17. ಪಡುವಾರಳ್ಳಿ ಪಾಂಡವರು (1978)

ಪಡುವಾರಹಳ್ಳಿ ಪಾಂಡವರು ಚಿತ್ರದ ಹಾಡುಗಳು 
  1. ಹಾಡೊಮ್ಮೆ ಹಾಡಬೇಕು 
  2. ತೂಕಡಿಸಿ ತೂಕಡಿಸಿ 
  3. ಕಣ್ಣು ಮುಚ್ಚಿ ಕುಳಿತರೇ 
  4. ಏಸು ವರ್ಷ ಆಯ್ತೆ ನಿಂಗೇ 
  5. ಜನ್ಮ ನೀಡಿದ ಭೂತಾಯಿಯ 
  6. ಸಾವಿರ ಸಾವಿರ ಯುಗಯುಗ ಉರುಳಿ 
  7. ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ 
  8. ಶ್ರೀರಾಮ ಬಂದವನೇ 
ಪಡುವಾರಳ್ಳಿ ಪಾಂಡವರು (1978) 
ಸಂಗೀತ:ವಿಜಯಭಾಸ್ಕರ್, ಸಾಹಿತ್ಯ: ಕಯ್ಯಾರ ಕಿಞಣ್ಣ ರೈ, ಗಾಯನ : ಪಿ.ಬಿ.ಶ್ರೀ, ಎಸ್.ಪಿ.ಬಿ 

ಎಸ್ಪಿ.ಬಿ. ಹಾಡೊಮ್ಮೆ ಹಾಡಬೇಕು 
ಪಿ.ಬಿ.ಎಸ್. : ಹಾಡೊಮ್ಮೆ ಹಾಡಬೇಕು
ಎಸ್ಪಿ.ಬಿ. : ಹಾಡೊಮ್ಮೆ ಹಾಡಬೇಕು 
ಪಿ.ಬಿ.ಎಸ್.: ಹಾಡೊಮ್ಮೆ ಹಾಡಬೇಕು
ಇಬ್ಬರೂ :ಎಲ್ಲರೊ೦ದೆ ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ 
                ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು 

ಎಸ್ಪಿ.ಬಿ. : ಐಕ್ಯವೊ೦ದೆ ಮ೦ತ್ರ ಐಕ್ಯದಿ೦ದಲೇ ಸ್ವಾತ೦ತ್ರ್ಯ
ಪಿ.ಬಿ.ಎಸ್.: ಹೌದು, ಐಕ್ಯವೊ೦ದೆ ಮ೦ತ್ರ (ಹ್ಹಾಂ ಮಂಚ) ಐಕ್ಯದಿ೦ದಲೇ ಸ್ವಾತ೦ತ್ರ್ಯ
ಎಸ್ಪಿ.ಬಿ.: ಮೌಡ್ಯ ಮುರಿಯುವ ಬನ್ನಿ      
ಇಬ್ಬರು: ಮೌಡ್ಯ ಮುರಿಯುವ ಬನ್ನಿ ಎಲ್ಲರೊ೦ದೆ ಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
          ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು 

ಎಸ್ಪಿ.ಬಿ.ಹದಿನಾಲ್ಕು ಲೋಕವ ಸಪ್ತ ಸಾಗರವ 
ಪಿ.ಬಿ.ಎಸ್.: ಕೆಂಚಾ..  ಹದಿನಾಲ್ಕು ಲೋಕವ   ಸಪ್ತ ಸಾಗರವ
ಎಸ್ಪಿ.ಬಿ.ಗೆಲ್ಲುವ ಶಕ್ತಿಯು ನಮಗು೦ಟು    
ಇಬ್ಬರು : ಗೆಲ್ಲುವ ಶಕ್ತಿಯು ನಮಗು೦ಟು
           ಎಲ್ಲರೊ೦ದೆಎಲ್ಲರೊ೦ದೆ ಎಲ್ಲರೊ೦ದೆ ಎನ್ನುವ
           ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು
           ಹಾಡೊಮ್ಮೆ ಹಾಡಬೇಕು ಹಾಡೊಮ್ಮೆ ಹಾಡಬೇಕು
--------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಜನ್ಮ ನೀಡಿದ ಭೂತಾಯಿಯ

ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ

ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೆ ನನ್ನ ತೊಟ್ಟೀಲು
ಈ ಮಾಚ ಈ ಕೆಂಚ ಎಲ್ಲಾ ಹೆಸರು ಎಂದೆಂದು ನನ್ನೆದೆಯ ಹಚ್ಚನೆಯ ಹಸಿರು
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ

ಈ ಗೌರಿ ಈ ಗಂಗೆ ಹಾಲ ಕುಡಿದೆ ಒಡೋಡಿ ನಲಿದೆ ಊರೆಲ್ಲ ಕುಣಿದೆ
ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ ಹರಿಸದ ತಾಯಿಯರ ಹೇಗೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ

ಈ ಜೀವ ಈ ದೇಹ ಅರೆದು ಅರೆದು ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ನೋಡುವ ಪಂಜರದ ಹಕ್ಕಿಗಳ ಹೇಗೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ ನಾ ಹೇಗೆ ತಾನೆ ಮರೆಯಲಿ
------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ

ಚಿತ್ರಗೀತೆ:  ಸೋರಟ್ ಅಶ್ವಥ್  ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಎಸ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ  ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು... ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮ೦ಕುತಿಮ್ಮ

ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು.....
ಹಸ್ತವನು ತಲೆಗಿಟ್ಟು ಹಣೆಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರು... ನಿನ್ನಜ್ಜ ನನ್ನಜ್ಜ ಮುತ್ತಜ್ಜ

ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೊ ನರಳಿ....
ದಿಕ್ಕೆಟ್ಟರೊ ನರಳಿ ಜೀವಶವದ೦ತೆ
ತೂಕಡಿಸಿ ತೂಕಡಿಸಿ ಬಿದ್ದರು... ನಿನ್ನಜ್ಜ ನನ್ನಜ್ಜ ಮುತ್ತಜ್ಜ

ಬದುಕನ್ನು ಎದುರಿಸಲು ಕಣ್ತೆರೆದು ನೋಡ ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು... ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಓ ಮ೦ಕುತಿಮ್ಮ
-------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಏಸು ವರ್ಸ ಆಯ್ತೆ ನಿ೦ಗೆ
ಸಂಗೀತ: ವಿಜಯಭಾಸ್ಕರ್  ಚಿತ್ರಗೀತೆ:  ದೊಡ್ಡರಂಗೇಗೌಡ  ಗಾಯನ: ಎಸ್.ಪಿ.ಬಿ, ಕಸ್ತೂರಿ ಶಂಕರ್

ಗಂಡು : ಏಸು ವರ್ಸ ಆಯ್ತೆ ನಿ೦ಗೆ ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು ನನ್ನ ಸರದಾರ ನಮ್ಮೂರ ಹಮ್ಮೀರ
ಗಂಡು : ಹೇ.. ಏಸು ವರ್ಸ ಆಯ್ತೆ ನಿ೦ಗೆ ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು ನನ್ನ ಸರದಾರ ನಮ್ಮೂರ ಹಮ್ಮೀರ

ಹೆಣ್ಣು : ಹತ್ತೂರ ಹೈದರು ಸುತ್ತೆಲ್ಲ ಕಾಡಿದರು ಮುತ್ತೈದೆ ಆಸೆಯು ನಿನ್ನ ಮ್ಯಾಗೆ ಜೋರು
          ಹತ್ತೂರ ಹೈದರು ಸುತ್ತೆಲ್ಲ ಕಾಡಿದರು ಮುತ್ತೈದೆ ಆಸೆಯು ನಿನ್ನ ಮ್ಯಾಗೆ ಜೋರು
ಗಂಡು : ಹಗಲಾಗೆ ಇರುಳಾಗೆ ನಿನ್ನದೆ ಹೆಸರು
           ಹಗಲಾಗೆ ಇರುಳಾಗೆ ನಿನ್ನದೆ ಹೆಸರು
           ನನ್ನನು ಕೂಡಿ ಮೋಡಿ ಮಾಡಿ ಕೂಡಿ ಬ೦ತು ಪ್ರೀತಿ ತೇರು
           ನನ್ನನು ಕೂಡಿ ಮೋಡಿ ಮಾಡಿ ಕೂಡಿ ಬ೦ತು ಪ್ರೀತಿ ತೇರು
           ಏಸು ವರ್ಸ ಆಯ್ತೆ ನಿ೦ಗೆ ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು ನನ್ನ ಸರದಾರ ನಮ್ಮೂರ ಹಮ್ಮೀರ (ಅಹ್ಹಹ್ಹಾ ಹ್ಹಹ್ಹಾ )

ಗಂಡು : ಸುಗ್ಗಿಯ ಕಾಲಕೆ ಹಿಗ್ಗಿನ ಹಸಿರು ಸುತ್ತಲೂ ತು೦ಬೈತೆ ನಿನ್ನ ಬಿಸಿ ಉಸಿರು(ಹ್ಹ ಆಹ್ಹಾ)
           ಸುಗ್ಗಿಯ ಕಾಲಕೆ ಹಿಗ್ಗಿನ ಹಸಿರು ಸುತ್ತಲೂ ತು೦ಬೈತೆ ನಿನ್ನ ಬಿಸಿ ಉಸಿರು
ಹೆಣ್ಣು :  ಕನಸಿನ ಮನಸಿಗೆ ಬಯಕೆಯು ನೂರು
           ಕನಸಿನ ಮನಸಿಗೆ ಬಯಕೆಯು ನೂರು
           ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ ನೀನೆ ನನ್ನ ಹಾಲುಕೀರು
           ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ ನೀನೆ ನನ್ನ ಹಾಲುಕೀರು
ಗಂಡು : ಹೊಯ್ ಏಸು ವರ್ಸ ಆಯ್ತೆ ನಿ೦ಗೆ ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು :  ಆ.... ಕೂಸು ತೂಗೊ ವಯಸು ಆಯ್ತು ನನ್ನ ಸರದಾರ ನಮ್ಮೂರ ಹಮ್ಮೀರ

ಹೆಣ್ಣು : ನಿನ್ನೆಲ್ಲ ಕೀಟಲೆ ಮೋಜನು ಬೀರಲು ಮೈಯೆಲ್ಲ ಪುಳಕ ನಿನ್ನ ನೋಟ ತಾಳಲು (ಹೊಯ್ ಹೊಯ್ಯಯಯ್ )
          ನಿನ್ನೆಲ್ಲ ಕೀಟಲೆ ಮೋಜನು ಬೀರಲು ಮೈಯೆಲ್ಲ ಪುಳಕ ನಿನ್ನ ನೋಟ ತಾಳಲು
ಗಂಡು : ಹುರುಪಿನ ವಯಸಿಗೆ ಮದುವೆಯ ಹ೦ಬಲ
            ಹುರುಪಿನ ವಯಸಿಗೆ ಮದುವೆಯ ಹ೦ಬಲ
             ತ೦ಟೆ ಮಾಡ್ತ ನ೦ಟ್ಲು ಕೂಡ್ಸಿ ನೀನೆ ನನ್ನ ನವಿಲು
            ತ೦ಟೆ ಮಾಡ್ತ ನ೦ಟ್ಲು ಕೂಡ್ಸಿ ನೀನೆ ನನ್ನ ನವಿಲು
           ಏಸು ವರ್ಸ ಆಯ್ತೆ ನಿ೦ಗೆ ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು ನನ್ನ ಸರದಾರ ನಮ್ಮೂರ ಹಮ್ಮೀರ ಹ್ಹಾಂ )
ಗಂಡು : ಆ.. ಏಸು ವರ್ಸ ಆಯ್ತೆ ನಿ೦ಗೆ (ಹೂ.. ಹೂಂ ಹೇಳಾಕಿಲ್ಲಾ.ಹೇಳಾಕಿಲ್ಲಾ.. )
           ಹ್ಹಾ... ಏಸು ವರ್ಸ ಆಯ್ತೆ ನಿ೦ಗೆ (ಹೇ.. ನಂಗ್ ಗೊತ್ತಿಲ್ಲ ಬಿಡಿ ) ಆಹ್ಹಹ್ಹಹ್ಹ
-------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಕಣ್ಣು ಮುಚ್ಚಿ ಕುಳಿತರೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಸೋರಟ್ ಅಶ್ವಥ್ ಗಾಯನ:ಎಸ್.ಪಿ.ಬಿ.

ಕಣ್ಣು ಮುಚ್ಚಿ ಕುಳಿತರೇ...ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಮುಚ್ಚಿ ಕುಳಿತರೇ...ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು... ಕಾಣ್ವರೂ ನೂರಾರು ಶಿವರೂ 
ಶಿವನೇ ಕಾಣ್ವರೂ ನೂರಾರು ಶಿವರೂ 
ಶಿವನೇ ಕಾಣ್ವರೂ ನೂರಾರು ಶಿವರೂ 

ನೈವ್ಯೆದ್ಯ ನೇಮದಲಿ ನಿನ್ನ ಮುಂದಿಟ್ಟೇ 
ಆ ಕಟ್ಟೆಯಲ್ಲಿ ನಾ ಕಂಡೇ ನೂರಾರು ಬರಿ ಹೊಟ್ಟೆ 
ಆ ಹೊಟ್ಟೆ ಕಾಣುವುದೆಂದೋ..  ಅನ್ನ ತುಂಬಿದ ತಟ್ಟೇ 
ಶಿವನೇ ಅನ್ನ ತುಂಬಿದ ತಟ್ಟೇ 

ಉಟ್ಟಿರುವೇ ನೀನು ಪಟ್ಟು ಪೀತಾಂಬರ 
ಪೀತಾಂಬರದೇ ನಾ ಕಂಡೇ ಚಿಂದಿ ಉಟ್ಟ ಬಡಜನರ
ಆ ಚಿಂದಿ ಉಟ್ಟ ಒಡಲಿಗೇ... ಎಂದೋ ಪಟ್ಟು ಪೀತಾಂಬರ
ಶಿವನೇ ಪಟ್ಟು ಪೀತಾಂಬರ

ಗುಡಿಯಲ್ಲಿ ಬೆಚ್ಚಗೆ ಬಾಯ್ ಮುಚ್ಚಿ ಕುಳಿತಿರುವೇ
ಗುಡಿಸಲು ಇಲ್ಲದ ದೀನರ ಮರೆತಿರುವೇ
ಆ ದೇವರಿಗಿಲ್ಲಾ... ಬೆಚ್ಚನೆಯ ಗುಡಿ ಎಂದೋ
ಶಿವನೇ ಬೆಚ್ಚನೆಯ ಗುಡಿ ಎಂದೋ
ಕಣ್ಣು ಮುಚ್ಚಿ ಕುಳಿತರೇ...ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು... ಕಾಣ್ವರೂ ನೂರಾರು ಶಿವರೂ 
ಶಿವನೇ ಕಾಣ್ವರೂ ನೂರಾರು ಶಿವರೂ 
ಶಿವನೇ ಕಾಣ್ವರೂ ನೂರಾರು ಶಿವರೂ 
ಶಿವನೇ ಕಾಣ್ವರೂ ನೂರಾರು ಶಿವರೂ 
------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಶ್ರೀರಾಮ ಬಂದವನೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ದೊಡ್ಡರಂಗೇಗೌಡ  ಗಾಯನ: ಕಸ್ತೂರಿ ಶಂಕರ .

ಶ್ರೀರಾಮ ಬಂದವ್ನೇ..ಏ... ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾ..ದ್ಯಾಗೇ..ಏ... ನಮ್ಮೂರ ಹಾ..ದ್ಯಾಗೇ..

ಚಿನ್ನದ ಪಾದವ ತೊಳೆದೂ..ಊ.. ಕಣ್ಣಿನ ದೃಷ್ಟಿಯ ತೆಗೆದೂ
ರನ್ನದ ಆರತಿ ಬೆಳಗೀ ರಾಮನ ನೋಡಿದಳೂ..ಸೀತವ್ವ
ಶ್ರೀರಾಮ ಬಂದವ್ನೇ..ಏ... ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾ..ದ್ಯಾಗೇ..ಏ...ನಮ್ಮೂರ ಹಾ..ದ್ಯಾಗೇ..ಏ...

ತಣ್ಣಗೆ ನಗೆಯಾ ಹರಡೀ..ಈ.. ನುಣ್ಣನೆ ಕೈಯ್ಯಾ ನೀಡೀ
ಪ್ರೀತಿಯ ಮನಸಾ ಬೇಡೀ ರಾಮನ ರಮಿಸಿದಳೂ..ಸೀತವ್ವ
ಶ್ರೀರಾಮ ಬಂದವ್ನೇ..ಏ...ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾ..ದ್ಯಾಗೇ..ಏ...ನಮ್ಮೂರ ಹಾ..ದ್ಯಾಗೇ..ಏ...
ನಮ್ಮೂರ ಹಾ..ದ್ಯಾಗೇ..ಏ...

ಮುತ್ತಿನ ತೇರನು ಏರೀ..ಈ.. ಸುತ್ತಣ ಸೊಬಗಾ ಹೀರೀ
ಹೊತ್ತಿನ ಎಲ್ಲೆಯ ಮೀರೀ.. ರಾಮನ ಕೂಡಿದಳೂ..ಸೀತವ್ವ
ಶ್ರೀರಾಮ ಬಂದವ್ನೇ..ಏ...ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾ..ದ್ಯಾಗೇ..ಏ...ನಮ್ಮೂರ ಹಾ..ದ್ಯಾಗೇ..ಏ...
-------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಸಾವಿರ ಸಾವಿರ ಯುಗಯುಗ ಉರಳಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಸೋರಟ್ ಅಶ್ವಥ್ ಗಾಯನ:ಎಸ್.ಪಿ.ಬಿ.

ಸಾವಿರ ಸಾವಿರ ಯುಗಯುಗ ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ
ಸಾವಿರ ಸಾವಿರ ಯುಗಯುಗ ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ

ಶಿಶು ಪ್ರಲ್ಹಾದನ ಪೀಡಿಸಿದ ಹಿರಣ್ಯಕಶ್ಯಪವೇ ತಾ ಮಡಿದ
ಶಿಶು ಪ್ರಲ್ಹಾದನ ಪೀಡಿಸಿದ ಹಿರಣ್ಯಕಶ್ಯಪವೇ ತಾ ಮಡಿದ
ಕಂಬವ ನೋಡೆಯುತೆ ನರಹರಿ ಬಂದು ಧರ್ಮವೇ ಜಯಸಿತು ಅಂದು 
ಸಾಗಿದೆ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ 

ಹತ್ತು ತಲೆಗಳ ಹೊತ್ತ ರಾವಣ ತುತ್ತಾದನು ಶ್ರೀರಾಮ ಬಾಣಕೆ
ಹತ್ತು ತಲೆಗಳ ಹೊತ್ತ ರಾವಣ ತುತ್ತಾದನು ಶ್ರೀರಾಮ ಬಾಣಕೆ
ದರ್ಪದ ಪರ್ವತ ಕುಸಿಯಿತು ಅಂದು ಧರ್ಮವೇ ಜಯಸಿತು ಅಂದು
ಸಾಗಿದೆ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ 

ಪಂಚ ಪಾಂಡವರು ನೂರು ಕೌರವರ ಕೊಚ್ಚಿ ಕೆಡಕಿದ ಕಥೆಯುಂಟು
ಪಂಚ ಪಾಂಡವರು ನೂರು ಕೌರವರ ಕೊಚ್ಚಿ ಕೆಡಕಿದ ಕಥೆಯುಂಟು
ಸಜ್ಜನರಿಗೆ ಬಲು ಸಂಕಟವಿತ್ತು ಇಕ್ಕುವ ಮೂರ್ಖರ 
ಬಗ್ಗು ಬಡಿಯುವ ಕೆಚ್ಚಿನ ಕಿಚ್ಚು ನಮಗುಂಟೂ ಕೆಚ್ಚಿನ ಕಿಚ್ಚು ನಮಗುಂಟೂ 
ಸಾಗಿದೆ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ ದುರ್ಜನ ಸಜ್ಜನ ಸಂಗ್ರಾಮ 
-------------------------------------------------------------------------------------------------------------------------

ಪಡುವಾರಳ್ಳಿ ಪಾಂಡವರು (1978) - ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಸೋರಟ್ ಅಶ್ವಥ್ ಗಾಯನ:ಎಸ್.ಪಿ.ಬಿ. ಪಿ.ಬಿ.ಎಸ್. 

ಎಸ್ಪಿಬಿ:  ಬಹಿಷ್ಕಾರ ಬಹಿಷ್ಕಾರ ಯಾರಿಗೆ ನಿಮ್ಮ ಬಹಿಷ್ಕಾರ
ಪಿ.ಬಿ.ಎಸ್ :  ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ಧಿಕ್ಕಾರ
ಎಲ್ಲರೂ : ಧಿಕ್ಕಾರ ಧಿಕ್ಕಾರ ಧಿಕ್ಕಾರ

ಎಸ್ಪಿಬಿ: ಮುಗ್ದ ಹೆಣ್ಣಿಗೇ ಮೋಸ ಮಾಡುವ ದುಷ್ಟ ಜನರು ನೀವೂ
ಪಿ.ಬಿ.ಎಸ್. :  ದೀನ ದಲಿತರ ಚರ್ಮ ಸುಲಿಯುವ ಕ್ರೂರ ಜನರು ನೀವೂ
ಎಸ್ಪಿಬಿ:  ಜೀತದಾಳುಗಳ ರಕ್ತ ಹೀರುವ ನೀಚ ಜನರು ನೀವೂ
ಪಿ.ಬಿ.ಎಸ್ :  ನಿಮಗೆ ಬಹಿಷ್ಕಾರ  ಎಸ್ಪಿ.ಬಿ. :  ನಿಮಗೆ ಬಹಿಷ್ಕಾರ
ಪಿ.ಬಿ.ಎಸ್ :  ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ಧಿಕ್ಕಾರ
ಎಲ್ಲರೂ : ಧಿಕ್ಕಾರ ಧಿಕ್ಕಾರ

ಎಸ್ಪಿಬಿ:  ಸಾಧು ಸಂತರಿಗೆ ಭೀತಿ ಹುಟ್ಟಿಸಿ ಮೆಟ್ಟಿ ನಿಲ್ಲುವ ನೀವೂ 
ಪಿ.ಬಿ.ಎಸ್ : ಸಿರಿಯ ಗರ್ಭದಿ ಹೆಡೆಯ ಎತ್ತುವ ವಿಷದ ಸರ್ಪ ನೀವೂ 
ಎಸ್ಪಿಬಿ:  ಕರಳು ಕೀಳುವಾ ಹಿಂಸೆ ಮಾಡುವ ಕಟುಕರಯ್ಯ ನೀವೂ 
ಎಲ್ಲರೂ : ನಿಮಗೆ ಬಹಿಷ್ಕಾರ ನಿಮಗೆ ಬಹಿಷ್ಕಾರ
              ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ 
-------------------------------------------------------------------------------------------------------------------------

No comments:

Post a Comment