1221. ಪ್ರೇಮ ಜ್ವಾಲಾ (೧೯೮೦)

ಪ್ರೇಮ ಜ್ವಾಲಾ ಚಲನಚಿತ್ರದ ಹಾಡುಗಳು 
  1. ಓ ನಾಡ ಯುವಜನ ಶಕ್ತಿಗಳೇ 
  2. ಓ ವಸಂತ ನೀ ಬರುವೇ 
  3. ಹೃದಯವಿದೆ ಸನ್ಯಾಸಿ 
ಪ್ರೇಮ ಜ್ವಾಲಾ (೧೯೮೦) -  ಓ ನಾಡ ಯುವಜನ ಶಕ್ತಿಗಳೇ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗೀತಪ್ರಿಯ, ಗಾಯನ : ಪಿ.ಬಿ.ಶ್ರೀನಿವಾಸ 

ಗಂಡು : ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ
           ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ
           ಭಾರತ ದೇಶದ ಕೀರ್ತಿಗಳೇ ನವ ಭಾರತದ ವಿದ್ಯಾರ್ಥಿಗಳೇ
           ನವಯುಗದ ನಿರ್ಮಾತುಗಳೇ ..
ಎಲ್ಲರು : ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ
            ಭಾರತ ದೇಶದ ಕೀರ್ತಿಗಳೇ ನವ ಭಾರತದ ವಿದ್ಯಾರ್ಥಿಗಳೇ
           ನವಯುಗದ ನಿರ್ಮಾತುಗಳೇ .. 
           ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ 

ಗಂಡು : ಹಿಂದು ಮುಸ್ಲಿಂ ಕ್ರೈಸ್ತರೂ ಇಲ್ಲಿ ಒಂದೇ ಭಾರತ ಕುಲವೆನ್ನಿ..  
ಎಲ್ಲರು : ಹಿಂದು ಮುಸ್ಲಿಂ ಕ್ರೈಸ್ತರೂ ಇಲ್ಲಿ ಒಂದೇ ಭಾರತ ಕುಲವೆನ್ನಿ..
ಗಂಡು : ರಾಷ್ಟ್ರ ಭಕ್ತಿಯ ಬುನಾಧಿಯನ್ನೂ  ಬಧ್ರಗೊಳಿಸಲೂ ಕೈ ತನ್ನೀ ..
            ಒಂದೇ ಮಾತೇಯ ಮಕ್ಕಳೂ ನಾವು ಒಂದೇ ಪಂಗಡ ಒಂದೇ ಜಾತಿ
ಎಲ್ಲರು : ಒಂದೇ ಮಾತೇಯ ಮಕ್ಕಳೂ ನಾವು ಒಂದೇ ಪಂಗಡ ಒಂದೇ ಜಾತಿ
ಗಂಡು : ಒಂದೇ ಕಂಠದಿ ನುಡಿಯುವ ನಾವೂ ವಿಶ್ವಪ್ರೇಮವೇ ನಮ್ಮಯ ನೀತಿ
ಎಲ್ಲರು : ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ
            ಭಾರತ ದೇಶದ ಕೀರ್ತಿಗಳೇ ನವ ಭಾರತದ ವಿದ್ಯಾರ್ಥಿಗಳೇ
           ನವಯುಗದ ನಿರ್ಮಾತುಗಳೇ .. 
           ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ 

ಗಂಡು : ಸಮಾಜವಾದದ ಧ್ಯೇಯಗಳನ್ನೂ ಉಳಿಸುವ ಶಕ್ತಿಯ ಗಳಿಸೋಣ 
            ಸಮಾಜವಾದದ ಧ್ಯೇಯಗಳನ್ನೂ ಉಳಿಸುವ ಶಕ್ತಿಯ ಗಳಿಸೋಣ  (ಗಳಿಸೋಣ) 
            ಪ್ರಜಾಪ್ರಭುತ್ವದ ತತ್ವಗಳನ್ನೂ ಶಿಸ್ತಿನಿಂದಲೀ ಉಳಿಸೋಣ 
            ಪ್ರಜಾಪ್ರಭುತ್ವದ ತತ್ವಗಳನ್ನೂ ಶಿಸ್ತಿನಿಂದಲೀ ಉಳಿಸೋಣ (ಉಳಿಸೋಣ) 
            ಹಿಂದುಳಿದಂತ ಬಂಧುಗಳನ್ನೂ ಮುಂದಕೆ ತರಲೂ ಮಾಡುವ ಯತ್ನ (ಮಾಡುವ ಯತ್ನ) 
            ಕೆಳಗೆ ಬಿದ್ದವರೂ ಮೇಲಕೆ ಬರಲೂ ನೀಡುವ ನಾವೂ ಸ್ನೇಹದ ಹಸ್ತ 
ಎಲ್ಲರು: ನೀಡುವ ನಾವೂ ಸ್ನೇಹದ ಹಸ್ತ 
            ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ
            ಭಾರತ ದೇಶದ ಕೀರ್ತಿಗಳೇ ನವ ಭಾರತದ ವಿದ್ಯಾರ್ಥಿಗಳೇ
           ನವಯುಗದ ನಿರ್ಮಾತುಗಳೇ .. 
           ಓ ನಾಡ ಯುವಜನ ಶಕ್ತಿಗಳೇ ನವ ನಾಡನು ಕಟ್ಟುವ ಶಿಲ್ಪಿಗಳೇ 
--------------------------------------------------------------------------------------------------------------------------

ಪ್ರೇಮ ಜ್ವಾಲಾ (೧೯೮೦) -  ಓ ವಸಂತ ನೀ ಬರುವೇ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ತುಮುಕೂರು ರಾಜು  ಗಾಯನ : ವಾಣಿಜಯರಾಂ 

ಹೆಣ್ಣು : ಓ...  ವಸಂತ ನೀ ಬರುವೇ ಪ್ರತಿ ವರುಷಾ .. ಲೋಕಕೆ ನೀಡಲೂ ಹೊಸ ಹರುಷಾ .. ಓ...  ವಸಂತ

ಕೋರಸ್ : ಆಆಆ... ಆಆಆ...
ಹೆಣ್ಣು : ಕಾಲದ ಚಕ್ರವೂ ಉರಳುತಲಿರಲೂ  ಸರಿದಾ ಸಮಯ ಬಾರದೂ ಇಂದೇ..
          ಕಾಲದ ಚಕ್ರವೂ ಉರಳುತಲಿರಲೂ  ಸರಿದಾ ಸಮಯ ಬಾರದೂ ಇಂದೇ..
ಕೋರಸ್ : ಆಆಆ... ಆಆಆ...
ಹೆಣ್ಣು : ಆದರೂ ನೀನೂ ಬಂದೇ ಬರುವೇ .. ಬಾಡಿದ ಮರಗಳ ಚಿಗುರಿಸಲೆಂದೇ.. 
          ಆದರೂ ನೀನೂ ಬಂದೇ ಬರುವೇ .. ಬಾಡಿದ ಮರಗಳ ಚಿಗುರಿಸಲೆಂದೇ.. 
          ಮನದಲಿ ಮೋಹವ ಮೂಡಿಸಲೆಂದೇ...  ಆಆಆ... 
          ಓ...  ವಸಂತ ನೀ ಬರುವೇ ಪ್ರತಿ ವರುಷಾ .. ಲೋಕಕೆ ನೀಡಲೂ ಹೊಸ ಹರುಷಾ .. ಓ...  ವಸಂತ

ಹೆಣ್ಣು : ಮಾಮರದಲ್ಲಿ..  
          ಮಾಮರದಲ್ಲಿ ಕೋಗಿಲೇ ಕೂಗಿತೂ ನಿನ್ನಾಗಮನವಾ ಲೋಕಕೆ ಸಾರಿತೂ 
ಕೋರಸ್ : ಪಪ ಗಪ... ದದ ಮಗ.. ದಪಗರಿ.. ದನಿಸದ... ಆಆಆ.. 
ಹೆಣ್ಣು : ಮಾಮರದಲ್ಲಿ ಕೋಗಿಲೇ ಕೂಗಿತೂ ನಿನ್ನಾಗಮನವಾ ಲೋಕಕೆ ಸಾರಿತೂ 
          ಇಂಥಾ ಪ್ರತಾಪವಾ ನೀ ತೋರಿರಲೂ   
          ಇಂಥಾ ಪ್ರತಾಪವಾ ನೀ ತೋರಿರಲೂ ಬೃಂಗವೂ ಹೂವಿನ ಸಂಗವ ಬಯಸಿತು 
          ಬೃಂಗವೂ ಹೂವಿನ ಸಂಗವ ಬಯಸಿತು ಬಳ್ಳಿಯೂ ಮರದ ಆಸರೇ ಕೋರಿತೂ.. ಆಆಆ.. 
          ಓ...  ವಸಂತ ನೀ ಬರುವೇ ಪ್ರತಿ ವರುಷಾ .. ಲೋಕಕೆ ನೀಡಲೂ ಹೊಸ ಹರುಷಾ .. ಓ...  ವಸಂತ

ಹೆಣ್ಣು : ಮನುಜಗೆ ಯೌವ್ವನ ಒಮ್ಮೆ ವಸಂತ.. (ಆಆಆ) ಆದರೇ ಅದರ ಆದಾನಂತಾ...
          ಮನುಜಗೆ ಯೌವ್ವನ ಒಮ್ಮೆ ವಸಂತ.. ಆದರೇ ಅದರ ಆದಾನಂತಾ...
          ಮುಗ್ದರ ಮನಸನೂ ಚಂಚಲಗೊಳಿಸುವಾ..
          ಮುಗ್ದರ ಮನಸನೂ ಚಂಚಲಗೊಳಿಸುವ ಕಾಣದ ಸುಖದಾ ಭಾವಾವೇಷಾ ..
          ಮಿಲನವೂ ಕೂಟಕೆ ಸೆಳೆಯುವ ಪಾಠ.. ಆಆಆ..
          ಓ...  ವಸಂತ ನೀ ಬರುವೇ ಪ್ರತಿ ವರುಷಾ .. ಲೋಕಕೆ ನೀಡಲೂ ಹೊಸ ಹರುಷಾ .. ಓ...  ವಸಂತ
-------------------------------------------------------------------------------------------------------------------------

ಪ್ರೇಮ ಜ್ವಾಲಾ (೧೯೮೦) -  ಹೃದಯವಿದೆ ಸನ್ಯಾಸಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗೀತಪ್ರಿಯ, ಗಾಯನ : ಬೆಂಗಳೂರ ಲತಾ

ಹೃದಯವಿದೇ ಸನ್ಯಾಸೀ ..
ಹೃದಯವಿದೇ ಸನ್ಯಾಸೀ ಜ್ಞಾನದ ರಾಶಿ ಪ್ರೇಮ ಪೀಪಾಸೀ ..
ಸುಮಗಳ ಜೊತೆಗೇ ಹೃದಯವ ಹಾಸೀ ಕಾದಿಹಳೇ ಈ ಷೋಡಶೀ .. ಪ್ರೇಯಸೀ.. ರೂಪಸಿ ..
ಹೃದಯವಿದೇ ಸನ್ಯಾಸೀ ..

ಏತಕೇ ಇಂತಹ ಕಠಿಣ ತಪಸ್ಯ ಅರಿಯಲೂ ಬಾರೆಯಾ ಬಾಳ ರಹಸ್ಯ... 
ಏತಕೇ ಇಂತಹ ಕಠಿಣ ತಪಸ್ಯ ಅರಿಯಲೂ ಬಾರೆಯಾ ಬಾಳ ರಹಸ್ಯ... 
ಏಕೇ ಮೌನಾ.. ಇನ್ನೂ ಧ್ಯಾನ.. ಈ ವಯಸ್ಸಲ್ಲಿ ಏಕೇ .. ಈ ಸ್ಥಾನ.. 
ಆಸೆಗಳೆನಿತು ನಿನಗಾಗಿರಲೂ .. ಮೀಯದಕ್ಕಾಗಿ ತಪಿಸುತಲಿರಲೂ 
ಆಸೆಗಳೆನಿತು ನಿನಗಾಗಿರಲೂ .. ಮೀಯದಕ್ಕಾಗಿ ತಪಿಸುತಲಿರಲೂ 
ತಪವೇತಕೆ ತಾಪಸೀ ... ತಾಪಸೀ ... ತಾಪಸೀ ... 
ಹೃದಯವಿದೇ ಸನ್ಯಾಸೀ ಜ್ಞಾನದ ರಾಶಿ ಪ್ರೇಮ ಪೀಪಾಸೀ ..
ಸುಮಗಳ ಜೊತೆಗೇ ಹೃದಯವ ಹಾಸೀ ಕಾದಿಹಳೇ ಈ ಷೋಡಶೀ .. ಪ್ರೇಯಸೀ.. ರೂಪಸಿ ..
ಹೃದಯವಿದೇ ಸನ್ಯಾಸೀ ..

ನೋಡುತ ಹೃದಯವ ಕೋಮಲ ತಾಣ ಕೂಡಲು ಕಾಮನೂ ಹೂವಿನ ಬಾಣ.. 
ನೋಡುತ ಹೃದಯವ ಕೋಮಲ ತಾಣ ಕೂಡಲು ಕಾಮನೂ ಹೂವಿನ ಬಾಣ.. 
ಮೋಹದ ವಶವೂ ಮೈಮನವೆಲ್ಲಾ..  
ಮೋಹದ ವಶವೂ ಮೈಮನವೆಲ್ಲಾ ಮಾದಕ ನಿಶೆಯೂ ಈ ಜಗಕೆಲ್ಲಾ 
ಇಂತಹ ಸಮಯವ ಸ್ವಾರ್ಥಕಗೊಳಿಸಲೂ..  ಪ್ರೇಮೋನ್ನಾದವ ತಿಳಿಸಲೂ..  
ಇಂತಹ ಸಮಯವ ಸ್ವಾರ್ಥಕಗೊಳಿಸಲೂ ಪ್ರೇಮೋನ್ನಾದವ ತಿಳಿಸಲೂ..  
ಬಂದಿಹೇ ನಾನೂ ಪ್ರೇಮಿಸೀ.. ಕಾಮಿಸೀ .. ಮೊಹಿಸೀ ... 
ಹೃದಯವಿದೇ ಸನ್ಯಾಸೀ ಜ್ಞಾನದ ರಾಶಿ ಪ್ರೇಮ ಪೀಪಾಸೀ ..
ಸುಮಗಳ ಜೊತೆಗೇ ಹೃದಯವ ಹಾಸೀ ಕಾದಿಹಳೇ ಈ ಷೋಡಶೀ .. ಪ್ರೇಯಸೀ.. ರೂಪಸಿ ..
ಹೃದಯವಿದೇ ಸನ್ಯಾಸೀ ..
-------------------------------------------------------------------------------------------------------------------------

No comments:

Post a Comment