1404. ನೇತ್ರ ಪಲ್ಲವಿ (೧೯೮೫)





ನೇತ್ರ ಪಲ್ಲವಿ ಚಲನಚಿತ್ರದ ಹಾಡುಗಳು
  1. ಕಣ್ಣಲ್ಲಿ ಹೊಸ ಜೀವ
  2. ಆನಂದ ನಾನಿಂದೂ ಕಂಡೇ
  3. ಹಕ್ಕಿಯಂತೇ ಮೇಲೆ ಹಾರಾಡಿ
  4. ಆನಂದ ನಾನಂದು ಕಂಡೆ
ನೇತ್ರ ಪಲ್ಲವಿ (೧೯೮೫) - ಕಣ್ಣಲ್ಲಿ ಹೊಸ ಜೀವ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ಎಂ.ಏನ್.ವ್ಯಾಸರಾವ, ಗಾಯನ : ಕೆ.ಜೆ.ಏಸುದಾಸ, ಮಂಜುಳಾ 

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ 

--------------------------------------------------------------------------------------------------------------
 
ನೇತ್ರ ಪಲ್ಲವಿ (೧೯೮೫) - ಆನಂದ ನಾನಿಂದೂ ಕಂಡೇ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಕೆ.ಜೆ.ಏಸುದಾಸ, ಮಂಜುಳಾ 

ಗಂಡು : ಆನಂದ ನಾನಿಂದೂ ಕಂಡೆ ಸೌಂದರ್ಯ ಕಣ್ಣತುಂಬಿಕೊಂಡೇ .. 
            ಆನಂದ ನಾನಿಂದೂ ಕಂಡೆ ಸೌಂದರ್ಯ ಕಣ್ಣತುಂಬಿಕೊಂಡೇ .. ಬಾಳೆಲ್ಲಾ ಬೆಳಕಾಗಿದೇ.. 
            ನಿನ್ನ ನಗೇ ಸಿರಿ ಹೂವ ಮಲ್ಲಿಗೇ  ಪ್ರತಿ ಘಳಿಗೆ ಶುಭ ದೀವಳಿಗೇ .. ಸಂಬಂಧ ಹಿತವಾಗಿದೇ .. ಗೆಳತೀ 
            ಆನಂದ ನಾನಿಂದೂ ಕಂಡೆ ಸೌಂದರ್ಯ ಕಣ್ಣತುಂಬಿಕೊಂಡೇ .. 

ಗಂಡು : ನಾನೊಂದು ತಂತೀ ಕಡಿದಂತ ವೀಣೆ ನೀ ಬಂದೂ ಮೀಟಿ ಶೃತಿಯಾಯ್ತು ಜಾಣೆ  
            ಬರಡಾದ ಭೂಮೀ .. ಹಸಿರಾದ ಹಾಗೇ .. ನೀ ಸಂಗ ಸೇರಿ ದೂರಾಯ್ತು ಬೆಗೇ.. 
            ಹುಟ್ಟಿರುವ ಕಗ್ಗತ್ತಲಿಗೇ ನೀನಾದೇ ದೀವಿಕೆ ದಿಕ್ಕಿರದೇ ನಾ ಬಿಕ್ಕಿರಲೂ 
            ತಂಗಾಳಿ ತಂಪೂ ತುಂಬಿ ತಂದೇ .. 
            ಮೌನ.. ಮೂಡಿ.. ನೀ ಮಾತಾಡಿದೇ ನಕ್ಕೂ ನಲಿದು ನೀ ಓಲಾಡಿದೇ ..  
            ಆನಂದ ನಾನಿಂದೂ ಕಂಡೆ ಸೌಂದರ್ಯ ಕಣ್ಣತುಂಬಿಕೊಂಡೇ .. 

ಗಂಡು : ನೀ ಬಯಸುವಂಥ .. ಸವಿ ಸ್ನೇಹ ನೀಡಿ ನಾ ನಡೆವೇ ಜೊತೆಗೇ ಮನಸಾರೇ ಕೂಡಿ 
            ನನ್ನಾಸೇ ಬಾನ ಮಿಂಚಿನಿಂತ ತಾರೇ ನೀ ಧೈರ್ಯ ತೋರಿ ಒಡನಾಡೂ ನೀರೇ  
ಹೆಣ್ಣು : ಅಕ್ಕರೆಯ ಪಲ್ಲಕಿಯಲೀ ನನ್ನನೇ ಕೂಡಿಸೇ ..  
          ನಲ್ಮೆಯಲೀ ಈ ತಬ್ಬಲಿಯಾ ಹಾರೈಸೀ ಪ್ರೀತಿ ತೇರ ಎಳೆದೇ  
ಗಂಡು : ಹಾಗೇ .. ಸಾಗೀ ನೀನಂತಾಗಿದೇ  ಒಲುಮೆ.. ನಲುಮೆ ನಾ ಕಂಡಾಗಿದೇ 
ಇಬ್ಬರು : ಆನಂದ ನಾನಿಂದೂ ಕಂಡೆ ಸೌಂದರ್ಯ ಕಣ್ಣತುಂಬಿಕೊಂಡೇ .. 
ಗಂಡು : ಬಾಳೆಲ್ಲಾ ಬೆಳಕಾಗಿದೇ.. ನಿನ್ನ ನಗೇ ಸಿರಿ ಹೂವ ಮಲ್ಲಿಗೇ  ಪ್ರತಿ ಘಳಿಗೆ ಶುಭ ದೀವಳಿಗೇ .. 
            ಸಂಬಂಧ ಹಿತವಾಗಿದೇ .. ಗೆಳತೀ 
ಇಬ್ಬರು: ಲಾಲಲಲಾ ಲಲಲಾಲಾ ಲಾಲಲಲಾ ಲಲಲಾಲಾ ಲಾಲಲಲಾ ಲಲಲಾಲಾ 
-------------------------------------------------------------------------------------------------------------
 
ನೇತ್ರ ಪಲ್ಲವಿ (೧೯೮೫) - ಹಕ್ಕಿಯಂತೇ ಮೇಲೆ ಹಾರಾಡಿ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಬಿ.ಆರ್.ಛಾಯ 

ಗಂಡು : ಆಆಆ.. ಹೇ... ಆಆಆ.. ಆಆಆ.. ಆಆಆ.. ಆಆಆ.. ಆಆಆ..... 
ಹೆಣ್ಣು : ಹಕ್ಕಿಯಂತೆ ಮೇಲೆ ಹಾರಾಡಿ ಮೋಡದಲ್ಲಿ ಭಾರಿ ತೇಲಾಡಿ 
          ಹಕ್ಕಿಯಂತೆ ಮೇಲೆ ಹಾರಾಡಿ ಮೋಡದಲ್ಲಿ ಭಾರಿ ತೇಲಾಡಿ 
          ಸಿರಿ ಓಲುಸೋಕೇರಿ ಕುಣಿಕುಣಿಯುವ ಚೆಲ್ಲಾಟ ಮೆರೆ ಮೀರಿ 
          ತಂಗಾಳಿ ಮಾತಾಡಿದೇ ನದಿ ಮೌನದಿ ನುಡಿಯುತಿದೇ 
          ಬಣ್ಣ ನೂರಿದೇ ನನ್ನ ಕಣ್ಣ ತುಂಬಿದೇ 
          ಬಣ್ಣ ನೂರಿದೇ ನನ್ನ ಕಣ್ಣ ತುಂಬಿದೇ 
          ಹಕ್ಕಿಯಂತೆ ಮೇಲೆ ಹಾರಾಡಿ ಮೋಡದಲ್ಲಿ ಭಾರಿ ತೇಲಾಡಿ 
 
ಹೆಣ್ಣು : ಭೂಮಿಯೆಲ್ಲಾ ಹೂವಿಂದ ಚೆಲುವಾಗಿ ನಿಂತೋನು 
          ನೂರೂ ಚಿಟ್ಟೇ ಹಾಯಾಗೀ ಮದವೇರಿ ನಕ್ಕಾಗ 
          ಮನದಾಸೆಯೂ.. ಮದುವೇರಿದೇ .. 
          ನಾನಿಂದೂ ಹೂವಾಗುವೇ ಸವಿಯಾದ ಹಾಡಾಗುವೇ 
          ನಾನೊಂದೂ ಹೂವಾಗುವೇ ಸವಿಯಾದ ಹಾಡಾಗುವೇ 
          ಚೆಲುವಿನಲಿ ಒಲವಿನಲಿ ನಲಿಯುವ ನಾಕ ಈ ಲೋಕ 
          ಚೆಲುವಿನಲಿ ಒಲವಿನಲಿ ನಲಿಯುವ ನಾಕ ಈ ಲೋಕ 
          ಹಕ್ಕಿಯಂತೆ ಮೇಲೆ ಹಾರಾಡಿ ಮೋಡದಲ್ಲಿ ಭಾರಿ ತೇಲಾಡಿ 

ಹೆಣ್ಣು : ಊರ ಮೇಲೆ ನೀನೊಂದ ಅಲೆಯೇರಿ ನೆಗೆದಾಗ 
          ಸುತ್ತ ಮುತ್ತು ಸುರಿಯಮ್ಮಿ ಚೀರುತಲಿ ಬಂದಾಗ 
          ಭುವಿಯೆಲ್ಲವೂ.. ಮರುಳಾಗಿದೇ .. 
          ಆನಂದ ಚೆಲ್ಲಾಡಿದೇ .. ಬಾಳೆಲ್ಲಾ ಜೇನಾಗಿದೇ 
          ಆನಂದ ಚೆಲ್ಲಾಡಿದೇ .. ಬಾಳೆಲ್ಲಾ ಜೇನಾಗಿದೇ 
          ದಿನದಿನವೂ ಹರುಷದಲಿ ಸರಿಯುವ ಆಟ ಸವಿಯಾಟ 
          ದಿನದಿನವೂ ಹರುಷದಲಿ ಸರಿಯುವ ಆಟ ಸವಿಯಾಟ 
          ಹಕ್ಕಿಯಂತೆ ಮೇಲೆ ಹಾರಾಡಿ ಮೋಡದಲ್ಲಿ ಭಾರಿ ತೇಲಾಡಿ 
          ಸಿರಿ ಓಲುಸೋಕೇರಿ ಕುಣಿಕುಣಿಯುವ ಚೆಲ್ಲಾಟ ಮೆರೆ ಮೀರಿ 
          ತಂಗಾಳಿ ಮಾತಾಡಿದೇ ನದಿ ಮೌನದಿ ನುಡಿಯುತಿದೇ 
          ಬಣ್ಣ ನೂರಿದೇ ನನ್ನ ಕಣ್ಣ ತುಂಬಿದೇ 
          ಬಣ್ಣ ನೂರಿದೇ ನನ್ನ ಕಣ್ಣ ತುಂಬಿದೇ 
          ಲಲಲಲಾಲಲಾ ಲಲ್ಲಲಲ್ಲಲಲ್ಲಲಾ ಲಲಲಲಾಲಲಾ ಲಲ್ಲಲಲ್ಲಲಲ್ಲಲಾ          
              
--------------------------------------------------------------------------------------------------------------
 
ನೇತ್ರ ಪಲ್ಲವಿ (೧೯೮೫) - ಆನಂದ ನಾನಂದು ಕಂಡೆ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ 

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ 

--------------------------------------------------------------------------------------------------------------

No comments:

Post a Comment