1114. ಪ್ರೀತಿ ಮಾಡೋ ಹುಡುಗರಿಗೆಲ್ಲ (2002)

ಪ್ರೀತಿ ಮಾಡೋ ಹುಡುಗರಿಗೆಲ್ಲ ಚಿತ್ರದ ಹಾಡುಗಳು 
  1. ಪ್ರೀತಿ ಮಾಡೋ ಹುಡುಗರಿಗೆಲ್ಲ ತೊಂದರೆಯೋ ಬಲು ತೊಂದರೆಯೋ 
  2. ಅರೆರೇ ಯಾವುದಿದು ತನನ ಹಾಡುವುದು 
  3. ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೇ ಪ್ರಿಯ 
  4. ಈ ದಿನ ನಮ್ಮದು ನಾಳೆಯೋ ಅವನದು 
  5. ಓ ಸ್ನೇಹಿತರೇ .. ಓ.. ಸೋದರರೇ ಸುಂದರ ಲೋಕದಲಿ 
  6. ಓ ಸ್ನೇಹಿತರೇ .. ಓ.. ಸೋದರರೇ ಸುಂದರ ಲೋಕದಲಿ 
  7. ತಾಯಿ ಪ್ರೀತಿಯಲ್ಲಿಯೇ ದೋಷ ಕಂಡಿತೇ 
  8. ಕಲ್ಯಾಣವಾಗಲಿ ಸುಂದರ ಲೋಕದ ಗೂಡು 
  9. ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ 
ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಪ್ರೀತಿ ಮಾಡೋ ಹುಡುಗರಿಗೆಲ್ಲ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ
ಸುಂದರವಾದ ಸೃಷ್ಟಿಗೆ ಎಂದೂ ತೊಂದರೆಯೋ ಬಲು ತೊಂದರೆಯೋ
ಯಾಕೇ ಅಂದ್ರೆ ಕಾರಣವಿಷ್ಟೇ ನೋಡುವ ದೃಷ್ಟಿಯೇ ಡೊಂಕಿದೆಯೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ

ಬೀದಿ ಮೇಲೆ ಪಾನಿಪುರಿ ಮಾರುತ್ತಾರೆ ತರಲೆ  ಮಾಡುತ್ತಾರೆ ತಾನೇ 
ನೋಟು ಇದ್ರೇ ಪ್ಲೇಟು ಪ್ಲೇಟು ತಿನ್ನುತ್ತಾರೆ ತಾನೇ 
ತಿನ್ನೋನ ಹತ್ರ ಕಾಸಿರಬೇಕು ಪ್ರೀತ್ಸೋಣ ಹತ್ರ ಪಾಸಿರಬೇಕು ಪಬಂ ಪಬಂ ಪಬಂ
ಹುಡುಗ ಹುಡುಗಿಗೆ ಪಾನಿಪೂರಿ ಕೊಡಿಸಿದರೆ ಬಲು ತೊಂದರೆಯೋ 
ಯಾಕೆ ಅಂದ್ರೇ ಕಾರಣವಿಷ್ಟೇ ಪೋಲಿ ಹುಡುಗರ ಕಣ್ಣುರಿಯೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ

ಹಾಡೋ ಹೀರೊ ಚೆನ್ನಾಗಿದ್ರೆ ಸಿನಿಮಾ ಓಡೋದಿಲ್ಲ ಸಿನಿಮಾ ಒಡೋದಿಲ್ಲ
ಬ್ಲಾಕೋ ವೈಟೋ ಲವ್ವಾಗೋದ್ರೇ ಮ್ಯಾಟ್ನಿ ನೋಡೋದಿಲ್ವಾ ಮ್ಯಾಟ್ನಿ ನೋಡೋದಿಲ್ವಾ
ಸಿನಿಮಾದೊಳಗೆ ಥ್ರಿಲ್ ಇರಬೇಕು ಪ್ರೇಮಿ ಒಳಗೆ ದಿಲ್ ಇರಬೇಕು ಪಬಂ ಪಬಂ ಪಬಂ
ಹುಡುಗಿ ಪಕ್ಕ ಹುಡುಗ ಸಿನಿಮಾ ನೋಡಿದರೆ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಹಿಂದಿನ ಕುರ್ಚಿಗೇ ಸಂಕಟವೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ

ಭೂಮಿ ಆಚೆ ಹೋಗೋ ಸೂರ್ಯನ ಮೂತಿ ಕೆಂಪು ತಾನೇ ಮೂತಿ ಕೆಂಪು ತಾನೇ
ಊರಿಂದಾಚೆ ಪ್ರೇಮಿಗಳಿದ್ರೇ ಕೆನ್ನೆ ಕೆಂಪು ತಾನೇ ಕೆನ್ನೆ ಕೆಂಪು ತಾನೇ
ಮುಳುಗೋ ಸೂರ್ಯ ಹಿಂದಿರಬೇಕು ಮುದ್ದಿಸೋ ಜೋಡಿ ಮುಂದಿರಬೇಕು ಪಬಂ ಪಬಂ ಪಬಂ
ಹುಡುಗಿ ಹಿಂದೆ ಹುಡುಗ ಮುಂದೆ ಬೈಕನಲಿ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಸಂಜೆ ರೌಡಿಯ ರಾಬರಿಯೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ

ಅಂದ ಚೆಂದ ಇದ್ರೇ ಹುಡುಗಿ ಮೆಚ್ಚುತ್ತಾಳೆ ತಾನೇ ಮೆಚ್ಚುತ್ತಾಳೆ ತಾನೇ
ಸೊಟ್ಟ ಪಟ್ಟ ಇದ್ರೆ ಥೂ ಛೀ ಅನ್ನುತ್ತಾಳೆ ತಾನೇ ಅನ್ನುತ್ತಾಳೆ ತಾನೇ
ಅವರದು ಮಾತ್ರ ಸುಂದರ ಲೋಕ ನಮ್ಮದು ಮಾತ್ರ ದುಃಖದ ಲೋಕ
ನಾಯಕರಿಂದ ಖಳನಾಯಕರಿಗೆ ತೊಂದರೆಯೋ ಬಲು ತೊಂದರೆಯೋ
ಯಾಕೇ ಅಂದ್ರೆ ಕಾರಣವಿಷ್ಟೇ ಇವರಿಗೇ ಲಕ್ಕು ಕೈಲಿದೆಯೋ
ಜನಸಂಖ್ಯೆಯಲ್ಲಿ ಒಬ್ಬನು ಗಂಡಿಗೆ ಹೆಣ್ಣುಗಳು ಒಂಬತ್ತಿದೆಯೋ
ಯಾಕೆ ಅಂದ್ರೆ ಕಾರಣವಿಷ್ಟೇ ಹೆಣ್ಣಿನ ಯುಗವೇ ಬರುತಿದೆಯೋ
ಹೆಣ್ಣಿನ ಯುಗವು ಜಾರಿಗೆ ಬಂದ್ರೆ ಗಂಡಸರಿಗೆ ಮಕ್ಕಳ ಹೇರಲಾರರು
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ
ಸುಂದರವಾದ ಸೃಷ್ಟಿಗೆ ಎಂದೂ ತೊಂದರೆಯೋ ಬಲು ತೊಂದರೆಯೋ
ಯಾಕೇ ಅಂದ್ರೆ ಕಾರಣವಿಷ್ಟೇ ನೋಡುವ ದೃಷ್ಟಿಯೇ ಡೊಂಕಿದೆಯೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೊ ಬಲು ತೊಂದರೆಯೋ
ಯಾಕೆ ಅಂದ್ರೇ ಕಾರಣವಿಷ್ಟೇ ಪ್ರೀತಿಯು ಸುಂದರ ನೋಡಲು ಸುಂದರವೋ
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಅರೆರೇ ಯಾವುದಿದು ತನನ ಹಾಡುವುದು
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ ಕೃಷ್ಣನ , ಲತಾ ಹಂಸಲೇಖ 

ಇಬ್ಬರು : ಅರೆರೇ ಅರೆರೇ ಅರೆರೇ ಯಾವುದಿದು ತನನ ತನನ ತನನಾ ಹಾಡುವುದು
             ಇಡೀ ತನುವ ಇಡೀ ಮನವ ಝುಮ್ಮೆನಿಸುವುದು ಅರೆರೇ ಯಾವುದಿದು

ಗಂಡು : ಅಹ ಇಂದೇ ನಿನ್ನಲ್ಲಿ ಸೊಗಸು ಕಣ್ಣ ತುಂಬೆಲ್ಲ ತುಳುಕಾಡೊ ವಯಸು ನಿನ್ನಾ ಕಂಡಾಗಿನಿಂದ ಕಂಡಿರಲಿಲ್ಲ
ಹೆಣ್ಣು : ಮನ ತುಂಬಿತ್ತು ನೂರಾರು ಚಿಂತೆ ನಿನ್ನ ಕಂಡಿದ್ದೆ ಓಡೋಯಿತಂತೆ ಇನ್ನು ಏನಾದರೇನು ಭಯವಿಲ್ಲ
ಗಂಡು : ಜೀವವು ಗೆಳತಿಯಾ ಜೊತೆಯಾ ಬಯಸಿದೆ
ಹೆಣ್ಣು : ಜೊತೆಯಲಿ ಅವನಿರೇ ಜಗವಾ ಮರೆತಿದೇ
ಗಂಡು : ಕಣ್ಣಿಗೆ ಹತ್ತಿರ ಇದ್ದರೂ ಕಾತುರ
ಹೆಣ್ಣು : ಮಂತ್ರವೋ ಮೇಳವೋ ನಿನ್ನದೇ ಸಡಗರ
ಇಬ್ಬರು : ಅರೆರೇ ಅರೆರೇ ಅರೆರೇ ಯಾವುದಿದು ತನನ ತನನ ತನನಾ ಹಾಡುವುದು
             ಇಡೀ ತನುವ ಇಡೀ ಮನವ ಝುಮ್ಮೆನಿಸುವುದು ಅರೆರೇ ಯಾವುದಿದು

ಹೆಣ್ಣು : ಎಲ್ಲಿ ಕುಂತಲ್ಲಿ ಸೆಳೆತ ಯಾರು ಕಾಣೋಕೆ ಆಗದ ಮಿಡಿತ ಅರೇ ಒಂದೊಂದು ಸ್ಪರ್ಶಕ್ಕೂ ಗೊತ್ತಾಗಿದೆ
ಗಂಡು : ಜೀವ ಜೀವಕ್ಕೆ ಜೀವ ಕೊಡೊ ಸ್ನೇಹ ಜನ್ಮ ಜನ್ಮಕ್ಕೆ ಜೊತೆ ಇರೋ ಭಾವ
            ಪ್ರತಿ ಮುತ್ತಲ್ಲೂ ತಿಳಿಸುವುದ್ಯಾವುದಿದು
ಹೆಣ್ಣು : ಪ್ರಾಯವು ಚಿಗುರಿಸೋ ಸ್ಫೂರ್ತಿಯೋ ಸೆಲೆಯೋ ಕಾಲವು ಕರುಣಿಸೋ ಕಾಮದ ಕಲೆಯೋ
ಗಂಡು : ಹೇಳದೇ ಕೇಳದೇ ಹಗರಣ ಮಾಡಿದೆ ಅಧರದ ಪ್ರೀತಿಯಾ ಪ್ರಕರಣ ಆಗಿದೆ
ಇಬ್ಬರು : ಅರೆರೇ ಅರೆರೇ ಅರೆರೇ ಯಾವುದಿದು ತನನ ತನನ ತನನಾ ಹಾಡುವುದು
             ಇಡೀ ತನುವ ಇಡೀ ಮನವ ಝುಮ್ಮೆನಿಸುವುದು ಅರೆರೇ ಯಾವುದಿದು
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೇ ಪ್ರಿಯ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ

ಗಂಡು : ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೆ ಪ್ರಿಯ
            ಹೃದಯದ ಗೂಡಿಗೆ ಒಲವಿನಾ ಹಣತೆಗೇ ಜ್ಯೋತಿ ನೀ ಬಾರೇ ಪ್ರಿಯ

ಗಂಡು : ನನಗೆ ಹೇಳಿದೆ ಸುಳಿವು ನೀಡದೆ ದೇವರೂರಿಗೆ ಪಯಣವೇ
           ಹೇಳಿ ನಡೆವುದು ಕೇಳಿ ಪಡೆಯುವುದು  ಪ್ರೇಮರಾಜ್ಯದಲ್ಲಿ ನಿಯಮವೇ
ಹೆಣ್ಣು : ಕರೆದೆಯಾ  ಪ್ರಾಣವೇ ಸೆಳೆದೆಯಾ ನನ್ನ ಪ್ರೇಮವೇ
ಗಂಡು : ಹೃದಯಾ ಮಾತಿದು ಆಸೆಗೆ ಸಾಲದು ನಿನ್ನ ನಾ ಪ್ರೀತಿಸುವೆ
ಹೆಣ್ಣು : ಬಯಸಿದಾ ಕನಸಿದು ಮಾತಿಗೂ ನಿಲುಕದು ನಿನ್ನನಾ ಪ್ರೀತಿಸುವೆ
         ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೆ ಪ್ರಿಯ
         ಹೃದಯದ ಗೂಡಿಗೆ ಒಲವಿನಾ ಹಣತೆಗೇ ಜ್ಯೋತಿ ನೀ ಬಾರೇ ಪ್ರಿಯ
        ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೆ ಪ್ರಿಯ

ಹೆಣ್ಣು : ತನುವಿನೊಳಗಿರೋ ಕೈಗೆ ಸಿಗದಿರೋ ಪ್ರಾಣ ಯಾವ ಥರ ಇರುವುದೋ
          ಹೊರಗೆ ಬರದಿರೋ ಸುಮ್ಮನಿರದಿರೋ ಅದರ ಆಸೆ ಏನಿರುವುದೋ
ಗಂಡು : ಪ್ರೇಮವೇ ಆ.. ಪ್ರಾಣವು ಪ್ರಣಯವೇ ಆದರಾಸೆಯು
ಹೆಣ್ಣು : ಹೃದಯದಾ ಮಾತಿದು ಆಣೆಗೆ ಸಾಲದು ನಿನ್ನನಾ ಪ್ರೀತಿಸುವೆ
ಗಂಡು : ಬಯಸಿದ ಕನಸಿದು ಮಾತಿದು ನಿಲಕರು ನಿನ್ನ ನಾ ಪ್ರೀತಿಸುವೆ
           ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ ದೇಹದಲ್ಲಿ ಬಂದು ಸೇರೆ ಪ್ರಿಯ
            ಹೃದಯದ ಗೂಡಿಗೆ ಒಲವಿನಾ ಹಣತೆಗೇ ಜ್ಯೋತಿ ನೀ ಬಾರೇ ಪ್ರಿಯ
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಈ ದಿನ ನಮ್ಮದು ನಾಳೆಯೋ ಅವನದು 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  ಮಂಜುಳಾ ಗುರುರಾಜ 

`ಗಂಡು : ಈ ದಿನ ನಮ್ಮದು ನಾಳೆಯೋ ಅವನದು ಜೀವನಾ ನಮ್ಮದು ಆಜ್ಞೆಯೋ ಅವನದು
             ನಾಳಿನ ಆಸೆಗೆ ಈ ದಿನ ಆಸರೆ ಬಾಳಿನಾ ಮೋಡಿಗೆ ಪ್ರೇಮವೇ ಕೈಸೆರೆ
             ನಾಳಿನಾ ದಾರಿಮೇಲೆ ಹೂವ ಹಾಕಿ ಪ್ರೀತಿಸುವ
            ಈ ದಿನ ನಮ್ಮದು ನಾಳೆಯೋ ಅವನದು ಜೀವನಾ ನಮ್ಮದು ಆಜ್ಞೆಯೋ ಅವನದು

ಗಂಡು : ಎಲ್ಲಾರು ಕಾಣದ ಪ್ರೇಮದ ಗಿಳಿಗೆ ಕಾಯುವರು ಹುಡುಕಾಡುವರು
           ಇಂದಲ್ಲ ನಾಳೆಯೋ ಬೆರೆಯುವ ಘಳಿಗೆ ನೆನೆಯುವರು ಕವಿಯಾಗುವರು
           ಆಕಾಶ ಬೆಳಗೋ ಚಂದಿರನಾ ಹಿಡಿಯುವ ಕನಸಿನಲಿ
           ಸಂಗಾತಿ ದೊರೆತಾ ಮರು ನಿಮಿಷ ಕುಣಿಯುವ ವಯಸ್ಸಿನಲಿ
           ಬಯಸಿದಾ ವಿಷಯವಾ ಪಡೆಯಲು ತಪಿಸುವ ನೋವಲೂ ಸುಖವಿದೆ
          ನಾಳಿನ ದಾರಿ ನೋಡಿ ನಾವು ಬಾಳ ಪ್ರೀತಿಸುವ
          ಈ ದಿನ ನಮ್ಮದು ನಾಳೆಯೋ ಅವನದು ಈ ದಿನ ನನ್ನದು ನಾಳೆಯೋ ಅವಳದು
ಹೆಣ್ಣು : ಪ್ರೀತಿಗೆ ಪ್ರೀತಿಯ ಬೆರೆಸಿದ ದಿನಕೆ ಸ್ವಾಗತವು ಶುಭಾಶಯವು
ಗಂಡು : ಈ ದಿನ ನಮ್ಮದು ನಾಳೆಯು ನಮ್ಮದು ಪ್ರೇಯಸಿ ಇದ್ದರೇ ಸ್ವರ್ಗವೇ ನಮ್ಮದು
           ನನ್ನವಳು ಈ ದಿನ ಬಂದಳು ನೋಡೇ ಓ.. ನಾಳೆ ನೀ ಬರಬೇಡ
ಹೆಣ್ಣು : ನನ್ನವನ ಬೆರೆತೆನು ನೋಡೇ ಓ.. ವೇಳೆ ನೀ ನಡೀಬೇಡ
ಗಂಡು : ಸಂಗೀತ ಹಾಡಿದೆ ಹರುಷದಲಿ ಒಲವಿನ ಹೃದಯ
ಹೆಣ್ಣು : ಚಕೋರವಾಗಿದೆ ಚಂದ್ರಮನಾಹುಣ್ಣಿಮೆಯಾ ಉದಯ
ಗಂಡು : ಪ್ರೇಮದಾ ಕೂಗಿಗೆ ದೂರವೇ ಇಲ್ಲವೇ
ಹೆಣ್ಣು : ಪ್ರೇಮದಾ ಚಿಂತೆಯು ಭಾರವೇ ಇಲ್ಲವು
ಇಬ್ಬರು : ನಾಳೆಯೇ ಇಂದು ಸೇರಲೆಂದು ಓಡಿ ಬಂದಿಹುದು
             ಈ ದಿನ ನಮ್ಮದು ನಾಳೆಯೋ ಅವನದು ಜೀವನಾ ನಮ್ಮದು ಆಜ್ಞೆಯೋ ಅವನದು
             ನಾಳಿನ ಆಸೆಗೆ ಈ ದಿನ ಆಸರೆ ಬಾಳಿನಾ ಮೋಡಿಗೆ ಪ್ರೇಮವೇ ಕೈಸೆರೆ
             ನಾಳಿನಾ ದಾರಿಮೇಲೆ ಹೂವ ಹಾಕಿ ಪ್ರೀತಿಸುವ
            ಈ ದಿನ ನಮ್ಮದು ನಾಳೆಯೋ ಅವನದು ಜೀವನಾ ನಮ್ಮದು ಆಜ್ಞೆಯೋ ಅವನದು
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಓ.. ಸ್ನೇಹಿತರೇ .. ಓ.. ಸೋದರರೇ ಸುಂದರ ಲೋಕದಲಿ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  

ಓ.. ಸ್ನೇಹಿತರೇ ... ಓ..ಸೋದರರೇ ...
ಸುಂದರ ಲೋಕದಲ್ಲಿ ತಂದೆಯ ಕಾಣದ ಹಕ್ಕಿಯ ಒಂದು ಹಾಡಿದು
ಹೆತ್ತರು ತಾಯಿ ತನ್ನ ಜನ್ಮದ ಮೂಲವ ಹೇಳದೆ ಹೋದ ನೋವಿದು
ಲೋಕದ ಕ್ರೂರ ಕಣ್ಣು ಕೇಳುವ ಪ್ರಶ್ನೆಗೇ ಉತ್ತರ ಹೇಳಲಾಗದು
ಸುಂದರ ಲೋಕದಲ್ಲಿ ತಂದೆಯ ಕಾಣದ ಹಕ್ಕಿಯ ಒಂದು ಹಾಡಿದು
ಹೆತ್ತರು ತಾಯಿ ತನ್ನ ಜನ್ಮದ ಮೂಲವ ಹೇಳದೆ ಹೋದ ನೋವಿದು
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಓ.. ಸ್ನೇಹಿತರೇ .. ಓ.. ಸೋದರರೇ ಸುಂದರ ಲೋಕದಲಿ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  

ಓ.. ಸ್ನೇಹಿತರೇ ... ಓ..ಸೋದರರೇ ...
ಸುಂದರ ಲೋಕದಲ್ಲಿ ಎಲ್ಲಾರ ಪ್ರೇಮವೂ ಅಂಬಾರಿ ಮೇಲೆ ಸಾಗದು
ಪ್ರೇಮದ ಕಾಶಿಯಲಿ ಎಲ್ಲಾರ ಆಶೆಯು ಆನಂದವಾಗಿ ಸಾಗದು
ದೇವರ ರಾಜ್ಯದಲ್ಲಿ ಎಲ್ಲಾರ ಬಾಳಿಗೆ ಒಪ್ಪಿಗೆ ಇರದು
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೋ ಬಲು ತೊಂದರೆಯೋ
ಯಾಕೇ ಅಂದ್ರೆ ಕಾರಣವಿಷ್ಟೇ ಅವರಿಗೆ ಅನುಭವ ಇಲ್ಲಯ್ಯೋ
ಸುಂದರವಾದ ಪ್ರೀತಿಗೆ ಇಲ್ಲಿ ಬಂಧು ಬಳಗದ ತೊಂದರೆಯೋ
ಯಾಕೆ ಅಂದ್ರೆ ಕಾರಣವಿಷ್ಟೇ ಬಂಧುಗಳಿರುವುದೇ ತೊಂದರೆಗೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೋ ಬಲು ತೊಂದರೆಯೋ

ಪ್ರೀತಿ ಮಾಡೋ ಆಗ ಲೋಕ ತೆಪ್ಪಗೇ ಇರುವುದು ತಾನೇ ತೆಪ್ಪೆಗೇ ಇರುವುದು ತಾನೇ
ಓಯ್ ಲೋಕ ಎದ್ದು ಮಾತಾಡೋದು ಮದುವೆ ಅಂದರೇ ತಾನೇ ಓಯ್.. ಮದುವೆ ಅಂದರೇ ತಾನೇ..
ಬಂಧು ಬಳಗ ಯಾರಿಗೆ ಬೇಕು ಯಾರಿಗೆ ಬೇಕು ಯಾರಿಗೆ ಬೇಕು
ಬಾಳೆ ಎಲೆಯ ಊಟಕೆ ಬೇಕೋ ಬಬಬಂ ಬಬಬಂ ಬಂ
ತಿಂದು ಉಂಡು ಬಯ್ಯೋರಿಂದ ತೊಂದರೆಯೋ ಬಲು ತೊಂದರೆಯೋ
ಯಾಕೆ ಅಂದ್ರೆ ಕಾರಣವಿಷ್ಟೇ ನಿಮ್ಮನೆ ಅಡಿಗೆ ಹುಳಿ ಇದೆಯೋ
ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೋ ಬಲು ತೊಂದರೆಯೋ

ಓಯ್.. ಜಾತಿ ನೀತಿ ಅಪ್ಪ ಅಮ್ಮ ಶಾಸ್ತ್ರಕೆ ಮುಖ್ಯ ತಾನೇ ಶಾಸ್ತ್ರಕೆ ಮುಖ್ಯ ತಾನೇ
ಹೆಣ್ಣು ಗಂಡು ಮದುವೆಗೆ ಮಧ್ಯ ಪ್ರೀತಿ ಮುಖ್ಯ ತಾನೇ ಪ್ರೀತಿ ಮುಖ್ಯ ತಾನೇ
ಪ್ರೀತಿ ಎಲ್ಲಾ ರೂಮಿನ ಒಳಗೆ ರೂಮಿನ ಒಳಗೆ ರೂಮಿನ ಒಳಗೆ
ಜಾತಿ ನೀತಿ ಬೀದಿಯ ಹೊರೆಗೆ ಬಬಬಂ ಬಬಬಂ ಬಂ 
ಪ್ರೀತಿ ಎದ್ದು ಬೀದಿಗೆ ಬಂದ್ರೆ ಪ್ರಾಣಿ ನಾವು ಒಂದೇನೇ 
ಪ್ರೇಮ ಬೇರೆ ಕಾಮ ಬೇರೆ ನಿನ್ನಯ ವಾದವೂ ಸೊನ್ನೆನೇ... ಹ್ಹಾಂ ... ಹ್ಹಾಂ .. 
ಸಂಸಾರಸ್ಥರ ಬೀದಿಗಳಲ್ಲಿ ಪ್ರೀತಿಯ ಹುಚ್ಚರ ತೊಂದರೆಯೋ 
ಯಾಕೆ ಅಂದ್ರೆ ಕಾರಣವಿಷ್ಟೇ ಪೋಲಿ ಸಿನಿಮಾ ಹೆಚ್ಚಿದೆಯೋ 
ಪ್ರೀತಿ ಹೆಸರಲಿ ಸ್ವೇಚ್ಛಾಚಾರ ಬೆಳೆಸಿದರೇ ಬಲು ತೊಂದರೆಯೋ ಬಲು ತೊಂದರೆಯೋ 
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ತಾಯಿ ಪ್ರೀತಿಯಲ್ಲಿಯೇ ದೋಷ ಕಂಡಿತೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  ಮಂಜುಳಾ ಗುರುರಾಜ 

ಹೆಣ್ಣು : ತಾಯಿ ಪ್ರೀತಿಯಲ್ಲಿಯೇ ದೋಷ ಕಂಡಿತೇ
ಗಂಡು : ನಾವು ನಿಂತ ಭೂಮಿಯೇ ಬಾಯಿ ಬಿಟ್ಟಿತೇ
ಹೆಣ್ಣು : ನನ್ನ ಕೈಯ ಕೂಸಿದು ಕೆಂಡವಾಯಿತೇ
ಗಂಡು : ನಾನು ನಂಬೋ ದೇವರೇ ಮೋಸ ಮಾಡಿತೇ
ಹೆಣ್ಣು : ಬಾನೇ ಭೂಮಿಗೆ ಬಿದ್ದರೆ ಅರಾರಿರಾರೋ ಯಾರ್ಯಾರಿಗ್ಯಾರೋ
ಗಂಡು : ನಾವೀಗ ಇಲ್ಲಿ ಯಾರ್ಯಾರಿಗ್ಯಾರೋ
ಹೆಣ್ಣು : ತಾಯಿ ಇಲ್ಲದಿದ್ದರೇ ಕಂದನಿಲ್ಲವೋ
ಗಂಡು : ಕಂದನಿಗೆ ಮೂಲವೇ ತಂದೆಯಲ್ಲವೇ..
ಹೆಣ್ಣು : ಬಾನೇ ಭೂಮಿಗೆ ಬಿದ್ದರೆ ಅರಾರಿರಾರೋ ಯಾರ್ಯಾರಿಗ್ಯಾರೋ

ಹೆಣ್ಣು : ತಾಯಿ ಆಣೆಗೂ ದೊಡ್ಡ ಸತ್ಯ ಯಾವುದು ತಾಯಿ ಬಾಷೆಗೂ ದೊಡ್ಡ ಬಾಷೆ ಯಾವುದೂ ಆವೇಶ ಯಾವುದು 
ಗಂಡು : ಲೋಕ ನಿಂದೆಗೂ ದೊಡ್ಡ ಶೂಲ ಯಾವುದು ಆ ಋಣ ದ್ರೋಹಕೂ ದೊಡ್ಡ ಪಾಪ ಯಾವುದು ಪರಿತಾಪ ಯಾವುದು 
ಹೆಣ್ಣು : ಊರ ಮಾತಿಗೇ ನೀ ಏಕೇ ಅಂಜುವೇ 
ಗಂಡು : ಸತ್ಯ ಹೇಳಲೂ ನೀನೇಕೆ ಅಂಜುವೇ 
ಹೆಣ್ಣು : ತಾಯಿ ಪ್ರೀತಿಯೇ ದೋಷ ಕಂಡಿತೇ 
ಗಂಡು : ನಾನು ನಿಂತ ಭೂಮಿಯೇ ಬಾಯಿ ಬಿಟ್ಟಿತೇ 
ಹೆಣ್ಣು : ಬಾನೇ ಭೂಮಿಗೆ ಬಿದ್ದರೆ ಅರಾರಿರಾರೋ ಯಾರ್ಯಾರಿಗ್ಯಾರೋ

ಹೆಣ್ಣು : ಜೀವರಾಶಿಗೆ ತಾಯಿ ಭೂಮಿಯಲ್ಲವೇ ತಾಯಿಯಿಂದಲೇ ಎಲ್ಲ ಸೃಷ್ಟಿಯಲ್ಲವೇ ಪ್ರೇಮ ದೃಷ್ಟಿಯಲ್ಲವೇ 
ಗಂಡು : ಭೂಮಿ ತಾಯಿಗೆ ಸೂರ್ಯ ಗಂಡನಲ್ಲವೇ ಗಾಳಿ ನೀರಿಗೂ ಸೂರ್ಯ ತಂದೆಯಲ್ಲವೇ ಶಕ್ತಿ ಮೂಲವಲ್ಲವೇ  
 ಹೆಣ್ಣು : ಪ್ರೇಮದಿಂದಲೇ ನಾ ಹೊತ್ತು ಸಾಕಿದೆ 
ಗಂಡು : ಏಕೆ ಸಾಕಿದೆ ನೀ ನನ್ನ ಕೊಲ್ಲದೇ 
ಹೆಣ್ಣು : ಮಾತಿನಿಂದ ಕೊಂದರೆ ಪ್ರಾಣ ಹೋಗದೂ 
ಹೆಣ್ಣು : ಬಾನೇ ಭೂಮಿಗೆ ಬಿದ್ದರೆ ಅರಾರಿರಾರೋ ಯಾರ್ಯಾರಿಗ್ಯಾರೋ 
ಗಂಡು : ನಾವೀಗ ಇಲ್ಲಿ ಯಾರ್ಯಾರಿಗ್ಯಾರೋ
ಹೆಣ್ಣು : ತಾಯಿ ಇಲ್ಲದಿದ್ದರೇ ಕಂದನಿಲ್ಲವೋ
ಗಂಡು : ಕಂದನಿಗೆ ಮೂಲವೇ ತಂದೆಯಲ್ಲವೇ..
ಹೆಣ್ಣು : ಬಾನೇ ಭೂಮಿಗೆ ಬಿದ್ದರೆ ಅರಾರಿರಾರೋ ಯಾರ್ಯಾರಿಗ್ಯಾರೋ
ಗಂಡು : ಪ್ರೀತಿಯಲ್ಲಿ ಸತ್ಯವ ಕೊಲ್ಲಬಾರದು 
ಹೆಣ್ಣು : ತಾಯಿ ಪ್ರೀತಿಯಲ್ಲಿಯೇ ದೋಷ ಕಂಡಿತೇ
ಗಂಡು : ನಾವು ನಿಂತ ಭೂಮಿಯೇ ಬಾಯಿ ಬಿಟ್ಟಿತೇ
ಹೆಣ್ಣು : ನನ್ನ ಕೈಯ ಕೂಸಿದು ಕೆಂಡವಾಯಿತೇ
ಗಂಡು : ನಾನು ನಂಬೋ ದೇವರೇ ಮೋಸ ಮಾಡಿತೇ 
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಕಲ್ಯಾಣವಾಗಲಿ ಸುಂದರ ಲೋಕದ ಗೂಡು 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  ಮಂಜುಳ ಗುರುರಾಜ 

ಕೋರಸ್ : ಕಲ್ಯಾಣವಾಗಲೀ ಸುಂದರ ಲೋಕದ ಗೂಡು ಪ್ರಖ್ಯಾತವಾಗಲೀ ಸುಂದರ ಲೋಕದ ಹಾಡು
                ಎಲ್ಲಾರ ಬಾಳಿಗಿರಲೀ ತಮಸುಪ್ರಭಾತ ಎಲ್ಲಾ ಬಾಯಿಗಿಡಿರಿ ಸಿಹಿ ಕೇಸರೀ ಭಾತ
ಹೆಣ್ಣು : ಅರೋಗ್ಯ ತುಂಬಲಿ ನನ್ನಯ ಕರುಳಿನ ಕುಡಿಗೆ ಆಯುಷ್ಯ ಹೆಚ್ಚಲಿ ನನ್ನಯ ಕನಸಿನ ಮರಿಗೇ
          ರವಿ ಚಂದ್ರ ನನಗೆ ಮಗನು ನಾನವನ ಮಾತಾ ಅವನೆಂದೂ ಮೀರಲಾರ ಈ ತಾಯಿ ಮಾತಾ
ಗಂಡು : ಗುಡ್ ಮಾರ್ನಿಂಗ್ ... ಗುಡ್ ಮಾರ್ನಿಂಗ್
ಹೆಣ್ಣು : ಮುದ್ದಿನ ಕೂಸಿಗೆ ಗುಡ್ ಮಾರ್ನಿಂಗ್
ಗಂಡು : ಮುತ್ತಮ್ಮ ಮುತ್ತಮ್ಮ
ಹೆಣ್ಣು : ಫೋನಿಗೇ ಕೆನ್ನೆ ಒತ್ತಮ್ಮ
ಗಂಡು : ಅಮ್ಮನ ಮುತ್ತೇ ಟಾನಿಕ್ಕು ಏನಿದೇ ಅದರಲಿ ಮ್ಯಾಜಿಕ್ಕೂ
ಹೆಣ್ಣು : ಮಕ್ಕಳು ಮಾಡುವ ಕಾಮಿಕ್ಕೂ ಅಮ್ಮನ ಕಿವಿಗೇ ಮ್ಯೂಸಿಕ್ಕು
ಗಂಡು : ಕೇಳಲೇ ನನ್ನಮ್ಮ ನನ್ನ ದೇವರು ನೀನಮ್ಮ
ಹೆಣ್ಣು : ಕೇಳೆಲೋ ಕಂದಮ್ಮ ನನ್ನ ಪ್ರಾಣವೇ ನೀನಮ್ಮಾ
ಗಂಡು : ಪ್ರೇಮಾನಾ ಸೌಖ್ಯಾನಾ           
ಹೆಣ್ಣು  : ಜೋಪಾನಾ ಪ್ರಾಯಾನಾ
ಗಂಡು : ಊದು ಊದು ತುತ್ತೂರಿ ಇಂಪು ಕನ್ನಡ ಸೋಂಪು ಕನ್ನಡ
ಹೆಣ್ಣು : ಫೋಟೋಗ್ರಾಫ್ ಬೇಕು ಸಾರ್ ಆಟೋಗ್ರಾಫ್ ಹಾಕಿ ಸಾರ್
ಗಂಡು : ಹೆತ್ತಮ್ಮನಾಣೆಯಾ ಎಂದಿಗೂ ಮೀರೆನು ನಾನು ನಮ್ಮಮ್ಮನೊಪ್ಪುವ ಸೊಸೆಯನು ಸೇರುವೇ ನಾನು
            ಕಂಡೋರ ಊಟದಲ್ಲಿ ಕೈ ಹಾಕಲಾರೇ ರೂಪಾಯಿ ನೋಟಿನಲ್ಲಿ ಸಹಿ ಮಾಡಲಾರೇ
ಹೆಣ್ಣು : ಎಲ್ಲ ಬನ್ನಿರಿ ಬೇಗ ಕೇಳಿ ಇಲ್ಲಿ ನೋಡಿ ಇಲ್ಲಿ ರೇಡಿಯೊಲ್ಲೂ ಹಾಡ್ತಾನೇ ಟಿ.ವಿ.ಯಲ್ಲೂ ಕಾಣ್ತಾನೇ
ಗಂಡು : ಕೋಟಿ ಕೋಟಿ ದೇವರಲ್ಲಿ ನಾನು ಬೇಡಿ ಬಂದೆ ಕನ್ನಡಾಂಬೆ ಭೂಮಿಯಲ್ಲಿ ಜನ್ಮತಾಳಿ ನಿಂದೆ
           ಹಾಡುವ ಬಾಯಿಗೆ ಅನ್ನವೇ ಕನ್ನಡ ಬಾಳಿನ ದಾರಿಗೆ ದೀಪವೇ ಕನ್ನಡ ಕಸ್ತೂರಿ ಕಸ್ತೂರಿ ಕನ್ನಡ ಬಾಷೆಯೇ ಕನ್ನಡ

ಗಂಡು : ಎರಡು ಜೀವ ಇದೆ ನನಗೆ ಒಂದು ತಾಯಿ ಒಂದು ಹಾಡು ಪ್ರಭಾವವೋ ತಾಯಿಂದ ಪ್ರಖ್ಯಾತಿಯೋ ಹಾಡಿಂದ
ಕೋರಸ್ : ಮುಂದೆಂದೂ ಕಣ್ಣಿನ ದೃಷ್ಟಿಯ ತಾಕದೇ ಇರಲೀ ಸಿರಿ ಲಕ್ಷ್ಮಿ ಶಾರದೇ ಕರುಣೆಯು ಬಾಳಲಿ ಬರಲೀ
               ಸಂಗೀತವೆಂದೂ ನಿನಗೆ ವರವಾಗಿ ಉಳಿಯಲಿ ಆ ಕಂಡ ಕಂಬನಿಗಳು ಆದೃಶ್ಯವಾಗಲೀ
ಹೆಣ್ಣು : ಅಮ್ಮನಿಲ್ಲದ ಸೂರು ಊರು ನೀರು ಹೇಗೋ ಏನೋ ಜರ್ನಿಯಲ್ಲಿ ಜೋಪಾನ ಮೂಟೆ ಕಟ್ಟು ಕೋಪಾನಾ
ಗಂಡು : ವ್ಯಾಸ ದಾಸ ಪಂಪ ರನ್ನ ನಮ್ಮ ಈ ಕುವೆಂಪು ಮಾಸ್ತಿ ಬೇಂದ್ರೆ ರಾಜರತ್ನ ನನ್ನ ಹಾಡಿನಿಂಪು
            ಒಲಿದರೇ ಹರಸುವ ಜನತೆಗೇ ಹಾಡುವೇ  ದುಡಿದರೇ ನೆನೆಯುವ ನಾಡಿಗೇ ನೀಡುವೇ
            ಸತ್ಯವೇ ತುಂಬಲಿ ಉಸಿರಲಿ ನಿಷ್ಠೆಗೇ ಉಳಿಯಲಿ ಹೆಸರಲಿ ಕಸ್ತೂರಿ ಕಸ್ತೂರಿ ಕನ್ನಡ ಬಾಷೆಯ ಕಸ್ತೂರಿ
            ಟಸ್ಸೂ ಬುಸ್ಸು ಸಂತೇಲಿ ಉದುವೇ ಕನ್ನಡ ಕಸ್ತೂರಿ ಆದರ ನೀಡುವ ನಮ್ಮೂರ ಪ್ರೀತಿ ಮಾಡುವ ನಮ್ಮೋರು
           ಎದ್ದರೆ ಮೇಲಕೆ ಜಯಭೇರಿ ಶಾಂತಿಯ ನಮ್ಮಯ ಸರಿದಾರಿ
           ಕೇಳಲೇ ನನ್ನಮ್ಮ ನನ್ನ ದೇವರು ನೀನಮ್ಮ ಕೇಳಲೇ ನನ್ನಮ್ಮ ನನ್ನ ಪ್ರಾಣ ನೀನಮ್ಮ
          ಕಸ್ತೂರಿ ಕಸ್ತೂರಿ ಕನ್ನಡವೆಂದಿಗೂ ಕಸ್ತೂರಿ    
--------------------------------------------------------------------------------------------------------------------------

ಪ್ರೀತಿ ಮಾಡೋ ಹುಡುಗರಿಗೆಲ್ಲ ( ೨೦೦೨) - ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.  ಮಂಜುಳ ಗುರುರಾಜ, ಹಂಸಲೇಖ  

ಗಂಡು : ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ ಕೊಡೋಕೆ ಬಿಡೋಕೆ ಅದೇನು ಎಳ್ಳು ನೀರಾ ಹ್ಯಾಗೇ
          ಎದೆನಾ ಕೊಡೋಕೆ ವಿಧಾನ ಗೊತ್ತಾ ನಿನಗೇ ತುಟಿ ನಾ ಕೊಡೋಕೆ ಭಯನಾ
           ಅಯ್ಯೋ ನಡುಗುವೆಯಲ್ಲ ತುಟಿ ತೋರಿಸಿ ದುಡುಕಿದರೇ ಮೂತಿಗೆ ಲಾತಾ
          ಪ್ರೇಮವೂ ಗೋತಾ ಮಾನವು ಖೋತಾ  ಎದೆ ತೋರಿಸಿ ಎಡವಿದರೇ
          ಹಣೆಯಲಿ ರಾಮಾ ತಿರುಪತಿ ನಾಮ ಪಡಿವುದು ಪ್ರೇಮಾ
          ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ ಕೊಡೋಕೆ ಬಿಡೋಕೆ ಅದೇನು ಎಳ್ಳು ನೀರಾ ಹ್ಯಾಗೇ

ಗಂಡು : ಲಕಲಕ ಲಕಚಕ ಚಕಚಕ ಬರುವಳು ದಿನವೂ ಮನಸ್ಸನೇ ಕೊಡುವಾಗ ಯಾಕೇ ಅನುಮಾನ
            ವಯಸಲಿ ಇರುವಾಗ ನೀ ಹನುಮಾನ ಜಯ ಹನುಮಾನ ಘನ ಮಹಿಮನ ನೆನೆದೇನು ದಿನವೂ
            ಮೊದಲನೇ ಹುಡುಗಿನೇ ಸಾಯುವವರೆಗೂ ತಡೆಯುವೇ ಅಂಥೋಳು ಬೀಳುವವರೆಗೂ
            ಅಣ್ಣಾ ಅಣ್ಣಾ ಬ್ಯಾಡಣ್ಣ ರಾಂಗು ನಾ ನಿನ್ನ ಗ್ಯಾಂಗು
            ಲಾಟರಿಯ ಬಹುಮಾನ ಬೇಡ ಅನ್ನಬೇಡ ಮುಖ ತೋರಿಸಿ ಕೆಡವಿದರೇ
            ಹುಡುಗಿಯ ಸಂಗ ಯೌವ್ವನ ಭಂಗ ಆಗುವೇ ಪೆಂಗ
            ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ ಕೊಡೋಕೆ ಬಿಡೋಕೆ ಅದೇನು ಎಳ್ಳು ನೀರಾ ಹ್ಯಾಗೇ

ಹೆಣ್ಣು : ಸುರಿಯದೆ ಮಳೆ ಬೆಳೆಯದು ಬೆಳೆ ಧರಣಿಯ ಮೇಲೆ ಚೈತ್ರವೂ ಬರದೇನೇ ಕುಹೂ ಕುಹೂ ಇಲ್ಲ
          ಪ್ರೇಮವೂ ಬರದೇನೇ ಗೆಳೆತನವಿಲ್ಲ
ಗಂಡು : ಚಂಚಲೆಯಲಿ ಸಂಚಿಡುವರು ಹುಡುಗರ ಮೇಲೆ ಹೊಂಬೆಯ ಮುಖ ಕೂಡ ರಂಭೆಯ ತರವೋ
           ಬಂದರೇ ಬರಬಾರದು ಹೆಣ್ಣಿನ ಜ್ವರವೂ
ಹೆಣ್ಣು : ಸಾರು ಸಾರು ಮಾಲಿಕರ್ಯಾರಯ್ಯ ಮ್ಯಾನೇಜರ ಯಾರೂ
          ಪಾರ್ಟಿಲೀ ಕುಣೀತಿನಿ ಕರುಣೆಯ ತೋರು
ಗಂಡು : ಬರಿ ಬಾಯಿಲಿ ಕೇಳಿದರೇ ಅನುಭವವೆಲ್ಲ ತಿಳಿಯುವುದಿಲ್ಲ ಕೆಲಸವೂ ಇಲ್ಲ ಹೊಯ್
          ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ ಕೊಡೋಕೆ ಬಿಡೋಕೆ ಅದೇನು ಎಳ್ಳು ನೀರಾ ಹ್ಯಾಗೇ  
          ಎದೆನಾ ಕೊಡೋಕೆ ವಿಧಾನ ಗೊತ್ತಾ ನಿನಗೇ ತುಟಿ ನಾ ಕೊಡೋಕೆ ಭಯನಾ
           ಅಯ್ಯೋ ನಡುಗುವೆಯಲ್ಲ ತುಟಿ ತೋರಿಸಿ ದುಡುಕಿದರೇ ಮೂತಿಗೆ ಲಾತಾ
          ಪ್ರೇಮವೂ ಗೋತಾ ಮಾನವು ಖೋತಾ  ಎದೆ ತೋರಿಸಿ ಎಡವಿದರೇ
          ಹಣೆಯಲಿ ರಾಮಾ ತಿರುಪತಿ ನಾಮ ಪಡಿವುದು ಪ್ರೇಮಾ
          ಕೊಡೋದಾ ಬಿಡೋದಾ ಸಿಟಿ ಹುಡುಗಿಗೇ ಕೊಡೋಕೆ ಬಿಡೋಕೆ ಅದೇನು ಎಳ್ಳು ನೀರಾ ಹ್ಯಾಗೇ
--------------------------------------------------------------------------------------------------------------------------

No comments:

Post a Comment