲೆ ಸುವ್ವಿ
ಹೆಣ್ಣು: ಉರುಳ ತಿಂಗಳ ರಾಶಿ ಬಣ್ಣ ಚೆಲ್ಲಿ
          ಕನಸು ಬರೆದಾವೋ ರಂಗದಲ್ಲಿ
          ಚೆಲುವೆ ಮಾತಾಡು ಒಲವೇ ಮಾತಾಡು
          ಹೆಜ್ಜೆ ಹೆಜ್ಜೆ ಮಾತಾಡು ಗೆಜ್ಜೆ ಗೆಜ್ಜೆ ಮಾತಾಡು
          ಮಾತಾಡು ಮನವೆ ಮುತ್ತಿನ ಜೊತೆಯೆ
          ಹೆಜ್ಜೆ ಹೆಜ್ಜೆ ಮಾತಾಡು
--------------------------------------------------------------------

No comments:

Post a Comment