ಪೊಲೀಸ್ ಪಾಪಣ್ಣ ಚಲನ ಚಿತ್ರದ ಹಾಡುಗಳು
- ನಿಲ್ಲು ಅಣ್ಣ ನಿಲ್ಲು ನೋಡು ತಮ್ಮ ನೋಡು
- ಪೇಟೆ ಬೀದಿಯ ಪುಟ್ಟ ಸ್ವಾಮಿ
- ಪೊಲೀಸ್ ಟೋಪಿ ಹಾಕ್ಕೊಂಡ್
- ಮೋಡಕೆ ಮೋಡ ಮುದ್ದಿಡಲು
- ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ
ಸಂಗೀತ : ಜೆ.ವಿ.ರಘುವಲು, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ.
ನಿಲ್ಲು ಅಣ್ಣ ನಿಲ್ಲು ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ ಬಳಿಕ ಮುಂದಕ್ಕೇ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೇ ನೀನು ಅಲ್ಲೇ ನಿಲ್ಲಣ್ಣ
ಏನಯ್ಯಾ .. ಕೈಯ್ಯ ನೋಡಿ ಹೋಗೂ ಏನಮ್ಮಾ .. ಎಡದ ಪಕ್ಕ ತಿರುಗು
ಏ .. ಮಿಸ್ಟರ್ ಹಾಕು ನೀನು ಬ್ರೇಕ್ ಓ.. ಮೇಡಂ ಮೆಲ್ಲಗೇ ಹೋಗಬೇಕು
ಅವಸರ ಪಟ್ಟರೇ ಆಯುಸ್ಸಲ್ಲಿ ಅರ್ಧಕ್ಕೇ ಫುಲ್ ಸ್ಟಾಪ್
ನಿಧಾನವೇನೇ ಪ್ರಧಾನ ಎನ್ನು ಮಾತು ಬಲು ಸಾಕು
ಹಿಂದೆ ಮುಂದೆ ನೋಡಿ ಬಳಿಕ ಮುಂದಕ್ಕೇ ನಡೆಯಣ್ಣ
ಮೂರೂ ದಿನದ ನಮ್ಮ ಜೀವನ ಮೂರೂ ಗಂಟೆಯ ನಾಟಕ
ಮೊದಲ ಘಂಟೇ .. ಎಳೆತನ ಎರಡನೇ ಘಂಟೇ .. ಯೌವ್ವನ ಮೂರನೇ ಘಂಟೇ ... ಮುದಿತನ
ಆ ಮೂರೂ ಮುಗಿಸಿದ ದಿನವೇ ತೆರೆ ಕೆಳಗೆ ಬೀಳುವುದು ಬಣ್ಣ ಅಳಿಸೇ ಹೋಗುವುದೂಕಥೆ ಮುಗಿದೇ ಹೋಗುವುದೂ ..
ನಿಲ್ಲು ಅಣ್ಣ ನಿಲ್ಲು ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ ಬಳಿಕ ಮುಂದಕ್ಕೇ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೇ ನೀನು ಅಲ್ಲೇ ನಿಲ್ಲಣ್ಣ
ಶೂಟಿಂಗ್ ಇರಲೀ ಮೀಟಿಂಗ್ ಇರಲೀ ದೊಂಬಿಯಾಗಲೀ ಮುಷ್ಕರವಿರಲೀ
ಅಮ್ಮನ ಜಾತ್ರೆಯೂ ಅಂತಿಮ ಯಾತ್ರೆಯೂ ಸನ್ಮಾನ ಸಭೆಯೂ ಸಂತಾಪ ಸಭೆಯೂ
ಎಲ್ಲೆಲ್ಲೂ ನಮ್ಮ ಸಂಚಾರ ಮಾನವ ಸೇವೆಗೇ ಈ ಅವತಾರ
ನಿಲ್ಲು ಅಣ್ಣ ನಿಲ್ಲು ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ ಬಳಿಕ ಮುಂದಕ್ಕೇ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೇ ನೀನು ಅಲ್ಲೇ ನಿಲ್ಲಣ್ಣ
ಏನಯ್ಯಾ .. ಕೈಯ್ಯ ನೋಡಿ ಹೋಗೂ ಏನಮ್ಮಾ .. ಎಡದ ಪಕ್ಕ ತಿರುಗು
ಏ .. ಮಿಸ್ಟರ್ ಹಾಕು ನೀನು ಬ್ರೇಕ್ ಓ.. ಮೇಡಂ ಮೆಲ್ಲಗೇ ಹೋಗಬೇಕು
ಅವಸರ ಪಟ್ಟರೇ ಆಯುಸ್ಸಲ್ಲಿ ಅರ್ಧಕ್ಕೇ ಫುಲ್ ಸ್ಟಾಪ್
ನಿಧಾನವೇನೇ ಪ್ರಧಾನ ಎನ್ನು ಮಾತು ಬಲು ಸಾಕು
ಹಿಂದೆ ಮುಂದೆ ನೋಡಿ ಬಳಿಕ ಮುಂದಕ್ಕೇ ನಡೆಯಣ್ಣ
--------------------------------------------------------------------------------------------------------------------------
ಪೊಲೀಸ್ ಪಾಪಣ್ಣ (೧೯೮೪) - ಪೇಟೆ ಬೀದಿಯ ಪುಟ್ಟ ಸ್ವಾಮಿ
ಸಂಗೀತ : ಜೆ.ವಿ.ರಘುವಲು, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :
ಪೇಟೆಯ ಬೀದಿಯ ಪುಟ್ಟಸ್ವಾಮಿ ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರೂ
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ ಬಂದ್ರೇನೂ ಕೂತ್ಕೊಂಡ್ರೆನು
ಹಿಂದಿದ್ದಾರೋ ಮುಂದಿದ್ದಾರೋ ಮುಂದಿದ್ದಾರೋ ಹಿಂದಿದ್ದಾರೋ

ಸ್ಪೀಡ್ ಹೊರಟಿದ ಜೋರೂ ನೀನು ಕರೆದರೂ ಒಂದೆಲೇ ಬಿದ್ದರು ಮರಳಿ ಅದನು ಪಡೆಯರೂ
ಮುಂದೆ ಬಂದ್ರೇ ಮುಂದಿನ ಸೀಟು ಹಿಂದೆ ಬಂದ್ರೇ ಹಿಂದಿನ ಸೀಟು
ಬೇಕೇ ಬೇಕು ಅಂದ್ರೆ ಸ್ಪೆಷಲ್ ಸೀಟು ಮೈಯಗೇ ಮುಟ್ಟಕ್ ಬೇಕು ಎಕ್ಸಟ್ರಾ ರೇಟು ಹಾಕಯ್ಯ ಸೀಟು

ಹೇ... ಹೇ... ಹಿಂದೆ ಬಂದವರಾರೂ ನನ್ನ ಮರೆಯರು ಇಂಥ ಬಂದವರೆಲ್ಲ ನಾಳೆ ಹಾಜರು
ಕಣ್ಣ ಕಂಡರೂ ಇಲ್ಲಿ ಬರೋರೆಲ್ಲ ರುಚಿ ಕಂಡರೂ ಬೇರೆ ಹೋಗೋಲ್ಲ
ಹೊಸಬರಿಗೆ ಒಳಗ್ ಪಾಸು ದಿನವೂ ಬಂದ್ರೇ ಬಿಟ್ಟಿ ಪಾಸು ಹಾಕಯ್ಯ ಸೀಟು ..
ಪೇಟೆಯ ಬೀದಿಯ ಪುಟ್ಟಸ್ವಾಮಿ ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರೂ
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ ಬಂದ್ರೇನೂ ಕೂತ್ಕೊಂಡ್ರೆನು
ಹಿಂದಿದ್ದಾರೋ ಮುಂದಿದ್ದಾರೋ ಮುಂದಿದ್ದಾರೋ ಹಿಂದಿದ್ದಾರೋ
ಪೇಟೆಯ ಬೀದಿಯ ಪುಟ್ಟಸ್ವಾಮಿ ಕಚ್ಚೆ ಪಂಚೆಯ ಕೃಷ್ಣಸ್ವಾಮಿ
--------------------------------------------------------------------------------------------------------------------------
ಪೊಲೀಸ್ ಪಾಪಣ್ಣ (೧೯೮೪) - ಪೊಲೀಸ್ ಟೋಪಿ ಹಾಕ್ಕೊಂಡ್
ಸಂಗೀತ : ಜೆ.ವಿ.ರಘುವಲು, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ
ಹೆಣ್ಣು : ಪೊಲೀಸ್ ಟೋಪಿ ಹಾಕ್ಕೊಂಡ್ ಕೈಯಲ್ಲಿ ಲಾಠಿ ಹಿಡ್ಕೊಂಡು ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ ನಿನ್ನ ನಾನು ಮರೆಯಲಾರೆನು
ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ ನಿನ್ನ ನಾನು ಮರೆಯಲಾರೆನು
ಹೆಣ್ಣು : ಓ.. ಕುಂಬಳ ಕಾಯಿಯಂಥ ಪೊಲೀಸ್ ಪಾಪಣ್ಣ ನಿನ್ನ ನಾನು ತೊರೆಯಲಾರೆನು
ಓ.. ಕುಂಬಳ ಕಾಯಿಯಂಥ ಪೊಲೀಸ್ ಪಾಪಣ್ಣ ನಿನ್ನ ನಾನು ತೊರೆಯಲಾರೆನು
ಗಂಡು : ನಂಗ್ ಹಿಂದೂ ಗೊತ್ತಿಲ್ಲ ಮುಂದು ಗೊತ್ತಿಲ್ಲ ನನ್ನ ಬಿಟ್ಟ ಬಿಡು ತಾಯಿ
ನನ್ನ ಪ್ರಾಣ ಹಿಂಡ್ ಬ್ಯಾಡ್... ಏಯ್
ಹೆಣ್ಣು : ಹೂಂ ಅಂತಿದ್ದಾಗ ಬಳಿ ಬಾರೋ ಅನ್ನೋವಾಗ
ಮುತ್ತಂಥ ನಗೆಯನ್ನು ಚೆಲ್ಲಿ ಮೋಜಿನ ಮಳೆ ಕರೆವಾಗ
ಗಂಡು : ನಂಗೆ ಜ್ವರ ಬರ್ತಿದೆ
ಹೆಣ್ಣು : ನೀನು ಗಂಡು ಅಲ್ವೇನು ಕುದ್ರಿಕೊಂಡು ನೀ ಹೋಗಬೇಡ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓ ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ ನಿನ್ನ ನಾನು ಮರೆಯಲಾರೆನು
ಓ.. ಕುಂಬಳ ಕಾಯಿಯಂಥ ಪೊಲೀಸ್ ಪಾಪಣ್ಣ ನಿನ್ನ ನಾನು ತೊರೆಯಲಾರೆನು
ಹೆಣ್ಣು : ಬಾ...
ಗಂಡು : ಬರೋಲ್ಲ ನನ್ ಮುಂದೆ ನೀನಿದ್ದಿಯಾ ನಿನ್ನ ಮುಂದೆ ನಾನಿದ್ದೀನಿ
ಹಿಂದೆ ಮುಂದೆ ನಾವಿಬ್ಬರೇ ಇಬ್ರೇ ಇದ್ದಿವಿ
ಬಿಟ್ಟ ಬಿಡೇ ಬಿಟ್ಟಿದ್ದೇ ಬಣ್ಣದ ಚಿಟ್ಟೆ ಯಾರಾದ್ರೂ ನೋಡಿದರೆ ಅಯ್ಯೋ ನಾ ಕೆಟ್ಟೆ
ಹೆಣ್ಣು : ತಾಳಿ ಕಟ್ಟದೋರು ಇಲ್ಲ ತಾಯಿತಂದೆ ಯಾರು ಇಲ್ಲ
ಹೇಳೋರು ಕೇಳೋರು ಇಲ್ಲ ಅಡ್ಡ ಬಾರೋ ಭೂಪ ಇಲ್ಲ
ಗಂಡು : ಅದಕ್ಕೆ ನಾನೇನೇ ಮಾಡ್ಲಿ
ಹೆಣ್ಣು : ಕೈಗಳು ನಾಕು ಸೇರಿದರೆ ನಮಗ್ಯಾವ ಭಯ ಇಲ್ಲವೋ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ ನಿನ್ನ ನಾನು ಮರೆಯಲಾರೆನು
ಪೊಲೀಸ್ ಟೋಪಿ ಹಾಕ್ಕೊಂಡ್ ಕೈಯಲ್ಲಿ ಲಾಠಿ ಹಿಡ್ಕೊಂಡು ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ ನಿನ್ನ ನಾನು ಮರೆಯಲಾರೆನು
--------------------------------------------------------------------------------------------------------------------------
ಪೊಲೀಸ್ ಟೋಪಿ ಹಾಕ್ಕೊಂಡ್ ಕೈಯಲ್ಲಿ ಲಾಠಿ ಹಿಡ್ಕೊಂಡು ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ ನಿನ್ನ ನಾನು ಮರೆಯಲಾರೆನು
--------------------------------------------------------------------------------------------------------------------------
ಪೊಲೀಸ್ ಪಾಪಣ್ಣ (೧೯೮೪) - ಮೋಡಕೆ ಮೋಡ ಮುದ್ದಿಡಲು
ಸಂಗೀತ : ಜೆ.ವಿ.ರಘುವಲು, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ಎಸ್.ಜಾನಕೀ, ರಾಜಾಸೀತಾರಾಮನ್
ಗಂಡು : ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು ಕಂಪನ ಹೊಮ್ಮಿ ಬಂತು
ಪ್ರೇಮವೂ ತುಂಬಿ ಬಂತು ನಸುಕಲ್ಲಿ ಮಸುಕಲ್ಲಿ ಅತ್ತಿತ್ತ ತಿರುಗೋ ಮುಗಿಲಮ್ಮ ಇಲ್ಲಿ ಬಾರಮ್ಮಾ..
ಹೆಣ್ಣು : ಓಓಓಓ : ... ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು

ಗಂಡು : ಆಕಾಶದಲ್ಲಿ ಮಿಡಿದಿದೆ ವೀಣಾ ಆಸೆಯ ಮಳೆಯ ಮಂಜುಳಾ ತಾನೇ
ಹೆಣ್ಣು : ಆಸೆ ಮೇರೇ ಕಾಣದು ವಯಸು ನಾಚಿಕೆ ನೀಗಿ ನಡೆಯದು ಮನಸು
ಗಂಡು : ಮೆಚ್ಚಿದ ಮನವೇ ಸಾವಿರ ಕನಸು
ಹೆಣ್ಣು : ಹುಚ್ಚಿನ ಮನಸಿಗೆ ಕನಸಲೇ ಸೊಗಸು
ಗಂಡು : ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು ಕಂಪನ ಹೊಮ್ಮಿ ಬಂತು
ಪ್ರೇಮವೂ ತುಂಬಿ ಬಂತು ನಸುಕಲ್ಲಿ ಮಸುಕಲ್ಲಿ ಅತ್ತಿತ್ತ ತಿರುಗೋ ಮುಗಿಲಮ್ಮ ಇಲ್ಲಿ ಬಾರಮ್ಮಾ..
ಹೆಣ್ಣು : ಓಓಓಓ : ... ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು ಕಂಪನ ಹೊಮ್ಮಿ ಬಂತು
ಗಂಡು : ಒಲವಿನ ಕನಸಿನ ರಂಗದು ಒಂದೇ ಬೆರೆತಿಹ ಜೀವವು ಜನ್ಮಕೂ ಒಂದೇ
ಹೆಣ್ಣು : ಬಾನು ಭೂಮಿಯ ಪ್ರೇಮವೂ ನಮ್ದೇ ಅಗ್ಗಳಿಕೆ ಕಾಣದಾ ಬಂಧವು ನಮ್ದೇ
ಗಂಡು : ಕೇಳದೇ ನೀಡಲು ಅದುವೇ ಪ್ರೇಮ
ಹೆಣ್ಣು : ಮದುವೆಯ ಬಳಿಕ ಕೊಡುವುದೇ ನಿಯಮ
ಗಂಡು : ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು ಕಂಪನ ಹೊಮ್ಮಿ ಬಂತು
ಪ್ರೇಮವೂ ತುಂಬಿ ಬಂತು ನಸುಕಲ್ಲಿ ಮಸುಕಲ್ಲಿ ಅತ್ತಿತ್ತ ತಿರುಗೋ ಮುಗಿಲಮ್ಮ ಇಲ್ಲಿ ಬಾರಮ್ಮಾ..
ಹೆಣ್ಣು : ಓಓಓಓ : ... ಮೋಡಕೆ ಮೋಡ ಮುದ್ದಿಡಲು ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು ಕಂಪನ ಹೊಮ್ಮಿ ಬಂತು
--------------------------------------------------------------------------------------------------------------------------
ಸಂಗೀತ : ಜೆ.ವಿ.ರಘುವಲು, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ .
ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ ಸಾಕಾಗಿ ಹೋಯ್ತಮ್ಮಾ ಅಮ್ಮ ಅಮ್ಮ
ಬೀದಿ ಚಿಲಕ ಹಾಕಿ ಹಿಂದೆ ಚಿಲಕ ತೆಗೆದು ಹಿಂದೆ ಚಿಲಕ ಹಾಕಿ ಬೀದಿ ಚಿಲಕ ತೆಗೆದು
ಹಿಂದಾಗಲೀ .. ಹ್ಹಾಂ .. ಮುಂದಾಗಲೀ .. ಯಾರೇ ಬಂದರೂ ಹೇಗೆ ಬಂದರು
ಕೊಟ್ಟು ಕೊಟ್ಟು ತೆಗೆದುಕೊಂಡು ಸಾಕಾಗಿ ಹೋಗಿದೆ

ಹಗಲು ಹೊತ್ತಿನಲ್ಲಿ ದೊಡ್ಡ ಮನುಷ್ಯರೂ ರಾತ್ರಿ ಹೊಸಲು ದಾಟೋ ಕಾಮಣ್ಣರೂ
ನುಂಗೋ ಹಂಗೆ ನೋಡ್ತಾರೆ ಹೆಂಡತಿ ಹಾಗೆ ಪಕ್ಕ ಬಂದು ಸೇರ್ತಾರೆ ಗಂಡನ ಹಾಗೆ
ನಂಗಾಗಿಯೇ ಹುಟ್ಟಿದ್ದಿ ಎಂದು ನೀ ಇಲ್ದೇ ಇದ್ರೇ ಸಾಯ್ತಿವೆಂದು ಮಾತು ಮುದ್ದು ಆಡ್ತಾರೇ
ಹುಚ್ಚ ಹುಚ್ಚಾಗ ಆಡ್ತಾ ಸಾಯೋ ಜನರೂ ಸತ್ತರು ಸಾಯಂಥ ಸೋಮಾರಿ ಸುಬ್ಬರೂ ..
ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ ಸಾಕಾಗಿ ಹೋಯ್ತಮ್ಮಾ ಅಮ್ಮ ಅಮ್ಮ
ಹೆಂಡತಿ ಪಕ್ಕವಿರಲೂ ರಾಮಚಂದ್ರರೂ ಆಕೆ ತವರಿಗೆ ಹೋದರೆ ಬೀದಿ ನಾಯಿಗಳು
ಸೀರೆ ಕಂಡ್ರೆ ಚಪ್ಪರಿಸೋ ಜಾತ್ರೆ ರಸಿಕರು ಅವಕಾಶಕ್ಕಾಗಿ ಕಾಯುವಂಥ ಗುಳ್ಳೆ ನರಿಗಳು
ಕಣ್ಣು ಇದ್ದು ಕುರುಡರು ಬುದ್ದಿ ನುಡಿಗೆ ಕಿವುಡರೂ ಮರವ ತೋರಿ ಹಣ್ಣು ಮಾರೋ ಬುದ್ಧಿವಂತರೂ
ಕಂಡವರ ಆಸ್ತಿ ನುಂಗೋ ಚಂಡಾಲರು
ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ ಸಾಕಾಗಿ ಹೋಯ್ತಮ್ಮಾ ಅಮ್ಮ ಅಮ್ಮ
ಬೀದಿ ಚಿಲಕ ಹಾಕಿ ಹಿಂದೆ ಚಿಲಕ ತೆಗೆದು ಹಿಂದೆ ಚಿಲಕ ಹಾಕಿ ಬೀದಿ ಚಿಲಕ ತೆಗೆದು
ಹಿಂದಾಗಲೀ .. ಹ್ಹಾಂ .. ಮುಂದಾಗಲೀ .. ಯಾರೇ ಬಂದರೂ ಹೇಗೆ ಬಂದರು
ಕೊಟ್ಟು ಕೊಟ್ಟು ತೆಗೆದುಕೊಂಡು ಸಾಕಾಗಿ ಹೋಗಿದೆ
ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ ಸಾಕಾಗಿ ಹೋಯ್ತಮ್ಮಾ ಅಮ್ಮ ಅಮ್ಮ
ಬೀದಿ ಚಿಲಕ ಹಾಕಿ ಹಿಂದೆ ಚಿಲಕ ತೆಗೆದು ಹಿಂದೆ ಚಿಲಕ ಹಾಕಿ ಬೀದಿ ಚಿಲಕ ತೆಗೆದು
ಹಿಂದಾಗಲೀ .. ಹ್ಹಾಂ .. ಮುಂದಾಗಲೀ .. ಯಾರೇ ಬಂದರೂ ಹೇಗೆ ಬಂದರು
ಕೊಟ್ಟು ಕೊಟ್ಟು ತೆಗೆದುಕೊಂಡು ಸಾಕಾಗಿ ಹೋಗಿದೆ
ಒಂದೇ ಎರಡೇ ಮೂರೇ ಅಬ್ಬಾ ಅಬ್ಬಾ ಸಾಕಾಗಿ ಹೋಯ್ತಮ್ಮಾ ಅಮ್ಮ ಅಮ್ಮ
--------------------------------------------------------------------------------------------------------------------------
No comments:
Post a Comment