ಪ್ರೇಮಾಯಣ ಚಿತ್ರದ ಹಾಡುಗಳು
- ನಮಗೇ ಬಂದಿದೆ ಸಿರಿ ಸಿರಿ ಇಂದೇ ಪಡೆಯುವ ನಡೆ ನಡೆ
- ಪಮ್ಮಿ ಅರೇ ಓ ಪಮ್ಮಿ ಕೋಪ ಬೇಡ ನನ್ನಮ್ಮಿ
- ಒಲವಿನಿಂದ ಒಮ್ಮೆ ನಾನು ನಗೆಯ ಕಂಡೇನೂ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ
ಗಂಡು : ನಮಗೇ ಬಂದಿದೆ ಸಿರಿ ಸಿರಿ ಇಂದೇ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ ಏಕೆ ಈ ಜಗಳಾ
ಹೆಣ್ಣು : ನಮಗೇ ಬಂದಿದೆ ಸಿರಿ ಸಿರಿ ಇಂದೇ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ ಏಕೆ ಈ ಜಗಳಾ
ಗಂಡು : ಏನೇ ಆಸೆ ಇರಲೂ ಎಲ್ಲಾ ತಿಳಿಸು ನಡೆಸುವೆ ನಾ ಆಹಾ...
ನಾನೇ ಹೀಗೆ ಒಲಿದು ನಿನಗೆ ಮೋಸ ಮಾಡುವೇನಾ
ಹೆಣ್ಣು : ಘಾಟಿ ನೀನು ಚೂಟಿ ನಾನು ಮರೆಯಬೇಡ
ಹಾಡಿ ಪಾಡಿ ನೀನು ನನ್ನಾ ಹೊಗಳಬೇಡ
ಗಂಡು : ನಮಗೇ ಬಂದಿದೆ ಸಿರಿ ಸಿರಿ ಇಂದೇ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ ಏಕೆ ಈ ಜಗಳಾ
ಹೆಣ್ಣು : ಹಾಗೇ ಹೀಗೆ ಇರದ ಎಲ್ಲಾ ತರಲೆ ಮಾಡುವೇಯಾ
ಗಾಳ ಹಾಕಿ ಮನಸ ಕೆಡಿಸಿ ದೂರ ಹೋಗುವೇಯಾ
ಗಂಡು : ತುಂಟಿ ನೀನು ತಂಟೆ ನಾನು ಜಗಳ ಬೇಡಾ
ಕಾಡಿ ಕಾಡಿ ನೀನು ನನ್ನಾ ಜರೆಯಬೇಡಾ
ಇಬ್ಬರು : ನಮಗೇ ಬಂದಿದೆ ಸಿರಿ ಸಿರಿ ಇಂದೇ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ ಏಕೆ ಈ ಜಗಳಾ
-------------------------------------------------------------------------------------------------------------------------
ಪ್ರೇಮಾಯಣ (೧೯೭೮) - ಪಮ್ಮಿ ಅರೇ ಓ ಪಮ್ಮಿ ಕೋಪ ಬೇಡ ನನ್ನಮ್ಮಿ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ
ಗಂಡು : ಪಮ್ಮೀ ಅರೇ ಓ.. ಪಮ್ಮೀ
ಪಮ್ಮೀ ಅರೇ ಓ.. ಪಮ್ಮೀ ಕೋಪ ಬೇಡ ನನ್ನಮ್ಮಿ... ಕೋಪ ಬೇಡ ನನ್ನಮ್ಮಿ
ಸಾರಿ ಪಮ್ಮೀ ಸಾರಿ ಆಯ್ ಯಂ ಸಿನ್ಸಿಯರ್ಲಿ ಸಾರಿ ನಾ ಇರುವಾಗ ಏನು ಕಮ್ಮೀ
ಪಮ್ಮೀ ಅರೇ ಓ.. ಪಮ್ಮೀ ... ಪಮ್ಮೀ ಅರೇ ಓ.. ಪಮ್ಮೀ
ಹೆಣ್ಣು : ಸಾಕೂ ... ಸಾಕೂ ... ಗಂಡು : ಪ್ಲೀಸ್ ... ಪ್ಲೀಸ್...
ಹೆಣ್ಣು : ನಿನ್ನಂಥೋರು ಬಹಳ ಬಹಳ ನೀ ಯಾರಂತ ನನಗೂ ಗೊತ್ತು
ಯಾರದೋ ಕಾರು ಮಾತೆಲ್ಲ ಜೋರು ಇನ್ನೊಂದು ಸಾರಿ ಕೂಗಿಯಾ ಹುಷಾರ್
ಗಂಡು : ಹೋದರೇ ಹೋಗು ಪರವಾಗಿಲ್ಲ ನಿನ್ನ ಹಿಂದೇ ಬರೋದೇ ಇಲ್ಲ
ನೀನೇನು ರಂಭೆ ಊರ್ವಶಿ ಅಲ್ಲ ನಿನ್ನಂಥೋರು ಬಹಳ ಬಹಳ
ಹೆಣ್ಣು : ಮೋನಿ ಅರೇ ಮೋನಿ ನೀನೇ ನನ್ನ ಜೀವ ಭಾವ ಸಾರಿ ಮೋನಿ ಸಾರಿ
ಗಂಡು : ಉಹೂಂ ... ಆಹಾ.. ಹೆಣ್ಣು : ಇನ್ನೂ ನನ್ಮೇಲ್ ಕೋಪಾನಾ
ಗಂಡು : ದರ್ಬಾರೆಲ್ಲ ನಿಂದೇನಲ್ಲಾ ನೀನ್ ಕೆಲ್ಸ್ ನಂಗೊತ್ತಿಲ್ವಾ
ಇಲ್ಲದ್ದೆಲ್ಲಾ ಬುರುಡೆ ಬೇಡಾ ಹೋಗೋ ನಿನ್ನ ಟೈಪಿಂಗ್ ನೋಡು
ಹೆಣ್ಣು : ಹೋದರೇ ಹೋಗು ಎಲ್ಹೋಗ್ತೀಯಾ ಈ ಹೊತ್ತಲ್ಲ ನಾಳೆ ಬರ್ತಿ
ಊರಲೆಲ್ಲಾ ನೀನೊಬ್ಬನೇ ಅಲ್ಲ ನಿನ್ನಂಥೋರೂ ಬಹಳ ಬಹಳ

ಪ್ರೇಮಾಯಣ (೧೯೭೮) - ಒಲವಿನಿಂದ ಒಮ್ಮೆ ನಾನು ನಗೆಯ ಕಂಡೇನೂ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ
ಆಹಾಹಾ... ಆಹಾಹಾ.. ಆಹಾಹಾ...
ಒಲವಿಂದ ಒಮ್ಮೆ ನಾನು ನಗೆಯ ಕಂಡೇನೂ
ಅಂದಿನಿಂದ ಇಂದಿನವರೆಗೂ ನಗುತ ನಗುತಾ ನಿಂತೆನು

ತುಂಟ ನೋಟ ತಮಾಷೆ ಮಾತು ಅಂತರಂಗವ ಕಲಕಿವೆ
ಕೆಣಕೋ ಧಾಟಿ ಹುಡುಗು ರೀತಿ ಕೀಟಲೇ ಅರ್ಥವ ತಿಳಿಸಿವೆ
ಕಾಡುವ ಹರೆಯ ಮೋಜಿನ ನಡಿಗೆ ಮನವ ತುಂಬಿದೆ
ಒಲವಿಂದ ಒಮ್ಮೆ ನಾನು ನಗೆಯ ಕಂಡೇನೂ
ಸುಮ್ಮನೇ ಕುಳಿತರು ಎದೆಯ ಮಿಡಿತ ನಿನ್ನ ಕೂಗಿ ಕರೆದಿದೇ
ಒಳಗೇ ಮಾತು ಹೊರಗೆ ಮೌನ ನೋಡುವ ನೋಟ
ಮೋಡಿಯ ಮಾಡಿ ಸನಿಹ ತಂದಿದೆ
ಒಲವಿಂದ ಒಮ್ಮೆ ನಾನು ನಗೆಯ ಕಂಡೇನೂ
ಅಂದಿನಿಂದ ಇಂದಿನವರೆಗೂ ನಗುತ ನಗುತಾ ನಿಂತೆನು
ಒಲವಿಂದ ಒಮ್ಮೆ ನಾನು ನಗೆಯ ಕಂಡೇನೂ
ಅಂದಿನಿಂದ ಇಂದಿನವರೆಗೂ ನಗುತ ನಗುತಾ ನಿಂತೆನು
ಒಲವಿಂದ ಒಮ್ಮೆ ನಾನು ನಗೆಯ ಕಂಡೇನೂ
-------------------------------------------------------------------------------------------------------------------------
No comments:
Post a Comment