ಒಂಟಿ ಧ್ವನಿ ಚಲನಚಿತ್ರದ ಹಾಡುಗಳು
- ಲಾಗಾ ಹಾಕು ಮಂಗಿ ಮಾತಿನಲ್ಲಿ
- ಬಾರೆ ಬಾ ಇಲ್ಲಿ ಬಳಿಗೆ ಹೂ ಹಾಸಿರುವೆ
- ಈ ಲೋಕವಾ ತೊರೆದಾ ಬಾಂಧವ್ಯದ ಹೂವೆ
- ಮೋಹದಾ ಹೂವು ಜಾಣ ಬಂದೆ ನಾ ನಿಲ್ಲಿಗೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿಶಾಸ್ತ್ರಿ, ಗಾಯನ : ಎಸ್.ಪಿ.ಬಿ
ಲಾಗ ಹಾಕು ಮಂಗಿ ಮಾತಿನಲ್ಲಿ ಲಾಗ ಹಾಕು ಮಂಗಿ ನೀ ಹಾಡಿ ಪಾಡಿ
ನನ್ನ ಜೋಡಿ ಆಸೆಯಿಂದ ಬಾರೆ ನೀ ಸುಕಮಾರಿ
ಲಾಗ ಹಾಕು ಮಂಗಿ ಮಾತಿನಲ್ಲಿ ಲಾಗ ಹಾಕು ಮಂಗಿ ನೀ ಹಾಡಿ ಪಾಡಿ
ನನ್ನ ಜೋಡಿ ಆಸೆಯಿಂದ ಬಾರೆ ನೀ ಸುಕಮಾರಿ
ದೇವರು ಕೊಟ್ಟ ತಂಗಿ ನೀನು ಬಂಗಾರದ ಹೂವೂ ನಂದಗೋಕುಲ ನಮ್ಮ ಸಂಸಾರದ
ಒಲವೇ ಗೆಲುವು ಗಂಗೆ ಗೌರಿ ಸ್ವರ್ಣಗೌರಿ ಗಿಲಿಟ್ ಹೊಡಿಬೇಡ ಅಂತ ಹೇಳಮ್ಮಾ
ಗಿಲಿಟ್ ಅಲ್ವೇ ಚಿನ್ನ ಅಪ್ಪಟ ಚಿನ್ನ ಅಣ್ಣ ತಂಗಿಯ ಪ್ರೇಮದ ಕಾಣಿಕೆ
ಹಾಲು ಜೇನು ಹೌದು ನೀನು ನಾನು ಮಧುಮಾಲತಿ ನೀನಾದರೆ ನಾನೇ ಭೂಪತಿ ರಂಗ
ಬಿಡದಿರು ನನ್ನ ಸಂಗ ನಿನ್ನ ಸಂಗ ಟೂ ಟೂ ಬ್ಯಾಡ್ವೇ ನಾನು ಯಾರು ಗೊತ್ತ
ವೀರಕೇಸರಿ ಕಠಾರಿ ವೀರ ಕಿಲಾಡಿ ರಂಗ ಕ್ರಾಂತಿವೀರ
ರೌಡಿ ರಂಗಣ್ಣ ಚೂರಿ ಚಿಕ್ಕಣ್ಣ ಸಿ.ಐ.ಡಿ ರಾಜಣ್ಣ ನಾನೇ
ಸನಾದಿ ಅಪ್ಪಣ್ಣ ಕೆಣಕಿದರೇ ಕೆರಳಿದ ಸಿಂಹ
ಮೇಯರ್ ಮುತ್ತಣ್ಣ ನಾನೇ ಬೀದಿ ಬಸವಣ್ಣ
ಮಾತಿನಲ್ಲಿ ಜಾಣ ನಡತೆಯಲ್ಲಿ ಕೋಣ ಹಾಗೆನ್ನ ಬೇಡ ಕಾಳಿ
ಲಾಗ ಹಾಕು ಮಂಗಿ ಮಾತಿನಲ್ಲಿ ಲಾಗ ಹಾಕು ಮಂಗ ಬಾ ಇಲ್ಲಿ ನೋಡ್ತೀನಿ ಹೇಯ್ ಹೇಯ್ ಹ್ಹಹ್ಹಹ್ಹಹಹ..
--------------------------------------------------------------------------------------------------------------------------
ಒಂಟಿ ಧ್ವನಿ (೧೯೮೪) - ಬಾರೆ ಬಾ ಇಲ್ಲಿ ಬಳಿಗೆ ಹೂ ಹಾಸಿರುವೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಬಾರೇ .. ಬಾರೇ ಬಾ.. ಬಾ ಇಲ್ಲಿ ಬಳಿಗೆ ಹೂ ಹಾಸಿರುವೇ ಹೊಂಗನಸು ನೀ ನೀಡೆ ಕಾದಿರುವೇ
ಹೆಣ್ಣು : ಕಹಿ ಈ ಬಾಳಿಗೆ ಸವಿ ಜೇನಾಗಿದೆ ರವಿ ನೀ ನೋಡಿದೆ ಬಾಳಿನಲ್ಲಿ
ಗಂಡು : ಓ.. ಪ್ರಿಯೇ ... ಹೆಣ್ಣು : ಓ.. ಪ್ರಿಯಾ
ಹೆಣ್ಣು : ನೀ ಮೋಹದಲಿ ಈ ಮೈ ಮಿಡಿದೆ ಈ ಕ್ಷಣದಿಂದ ನಾ ಸೋತೆ ನೋವಿನಲಿ
ಗಂಡು : ಭಾವ ವೀಣೆ ಜೀವ ನೀನು ಸಪ್ತಸ್ವರ ಮೀಟಿ ತಂದೆ
ಹೆಣ್ಣು : ಬಾಡಿ ಹೋದ ಹೂವು ನಾನು ಆಸೆ ನೂರು ತುಂಬಿ ನಿಂತೇ
ಗಂಡು : ಜೀವ ಒಂದಾಗಿದೆ ಕಣ್ಣಾಗಿದೆ ಬಯಕೆ ತಣಿಸು ಬಾ
ಹೆಣ್ಣು : ಬಾಳು ನಿಂದಾಗಿದೆ ಹೊನ್ನಾಗಿದೆ ಸವಿದು ಸುಖಿಸು ಬಾ
ಗಂಡು : ನದಿ ನೀನಾಗಿರೆ ಹೊಳೆ ನಾನಾಗುವೇ ಅಲೆ ನೀ ತುಂಬಿದೆ ಪ್ರೇಮದಲಿ
ಬಾರೇ .. ಬಾರೇ ಬಾ.. ಬಾ ಇಲ್ಲಿ ಬಳಿಗೆ ಹೂ ಹಾಸಿರುವೇ ಹೊಂಗನಸು ನೀ ನೀಡೆ ಕಾದಿರುವೇ
ಹೆಣ್ಣು : ಕಹಿ ಈ ಬಾಳಿಗೆ ಸವಿ ಜೇನಾಗಿದೆ ರವಿ ನೀ ನೋಡಿದೆ ಬಾಳಿನಲ್ಲಿ
ಗಂಡು : ಓ.. ಪ್ರಿಯೇ ... ಹೆಣ್ಣು : ಓ.. ಪ್ರಿಯಾ
ಹೆಣ್ಣು : ಹೂವು ಗಂಧ ಕೂಡಿದಂತೆ ನೀನು ನನ್ನ ಜೋಡಿ ಆಗೇ
ಗಂಡು : ನೇಹದಲಿ ತೇಲಿ ಹೋದ ನೀರಿನಂತೆ ಲೀನವಾದೆ
ಹೆಣ್ಣು : ದಾಹ ನನ್ನಲ್ಲಿದೆ ತಂಪಲ್ಲಿದೆ ಮಧುವಾ ಸುರಿಸು ಬಾ
ಗಂಡು : ಮೋಹ ನಿನ್ನಲ್ಲಿದೆ ಸಾಕಲ್ಲವೇ ವಿರಹ ಕಳೆಯೇ ಬಾ
ಹೆಣ್ಣು : ಶೃತಿ ನೀ ಮೀಟಿದೆ ಸ್ವರ ನಾ ತುಂಬುವೆ ಹೊಸ ಹಾಡಾಗುವೆ ಬಾಳಿನಲ್ಲಿ
ಗಂಡು : ಬಾರೇ .. ಬಾರೇ ಬಾ.. ಬಾ ಇಲ್ಲಿ ಬಳಿಗೆ ಹೂ ಹಾಸಿರುವೇ ಹೊಂಗನಸು ನೀ ನೀಡೆ ಕಾದಿರುವೇ
ಹೆಣ್ಣು : ಕಹಿ ಈ ಬಾಳಿಗೆ ಸವಿ ಜೇನಾಗಿದೆ ರವಿ ನೀ ನೋಡಿದೆ ಬಾಳಿನಲ್ಲಿ
ಗಂಡು : ಓ.. ಪ್ರಿಯೇ ... ಹೆಣ್ಣು : ಓ.. ಪ್ರಿಯಾ
--------------------------------------------------------------------------------------------------------------------------
ಒಂಟಿ ಧ್ವನಿ (೧೯೮೪) - ಈ ಲೋಕವಾ ತೊರೆದಾ ಬಾಂಧವ್ಯದ ಹೂವೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ದೊಡ್ಡರಂಗೇಗೌಡ, ಗಾಯನ : ರಾಜಕುಮಾರಭಾರತಿ
ಈ ಲೋಕವ ತೊರೆದಾ ಭಾಂಧವ್ಯದ ಹೂವೆ ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ ನೀನಿರದೇ ನೊಂದೆ ನಾ ನಲುಗಿ
ಈ ಲೋಕವ ತೊರೆದಾ ಭಾಂಧವ್ಯದ ಹೂವೆ ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ ನೀನಿರದೇ ನೊಂದೆ ನಾ ನಲುಗಿ
ನೀ ಓಡಿ ಬಳಿ ಇರುವಾಗ ಮರಿ ಜಿಂಕೆ ನಡೆದಂತೆ ನವಿಲು ಕುಣಿದಂತೆ
ಆ ತುಂಟ ನಗೆ ಬಿರಿದಾಗ ಸಿರಿ ಚಂದ್ರ ಬರುವಂತೆ ಹೊನಲು ಹರಿದಂತೆ
ಓ ನನ್ನ ತಂಗಿ ನಲ್ಮೆ ನೀಡಿದ ಬೆಡಗಿ ಮನೆ ತುಂಬಿ ನಿಂತೇ ಬೆಳಕಾಗಿ
ನೆನಪಾಗಿ ಇಂದು ಮರೆಯಾಗಿ ಬೇಸರದಿ ಬಂದೆ ಬೆಂಡಾಗಿ
ಈ ಲೋಕವ ತೊರೆದಾ ಭಾಂಧವ್ಯದ ಹೂವೆ ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ ನೀನಿರದೇ ನೊಂದೆ ನಾ ನಲುಗಿ
ಮಾತಾಡಿ ಮನ ಗೆಲುವಾಗ ಇರು ದುಂಬಿ ಮೊರೆದಂತೆ ತಂತಿ ಮಿಡಿದಂತೆ
ಸಂತೋಷ ಆದಿ ಇಡುವಾ ಈ ಪಾದ ಬರದಂತೆ ಕನಸು ತೆರೆದಂತೆ
ಓ ನನ್ನ ತಂಗಿ ನನ್ನ ಕಾಡಿದ ಹುಡುಗಿ ನಿಜ ರೂಪ ತೋರಿ ನೀ ಬಾರೆ
ಎಡೆಯಾಗೆ ನಿಂತ ಕಿರುತಾರೆ ನೀ ಬರದೇ ಬರಡು ಬಾಳ ತೊರೆ
ಈ ಲೋಕವ ತೊರೆದಾ ಭಾಂಧವ್ಯದ ಹೂವೆ ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ ನೀನಿರದೇ ನೊಂದೆ ನಾ ನಲುಗಿ
--------------------------------------------------------------------------------------------------------------------------
ಒಂಟಿ ಧ್ವನಿ (೧೯೮೪) - ಮೋಹದಾ ಹೂವು ಜಾಣ ಬಂದೆ ನಾ ನಿಲ್ಲಿಗೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ರುಧ್ರಮೂರ್ತಿ ಶಾಸ್ತ್ರಿ, ಗಾಯನ : ವಾಣಿಜಯರಾಂ
ಮೋಹದ ಹೂವೂ ಜಾಣ ಬಂದೆ ನಾ ನಿಲ್ಲಿಗೆ
ಅನುರಾಗ ನಿನಗಾಗಿ ಬಳಿ ಬಂದಾಗ ನಿಂದಾಗ ಒಲಿವ ನಲಿವ ಸುಖವ ಪಡೆವ
ಬಿರಿದ ದಳ ದಳ ರಂಗೇರಿತು ಸುಡುವ ಕಣ ಕಣ ಮತ್ತೇರಿತು
ತುಂಬಿ ಹರಿವ ನೀರಾಗಿತು
ಮೋಹದ ಹೂವೂ ಜಾಣ ಬಂದೆ ನಾ ನಿಲ್ಲಿಗೆ
ಅನುರಾಗ ನಿನಗಾಗಿ ಬಳಿ ಬಂದಾಗ ನಿಂದಾಗ ಒಲಿವ ನಲಿವ ಸುಖವ ಪಡೆವ
ಬಳುಕಿ ನಡೆಯುವಾ ವಯ್ಯಾರಿ ನಾ ಹೊಳೆವಾ ನಯನದ ಬಂಗಾರಿನಾ
ಮರೆಸಿ ತನುಮನ ಆಲಿಂಗನಾ ತಣಿಸೆ ದಣಿಸುವೆ ಚಿಂಗಾರಿ ನಾ
ಮೋಹದ ಹೂವೂ ಜಾಣ ಬಂದೆ ನಾ ನಿಲ್ಲಿಗೆ
ಅನುರಾಗ ನಿನಗಾಗಿ ಬಳಿ ಬಂದಾಗ ನಿಂದಾಗ ಒಲಿವ ನಲಿವ ಸುಖವ ಪಡೆವ
ಸುಖದ ಹನಿ ಹನಿ ಜೇನಾಗಲಿ ಹರೆಯ ಹರುಷದ ಹಾಡಾಗಲಿ
ಮನಸು ಕಂಗಳು ಮಾತಾಡಲಿ ಎದೆಯ ತಳಮಳ ದೂರಾಗಲೀ ಇನಿಯಾ ಹಾ... ಓ...
ಮೋಹದ ಹೂವೂ ಜಾಣ ಬಂದೆ ನಾ ನಿಲ್ಲಿಗೆ
ಅನುರಾಗ ನಿನಗಾಗಿ ಬಳಿ ಬಂದಾಗ ನಿಂದಾಗ ಒಲಿವ ನಲಿವ ಸುಖವ ಪಡೆವ
--------------------------------------------------------------------------------------------------------------------------
No comments:
Post a Comment