1369. ನ್ಯಾಯದ ಕಣ್ಣು (೧೯೮೫)

ನ್ಯಾಯದ ಕಣ್ಣು ಚಲನಚಿತ್ರದ ಹಾಡುಗಳು
  1. ನಿನ್ನ ಮಿಲನ ನಾನು ಕಾಣದೇ 
  2. ಜೀವನ ಸುಖ ಪಯಣ 
  3. ಬಾನ ಸೂರ್ಯ ಇದ್ದರೇ ತಾನೇ  
  4. ಪ್ರೀತಿ ಹುಚ್ಚಿಗೇ ಆಸೆ ಹೆಚ್ಚಿದೇ 
ನ್ಯಾಯದ ಕಣ್ಣು (೧೯೮೫) - ನಿನ್ನ ಮಿಲನ 
ಸಂಗೀತ : ಅಂಟೋ ಬಾಲೂ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ 

ಆಆಆಆ... ಆಆ.. ಆಅ .. ಆಆ...  ಆಆಆಆ... ಆಆ.. ಆಅ .. ಆಆ... 
ನಿನ್ನ ಮಿಲನ ನಾನು ಕಾಣದೇ... ನನ್ನ ನಗೆಯೇ ಪೂರ ಬಾಡಿದೇ .. 
ನಿನ್ನ ಮಿಲನ ನಾನು ಕಾಣದೇ... ನನ್ನ ನಗೆಯೇ ಪೂರ ಬಾಡಿದೇ .. 
ಸ್ನೇಹ ಸಾಗದೇ ದಾಹ ಇಂಗದೇ .. ಸ್ನೇಹ ಸಾಗದೇ ದಾಹ ಇಂಗದೇ .. 
ಪ್ರೀತಿ ಕೊಡದೇ ಆಸೇ ತೀರದೇ... ಪ್ರೀತಿ ಕೊಡದೇ ಆಸೇ ತೀರದೇ... 
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೇ... 
ನೆರಳೂ ಬೆನ್ನಟ್ಟಿದೇ ...   ಬದುಕೂ ಹಿಮ್ಮೆಟ್ಟಿದೇ ... 
ನೆರಳೂ ಬೆನ್ನಟ್ಟಿದೇ ...   ಬದುಕೂ ಹಿಮ್ಮೆಟ್ಟಿದೇ ... 
   
ಬೀಸಿ ಬಂದ ಗಾಳಿಯೊಳಗೇ ನಿನ್ನ ದ್ವನಿಯಿಲ್ಲಾ......  
ಓಡಿ ಹರಿವ ಗಂಗೆಯೊಳಗೇ ನಿನ್ನ ಕುರುಹಿಲ್ಲಾ 
ಬೀಸಿ ಬಂದ ಗಾಳಿಯೊಳಗೇ ನಿನ್ನ ದ್ವನಿಯಿಲ್ಲಾ......  
ಓಡಿ ಹರಿವ ಗಂಗೆಯೊಳಗೇ ನಿನ್ನ ಕುರುಹಿಲ್ಲಾ 
ಸಂಧಿ ಬೆರೆದ ಸ್ನೇಹದೊಳಗೇ ನಿನ್ನ ಸುಳಿವಿಲ್ಲಾ  
ಸಂಧಿ ಸಳೆವ ಪಾಕದೊಳಗೆ ಸಂಗ ಸಿರಿಯಿಲ್ಲಾ.. 
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲಾ.. 
ನಲ್ಮೆ ಮಿಡಿದ ಹಾಡಿನೊಳಗೆ ಪ್ರೇಮ ಶೃತಿಯಿಲ್ಲಾ.. 
ಮೆಟ್ಟಿ ನಡೆವ ಹಾದಿಯೊಳಗೇ ನಿನ್ನ ನೆನಪೆಲ್ಲಾ.. 
ಮೆಟ್ಟಿ ನಡೆವ ಹಾದಿಯೊಳಗೇ ನಿನ್ನ ನೆನಪೆಲ್ಲಾ.. ನಿನ್ನ ನೆನಪೆಲ್ಲಾ.. ನಿನ್ನ ನೆನಪೆಲ್ಲಾ.. 

ಹಹ್ಹಾ..ಹಹ್ಹಾ..ಹಹ್ಹಾ..ಹಹ್ಹಾ..ಓ... ವ್    
ಯಾವ ಬೆಂಕಿ ಕಾಗೆ ಹೃದಯ ಬೆಂದೂ ಹೋಯಿತು 
ಯಾವ ಮಿಂಚೂ ಬಡಿದು ಒಡಲು ಭಸ್ಮವಾಯಿತು 
ಎಲ್ಲೀ ಮೈತ್ರೀ ಆಳ ತಪ್ಪಿ ನೆನೆಯೇ ತಬ್ಬಿತೋ 
ಇಂದೂ ಮಧುರ ಬಂಧ ಮರೆತು ಬಿರುಕೂ ಬಿಟ್ಟಿತೋ 
ಹೊತ್ತೂ ಮೀರಿ ಎಲ್ಲ ಬಣಜಿ ಸುಟ್ಟು ಸೆಳೆಯಿತೋ... 
ಹೊತ್ತೂ ಮೀರಿ ಎಲ್ಲ ಬಣಜಿ ಸುಟ್ಟು ಸೆಳೆಯಿತೋ... 
ಒತ್ತಿನಿಂತ ಬದುಕಿನೊಳಗೇ ಚಿತ್ತ ಕದಡಿತೋ 
ಒತ್ತಿನಿಂತ ಬದುಕಿನೊಳಗೇ ಚಿತ್ತ ಕದಡಿತೋ 
ಚಿತ್ತ ಕದಡಿತೋ.. ಚಿತ್ತ ಕದಡಿತೋ   
ನಿನ್ನ ಮಿಲನ ನಾನು ಕಾಣದೇ... ನನ್ನ ನಗೆಯೇ ಪೂರ ಬಾಡಿದೇ .. 
ಸ್ನೇಹ ಸಾಗದೇ ದಾಹ ಇಂಗದೇ .. ಸ್ನೇಹ ಸಾಗದೇ ದಾಹ ಇಂಗದೇ .. 
ಪ್ರೀತಿ ಕೊಡದೇ ಆಸೇ ತೀರದೇ... ಪ್ರೀತಿ ಕೊಡದೇ ಆಸೇ ತೀರದೇ... 
ರಾಗ ಪಾಡಿ ಭೋಗ ಬೇಡಿ ಕಂಗೆಟ್ಟಿದೇ... 
ನೆರಳೂ ಬೆನ್ನಟ್ಟಿದೇ ...   ಬದುಕೂ ಹಿಮ್ಮೆಟ್ಟಿದೇ ... 
ನೆರಳೂ ಬೆನ್ನಟ್ಟಿದೇ ...   
-------------------------------------------------------------------------------------------
 
ನ್ಯಾಯದ ಕಣ್ಣು (೧೯೮೫) - ಜೀವನ ಸುಖ ಪಯಣ 
ಸಂಗೀತ : ಅಂಟೋ ಬಾಲೂ ಸಾಹಿತ್ಯ : ಕೆ.ರಾಮಕೃಷ್ಣ  ಗಾಯನ : ಎಸ್.ಪಿ.ಶೈಲಜಾ 

ಜೀವನ...  ಸುಖ ಪಯಣ.. ಆನಂದದೀ.. ನಲಿಯುವ ಜಾಣ 
ಜೀವನ...  ಸುಖ ಪಯಣ.. ಆನಂದದೀ.. ನಲಿಯುವ ಜಾಣ 
ಮೋಜಿಗೇ ಕುಡಿದೂ ಆನಂದಕೆ ನಲಿದೂ ...   
ಮೋಜಿಗೇ ಕುಡಿದೂ..  ಆನಂದಕೆ ನಲಿದು ಮೈಮನ ಮರೆಯುವ ಬಾ... ಬಾ.... ಬಾ.... 

ಅಲ್ಲೇನೋ ನೋಡುವೆ ನೀನೂ.. ಇಲ್ಲಿಗೆ ಬಾ ಮಧುವಿನ ಜೇನೂ.. 
ಅಲ್ಲೇನೋ ನೋಡುವೆ ನೀನೂ.. ಇಲ್ಲಿಗೆ ಬಾ ಮಧುವಿನ ಜೇನೂ.. 
ನನ್ನನ್ನೂ ಸೇರೋ ನೀ ಬೇಗ...   
ಹೇ.. ನನ್ನನ್ನೂ ಸೇರೋ ನೀ ಬೇಗ... ನನ್ನನ್ನೂ ಸೇರೋ ನೀ ಬೇಗ...   
ನನ್ನನ್ನೂ ಸೇರೋ ನೀ ಬೇಗ ಕಾಣುವೇ ಸುಖವನೂ ಈಗ... ಈಗ.. ಈಗ.. ಈಗ... 
ಜೀವನ...  ಸುಖ ಪಯಣ.. ಆನಂದದೀ.. ನಲಿಯುವ ಜಾಣ 
ಮೋಜಿಗೇ ಕುಡಿದೂ..  ಆನಂದಕೆ ನಲಿದು ಮೈಮನ ಮರೆಯುವ ಬಾ... ಬಾ.... ಬಾ.... 

ಮಧುವೇ ಮಧುರ ಲೋಕ ಮತ್ತೆಲ್ಲೂ ಕಾಣದಿ ಈ ಸುಖ 
ಮಧುವೇ ಮಧುರ ಲೋಕ ಮತ್ತೆಲ್ಲೂ ಕಾಣದಿ ಈ ಸುಖ 
ಜೀವನ ಒಂದು ನರಕ..      
ಈ ಜೀವನ ಒಂದು ನರಕ.. ಜೀವನ ಒಂದು ನರಕ.. 
ಈ ಜೀವನ ಒಂದು ನರಕ ಮರಳುಗಾದೇ ಹೂವ ನಗೋ ಯುವಕ.. ನವಯುವಕ.. ನವಯುವಕ.. 
ಜೀವನ...  ಸುಖ ಪಯಣ.. ಆನಂದದೀ.. ನಲಿಯುವ ಜಾಣ 
ಜೀವನ...  ಸುಖ ಪಯಣ.. ಆನಂದದೀ.. ನಲಿಯುವ ಜಾಣ 
ಮೋಜಿಗೇ ಕುಡಿದೂ..  ಆನಂದಕೆ ನಲಿದು 
ಮೋಜಿಗೇ ಕುಡಿದೂ..  ಆನಂದಕೆ ನಲಿದು ಮೈಮನ ಮರೆಯುವ ಬಾ... ಬಾ.... ಬಾ.... 
-------------------------------------------------------------------------------------------

ನ್ಯಾಯದ ಕಣ್ಣು (೧೯೮೫) - ಬಾನ ಸೂರ್ಯ 
ಸಂಗೀತ : ಅಂಟೋ ಬಾಲೂ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ  

ಗಂಡು : ಬಾನ ಸೂರ್ಯ ಇದ್ದರೇ ತಾನೇ ಚಂದಿರ ಏನ್ ಬೆಳಕೂ ..  
            ನನ್ನ ಬಿಟ್ಟೂ ನೀನಗಿನ್ನ ಏಲ್ಲಿ .. ಸಂತಸದ ಕುಲುಕು 
ಹೆಣ್ಣು : ಹೊನ್ನ ಮೈಯ್ಯ ಇದ್ದರೇ ಉಂಟೇ ಹೊನ್ನಿಗೇ ನೆರವೂ 
           ನನ್ನ ಬಿಟ್ಟೂ ನಿನಗಿನ್ನ ಎಲ್ಲೀ ಮೋಜಿನ ಗೆಲುವೂ .. 
ಗಂಡು : ನನ್ನ ಬಿಟ್ಟೂ .. ಹೇಹೇಹೇ ನನ್ನ ಬಿಟ್ಟೂ ನಿನಗಿನ್ನನೆಲ್ಲಿ  ..ಹೇಹೇಹೇ  ನಿನಗಿನ್ನನೆಲ್ಲೀ .. 
ಹೆಣ್ಣು :  ನನ್ನ ಬಿಟ್ಟೂ ನಿನಗಿನ್ನ ಎಲ್ಲೀ ಮೋಜಿನ ಗೆಲುವೂ .. 

ಗಂಡು : ನೀರನಗಲೀ ಮೀನಿಲ್ಲ ನನ್ನ ತೊರೆದೂ ನೀನಿಲ್ಲ.. ಹೆಣ್ಣು ಗಂಡು ಜೊತೆಯೆಲ್ಲಾ ... (ಆ)                 
            ನೀರನಗಲೀ ಮೀನಿಲ್ಲ ನನ್ನ ತೊರೆದೂ ನೀನಿಲ್ಲ.. ಹೆಣ್ಣು ಗಂಡು ಜೊತೆಯೆಲ್ಲಾ ...                  
            ಬಾಳಪೂರ ಸಂಬಂಧ ಕೂಡಿ ಕಳೆಯೋ ಅನುಬಂಧ ಸಂಗ ಸೇರಿ ಮಕರಂದ 
            ಬಾಳಪೂರ ಸಂಬಂಧ ಕೂಡಿ ಕಳೆಯೋ ಅನುಬಂಧ ಸಂಗ ಸೇರಿ ಮಕರಂದ 
            ಸಂಗ ಸೇರಿ ಮಕರಂದ 
ಹೆಣ್ಣು : ನೀರಿನಗದ ಬಾನಿಲ್ಲ ತಾರೆಯಿರದ ಕಳೆ ಇಲ್ಲಾ... ತಾಳಮೇಳ ಬದುಕೆಲ್ಲಾ.. (ಅಹಾ ) 
          ನೀರಿನಗದ ಬಾನಿಲ್ಲ ತಾರೆಯಿರದ ಕಳೆ ಇಲ್ಲಾ... ತಾಳಮೇಳ ಬದುಕೆಲ್ಲಾ.. 
          ಹೂವೂ ಬಳ್ಳಿ ಒಡನಾಡಿ ನದಿಯೂ ಕಡಲು ಜೊತೆಗೂಡಿ ಜೀವಭಾವ ಹೊಡೆದಾಡಿ 
          ಹೂವೂ ಬಳ್ಳಿ ಒಡನಾಡಿ ನದಿಯೂ ಕಡಲು ಜೊತೆಗೂಡಿ ಜೀವಭಾವ ಹೊಡೆದಾಡಿ 
          ಜೀವಭಾವ ಹೊಡೆದಾಡಿ 
ಗಂಡು : ಬಾನ ಸೂರ್ಯ ಇದ್ದರೇ ತಾನೇ ಚಂದಿರ ಏನ್ ಬೆಳಕೂ ..  
            ನನ್ನ ಬಿಟ್ಟೂ ನೀನಗಿನ್ನ ಏಲ್ಲಿ .. ಸಂತಸದ ಬದುಕು .. ಆ.. 

ಗಂಡು : ಗಾಳಿಯೊಳಗೇ ಕಂಪಿಲ್ಲ ಕಬ್ಬಿನೊಳಗೇ ಸವಿಯಲ್ಲ ಚುಕ್ಕಿಯಿರದ ಮುಗಿಲಿಲ್ಲಾ.. (ಆಆ) .. 
            ಗಾಳಿಯೊಳಗೇ ಕಂಪಿಲ್ಲ ಕಬ್ಬಿನೊಳಗೇ ಸವಿಯಲ್ಲ ಚುಕ್ಕಿಯಿರದ ಮುಗಿಲಿಲ್ಲಾ.. . 
            ಬೇರು ಕಡಿದ ಮರವಿಲ್ಲ.. ಕಾದು ತಳೆದ ಮೊಗ್ಗಿಲ್ಲ.. ಮನಸ್ಸೂ ಇಲ್ಲದೇ ಕನಸಿಲ್ಲ.. 
            ಬೇರು ಕಡಿದ ಮರವಿಲ್ಲ.. ಕಾದು ತಳೆದ ಮೊಗ್ಗಿಲ್ಲ.. ಮನಸ್ಸೂ ಇಲ್ಲದೇ ಕನಸಿಲ್ಲ.. 
            ಮನಸ್ಸೂ ಇಲ್ಲದೇ ಕನಸಿಲ್ಲ.. 
ಹೆಣ್ಣು : ಶಬ್ದದಿಂದ ಮಾತಿಲ್ಲ.. ಲಜ್ಜೆಗಿಂತ ಕಡೆಯಿಲ್ಲ ನಲ್ಮೆಯಿಂದ ನಗುವೆಲ್ಲಾ.. (ಆಹಾ)
          ಶಬ್ದದಿಂದ ಮಾತಿಲ್ಲ.. ಲಜ್ಜೆಗಿಂತ ಕಡೆಯಿಲ್ಲ ನಲ್ಮೆಯಿಂದ ನಗುವೆಲ್ಲಾ.. 
          ಪ್ರೀತಿ ನಿಂದೂ ತಂಪೆಲ್ಲ.. ಹಂಚಿಕೊಂಡು ರಂಗೆಲ್ಲ.. ಸನಿಹ ಬರಲೂ ಸುಖವೆಲ್ಲಾ.. 
          ಪ್ರೀತಿ ನಿಂದೂ ತಂಪೆಲ್ಲ.. ಹಂಚಿಕೊಂಡು ರಂಗೆಲ್ಲ.. ಸನಿಹ ಬರಲೂ ಸುಖವೆಲ್ಲಾ.. 
           ಸನಿಹ ಬರಲೂ ಸುಖವೆಲ್ಲಾ.. 
ಗಂಡು : ಬಾನ ಸೂರ್ಯ ಇದ್ದರೇ ತಾನೇ ಚಂದಿರ ಏನ್ ಬೆಳಕೂ ..  
            ನನ್ನ ಬಿಟ್ಟೂ ನೀನಗಿನ್ನ ಏಲ್ಲಿ .. ಸಂತಸದ ಬದುಕು .... 
ಹೆಣ್ಣು : ಹೊನ್ನ ಮೈಯ್ಯ ಇದ್ದರೇ ಉಂಟೇ ಹೊನ್ನಿಗೇ ನೆರವೂ 
           ನನ್ನ ಬಿಟ್ಟೂ ನಿನಗಿನ್ನ ಎಲ್ಲೀ ಮೋಜಿನ ಗೆಲುವೂ .. 
ಗಂಡು : ನನ್ನ ಬಿಟ್ಟೂ .. ಹೇಹೇಹೇ ನನ್ನ ಬಿಟ್ಟೂ ನಿನಗಿನ್ನನೆಲ್ಲಿ  ..ಹೇಹೇಹೇ  ನಿನಗಿನ್ನನೆಲ್ಲೀ .. 
ಹೆಣ್ಣು :  ನನ್ನ ಬಿಟ್ಟೂ ನಿನಗಿನ್ನ ಎಲ್ಲೀ ಮೋಜಿನ ಗೆಲುವೂ .. 
-------------------------------------------------------------------------------------------

ನ್ಯಾಯದ ಕಣ್ಣು (೧೯೮೫) - ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ 
ಸಂಗೀತ : ಅಂಟೋ ಬಾಲೂ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ  

ಗಂಡು : ಹೇಯ್ ... (ಹ್ಹಹ್ಹಹ್ಹಹ್ಹಾ...) ಹ್ಹೂಹ್ಹೂಹ್ಹೂಹ್ಹೂ (ಹ್ಹಹ್ಹಹ್ಹಹ್ಹಾ...) ಹೇಹೇಹೇಹೇಹೇ (ಹ್ಹಹ್ಹಹ್ಹಾ...)
ಗಂಡು : ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ          ಹೆಣ್ಣು : ಸ್ನೇಹ ಮೆಲ್ಲಗೇ ಮೋಹ ಕಚ್ಚಿದೇ 
ಗಂಡು : ರಾಗ ರಂಗು ಕೂಡಲೂ  ಪ್ರೇಮಗೀತೆ ಹಾಡಲೂ 
ಹೆಣ್ಣು : ನಾನೂ ನಿನ್ನ ಅಪ್ಪಿದೇ ಹಾದಿ ತಪ್ಪದೇ ..            
ಗಂಡು : ನಾ ಹಾದಿ ತಪ್ಪದೇ ..            
ಹೆಣ್ಣು : ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ          ಗಂಡು : ಸ್ನೇಹ ಮೆಲ್ಲಗೇ ಮೋಹ ಕಚ್ಚಿದೇ 
ಹೆಣ್ಣು : ರಾಗ ರಂಗು ಕೂಡಲೂ  ಪ್ರೇಮಗೀತೆ ಹಾಡಲೂ 
ಗಂಡು : ನಾನೂ ನಿನ್ನ ಅಪ್ಪಿದೇ ಹಾದಿ ತಪ್ಪದೇ ..            
ಹೆಣ್ಣು : ನಾ ಹಾದಿ ತಪ್ಪದೇ ..            

ಹೆಣ್ಣು : ಹೇ.. ಹ್ಹಾ.. ಅಹ್ಹಹ್ಹ..  ಹ್ಹಾ.. 
           ಹೂವ ಹತ್ತಿರ ದುಂಬಿ ಮುತ್ತಿದೇ..  ಮೇರೇ ಮೀರಿ ಪೂರ ಹೀರಿ ನಂಟೂ ನೆಟ್ಟಿದೇ ..
ಗಂಡು : ಹೂವ ಹತ್ತಿರ ದುಂಬಿ ಮುತ್ತಿದೇ..  ಮೇರೇ ಮೀರಿ ಪೂರ ಹೀರಿ ನಂಟೂ ನೆಟ್ಟಿದೇ ..
ಹೆಣ್ಣು : ವಿಶ್ವಾಸ ಕೂಗಿತೇ.. ಉನ್ಮಾದ ಮಾಗಿದೇ ಒಂದಾಗಿ ಸಾಗಿದೇ ನಾಳೇ  ಬಾಳಿಗೇ 
ಗಂಡು :  ವಿಶ್ವಾಸ ಕೂಗಿತೇ.. ಉನ್ಮಾದ ಮಾಗಿದೇ ಒಂದಾಗಿ ಸಾಗಿದೇ ನಾಳೇನ ಬಾಳಿಗೇ 
ಹೆಣ್ಣು : ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ          ಗಂಡು : ಅರೆರೆರೇ..  ಸ್ನೇಹ ಮೆಲ್ಲಗೇ ಮೋಹ ಕಚ್ಚಿದೇ 
ಹೆಣ್ಣು : ರಾಗ ರಂಗು ಕೂಡಲೂ  ಪ್ರೇಮಗೀತೆ ಹಾಡಲೂ 
ಗಂಡು : ನಾನೂ ನಿನ್ನ ಅಪ್ಪಿದೇ ಹಾದಿ ತಪ್ಪದೇ ..            
ಹೆಣ್ಣು : ನಾ ಹಾದಿ ತಪ್ಪದೇ ..            

ಗಂಡು : ಪಪಪ್ಪಾಪ.. ಪಪಪ್ಪಾಪ..  ಪಪಪ್ಪಾಪ..ಪ   ಪಪಪ್ಪಾಪ..  ಪಪಪ್ಪಾಪ..  ಪಪಪ್ಪಾಪ.. ಪ         
            ಬಾನ ಹಕ್ಕಿಗೇ ಹಣ್ಣು ಸಿಕ್ಕಿದೇ ..ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೇ... 
ಹೆಣ್ಣು :   ಬಾನ ಹಕ್ಕಿಗೇ ಹಣ್ಣು ಸಿಕ್ಕಿದೇ ..ಮಾಟ ನೋಡಿ ದಾಹ ಮೂಡಿ ಬೇಟೆ ದಕ್ಕಿದೇ... 
ಗಂಡು : ಕಣ್ಣೋಟ ಸಂಚಿಗೇ..  ಚೆಲ್ಲಾಟ ಮಿಂಚಿಗೇ..  ಹಾಲ್ಜೇನು ಹಂಚಿದೇ ನಲ್ಮೆ ಬೇಡಿದೇ .. 
ಹೆಣ್ಣು : ಕಣ್ಣೋಟ ಸಂಚಿಗೇ..  ಚೆಲ್ಲಾಟ ಮಿಂಚಿಗೇ..  ಹಾಲ್ಜೇನು ಹಂಚಿದೇ ನಲ್ಮೆ ಬೇಡಿದೇ .. 
ಗಂಡು : ಅರೇ .. ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ          ಹೆಣ್ಣು : ಸ್ನೇಹ ಮೆಲ್ಲಗೇ ಮೋಹ ಕಚ್ಚಿದೇ 
ಗಂಡು : ರಾಗ ರಂಗು ಕೂಡಲೂ  ಪ್ರೇಮಗೀತೆ ಹಾಡಲೂ 
ಹೆಣ್ಣು : ನಾನೂ ನಿನ್ನ ಅಪ್ಪಿದೇ ಹಾದಿ ತಪ್ಪದೇ ..            
ಗಂಡು : ನಾ ಹಾದಿ ತಪ್ಪದೇ ..            
ಇಬ್ಬರು : ಪ್ರೀತಿ ಹುಚ್ಚಿಗೇ ಆಸೇ ಹೆಚ್ಚಿದೇ.. ಸ್ನೇಹ ಮೆಲ್ಲಗೇ ಮೋಹ ಕಚ್ಚಿದೇ 
ಗಂಡು : ರಪ್ಪರಪ್ಪಪಪ್ಪಾ.. (ಅಹ್ಹಹ್ಹಹಹ) ರಪ್ಪರಪ್ಪಪಪ್ಪಾ.. (ಅಹ್ಹಹ್ಹಹಹ) 
           ಹೂಂಹೂಂಹೂಂ.. (ಅಹ್ಹಹ್ಹಹಹ) ಹೂಂಹೂಂಹೂಂ.. (ಅಹ್ಹಹ್ಹಹಹ)  
------------------------------------------------------------------------------------------

No comments:

Post a Comment