ಪ್ರೊಫೆಸರ್ ಚಲನಚಿತ್ರದ ಹಾಡುಗಳು
- ನೇಷನಗಾಗಿ ಓದೋದೆಲ್ಲ ನಮಗಳ ಕಾಲ
- ತನುವಿಗೆ ತೋಳಿನಾಸರೇ ಹೃದಯಕೆ ಪ್ರೀತಿ ಆಸರೇ
- ನಮ್ಮ ಪ್ರೇಮ ಬಳ್ಳಿ ತುಂಬಾ ಹಣ್ಣು ಹಣ್ಣು
- ಮಂಡ್ಯಾದ ಯುವರಾಜ ನನ್ನ ಕರಿಸಿದ್ದ ಹೋಗಿದ್ದೆನು
- ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಕೋರಸ್
ಗಂಡು : ರಂಗಾ.. ಕೋರಸ್ : ಎಸ್ ಸಾರ್
ಗಂಡು : ರಾಮ ಕೋರಸ್ : ಪ್ರೆಸೆಂಟ್ ಸಾರ್
ಗಂಡು : ಟೋನಿ ಕೋರಸ್ : ಹಿಯರ್ ಸಾರ್
ಗಂಡು : ಗೋಪಿ ಕೋರಸ್ : ಕಮಿಂಗ್ ಸಾರ್
ಗಂಡು : ಮದನ ಕೋರಸ್ : ಲವ್ವಿಂಗ್ ಸಾರ್
ಗಂಡು : ಹ್ಹಾಂ ..
ಕೋರಸ್ : ಮದನ ಇಜ್ ಎ ಲಾಲಭಾಗ ಪೊದೆ ಆ ಪೊದೆ ಒಳಗಡೆ ಅವನದೇ ಒಂದು ದೊಡ್ಡ ಕಥೆ
ಗಂಡು : ಷಟಾಪ್... ರತಿ.. ಕೋರಸ್ : ಕಿಸ್ಸಿಂಗ್ ಸಾರ್
ಗಂಡು : ಯೂ ಸಿಟ್ ಡೌನ್
ರತಿ ಇಜ್ ವಿಥ್ ಮದನ ಮುತ್ತುಗಳ ಜೊತೆ ಅವ್ರಿಬ್ರುದು ಕದನ
ರತಿ ಇಜ್ ವಿಥ್ ಮದನ ಮುತ್ತುಗಳ ಜೊತೆ ಅವ್ರಿಬ್ರುದು ಕದನ
ನೇಷನ್ ಗಾಗಿ ಓದೋದೆಲ್ಲಾ ನಮ್ಮಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮಗಳ್ ಕಾಲ
ಕೋರಸ್ : ಎತ್ಕೊಂಡು ವೈಲಿನು ಕುಯ್ತಾರೇ ತಲೆಯನ್ನೂ ಕ್ಲಾಸಿಕ್ ಕಚೇರಿ ಬುರುಡೆಗೇ ರಿಪೇರಿ
ಬಿಡ್ತಾರೇ ರೀಲುಗಳ ರೈಲುಗಳ ಚುಕುಬುಕು ಕುಕ್ಕೂಕೂ
ಕ್ರಾಕ್ಸಿ ಕ್ರಾಕ್ಸಿ ಕ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾವ
ಗಂಡು : ನೌ ಬಯಾಲಜಿ ನೌ ಭಯಾಲಾಜಿ ನಮ್ಮ ದೇಹದಲ್ಲಿ
ಆಹ್ ರಕ್ತಕಣಗಳಲ್ಲಿ ಆಹಾ ರೋಗದಾ ಕ್ರಿಮಿಗಳು
ರೋಗದಾ ಕ್ರಿಮಿಗಳು ಹೇಗೆ ಸೇರುವುವು ಉಂಉಂ.. ತಿಳಿಸಿ ಕಾರಣಗಳು
ತಿಳಿಸಿ ಕಾರಣಗಳು ಚುಂಬನದಿಂದ ಆಹಾ ಚುಂಬನದಿಂದ
ಹೆಣ್ಣು : ಏ .. ತುಟಿಯಿಂದ ಆಹಹ ಅಪ್ಪುಗೆಯಿಂದ
ಕೋರಸ್ : ಚುಂಬನದಿಂದ ಅಹಹ ಚುಂಬನದಿಂದ ಅಪ್ಪುಗೆಯಿಂದ ಆಹಹ್ ಅಪ್ಪುಗೆಯಿಂದ
ಚುಂಬನದಿಂದ ಅಪ್ಪುಗೆಯಿಂದ ಚುಂಬನ ಅಪ್ಪುಗೆ
ಚುಂಬನ ಅಪ್ಪುಗೆ ಹೇಯ್ ಮುಕ್ತಿ ಮುಕ್ತಿ ಡಿಗ್ರಿ ಪಡೆಯೋದು ಹಳೇ ಟ್ರೆಂಡು
ಮಣ್ಣು ಮುಕ್ಕಿ ಡಿಗ್ರಿ ಪಡೆಯೋದು ಹಳೇ ಟ್ರೆಂಡು
ದುಡ್ಡು ಕಕ್ಕಿ ಡಿಗ್ರಿ ಪಡೆಯೋದು ಹೊಸ ಟ್ರೆಂಡು
ಒಳ್ಳೊಳ್ಳೆ ಪೀಸುಗಳೂ ಪುಗಸಟ್ಟೆ ಪೋಜುಗಳೂ
ನೋಡೋರೆ ಕಿಂಗುಗಳೂ ಹೋದೋರೇ ಮಂಗಗಳೂ
ದಿನವೆಲ್ಲ ಲೈನಿಂಗೂ ಲಿಂಕಿಂಗೂ ಲವ್ವಿಂಗೂ ಮಾಮ .. ಮಾಮ..
ಕ್ರಾಕ್ಸಿ ಕ್ರಾಕ್ಸಿ ಕ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾವ
ಗಂಡು : ಮದವೇರೋ ಮಾತ್ರೆ ಗುಂಗೇರೋ ಸೂಜಿ ತಲೆಗೇರಿ ಕಾಲೇಜೆಲ್ಲ ಗಿರಗಿರ ಗಿರ
ನಮ್ಮ ಮೇಷ್ಟ್ರು ಬಾಂಡ್ಲಿ ಮೇಡಮ್ಮು ಬೋಂಡ ಬಾಂಡ್ಲಿಲಿ ಬೋಂಡ ಬಿದ್ದು ಚುರ ಚುರ
ಗುರುವಿಗೆ ಬಂದು ಗುದ್ದಿರುವ ಧೂಮಕೇತುವಿನ ತುಂಡುಗಳೇ
ವಿದ್ಯಾ ಹತ್ಯೆಗೆ ನಿಂತಿರುವ ಭಸ್ಮಾಸುರನ ಬಾಂಬುಗಳೇ
ಪುಸ್ತಕ ನಮ್ಮದೂ ಮಸ್ತಕ ನಿಮ್ಮದೂ ಫಂಡು ನಮ್ಮದೂ ಟ್ರೆಂಡು ನಮ್ಮದೂ
ಹಿಡಿಯೋ ಮೈಕು ಮಾಡೋ ಸ್ಟ್ರೈಕು ಲಬೋ ಲಬೋ ಲಬೋ
ನೇಷನ್ ಗಾಗಿ ಓದೋದೆಲ್ಲಾ ನಮ್ಮಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮಗಳ್ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮಗಳ್ ಕಾಲ
--------------------------------------------------------------------
ಪ್ರೊಫೆಸರ್ (೧೯೯೫) - ತನುವಿಗೆ ತೋಳಿನಾಸರೇ ಹೃದಯಕೆ ಪ್ರೀತಿ ಆಸರೇ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಲತಾ ಹಂಸಲೇಖ
ಹೆಣ್ಣು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಗಂಡು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಹೆಣ್ಣು : ದೇವರಿಗಿಂತ ದೇಗುಲಕ್ಕಿಂತ ನೀನು ಪ್ರಿಯ
ಗಂಡು : ದೇವರು ನೀಡೋ ಐಸಿರಿಗಿಂತ ನೀನೇ ಪ್ರಿಯ
ಹೆಣ್ಣು : ಹೃದಯವೇ ದೇಗುಲ ಇದರಲಿ ಇನಿಯನ ವಾಸ
ಗಂಡು : ಓ ನನ್ನ ಪ್ರಿಯೆ ನಾನು ತೀರ ನೀನು ಗಂಧ ಬಾ
ಹೆಣ್ಣು : ಓ ನನ್ನ ಪ್ರಿಯ ನಾನು ಜೀವ ನೀನು ಭಾವ ಬಾ
ಗಂಡು : ಮರೆಯಬೇಡ.. ಮರೆಯಬೇಡ..
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಹೆಣ್ಣು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಗಂಡು : ಹುಣ್ಣಿಮೆಯಂತೆ ಹುಣ್ಣಿಮೆಯಂತೆ ನೀನು ಚಿನ್ನ
ಹೆಣ್ಣು : ಹುಣ್ಣಿಮೆ ಬಂದು ಮಂದಿರ ಕಂಡೆ ನೀನು ರನ್ನ
ಗಂಡು : ಬೆಳಕಿನ ಮನೆಯಲ್ಲಿ ಮುರಿಯದ ಮನಗಳ ವಾಸ
ಹೆಣ್ಣು : ಓ.. ನನ್ನ ರನ್ನ ನಾನು ಬೇರೆ ಏನು ಬಾ
ಗಂಡು : ಓ ನನ್ನ ಚಿನ್ನ ನಾನೇ ನೀನು ನೀನೇ ನಾನು ಬಾ
ಹೆಣ್ಣು : ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
ಗಂಡು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
--------------------------------------------------------------------
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ... ನನಗೆ ನೀನೇ ಆಸರೆ
--------------------------------------------------------------------
ಪ್ರೊಫೆಸರ್ (೧೯೯೫) - ನಮ್ಮ ಪ್ರೇಮ ಬಳ್ಳಿ ತುಂಬಾ ಹಣ್ಣು ಹಣ್ಣು
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಮಂಜುಳ ಗುರುರಾಜ
ಹೆಣ್ಣು : ನಮ್ಮ ಪ್ರೇಮಬಳ್ಳಿ ತುಂಬ ಹಣ್ಣು ಹಣ್ಣು ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನೂ ಮಕ್ಕಳು ಸಾಕು
ಗಂಡು : ನೋ ನೋ ನೋ ನೋ ನೋ ನೋ ನೋ ನೋ ನೋ
ಹೆಣ್ಣು : ನಮ್ಮ ಪ್ರೇಮಬಳ್ಳಿ ತುಂಬ ಹಣ್ಣು ಹಣ್ಣು ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನೂ ಮಕ್ಕಳು ಸಾಕು ಸ್ವಲ್ಪ ಪ್ರೀತಿ ಮಕ್ಕಳಿಗೂ ಬೇಕು ಬೇಕು
ಗಂಡು : ಬೇಕು ಬೇಕು ಹೆಣ್ಣು : ಸಾಕು ಸಾಕು
ಗಂಡು : ನಮ್ಮ ಪ್ರೇಮಬಳ್ಳಿ ಒಂದು ಕೆಂಪು ಹೆಣ್ಣು ಹತ್ತು ಹೆಣ್ಣು ಹೆತ್ತೋ ಕರೆಯೋ ತುಂಟ ಕಣ್ಣು
ಬೇಕು ಬೇಕು ನನಗೀಗ ನೀನು ಬೇಕು ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು ಗಂಡು : ಬೇಕು ಬೇಕು
ಹೆಣ್ಣು : ಗಂಡನೆಂದರೇ ಹೀಗೆ ಇರಬೇಕು ಹೆಂಡ್ತಿ ಎಂದರೆ ಜೀವ ಬೀಡಬೇಕು
ಸರಸಕೆ ಒಂದು ಸಮಯವ ಒಂದು ಕೋಣೆಯ ತೆಗೆದಿಡಬೇಕು
ಗಂಡು : ಹತ್ತು ಹೆತ್ತರೂ ಯಾಕೆ ಬಿಂಕ ಈ ಮುತ್ತು ಮುತ್ತಿಗೆ ಪಡಿ ಸುಂಕ
ನೀನು ಕೊಟ್ಟರೇ ಒಳ್ಳೆ ನಗು ನಾನು ಕೊಡುವೆ ಒಳ್ಳೆ ಮಗು
ಹೆಣ್ಣು : ನಮ್ಮ ಪ್ರೇಮಬಳ್ಳಿ ತುಂಬ ಹಣ್ಣು ಹಣ್ಣು ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನೂ ಮಕ್ಕಳು ಸಾಕು ಸ್ವಲ್ಪ ಪ್ರೀತಿ ಮಕ್ಕಳಿಗೂ ಬೇಕು ಬೇಕು
ಗಂಡು : ಬೇಕು ಬೇಕು ಹೆಣ್ಣು : ಸಾಕು ಸಾಕು
ಮಕ್ಕಳು : ಅಮ್ಮನಿಗೂ ಅಪ್ಪನಿಗೂ ಮುಂದಕೆ ಹೋಗದು ವಯಸು ವಯಸು ಚಿಕ್ಕ ವಯಸು
ಇಬ್ಬರಿಗೂ ಮೂರೂ ಹೊತ್ತು ಪಪ್ಪಿಗಳೇ ತಿನಿಸೂ ತನಿಸು ತಿಂಡಿ ತಿನಿಸು
ಗಂಡು : ಮಕ್ಕಳಾಗುವ ನಾವು ಮಕ್ಕಳಾಗುವ ಮುಪ್ಪು ಬಂದ್ರು ಇದೆ ತಪ್ಪು ಮಾಡುವ
ಪ್ರೀತಿಗೆ ಸಂಸಾರಕೆ ಒಂದು ವಯಸ್ಸಿನ ಇತಿಮಿತಿ ಇಲ್ಲ
ಹೆಣ್ಣು : ಹೆತ್ತು ಹೆತ್ತು ಸುಣ್ಣವಾದೇ ಗಂಡು : ಪಾಪ
ಹೆಣ್ಣು : ನಾ ಮುತ್ತು ತಿಂದು ಸಣ್ಣಗಾದೆ ಗಂಡು : ಚು ಚ್ಚು..ಚು ಚ್ಚು..
ಹೆಣ್ಣು : ಇನ್ನು ಹೆತ್ತರೇ ನಾನು ಮುಂದೆ ಗಂಡು : ಆಂ.. ಆಂ... ಆಂ..
ಹೆಣ್ಣು : ಆ ಪುಟ್ಟ ಶಾಲೆಗೇ ನೀವು ತಂದೇ
ಗಂಡು : ನನ್ನ ಪ್ರೇಮ ಬಳ್ಳಿ ಒಂದು ಕೆಂಪು ಹೆಣ್ಣು...
-------------------------------------------------------------------
ಪ್ರೊಫೆಸರ್ (೧೯೯೫) - ಮಂಡ್ಯಾದ ಯುವರಾಜ ನನ್ನ ಕರಿಸಿದ್ದ ಹೋಗಿದ್ದೆನು
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಲತಾ ಹಂಸಲೇಖ
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ ಎಲ್ಲಿದ್ದೆ ಜಾಣಮರಿ
ಮಗು : ಮಂಡ್ಯಾದ ಯುವರಾಜ ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ ತೋರೆಂದರು ನನ್ನಕ್ಕ ರತಿ ಎಂದೇನೂ
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ ಮುಂದೇನು ಹೇಳು ಮರಿ
ಹೆಣ್ಣು : ಓ ಸುಂದರ ಪುರುಷ ಮಂಡ್ಯದ ಮನುಷ್ಯ
ರತಿಯ ನೋಡು ಹೊಗಳಿ ಹಾಡು ಚೆನ್ನಾಗಿ ಪ್ರೀತಿ ಮಾಡು
ಗಂಡು : ಓ.. ಚಂದ್ರಮುಖಿಯೇ ಪ್ರೇಮದ ಸಖಿಯೇ
ಹೃದಯ ತೆರೆದು ಪ್ರೀತಿ ಸುರಿದು ಮಾತಾಡು ಮೌನ ಮುರಿದು
ಹೆಣ್ಣು : ಅಂಬರಕೆ ಹೋಲುವಂಥ ಅಂಬರೀಷನೇ ಹೃದಯ ಕದಿಯೋದು ಬೇಡ
ಗಂಡು : ನಿನ್ನ ಕಣ್ಣ ಬಾಣದಿಂದ ನನ್ನ ಗೆಲ್ಲಲು ಒಮ್ಮೆ ಕಣ್ಣಿಟ್ಟು ನೋಡಾ
ಮಗು : ಮಂಡ್ಯಾದ ಯುವರಾಜ ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ ತೋರೆಂದರು ನನ್ನಕ್ಕ ರತಿ ಎಂದೇನೂ
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ ಮುಂದೇನು ಹೇಳು ಮರಿ
ಹೆಣ್ಣು : ಓ ಹತ್ತಿರ ಬಾ ನೀ ನಕ್ಕರೆ ಪ್ರೇಮಿ ಮದನ ಇವನ ಮೇಲೆ ಗಮನ
ನನ್ನನ್ನೂ ಮರೆಯಬೇಡ ಓ..ಮುತ್ತಿನ ಪಮ್ಮಿ ನೀನಿಲ್ಲ ಕಮ್ಮಿ
ಸಂಚು ಹೂಡಿ ಸಂಧಿ ಮಾಡಿ ಜೋಡೀನ ಗೇಲಿಮಾಡಬೇಡ
ಗಂಡು : ನಾವು ಜೋಡಿ ಎಂದು ಈಗ ಒಪ್ಪಿಕೊಂಡಳು ನನ್ನ ಮನಗೆದ್ದ ಪ್ರೇಮಿ
ಹೆಣ್ಣು : ನನ್ನ ಮುದ್ದು ಪಮ್ಮಿ ಕಂಡ ಪ್ರೀತಿ ನಂಟನು ಹೇಗೆ ಬೇಡೆನಲಿ ಸ್ವಾಮಿ
ಮಗು : ಮಂಡ್ಯಾದ ಯುವರಾಜ ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ ತೋರೆಂದರು ನನ್ನಕ್ಕ ರತಿ ಎಂದೇನೂ
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ ಮುಂದೇನು ಹೇಳು ಮರಿ
--------------------------------------------------------------------
ಪ್ರೊಫೆಸರ್ (೧೯೯೫) - ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಮಂಜುಳ ಗುರುರಾಜ
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ ಹೆಣ್ಣು : ರತಿಯೂಟ ಬಡಿಸೋಣ
ಗಂಡು : ನಲ್ಲೆ ನಲ್ಲೆ ಕಬ್ಬಿಣ ಜಲ್ಲೇ ರಸಪಾಕ ಮಾಡೋಣ ನಡೀ
ಹೆಣ್ಣು : ನಲ್ಲಾ ನಲ್ಲಾ ಪ್ರೇಮದ ಬೆಲ್ಲ ಬಿಸಿಯಾಗಿ ಉಂಬೋಣ ನಡೀ ..
ಗಂಡು : ಒಲೆಯಂತೆ ತನುವೀಗ ಹೆಣ್ಣು : ಮಧುಪಾತ್ರೆ ಇಡು ಬೇಗ
ಗಂಡು : ಕುದಿಕುದಿಯಲಿ ಹರೆಯ ಹೆಣ್ಣು : ಹಾಲು ಹಿಡಿಯಲಿ ಹೃದಯ
ಗಂಡು : ಕೆನೆಗಟ್ಟಲಿ ಮನಸು ಹೆಣ್ಣು : ಮನ ಮುಟ್ಟಲಿ ಸೊಗಸು
ಗಂಡು : ಪ್ರೀತಿ ಸಂಸಾರದ ಹೊಸ ಜೋಡಿ ಕನಸಿದು
ಹೆಣ್ಣು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಗಂಡು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಹೆಣ್ಣು : ಕಾಮನನ ಕರೆಯೋಣ ಗಂಡು : ರತಿಯೂಟ ಬಡಿಸೋಣ
ಹೆಣ್ಣು : ಬಾರೋ ಕಾಮ ತೋರೋ ಪ್ರೇಮ ನನ್ನೂರ ಪನ್ನೀರ ಹಿಡಿ
ಗಂಡು : ಕಾಮನು ಕಾಮಿ ಬಡಿಸೆ ಪ್ರೇಮಿ ನನ್ನೂರ ಶೃಂಗಾರ ಹಿಡಿ
ಹೆಣ್ಣು : ರುಚಿ ಅಂದ ರತಿಯೂಟ ಗಂಡು : ರುಚಿಗೊಂದು ಮಿತಿ ಉಂಟಾ
ಹೆಣ್ಣು : ಕಾಮಕ್ಕೆ ನೀ ನೆಂಟ ಗಂಡು : ಸ್ನೇಹಕ್ಕೆ ನೀ ಸೆಳೆತ
ಹೆಣ್ಣು : ಗಾಳಿಗೆ ನೀ ಬಂಧ ಗಂಡು : ಜೀವಕೆ ನೀ ಮಿಡಿತ
ಹೆಣ್ಣು : ಪ್ರತಿ ಸಂಸಾರದ ಹೊಸ ಜೋಡಿ ಕನಸಿದು
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ ಹೆಣ್ಣು : ರತಿಯೂಟ ಬಡಿಸೋಣ
--------------------------------------------------------------------
No comments:
Post a Comment