1409. ಒಂದೇ ರಕ್ತ (೧೯೮೪)

ಒಂದೇ ರಕ್ತ ಚಲನಚಿತ್ರದ ಹಾಡುಗಳು 
  1. ಹೂವಲೀ ಜೇನಿನ ಹನಿ ಹನಿ ತುಂಬಿದ ಹಾಗೇ 
  2. ತಂಗಾಳಿ ಬೀಸಿ ಚಳಿಯಾಗಿದೆ 
  3. ರವಿ ಕಾಣದೆಲ್ಲಾ ಕವಿ ಕಾಣುವ 
  4. ಈ ಆನಂದವೂ ಹೀಗೆ ಇರಲೀ ಎಂದೆಂದೂ 
ಒಂದೇ ರಕ್ತ (೧೯೮೪) -  ಹೂವಲೀ ಜೇನಿನ ಹನಿ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ಹೂವಲೀ ಜೇನಿನ ಹನಿ ಹನಿ ತುಂಬಿದ ಹಾಗೇ .. 
          ಮೈಯ್ಯಲಿ ಯೌವ್ವನದಾ ಹೊಳೆಯೂ ಹರಿವಾಗ 
          ಏನೋ ಆತುರಾ.. ಏಕೋ ಕಾತುರಾ... 
ಕೋರಸ್ : ಅಬ್ಬ ಅಬ್ಬ .. (ಹ್ಹ ಹ್ಹ ) ಅಬ್ಬ ಅಬ್ಬ ..
ಗಂಡು : ಹೂವಲೀ ಜೇನಿನ ಹನಿ ಹನಿ ತುಂಬಿದ ಹಾಗೇ .. 
            ಮೈಯ್ಯಲಿ ಯೌವ್ವನದಾ ಹೊಳೆಯೂ ಹರಿವಾಗ 
            ಏನೋ ಆತುರಾ.. ಏಕೋ ಕಾತುರಾ... ಅಬ್ಬ ಅವ್ವಾ .. ಅಬ್ಬ ಅವ್ವಾ ..

ಕೋರಸ್ : ತೂರೂರೂ ತೂರೂರೂರು ತೂರೂತೂರೂ ರೂರು  ರೂರು   
ಗಂಡು : ಮಿಂಚೋದು ತನುವಲ್ಲಿ ಓಡಾಡಲೂ ಬದುಕೊಂದು ಉಯ್ಯಾಲೆಯಂತಾಗಲೂ 
            ಇರುಳಲ್ಲಿ ನಿದ್ದೆಯೂ ತುಂಡಾಗಿ ಹೋಗಲೂ ಕಣ್ಣು ಕನಸಲ್ಲಿ ತೇಲಾಡಲೂ 
ಹೆಣ್ಣು : ನಿನ್ನ ಸ್ನೇಹ ಬೇಕೆಂದೂ ಬಂದಾಗಲೂ ಬಳಿಯಲ್ಲಿ ಮೈಸೋಕಿ ನಿಂತಾಗಲೂ 
           ಹೂವಾಗೀ ಹೃದಯವೂ ಕುಣಿದಾಡಿ ನಯನವೂ ಆಸೇ ಎದೆಯಲ್ಲಿ ಗರಿ ಬಿಚ್ಚಲೂ .. 
ಗಂಡು : ಹರುಷ ನಿನ್ನಲ್ಲೀ ಬಯಕೇ ಕಣ್ಣಲ್ಲಿ ಮರೆವೆ ನೀ ನಿನ್ನನ್ನೇ ..ಅವ್ವಾ... ಅವ್ವಾ.. 
ಹೆಣ್ಣು : ಹೂವಲೀ ಜೇನಿನ ಹನಿ ಹನಿ ತುಂಬಿದ ಹಾಗೇ .. 
          ಮೈಯ್ಯಲಿ ಯೌವ್ವನದಾ ಹೊಳೆಯೂ ಹರಿವಾಗ 
          ಏನೋ ಆತುರಾ.. ಅಬ್ಬಾ ಏಕೋ ಕಾತುರಾ... 
ಕೋರಸ್ : ಅಬ್ಬ ಅಬ್ಬ .. (ಹ್ಹ ಹ್ಹ ) ಅಬ್ಬ ಅಬ್ಬ ..

ಕೋರಸ್ : ಲಾ ಲಾ ಲಾ ಲಾ  ಲಾ ಲಾ ಲಾ ಲಾ  
ಹೆಣ್ಣು : ಹೆಣ್ಣನ್ನೂ ಗಂಡೊಂದೂ ಕಂಡಾಗಲೂ ಕಣ್ಣಲ್ಲಿ ಕಣ್ಣೋಟ ಬೆರೆತಾಗಲೂ 
          ಮೊಗ್ಗೊಂದು ಬಿರಿಯುತಾ ಹೂವಾದ ಹಾಗೇ ದುಂಬಿ ಉಲ್ಲಾಸ ಓಲಾಡಲು 
ಗಂಡು : ಸಂಕೋಚ ನಿನ್ನಿಂದ ದೂರಾಗಲೂ ಮಾತೆಲ್ಲಾ ಸಂಗೀತದಂತಾಗಲೂ 
            ಒಲವೆಂದೂ ಹೇಳುವೇ ಸಂಗಾತಿ ಎನ್ನುವೇ ನಿಂತ ಕ್ಷಣದಲ್ಲೀ ಕವಿಯಾಗುವೇ 
ಹೆಣ್ಣು : ಸೆಳೆತಾ ಹೆಚ್ಚಾಗೀ ಮನವೂ ಹುಚ್ಚಾಗೀ ಮದುವೇ ನೀ ನಿನ್ನನೇ (ಅಬ್ಬಾ ಅವ್ವಾ )
ಇಬ್ಬರು : ಹೂವಲೀ ಜೇನಿನ ಹನಿ ಹನಿ ತುಂಬಿದ ಹಾಗೇ .. 
          ಮೈಯ್ಯಲಿ ಯೌವ್ವನದಾ ಹೊಳೆಯೂ ಹರಿವಾಗ 
          ಏನೋ ಆತುರಾ.. (ಅಬ್ಬಾ)  ಏಕೋ ಕಾತುರಾ... (ಅವ್ವಾ) 
ಕೋರಸ್ : ಅಬ್ಬ ಅಬ್ಬ .. (ಹ್ಹ ಹ್ಹ ) ಅಬ್ಬ ಅಬ್ಬ ..(ಹ್ಹ ಹ್ಹ ) 
               ಅಬ್ಬ ಅಬ್ಬ .. (ಅವ್ವಾ ) ಅಬ್ಬ ಅಬ್ಬ ..(ಅವ್ವಾ... ಹ್ಹಾ.. ) 
 -----------------------------------------------------------------------------------------------------------------
 
ಒಂದೇ ರಕ್ತ (೧೯೮೪) -  ತಂಗಾಳಿ ಬೀಸಿ ಚಳಿಯಾಗಿದೆ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಜೋಲಿ ಅಬ್ರಾಹಂ 

ತಂಗಾಳಿ ಬೀಸಿ ಚಳಿಯಾಗಿರೇ .. ತನುವೇಕೆ ಹೀಗೇ ಬಿಸಿಯಾಗಿರೇ ನಿನ್ನ 
ತನುವೇಕೆ ಹೀಗೇ ಬಿಸಿಯಾಗಿರೇ ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯೂ ನನಗಾಗಿದೇ ..   
ತಂಗಾಳಿ ಬೀಸಿ ಚಳಿಯಾಗಿರೇ .. ತನುವೇಕೆ ಹೀಗೇ ಬಿಸಿಯಾಗಿರೇ ನಿನ್ನ 
ತನುವೇಕೆ ಹೀಗೇ ಬಿಸಿಯಾಗಿರೇ 

ಕ್ಕೂ ಕ್ಕೂ .... ಅಹ್ಹಹ್ಹಾ.. ಲಲಲಲ್ಲಲಲಲಾ ಲಲಲ್ಲಲಾ ಲಲಲಲಾ ಲಲಲ್ಲಲಾ 
ಸಂಗಾತಿ ನಾ ನಿನ್ನ ಗೆಳೆಯಾ ಅಲ್ಲವೇ ನನಗಾಗಿ ನಿನ್ನಲ್ಲೀ ಕರುಣೆ ಇಲ್ಲವೇ 
ಈ ರಾತ್ರೀ ಹಾಡಿದೇ ಒಂದಾಗಿ ಹಿಂದಿದೆ ಆ ಹಾಡೂ ನಿನಗಿಂದೂ ಕೇಳದೇ.. 
ಈ ನಿನ್ನ ಕಣ್ಣಲ್ಲೀ ಕೋಪ ಕಾಣದೂ ಈ ನಿನ್ನ ನಡೆಯಲ್ಲಿ ರೋಷ ತೋರದು 
ಈ ರಾತ್ರೀ ಏತಕೆ ನೀ ವ್ಯರ್ಥ ಮಾಡುವೇ ಈ ನಟನೇ ನಿನಗಿನ್ನೂ ಏತಕೆ 
ಏನೇ ಮಾಡೂ ನಿನ್ನ ಬಿಡೇನು ನಾನೂ ಚಿನ್ನಾ.. ನನ್ನಾಣೆ ಈ ದಿನಾ.. 
ತಂಗಾಳಿ ಬೀಸಿ ಚಳಿಯಾಗಿರೇ .. ತನುವೇಕೆ ಹೀಗೇ ಬಿಸಿಯಾಗಿರೇ ನಿನ್ನ 
ತನುವೇಕೆ ಹೀಗೇ ಬಿಸಿಯಾಗಿರೇ 

ಬಾನಿಂದ ಶಶಿಯೇಕೇ ಬೆಳಕೂ ಚೆಲ್ಲಿದಾ ಎದೆಯಲ್ಲಿ ನೂರಾಸೇ ಏಕೇ ತುಂಬಿದಾ 
ನಾ ನಿನ್ನ ಸೇರಲೂ ಒಂದಾಗಿ ಹಾಡಲೂ ತಂಪಾದ ಇರುಳನ್ನೂ ನೀಡಿದಾ 
ಹೆಣ್ಣಲ್ಲಿ ಸೌಂದರ್ಯ ಏಕೇ ತುಂಬಿದಾ ಗಂಡಲ್ಲಿ ಅವಳಾಸೇ ಏಕೇ ತುಂಬಿದಾ 
ಹೂವಲ್ಲಿ ಗಂಧವೂ ಬಾಳಲ್ಲಿ ಪ್ರೇಮವೂ ಆ ದೇವಾ ಹೀಗೇಕೆ ಮಾಡಿದಾ 
ಕೂಡಿ ಬಾಳಲೆಂದೂ ಆನಂದ ಹೊಂದಲೆಂದೂ ಈ ಆಟ ಆಡಿದಾ... 
ತಂಗಾಳಿ ಬೀಸಿ ಚಳಿಯಾಗಿರೇ .. ತನುವೇಕೆ ಹೀಗೇ ಬಿಸಿಯಾಗಿರೇ ನಿನ್ನ 
ತನುವೇಕೆ ಹೀಗೇ ಬಿಸಿಯಾಗಿರೇ ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯೂ ನನಗಾಗಿದೇ ..   
ತಂಗಾಳಿ ಬೀಸಿ ಚಳಿಯಾಗಿರೇ .. ತನುವೇಕೆ ಹೀಗೇ ಬಿಸಿಯಾಗಿರೇ ನಿನ್ನ 
ತನುವೇಕೆ ಹೀಗೇ ಬಿಸಿಯಾಗಿರೇ 
-----------------------------------------------------------------------------------------------------------------
 
ಒಂದೇ ರಕ್ತ (೧೯೮೪) -  ರವಿ ಕಾಣದೆಲ್ಲಾ ಕವಿ ಕಾಣುವ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, 

ರವಿ ಕಾಣದೆಲ್ಲಾ ಕವಿ ಕಾಣುವ ಕವಿ ಕಾಣದೆಲ್ಲಾ ಕುಡುಕ ಕಾಣುವ 
ರವಿ ಕಾಣದೆಲ್ಲಾ ಕವಿ ಕಾಣುವ ಕವಿ ಕಾಣದೆಲ್ಲಾ ಕುಡುಕ ಕಾಣುವ 
ಎಂದೊಬ್ಬ ಕವಿ ಹೇಳಿದ... ಎಂದೊಬ್ಬ ಕವಿ ಹೇಳಿದ... 
ಆದರೇ ನನಗೇನೂ ಕಾಣಿಸದಲ್ಲಾ.. ಸುತ್ತಲೂ ಕತ್ತಲೇ ಕವಿದಿದೆಯಲ್ಲಾ 
ರವಿ ಕಾಣದೆಲ್ಲಾ ಕವಿ ಕಾಣುವ ಕವಿ ಕಾಣದೆಲ್ಲಾ ಕುಡುಕ ಕಾಣುವ 
ಎಂದೊಬ್ಬ ಕವಿ ಹೇಳಿದ... ಎಂದೊಬ್ಬ ಕವಿ ಹೇಳಿದ... ಹ್ಹ.. 

ಬೊಂಬೆಗಳೂ ನಾವೆಂದೂ ಹೇಳುವರಲ್ಲಾ.. ಅಲ್ಲಾ 
ಪರಮಾತ್ಮಾ ಆಡಿಸುವ ಎನ್ನುವರಲ್ಲಾ.. ಅಲ್ಲಾ .. 
ಹೌದೂ .. ಬೊಂಬೆಗಳೂ ನಾವೆಂದೂ ಹೇಳುವರಲ್ಲಾ.
ಪರಮಾತ್ಮಾ ಆಡಿಸುವ ಎನ್ನುವರಲ್ಲಾ.. 
ಇಲ್ಲೋಬ್ಬ ಪಾಪಿಯೂ ಬಲುಕೆಡುಕ ದ್ರೋಹಿಯೂ 
ನನ್ನನೂ ಕಾಡುತ್ತಾ.. ಇರುವನಲ್ಲಾ..  ನನ್ನಾಣೇ ಅವನೇನೂ ದೇವರಲ್ಲಾ... 
ದೇವರಲ್ಲಾ... ಪ್ರಪಂಚಕೆಲ್ಲಾ ಒಬ್ಬನೇ ದೇವರೂ..  ರವೀ .. 
ಹ್ಹಾ.. ರವಿ ಕಾಣದೆಲ್ಲಾ ಕವಿ ಕಾಣುವ ಕವಿ ಕಾಣದೆಲ್ಲಾ ಕುಡುಕ ಕಾಣುವ 
ಎಂದೊಬ್ಬ ಕವಿ ಹೇಳಿದ... ಎಂದೊಬ್ಬ ಕವಿ ಹೇಳಿದ... ಹ್ಹ..ಹ್ಹೂ  

ನ್ಯಾಯವಿದೇ ನೀತಿಯಿದೇ ಎನ್ನುವರಲ್ಲ...ಅಹ್ಹ ಹ್ಹ ಹ್ಹ ಹ್ಹ 
ಸತ್ಯಕ್ಕೇ ಜಯವೆಂದೂ ಹೇಳುವರಲ್ಲಾ ಹ್ಹೂ..ಹ್ಹೂ..  ಹ್ಹೂ..  ಹ್ಹೂ..        
ನ್ಯಾಯವಿದೇ ನೀತಿಯಿದೇ ಎನ್ನುವರಲ್ಲ...ಸತ್ಯಕ್ಕೇ ಜಯವೆಂದೂ ಹೇಳುವರಲ್ಲಾ 
ನಿಜವೀಗ ಕುಡಿದಿದೇ ನಾಲಿಗೆಯೂ ತೊದಲಿದೇ 
ಜೊತೆಯಲ್ಲಿ ಜ್ವಾಲೆಯೂ ಆರಲೇ ಇಲ್ಲಾ.. 
ಹೇಳಿದರೇ ಕಲಿಗಾಲ ಎನ್ನುವರಲ್ಲಾ.. 
ಕಲಿಗಾಲ ಅಲ್ಲ.. ಕವಿ ಕಾಲ ಅಹ್ಹಹ್ಹ ಅಹ್ಹಹ್ಹ ಅಹ್ಹ 
ರವಿ ಕಾಣದೆಲ್ಲಾ ಕವಿ ಕಾಣುವ ಇಲ್ಲಾ ಇಲ್ಲಾ 
ಕವಿ ಕಾಣದೆಲ್ಲಾ ಕುಡುಕ ಕಾಣುವ 
ಎಂದೊಬ್ಬ ಕವಿ ಹೇಳಿದ... ಎಂದೊಬ್ಬ ಕವಿ ಹೇಳಿದ... 
ಆದರೇ ನನಗೇನೂ ಕಾಣಿಸದಲ್ಲಾ.. ಸುತ್ತಲೂ ಕತ್ತಲೇ ಕವಿದಿದೆಯಲ್ಲಾ 
ರವಿ ಕಾಣದೆಲ್ಲಾ ಕವಿ ಕಾಣುವ ಕವಿ ಕಾಣದೆಲ್ಲಾ .... 
ಎಂದೊಬ್ಬ ಕವಿ ಹೇಳಿದ... ಎಂದೊಬ್ಬ ಕವಿ ಹೇಳಿದ... ಹ್ಹ.. 
ಲಲಲಲಲಾ ಅಹ್ಹಹ್ಹಹ್ಹ್ಹಹ್ಹ ಅಹ್ಹಹ್ಹ ಹ್ಹಹ್ಹಹ್ಹಹ್ಹ.. 
-----------------------------------------------------------------------------------------------------------------
 
ಒಂದೇ ರಕ್ತ (೧೯೮೪) -  ಈ ಆನಂದವೂ ಹೀಗೆ ಇರಲೀ ಎಂದೆಂದೂ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ಈ ಆನಂದವೂ ಹೀಗೇ ಇರಲೀ ಎಂದೆಂದೂ 
          ಸಂಗಾತಿಯಲೀ ನನ್ನೊಡನೇ ಇರೂ ಇನ್ನೆಂದೂ 
          ಒಂದಾಗಿರುವಾ ನಾನೂ ನೀನೂ ನಿಷೇಯ ಮಡಿಲಲ್ಲೀ  
ಗಂಡು: ಈ ಆನಂದವೂ ಹೀಗೇ ಇರಲೀ ಎಂದೆಂದೂ 
          ಸಂಗಾತಿಯನೀ ನನ್ನೊಡನೇ ಇರೂ ಇನ್ನೆಂದೂ 
          ಒಂದಾಗಿರುವಾ ನಾನೂ ನೀನೂ ನಿಷೇಯ ಮಡಿಲಲ್ಲೀ  
ಇಬ್ಬರು : ಈ ಆನಂದವೂ ಹೀಗೇ ಇರಲೀ ಎಂದೆಂದೂ 

ಗಂಡು : ಉಷೆಯೂ ಬಾರದೇ ಇರಲೀ ಬಾನಲ್ಲಿ ಹಕ್ಕಿಯೂ ಹಾಡದೇ ಇರಲೀ ಮರದಲ್ಲಿ  
            ಸಾವಿರ ವರುಷ ಉರುಳಿದರೇನೂ ನಿನ್ನನ್ನೂ ನಾನೂ ಎಂದೂ ಬಿಡೇನೂ .. 
ಹೆಣ್ಣು : ಲಲ್ಲ ಲಾಲಾಲಾ (ಲಲ ಲಾಲಾಲಾ ) 
          ನಿಷೆಯ ತೆರೆದಲೀ ತಾರೆಯೂ ಮಿನುಗಲಿ ನದಿಯೂ ಹಾಡಲೀ ಗಿರಿಯ ಅಂಚಲ್ಲೀ 
          ತಣ್ಣನೇ ಗಾಳಿ ಕಂಪನು ಚೆಲ್ಲೀ ಹಿತವ ನೀಡಲಿ ಈ ರಾತ್ರಿಯಲೀ.. 
          ಹಿತವ ನೀಡಲಿ ಈ ರಾತ್ರಿಯಲೀ..     
ಗಂಡು : ಈ ಬೆಳದಿಂಗಳ ಇರಲೀ ನಮ್ಮ ಬಾಳಲ್ಲಿ 
ಹೆಣ್ಣು : ನೀ ಉಲ್ಲಾಸವೇ ನಗುನಗುತಾ ಇರೂ ಜೊತೆಯಲ್ಲಿ 
ಗಂಡು : ಒಲವೆಂಬ ಸಂತೋಷವೇನೂ ಮರೆತೂ ಅರಿಯಲೀ .. 
ಹೆಣ್ಣು : ಈ ಆನಂದವೂ ಹೀಗೇ ಇರಲೀ ಎಂದೆಂದೂ 
ಗಂಡು: ಸಂಗಾತಿಯನೀ ನನ್ನೊಡನೇ ಇರೂ ಇನ್ನೆಂದೂ 
ಹೆಣ್ಣು : ಒಂದಾಗಿರುವಾ ನಾನೂ ನೀನೂ ನಿಷೇಯ ಮಡಿಲಲ್ಲೀ  
ಇಬ್ಬರು : ಈ ಆನಂದವೂ ಹೀಗೇ ಇರಲೀ ಎಂದೆಂದೂ 

ಹೆಣ್ಣು : ಮನದಿ ತುಂಬಿದೇ ಇನಿಯ ಅನುರಾಗ ಹೃದಯ ಹಾಡಿದೇ ನಲ್ಲ ಹೊಸರಾಗ 
          ಕಣ್ಣಲ್ಲಿ ಕನಸೂ ಕುಣಿದಾಡಿರಲೂ ಎದೆಯಲಿ ಏನೋ ಆಸೆಯ ಹೊನಲೂ 
ಗಂಡು : ಲಲ್ಲ ಲಾಲಾಲಾ (ಲಲಲ  ಲಾಲಾಲಾ ) 
            ಒಲಿದ ಜೀವ ಬೆರೆತಿರುವಾಗ ಮನಸ್ಸೂ ಮನಸ್ಸೂ ಅರಿತಿರುವಾಗ 
            ಮುಳ್ಳುಗಳೆಲ್ಲಾ ಹೂವುಗಳಂತೇ ಕಲ್ಲುಗಳೆಲ್ಲಾ ರತ್ನಗಳಂತೇ .. 
            ಕಲ್ಲುಗಳೆಲ್ಲಾ ರತ್ನಗಳಂತೇ .. 
ಹೆಣ್ಣು : ಎಲ್ಲೇ ನೀನೀರೂ ನಂದನವನವೂ ಆ ಜಾಗ 
ಗಂಡು : ಏನೇ ಮಾತನೂ ಆಡಿದರೂ ಅನುರಾಗ 
ಹೆಣ್ಣು : ತೇಲಾಡುವೇ ನೀನೂ ಆಗ ಸುಖದಾ ಕಡಲಲೀ.. 
ಗಂಡು: ಈ ಆನಂದವೂ ಹೀಗೇ ಇರಲೀ ಎಂದೆಂದೂ 
ಹೆಣ್ಣು : ಸಂಗಾತಿಯನೀ ನನ್ನೊಡನೇ ಇರೂ ಇನ್ನೆಂದೂ 
ಗಂಡು : ಒಂದಾಗಿರುವಾ ನಾನೂ ನೀನೂ ನಿಷೇಯ ಮಡಿಲಲ್ಲೀ  
ಇಬ್ಬರು : ಈ ಆನಂದವೂ ಹೀಗೇ ಇರಲೀ ಎಂದೆಂದೂ 
              ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ 
-----------------------------------------------------------------------------------------------------------------

No comments:

Post a Comment