1105. ಪೋಲಿಸನ್ ಹೆಂಡ್ತಿ (೧೯೯೦)

ಪೋಲಿಸನ್ ಹೆಂಡ್ತಿ ಚಿತ್ರದ ಹಾಡುಗಳು
  1. ಹರಿ ಓಂ ಹರಿ ಓಂ 
  2. ನೀ ಒಂದು ಸಾರಿ ನನ್ನ ಮನ್ನಿಸೂ
  3. ಮೊದಲನೇ ಚುಂಬನ 
  4. ಕಾರ್ತಿಕ ಮಾಸದಲಿ ಹುಣ್ಣಿಮೆ ದೀಪ 
  5. ಅಮ್ಮಮ್ಮ ಮೇಡಮ್ಮಾ 
ಪೋಲಿಸನ್ ಹೆಂಡ್ತಿ (೧೯೯೦) - ಹರಿ ಓಂ ಹರಿ ಓಂ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಮನು

 ಟೂರರರರರರ್ ಹರಿ ಓಂ  ಹರಿ ಓಂ  ಹರಿ ಓಂ  ಹರಿ ಓಂ
ಧರ್ಮವ ಉಳಿಸಲೂ ದೇವರು ಎತ್ತಿದ ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲೂ ಹಣವನು ಗಳಿಸಲೂ ಮಾನವ ಎತ್ತಿದ ಶತಾವತಾರಾ.. ಅಹಹಾ
ಧರ್ಮವ ಉಳಿಸಲೂ ದೇವರು ಎತ್ತಿದ ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲೂ ಹಣವನು ಗಳಿಸಲೂ ಮಾನವ ಎತ್ತಿದ ಶತಾವತಾರಾ..
ಹರಿ ಓಂ ದಶಾವತಾರ... ಹರಿ ಓಂ ಶತಾವತಾರ 

ಅಹ್ಹ ಆಹ್ಹಾಂ .. ಓಟಿಗಾಗಿಯೇ  ನೋಟು ಹಂಚುವಾ ಮಹಾನಾಯಕರ ಭೂಮಿಯಿದೂ 
ಲಂಚ ಎನ್ನುವಾ ಮಂಚ ಹತ್ತುವಾ ಪ್ರಜಾಪಾಲಕರ ನಾಡು ಇದೂ ಅಹ್ಹಹ್ಹಹ್ಹ... ಹೌದೂ ... 
ಓಟಿಗಾಗಿಯೇ  ನೋಟು ಹಂಚುವಾ ಮಹಾನಾಯಕರ ಭೂಮಿಯಿದೂ 
ಲಂಚ ಎನ್ನುವಾ ಮಂಚ ಹತ್ತುವಾ ಪ್ರಜಾಪಾಲಕರ ನಾಡು ಇದೂ 
ತಮ್ಮ ಜನರಿಗೇ ಸೈಟನೂ ಮಾರಿ ರಾಜ್ಯದ ಖಾಜಾನೇ ದೋಚುವರೂ 
ಕಂಡೋರ ಮಾತನು ಕದ್ದು ಕೇಳಲೂ ದೂರವಾಣಿಯಲಿ ಇಣುಕುವರೂ 
ಹರಿ ಓಂ ದಶಾವತಾರ... ಅಹ್ಹಹ್ಹ...  ಹರಿ ಓಂ ಶತಾವತಾರ... ಅಹ್ಹಹ್ಹಹ್ಹ ... ಹೌದೂ 

ಧೀಮ್ ತನಕಧೀನ ತನಕಧಿನ ಧೀಮ್ ತನಕಧೀನ.. ಹ್ಹಾ... 
ಬಡವರಿಗಾಗಿ ಯೋಜನೆ ಮಾಡಿ ಮಧ್ಯದಿ ಸ್ವಾಹ ಮಾಡುವವರೂ... ಹ್ಹಾ..  
ಇಲ್ಲದ ಬಾವಿಗೇ ಸಾಲವ ಕೊಟ್ಟು ಕಮಿಷನ್ ತಾವೂ ಹೊಡೆಯುವರೂ ಹ್ಹ.. ಹ್ಹ. ಹ್ಹಹ್ಹಹ್ಹಾ.. 
ಬಡವರಿಗಾಗಿ ಯೋಜನೆ ಮಾಡಿ ಮಧ್ಯದಿ ಸ್ವಾಹ ಮಾಡುವವರೂ
ಇಲ್ಲದ ಬಾವಿಗೇ ಸಾಲವ ಕೊಟ್ಟು ಕಮಿಷನ್ ತಾವೂ ಹೊಡೆಯುವರೂ
ರಸ್ತೆ ಗಟಾರು ಆಗಲೂ ಕಾಂಟ್ರಾಕ್ಟ್ ಕೊಟ್ಟು ಹಣವ ಗಳಿಸುವರು 
ಹಿಂದಿಯೇ ಬೇರೆ ಮಂದಿಯ ಬಂದು ಹಾಕಿದ ರಸ್ತೆಯ ಅಗಿಯುವರೂ 
ಹರಿ ಓಂ ದಶಾವತಾರ... ಇದೂ .  ಹರಿ ಓಂ ಶತಾವತಾರ... 

ಓ.. ಓ..ಓ..ಓಯ್ ಅಹ್ಹಹ್ಹ ... 
ಡಿಗ್ರೀಗೆ ಮಾರ್ಕಿಗೇ ಬೆಲೆಯೇ ಇಲ್ಲ ಕೆಲಸವೂ ಕೊಡುವವರೂ ಯಾರಿಲ್ಲಾ ... ಅಹ್ಹಹ್ಹ.. ಯಾರಿಲ್ಲಾ.. 
ಉದರನಿಮಿತಂ ಬಹುಕೃತ ವೇಶಂ ಹಾಕಿದರಿಂದು ತಪ್ಪಿಲ್ಲಾ ಜನಕ್ಕಜನಜನ ಜನಕ್ಕಜನಕ್ಕಜನ .. ಹ್ಹಾಂ ... 
ಡಿಗ್ರೀಗೆ ಮಾರ್ಕಿಗೇ ಬೆಲೆಯೇ ಇಲ್ಲ ಕೆಲಸವೂ ಕೊಡುವವರೂ ಯಾರಿಲ್ಲಾ 
ಉದರನಿಮಿತಂ ಬಹುಕೃತ ವೇಶಂ ಹಾಕಿದರಿಂದು ತಪ್ಪಿಲ್ಲಾ 
ಮಾನಕೆ ಅಂಜಿ ಬದುಕೋರಿಗೆ ನಾಳೇ ಎಂಬುದೂ ಬಲು ಕಷ್ಟ... 
ಮಾನ ಒಮ್ಮೆ ಮಾರಿಬಿಟ್ಟರೇ ಆಮೇಲೇ ಎಲ್ಲಾ ನನ್ನಿಷ್ಟ 
ಹರಿ ಓಂ ದಶಾವತಾರ... ಇದೂ .  ಹರಿ ಓಂ ಶತಾವತಾರ... 
ಧರ್ಮವ ಉಳಿಸಲೂ ದೇವರು ಎತ್ತಿದ ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲೂ ಹಣವನು ಗಳಿಸಲೂ ಮಾನವ ಎತ್ತಿದ ಶತಾವತಾರಾ.. ಅಹಹಾ  
ಹರಿ ಓಂ ದಶಾವತಾರ... ಇದೂ .  ಹರಿ ಓಂ ಶತಾವತಾರ... 
ದಶಾವತಾರ... ಇದೂ .  ಶತಾವತಾರ... ದಶಾವತಾರ... ಇದೂ .  ಶತಾವತಾರ... 
ದಶಾವತಾರ... ಇದೂ .  ಶತಾವತಾರ... 
--------------------------------------------------------------------------------------------------------------------------

ಪೋಲಿಸನ್ ಹೆಂಡ್ತಿ (೧೯೯೦) - ನೀ ಒಂದು ಸಾರಿ ನನ್ನ ಮನ್ನಿಸು
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಮನು, ರಾಧಿಕಾ

ಗಂಡು : ನೀ ಒಂದು ಸಾರಿ ನನ್ನ ಮನ್ನಿಸು ಈ ನನ್ನ ಮೇಲೆ ದಯೆ ತೋರಿಸು ಚಿನ್ನ ರನ್ನ ನನ್ನ ಪ್ರೀತಿಸು
           ನೀ ಒಂದು ಸಾರಿ ನನ್ನ ಮನ್ನಿಸು ಈ ನನ್ನ ಮೇಲೆ ದಯೆ ತೋರಿಸು ಚಿನ್ನ ರನ್ನ ನನ್ನ ಪ್ರೀತಿಸು
           ಪ್ರೇಮ ಭಿಕ್ಷೇ ನೀಡು ಬಾರೇ ಇಂಥ ಶಿಕ್ಷೇ ಏಕೇ ನೀರೇ
           ಕನ್ಯಾಕುಮಾರೀ ನೀನೂ ಒಂಟಿ ಕುಮಾರ ನಾನೂ ಜಂಟಿ ಆಗೋಣ ಬಾರೇ
           ನೀ ಒಂದು ಸಾರಿ ನನ್ನ ಮನ್ನಿಸು ಈ ನನ್ನ ಮೇಲೆ ದಯೆ ತೋರಿಸು ಚಿನ್ನ ರನ್ನ ನನ್ನ ಪ್ರೀತಿಸು

ಗಂಡು : ನೀ ಬೈದರೂ ಅಂದರೂ ಕಣ್ಣಲ್ಲೇ ಕೊಂದರೂ ನಾ ನಿನ್ನ ಪೂಜಾರೀ ಓ.. ದೇವಿ  ಕೇಳೆನ್ನ ಬಂಗಾರೀ.. ಹ್ಹಾಂ ..
ಹೆಣ್ಣು : ನಂಗು ನಿಂಗೂ ಯಾವ ನೆಂಟೂ ಹೋಗು ಹೋಗು ಹಿಂದೆ ಹಿಂದೇ ಬರಬೇಡಾ .. (ಆ.. )
           ಸಂತೆಯಲ್ಲಿ (ಓಯ್ ) ಗಂಟು ಬಿದ್ದೇ ಬೀದಿಯಲ್ಲಿ ಹೀಗೆ ನನ್ನ ಕಾಡಬೇಡ
ಗಂಡು : ಈ ಜೀವ ನಿಂದಾಗಿ ಹೋಯಿತಲ್ಲೇ ನೀನಿಲ್ಲದೆ ಈ ಪ್ರಾಣ ನಿಲ್ಲದಲ್ಲೇ ಹ್ಹ.. ಹ್ಹಹ್ಹಾ
            ಆ ಮನವೇ ನನಗೇ ಸ್ಥಳವ ನೀಡೆಯಾ ನೀ ಒಲಿದು ನಲಿದು ಬಳಿಗೆ ಬಾರೆಯಾ..
           ನೀ ಒಂದು ಸಾರಿ ನನ್ನ ಮನ್ನಿಸು ಈ ನನ್ನ ಮೇಲೆ ದಯೆ ತೋರಿಸು ಚಿನ್ನ ರನ್ನ ನನ್ನ ಪ್ರೀತಿಸು

ಗಂಡು : ಅರೇ ಅತ್ತೆಯ ಮಗಳೇ ಮುದ್ದಿನ ಚೆಂಡೇ ಅನ್ನೋಕೆ ದಾರಿ ಮಾಡೇ ಓ.. ದೇವಿ ನನ್ನಪ್ಪಿ ಮುತ್ತು ನೀಡೆ...
ಹೆಣ್ಣು : ಕದ್ದು ಕದ್ದು ಹೊಟ್ಟೆ ಬಂದು ನೀ ಹದ್ದು ಬದ್ದು ಇಲ್ಲದಂತೇ ಆಡಬೇಡವೋ (ಹ್ಹಾ.. )
          ಕೇಳಬೇಡ ಮತ್ತೇ ನನ್ನ ನೀ ತಾಳಿ ಕಟ್ಟಿ ಆದಮೇಲೆ ಬಾಕಿಯಲ್ಲವೋ ..
ಗಂಡು : ಒಂದು ಕೊಟ್ಟು ಹುಚ್ಚನಾಗಿ ಮಾಡಿಬಿಟ್ಟೆಯಾ ಬಂಧಿಯಾಗಿ ಹಾರ್ಟಿನಲ್ಲಿ ಕೂಡಿ ಇಟ್ಟೆಯಾ..
            ಆ..ಹ್ಹಹ್ಹ ಆ..ಹ್ಹಹ್ಹ ಆ..ಹ್ಹಹ್ಹ
ಹೆಣ್ಣು : ಈ ಹೃದಯ ಗೆಳೆಯ ನಿನಗೇ ತಂದಿರಾ... (ಹೊಯ್ ಹೊಯ್ ಹೊಯ್) ಕಡೆವರೆಗೆ ಹೀಗೇ ಇರಲೀ ಬಂಧನಾ...
ಗಂಡು : ನೀ ಒಂದು ಸಾರಿ ನನ್ನ ಮನ್ನಿಸು ಈ ನನ್ನ ಮೇಲೆ ದಯೆ ತೋರಿಸು ಚಿನ್ನ ರನ್ನ ನನ್ನ ಪ್ರೀತಿಸು (ಹ್ಯಾ.. )
           ಪ್ರೇಮ ಭಿಕ್ಷೇ (ಹ್ಹಾ) ನೀಡು ಬಾರೇ (ಹೂಂ ) ಇಂಥ ಶಿಕ್ಷೇ (ಅಹ್ಹಹ್ಹಾ) ಏಕೇ ನೀರೇ (ಅಹ್ಹಹ್ಹಹಹ)
           ಕನ್ಯಾಕುಮಾರೀ ನೀನೂ ಒಂಟಿ ಕುಮಾರ ನಾನೂ ಜಂಟಿ ಆಗೋಣ ಬಾರೇ
--------------------------------------------------------------------------------------------------------------------------

ಪೋಲಿಸನ್ ಹೆಂಡ್ತಿ (೧೯೯೦) - ಮೊದಲನೇ ಚುಂಬನ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಮಂಜುಳಗುರುರಾಜ ಮನು

ಗಂಡು : ಮೊದಲನೇ ಚುಂಬನ ಅನುಭವ ನೂತನ (ಅಹಹಾ)
           ಏನು ಅಂದ ನಿನ್ನ ಯೌವ್ವನ (ಹೂಂ )  ತೋಳಿನ ಬಂಧನಾ (ಆ..ಅಹ್ಹಹ್ಹಹಹ)
           ಓ... ಏನು ಅಂದ ನಿನ್ನ ಯೌವ್ವನ ತೋಳಿನ ಬಂಧನಾ ಓ.. ಚೆನ್ನೇ ನಿನ್ನ ಈ ಕೆನ್ನೇ ಜೇನ ನಾನೊಮ್ಮೆ ತಿಂದೇನಾ
ಹೆಣ್ಣು : ಮೊದಲನೇ ಚುಂಬನ ಅರಿಯದ ಕಂಪನ (ಇಷ್ಟೇ )
           ಏನು ಅಂದ ನಿನ್ನ ಯೌವ್ವನ (ಹೂಂ )  ತೋಳಿನ ಬಂಧನಾ (ಆ..ಅಹ್ಹಹ್ಹಹಹ)
           ಇನ್ನೂ ನಿಂಗೇ ಪ್ರೀತಿ ಔತಣ ಹರೆಯದ ಹೂರಣ (ಅಹ್ಹ ಅಹ್ಹ )
           ಓ.. ಇನ್ನೂ ನಿಂಗೇ ಪ್ರೀತಿ ಔತಣ ಹರೆಯದ ಹೂರಣ ಈ ನನ್ನ ಹೂವ ಮೈಯ್ಯನ್ನ ಅಪ್ಪು ನೀ ಬೇಗ ಈ ದಿನ

ಹೆಣ್ಣು : ನಿನ್ನಾಟ ನಿನ್ನ ಮೈಯೆಲ್ಲಾ  (ಅಹ ಅಹ್ ) ನಿನ್ನಂಥ ತುಂಟ ಯಾರಿಲ್ಲ (ಅಹ್ಹಹ್ಹಹ್ಹ)        
          ನಿನ್ನಾಟ ನಿನ್ನ ಮೈಯೆಲ್ಲಾ  (ಹೇ ) ನಿನ್ನಂಥ ತುಂಟ ಯಾರಿಲ್ಲ
ಗಂಡು : ಹೇ.. ಕಾಮಸೂತ್ರ  ಓದಿ ಬಂದೇ ನಿಂಗಾಗಿ (ಹ್ಹಾ) ಶಕ್ತಿ ಮಾತ್ರೆ ತಿಂದು ಬಂದೇ ನಂಗಾಗಿ (ಅಹ್ಹಹ್ಹಹ್ಹ)
           ಹೇ.. ಕಾಮಸೂತ್ರ  ಓದಿ ಬಂದೇ ನಿಂಗಾಗಿ ಶಕ್ತಿ ಮಾತ್ರೆ ತಿಂದು ಬಂದೇ ನಂಗಾಗಿ
ಹೆಣ್ಣು : ಓ.. ಬಾಳೆಲ್ಲಾ ನಿನ್ನ ತೋಳಲ್ಲಿ ಹೀಗೆ ಹಾಯಾಗಿ (ಹೇ) ನಿಂತೇನಾ
ಗಂಡು : ಓಯ್ ಮೊದಲನೇ ಚುಂಬನ
ಹೆಣ್ಣು : ಅನುಭವ ನೂತನ... ಅಹಹಾ

ಗಂಡು : ಈ ಹಾಲು ಆರಿಹೋಯತ್ತಲ್ಲ್ (ಓಹೋಹೋ) ನಂಗಿನ್ನೂ ದಾಹ ತೀರಿಲ್ಲಾ (ಹೇ..ಅಹ್ಹಹ್ಹಹ)
            ಈ ಹಾಲು ಆರಿಹೋಯತ್ತಲ್ಲ್ (ಹೂಂ ಹೂಂ)  ನಂಗಿನ್ನೂ ದಾಹ ತೀರಿಲ್ಲಾ
ಹೆಣ್ಣು : ಓ.. ಹಾಲು ಜೇನು ಸೇರಿ ತಂದೇ ರಂಗಾಗಿ (ಅಹ್ಹಹ್ಹಾ) ಮಲ್ಲೆ ಹೂವ ಹಾಸಿ ತಂದೆ ನಮಗಾಗಿ (ಹೇಹೇ )
          ಓ.. ಹಾಲು ಜೇನು ಸೇರಿ ತಂದೇ ರಂಗಾಗಿ  ಮಲ್ಲೆ ಹೂವ ಹಾಸಿ ತಂದೆ ನಮಗಾಗಿ
 ಗಂಡು: ಓಯ್.... ನೀ ತಂದಾ ಪ್ರೀತಿ ಕೋಳದಲ್ಲಿ (ಆಆಆ) ಈಜಿ ತೇಲಾಡಿ (ಆಅ )  ಬಂದೆನಾ
ಹೆಣ್ಣು : ಮೊದಲನೇ ಚುಂಬನ ಅರಿಯದ ಕಂಪನ (ಅಹಾಂ) ಇಂದು ನಿಂಗೆ ಪ್ರೀತಿ ಔತಣ
ಗಂಡು : ತೋಳಿನ ಬಂಧನಾ (ಆ..ಅಹ್ಹಹ್ಹ  ಹೇ) ಓ.. ಚೆನ್ನೇ (ಆಹಾ) ನಿನ್ನ ಈ ಕೆನ್ನೇ (ಹೂಂ) ಜೇನ ನಾನೊಮ್ಮೆ ತಿಂದೇನಾ
ಇಬ್ಬರು : ಅಹ್ಹಹ್ಹಹ್ಹಾ ..           
--------------------------------------------------------------------------------------------------------------------------

ಪೋಲಿಸನ್ ಹೆಂಡ್ತಿ (೧೯೯೦) - ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಮಂಜುಳಗುರುರಾಜ

ಹೆಣ್ಣು : ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ           ಕನ್ಯೆಯ ಕಂಗಳಲಿ ಕನಸಿನ ದೀಪ
          ಆಸೆಗಳ  ಜ್ಯೋತಿಯನು ಬೆಳಗುವ ದೀಪಾ..  ಮಾಂಗಲ್ಯದ ಭಾಗ್ಯವನು ಕರುಣಿಸೋ ದೀಪಾ
          ಮನೆಯನು ಬೆಳಗೋ ಮಂಗಳ ದೀಪ         ಹಚ್ಚಿ ಬನ್ನೀ ಲಕ್ಷ ದೀಪವಾ ನೀವಿಂದೂ ..
          ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ         
ಕೋರಸ್ :  ತಂದಾನಿ ತಾನಾ ತಂದನನ ತಂದಾನಿ ತಾನಾ ತಂದನಾ
                 ತಂದಾನಿ ತಾನಾ ತಂದನನ ತಂದಾನಿ ತಾನಾ ತಂದನಾ
                 ಪ್ರತಿ ವರುಷವೂ ಹೊಸ ಹರುಷವೂ ನಮಗೇ ತರುವ ಹಬ್ಬದ ದಿನ
                 ಮುತ್ತಿನ ದೀಪ ಹಚ್ಚಿಡಿರೀ... ಮಂಗಳೆಯರೂ ನೀವೆಲ್ಲಾ..

ಹೆಣ್ಣು : ಒಲವದು ನಗುತಿರೇ ಪ್ರತಿದಿನವದು ಹಬ್ಬವೇ ಜೀವ ಜೀವ ಸೇರೇ ಅನುರಾಗ ರಾಗ ಗೀತೆ
          ನೋವ ನಲಿವ ಒಂದೇ ಬೆಳಗೇ ಪ್ರಣಯದ ಹಣತೇ
          ಅಪಸ್ವರವಾ ಮಿಡಿದರೇ ಪ್ರೇಮಾ  ಆ ಮನೆಯೊಳಗೇ ಶಾಂತಿನಿ ಧಾಮ
          ಸರಸ ಜನನ ವಿರಸ ಮರಣ ಸಮರಸ ಜೀವನ
          ಮನಸು ಮನಸು ಅರಿತ ಸಮಯ ಮನೆಯೇ ಹೂಬನ
ಕೋರಸ್ :  ಬೆಳಗ ಬನ್ನೀರಿ ಲಕ್ಷ ದೀಪವ ಇರುಳು ಕಳೆಯುವಾ ದೀಪೋತ್ಸವ
ಹೆಣ್ಣು : ನಮಗೆಲ್ಲ ಹರುಷ ತರುವ ಉತ್ಸವಾ ಆಆಆ...               
          ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ  ಕನ್ಯೆಯ ಕಂಗಳಲಿ ಕನಸಿನ ದೀಪ

ಹೆಣ್ಣು : ಗೌರಿ ಶಿವರು ವಾಸವಿರದ ಕೈಲಾಸವೇಕೇ ಸತಿ ಪತಿಯು ಮುನಿದರೇ ಮನೆಯೇಕೆ
          ಬಿರುಗಾಳಿ ನಂತರ ಶಾಂತಿ ಕತ್ತಲೆಯಾ ಬಳಿಕವೇ ಕಾಂತಿ
          ನದಿಯು ಆರಿಸಿ ಬರುವುದಮ್ಮಾ ಕಡಲ ಸಂಗಮ ಮಿಲನದಲ್ಲೇ ಮನಕೆಯೆಂದು ನಿಜದ ಸಂಭ್ರಮ
          ಎಂದೋ ಬರುವುದೋ ಸುಖದ ಶುಭದಿನ ಅದಕೇ ಕಾದಿದೇ ನೊಂದ ಈ ಮನ
          ಹೊಸ ಉದಯ ಬರಲೀ ನಗಲಿ ಜೀವನಾ...
ಹೆಣ್ಣು : ಕಾರ್ತೀಕ ಮಾಸದಲಿ ಹುಣ್ಣಿಮೆ ದೀಪ ಕನ್ಯೆಯ ಕಂಗಳಲಿ ಕನಸಿನ ದೀಪ
ಕೋರಸ್ :  ತಂದಾನಿ ತಾನಾ ತಂದನನ ತಂದಾನಿ ತಾನಾ ತಂದನಾ
                 ತಂದಾನಿ ತಾನಾ ತಂದನನ ತಂದಾನಿ ತಾನಾ ತಂದನಾ
--------------------------------------------------------------------------------------------------------------------------

ಪೋಲಿಸನ್ ಹೆಂಡ್ತಿ (೧೯೯೦) - ಅಮ್ಮಮ್ಮಾ ಮೇಡಮ್ಮ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಮನು, ರಾಧಿಕಾ

ಗಂಡು : ಅಮ್ಮಮ್ಮ ಮೇಡಮ್ಮ ಟಿಪ್ಪು ಟಾಪು ನೋಡಮ್ಮಾ ಸ್ಟೈಲಾಗಿ ನೀ ನಿಂತೂ ಹೀಗೆ ಕೊಲ್ಲಬೇಡಮ್ಮಾ
           ಬನ್ನೀ ಬನ್ನೀ ಎನಬೇಕೋ ಸೆಲ್ಯೂಟೂ ಹೊಡೀಬೇಕೋ
           ಬನ್ನೀ ಬನ್ನೀ ಎನಬೇಕೋ ಸೆಲ್ಯೂಟೂ ಹೊಡೀಬೇಕೋ ಗಂಡ ಹೆಂಡಿರಲ್ಲಿ ಅರ್ಥ ಹೀನ ಬಿಂಕ ಬೇಕೇ
ಹೆಣ್ಣು : ಅಪ್ಪಪ್ಪಾ ಪತಿರಾಯ ಅಪ್ ಟೂ ಡೇಟ್ ನೋಡಯ್ಯಾ ಈ ಶೋಕು ಈ ಜೋಕು ನನ್ನ ಹತ್ರ ಯಾಕಯ್ಯಾ
           ಏನೂ ಠೀವಿ ಅಮ್ಮಯ್ಯ ಎಂಥಾ ಫೋಜು ನೋಡಯ್ಯಾ
           ಏನೂ ಠೀವಿ ಅಮ್ಮಯ್ಯ ಎಂಥಾ ಫೋಜು ನೋಡಯ್ಯಾ ನನ್ನ ಮುಂದೆ ನಿನ್ನ ಟೊಳ್ಳು ಪೊಳ್ಳು ಜಂಭವೇಕೇ
ಗಂಡು : ಅಮ್ಮಮ್ಮ ಮೇಡಮ್ಮ ಟಿಪ್ಪು ಟಾಪು ನೋಡಮ್ಮಾ
ಹೆಣ್ಣು : ಅಪ್ಪಪ್ಪಾ ಪತಿರಾಯ ಅಪ್ ಟೂ ಡೇಟ್ ನೋಡಯ್ಯಾ

ಗಂಡು : ಹೆಂಡ್ತಿ ನಿನ್ನ ನೋಡೇ ಆಸೆಯಾಯ್ತು ಈದಿನ ಅಡ್ಡ ಎಲ್ಲ ದಾಟಿ ಗೋಡೆ ಹತ್ತಿ ಬಂದೇನಾ 
           ಬಾಗಿಲ ಚಿಲಕವ ಹಾಕಿರುವೇ ನಿನ್ನಯ ಸನಿಹಕೇ ಬಂದಿರುವೇ 
           ಹಿಂದಿನ ದಿನಗಳ ಬಾಕಿಯನೂ ಇಂದಿಗೇ ತಿರಿಸೇ ಕಾದಿರುವೇ 
ಹೆಣ್ಣು : ಏಕೆ ಸುಮ್ಮನೇ ಹಿಮ್ಮನೇ ನಮ್ಮನೇ ಗೋಡೆ ಹತ್ತುತಾ ಬಂದಿರುವೇ 
          ರಾತ್ರಿ ಹೊತ್ತಲ್ಲಿ ಢಾಕೂ ರೀತಿಲಿ ಹೆಣ್ಣಾ ಈ ತರಹ ಕಾಡಿರುವೇ 
ಗಂಡು : ಏನೀ...  ಪ್ರೀತೀ... ಭೀತಿ...    ಅಮ್ಮಮ್ಮ ಮೇಡಮ್ಮ ಟಿಪ್ಪು ಟಾಪು ನೋಡಮ್ಮಾ 
ಹೆಣ್ಣು : ಅಪ್ಪಪ್ಪಾ ಪತಿರಾಯ ಅಪ್ ಟೂ ಡೇಟ್ ನೋಡಯ್ಯಾ

ಗಂಡು : ಅರ್ಜಿ ತಂದೆ ನಾನು ನನ್ನ ಅಪ್ಪು ಎನ್ನುತಾ ನೋಡಿ ಒಮ್ಮೆ ನೀನೂ ಮಂಜೂರು ಮಾಡುವಾ 
            ಒಡಲಲಿ ಕುದಿದಿದೆ ವಿರಾಹಾಗ್ನಿ ತಾಳೇ ನಾನು ಈ ಭುಗಿಲು 
            ಎದೆಯಲಿ ಹರಿಕಥೆ ಮಾಡುತಿದೆ ನೂರು ರೀತಿಯ ಆಸೆಗಳೂ 
ಹೆಣ್ಣು : ಸೋತ ಮೂತಿ ಹೇಳಿದ ಕಥೆಯ ನಿಲ್ಲಿಸೋ ನಿನ್ನಯ ರಾಗವನೂ (ಹೊಯ್) 
          ಅರ್ಜಿಯೇತಕೆ ಮಂಜೂರಿಯೇತಕೆ ನಿನ್ನವಳಲ್ಲವೇ ನಾನಿನ್ನೂ 
ಗಂಡು : ಆಹಾ.. ಪ್ರೇಮಿ.. ಭಾಗ್ಯ.. 
ಗಂಡು : ಅಮ್ಮಮ್ಮ ಮೇಡಮ್ಮ ಟಿಪ್ಪು ಟಾಪು ನೋಡಮ್ಮಾ
ಹೆಣ್ಣು : ಅಪ್ಪಪ್ಪಾ ಪತಿರಾಯ (ಹೊಯ್) ಅಪ್ ಟೂ ಡೇಟ್ ನೋಡಯ್ಯಾ
           ಏನೂ ಠೀವಿ ಅಮ್ಮಯ್ಯ ಎಂಥಾ ಫೋಜು ನೋಡಯ್ಯಾ
           ಏನೂ ಠೀವಿ ಅಮ್ಮಯ್ಯ ಎಂಥಾ ಫೋಜು ನೋಡಯ್ಯಾ ನನ್ನ ಮುಂದೆ ನಿನ್ನ ಟೊಳ್ಳು ಪೊಳ್ಳು ಜಂಭವೇಕೇ
ಗಂಡು : ಅಮ್ಮಮ್ಮ ಮೇಡಮ್ಮ ಟಿಪ್ಪು ಟಾಪು ನೋಡಮ್ಮಾ
ಹೆಣ್ಣು : ಅಪ್ಪಪ್ಪಾ ಪತಿರಾಯ ಅಪ್ ಟೂ ಡೇಟ್ ನೋಡಯ್ಯಾ
ಗಂಡು : ಅರೇ .. ಸ್ಟೈಲಾಗಿ ನೀ ನಿಂತೂ ಹೀಗೆ ಕೊಲ್ಲಬೇಡಮ್ಮಾ   
ಇಬ್ಬರು : ಪಪ್ಪಪ್ಪಪ್ಪರರ ತಾರಾರರ  ಪಪ್ಪಪ್ಪಪ್ಪರರ ತಾರಾರರ  ಪಪ್ಪಪ್ಪಪ್ಪರರ ತಾರಾರರ                                
--------------------------------------------------------------------------------------------------------------------------

No comments:

Post a Comment