ಸ್ವಾತಿ ಚಲನಚಿತ್ರದ ಹಾಡುಗಳು
- ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
- ಪಂಜರದಾ ಓ ಗಿಣಿಯೇ ಕಣ್ಣು ಮುಚ್ಚದ ತೆರೆ ಸರಿಸಿ
- ಕುಹೂ ಕುಹೂ ಹಾಡುವ ಕೋಗಿಲೆಯೇ ಅರಿತೇ ನಿನ್ನ ಸಂದೇಶ
- ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
- ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ (ದುಃಖ)
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ಪ್ರೇಮ ಮಂದಿರ ಕಟ್ಟೋಣ ಬಾ ಸುಖದ ಬಾಗಿಲ ತಟ್ಟೋಣ ಬಾ
ಎಳೆಯ ಪ್ರಾಯ ಅರಳಿದಾಗ ಸುಡುವ ಬಿಸಿ ಬಿಸಿ ಬಯಕೆಯು ಎದೆಯೊಳಗೇ
ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ

ಗಂಡು : ಮನಸು ಮನಸು ಅರಿತು ನಲಿಯುತಲಿ ಲೋಕವನ್ನೇ ಮರೆತೂ
ಹೆಣ್ಣು : ತೋಳಲ್ಲಿ ನನ್ನಾ ತನುವನು ಬಳಸುತ ಹರುಷದಿಂದ ಕಲುಕುತ ಬಳುಕುತ ಒಳಗೆ ಬಾ
ಗಂಡು : ಚೆಲುವೆ ದಂತದಲಿ ತಿದ್ದಿದಂತ ಚಿನ್ನದಲ್ಲಿ ಅದ್ದಿದಂತ
ಗೊಂಬೆ ನನ್ನ ರಂಭೆ ನಿನ್ನ ಸಂಗವನ್ನು ಬಯಸಿರುವೇ
ಹೆಣ್ಣು : ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ಪ್ರೇಮ ಮಂದಿರ ಕಟ್ಟೋಣ ಬಾ ಸುಖದ ಬಾಗಿಲ ತಟ್ಟೋಣ ಬಾ
ಎಳೆಯ ಪ್ರಾಯ ಅರಳಿದಾಗ ಸುಡುವ ಬಿಸಿ ಬಿಸಿ ಬಯಕೆಯು ಎದೆಯೊಳಗೇ
ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ಗಂಡು : ಮೆಚ್ಚಿ ಬಂದ ಚೆಲುವೆ ಪ್ರೇಮದಲಿ ಹುಚ್ಚನಾದೆ ನಿನಗೆ
ಹೆಣ್ಣು : ಒಲವೇ ನಮ್ಮ ಒಡವೆ ಬದುಕಿನಲಿ ನೀನೇ ನಲ್ಲ ನನಗೇ
ಗಂಡು : ಪ್ರಣಯ ರಾಗ ನುಡಿದಿದೆ ಸರಿಗಮ ಮನದ ತುಂಬ ಒಲವಿನ ಜುಮ ಜುಮ
ಬಾ... ಬಳಿಗೆ .. ಬಾ
ಹೆಣ್ಣು : ಇರುಳು ಹೊತ್ತು ಜಾರಿ ಕತ್ತಲಾಗಿ ಕತ್ತಲಲ್ಲಿ ಬೆತ್ತಲಾಗಿ
ಮುತ್ತಿನಂಥ ಮತ್ತಿನಲ್ಲಿ ಮತ್ತೆ ಬಂದೆ ನಿನ್ನ ಬಳಿಗೆ
ಗಂಡು : ಬೆನ್ನ ಹಿಂದೆ ಗುಟ್ಟಾಗಿ ಬಂದು ನನ್ನ ಕಣ್ಣ ಮುಚ್ಚೋಳೆ
ಮೈಗೆ ಮೈಯ್ಯಿ ಟಚ್ಚಾದ ಮೇಲೆ ಮನದ ಆಸೆ ಬಿಚ್ಚೋಳೆ
ಮುಗಿಲ ಮಿಂಚಿನ ಚಿಂತಾಮಣಿ ನಗುವ ಚೆಲುವಿನ ಚೂಡಾಮಣಿ
ನಿನ್ನ ನೋಟ ಮೈಯ್ಯ ಮಾಟ ಮನದ ಕೆಣಕಲು ಚಳಿ ಚಳಿ ಎದೆಯೊಳಗೇ
ಹೆಣ್ಣು : ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ಪ್ರೇಮ ಮಂದಿರ ಕಟ್ಟೋಣ ಬಾ ಸುಖದ ಬಾಗಿಲ ತಟ್ಟೋಣ ಬಾ
ಎಳೆಯ ಪ್ರಾಯ ಅರಳಿದಾಗ ಸುಡುವ ಬಿಸಿ ಬಿಸಿ ಬಯಕೆಯು ಎದೆಯೊಳಗೇ
ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
ಪ್ರೇಮ ಮಂದಿರ ಕಟ್ಟೋಣ ಬಾ ಸುಖದ ಬಾಗಿಲ ತಟ್ಟೋಣ ಬಾ
ಎಳೆಯ ಪ್ರಾಯ ಅರಳಿದಾಗ ಸುಡುವ ಬಿಸಿ ಬಿಸಿ ಬಯಕೆಯು ಎದೆಯೊಳಗೇ
ಪರದೇ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೋನೇ
ತುಟಿಯ ಮೇಲೆ ತುಟಿಯ ಒತ್ತಿ ಪ್ರೀತಿಯ ಮುತ್ತು ಕೊಟ್ಟೋನೇ
--------------------------------------------------------------------------------------------------------------------------
ಸ್ವಾತಿ (೧೯೯೪) - ಪಂಜರದಾ ಓ ಗಿಣಿಯೇ ಕಣ್ಣು ಮುಚ್ಚದ ತೆರೆ ಸರಿಸಿ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಪಂಜರದಾ ಓ ಗಿಣಿಯೇ ಕಣ್ಣನು ಮುಚ್ಚದ ತೆರೆ ಸರಿಸಿ
ಪ್ರಕೃತಿಯ ನೀ ನೋಡು ಬಂಧನದಿ ಏಕಿರುವೇ
ಬಾಳಿನ ಸುಂದರ ಬಾನಲ್ಲಿ ಹಾರುತ ನೀ ಹಾಡು ಇನ್ನು ಈ ಮೌನ ನಿನಗೇಕೆ
ಹೀಗೆ ನೀ ಅಂಜಿ ನಿಲ್ಲಲೇಕೆ ಬಾ ತೋರಿಸುವೆ ಈ ಜಗವಾ ಅಂದ ಚೆಂದವಾ
ಪಂಜರದಾ ಓ ಗಿಣಿಯೇ ಕಣ್ಣನು ಮುಚ್ಚದ ತೆರೆ ಸರಿಸಿ
ಪ್ರಕೃತಿಯ ನೀ ನೋಡು ಬಂಧನದಿ ಏಕಿರುವೇ
ಹೆಣ್ಣು : ತೆಂಗು ನಿನ್ನ ಕೈ ಬೀಸಿ ಬಳಿ ಕರೆದಿದೆ ಬಾ ಬಾ ಇಂದು
ದಾರಿಯಲ್ಲೂ ಹೂ ಹಾಸಿ ಸುಖಿ ಸ್ವಾಗತ ನಿನಗೆಂದು
ತಂಪು ಗಾಳಿ ತಾ ಬೀಸಿ ಹೊಸ ಚೇತನ ತಂದಿದೆ ಇಲ್ಲಿ
ಜೋಡಿ ಹಕ್ಕಿ ಹಾಡುತಿದೆ ಶೃತಿ ತಾರದ ಸ್ವರದಲ್ಲಿ
ಈ ಸೃಷ್ಟಿ ಅಂದ ಕಣ್ಣಾ ಬಿಟ್ಟು ನೋಡು ಆ ಹಕ್ಕಿ ಹಾಗೆ ನೀನು ಹಾರಾಡು
ಇನ್ನು ಈ ಶಂಕೆ ಬಿಡಬೇಕು ಮುಂದೆ ನೀ ಹೆಜ್ಜೆ ಇಡಬೇಕು
ನೀ ಹೊಸ ಕಥೆಯಾ ಬರೆ ಗೆಳೆಯ ಇಂದು ಧೈರ್ಯದೇ
ಪಂಜರದಾ ಓ ಗಿಣಿಯೇ ಕಣ್ಣನು ಮುಚ್ಚದ ತೆರೆ ಸರಿಸಿ
ಪ್ರಕೃತಿಯ ನೀ ನೋಡು ಬಂಧನದಿ ಏಕಿರುವೇ
ಹೆಣ್ಣು : ನೋಡು ಬಂತು ಮೆರವಣಿಗೆ ಹೊಸ ದಂಪತಿ ಜೋಡಿಯಲ್ಲಿ
ಮೇಳ ತಾಳ ಜೊತೆಗೂಡಿ ನವರಾಗದ ಅಲೆಯಲ್ಲಿ
ಸ್ನೇಹಬೇಕು ಬಾಳಲ್ಲಿ ಇದೆ ಜೀವಕೆ ಅರ್ಥ ನೋಡು
ಧೈರ್ಯ ಬೇಕು ಮನದಲ್ಲಿ ಈ ಸಂಕೋಲೆ ನೀ ದೂಡುಬಂಗಾರದ ಗೂಡು ಸುಖ ಕೊಡದೆಂದು ಸ್ವಚ್ಚಂಧ ಬಾಳೆ ಸ್ವರ್ಗ ಎಂದೆಂದೂ
ಗಂಡು : ಇಂದು ಸಂದೇಹ ನನಗಿಲ್ಲಿ ನಿನ್ನಾ ಸಂದೇಶ ಸಮವಿಲ್ಲಿ ಹೊಸ ದೀಪವನು ತೋರಿಸಿದೆ ಬಾಳದಾರಿಗೆ
ಇಂದು ಸಂದೇಹ ನನಗಿಲ್ಲಿ ನಿನ್ನಾ ಸಂದೇಶ ಸಮವಿಲ್ಲಿ ಹೊಸ ದೀಪವನು ತೋರಿಸಿದೆ ಬಾಳದಾರಿಗೆ
ಪಂಜರದಾ ಗಿಣಿಯಲ್ಲಿ ಕಣ್ಣನು ಮುಚ್ಚದ ತೆರೆ ಸರಿಸಿ ಹಾರಿದೆ ನಾ ಮೇಲೆ ಬಂಧನವು ಇನ್ನಿಲ್ಲ
ಬಾಳಿನ ಸುಂದರ ಬಾನಿನಲ್ಲಿ ಆಡುವೇ ಉಯ್ಯಾಲೆ...
ಬಾಳಿನ ಸುಂದರ ಬಾನಿನಲ್ಲಿ ಆಡುವೇ ಉಯ್ಯಾಲೆ...
--------------------------------------------------------------------------------------------------------------------------
ಸ್ವಾತಿ (೧೯೯೪) - ಕುಹೂ ಕುಹೂ ಹಾಡುವ ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಚಿತ್ರಾ
ಕುಹೂ ಕುಹೂ ಕೂ .. ಕೂ ... ಲಲಲಾ ... ಲಾಲಾ...
ಕುಹೂ ಕುಹೂ ಹಾಡುವ ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ ಬದುಕಿಗೆ ಏನೋ ಸಂದೇಶ
ಈ ನೆಲದೆ ಕಾಲಿಡಲು ಒಡಲ ಒಳಗೆ ಏನೋ ಉಲ್ಲಾಸ ಏನು ಅಂದ ಭೂಮಿ ಆಗಸ

ಹರಿವಂಥಾ ನದಿಯಲ್ಲಿ ನಾದ ತಂತು ಸುಖರಾಗ
ಬಿಳಿಯ ಮೋಡ ನೀಲಿ ಬಾನ ತೆರೆಯ ಮೇಲೆ ತೇಲಾಡಿದೆ
ಹಸಿರು ಪೈರು ಬೀಸೋ ಗಾಳಿ ಅಲೆಗೆ ತಾನು ತೂಗಾಡಿದೆ
ಒಡಲ ಒಳಗೇ ಏನೋ ಉಲ್ಲಾಸ ತೇಲಿ ಹೋದೆ ಏನೋ ಸಂತೋಷ
ಕುಹೂ ಕುಹೂ ಹಾಡುವ ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ ಬದುಕಿಗೆ ಏನೋ ಸಂದೇಶ
ಕಡಲಿಂದಾ ಸ್ವಾತಿಮುತ್ತು ಎತ್ತೋ ಆಸೆ ಮನದಲ್ಲಿ
ಹೊಲದಲ್ಲಿ ಮುತ್ತಾ ಬಿತ್ತಿ ಬೆಳೆಯೋ ಆಸೆ ಒಡಲಲ್ಲಿ
ನವಿಲ ಹಾಗೆ ಗರಿಯ ಬಿಚ್ಚಿ ಕುಣಿವ ಆಸೇ ಮೈ ತುಂಬಿದೆ
ಕಾಮನಬಿಲ್ಲ ಮೇಲೆ ಹತ್ತಿ ಜಾರೋ ಆಸೆ ಉಂಟಾಗಿದೆ
ತರಹ ತರಹ ಆಸೆ ಕಣ್ಣಲ್ಲಿ ಏನೋ ಮಿಂಚು ನನ್ನ ಮೈಯಲ್ಲಿ
ಲಲಲಲಲಲ... ಲಾಲಾಲಾಲಲಲಲಲ .. ಲಲಲಲಲಲಾಲಾ
-------------------------------------------------------------------------------------------------------------------------
ಸ್ವಾತಿ (೧೯೯೪) - ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಸುರಿವ ಮಳೆಯಲಿ ಕೊರೆಯುವ ಚಳಿಚಳಿ ಬೆರೆವ ಬಯಕೆಯು ನಿನ್ನಯಾ ತೋಳಲಿ
ಗಂಡು : ಒಂಟಿಯಾಗಿಹೆ ಬಾಲೆ ನೀ ಪ್ರೀತಿಸು ಮನಸಾರೇ ಬೇಗ ನನ್ನನು ಸೇರೇ ನಾ ತಾಳೆನು ಜಲಧಾರೆ
ಹೆಣ್ಣು : ಈ ಚುಂಬನಾ.. ರೋಮಾಂಚನಾ
ಹೆಣ್ಣು : ಸುರಿವ ಮಳೆಯಲಿ ಕೊರೆಯುವ ಚಳಿಚಳಿ
ಗಂಡು : ಬೆರೆವ ಬಯಕೆಯು ನಿನ್ನಯಾ ತೋಳಲಿ
ಗಂಡು : ಬದುಕಲಿ ಹೊಸತು ಬೆಳಕು ತೋರಿ ಬಳಿಗೆ ನೀನು ಸೆಳೆದೆ
ಪ್ರೀತಿಯ ಮಧುರ ಮಳೆಯ ಸುಖದ ಸುಧೆಯ ಇಂದು ಸವಿದೇ
ಹೆಣ್ಣು : ಪರಿಚಯ ಪ್ರೇಮವಾಯ್ತು ಸಲುಗೆಯೂ ಮೂಡಿತು
ಹೃದಯ ಕೂಗಿ ಹಾಡಿತು ನಿದಿರೆಯೂ ಹಾರಿತು
ಗಂಡು : ಈ ಪ್ರೀತಿಯ ಈ ಸೇತುವೆ ಸೇರದಾ ದಡಗಳ ಬೆಸೆಯಿತು
ಹೆಣ್ಣು : ಸುರಿವ ಮಳೆಯಲಿ ಕೊರೆಯುವ ಚಳಿಚಳಿ
ಗಂಡು : ಬೆರೆವ ಬಯಕೆಯು ನಿನ್ನಯಾ ತೋಳಲಿ
ಹೆಣ್ಣು : ಒಲವಿನ ಜಗದ ಸಿರಿಯೇ ಗೆಳೆಯ ನಿನ್ನ ಸಂಗ ಪಡೆದೆ
ಮಲಗಿದ ಬಯಕೆ ಎದೆಯ ಕೆಣಕೆ ಮನವ ನೀನು ಮಿಡಿದೆ
ಗಂಡು : ಮಿಲನದ ಭಾವ ಕಾಡಿತು ಸಂಯಮ ಜಾರಿತೂ
ರಸಿಕತೆ ಮೇಲೆ ಮೀರಿತು ತನುವಿದು ಸೇರಿತು
ಹೆಣ್ಣು : ಸಂಗಾತಿಯಾ ಸಂತೋಷವೇ ನನ್ನಯಾ ಬಾಳಿನ ಆಸೆಯೂ
ಸುರಿವ ಮಳೆಯಲಿ ಕೊರೆಯುವ ಚಳಿಚಳಿ ಬೆರೆವ ಬಯಕೆಯು ನಿನ್ನಯಾ ತೋಳಲಿ
ಗಂಡು : ಒಂಟಿಯಾಗಿಹೆ ಬಾಲೆ ನೀ ಪ್ರೀತಿಸು ಮನಸಾರೇ ಬೇಗ ನನ್ನನು ಸೇರೇ ನಾ ತಾಳೆನು ಜಲಧಾರೆ
ಹೆಣ್ಣು : ಈ ಚುಂಬನಾ.. ರೋಮಾಂಚನಾ
ಹೆಣ್ಣು : ಸುರಿವ ಮಳೆಯಲಿ ಕೊರೆಯುವ ಚಳಿಚಳಿ
ಗಂಡು : ಬೆರೆವ ಬಯಕೆಯು ನಿನ್ನಯಾ ತೋಳಲಿ
--------------------------------------------------------------------------------------------------------------------------
ಸ್ವಾತಿ (೧೯೯೪) - ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ (ದುಃಖ)
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಚಿತ್ರಾ
ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ ಚಿಮ್ಮಿದೆ
ಹೀಗೇಕೆ ಬಂಧನದೇ ತುಂಬಿರುವೇ ಆ ದಿನ ಹಾಡಿದ ಪಲ್ಲವಿಯ ಮರೆತಿಹೆ
ನೀನೇಕೆ ಹೀಗೆ ನೀ ಅಂಜಿ ನಿಲಲೇಕೆ ಮುಂದೆ ನೀ ಹೆಜ್ಜೆ ಇಡೇ ಏಕೆ
ಈ ಸೆರೆಮನೆಯಾ ಜೀವನಕೇ ಅಂತ್ಯ ಎಂದಿಗೇ ...

ಧೈರ್ಯ ರೋಷ ಕಿಚ್ಚಾಗಿ ದಯೆ ನೀಡಲಿ ಈ ಮೈಯ್ಯಲ್ಲಿ
ಸ್ವಾಭಿಮಾನ ಹೆಚ್ಚಾಗಿ ಛಲ ತುಂಬಲಿ ಮನದಲ್ಲಿ ಯಾವ ಬೀಗ ನಿಲ್ಲಿಸಲು
ಹೊಸ ಧ್ಯೆಯವು ಹೊಮ್ಮುವ ವೇಳೆ ಕಲ್ಲು ಮುಳ್ಳು ಹೂವಾಗಿ ನಿನಗಾಗಲಿ ಹೂಮಾಲೆ
ನೀ ಎದ್ದು ನಿಲ್ಲು ಕೇಳು ನನ್ನ ಹಾಡು ಆ ಹಾಡಲ್ಲಿ ಅರ್ಥ ನೀ ನೋಡು
ನಿನ್ನ ಸಂಗಾತಿ ನಾನಿಲ್ಲಿ ಬರುವೇ ನಾ ನಿನ್ನ ಜೊತೆಯಲ್ಲಿ
ನೀ ನಡೆಯುತ ಬಾ ಗುಡುಗಿ ಧರ್ಮ ಯುದ್ದಕ್ಕೇ
ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ ಚಿಮ್ಮಿದೆ
ಹೀಗೇಕೆ ಬಂಧನದೇ ತುಂಬಿರುವೇ ಆ ದಿನ ಹಾಡಿದ ಪಲ್ಲವಿಯ ಮರೆತಿಹೆ
ಹೀಗೇಕೆ ಬಂಧನದೇ ತುಂಬಿರುವೇ ಆ ದಿನ ಹಾಡಿದ ಪಲ್ಲವಿಯ ಮರೆತಿಹೆ
ನಿನ್ನ ಮೇಲೆ ನಂಬಿಕೆಯು ನಿನಗಿರಲಿ ಗೆಳೆಯ ಎಂದೂ
ಯಾವ ನೋವೇ ಬಂದಿರಲಿ ಎದೆಗುಂದದೇ ಇರಲೆಂದೂ
ಕಣ್ಣ ನೀರು ಸಾಕಿನ್ನೂ ಅದು ಧರೆಯಲ್ಲಿ ಸಿಡಿವಾ ಕೆಂಡಾ
ಚೂರು ಮಾಡು ಬೇಡಿಯನು ಆಕ್ರೋಶದ ಉರಿಯಿಂದಾ
ಈ ನನ್ನ ಪ್ರೀತಿ ಇದೆ ನಿನ್ನ ಶಕ್ತಿ ಆ ಶಕ್ತಿಯಿಂದ ಮುಕ್ತಿ ನಿಂಗಂದೇ
ನಿನ್ನಾ ಸಂಗಾತಿ ನಾನಿಲ್ಲಿ ಬರುವೆ ನಾ ನಿನ್ನ ಜೊತೆಯಲ್ಲಿ
ನೀ ನಡೆಯುತ ಬಾ ಗುಡುಗಿ ಧರ್ಮ ಯುದ್ಧಕ್ಕೇ
ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ ಚಿಮ್ಮಿದೆ
ಹೀಗೇಕೆ ಬಂಧನದೇ ತುಂಬಿರುವೇ ಆ ದಿನ ಹಾಡಿದ ಪಲ್ಲವಿಯ ಮರೆತಿಹೆ
ನೀನೇಕೆ ಹೀಗೆ ನೀ ಅಂಜಿ ನಿಲಲೇಕೆ ಮುಂದೆ ನೀ ಹೆಜ್ಜೆ ಇಡೇ ಏಕೆ
ಈ ಸೆರೆಮನೆಯಾ ಜೀವನಕೇ ಅಂತ್ಯ ಎಂದಿಗೇ ...
ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ ಚಿಮ್ಮಿದೆ
ಹೀಗೇಕೆ ಬಂಧನದೇ ತುಂಬಿರುವೇ ಆ ದಿನ ಹಾಡಿದ ಪಲ್ಲವಿಯ ಮರೆತಿಹೆ
ನೀನೇಕೆ ಹೀಗೆ ನೀ ಅಂಜಿ ನಿಲಲೇಕೆ ಮುಂದೆ ನೀ ಹೆಜ್ಜೆ ಇಡೇ ಏಕೆ
ಈ ಸೆರೆಮನೆಯಾ ಜೀವನಕೇ ಅಂತ್ಯ ಎಂದಿಗೇ ...
ಪಂಜರದಾ ಓ ಗಿಣಿಯೇ ನಿನ್ನಯ ಕಂಬನಿ ಕಾರಂಜಿ ಚಿಮ್ಮಿದೆ
--------------------------------------------------------------------------------------------------------------------------
No comments:
Post a Comment