1136. ನ್ಯಾಯ ಎಲ್ಲಿದೆ (೧೯೮೨)

ನ್ಯಾಯ ಎಲ್ಲಿದೇ ಚಿತ್ರದ ಹಾಡುಗಳು
  1. ಹೆಣ್ಣು ಚೆನ್ನ ತಾನೇ
  2. ನ್ಯಾಯ ಎಲ್ಲಿದೇ ಎಲ್ಲಿದೆಯೋ ನ್ಯಾಯ ಅಣ್ಣಾ
  3. ನೀ ಕಳ್ಳನೂ ಬಲು ತುಂಟನೂ
  4. ನನಗೂ ನಿನಗೂ ಇಬ್ಬರಿಗೇ ಗೊತ್ತು
  5. ನ್ಯಾಯ ಎಲ್ಲಿದೇ ಎಲ್ಲಿದೆಯೋ ನ್ಯಾಯ ಅಣ್ಣಾ (ದುಃಖ )
ನ್ಯಾಯ ಎಲ್ಲಿದೆ (೧೯೮೨) - ಹೆಣ್ಣು ಚೆನ್ನ ತಾನೇ
ಸಂಗೀತ : ಚಕ್ರವರ್ತಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ ಜಾನಕೀ

ಹ್ಹ್ ... ಓಹೋ... ಹ್ಹಾ....ಆಆಆ ..
ಹೆಣ್ಣು ಚೆನ್ನ ತಾನೇ ಹೇ... ಕಣ್ಣು ಚೆನ್ನ ತಾನೇ ...
ಹೆಣ್ಣು ಚೆನ್ನ ತಾನೇ ಹೇ... ಕಣ್ಣು ಚೆನ್ನ ತಾನೇ ...
ಪ್ರೀತಿ ಬಂದಾಗ ಆಸೇ  ತಂದಾಗ ಇನ್ನೂ ಸೊಗಸೇ ತಾನೇ...ಹ್ಹ.. ಹ್ಹಾ..  
ಹೆಣ್ಣು ಚೆನ್ನ ತಾನೇ

ಒಳ್ಳೇ ಗುಣವಿದೇ ಒಳ್ಳೇ ಮನಸಿದೇ ಒಳ್ಳೇ ವಯಸಿರಲೂ 
ಕಂಡಾಗ ನಗುತಾ ಉಲ್ಲಾಸ ತರಲೂ ಸಂತೋಷ ತಾನೇ 
ನೋಟ ಹೀತವಾಗಿ ಮಾತು ಮೀತವಾಗಿ 
ನೋಟ ಹೀತವಾಗಿ ಮಾತು ಮೀತವಾಗಿ ಅರಿತು ನಿನ್ನಾ ಬೆರೆಯೋ ಹೆಣ್ಣಾ ಸ್ನೇಹ ಸವೀ ತಾನೇ 
ಹ್ಹಾ....ಆಆಆ .. ಹೆಣ್ಣು ಚೆನ್ನ ತಾನೇ 

ಹೂವು ಅರಳಲೂ ಕಂಪೂ ಚೆಲ್ಲಲೂ ದುಂಬಿ ಹಾಡಿರಲೂ 
ಬಾನಲ್ಲಿ ರಂಗೂ ಚೆಲ್ಲಾಡಿ ಸಂಜೇ ಓಡೋಡಿ ಬರಲೂ
ಹಕ್ಕಿಗೇ ಸಂಗೀತ.. ಹಾಡಿ ನಲಿವಾಗ  

ಹಕ್ಕಿಗೇ ಸಂಗೀತ.. ಹಾಡಿ ನಲಿವಾಗ ಗೆಳತೀ ನಿನ್ನ ಬಳಿಯಲ್ಲಿರಲೂ ಬಾಳೇ ಸುಖ ತಾನೇ 
ಓಹೋ... ಹ್ಹಾ....ಆಆಆ ..
ಹೆಣ್ಣು ಚೆನ್ನ ತಾನೇ ಹೇ... ಕಣ್ಣು ಚೆನ್ನ ತಾನೇ ...
ಪ್ರೀತಿ ಬಂದಾಗ ಆಸೇ  ತಂದಾಗ ಇನ್ನೂ ಸೊಗಸೇ ತಾನೇ...ಹ್ಹ.. ಹ್ಹಾ..  
ಹೆಣ್ಣು ಚೆನ್ನ ತಾನೇ  
--------------------------------------------------------------------------------------------------------------------------

ನ್ಯಾಯ ಎಲ್ಲಿದೆ (೧೯೮೨) - ನ್ಯಾಯ ಎಲ್ಲಿದೇ ಎಲ್ಲಿದೆಯೋ ನ್ಯಾಯ
ಸಂಗೀತ : ಚಕ್ರವರ್ತಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ

ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ...  ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ... ಎಲ್ಲಿದೆಯೋ ನ್ಯಾಯ....ಅಣ್ಣಾ ಎಲ್ಲಿದೆಯೋ ನ್ಯಾಯ ಹಾ.

ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು
ಒಬ್ಬರನೊಬ್ಬರು ದೋಚಿದರೇನು ಸುಲುಗೆಯಮಾಡಿ ಬದುಕಿದರೇನು
ಕೊಲೆಯನ್ನೆ ಮಾಡಿದರೇನು ಅನ್ಯಾಯ ಮಾಡಿದರೇನು ಹಾಯಾಗಿ ಬಾಳೋಕೆ ದಾರಿ ಉಂಟು
ಸಾಕ್ಷಿಯು ದೊರಕದ ಜಾಣ್ಮೆಯ ತೋರುತ ಗೆಲುವ ಪಡೆದರೆ  ಸತ್ಯ ಅಳುತಿದೆ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....

ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು
ಕಾಯಿದೆ ಎನ್ನುವರು ಕೋರ್ಟ್ ಇದೆ ಎನ್ನುವರು ವಾದವ ಮಾಡಿ ಗೆಲಿಸುವೆ ಏನುವರು
ಯಾರೇನು ಹೇಳಿದರೇನು ಯಾರೇನು ಮಾಡಿದರೇನು ನಾಯಂತೆ ಅಲೆಯೋದೇ ನಿನಗೆ ಗತಿ
ಮಾತಿನ ಮಲ್ಲರ ವಾದಕೆ ಎಲ್ಲರ ಮನುವು ಸೋತಿದೆ  ನಿಜವೂ ಸೊರಗಿದೆ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....
ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....

ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು
ಇಬ್ಬರ ಗುರಿಯು ಒಂದೇ ಆದರೂ ಸೇಡಿನ ಕಿಡಿಗಳ ಕಾರುತ ಇದ್ದರು
ಸೋದರನ ದಾರಿಯೇ ಬೇರೆ ಸೋದರಿಯ ಹಾದಿಯೇ ಬೇರೆ ಒಂದಾಗಿ ಬಾಳೋದು ಕನಸಾಯಿತು
ತಾಯಿಯ ಕಂಬನಿ ಒರೆಸುವ ನೆಪದಲಿ ರೋಷ ಬೆಳೆದರೆ ಪ್ರೀತಿ ಸೋತರೆ
ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ....
ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೇ .....ನ್ಯಾಯ ಎಲ್ಲಿದೇ .....
--------------------------------------------------------------------------------------------------------------------------

ನ್ಯಾಯ ಎಲ್ಲಿದೆ (೧೯೮೨) - ನೀ ಕಳ್ಳನೂ ಬಲು ತುಂಟನೂ
ಸಂಗೀತ : ಚಕ್ರವರ್ತಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಹೆಣ್ಣು : ನೀ ಕಳ್ಳನೂ ಬಲು ತುಂಟನೂ ಬಿಡಲಾರೇ ಇನ್ನೂ ನಾ ನಿನ್ನನೂ
          ಕೊಡುವಾಸೇ ಬೇಗ ಬಾ ನನ್ನನೂ
ಗಂಡು : ನೀ ಕಳ್ಳಿಯೂ ಬಲು ತುಂಟಿಯೂ ಬೀಡಲಾರೆ ಇನ್ನೂ ನಾ ನಿನ್ನನೂ
            ಕೋಡುವಾಸೆ ಬೇಗ ಬಾ ನನ್ನನೂ
ಹೆಣ್ಣು : ನೀ ಕಳ್ಳನೂ ಬಲು ತುಂಟನೂ

ಹೆಣ್ಣು : ಲಾಲಲ್ಲಲ್ಲಾ ಲಲ ಲಾಲಲ್ಲಾ ಲಲ್ಲಲ್ಲಾ ಲಲಲಾ
          ನೀನೂ ನಿಂತಲ್ಲೇ ನಿನ್ನ ಕಣ್ಣಲ್ಲೇ ಏಕೇ ಕೊಲ್ಲುವೇ ದೂರ ನಿಂತು ಏಕೇ ಹೀಗೆ ಬೇಟೆ ಆಡುವೇ
ಗಂಡು : ಜಿಂಕೆ ನೀನಲ್ಲ ಬಾಣ ಇಲ್ಲಿಲ್ಲಾ ಬೇಟೆ ಆಡೇನು ಏಕೋ ಕಾಣೇ ಏನೋ ಆಸೇ ನಿನ್ನ ನೋಡಲೂ
ಹೆಣ್ಣು : ಬಳಿ ಬರಲೇ ಸುಖ ತರಲೇ ಸರಸದ ಸವಿನುಡಿ ನಾ ಆಡಲೇ
ಗಂಡು : ಬೇಡಾ...  ಈಗಲೇ ತಾಳೂ..  ಕೋಮಲೇ
ಹೆಣ್ಣು : ನೀ ಕಳ್ಳನೂ (ಅಹ್ಹಹ್ಹಹ ) ಬಲು ತುಂಟನೂ (ಹೂಂಹೂಂಹೂಂ)  ಬಿಡಲಾರೇ ಇನ್ನೂ ನಾ ನಿನ್ನನೂ
          ಕೊಡುವಾಸೇ ಬೇಗ ಬಾ ನನ್ನನೂ
ಗಂಡು : ನೀ ಕಳ್ಳಿಯೂ ಬಲು ತುಂಟಿಯೂ

ಗಂಡು : ಎಂದೂ ಹೀಗಿಲ್ಲ ಇಂಥ ಮಾತಿಲ್ಲ ದೂರ ನಿಲ್ಲುವೇ ನನ್ನ ಕಂಡು ನಾಚಿ ದೂರ ಓಡಿ ಹೋಗುವೇ
ಹೆಣ್ಣು : ನಿನ್ನ ಮನಸೇನೂ ನಿನ್ನ ಗುಣವೇನೂ ಇಂದೂ ಬಲ್ಲೇನೂ ಇಂಥ ಗಂಡು ಸಿಗದೂ ಎಂದೂ ಹೀಗೆ ಬಂದೇನೂ
ಗಂಡು : ಅರಗಿಳಿಯ ಸವಿನುಡಿಗೇ ಚೆಲುವೆಯ ಒಲವಿಗೇ ನಾ ಸೋತೇನೂ
ಹೆಣ್ಣು : ಇನ್ನೂ ಎಂದಿಗೂ ಬಿಡೆನು ನಿನ್ನನ್ನೂ
ಗಂಡು : ನೀ ಕಳ್ಳಿಯೂ ಬಲು ತುಂಟಿಯೂ ಬೀಡಲಾರೆ ಇನ್ನೂ ನಾ ನಿನ್ನನೂ
            ಕೋಡುವಾಸೆ ಬೇಗ ಬಾ ನನ್ನನೂ
ಹೆಣ್ಣು : ನೀ ಕಳ್ಳನೂ (ಅಹ್ಹಹ್ಹಹ ) ಬಲು ತುಂಟನೂ (ಹೂಂಹೂಂಹೂಂ)  ಬಿಡಲಾರೇ ಇನ್ನೂ ನಾ ನಿನ್ನನೂ
          ಕೊಡುವಾಸೇ ಬೇಗ ಬಾ ನನ್ನನೂ
ಇಬ್ಬರು : ಲಲ್ಲಲ್ಲಲ್ಲಾ... ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
--------------------------------------------------------------------------------------------------------------------------

ನ್ಯಾಯ ಎಲ್ಲಿದೆ (೧೯೮೨) - ನನಗೂ ನಿನಗೂ ಇಬ್ಬರು ಗೊತ್ತು
ಸಂಗೀತ : ಚಕ್ರವರ್ತಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಕೋರಸ್ : ಹೇಹೇಹೇ .....    ಗಂಡು : ಹುಷಾರ್
ಗಂಡು : ನನಗೂ ನಿನಗೂ ಇಬ್ಬರಿಗೇ ಗೊತ್ತೂ
            ಈ ವೇಷದಲೀ ಆವೇಶದಲೀ ಏಕೇ ಬಂದೇನೋ ಇಲ್ಲಿಗೇಕೆ ಬಂದೇನೋ
ಹೆಣ್ಣು : ನನಗೂ ನಿನಗೂ ಇಬ್ಬರಿಗೇ ಗೊತ್ತೂ
          ಈ ವೇಷದಲೀ ಆವೇಶದಲೀ ಏಕೇ ಬಂದೇಯೋ ನೀನೂ ಏಕೇ ಬಂದೇಯೋ

ಕೋರಸ್ : ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
ಹೆಣ್ಣು : ಏನನೂ ಹುಡುಕುವೆಯೋ ಏತಕೆ ಅಲೆಯುವೆಯೋ
          ಹಕ್ಕಿಯೂ ಈ ನಿನ್ನ ಮೊಗವನು ಕಂಡಾಗ ಆಕಾಶಕ್ಕೇ ಹಾರದೇ
ಗಂಡು : ಹಾರಿದರೇನೂ ಬಿಡುವೇನೇ ನಾನೂ ಬಿಲ್ಲಿದೇ.. ಅಂಬಿದೇ .. ಕಣ್ಣಿದೇ.. ಗುರಿ ಇದೇ
            ಒಂದೇ ಬಾಣ ಹಕ್ಕಿ ಅಲ್ಲೇ
ಕೋರಸ್ :  ಹ್ಹಾ.. ಹ್ಹಾ    ಹ್ಹಾ.. ಹ್ಹಾ   ಹ್ಹಾ.. ಹ್ಹಾ   ಹ್ಹಾ.. ಹ್ಹಾ
ಗಂಡು : ಹುಷಾರ್....
ಹೆಣ್ಣು : ನನಗೂ ನಿನಗೂ ಇಬ್ಬರಿಗೇ ಗೊತ್ತೂ
          ಈ ವೇಷದಲೀ ಆವೇಶದಲೀ ಏಕೇ ಬಂದೇಯೋ ನೀನೂ ಏಕೇ ಬಂದೇಯೋ

ಕೋರಸ್ : ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
ಹೆಣ್ಣು : ಸಾವಿರ ಕಣ್ಣುಗಳೂ ನೋಡಿವೇ ನಿನ್ನನ್ನೂ ಬೇಟೆಯ ಆಡೋಕೇ 
         ಬಿಲ್ಲನೂ ಹಿಡಿದಾಗ ಈ ನಿನ್ನ ಕೈ ತಡೆದರೇ .... 
ಗಂಡು : ಆ ಕಥೆ ನನ್ನಾ... ಸುಡುತಿರುವಾಗ ಯಾರಿಗೂ ಹೇದರೇನೂ ಹ್ಹಾ.. 
            ಹಿಂದಕೇ ಹೋಗೇನೂ ಒಂದೇ ಗುರಿಯೂ ಸೇಡು.. ಸೇಡು                
ಕೋರಸ್ : ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..  ಹ್ಹೂ..  ಹ್ಹಾ..
ಗಂಡು : ಹುಷಾರ್....
            ನನಗೂ ನಿನಗೂ ಇಬ್ಬರಿಗೇ ಗೊತ್ತೂ
            ಈ ವೇಷದಲೀ ಆವೇಶದಲೀ ಏಕೇ ಬಂದೇನೋ ಇಲ್ಲಿಗೇಕೆ ಬಂದೇನೋ
--------------------------------------------------------------------------------------------------------------------------

ನ್ಯಾಯ ಎಲ್ಲಿದೆ (೧೯೮೨) - ನ್ಯಾಯ ಎಲ್ಲಿದೇ ಎಲ್ಲಿದೆಯೋ ನ್ಯಾಯ (ದುಃಖ )
ಸಂಗೀತ : ಚಕ್ರವರ್ತಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ

ನ್ಯಾಯ ಎಲ್ಲಿದೇ .......ನ್ಯಾಯ ಎಲ್ಲಿದೇ...  ಎಲ್ಲಿದೆಯೋ ನ್ಯಾಯ... ಅಣ್ಣಾ ಎಲ್ಲಿದೆಯೋ ನ್ಯಾಯ ಹಾ...
ಬಡವನು ನ್ಯಾಯವ ಕೇಳುವುದೇ ಅನ್ಯಾಯ
ನ್ಯಾಯ ಎಲ್ಲಿದೆ.....ನ್ಯಾಯ ಎಲ್ಲಿದೆ...
--------------------------------------------------------------------------------------------------------------------------

No comments:

Post a Comment