1301. ಪ್ರೀತಿಯಲ್ಲಿ ಇರೋ ಸುಖ (೨೦೦೦)


ಪ್ರೀತಿಯಲ್ಲಿ ಇರೋ ಸುಖ ಚಲನಚಿತ್ರದ ಹಾಡುಗಳು
  1. ಓ ಮನಸೇ ಅನುಭವಿಸು
  2. ತಮ್ಮಾ ಅಣ್ಣಾ ಏನು ಪ್ರೀತಿಯಲ್ಲಿ
  3. ಧೀನ್ ಧೀನ್ ತಾ ಧೀನ್ ಧೀನ್
  4. ಏನಾಯ್ತೋ.. ನಿಂಗೇನಾಯ್ತೋ
  5. ಪ್ರೀತಿಯಲ್ಲಿ ಇರೋ ಸುಖ
  6. ನೋಡಿವಳಂದನಾ...
ಪ್ರೀತಿಯಲ್ಲಿ ಇರೋ ಸುಖ (೨೦೦೦) - ಓ ಮನಸೇ ಅನುಭವಿಸು
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ : ರಾಜೇಶ

ಓ..ಮನಸೇ ಅನುಭವಿಸು ಈ ಪ್ರೀತಿಯಲ್ಲಿ ಇರೋ ಸುಖ
ಓ..ಮನಸೇ ಅನುಭವಿಸು ಈ ಪ್ರೀತಿಯಲ್ಲಿ ಇರೋ ಸುಖ ಹೃದಯಾನೇ ಹಗುರಾಯ್ತು ಈ ಪ್ರೀತಿ ತಂದ ಮುತ್ತಿನ ದಯದಿಂದ
ಹೃದಯಾನೇ ಹಗುರಾಯ್ತು ಈ ಪ್ರೀತಿ ತಂದ ಮುತ್ತಿನ ದಯದಿಂದ
ಭೂಮಿನೇ ಸುತ್ತಾಯ್ತು ಈ ಪ್ರೀತಿ ತಂದ ರೆಕ್ಕೆ ಬಲದಿಂದ
ಭೂಮಿನೇ ಸುತ್ತಾಯ್ತು ಈ ಪ್ರೀತಿ ತಂದ ರೆಕ್ಕೆ ಬಲದಿಂದ
ಏ.. ಮನಸೇ ನೆನಪಿರಿಸು ಈ ಪ್ರೀತಿಯಲ್ಲಿ ಇರೋ ಸುಖ
ಓ..ಮನಸೇ ಅನುಭಬಿಸು ಈ ಪ್ರೀತಿಯಲ್ಲಿ ಇರೋ ಸುಖ

ಕಣ್ಣೋಳಗೇ ಸಂವಾದ ಈ ಪ್ರೀತಿ ಎಂಬ ಮೌನ ಭಾಷೆಯಲ್ಲಿ
ತುಟಿಗಳಿಗೇ ಸಂವಾದ ಈ ಪ್ರೀತಿ ಎಂಬ  ಮುತ್ತಿನ ಹಾರದಲ್ಲಿ
ಓ.. ಮನಸೇ.. ಗೌರವಿಸು ಈ ಪ್ರೀತಿಯಲ್ಲಿ ಇರೋ ಸುಖ
ಓ..ಮನಸೇ.. ಅನುಭವಿಸು ಈ ಪ್ರೀತಿಯಲ್ಲಿ ಇರೋ ಸುಖ
ಪ್ರೀತಿಗೇ ಕೊನೆಯಿಲ್ಲ ಅದು ತಿಳಿಯಿತು ಈ ಹೆಣ್ಣಿನ ಒಲವಿಂದ
ಪ್ರೀತಿಗೇ ಸಮವಿಲ್ಲ ಅದು ತಿಳಿಯಿತು ಈ ಸ್ನೇಹದ ಸುಖದಿಂದ
ಓ..ಮನಸೇ ಅನುಭಬಿಸು ಈ ಪ್ರೀತಿಯಲ್ಲಿ ಇರೋ ಸುಖ

ನೋವುಗಳಾ ನದಿ ಮೇಲೆ ಈ ಪ್ರೀತಿ ಒಂದು ಬಣ್ಣದ ಸೇತುವೇ
ಕನಸುಗಳಾ ಆಲೆಮೇಲೆ ಈ ಪ್ರೀತೀ ಒಂದು ತೇಲೋ ನೌಕೆ
ಓ‌ ಮನಸೇ ಹಾಡುತಿರು ಈ ಪ್ರೀತಿಯಲ್ಲಿ ಇರೋ ಸುಖ
ಓ ಮನಸೇ ಅನುಭವಿಸು ಈ ಪ್ರೀತಿಯಲ್ಲಿ ಇರೋ ಸುಖ
ಲೋಕಾನೇ ಬೇಡಾಯ್ತು  ಈ ಪ್ರೀತಿಯ ಸ್ನೇಹ ಮಾಡಿದ
ದಿನದಿಂದ
ಬಾಳೆಲ್ಲಾ ಹಾಡಾಯ್ತು ಈ ಪ್ರೀತಿಯ ರಾಗ ಕೇಳಿದ ಕ್ಷಣದಿಂದ
ಓ.. ಮನಸೇ ಸ್ವೀಕರಿಸು ಈ ಪ್ರೀತಿಯಲ್ಲಿ ಇರೋ ಸುಖ
ಓ.. ಮನಸೇ ಅನುಭವಿಸು ಈ ಪ್ರೀತಿಯಲ್ಲಿ ಇರೋ ಸುಖ
------------------------------------------------------------------

ಪ್ರೀತಿಯಲ್ಲಿ ಇರೋ ಸುಖ (೨೦೦೦) - ತಮ್ಮಾ ಅಣ್ಣಾ ಏನು
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ : ರಾಜೇಶ, ರಮೇಶಚಂದ್ರ, ಚೇತನ

ತಮ್ಮಾ..ಅಣ್ಣಾ.. ಏನು...ಪ್ರೀತಿಯಲ್ಲಿ ಇರೋ ಸುಖ
ಸುಖ ಸುಖ ಅಂತ ಕಾಡಬೇಡ ಬೇಡ ಕಾಡಬೇಡ
ಹೆಣ್ಣು ಅಂತಾ ರಾಗ ಎಳೆಯಬೇಡ ಬೇಡ ಎಳೆಯಬೇಡ
ಅರೆರೇ... ಕೇಳೋ ಹೃದಯ ಹಾಡಬೇಕು ಸಂಗೀತ
ಅರೆರೇ.. ಕೇಳೋ ಅದುವೇ ಪ್ರೀತಿಯ ಸಂಕೇತ
ತಮ್ಮಾ.. ಅಣ್ಣಾ‌... ಏನು.. ಒಂದೇ ಒಂದು ಹೆಣ್ಣು ಮುಖ
ಹೆಣ್ಣು ಹೆಣ್ಣು ಅಂತಾ ಕಾಡಬೇಡ ಬೇಡ ಕಾಡ ಬೇಡ
ಪ್ರೀತಿ ಅಂತ ರಾಗ ಏಳಿಬೇಡ ಬೇಡ ಎಳಿ ಬೇಡ
ಅರೆರೇ... ಕೇಳೋ ಹೃದಯ ಹಾಡಬೇಕು ಸಂಗೀತ
ಅರೆರೇ.. ಕೇಳೋ ಅದುವೇ ಪ್ರೀತಿಯ ಸಂಕೇತ
ತಮ್ಮಾ.. ಅಣ್ಣಾ‌... ಏನು.. ಪ್ರೀತಿಯಲ್ಲಿ ಇರೋ ಸುಖ

ಗಂಡು ಹೆಣ್ಣು ಕೂಡಿ ಬಾಳದಿದ್ದರೇ ಮನೆ ಇಲ್ಲ ಮಠವಿಲ್ಲ
ಮಕ್ಕಳೆಲ್ಲ ಮರಿ ಇಲ್ಲ
ಹೆಣ್ಣು ಎಂಬ ಸ್ಪೂರ್ತಿ ಇಲ್ಲದಿದ್ದರೇ ಗುರಿ ಇಲ್ಲ ಜಯವಿಲ್ಲ
ಜಯವಿಲ್ಲದೆ ಗಂಡಸಿಲ್ಲ  ಬಾಬಾ ನಾನೊಬ್ಬ ಯೋಗಿ ಬಾಬಾ
ನನಗೆ ಯಾಕೆ ಮಾ ಮಾ ಪ್ರೇಮಾ ಮಾ ಮಾ ಮಾ ಮಾ
ಯೋಗಿ ಯೋಗಿ ಅಂತ ಕೂರಬೇಡ ಬೇಡ ಕೂರ ಬೇಡ
ಯೋಗಿ ಆಗು ಅಂತ ಕಾಡಬೇಡ ಬೇಡ ಕಾಡಬೇಡ
ಅರೆರೇ.. ಕೇಳೋ  ಹೃದಯ ಹಾಡಬೇಕು ಸಂಗೀತ
ಅರೆರೇ.. ಕೇಳೋ ಅದುವೇ ಪ್ರೀತಿಯ ಸಂಕೇತ
ತಮ್ಮಾ.. ಅಣ್ಣಾ‌... ಏನು.. ಪ್ರೀತಿಯಲ್ಲಿ ಇರೋ ಸುಖ

ನನ್ನಾ ನಿನ್ನ ಮಾಡಿದ ದೇವರೂನು ಅತ್ತ ಇತ್ತ ಒಂದು
ಕಟ್ಟಿಕೊಂಡ ಸಾಲದೆಂದು ಹೆಣ್ಣು ಒಲ್ಲೆ ಎನ್ನುವ ಕಲೆಗಾರ
ಜಗದಲ್ಲಿ ಅಪರೂಪ ನೀನಂತು ಅಯ್ಯೋ ಪಾಪ
ಬಾ.. ಬಾ.. ಗೆಳೆಯ ಗೆಲ್ಲುವೆ ನಾನು ಕಾಮ ಕಲೆಯೇ ಮಾ.. ಮಾ
ನನ್ನ ಪ್ರೇಮಾ ..ಮಾ...ಮಾ  ಕಲೆ ಅಂತಾ ಕಾಲ ಕಳಿಬೇಡ
ಬೇಡ ಕಳಿ ಬೇಡ ಕನ್ಯೆ ತೋರಸೀ ಕಾಲು ಎಳಿಬೇಡ
ಬೇಡ ಕೊಲ್ಲ ಬೇಡ ಅರೆರೇ.. ಕೇಳೋ ಹೃದಯ ಹಾಡಬೇಕು
ಸಂಗೀತ
ತಮ್ಮಾ.. ಅಣ್ಣಾ‌... ಏನು.. ಪ್ರೀತಿಯಲ್ಲಿ ಇರೋ ಸುಖ
ಲೇಲೇಲೇ...ಮಡೆಯ ಲೇಲೇಲೇ ಮಡೆಯ...ಲೇ.ಮಡೆಯ
ಲೇ.. ಎಡೆಯ..ಏ..ಎಡೆಯ...ಏ..ಎಡೆಯ...ಏ..ಎಡೆಯ
------------------------------------------------------------------

ಪ್ರೀತಿಯಲ್ಲಿ ಇರೋ ಸುಖ (೨೦೦೦) -   ಧೀನ್ ಧೀನ್ ತಾ
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ :ಮನು, ಚಿತ್ರಾ

ಹೆಣ್ಣು: ಧಿನ್ ಧಿನ್ ತಾ ಧಿನ್ ಧಿನ್ ತಾ ಧಿನ್ ಧಿನ್ ತಾ
ಗಂಡು: ಧಿನ್ ಧಿನ್ ನಾ           ಹೆಣ್ಣು: ಧಿನ್ ಧಿನ್ ನಾ
ಗಂಡು: ಧಿನ್ ಧಿನ್ ನಾ ಧಿಕ್ ಧಿನ್ ಧಿನ್ ನಾ
ಹೆಣ್ಣು:ಧಿನ್ ಧಿನ್ ನಾ ಧಿಕ್ ಧಿನ್ ಧಿನ್ ನಾ
ಗಂಡು: ಏನಂತು ಏನಂತು ಏನಂತು ಯೌವನ
ಹೆಣ್ಣು: ಧಿನ್ ಧಿನ್ ನಾ ಧಿಕ್ ಧಿನ್ ಧಿನ್ ನಾ
          ಧಿನ್ ಧಿನ್ ನಾಧಿನ್ ಧಿನ್ ನಾ ಧಿಕ್ ಧಿನ್ ಧಿನ್ ನಾ
          ಏನಂತು ಏನಂತು ಏನಂತು ಮೈಮನ
ಗಂಡು: ಧಿನ್ ಧಿನ್ ನಾ ಧಕ್ ಧಿನ್ ಧಿನ್ ನಾ

ಹೆಣ್ಣು: ನಿನ್ನ ಈ ಉಸಿರಿಗೇ ನನ್ನೀ ಉಸಿರೇ ಆಭರಣ
           ನಿನ್ನ ಈ ನಗುವಿಗೆ ನನ್ನೀ ಮುತ್ತೇ ಆಭರಣ
ಗಂಡು: ನಿನ್ನ ಈ ಕಣ್ಣಿಗೆ ಸೃಷ್ಟಿಯೇ ಆಭರಣ
            ಹೆಣ್ಣಿನಾ ಕಣ್ಣಿನಾ ಭಾಷೆಗೆಲ್ಲಿದೆ ವ್ಯಾಕರಣ
ಹೆಣ್ಣು: ಕಾಣೋದೆಂದೇ ಸವಿಯೋದೆಂದೋ
           ಧಿನ್ ಧಿನ್ ನಾ ಸುಖ ಓ..ಓ..ಓ
           ತೀರೋದೆಂದೋ ಪ್ರೀತಿಯಲ್ಲಿ ಇರೋ ಸುಖ..ಓ..ಓ.ಓ
ಗಂಡು: ಧಿನ್ ಧಿನ್ ನಾ  ಧಿನ್ ಧಿನ್ ನಾ
ಹೆಣ್ಣು:ಧಿನ್ ಧಿನ್ ನಾ ಕ್ ಧಿನ್ ಧಿನ್ ನಾ 
ಗಂಡು: ಹೇಗಿತ್ತು ಹೇಗಿತ್ತು.. ಚುಂಬನ
ಹೆಣ್ಣು:ಧಿನ್ ಧಿನ್ ನಾ ಧಕ್ ಧಿನ್ ಧಿನ್ ನಾ

ಗಂಡು: ಬಾಗುವ ಬಳ್ಳಿಗೆ ಮರದಾ ಸಂಗಡ ಕಲ್ಯಾಣ
           ಅರಳಿದಾ ಹೂವಿಗೇ ದುಂಬಿಯಾ ಸಂಗಡ ಕಲ್ಯಾಣ
ಹೆಣ್ಣು: ಪ್ರಾಯದ ಸಿಗ್ಗಿಗೇ ಕಲ್ಯಾಣವೇ ಕಾರಣ
           ಬಾಳಿನ ಸುಗ್ಹಿಗೇ ಪ್ರೀತಿ ತಾನೇ ಹೂರಣ
ಗಂಡು: ಮೆಲ್ಲೋದೆಂದೋ ಮೆಲಕೋದೆಂದೋ
           ಧಿನ್ ಧಿನ್ ನಾ  ಸುಖ ..ಓ..ಓ..ಓ
           ಗುಣುಗೋದೆಂದೋ ಪ್ರೀತಿಯಲ್ಲಿ ಇರೋ ಸುಖ
           ಓ..ಓ.ಓ
ಹೆಣ್ಣು:ಧಿನ್ ಧಿನ್ ನಾ ಧಿನ ಧಿನ್ ಧಿನ್ ನಾ
ಗಂಡು: ಧಿನ್ ಧಿನ್ ನಾ ಧಕ್ ಧಿನ್ ಧಿನ್ ನಾ
ಹೆಣ್ಣು: ಹೇಗಿತ್ತು.. ಹೇಗಿತ್ತು... ಹೇಗಿತ್ತು ಆಲಿಂಗನ
ಗಂಡು :ಧಿನ್ ಧಿನ್ ನಾ ಧಕ್ ಧಿನ್ ಧಿನ್ ನಾ 
------------------------------------------------------------------

ಪ್ರೀತಿಯಲ್ಲಿ ಇರೋ ಸುಖ (೨೦೦೦) - ಏನಾಯ್ತೋ..
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ: ಮನು, ಚೇತನ, ರಮೇಶಚಂದ್ರ


ಎಲ್.. ಓ..ವೀ..ಈ.. ಯಾ..ಹೂ..ಯಾ..ಹೋ...
ಏನಾಯ್ತೋ..ನಿಂಗೇನಾಯ್ತೋ..ಆಗಾಯ್ತೋ..ಲವ್
ಆಗೋಯ್ತೋ.. ಆಗಾಯ್ತೋ..ಲವ್ ಆಗೋಯ್ತೋ..
ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ..
ಅವಳೋಂದು ಬಾಣವಾದ್ಳು ಎದೆಯೋಳಗೆ ಎಣಿಸಿ ಕೊಟ್ಟು
ನನ್ನ ಪ್ರೇಮದಾರಮನೆಗೆ ಫೌಂಡೇಶನ್ ಹಾಕಿಬಿಟ್ಟು...
ಯಾ..ಹೂ..ಯಾ..ಹೋ...ಎಲ್.. ಓ..ವೀ..ಈ.. ಅಂದ್ರೇ ಸುಖ ಸುಖ ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ..
ನಗು ನಗುತಾ ಫೋಜು ಕೋಟ್ಟು ಮನಸನ್ನ ಕಲಕಿ ಬಿಟ್ಳೂ...
ಜಗದಲ್ಲಿ ಇವಳ ಹಾಗೇ ಇನ್ನಿಲ್ಲ ಅನಿಸಿ ಬಿಟ್ಳೂ..
ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ..

ಮೈಂಡಿನಲ್ಲಿ ಬ್ರಹ್ಮಚಾರಿ ಕಾವಲಿದ್ದನು
ಪ್ರೇಮಚಾರಿ ಹಾರ್ಟಿನಲ್ಲಿ ತಪ್ಪಿ ಬಿದ್ದನು
ಬ್ರಹ್ಮಚಾರಿಗೂ.. ಪ್ರೇಮಚಾರಿಗೂ..ಯುದ್ಧವಾಯಿತು
ಏಕ ಪತ್ನಿ ವೃತವೂ ಬಂದು ರಾಜಿ ಮಾಡಿತುಯಾ..ಹೂ..ಯಾ..ಹೋ...ಎಲ್.. ಓ..ವೀ..ಈ.. ಅಂದ್ರೇ ಸುಖ ಸುಖ ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ
ಒಬ್ಬಳೇ ಇವಳು ಇನ್ನೋಬ್ಬಳಿವಳೂ ನನ್ನ ಬಾಳಿಗೇ
ಅವಳು ನನ್ನವಳೇ ಬೇಕು ಅದಕ್ಕಾಗಿ ಬದುಕ ಬೇಕು
ಪ್ರೀತಿಯ ಚಿತ್ರ ಬಿಡಿಸಿ ರವಿವರ್ಮನಾಗಬೇಕು
ಯಾ..ಹೂ..ಯಾ..ಹೋ...ಎಲ್.. ಓ..ವೀ..ಈ.. ಅಂದ್ರೇ ಸುಖ ಸುಖ ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ
ರಾತ್ರಿ ಎಲ್ಲ ನಿದ್ದೆ ಇಲ್ದೇ ಎದ್ದೆ ಇದ್ದೆ ನಾ..
ಕಣ್ಣು ಬಿಟ್ಟು ಕೋಟಿ ಕನಸು ಕಟ್ಟುತ್ತಿದ್ದೇ....ನಾ..
ಕನಸಿನೋಳಗೆಅವಳ ಚಿತ್ರ ಬಿಡುಸುತ್ತಿದೆ..ನಾಉ
ರಂಗಿಗೇ ರೆಕ್ಕೆ ಕುಂಚಕೆ ಕೊಂಬು ನೋಡು ಬಂದಿದೇ...
ಹೆಣ್ಣನು ದೂರೋ ಹೀರೋ ವಯಸೆಲ್ಲ ವ್ಯರ್ಥವಾಯ್ತ
ಹೆಣ್ಣಿರದ ಲೋಕ ಜೀರೋ. ಅನ್ನೋದು ಅರ್ಥವಾಯತು
ಯಾ..ಹೂ..ಯಾ..ಹೋ...ಎಲ್.. ಓ..ವೀ..ಈ.. ಅಂದ್ರೇ ಸುಖ ಸುಖ ಆಗಾಯ್ತೋ..ಲವ್ ಆಗೋಯ್ತೋ... ಹೆಂಗೆಂಗೋ..ಲವ್
ಆಗೋಯ್ತೋ
------------------------------------------------------------------

ಪ್ರೀತಿಯಲ್ಲಿ ಇರೋ ಸುಖ (೨೦೦೦) -  ಪ್ರೀತಿಯಲ್ಲಿ ಇರೋ
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ : ರಾಜೇಶ, ಕೋರಸ್

ಕೋರಸ್: ಸರಿಗಮಪ ...ಸರಿಗಮಪ.. ಪಮಮ
ಗಂಡು: ನಿಸರಿಗಮ.. ಮಗರಿಸ
           ಪ್ರೀತಿಯಲ್ಲಿ ಇರೋ ಸುಖ ತಂದೆ ನೀ ನಲ್ಲೆ
           ವಿರಹದಲೂ ಇರೋ ಸುಖ ಕಂಡೆ ನಾ ನಲ್ಲೆ
           ಓ... ನಲ್ಲೆ‌ ನಾ ಬಲ್ಲೆ ಈ ದೂರ ದೂರ ಅಲ್ಲೇ..
          ಪ್ರೀತಿಯಲ್ಲಿ ಇರೋ ಸುಖ ತಂದೆ ನೀ ನಲ್ಲೆ

ಕೋರಸ್: ಗಾಗಗ ಗಾಗಗ ಗಾಗಗ ನಿಸ ಗಾಗಗ ಗಾಗಗ ಗಾಗಗ               ಸಾಸಸ ಸಾಸಸ ಸಾಸಸ ದನಿ ಸಾಸಸ ಸಾಸಸ‌ ಸಾಸಸ
ಗಂಡು: ಪ್ರೀತಿಯಲ್ಲಿ ಸಂಚಯ ಬಂದು ಕಲಕ ಬೇಕು ಹೃದಯ
           ಬೆಂಕಿಗೆ ಚಿನ್ನವು ಬಿದ್ದರೆ ಚೆಂದ
           ಪುಟಕ್ಕಿಡು ನನ್ನ ಪ್ರೀತಿ ಗೆಳತಿ     
ಕೋರಸ್: ಸರಿಗಮಪ ಮಗರಿಸ
ಗಂಡು: ಗಾಳಿ ತಂದ ಮೋಡವಿದು ಗಾಳಿ ತಾನೇ ಒಯ್ಯೋ
            ಮೋಡವಿದು  ಮೋಡ ಮುಚ್ವಿದ ನೀ ಮೆಚ್ಚಿದ
             ಚಂದಿರನಾ ಒಮ್ಮೆ ನೋಡು ಗೆಳತಿ ಸ್ನೇಹದಲಿ
             ಇರೋ ಸುಖ ತಂದೆ ನೀ ನಲ್ಲೆ
             ಕೋಪದಲ್ಲೂ ಇರೋ ಸುಖ ಕಂಡೆ ನಾ ನಲ್ಲೆ
             ಓ..ನಲ್ಲೆ ನಾ ಬಲ್ಲೆ ಈ ಕೋಪ ಆಲಿಕಲ್ಲೇ...

ಕೋರಸ: ಪಮ ಗಮಾಮಪ ಪಮಗಮಾಗಸಪ ಪಮ ಗಮಾ
               ಪಪ ಸಸ ಸಾಗಾಗಾರೆರಿ ಸರಿಗರಿರೀಗ
                ರಿಗ ಸರಿಗ ರೀಗಸಾ
ಗಂಡು: ಕಾಡುವನು ಮನದಲಿ ಅಯ್ಯೋ ನೀನಿರುವೆ ನೋವಿನಲಿ
           ನಿನ್ನ ಚಿಂತೆಯೆಲ್ಲ ನನ್ನ ಚಿಂತೆಯು ಸಂತೈಸಲೇ.. ಓ..
            ನನ್ನ ಗೆಳತಿ ನಾನು ಇಲ್ಲದೇ ನೀನಿಲ್ಲ
           ಪ್ರೀತಿ ಎಂಬುದೇ ನೋವಿನಲ್ಲಿದೆ ಸತ್ಯವಿದು ನನ್ನ ನಂಬು
           ಗೆಳತಿ ನಗುವಿನಲಿ ಇರೋ ಸುಖ ತಂದೆ ನೀ ನಲ್ಲೇ
           ನೋವಿನಲೂ ಇರೋ ಸುಖ ಕಂಡೇ ನಾನಲ್ಲೇ
           ಓ ನಲ್ಲೇ ನಾ ಬಲ್ಲೆ ಈ ನೋವೇ ಪ್ರೀತಿ ನಲ್ಲೇ...
------------------------------------------------------------------

ಪ್ರೀತಿಯಲ್ಲಿ ಇರೋ ಸುಖ (೨೦೦೦) -  ನೋಡಿವಳಂದನಾ...
ಸಂಗೀತ : ಸಾಹಿತ್ಯ :ಹಂಸಲೇಖ, ಗಾಯನ :ರಾಜೇಶ,ಚಿತ್ರಾ

ಗಂಡು: ನೋಡಿವಳಂದಾನಾ ... ನೋಡಿವಳಂದಾನಾ
           ದುಂಬಿ ತುಂಬಿದ ಹೂವ ಪ್ರಾಯ ಹಬ್ಬಿದ ಜೀವ
           ಇವಳಂದಕೆ ತಂದಾನ
ಹೆಣ್ಣು: ನೋಡಿವನಂದಾನಾ...  ನೋಡಿವನಂದಾನಾ
           ಭಿತ್ತರಗಣ್ಣಿನ ಭೂಪ ತಿರ್ ತಿರುಗಿ ನೋಡೋ ರೂಪಾ
           ಇವನಂದಕೆ ತಂದಾನಾ....ಓ.....

ಗಂಡು: ಮುತ್ತಿನ ರಾಶಿಯ ಪುಟ್ಟ ಗೌಡತಿ 
ಹೆಣ್ಣು: ಬಾವಿ ಕಟ್ಟೆಯ ಪಾರ್ಥ ಸಾರಥಿ 
ಗಂಡು: ಬೀದಿ ತುಂಬ ನಡೆಯೋ ಬಳ್ಳಿಯು
ಹೆಣ್ಣು: ಬಳ್ಳಿಯ ಬೆನ್ನು ಬಿದ್ದ ಬೇಲಿಯೇ 
ಗಂಡು: ಮಾತನಾಡೋ ಮಲ್ಲಿಗೆ ದಿಂಡೆ
ಹೆಣ್ಣು: ಕದ್ದು ನೋಡೋ ಕೋವಿ ಗುಂಡೆ
ಗಂಡು: ಏನು ಭಾಗ್ಯ ನನ್ನಲ್ ಕಂಡೆ
ಹೆಣ್ಣು: ಪ್ರೀತಿ ಕಂಡೆ ಕೈ ಹಿಡಕೊಂಡೆ 
ಗಂಡು: ಓ.. ಕೋಗಿಲೇ ಕೇಳ್ ಈ ಇಂಪನು 
ಹೆಣ್ಣು: ಇಂಪಿನಾ ನುಡಿಗೇ ಕೇಳಿ ನರ್ತಿಸಿತು ತಾನಿ‌ ತಂದಾನಾ
ಗಂಡು: ಆಗ ಬಂದರೆ ನೋಡಿ ಕುಣಿವೆನು ಆಗ ತಂದಾನಾ
 ಹೆಣ್ಣು:. ನೋಡಿವನಂದಾನಾ... ...

ಗಂಡು: ಚಂದದ ಕಣ್ಣು ತಾನಿ ತಂದಾನಾನಾನ 
ಹೆಣ್ಣು: ಕಣ್ಣಿನ ನೋಟ ಇವಳೇ ತಾನಾನಾ
ಗಂಡು: ಚಂದದ ಹೂವೂ ತಂದನಾನನಾ 
ಹೆಣ್ಣು: ತಾನಾನಾ ಮೂಗಿನ ಉಸಿರು ಇವಳೇ ತಾನಾನಾ
ಗಂಡು: ತಂದಾನಾನಾ ಇವಳಾ ಭಾವ
ಹೆಣ್ಣು: ಇವನೇ ತಾನೆ ಇವಳಾ ಜೀವ
ಗಂಡು: ತಂಗಾಳಿಗೂ ನಡುಗೋ ಕೋಮಲೇ
            ಬೆಳ್ಳಿ ಕಿರಣಕೂ ಬೆವರೋ ಚಂಚಲಿ
ಹೆಣ್ಣು: ಯಾವ ಕವಿಗಳ ಮಾತು ಕದ್ದನು ತಾನ ತಂದಾನ
ಗಂಡು: ಯಾವ ಹೂವಲಿ ಭೂಮಿಗಿಳಿದಳು ತಾನಿ ತಂದಾನ
           ನೋಡಿವಳಂದಾನಾ ... ನೋಡಿವಳಂದಾನಾ
           ದುಂಬಿ ತುಂಬಿದ ಹೂವ ಪ್ರಾಯ ಹಬ್ಬಿದ ಜೀವ
           ಇವಳಂದಕೆ ತಂದಾನ
ಹೆಣ್ಣು: ನೋಡಿವನಂದಾನಾ...  ನೋಡಿವನಂದಾನಾ
           ಭಿತ್ತರಗಣ್ಣಿನ ಭೂಪ ತಿರ್ ತಿರುಗಿ ನೋಡೋ ರೂಪಾ
           ಇವನಂದಕೆ ತಂದಾನಾ....ಓ...
------------------------------------------------------------------

No comments:

Post a Comment