1334. ಒಂದು ಹೆಣ್ಣು ಆರು ಕಣ್ಣು (೧೯೮೦)

ಒಂದು ಹೆಣ್ಣು ಆರು ಕಣ್ಣು ಚಲನಚಿತ್ರದ ಹಾಡುಗಳು
  1. ಹದಿನಾರು ಎಂದರೇ
  2. ನಿಂಬೆಯ ಹಣ್ಣಂತ
  3. ನೀನೇ ನೀನೇ ನೀನೇ
  4. ಸನ್ನೂ ಜಾರಿದನಮ್ಮಾ
  5. ನಮಗೇ ನಾವೇ ಸರಿಸಾಟಿ 
  6. ಒಂದು ಹೆಣ್ಣು ಇಲ್ಲಿ
ಒಂದು ಹೆಣ್ಣು ಆರು ಕಣ್ಣು (೧೯೮೦) -  ಹದಿನಾರು ಎಂದರೇ
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ 

ಹದಿನಾರೂ ಎಂದರೇ .. ಮೈ ತುಂಬಿ ಕೊಂಡರೇ ನುಂಗೋರೆ ಕಣ್ಣಿನಲ್ಲಿ ಎಲ್ಲಾ
ತೂಗೋರೆ ಆಸೆಯಿಂದ ಎಲ್ಲಾ  ಬೇಡೆಂದೂ ಹೇಳೋರಿಲ್ಲಾ

ಆಕಾಶದ ತಾರೆಗೇಕೋ ಆಸೆ ಪಡುವೆಯೋ
ತೇಲಾಡೋ ಮೋಡವನ್ನೂ ಹೇಗೆ ಹಿಡಿವೆಯೋ
ನಿನ್ನಂತೇ ಮನಸ್ಸಂಟೂ ಬೇರೊಂದು ಕನಸಂಟೂ
ನಿನ್ನಂತೇ ಮನಸ್ಸಂಟೂ ಬೇರೊಂದು ಕನಸಂಟೂ
ನೀನಲ್ಲ ನಿನಗಲ್ಲ ನಿನಗಿಲ್ಲ ಈ ಕುಸುಮವೂ ... (ಹ್ಹಾ)
ಹದಿನಾರೂ ಎಂದರೇ .. ಮೈ ತುಂಬಿ ಕೊಂಡರೇ ನುಂಗೋರೆ ಕಣ್ಣಿನಲ್ಲಿ ಎಲ್ಲಾ
ತೂಗೋರೆ ಆಸೆಯಿಂದ ಎಲ್ಲಾ  ಬೇಡೆಂದೂ ಹೇಳೋರಿಲ್ಲಾ

ತಂಗಾಳಿಯ ಹಾಗೇ ಮೈಯ್ಯ್ ಸೋಕಿ ಓಡದೇ 
ನಿಮಿಷಂತೇ ಕಣ್ಣು ತುಂಬಿ ಎಲ್ಲೋ ಹೋದರೇ
ನೋಡಯ್ಯ ಈ ಸೊಗಸೂ ನನ್ನಾಸೆ ಪೂರೈಸು
ನೋಡಯ್ಯ ಈ ಸೊಗಸೂ ನನ್ನಾಸೆ ಪೂರೈಸು
ನನಗಲ್ಲಾ ನಿನಗೇನೆ ನಮಗಾಗಿ ಈ ಸಮಯವೂ .. (ಹ್ಯಾ ಹ್ಹಾ )
ಹದಿನಾರೂ ಎಂದರೇ .. ಮೈ ತುಂಬಿ ಕೊಂಡರೇ ನುಂಗೋರೆ ಕಣ್ಣಿನಲ್ಲಿ ಎಲ್ಲಾ
ತೂಗೋರೆ ಆಸೆಯಿಂದ ಎಲ್ಲಾ  ಬೇಡೆಂದೂ ಹೇಳೋರಿಲ್ಲಾ
------------------------------------------------------------------------------------------------------------------

ಒಂದು ಹೆಣ್ಣು ಆರು ಕಣ್ಣು (೧೯೮೦) - ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ 
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ

ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಹೋಯ್
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಹೋಯ್ 

ಕೆಂಪೀನಾ ಓಲೆ ನನಸು ಕೆಂಪೀನಾ ಮೂಗುತಿ ನಿನ್ನ ಕೆಂಪಿಗೇ ಚೆನ್ನ ತಾನೇ ನೋಡಯ್ಯಾ
ಕೆಂಪೀನಾ ಓಲೆ ನನಸು ಕೆಂಪೀನಾ ಮೂಗುತಿ ನಿನ್ನ ಕೆಂಪಿಗೇ ಚೆನ್ನ ತಾನೇ ನೋಡಯ್ಯಾ
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ ..
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ  ಮಲ್ಲ ನೀನೊಮ್ಮೆ ನೋಡಿ ಹೇಳಯ್ಯಾ ಬೇಗ ಹೇಳಯ್ಯಾ
ಹೇಳಯ್ಯಾ   ಹೇಳಯ್ಯಾ   ಹೇಳಯ್ಯಾ   ಹೇಳಯ್ಯಾ   ಹೇಳಯ್ಯಾ   ಹೇಳಯ್ಯಾ   (ಹೇ..ಯ್ಯಾ)
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಹೋಯ್ 

ಇಬ್ಬರೇ ಇರುವಾಗ ತಬ್ಬಿಕೊಂಡರೇ ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಇಬ್ಬರೇ ಇರುವಾಗ ತಬ್ಬಿಕೊಂಡರೇ ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಚಿಗುರೂ ಮೀಸೆನೇ ಚೆಲುವಾ ನಗುವಾಗ ಆಸೆ ಬಂತೂ
ಚಿಗುರೂ ಮೀಸೆನೇ ಚೆಲುವಾ ನಗುವಾಗ ಆಸೆ ಬಂತೂ
ದೀಗಲೈತೇ ನಿಂಗೇ ಹೇಳೂ ಮಾವಯ್ಯಾ... ಆ ಮುದ್ದೂ ಮಾವಯ್ಯಾ
ಮಾವಯ್ಯಾ  ಮಾವಯ್ಯಾ  ಮಾವಯ್ಯಾ  ಮಾವಯ್ಯಾ  ಮಾವಯ್ಯಾ  ಮಾವಯ್ಯಾ  ಹೋಯ್
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ ಮಾವಯ್ಯಾ 
-------------------------------------------------------------------------------------------------------------------

ಒಂದು ಹೆಣ್ಣು ಆರು ಕಣ್ಣು (೧೯೮೦) -  ನೀನೇ ನೀನೇ ನೀನೇ
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ

ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
          ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ಓ..
          ನೀನೇ ನೀನೇ ನೀನೇ ನನ್ನ ನಲ್ಲಾ..  ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ
          ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ ನೀ ಒಲ್ಲೇ ಎಂದರೇ ಜೀವಾ ನಿಲ್ಲೋದಿಲ್ಲಾ... ಆಆಆ...
          ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ಆ..ಆ... ಆ..

ಗಂಡು : ಹೂವಿಗೂ ಇಂಥಾ ಅಂದ ಇಲ್ಲಾ ತಾರೆಗೂ ಇಂಥ ಸೊಗಸೂ ಇಲ್ಲಾ 
            ಹೂವಿಗೂ ಇಂಥಾ ಅಂದ ಇಲ್ಲಾ ತಾರೆಗೂ ಇಂಥ ಸೊಗಸೂ ಇಲ್ಲಾ 
            ಚಿಂತೆಗೂ ಇಂಥಾ ಕಣ್ಣುಗಳಿಲ್ಲಾ ನಕ್ಕರೇ ನೀನೂ ಸಕ್ಕರೇ ಬೆಲ್ಲಾ.. ಆಆ... ಓಓ ... 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ಆ..ಆ... ಆ..

ಗಂಡು : ಹರಿಯುವ ನೀರಿಗೇ ಸಾಗರದಾಸೇ ನನ್ನಲ್ಲಿ ನಿನ್ನ ಸೇರುವಾ ಆಸೇ .. 
            ಹರಿಯುವ ನೀರಿಗೇ ಸಾಗರದಾಸೇ ನನ್ನಲ್ಲಿ ನಿನ್ನ ಸೇರುವಾ ಆಸೇ .. 
ಹೆಣ್ಣು : ತಣ್ಣನೇ ಗಾಳಿಗೆ ಓಡುವ ಆಸೇ ..             
          ತಣ್ಣನೇ ಗಾಳಿಗೆ ಓಡುವ ಆಸೇ ನನ್ನಲ್ಲಿ ನಿನ್ನ ಪ್ರೀತಿಸುವ ಆಸೇ .. 
ಗಂಡು : ನಿನ್ನಾಸೆ ನನ್ನಾಸೆ ಒಂದೇ ಇಂದೂ ಬಾರೇ ನಲ್ಲೇ.. ಆಆ .. ಹೂಹೂ.. 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ಆ..ಆ... ಆ..

ಹೆಣ್ಣು : ಕಾಮನಬಿಲ್ಲಿಗೇ ಬಣ್ಣವೇ ಜೀವಾ ನನ್ನೀ ಬಾಳಿಗೆ ನೀನೇ ಜೀವಾ 
          ಕಾಮನಬಿಲ್ಲಿಗೇ ಬಣ್ಣವೇ ಜೀವಾ ನನ್ನೀ ಬಾಳಿಗೆ ನೀನೇ ಜೀವಾ 
ಗಂಡು : ಹಾಡುವ ದುಂಬಿಗೇ ಹೂವಲಿ ಪ್ರೇಮಾ 
            ಹಾಡುವ ದುಂಬಿಗೇ ಹೂವಲಿ ಪ್ರೇಮಾ ಹೆಣ್ಣೇ ನನಗೆ ನಿನ್ನಲ್ಲಿ ಪ್ರೇಮಾ 
ಹೆಣ್ಣು : ನಿನ್ನಿಂದ ಆನಂದ ಕಂಡೇ ಇಂದೂ ನನ್ನ ನಲ್ಲಾ.. ಆಅ .. ಆಅ .. 
          ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ಆ..ಆ... ಆ..  
          ನೀನೇ ನೀನೇ ನೀನೇ ನನ್ನ ನಲ್ಲಾ.. 
-------------------------------------------------------------------------------------------------------------------

ಒಂದು ಹೆಣ್ಣು ಆರು ಕಣ್ಣು (೧೯೮೦) -  ಸನ್ನೂ ಜಾರಿದನಮ್ಮಾ
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಯು.ರಾಮಕೃಷ್ಣ

ಗಂಡು : ಸನ್ನೂ ಜಾರಿದನಮ್ಮಾ.. ಮೂನು ಬಂದಿಹನಮ್ಮಾ..
ರಾಮ : ಡೇ ಮುಗಿದೂ ನೈಟ್ ಆಯಿತೂ ಮಲಗು ಮಲಗಮ್ಮಾ
ಗಂಡು : ಸನ್ನೂ ಜಾರಿದನಮ್ಮಾ.. ಮೂನು ಬಂದಿಹನಮ್ಮಾ..
ರಾಮ : ಡೇ ಮುಗಿದೂ ನೈಟ್ ಆಯಿತೂ ಮಲಗು ಮಲಗಮ್ಮಾ
ಗಂಡು : ಲಾಲಿ ಲಾಲಿ                ರಾಮ : ಲಾಲಿ ಲಾಲಿ
ಇಬ್ಬರು : ಲಾಲಿ ಲಾಲಿ ಲಾಲಿ ಲಾಲಿ

ರಾಮ : ಯೂ ಆರ್ ಮೈ ಡಾರ್ಲಿಂಗ್ ಬೀಲೀವ್
ಗಂಡು : ನಂಬಬೇಡ ಅವನೂ ಸಿಲ್ಲಿ..
ರಾಮ : ನೀ ನನ್ನ ಗೋಲ್ಡನ್ ಗ್ಯಾರೇಜ್.. ಟ್ವೆಂಟಿ ಕ್ಯಾರೆಟ್
ಗಂಡು : ಮೂನ್ ಲೈಟ್ ಏ ಲೈಟ್ ಹೌಸ್ ಆರ್ ಸ್ಟಾರ್ಟೆಡ್ ಕಣ್ಣಾಯ್ತೋ
ರಾಮ : ಇಲ್ಲೇ ಇಂಥ ಬ್ಯುಟಿ ಮಲಗಮ್ಮಾ ಸ್ವೀಟ್ ಡ್ರೀಮ್
ಗಂಡು : ಸನ್ನೂ ಜಾರಿದನಮ್ಮಾ.. ಮೂನು ಬಂದಿಹನಮ್ಮಾ..
ರಾಮ : ಡೇ ಮುಗಿದೂ ನೈಟ್ ಆಯಿತೂ ಮಲಗು ಮಲಗಮ್ಮಾ
ಗಂಡು : ಲಾಲಿ ಲಾಲಿ                ರಾಮ : ಲಾಲಿ ಲಾಲಿ
ಇಬ್ಬರು : ಲಾಲಿ ಲಾಲಿ

ಗಂಡು : ನಾ ನಿನ್ನ ಹುಸಬಂಡ್ ಆದರೇ .. ಡೈಮಂಡ್ ನೆಕ್ಲೇಸ್
ರಾಮ : ನೀ ನನ್ನ ವೈಫ್ ಆದರೇ .. ನಾ ನನ್ನ ಲೈಫ್ ಕೊಡುವೇ ...
ಗಂಡು : ನೀ ನಂಬೂ ನಾ ಜಾಣ ಇವನೊಬ್ಬ ಮತಿಹೀನ
ರಾಮ : ನಾ ತುಂಬಾ ಬಲಶಾಲೀ .. ನನಗಿವನೂ ಎದುರಾಳೀ ..
ಗಂಡು : ಸನ್ನೂ ಜಾರಿದನಮ್ಮಾ.. ಮೂನು ಬಂದಿಹನಮ್ಮಾ..
ರಾಮ : ಡೇ ಮುಗಿದೂ ನೈಟ್ ಆಯಿತೂ ಮಲಗು ಮಲಗಮ್ಮಾ
ಗಂಡು : ಲಾಲಿ (ಲಾಲಿ) ಲಾಲಿ (ಲಾಲಿ)
ಇಬ್ಬರು : ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ
-------------------------------------------------------------------------------------------------------------------

ಒಂದು ಹೆಣ್ಣು ಆರು ಕಣ್ಣು (೧೯೮೦) -  ನಮಗೇ ನಾವೇ ಸರಿಸಾಟಿ 
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ :ಎಸ್.ಪಿ.ಬಿ, ರಾಮಕೃಷ್ಣ, ಆನಂದ

ಅನಂತ  : ಒಂದೂ..
ಶಂಕರ : ಎರಡೂ ..
ಅಂಬ : ಮೂರೂ ...
ಅನಂತ : ಮೂವರ ಮನಸೇ ಒಂದೇ..
ಶಂಕರ : ಮೂವರ ನನಸು ಒಂದೇ
ಅಂಬ: ಮೂವರ ಗುರಿಯೂ ಒಂದೇ
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
            ನಮಗಿಲ್ಲ ಯಾರೂ ಪೈಪೋಟಿ
            ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
            ನಮಗಿಲ್ಲ ಯಾರೂ ಪೈಪೋಟಿ

ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..    
ಅನಂತ : ಅಬ್ಬರಿಸುವ ಹೆಬ್ಬುಲಿಯ ಕೊಬ್ಬನು ಕರಗಿಸುವ ಶೂರ 
ಶಂಕರ : ಬಡಿಯುವ ಸಿಡಿಲಿನೇ ಕರದಲಿ ತಡೆದು ನಿಲ್ಲಿಸುವಾ ಧೀರಾ... 
ಅಂಬ: ಉಕ್ಕುವ ಕಡಲಿನ ಸೊಕ್ಕನೂ ಮುರಿದು ಅಡಗಿಸುವ ವೀರಾ.. 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
            ನಮಗಿಲ್ಲ ಯಾರೂ ಪೈಪೋಟಿ

ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..    
ಅನಂತ : ಅಮ್ಮನ ಮಾತನ ನಡೆಸದೇ ಹೋದರೇ ಮಗನೇ ನಾನಲ್ಲಾ... 
ಶಂಕರ : ಅಮ್ಮನ ಆಸೆಯ ಪೂರೈಸದಿರೇ ಬದುಕುವುದೇ ಇಲ್ಲಾ 
ಅಂಬ: ಮೂವರ ಎದುರಿಸಿ ಗೆಲ್ಲುವ ವೈರಿ ಇನ್ನೂ ಹುಟ್ಟಿಲ್ಲಾ... 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
            ನಮಗಿಲ್ಲ ಯಾರೂ ಪೈಪೋಟಿ
            ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
            ನಮಗಿಲ್ಲ ಯಾರೂ ಪೈಪೋಟಿ
-------------------------------------------------------------------------------------------------------------------

ಒಂದು ಹೆಣ್ಣು ಆರು ಕಣ್ಣು (೧೯೮೦) -  ಒಂದು ಹೆಣ್ಣು ಇಲ್ಲಿ ಒಂದೇ ಹೆಣ್ಣೂ 
ಸಂಗೀತ : ಎಸ್.ರಾಜೇಂದ್ರರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ

ಒಂದು ಹೆಣ್ಣೂ .. ಇಲ್ಲೀ ... ಒಂದೇ ಹೆಣ್ಣೂ .. ಏನ್ಮಾಡಲೀ .. ಈಗ ಏನ್ಮಾಡಲೀ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,  ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,  ಆರೂ ಕಣ್ಣೂ ಕಾವಲೂ ಆರೂ ಕಣ್ಣೂ

ತಾಳೆಯ ಹೂವಿಗೇ ಬಳಸಿದ ಸಾವಿರ ಮುಳ್ಳೇ ಕಾವಲೂ
ತಾಳೆಯ ಹೂವಿಗೇ ಬಳಸಿದ ಸಾವಿರ ಮುಳ್ಳೇ ಕಾವಲೂ
ತಾವರೇ ಹೂವಿಗೇ ಸುತ್ತಲೂ ಇರುವ ನೀರೇ ಕಾವಲೂ
ತಾವರೇ ಹೂವಿಗೇ ಸುತ್ತಲೂ ಇರುವ ನೀರೇ ಕಾವಲೂ
ತಾವರೇ ಮೊಗದ ಅಂದದ ಹೆಣ್ಣಿಗೇ ಹೇಳೂ ಯಾರೂ ಕಾವಲೂ
ತಾವರೇ ಮೊಗದ ಅಂದದ ಹೆಣ್ಣಿಗೇ ಹೇಳೂ ಯಾರೂ ಕಾವಲೂ
ಆರು ಕಣ್ಣೂ ಕಾವಲೂ....
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,  ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,  ಆರೂ ಕಣ್ಣೂ ಕಾವಲೂ ಆರೂ ಕಣ್ಣೂ

ತೋಟಕೆ ಬೇಲಿಯೂ ತೋಟಕೆ ಕಂದಕ ಎಂದೂ ಕಾವಲೂ
ತೋಟಕೆ ಬೇಲಿಯೂ ತೋಟಕೆ ಕಂದಕ ಎಂದೂ ಕಾವಲೂ
ಬೇಟೆಯನಾಡುವ ದಂಡಿಗೆ ಅವನ ಸಿಳ್ಳೇ ಕಾವಲೂ
ಬೇಟೆಯನಾಡುವ ದಂಡಿಗೆ ಅವನ ಸಿಳ್ಳೇ ಕಾವಲೂ
ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ ಬಲ್ಲೆಯಾ ಯಾರು ಕಾವಲೂ
ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ ಬಲ್ಲೆಯಾ ಯಾರು ಕಾವಲೂ
ಆರು ಕಣ್ಣೂ ಕಾವಲೂ....
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,  ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,
-------------------------------------------------------------------------------------------------------------------

No comments:

Post a Comment