ಒಡೆದ ಹಾಲು ಚಿತ್ರದ ಹಾಡುಗಳು
- ಒಡೆದ ಹಾಲುಒಡೆದ ಮುತ್ತು
- ಬದುಕಲ್ಲಿ ಜೊತೆಯಾಗಿ ನೀನು ಬಂದೆ
- ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ ಮಂಗನಂತೆ
- ಇನಿಯನೇ ಚೆಲುವನೇ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಒಡೆದು ಹೋದಂಥ ಬಾಳೆಂದು ಬಾಳಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಗಂಡು : ಆಆಆ... ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಗಂಡು : ಆಆಆ... ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಗಂಡು : ಕಂಡಂಥ ಕನಸೆಲ್ಲ ಕಥೆಯಾಗಲು ಕಥೆಯಲ್ಲ ಬಾಳಲ್ಲಿ ವ್ಯಥೆಯಾಗಲು
ಮನದಾಸೆ ಮನದಲ್ಲಿ ಸೆಳೆಸಾಡಲು ವಿಧಿಯೊಂದು ಸಂಚನ್ನು ತಾ ಮಾಡಲು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು ಬಹುಕಾಲ ಬಾಳುತ್ತ ನಗಲಾರದು
ಗಿಡದಿಂದ ಹೂವೊಂದು ಬೇರಾಗಿ ತಾನೆಂದು ಬಹುಕಾಲ ಬಾಳುತ್ತ ನಗಲಾರದು
ಬಹುಕಾಲ ಬಾಳುತ್ತ ನಗಲಾರದು
ಹೆಣ್ಣು : ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಗಂಡು : ನನಗಾಗಿ ಹೂವೆಲ್ಲ ಮುಳ್ಳಾದರು ನಿನಗಾಗಿ ಮುಳ್ಳೆಲ್ಲ ಹೂವಾಗಲಿ
ಈ ನನ್ನ ಬಾಳೆಂದು ಮಣ್ಣಾಗಲು ನನ್ನಾಸೆ ನಿನ್ನಲ್ಲಿ ಕಣ್ಣಾಗಲಿ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ
ನಮಗಾಗಿ ನೋವೆಲ್ಲಾ ಒಂದಾಗಿ ಬಂದಾಗ ಇರುಳೆಂದು ನಮಗಾಗಿ ಹಗಲಾಗದು
ಇರುಳೆಂದು ನಮಗಾಗಿ ಹಗಲಾಗದು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಹೆಣ್ಣು : ಬೇರಾದ ಬದುಕಿಲ್ಲಿ ಮಸಿಯಾಗಲು ಬೇಕಾದ ಜಗದಾಸೆ ಹುಸಿಯಾಗಲು
ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ನೀ ಬೇಡಿ ಪಡೆದಂತ ಹರಿಗೋಲಿಗೂ ಎಂದೆಂದೂ ತಡೆದಿತ್ತು ಗುರಿ ಸೇರದು
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ
ಹೊಗೆ ಕೂಡ ಬರದಂತೆ ನೀನಿಲ್ಲಿ ಉರಿವಾಗ ಈ ಚಿಂತೆ ಚಿತೆಗಿಂತ ಮಿಗಿಲಾದುದು
ಈ ಚಿಂತೆ ಚಿತೆಗಿಂತ ಮಿಗಿಲಾದುದು
ಗಂಡು : ಒಡೆದ ಹಾಲು ಒಡೆದ ಮುತ್ತು
ಗಂಡು : ಒಡೆದ ಹಾಲು ಒಡೆದ ಮುತ್ತು
ಬಿರಿದು ಮತ್ತೆಂದಿಗೂ ತಾ ಒಂದಾಗದು
ಒಡೆದು ಹೋದಂಥ ಬಾಳೆಂದು ಬಾಳಗದು
ಒಡೆದ ಹಾಲು ಒಡೆದ ಮುತ್ತುಬಿರಿದು ಮತ್ತೆಂದಿಗೂ ತಾ ಒಂದಾಗದು
--------------------------------------------------------------------------------------------------------------------------
ಒಡೆದ ಹಾಲು (೧೯೮೪) - ಬದುಕಲ್ಲಿ ಜೊತೆಯಾಗಿ ನೀನು ಬಂದೆ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ಹರುಷ ನಿನ್ನ ಜೊತೆಯಾಗಿ
ಗಂಡು: ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಒಲವಿಂದ ಆನಂದ ನನಗೆ ತಂದರೆ
ಬಾಳುವೆ ಹೀಗೆಯೇ ಸಾವಿರ ಹರುಷ ನಿನ್ನ ಜೊತೆಯಾಗಿ
ಹೆಣ್ಣು : ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..) ಲಲ್ಲಲ್ಲಲ್ಲಾ ..(ಲಲ್ಲಲ್ಲಲ್ಲಾ ..)
ಹೆಣ್ಣು :ನಮ್ಮ ಪ್ರೀತಿ ಕಂಡು ಮುಗಿಲು ಮೇಘ ಸುರಿಯುತಿದೆ
ಗಂಡು : ನಮ್ಮ ಒಲವ ನೋಡಿ ಗಾಳಿ ತಂಪು ಚೆಲ್ಲಿದೆ
ಹೆಣ್ಣು : ಸಮ್ಮ ಆಟ ಕಂಡು ಮಿಂಚು ನಾಚಿ ಓಡಿದೆ
ಗಂಡು : ಸಾವಿರ ಜನ್ಮದಲ್ಲಿ ಈ ಅನುಬಂಧ ಬಿಡದು ಎದೆಂದು
ಹೆಣ್ಣು : ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಗಂಡು : ಒಲವಿಂದ ಆನಂದ ನನಗೆ ತಂದರೆ....
ಗಂಡು : ನಿನ್ನ ತುಟಿಯ ಸುಧೆಯಿರುವಾಗ ದಾಹ ಎಲ್ಲಿದೆ
ಹೆಣ್ಣು : ತೋಳಿನಿಂದ ಬಳಸಿರುವಾಗ ಚಳಿಯು ಎಲ್ಲಿದೆ
ಗಂಡು : ಪ್ರೀತಿ ಹೃದಯ ತುಂಬಿರುವಾಗ ವಿರಹ ಎಲ್ಲಿದೇ
ಹೆಣ್ಣು : ದೇವರು ಬಂದರು ಏನನೂ ಬೇಡೇನು ಸಾಕು ನೀ ನನಗೆ
ಗಂಡು: ಬದುಕಲ್ಲಿ ಜೊತೆಯಾಗಿ ನೀನು ಬಂದರೇ
ಹೆಣ್ಣು : ಒಲವಿಂದ ಆನಂದ ನನಗೆ ತಂದರೆ....
ಗಂಡು : ಬಾಳುವೆ ಹೀಗೆಯೇ ಸಾವಿರ ಹರುಷ ನಿನ್ನ ಜೊತೆಯಾಗಿ
ಹೆಣ್ಣು : ಲಲ್ಲಲ್ಲಲ್ಲಾ ... (ಲಲ್ಲಲ್ಲಲ್ಲಾ ..)ಆಆಆ.. ಲಲ್ಲಲ್ಲಲ್ಲಾ ..(ಲಲ್ಲಲ್ಲಲ್ಲಾ ..)
--------------------------------------------------------------------------------------------------------------------------ಒಡೆದ ಹಾಲು (೧೯೮೪) - ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ ಮಂಗನಂತೆ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ,
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ಕಾಣೋ ಅಂದವಿಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ನೋಡ್ತಿ ಹೂಂಹುಂ ಇಲ್ಲಿ ನೋಡ್ತಿ ಹೂಂಹುಂ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವಿಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಅಲ್ಲಿ ಕಾಣೋ ಅಂದವಿಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಏ.. ಅಲ್ಲಿ ಕಾಣೋ ಅಂದವಿಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ತುಟಿಯ ನೋಡು ತೊಂಡೆ ಹಣ್ಣು ಮೈಯ್ಯ ಬಣ್ಣ ನೋಡು ಹೊನ್ನು
ಜೊತೆಯಿರುವಾ ಚೆಲುವೆ ಬಿಟ್ಟು ಗೂಬೆ ಮೇಲೆ ಗಮನಾ ಇಟ್ಟು
ಮಂಗನಂತೆ ಏಕಾಡುವೆ ಅಹ್ಹಹ್ಹ
ಅಲ್ಲಿ ನೋಡ್ತಿ ಅಹ್ಹಹ್ಹ ಇಲ್ಲಿ ನೋಡ್ತಿ ಅಹ್ಹಹ್ಹ ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವೆಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಏಏಏ.. ಅಲ್ಲಿ ಕಾಣೋ ಅಂದವೆಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ದುಂಬಿ ಸುತ್ತ ಹಾರಾಡಲಿ ಕಾಯಿ ಮಾಗಿ ಹಣ್ಣಾಗಲಿ
ಹುಣ್ಣಿಮೆಯ ರಾತ್ರಿ ಬರಲಿ ತಂಪು ಗಾಳಿ ಬೀಸುತಿರಲಿ ಆಗ ಆಸೆ ಪೂರೈಸಲಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ
ಅಲ್ಲಿ ನೋಡ್ತಿ ಇಲ್ಲಿ ನೋಡ್ತಿ ಮಂಗನಂತೆ ಕಣ್ ಬಿಡ್ತಿ
ಅಲ್ಲಿ ಕಾಣೋ ಅಂದವೆಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
ಹ್ಹಹ್ಹಾಂ .. ಅಲ್ಲಿ ಕಾಣೋ ಅಂದವೆಲ್ಲ ಇಲ್ಲೇ ಇದೆಯೋ ನೋಡೋ ನಲ್ಲ
--------------------------------------------------------------------------------------------------------------------------
ಒಡೆದ ಹಾಲು (೧೯೮೪) - ಇನಿಯನೇ ಚೆಲುವನೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ,
ಇನಿಯನೇ... ಚೆಲುವನೇ...ಬಳಿಯಲ್ಲಿ ನಲ್ಲೆ ಇರುವಾಗ ಈ ಶೋಕವೇತಕೆ
ಈ ಶೋಕವೇತಕೆ ನಾನು ದೂರ ಹೋಗೋದುಂಟೇ.. ನಿನ್ನ ಬಿಟ್ಟು ಬಾಳೋದುಂಟೇ
ಓ ನನ್ನ ನಲ್ಲೆನೇ....
ಇನಿಯನೇ... ಚೆಲುವನೇ...ಬಳಿಯಲ್ಲಿ ನಲ್ಲೆ ಇರುವಾಗ ಈ ಶೋಕವೇತಕೆ
ಈ ಶೋಕವೇತಕೆ
ತಾರೆ ಇರುಳ ಮರೆವುದುಂಟೆ ರವಿಯ ಗಗನ ತೊರೆವುದುಂಟೇ ನೀ ಹೇಳು ಜಾಣನೇ
ಲತೆಯು ಮರವ ಬಿಡುವುದುಂಟೆ ಮರವು ನೆಲವ ಮರೆವುದುಂಟೆ ನನ್ನ ಗೆಳೆಯನೇ ಓ...
ಇನಿಯನೇ... ಹೇ.. ಚೆಲುವನೇ...ಬಳಿಯಲ್ಲಿ ನಲ್ಲೆ ಇರುವಾಗ ಈ ಶೋಕವೇತಕೆ
ಏ ... ಈ ಶೋಕವೇತಕೆ
ದೇವ ತಂದ ಸ್ನೇಹದಲ್ಲಿ ನೀನು ತಂದ ಪ್ರೇಮದಲ್ಲಿ ಅನುಮಾನ ಏತಕೆ
ಉಸಿರು ತನುವ ತೊರೆದ ಮೇಲೆ ನಿನ್ನಾ ನಾನು ಮರೆತ ಮೇಲೆ ಈ ಜೀವ ನಿಲ್ಲುವುದೇ ..
ಇನಿಯನೇ... ಚೆಲುವನೇ...ಬಳಿಯಲ್ಲಿ ನಲ್ಲೆ ಇರುವಾಗ ಈ ಶೋಕವೇತಕೆ
ಅಹ್ಹಹ್ಹ ... ಈ ಶೋಕವೇತಕೆ ನಾನು ದೂರ ಹೋಗೋದುಂಟೇ.. ನಿನ್ನ ಬಿಟ್ಟು ಬಾಳೋದುಂಟೇ
ಓ ನನ್ನ ನಲ್ಲೆನೇ
ಇನಿಯನೇ... ಚೆಲುವನೇ...ಬಳಿಯಲ್ಲಿ ನಲ್ಲೆ ಇರುವಾಗ ಈ ಶೋಕವೇತಕೆ
ಈ ಶೋಕವೇತಕೆ
--------------------------------------------------------------------------------------------------------------------------
No comments:
Post a Comment