ಒಂಟಿ ಸಲಗ ಚಿತ್ರದ ಹಾಡುಗಳು
- ನವಲು ಬಂತು ನವಲೋ ನವಲೋ
- ಜಂಭದ ಕೋಳಿ ಗಂಡುಭೀರಿ ನಾನು ಯಾರು ಮೈಸೂರ ಜಾಣ
- ಬಾರೋ ಹುಡುಗ ನನ್ನಾ ಹುಡುಗಾ ನೀನೇ ಸಲಗಾ ಒಂಟಿ ಸಲಗಾ
- ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಹುಯ್ಲಾ.... ಹುಯ್ಲಾ ... ನವಲು ಬಂತು ನವಲೋ ನವಲೋ
ತಾಳೆ ಬನದಾ ಅಮಲು ಬಂತು ಅಮಲೋ .... ಹೊಯ್.. ಅಮಲೋ
ಅಪ್ಪುವಾ ಹಸಿರು ಅನಾದ ಮಾಡಿರೋ
ಹೆಣ್ಣು : ಕಣ್ಣು ಚೆಂದಂತಾರೆ ನೋಟ ಚೂಪಂತಾರೇ ಚೂಪಿಗೆ ಬಾಯಿ ಬಾಯ್ಬಿಡ್ತಾರೆ
ನೋಡಿದರೆ ಕುಸಿಯುತಾರೇ ನಡುವು ಚೆಂದಂತಾರೆ ನಡಿಗೆ ಸೋಗಸಂತಾರೆ
ನಡೆದರೆ ನಡುಗಿ ನೀರಾಗ್ತಾರೆ ನಡು ಬಗ್ಗಿ ಕಿಸಿದರೇ
ಗಂಡು : ಆಹಾ ನವಿಲಿಗೆ ಸಾವಿರ ಕಣ್ಣು ಹೆಣ್ಣಿಗೆ ಎರಡೇ ಹೊರಗಣ್ಣು
ಆಹಾ.. ಹೊರಗಿನ ಕಣ್ಣಿಗೇ ತಿನಿಸುವೇ ಚೆಳ್ಳೆ ಬೀಚಣ್ಣು
ಅಪ್ಪುವಾ ಹಸಿರು ಆನಾದ ಮಾಡಿರೋ
ಹುಯ್ಲಾ.... ಹುಯ್ಲಾ ... ನವಲು ಬಂತು ನವಲೋ ನವಲೋ
ತಾಳೆ ಬನದಾ ಅಮಲು ಬಂತು ಅಮಲೋ .... ಹೊಯ್.. ಅಮಲೋ
ಅಪ್ಪುವಾ ಹಸಿರು ಅನಾದ ಮಾಡಿರೋ
ಹೆಣ್ಣು : ಹೆಣ್ಣು ಕಡಲಂತಾರೆ ಕಡಲು ಆಳಂತಾರೇ ಅಳೆಯುವ ಆಳು ನಾನಂತಾರೇ
ಹುಸಿ ನಗು ಬೀರ್ತಾರೆ ಮುತ್ತು ಸಿಗುತಂತಾರೆ ಸಿಗದೇ ತಡಕಾಡ್ತಾರೇ
ಒಳಗಡೆ ಸಿಕ್ಕಿ ಕಣ್ಣಬಿಡ್ತಾರೆ ಬಿಳಿ ಚಿಪ್ಪು ತರ್ತಾರೇ
ಗಂಡು : ಕಡಲಿನಾಳವ ಅಳೆಯೋ ರೌರೇ ಹೆಣ್ಣನ್ನು ಅಳೆಯೋರ್ಯಾರವ್ರೆ
ಮೀನಿನ ತೋರೋರೌವ್ರೇ ಗೆಜ್ಜೆಯ ಹಿಡಿಯೋರ್ಯಾರವ್ರೆ
ಅಪ್ಪುವಾ ಹಸಿರು ಅನಾದ ಮಾಡಿರೋ
ಹುಯ್ಲಾ.... ಹುಯ್ಲಾ ... ನವಲು ಬಂತು ನವಲೋ ನವಲೋ
ತಾಳೆ ಬನದಾ ಅಮಲು ಬಂತು ಅಮಲೋ .... ಹೊಯ್.. ಅಮಲೋ
ಅಪ್ಪುವಾ ಹಸಿರು ಅನಾದ ಮಾಡಿರೋ
-------------------------------------------------------------------------------------------------------------------------
ಒಂಟಿ ಸಲಗ ( ೧೯೮೯) - ಜಂಭದ ಕೋಳಿ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ,
ಜಂಭದ ಕೋಳಿ ಗಂಡುಭೀರಿ ನಾನು ಯಾರು ಮೈಸೂರ ಜಾಣ
ಸೊಕ್ಕು ತುಂಬಿ ತುಳುಕಾಡೋ ಹೆಣ್ಣಾನೆಗಳಾ ಪಳಗಿಸೋ ಜಾಣ
ಮದನಾರಿ ನೀನ್ ದರ್ಪದ ರೋಷ ಒಂದು ಬಾರಿ ನಾ ಇಳಿಸುವೆ ಈಗ
ಹೆಮ್ಮಾರಿ ನಿನ್ನ ಜಂಬ್ಡ್ಯಾ ಮೇಲೆ ಅಂಬಾರಿ ನಾ ಹೊರಿಸುವೆ ಈಗ
ಚಾಮುಂಡಮ್ಮಾ.. ಐಸಾ... ಧಾರಾವಾಡಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... ಬೆಂಗಳೂರಮ್ಮಾ... ಐಸಾ
ಜಂಭದ ಕೋಳಿ ಗಂಡುಭೀರಿ ನಾನು ಯಾರು ಮೈಸೂರ ಜಾಣ
ಸೊಕ್ಕು ತುಂಬಿ ತುಳುಕಾಡೋ ಹೆಣ್ಣಾನೆಗಳಾ ಪಳಗಿಸೋ ಜಾಣ
ಬಳುಕಿ ಬಳುಕಿ ಬೆಳೆದ ಚಿಗುರು ಬಳ್ಳಿಗೆ ಸೊಂಟ ನಿಲ್ಲದು ;ತಲೆಯೂ ನಿಲ್ಲದೂ
ಕಾಲು ನಿಲ್ಲದು ಅಯ್ಯೋ ... ಕೈಯ್ಯು ನಿಲ್ಲದು
ಮರದಾ ಗಿಡದಾ ಆಸರೇ ಇಲ್ಲದ್ದಿದ್ದರೇ ಬಳ್ಳಿ ಬೆಳೆಯದು ಮೇಲೆ ಎರದು
ತನ್ನ ಭಾರವ ತಾನೇ ತಡೆಯಲಾರದೂ
ಗಂಡೆಂಬುದು ಮರವಾಗಿ ಹೆಣ್ಣೆಂಬುದು ಲತೆಯಾಗಿ
ಹೀಗಿದ್ದರೇ ಜೊತೆಯಾಗಿ ನೋಡಲು ಚೆನ್ನ
ಚಾಮುಂಡಮ್ಮಾ.. ಐಸಾ... ಧಾರಾವಾಡಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... ಬೆಂಗಳೂರಮ್ಮಾ... ಐಸಾ
ಜಂಭದ ಕೋಳಿ ಗಂಡುಭೀರಿ ನಾನು ಯಾರು ಮೈಸೂರ ಜಾಣ
ಸೊಕ್ಕು ತುಂಬಿ ತುಳುಕಾಡೋ ಹೆಣ್ಣಾನೆಗಳಾ ಪಳಗಿಸೋ ಜಾಣ
ಸೀರೆ ಬಳೆಯಾ ಸರದಾ ಸೊಕ್ಕಿನರಗಿಣಿ ತೊಡುವ ಹೆಣ್ಣಿಗೆ ಇಷ್ಟು ಇದ್ದರೇ
ತೋಡಿಸೋ ಗಂಡಿಗೆ ಇನ್ನೆಷ್ಟು ಬೇಡವೇ
ಓದು ಬರಹ ಕಲಿತ ಮುದ್ದಿನರಗಿಣಿ ತಗ್ಗಿ ನಡೆದರೇ ಕಷ್ಟವೇನಿದೆ
ಮೈಸೂರಿನ ಹೆಣ್ಣಾಗಿ ಮಲ್ಲಿಗೆಯಾ ಹೂವಾಗಿ
ಹೂವರಳಿಸೋ ಕಂಪಾಗಿ ಇದ್ದರೇ ಚೆನ್ನ
ಚಾಮುಂಡಮ್ಮಾ.. ಐಸಾ... ಧಾರಾವಾಡಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... ಬೆಂಗಳೂರಮ್ಮಾ... ಐಸಾ
ಜಂಭದ ಕೋಳಿ ಗಂಡುಭೀರಿ ನಾನು ಯಾರು ಮೈಸೂರ ಜಾಣ
ಸೊಕ್ಕು ತುಂಬಿ ತುಳುಕಾಡೋ ಹೆಣ್ಣಾನೆಗಳಾ ಪಳಗಿಸೋ ಜಾಣ
-------------------------------------------------------------------------------------------------------------------------
ಒಂಟಿ ಸಲಗ ( ೧೯೮೯) - ಬಾರೋ ಹುಡುಗ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾಗುರುರಾಜ, ಕೋರಸ್
ಬಾರೋ ಹುಡುಗಾ ನನ್ನಾ ಹುಡುಗಾ ನೀನೇ ಸಲಗಾ ಒಂಟಿ ಸಲಗಾ
ಅಂಥ ಇಂಥ ಹೆಣ್ಣಿದಲ್ಲ ದಂತದಾ ಗೊಂಬೆ ತೂಗಿ ನಿಂತ ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು ಕಾಯುತ ನಿಂದೇ ಗೆಳೆಯನೇ ಬಾ ಬರಸೆಲೆ ಬಾ
ನೀ ಬರುವಾಗ ಗಾಳಿಯ ವೇಗ ನಾಚುತ ಓಡಿತು
ನೀ ಇರುವಾಗ ನನ್ನೆದೇ ವೇಗ ಏರುತ ಕಾಡಿತೋ
ಹೆಣ್ಣತನವೀಗ ತೋಳಲಿ ಬೇಗ ಸೇರಲು ಹೇಳಿತೋ
ಮೈಮನವೀಗ ನೀ ಹರಿದಾಡೋ ಬಿಳಲುಗಳಾಯಿತೋ
ಬಾರೋ ಹಮ್ಮಿರ ಆಗೋ ನನ್ನಾ ಜೊತೆಗಾರ
ನಿನ್ನಾ ಕೂಡಲೀಗೆ ನನ್ನಾ ತೊಳೆ ಸಿಂಗಾರ
ಬಾರೋ ಹುಡುಗಾ ನನ್ನಾ ಹುಡುಗಾ ನೀನೇ ಸಲಗಾ ಒಂಟಿ ಸಲಗಾ
ಅಂಥ ಇಂಥ ಹೆಣ್ಣಿದಲ್ಲ ದಂತದಾ ಗೊಂಬೆ ತೂಗಿ ನಿಂತ ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು ಕಾಯುತ ನಿಂದೇ ಗೆಳೆಯನೇ ಬಾ ಬರಸೆಲೆ ಬಾ
ನೀ ನಡೆವಾಗ ಗುಡುಗಿನ ನಾದ ಢಮರುಗವಾಯಿತೋ
ಬೆವರಲು ನೀನು ಜಡಿ ಮಳೆಯೆಲ್ಲ ಪನ್ನೀರಾಯಿತೋ
ನೀ ನಗುವಾಗ ಮಿಂಚಿನ ಬಳ್ಳಿ ಸುಳಿ ಗುಳಿದ ಹೋಯಿತು
ಸಿಡಿಯಲು ನೀ ಕಾನನವೆಲ್ಲ ಮಾರ್ದನಿಯಾಯಿದೋ
ನನ್ನಾ ಪಾಲಿಗೆ ನೀ ಸರದಾರ
ನನ್ನಾ ಪಾಲಿಗೆ ನೀ ಸರದಾರ
ಬಾರೋ ಹುಡುಗಾ ನನ್ನಾ ಹುಡುಗಾ ನೀನೇ ಸಲಗಾ ಒಂಟಿ ಸಲಗಾ
ಅಂಥ ಇಂಥ ಹೆಣ್ಣಿದಲ್ಲ ದಂತದಾ ಗೊಂಬೆ ತೂಗಿ ನಿಂತ ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು ಕಾಯುತ ನಿಂದೇ ಗೆಳೆಯನೇ ಬಾ ಬರಸೆಲೆ ಬಾ
-------------------------------------------------------------------------------------------------------------------------
ಒಂಟಿ ಸಲಗ ( ೧೯೮೯) - ಶ್ರಾವಣ ಮಾಸದ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಹೆಣ್ಣು : ಪ್ರಾಯದ ವಯಸ್ಸಿನ ಗೂಡು ಇದು ನಡುಕಾ ಇರದು ಬಳಿ ಬಾ
ಗಂಡು : ಆಸೆಯ ಗರಿಗಳ ಹಾಸಿಗೆಯೂ ಬಾರೆ ಬಾರೆ ಚಕೋರಿ ಬಾ ಬಾರೆ ಎನ್ನುತಿದೆ
ಗಂಡು : ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಹೆಣ್ಣು : ಪ್ರಾಯದ ವಯಸ್ಸಿನ ಗೂಡು ಇದು ನಡುಕಾ ಇರದು ಬಳಿ ಬಾ
ಹೆಣ್ಣು : ಹೂವಿನಲ್ಲಿ ಏತಕೋ ಈ ಕಂಪನಾ
ಗಂಡು : ಈ ಕೋಟೆಯಲ್ಲಿ ದುಂಬಿಗೀಗ ಬಂಧನ
ಹೆಣ್ಣು : ದಳಗಳ ಕಾವಲು ಇದ್ದರೂ ತಲ್ಲಣ
ಗಂಡು : ಕದಿಯುವ ಕಳ್ಳಗೆ ಜೇನಿನಾ ಔತಣ
ಹೆಣ್ಣು : ಒಂಟಿ ಕಾಲ ಮೇಲೆ ತನ್ನ ಭಾರ ತಾಳದೇ ಬಾಗಿ ಕೊಳ್ಳದೆ ಹೂವು ತೂಗು ಹಾಕಿದೇ
ಗಂಡು : ನನ್ನ ನಿನ್ನ ಸ್ನೇಹ ಹೂವೂ ದುಂಬಿಯಂತಿದೆ ದೂರ ನಿಲ್ಲದೆ ಬಾರೇ ನಾಚಿಕೊಳ್ಳದೇ
ಆಸೆಯ ಗರಿಗಳ ಹಾಸಿಗೆಯು ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೆ
ಗಂಡು : ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಹೆಣ್ಣು : ಪ್ರಾಯದ ವಯಸ್ಸಿನ ಗೂಡು ಇದು ನಡುಕಾ ಇರದು ಬಳಿ ಬಾ
ಆಸೆಯ ಗರಿಗಳ ಹಾಸಿಗೆಯು ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೆ
ಗಂಡು : ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಹೆಣ್ಣು : ಪ್ರಾಯದ ವಯಸ್ಸಿನ ಗೂಡು ಇದು ನಡುಕಾ ಇರದು ಬಳಿ ಬಾ
ಗಂಡು : ಓ.. ನಿನ್ನ ಕಣ್ಣ ಬಾಗಿಲೇಕೆ ಮುಚ್ಚಿದೇ
ಹೆಣ್ಣು : ಹಾಂ... ಈಗ ತಾನೇ ಉರಿವ ದೀಪ ಹಚ್ಚಿದೆ
ಗಂಡು : ಬೆಳಕಿನಾ ಅರಮನೆ ನೋಡಲು ಕರೆದೆಯಾ
ಹೆಣ್ಣು : ವಯಸ್ಸಿನಾ ನೆರೆಮನೆ ಇರುವುದೇ ಮರೆತೆಯಾ
ಗಂಡು : ನಿದ್ದೆ ಬಾರದಂಥ ಒಂದು ಜಾವದಲ್ಲಿ ನೀ ಕದ್ದು ಬಂದರೇ ಆಗ ನೀನು ಸಿಕ್ಕರೇ
ಹೆಣ್ಣು : ಯಾರೂ ನೋಡದಂಥ ವೇಳೆ ಕೂಡಿ ಬಂದರೇ
ಕದ್ದು ಹೋದರೂ ಇಲ್ಲ ಏನೂ ತೊಂದರೇ
ಆಸೆಗಳ ಗರಿಗಳ ಹಾಸಿಗೆಯು ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೇ
ಗಂಡು : ಶ್ರಾವಣ ಮಾಸದ ಗಾಳಿ ಇದು ಬಿಡದು ಬಿಡದು ಬಳಿ ಬಾ
ಹೆಣ್ಣು : ಪ್ರಾಯದ ವಯಸ್ಸಿನ ಗೂಡು ಇದು ನಡುಕಾ ಇರದು ಬಳಿ ಬಾ
-------------------------------------------------------------------------------------------------------------------------
No comments:
Post a Comment