1167. ಪವಿತ್ರ ಪ್ರೇಮ (೧೯೮೪)

ಪವಿತ್ರ ಪ್ರೇಮ ಚಲನಚಿತ್ರದ ಹಾಡುಗಳು
  1. ಎಂದೆಂದೂ ನಾ ನಿನ್ನ ಜೊತೆಗೆ ಬರುವೇ
  2. ಒಂದು ಗುಟ್ಟು ಹೇಳಬೇಕು ನಾನು
  3. ಪ್ರೇಮ ಮಾಡೋಣ ಸ್ನೇಹ ಬೆಳೆಸೋಣ
  4. ನಾನು ನಿನಗಾಗಿ ನಲ್ಲ
ಪವಿತ್ರ ಪ್ರೇಮ (೧೯೮೪) - ಎಂದೆಂದೂ ನಾ ನಿನ್ನ ಜೊತೆಗೆ ಬರುವೇ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್. ಜಾನಕೀ

ಗಂಡು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ
ಹೆಣ್ಣು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ

ಗಂಡು : ಬಿಸಿಲಲ್ಲಿ ಎಂದೂ ನೆರಳಾಗಿ ಇರುವೇ ತಂಗಾಳಿಯಾಗಿ ಹಿತವನ್ನೇ ತರುವೇ
ಹೆಣ್ಣು : ನೀ ಕಾಣದಂಥ ಸುಖವನ್ನೂ ಕೊಡುವೇ ನೀ ಹೇಳಿದಂತೇ ಎಂದೆಂದೂ ನಡೆವೇ
ಗಂಡು : ಹೂವು ಗಂಧ ಬೆರೆತಂತೇ ಮಾವು ಸಿಹಿಯು ಕಲೆತಂತೇ
           ಸೇರಿ ಬಾಳೋಣ ಎಂದೂ ಹೀಗೇ ಒಂದಾಗಿ
ಹೆಣ್ಣು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ

ಹೆಣ್ಣು : ಹೊಸ ಆಸೆಯನ್ನೂ ಕಣ್ಣಲ್ಲಿ ನುಡಿದೇ ಮನದಲ್ಲಿ ಏಕೇ ಸಂಕೋಚ ತರುವೇ
ಗಂಡು :  ಸೌಂದರ್ಯ ತೋರಿ ಬಾ ಎನ್ನುತಿರುವೇ ಬಂದಾಗ ಏಕೇ  ನೀ ಹೀಗೆ ನುಡಿವೇ
ಹೆಣ್ಣು : ಸನಿಹ ನೀನೂ ಬಂದಾಗ ಮೈಯ್ಯಲ್ಲೆಲ್ಲಾ ಮಿಂಚಾಗ ಏನೋ ಉಲ್ಲಾಸ ಏಕೋ ಏನೋ ಸಂಕೋಚ
ಗಂಡು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ

ಗಂಡು : ಎಂದೆಂದೂ ಹೊಸದು  ಸವಿಯಾದ ಕನಸೂ ಎಂದೆಂದೂ ಹೊಸದು ಈ ಸಂಜೇ ಸೊಗಸೂ
ಹೆಣ್ಣು :  ಎಂದೆಂದೂ ಹೊಸದು  ಈ ನಮ್ಮ ಪ್ರೇಮ ಹಿತವಾದ ಬೆಸುಗೆ ಈ ನಮ್ಮ ಸ್ನೇಹ
ಗಂಡು : ಹೆಣ್ಣೇ ನಿನ್ನ ಕಣ್ಣೋಟ ಚೆಲುವೇ ನಿನ್ನ ಚೆಲ್ಲಾಟ ಹೊಸದು ಎಂದೆಂದೂ ನಲ್ಲೇ ನನ್ನ ಸಂಬಂಧ
ಹೆಣ್ಣು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ
ಗಂಡು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ ಮಧುಮಾಸದಾನಂದ ಬಾಳಲ್ಲಿ ತರುವೇ
             ಸಂಗಾತಿ ನೀ ಹೇಳೂ ನನಗೇನೂ ಕೊಡುವೇ
ಇಬ್ಬರು :  ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ 
--------------------------------------------------------------------------------------------------------------------------

ಪವಿತ್ರ ಪ್ರೇಮ (೧೯೮೪) - ಒಂದು ಗುಟ್ಟು ಹೇಳಬೇಕು ನಾನು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್. ಏನ್. ಜಯಗೋಪಾಲ್ ಗಾಯನ : ಎಸ್.ಜಾನಕೀ

ಒಂದು ಗುಟ್ಟು ಹೇಳಬೇಕೂ ನಾನೂ ..
ಹೇ.. ಒಂದು ಗುಟ್ಟು ಹೇಳಬೇಕೂ ನಾನೂ .. ಕೀವಿಗೊಟ್ಟು ಕೇಳಬೇಕು ನೀನೂ
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ  ತಾಳಲಾರೇ ನೋಡೂ ಬೇಗ ಬಂದು ನಿನ್ನ ಜೊತೆ ನೀಗೂ
ಒಂದು ಗುಟ್ಟು ಹೇಳಬೇಕೂ ನಾನೂ .. ಕೀವಿಗೊಟ್ಟು ಕೇಳಬೇಕು ನೀನೂ
ಅಮ್ಮಮ್ಮಮ್ಮಮ್ಮಾ ಅಮ್ಮಮ್ಮಾ ತಾಳಲಾರೇ ನೋಡೂ ಬೇಗ ಬಂದು ನಿನ್ನ ಜೊತೆ ನೀಗೂ
ಆ ರಾತ್ರಿ ಹುಣ್ಣಿಮೆ ಹಾಲು ಚೆಲ್ಲಿತ್ತು ತಂಪಾಗಿ ಮೆಲ್ಲಗೇ ಗಾಳಿ ಬೀಸಿತ್ತು ..

ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ...
ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ... ಕಳ್ಳನಂತೆ ಹೇಗೋ ಮನೆಗೇ ನುಗ್ಗಿದೇ
ಕಳ್ಳನಂತೆ ಹೇಗೋ ಮನೆಗೇ ನುಗ್ಗಿದೇ ಹಿಂದಿನಿಂದ ಬಂದೂ ನನ್ನ ಅಪ್ಪಿದೇ .. ಹ್ಹಾ..
ಹಿಂದಿನಿಂದ ಬಂದೂ ನನ್ನ ಅಪ್ಪಿದೇ  ಆ ನೆನಪೂ ಮೈಯೆಲ್ಲಾ ಜುಂ ಎಂದಿದೇ..
ಆ ಗಂಧ ಈಗಲೂ ಘಮ್ ಎನುತಿದೆ
ಒಂದು ಗುಟ್ಟು ಹೇಳಬೇಕೂ ನಾನೂ .. ಕೀವಿಗೊಟ್ಟು ಕೇಳಬೇಕು ನೀನೂ
ಅಮ್ಮಾ..  ಅಮ್ಮಮ್ಮಾ ಅಮ್ಮಮ್ಮಾ  ತಾಳಲಾರೇ ನೋಡೂ ಬೇಗ ಬಂದು ನಿನ್ನ ಜೊತೆ ನೀಗೂ

ಆ ನಿನ್ನ ತುಂಟಾಟ ಗುರುತೂ ಮಾಡಿತ್ತು... ಈ ಕೆನ್ನೇ ಕೆಂಪೇರಿ ನಾಚಿ ಹೋಗಿತ್ತು ..
ಮೈಯ್ಯಿ ಬೇವರಿತ್ತು ಆಸೇ ಮೂಡಿತ್ತು..
ಮೈಯ್ಯಿ ಬೇವರಿತ್ತು ಆಸೇ ಮೂಡಿತ್ತು ಮೂಡಿದ ಮಲ್ಲೇ ಹೂವೂ ನಲುಗಿ ಹೋಗಿತ್ತು
ಮಲ್ಲೇ ಹೂವೂ ನಲುಗಿ  ಹೋಗಿತ್ತು   ಸೀರೇ ಸೆರಗೂ ಎಲ್ಲೋ ಜಾರಿ ಹೋಗಿತ್ತೂ
ಸೀರೇ ಸೆರಗೂ ಎಲ್ಲೋ ಜಾರಿ ಹೋಗಿತೂ ಆ ಘಳಿಗೇ ಈಗಿನ್ನೂ ಕಣ್ಣ ಮುಂದಿದೇ
ಆ ಸೊಗಸೂ ಈ ಹೊತ್ತು ಬೇಕೂ ಎಂದಿದೇ
ಒಂದು ಗುಟ್ಟು ಹೇಳಬೇಕೂ ನಾನೂ .. ಕೀವಿಗೊಟ್ಟು ಕೇಳಬೇಕು ನೀನೂ
ಅಮ್ಮಮ್ಮಾ..  ಅಮ್ಮಮ್ಮಾ ಅಮ್ಮಮ್ಮಾ  ತಾಳಲಾರೇ ನೋಡೂ ಬೇಗ ಬಂದು ನಿನ್ನ ಜೊತೆ ನೀಗೂ
ಹೇ.. ಬೇಗ ಬಂದು ನಿನ್ನ ಜೊತೆ ನೀಗೂ
--------------------------------------------------------------------------------------------------------------------------

ಪವಿತ್ರ ಪ್ರೇಮ (೧೯೮೪) - ಪ್ರೇಮ ಮಾಡೋಣ ಸ್ನೇಹ ಬೆಳೆಸೋಣ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್. ಜಯಗೋಪಾಲ್  ಗಾಯನ : ವಾಣಿಜಯರಾಂ

ಹೆಣ್ಣು : ಪ್ರೇಮ ಮಾಡೋಣ ಸ್ನೇಹ ಬೆಳೆಸೋಣ ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
          ಪ್ರೇಮ ಮಾಡೋಣ          ಕೋರಸ್ : ಮಾಡೋಣ ಮಾಡೋಣ
ಹೆಣ್ಣು : ಸ್ನೇಹ ಬೆಳೆಸೋಣ           ಕೋರಸ್ : ಬೆಳೆಸೋಣ ಬೆಳೆಸೋಣ
ಹೆಣ್ಣು : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
ಕೋರಸ್ : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ

ಕೋರಸ್ : ಲಂಪಾಲ್ ಓಲ್ ಓಲ್ ಲಂಪ ಲಂಪಾಲ್ ಓಲ್ ಓಲ್  ಲಂಪಾಲ್ ಓಲ್ ಓಲ್ ಲಂಪ ಲಂಪಾಲ್ ಓಲ್ ಓಲ್
ಹೆಣ್ಣು : ಕಣ್ಣುಗಳಲ್ಲಿ ಕುಣಿಸಬಲ್ಲೇ .. ಅಂಗೈಯಲ್ಲಿ ಆಡಿಸಬಲ್ಲೇ ..
          ಮರೆಯದ ಅನುಭವ ನೀಡಲೂ ಬಲ್ಲೇ ಹೊಸ ಹೊಸ ರಸಿಕತೆ ಕಲಿಸಲು ಬಲ್ಲೇ
          ಮರೆಯದ ಅನುಭವ ನೀಡಲೂ ಬಲ್ಲೇ ಹೊಸ ಹೊಸ ರಸಿಕತೆ ಕಲಿಸಲು ಬಲ್ಲೇ
          ಗೆದ್ದೇ ಆಡು ಬಾ ಹೂಬನ ಇಲ್ಲೇ..       ಕೋರಸ್ : ಇಲ್ಲೇ...ಇಲ್ಲೇ..
ಹೆಣ್ಣು : ಇಲ್ಲೇ ನೋಡು ಸ್ವರ್ಗದ ಎಲ್ಲೇ..         ಕೋರಸ್ : ಎಲ್ಲೇ .. ಎಲ್ಲೇ..                 
ಹೆಣ್ಣು : ಪ್ರೇಮ ಮಾಡೋಣ          ಕೋರಸ್ : ಮಾಡೋಣ ಮಾಡೋಣ
ಹೆಣ್ಣು : ಸ್ನೇಹ ಬೆಳೆಸೋಣ           ಕೋರಸ್ : ಬೆಳೆಸೋಣ ಬೆಳೆಸೋಣ
ಹೆಣ್ಣು : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
ಕೋರಸ್ : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ

ಕೋರಸ್ : ಲುಂಬಾ  ಲುಂಬಾ ಲುಂಬಾ ಲುಂಬಾ ಲುಂಬಾ ಲುಂಬಾ  ಲುಂಬಾ ಲುಂಬಾ ಲುಂಬಾ ಲುಂಬಾ
ಹೆಣ್ಣು : ಹರೆಯದ ಅಂದ ಕರೆಯುವ ವೇಳೆ .. ತುಟಿಗಳ ಮಧುವೂ ಸೆಳೆಯುವ ವೇಳೆ  ..
         ಮೊದಲನೇ ಮಿಂಚದೂ ಸುಲಿಯುವ ವೇಳೆ  ನಮ್ಮನ್ನೂ ನಾವೇ ಮರೆಯುವ ವೇಳೆ
         ಮೊದಲನೇ ಮಿಂಚದೂ ಸುಲಿಯುವ ವೇಳೆ  ನಮ್ಮನ್ನೂ ನಾವೇ ಮರೆಯುವ ವೇಳೆ
         ಪ್ರೇಮದೌತಣ ಇಲ್ಲಿದೇ ಬೇಕೇ...          ಕೋರಸ್ : ಬೇಕೇ.. ಬೇಕೇ..
ಹೆಣ್ಣು : ಕಾಲ ನಿನ್ನದೇ  ಒಡೀದೇ ಜೋಕೇ ..    ಕೋರಸ್ : ಜೋಕೇ .. ಜೋಕೇ ..
ಹೆಣ್ಣು : ಪ್ರೇಮ ಮಾಡೋಣ          ಕೋರಸ್ : ಮಾಡೋಣ ಮಾಡೋಣ
ಹೆಣ್ಣು : ಸ್ನೇಹ ಬೆಳೆಸೋಣ           ಕೋರಸ್ : ಬೆಳೆಸೋಣ ಬೆಳೆಸೋಣ
ಹೆಣ್ಣು : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
ಕೋರಸ್ : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
ಹೆಣ್ಣು : ಪ್ರೇಮ ಮಾಡೋಣ          ಕೋರಸ್ : ಮಾಡೋಣ ಮಾಡೋಣ
ಹೆಣ್ಣು : ಸ್ನೇಹ ಬೆಳೆಸೋಣ           ಕೋರಸ್ : ಬೆಳೆಸೋಣ ಬೆಳೆಸೋಣ
ಹೆಣ್ಣು : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
ಕೋರಸ್ : ಸೊಗಸಿನ ಮೈಸಿರಿ ಬೆರೆಯುವ ಮನಸಿಗೇ ಒಂದಾಗಿ ಸೇರೋಣ
--------------------------------------------------------------------------------------------------------------------------

ಪವಿತ್ರ ಪ್ರೇಮ (೧೯೮೪) - ನಾನು ನಿನಗಾಗಿ ನಲ್ಲ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ .

ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ
ನೀ ತಂದ ಸಂತೋಷ ನಾ ತಂದ ಉಲ್ಲಾಸ ಎಲ್ಲಾ ನಮಗಾಗಿ
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ

ಈ ಗಾಳಿಯ ತಂಪೂ ಈ ಹೂವಿನಾ ಕಂಪೂ ಸಂಗೀತದ ಇಂಪೂ ನಮಗಾಗಿ 
ಈ ಗಾಳಿಯ ತಂಪೂ ಈ ಹೂವಿನಾ ಕಂಪೂ ಸಂಗೀತದ ಇಂಪೂ ನಮಗಾಗಿ 
ಆ ಬಾನು ಆ ಮೋಡ ಆ ಸೂರ್ಯ ಆ ಚಂದ್ರ ಒಲವಿಂದ ಕಾಣೋದು ನಮಗಾಗಿ 
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ

ಗಿಳಿ ಮಾತನಾಡೋದು ಮರಿದುಂಬಿ ಹಾಡೋದು ಗಿರಿನವಿಲು ಕುಣಿಯೋದು ನಮಗಾಗಿ 
ಗಿಳಿ ಮಾತನಾಡೋದು ಮರಿದುಂಬಿ ಹಾಡೋದು ಗಿರಿನವಿಲು ಕುಣಿಯೋದು ನಮಗಾಗಿ 
ಅನುರಾಗದಾನಂದ ಹೊಸಬಾಳ ಮಕರಂದ ಸವಿಯೋಣ ನಾವಿಂದೂ ಒಂದಾಗಿ 
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ

ರವಿಜಾರಿ ಹೋದಾಗ ದಿನ ರಾತ್ರಿ ಬಂದಾಗ ತಾರೆಗಳೂ ಮಿನುಗೋದು ನಮಗಾಗಿ
ರವಿಜಾರಿ ಹೋದಾಗ ದಿನ ರಾತ್ರಿ ಬಂದಾಗ ತಾರೆಗಳೂ ಮಿನುಗೋದು ನಮಗಾಗಿ
ಆಕಾಶ ಕೆಂಪಾಗಿ ಮುಗಿಲೆಲ್ಲಾ ರಂಗಾಗಿ ಉಷೆ ಬಂದು ನಲಿಯೋದು ನಮಗಾಗಿ
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ
ನೀ ತಂದ ಸಂತೋಷ ನಾ ತಂದ ಉಲ್ಲಾಸ ಎಲ್ಲಾ ನಮಗಾಗಿ
ನಾನೂ ನಿನಗಾಗಿ ನಲ್ಲಾ .. ನೀನೂ ನನಗಾಗಿ ನಲ್ಲಾ
--------------------------------------------------------------------------------------------------------------------------

No comments:

Post a Comment