1084. ಪ್ರೇಮವೇ ಬಾಳಿನ ಬೆಳಕು (೧೯೮೪). (ಸುಳಿಗಾಳಿ)


ಪ್ರೇಮವೇ ಬಾಳಿನ ಬೆಳಕು (ಸುಳಿಗಾಳಿ) ಚಿತ್ರದ ಹಾಡುಗಳು 
  1. ಕಣ್ಣಲ್ಲಿ ನಿಂತಿರುವೆ 
  2. ಭಾವ ರಾಗ ತಾಳವು 
  3. ಓ ಮಧುಮತಿ ಗುಣವಂತಿ 
  4. ಹೂವಿನಲ್ಲಿ ಗಂಧ ಇಟ್ಟ 
  5. ಚುಕ್ಕಿಗಳು ಬೆಳಗ್ಯಾವೇ 
ಪ್ರೇಮವೇ ಬಾಳಿನ ಬೆಳಕು (೧೯೮೪) - ಕಣ್ಣಲ್ಲಿ ನಿಂತಿರುವೇ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ

ಆಆಆ... ಕಣ್ಣಲ್ಲೇ ನಿಂತಿರುವೆ ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೆ ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೆ

ನಗುವಿನ ಹೂ ಮಳೆಯ ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ ಬಯಕೆಯ ಮೀಟಿರುವೆ
ನಗುವಿನ ಹೂ ಮಳೆಯ ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ ಬಯಕೆಯ ಮೀಟಿರುವೆ
ಸನಿಹದ ಸೌಖ್ಯದಲಿ ಜಗವನೇ ಮರೆತಿರುವೆ
ರಕುತದ ಕಣಕಣದೇ ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೆ ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...

ದೂರದಿ ನೀನಿರಲೂ ವಿರಹದೆ ಬೆಂದಿರುವೇ  
ನಿದಿರೆಯ ವೇಳೆಯಲು ನೆನಪಲಿ ಕಾಡಿರುವೆ 
ದೂರದಿ ನೀನಿರಲೂ ವಿರಹದೆ ಬೆಂದಿರುವೇ  
ನಿದಿರೆಯ ವೇಳೆಯಲು ನೆನಪಲಿ ಕಾಡಿರುವೆ 
ನಿಲ್ಲದು ಜೀವವಿದು ನಿನ್ನನ್ನು ಕಾಣದಲಿ 
ಅಗಲಿಕೆ ಒಂದು ನುಡಿ ದೂರಾ ಎಂದೆಂದೂ  
ಕಣ್ಣಲ್ಲೇ ನಿಂತಿರುವೆ ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...  
--------------------------------------------------------------------------------------------------------------------------

ಪ್ರೇಮವೇ ಬಾಳಿನ ಬೆಳಕು (೧೯೮೪) - ಭಾವ ರಾಗ ತಾಳವೂ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ

ಭಾವ ರಾಗ ತಾಳವೂ.....
ಭಾವ ರಾಗ ತಾಳವೂ ಒಂದಾಗಿ ಬೆರೆತಾಗ
ಆ ಭರತ ಮುನಿಯ  ನಾಟ್ಯ ಕಲೆಗೆ ಜೀವವು
ಭಾವ ರಾಗ ತಾಳವೂ
ತಂದೆಯು ನಟರಾಜ ತಾಯಿಯು ಶಿವಶಕ್ತಿ
ತಂದೆಯು ನಟರಾಜ ತಾಯಿಯು ಶಿವಶಕ್ತಿ 
ಸಂಗೀತ ಸಾಹಿತ್ಯ ಕಲೆತಂತ ನವರಸನಾಟಕ 
ಭಾವ ರಾಗ ತಾಳವೂ 

ಚೆಲುವಿದು ಹೆಣ್ಣಾಗಿ ಹರೆಯದ ಹಣ್ಣಾಗಿ 
ಬೇಲೂರ ಶಿಲೆಯಂತೆ ಮರೆದಾಡಿದೆ 
ನಯನವು ಮಿಂಚಾಗಿ ಕಾವ್ಯದ ಹೊಳೆಯಾಗಿ 
ಮೌನದಿ ನೂರು ಮಾತಾಡಿದೆ 
ಮೇಘವು ಕರೆ ನೀಡಿ.... ಆಆಆಆಅ
ಮೇಘವು ಕರೆ ನೀಡಿ ನವಿಲಿದು ಕುಣಿದಂತೆ 
ಮೈ ತಾಳಿ ಬಂದಂತ ಆನಂದ ತನುವನು ಕುಣಿಸಿದೆ 
ಭಾವ ರಾಗ ತಾಳವೂ
ಶೃಂಗಾರ ವೀರ ಕರುಣಾ ಹಾಸ್ಯ
ರೌಧ್ರ ಭೀಭತ್ಸ ಭಯಾನಕ ಅದ್ಬುತ ಶಾಂತ 

ಸಂಗೀತ ಸಾಹಿತ್ಯ ಕಲೆತಂತ ನವರಸ ನಾಟಕ 
ಸರಿಗಮ ರಿನಿಸನಿ ದನಿಪ ಪದನಿಸ ನಿದಪಮ ಗಮಪ
ಪಮಗರಿಸ ರಿಗಮ ಪದನಿ ಗಮಪ ಪದನಿಸ
ಗರಿಗರಿನಿಸ ನಿದಪಮಪ ಗಮಪದ
ಭಾವ ರಾಗ ತಾಳವೂ ಒಂದಾಗಿ ಬೆರೆತಾಗ 
ಆ ಭರತ ಮುನಿಯ  ನಾಟ್ಯ ಕಲೆಗೆ ಜೀವವು
ಭಾವ ರಾಗ ತಾಳವೂ
ತಂದೆಯು ನಟರಾಜ ತಾಯಿಯು ಶಿವಶಕ್ತಿ 
ತಂದೆಯು ನಟರಾಜ ತಾಯಿಯು ಶಿವಶಕ್ತಿ 
ಸಂಗೀತ ಸಾಹಿತ್ಯ ಕಲೆತಂತ ನವರಸನಾಟಕ 
ಭಾವ ರಾಗ ತಾಳವೂ....  
--------------------------------------------------------------------------------------------------------------------------

ಪ್ರೇಮವೇ ಬಾಳಿನ ಬೆಳಕು (೧೯೮೪) - ಓ ಮಧುಮತಿ ಗುಣವಂತಿ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ , ಎಸ್.ಪಿ.ಬಿ.

ಹೆಣ್ಣು : ಆಆಆಅ... (ಆಆಆ.ಆ..).ಆಆಆಅ... (ಆಆಆ... .ಆಆ ...ಆಆ ....).
ಗಂಡು : ಓ..ಮಧುಮತಿ ಗುಣವತಿ ರತಿ ಬಾರೆ ಬಾರೆ...
ಕೋರಸ್ : ಓ..ಮಧುಮತಿ (ಆ )ಗುಣವತಿ (ಆ)  ರತಿ
ಗಂಡು : ಓ..ಮಧುಮತಿ...

ಗಂಡು : ಆ... ಬಾನಲ್ಲಿ ಬಾಲರವಿ ಬರುತಿರುವಾ (ಆಆಆಆಅ )
           ಆ.. ಬಾನಲ್ಲಿ ಬಾಲರವಿ ಬರುತಿರುವಾ
           ಬಂಗಾರ ತೇರನೇರಿ (ಆಆಆ) ಮುಗಿಲಲ್ಲಿ ತೂರಿ ಜಾರಿ (ಆಆಆ)
           ಬಂಗಾರ ತೇರನೇರಿ ಮುಗಿಲಲ್ಲಿ ತೂರಿ ಜಾರಿ
           ಕಮಲಗಳ (ಆಆಆ) ಅರಳಿಸುತ (ಆಆಆ)
           ನಗಿಸುವ ಸಮಯದಿ  ಸರಸಕೆ ಬಾರೇ ಬಾರೇ
           ಓ..ಮಧುಮತಿ (ಆಆಆ) ಗುಣವತಿ (ಆಆಆ) ರತಿ ಬಾರೆ ಬಾರೆ
           ಓ..ಮಧುಮತಿ
ಹೆಣ್ಣು : ಆಆಆ... (ಪಪದದ ಪಪದದ ಪಪದದ)
          ಆಆಆ... (ರಿರೀದಪ ರಿರೀದಮ ರಿರಿಮಪ )
         ಆಆಆ... ಆಆಆ.... ಆಆಆ....
ಗಂಡು : ರಿಪಮ ರಿಮಗ ನಿದಪ  (ಧೀ.. ಧಿನಿಪನಿನಿ )       

ಗಂಡು : ಈ ಸೌಂದರ್ಯ ಯಾರಿಗಿದೆ ಸುರವನಿತೆ... (ಅಹ್ಹಹ್ಹಹ ) (ಆಆಆ. )
            ಈ ಸೌಂದರ್ಯ ಯಾರಿಗಿದೆ ಸುರವನಿತೆ
            ನಡೆವಾಗ ಹಂಸಯಂತೆ (ಆಆಆ) ಕುಣಿವಾಗ ನವಿಲಿನಂತೇ (ಆಆಆ) 
            ನಡೆವಾಗ ಹಂಸಯಂತೆ (ಅಹ್ಹಹ) ಕುಣಿವಾಗ ನವಿಲಿನಂತೇ
           ಹೆಜ್ಜೆಗಳ (ಆಆಆ) ಗೆಜ್ಜೆಗಳ (ಆಆಆ)  ತಾಳಕೆ ಹಾಡುತ ನಲಿಯುತ ಬಾರೇ.. ಬಾರೇ ... 
           ಓ..ಮಧುಮತಿ(ಆಅ)  ಗುಣವತಿ (ಆಅ )ರತಿ ಬಾರೆ ಬಾರೆ
ಕೋರಸ್ : ಓ..ಮಧುಮತಿ (ಆಅ )ಗುಣವತಿ (ಆಅ )ರತಿ 
ಗಂಡು : ಓ..ಮಧುಮತಿ... (ಆಆ )
--------------------------------------------------------------------------------------------------------------------------

ಪ್ರೇಮವೇ ಬಾಳಿನ ಬೆಳಕು (೧೯೮೪) - ಹೂವಿನಲ್ಲಿ ಗಂಧ ಇಟ್ಟ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ

ಈ ಹಾಡಿನ ಸಾಹಿತ್ಯಕ್ಕೆ ಯಾವುದೇ ವಿಧವಾದ ಮಾಹಿತಿಯು  ಲಭ್ಯವಿರುವುದಿಲ್ಲ
--------------------------------------------------------------------------------------------------------------------------

ಪ್ರೇಮವೇ ಬಾಳಿನ ಬೆಳಕು (೧೯೮೪) - ಚುಕ್ಕಿಗಳು ಬೆಳಗ್ಯಾವೇ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಚುಕ್ಕಿಗಳು ಬೆಳಗ್ಯಾವೇ ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ ಬಾ ತಂಗಿ ಏನುತಾವೇ
ಚುಕ್ಕಿಗಳು ಬೆಳಗ್ಯಾವೇ ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ ಬಾ ತಂಗಿ ಏನುತಾವೇ

ಯಾವ ಜನುಮ ಬಂಧ ನನ್ನ ನಿನ್ನನ್ನು ಬೆರೆಸಿಕೋ 
ಯಾವ ಕಾಣದ ಕೈ ಹೊಸ ಕಥೆಯ ಬರೆಸಿತೋ 
ಯಾವ ಗೀತೆಯ ಮನದೇ ಹೊಸರಾಗ ಮಿಡಿಸಿತೋ 
ಯಾವ ನಗುವಿನ ಹಣತೆ ಎದೆಗುಡಿಯ ಬೆಳಗಿತೋ 
ಕಣ್ಗಳು ಅರಸ್ಯಾವೇ ನಿನ್ನನ್ನೇ ನೆನೆಸ್ಯಾವೆ 
ಕಾಣಲಿರುವ ನಿನ್ನಾ ಬಾರೆಯಾ ನಲ್ಲ ಏನತಾವೇ 
ಚುಕ್ಕಿಗಳು ಬೆಳಗ್ಯಾವೇ ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ ಬಾ ತಂಗಿ ಏನುತಾವೇ 

ಪ್ರೇಮಪೂಜೆಯ ಸಮಯ ದೈವ ಬೆರೆತಿರುವಾಗ 
ಬಯಕೆ ಹೂವಿನ ಮಾಲೆ ಬಾ ಎನುತಿರುವಾಗ 
ಕರ್ಪುರದಾರತಿಯು ಉರಿಯದೇ ಇರುವಾಗ...ಆಆಆ... 
ಅಪಸ್ವರವೇ ನುಡಿಯುತಿದೆ ನೀಡೆ ಜೀವನ ರಾಗ 
ಸಂಗಾತಿ ಜೊತೆಗಿಲ್ಲ ಬಾಳಿನಲಿ ಬೆಳಕಿಲ್ಲ 
ಈ ಸಮಯ ಏಕಾಂಗಿಯಾಗಿ 
ಚುಕ್ಕಿಗಳು ಬೆಳಗ್ಯಾವೇ ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ ಬಾ ತಂಗಿ ಏನುತಾವೇ
--------------------------------------------------------------------------------------------------------------------------

No comments:

Post a Comment