ಪ್ರೇಮ ಗಂಗೇ ಚಲನಚಿತ್ರದ ಹಾಡುಗಳು
- ನಿಂತಲ್ಲೂ ಕುಂತಲ್ಲೂ ಕನಸಲ್ಲೂ ಮನಸಲ್ಲೂ ಎಲ್ಲೆಲ್ಲೂ ನೀನೇನೆ
- ಮದುಮಗಳು ನೀನಾದರೆ ಮದುಮಗನು ನಾನಾಗುವೇ
- ನನ್ನ ಪ್ರೀತಿ ಬರೆದಾ ಕಥೆಯ
- ನೋಡಿ ತಟ್ಟು ತಾಳ ಕೂಡಿ ಬಂತು ಕಾಲ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ
ನಿಂತಲ್ಲೂ ಕುಂತಲ್ಲೂ ಕನಸಲ್ಲೂ ಮನಸಲ್ಲೂ ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ ಹೂವಲ್ಲೂ ಹಣ್ಣಲ್ಲೂ ಎಲ್ಲೆಲ್ಲೂ ನೀನೇನೆ
ಮೂರಹೊತ್ತು ನಿನ್ನದೇನೆ ಧ್ಯಾನ ನಿನ್ನ ಮೇಲೆ ನನ್ನ ಜ್ಞಾನ
ಮದ್ವೆ ಇಲ್ಲದೆ ನಿದ್ರೆ ಇಲ್ದೇ ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೇನೇ .. ಓ.. ನೀ ಇಲ್ದೇ ಇರಲಾರನೇ ..
ನನ್ನ ಕಂಡರೆ ಏಕೆ ನೀ ನಾಚುವೆ ನನ್ನೇ ನುಂಗುವ ಹಾಗೆ ನೋಡುವೆ ಹೇಳೇ ಚಂದ್ರಚಕೋರಿ
ನೀ ನನ್ನ ಕೂಡಿಕೊ ನನ್ನವನ ಮಾಡಿಕೋ ಒಪ್ಪಿಕೋ ಅಪ್ಪಿಕೋ ಮೆಚ್ಚಿಕೋ ನೆಚ್ಚಿಕೋ
ಓ ನನ್ನ ರೂಪಸಿ ನೀ ನನ್ನ ಪ್ರೇಯಸಿ ಇಂಥ ಸಮಯ ಸಿಗದು ಪ್ರೀತಿಮಾಡು ಏನು ಅಂಜಿಕೆ
ಪಕ್ಕ ನಿಲ್ಲಲ್ಲು ಏಕೆ ನಾಚಿಕೆ ಹೇಳೇ ಕೋಮಲಾಂಗಿಯೇ
ಕಾಮಕ್ಕೆ ಕಣ್ಣಿಲ್ಲ ಪ್ರೇಮಕ್ಕೆ ಸಾವಿಲ್ಲ ನೀ ನನ್ನ ರಾಧೆಯೇ ನಾ ನಿನ್ನ ಕೃಷ್ಣನೇ
ವಿರಸ ಮರೆತು ಸರಸ ಕಲಿಯೇ ನನ್ನ ಸಂಗ ಸೇರೆ ಪ್ರೇಮಗಂಗೆ ಬಾ
ನಿಂತಲ್ಲೂ ಕುಂತಲ್ಲೂ ಕನಸಲ್ಲೂ ಮನಸಲ್ಲೂ ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ ಹೂವಲ್ಲೂ ಹಣ್ಣಲ್ಲೂ ಎಲ್ಲೆಲ್ಲೂ ನೀನೇನೆ
ಮೂರಹೊತ್ತು ನಿನ್ನದೇನೆ ಧ್ಯಾನ ನಿನ್ನ ಮೇಲೆ ನನ್ನ ಜ್ಞಾನ
ಮದ್ವೆ ಇಲ್ಲದೆ ನಿದ್ರೆ ಇಲ್ದೇ ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೇನೇ .. ಓ.. ನೀ ಇಲ್ದೇ ಇರಲಾರನೇ ..
ನಿನ್ನ ಹಾದಿಗೆ ಹೂವ ಹಾಸಲೇ ಹೇಳೇ ಸ್ವಪ್ನ ಸುಂದರೀ
ಪಲ್ಲಕ್ಕಿ ನಾನಾಗಿ ನಿನ್ನನ್ನೂ ನಾ ಹೊರುವೆ ಬೆಳ್ಳಕ್ಕಿ ನಾನಾಗಿ ಜೊತೆಯಲಿ ಹಾರಲೇ
ನಿನ್ನ ಬಾಳಲಿ ಕೂಡಲೇ ಸ್ವರ್ಗ ಸುಖವ ನೀಡಲೇ
ದೇವರೆದುರಲಿ ನಿಂತು ನುಡಿಯಲೇ ಹೇಳೇ ಪ್ರೀತಿ ಸಂಗಾತಿ
ಹೂ ಮಂಚ ನಾ ತರಲೆ ನಿನ್ನನ್ನೂ ಪೂಜಿಸಲೇ ನನ್ನೆಲ್ಲ ಆಸೆಗಳ ನಿನ್ನಲ್ಲಿ ರೂಪಿಸಲೇ
ನಿನ್ನಾಸೆ ಏನೆಂದು ನಿನಗೇನೂ ಬೇಕೆಂದು ಹೇಳೇ ಹೇಳೇ ಪ್ರೇಮಗಂಗೆ ಹ್ಹಾಂ ..
ನಿಂತಲ್ಲೂ ಕುಂತಲ್ಲೂ ಕನಸಲ್ಲೂ ಮನಸಲ್ಲೂ ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ ಹೂವಲ್ಲೂ ಹಣ್ಣಲ್ಲೂ ಎಲ್ಲೆಲ್ಲೂ ನೀನೇನೆ
ಮೂರಹೊತ್ತು ನಿನ್ನದೇನೆ ಧ್ಯಾನ ನಿನ್ನ ಮೇಲೆ ನನ್ನ ಜ್ಞಾನ
ಮದ್ವೆ ಇಲ್ಲದೆ ನಿದ್ರೆ ಇಲ್ದೇ ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೇನೇ .. ಓ.. ನೀ ಇಲ್ದೇ ಇರಲಾರನೇ ..
-------------------------------------------------------------------------------------------------------------------------
ಪ್ರೇಮ ಗಂಗೆ (೧೯೮೬) - ಮದುಮಗಳು ನೀನಾದರೆ ಮದುಮಗನು ನಾನಾಗುವೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ, ಎಸ್ ಜಾನಕೀ
ಗಂಡು : ಮದುಮಗಳು ನೀನಾದರೇ ಮದುಮಗನು ನಾನಾಗುವೇ
ಒಲವೆಂಬ ಹೂ ಹಾದಿಗೆ ನಾ ಸಿರಿ ಮುತ್ತು ಮಳೆ ಸುರಿಸುವೇ
ಹೆಣ್ಣು : ಪ್ರೀತಿ ಎಂಬ ಜ್ಯೋತಿಯಾಗಿ ಮನೆಯಾ ಬೆಳಗುವೇ ಬದುಕೆಲ್ಲ ಸುಖ ನೀಡುವೆ
ಮಧುಮಗನೂ ನೀನಾದರೇ ಮಧುಮಗಳೂ ನಾನಾಗುವೇ
ಒಲವೆಂಬ ಹೂ ಹಾದಿಗೆ ಸಿರಿ ಮುತ್ತ ಮಳೆ ಸುರಿಸುವೇ
ಗಂಡು : ಮೆಚ್ಚಿದ ಮಡದಿಯ ಇಚ್ಛೆಯ ಅರಿಯುವೆ ನಗುತ ನೀ ಬಂದಾಗ ಬಯಕೆಯ ತಂದಾಗ
ಹೆಣ್ಣು : ಕ್ಷಣವೂ ಬಿಡದಂತೆ ಇರುವೆನು ನೆರಳಂತೆ ಪತಿಯ ಸುಖ ಸೇವೆಗೆ
ಗಂಡು : ಮೆತ್ತನೆ ಮಡಿಲಲಿ ಬೆಚ್ಚಗೆ ಮಲಗುವೆ ಪತಿಯು ನಾ ಆದಾಗ ಬಳಿಗೆ ನೀ ಕರೆದಾಗ
ಹೆಣ್ಣು : ಅಂಬಲಿ ಕುಡಿದರು ಅಮೃತ ಸವಿದಂತೆ ಒಲವು ಎದೆ ತುಂಬಿದೇ
ಇಬ್ಬರು : ಸಿರಿತನದಿ ಬಡತನದಿ ಪ್ರೀತಿ ಒಂದೇ ನಮ್ಮಾ ಆಸ್ತಿ
ಗಂಡು : ಮಳೆಯಾಗಿ ನಾ ಬಂದರೆ ಹೆಣ್ಣು : ಇಳೆಯಾಗಿ ನಾ ಹೀರುವೆ
ಗಂಡು : ಕಡಲಾಗಿ ನಾ ನಿಂದರೆ ಹೆಣ್ಣು : ಓ.. ನದಿಯಾಗಿ ನಾ ಸೇರುವೆ
ಹೆಣ್ಣು : ಮೆಚ್ಚಿದ ಗಂಡಿನ ತೋಳಿನ ಬಂಧನ ಗೆಳೆಯ ಈ ಬಾಳಲಿ ತಂದಿತೋ ಆನಂದ
ಗಂಡು : ನಿನ್ನಾ ಕೊರಳಿನ ತಾಳಿ ಆಗುತ ಎಂದೆಂದೂ ಮೆರೆವಾಸೆಯೂ
ಹೆಣ್ಣು : ಬಿಟ್ಟರೆ ನನ್ನನ್ನು ತಾಳೆನು ನೋವನು ಇನಿಯಾ ನೀ ಇಲ್ಲದ ಬಾಳೆಲ್ಲ ಬಳಲಾಟ ಬಳಲಾಟ
ಗಂಡು : ನನ್ನಾ ಉಸಿರಲಿ ನೀನೇ ತುಂಬಿರಲು ಅಗಲಿ ಇರಲಾರೆ
ಇಬ್ಬರು : ಸಿರಿತನದಿ ಬಡತನದಿ ಪ್ರೀತಿ ಒಂದೇ ನಮ್ಮಾ ಆಸ್ತಿ
ಹೆಣ್ಣು : ಹೂವಾಗಿ ನಾ ಬಂದರೇ ಗಂಡು : ಕಂಪಾಗಿ ನಾ ಸೇರುವೆ
ಗಂಡು : ಜೇನಾಗಿ ನಾ ಬಂದರೆ ಹೆಣ್ಣು : ಓ.. ಸಿಹಿಯಾಗಿ ನಾ ಸೇರುವೆ
ಗಂಡು : ಪ್ರೀತಿ ಎಂಬ ಜ್ಯೋತಿಯಾಗಿ ಮನೆಯಾ ಬೆಳಗುವೆ ಬದುಕೆಲ್ಲ ಸುಖ ನೀಡುವೆ
ಹೆಣ್ಣು : ಮಧುಮಗನೂ ನೀನಾದರೇ ಮಧುಮಗಳೂ ನಾನಾಗುವೇ
ಒಲವೆಂಬ ಹೂ ಹಾದಿಗೆ ಸಿರಿ ಮುತ್ತ ಮಳೆ ಸುರಿಸುವೇ
ಗಂಡು : ಮದುಮಗಳು ನೀನಾದರೇ ಮದುಮಗನು ನಾನಾಗುವೇ
ಒಲವೆಂಬ ಹೂ ಹಾದಿಗೆ ನಾ ಸಿರಿ ಮುತ್ತು ಮಳೆ ಸುರಿಸುವೇ
ಹೆಣ್ಣು : ಪ್ರೀತಿ ಎಂಬ ಜ್ಯೋತಿಯಾಗಿ ಮನೆಯಾ ಬೆಳಗುವೇ ಬದುಕೆಲ್ಲ ಸುಖ ನೀಡುವೆ
-------------------------------------------------------------------------------------------------------------------------
ಪ್ರೇಮ ಗಂಗೆ (೧೯೮೬) - ನನ್ನ ಪ್ರೀತಿ ಬರೆದಾ ಕಥೆಯ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಎಸ್ ಜಾನಕೀ
ಗಂಡು : ನನ್ನ ಪ್ರೀತಿ ಬರೆದಾ ಕಥೆಯ ಸೂರ್ಯ ದೇವಾ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ ಬೆಂಕಿ ಬೇಗೆ ಬಾಳೆಲ್ಲ
ಹೆಣ್ಣು : ಹಣದ ಆಸೆ ತುಂಬಿ ಹೋಗಿ ಹೆತ್ತ ತಂದೆ ಕಟುಕನಾಗಿ
ಬೇರೆ ಮದುವೆ ಸಂಚನು ಹೂಡಿ ಮಾಡುತಿರುವ ವಂಚನೆ ಮಾಡಿ
ಗಂಡು : ಸೋತು ಸೊರಗಿ ಸುಸ್ತಾದಾಗ ನಿನ್ನ ರೂಪು ಎದುರು ಬಂದು
ಮೈ ತುಂಬ ಹರುಷ ತಂದು ಹಗಲು ಇರುಳು ದುಡಿದು ದುಡಿದು
ಸೇರೋ ಘಳಿಗೆ ನೆನೆದು ನೆನೆದು ಕಾಣುತಿರುವೆ ಹೊಂಗನಸು
ನನ್ನ ಪ್ರೀತಿ ಬರೆದಾ ಕಥೆಯ ಸೂರ್ಯ ದೇವಾ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ ಬೆಂಕಿ ಬೇಗೆ ಬಾಳೆಲ್ಲ
ಗಂಡು : ಚಿನ್ನ ಬೆಳ್ಳಿ ಹೊತ್ತು ತರುವೆ ನಿನ್ನ ಮಾಡುವೆ ನಾನಾಗುವೇ
ಮೆರೆಸಿ ನಿನ್ನಾ ಎಲ್ಲಾ ಚಿಂತೆ ನೋಡಿ ಕೊಳ್ಳುವೇ ರಾಣಿಯಂತೆ
ಹೆಣ್ಣು : ನಾವು ನಲಿದ ತಾಣವೆಲ್ಲ ನೆನಪುಗಳ ಮುಳ್ಳಾಗಿ
ಮೈಯ್ಯಿ ಮನಸ ಚುಚ್ಚಿ ಚುಚ್ಚಿ ಹೃದಯ ಸಾಕು ಸಾಕಾಯ್ತು
ನಿನ್ನ ಬಯಸಿ ನೊಂದು ನೊಂದು ಬದುಕು ಕಣ್ಣಿರಾಯ್ತು
ನನ್ನ ಹೃದಯ ಹಾಡೋ ವ್ಯಥೆಯ ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ ಬೆಂಕಿ ಬೇಗೆ ಬಾಳೆಲ್ಲ
--------------------------------------------------------------------------------------------------------------------------
ಪ್ರೇಮ ಗಂಗೆ (೧೯೮೬) - ನೋಡಿ ತಟ್ಟು ತಾಳ ಕೂಡಿ ಬಂತು ಕಾಲ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್ ಜಾನಕೀ
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
ನಿನ್ನೊಡನೆ ವಸ್ತ್ರ ಕಂಡೆ ನಿನ್ನಲ್ಲೇ ಮೋಹಗೊಂಡೆ
ಮುತ್ತಿನ ಗಂಡೇ ಮತ್ತಿನ ಗಂಡೇ ನೀನೇ ನನ್ನ ಚಂದಿರ
ಶೃಂಗಾರ ತೇರನೇರಿ ಒಂದಾಗೋ ತಾಣ ಸೇರಿ
ಸಜ್ಜೆಯ ಗಂಟು ಹಿಚ್ಚುತ ನಂಟು ಬೆಳೆಸೋಣ ಬಾ ಸುಂದರ
ನನ್ನಾಸೆಯ ಪೂರೈಸೆಯಾ ರಾತ್ರಿ ಬಂದೈತೋ
ಈ ಅಂದ ಶ್ರೀಗಂಧ ಮೈಸೋಕೆ ಆನಂದ ನಲ್ಲ
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
ಕರುಣೆಯೇ ಬಾರದೇನು ಕರಿವರದ ಸ್ವಾಮಿ ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ನಿನ್ನಂಥ ಗಂಡಿಲ್ಲ ನನ್ನಂಥ ಹೆಣ್ಣಿಲ್ಲ ನಮ್ಮಂತೆ ಸರಿಜೋಡಿ ಎಲ್ಲೂ ಇಲ್ಲ
ಉಲ್ಲಾಸ ಸಂತೋಷ ನಿನ್ನಿಂದ ನಾ ಕಂಡೆ ನಾಥ
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
--------------------------------------------------------------------------------------------------------------------------
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
ನಿನ್ನೊಡನೆ ವಸ್ತ್ರ ಕಂಡೆ ನಿನ್ನಲ್ಲೇ ಮೋಹಗೊಂಡೆ
ಮುತ್ತಿನ ಗಂಡೇ ಮತ್ತಿನ ಗಂಡೇ ನೀನೇ ನನ್ನ ಚಂದಿರ
ಶೃಂಗಾರ ತೇರನೇರಿ ಒಂದಾಗೋ ತಾಣ ಸೇರಿ
ಸಜ್ಜೆಯ ಗಂಟು ಹಿಚ್ಚುತ ನಂಟು ಬೆಳೆಸೋಣ ಬಾ ಸುಂದರ
ನನ್ನಾಸೆಯ ಪೂರೈಸೆಯಾ ರಾತ್ರಿ ಬಂದೈತೋ
ಈ ಅಂದ ಶ್ರೀಗಂಧ ಮೈಸೋಕೆ ಆನಂದ ನಲ್ಲ
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
ಕರುಣೆಯೇ ಬಾರದೇನು ಕರಿವರದ ಸ್ವಾಮಿ ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ನಿನ್ನಂಥ ಗಂಡಿಲ್ಲ ನನ್ನಂಥ ಹೆಣ್ಣಿಲ್ಲ ನಮ್ಮಂತೆ ಸರಿಜೋಡಿ ಎಲ್ಲೂ ಇಲ್ಲ
ಉಲ್ಲಾಸ ಸಂತೋಷ ನಿನ್ನಿಂದ ನಾ ಕಂಡೆ ನಾಥ
ನೋಡಿ ತಟ್ಟು ತಾಳ ಕೂಡಿ ಬಂತು ಕಾಲ ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ ಕಲಿಯುಗ ಕಾಮಣ್ಣ
--------------------------------------------------------------------------------------------------------------------------
No comments:
Post a Comment