- ಹೇ ಶಿಲ್ಪಿ, ಹೇ ಕಲಾಬ್ರಹ್ಮ,
- ಶೃತಿಯಿಲ್ಲವಾಯಿತು ವೀಣೆ
- ಓ ಚೆಲುವೇ ನಾಟ್ಯದ ಸಿರಿ ನವಿಲೇ
- ನಿನ್ನ ಯೌವ್ವನದ ಚೈತ್ರದಲೀ
- ಎಂದೂ ಕಾಣದ ಹೊಸ ಬೆಳಕೊಂದು
- ಎರಡ ಕೈಯಲ್ಲಿ ಒಂದ ಬಗಲಾಗ
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ಗಂಡು: ಆ.ಆಆ ...ಆ..ಆಆ.ಆ ಆಅಆ ... ಆ ... ಹೂಂಹೂಂ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ ನಿನಗೆ ಶರಣು,
ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ ನಿನಗೆ ಶರಣು,
ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಸಂಗಡಿಗರು: ಸ ರಿ ಗ ಮ ಪ ದ ನಿ ಸ ಆಆಆ....ಆಆಅಅ
ಗಂಡು: ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ...
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಸಂಗಡಿಗರು: ಆಆಆ....ಆಆಅಅ..ಆಆಅಅ..ಆಆಅಅ
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ...
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಸಂಗಡಿಗರು: ಆಆಆ....ಆಆಅಅ..ಆಆಅಅ..ಆಆಅಅ
ಗಂಡು: ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ ನಿನಗೆ ಶರಣು
ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ ನಿನಗೆ ಶರಣು
ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
-----------------------------------------------------------------------
ರಾಗ ತಾಳ (೧೯೮೨) - ಶೃತಿಯಿಲ್ಲವಾಯಿತು ವೀಣೆ
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ಎಸ್.ಪಿ.ಬಿ., ಪಿ. ಸುಶೀಲಾ
ಗಂಡು: ಶೃತಿಯಿಲ್ಲವಾಯಿತು ವೀಣೆ.. ಈ ಶೂನ್ಯವೇಕೋ ನಾ ಕಾಣೆ (ಕೆಮ್ಮು)
ಶೃತಿಯಿಲ್ಲವಾಯಿತು ವೀಣೆ.. ಈ ಶೂನ್ಯವೇಕೋ ನಾ ಕಾಣೆ ಹಿಂದೊಮ್ಮೆ ನುಡಿಸುವ ರಾಗ ಕನಸಾಗಿ
ಕಾಡುವುದೀಗ....(ಕೆಮ್ಮು)
ಶೃತಿಯಿಲ್ಲವಾಯಿತು ವೀಣೆ.. ಈ ಶೂನ್ಯವೇಕೋ ನಾ ಕಾಣೆ ಹಿಂದೊಮ್ಮೆ ನುಡಿಸುವ ರಾಗ ಕನಸಾಗಿ
ಕಾಡುವುದೀಗ....
ಗಂಡು: ಹೃದಯ ವೀಣೆ ಮೂಕವಾಯಿತು ಹಸಿರು ಬಾಳೆಲ್ಲಾ
ಬರಡಾಯಿತೂ.
ಹೃದಯ ವೀಣೆ ಮೂಕವಾಯಿತು ಹಸಿರು ಬಾಳೆಲ್ಲಾ
ಬರಡಾಯಿತೂ ನಿನ್ನನಾಗಲೀ ನಾನಿರಬಲ್ಲೇ....
ನಿನ್ನನಾಗಲೀ ನಾನಿರಬಲ್ಲೇ ನಿನ್ನ ನೆನಪಲ್ಲೂ ನಾ
ತೋರೆಯಲಾರೇ...(ಕೆಮ್ಮು)...
ಶೃತಿಯಿಲ್ಲವಾಯಿತು ವೀಣೆ.. ಈ ಶೂನ್ಯವೇಕೋ ನಾ ಕಾಣೆ ಹಿಂದೊಮ್ಮೆ ನುಡಿಸುವ ರಾಗ ಕನಸಾಗಿ
ಕಾಡುವುದೀಗ....
ಗಂಡು: ಒಂದು ಮನಸ್ಸೂ ಕಾಣಿಕೆ ನೀಡಿ ಇಂದೂ ನನ್ನನ್ನೇ ನಾ
ಕಳೆದುಕೊಂಡೇ... ಅಹ್ಹಹ...
ಒಂದು ಮನಸ್ಸೂ ಕಾಣಿಕೆ ನೀಡಿ ಇಂದೂ ನನ್ನನ್ನೇ ನಾ
ಕಳೆದುಕೊಂಡೇ ನಿನ್ನ ಒಲುಮೆ ದೂರವಾಯಿತೂ..
ನಿನ್ನ ಒಲುಮೆ ದೂರವಾಯಿತೂ ಈಗ ಹಾಡುವುದೇ
ನನಗೇ ಉಳಿಯಿತು... (ಕೆಮ್ಮು)
ಶೃತಿಯಿಲ್ಲವಾಯಿತು ವೀಣೆ.. ಈ ಶೂನ್ಯವೇಕೋ ನಾ ಕಾಣೆ ಹಿಂದೊಮ್ಮೆ (ಕೆಮ್ಮು) ನುಡಿಸುವ ರಾಗ ಕನಸಾಗಿ
ಕಾಡುವುದೀಗ.... ಶೃತಿಯಿಲ್ಲವಾಯಿತು ವೀಣೆ..
ಈ ಶೂನ್ಯವೇಕೋ ನಾ ಕಾಣೆ (ಕೆಮ್ಮು)
ಹೆಣ್ಣು: ಆಆಅಅ.. ಆಆಆಆಆಆ..
ಬಿರಿದ ಹೂವಿಗೇ ದುಂಬಿ ಜಿಗಿದಂತೆ ನಿನ್ನ ಧನಿ ಕೇಳಿ
ನಾ ಓಡಿ ಬಂದೆ... ಬಿರಿದ ಹೂವಿಗೇ ದುಂಬಿ ಜಿಗಿದಂತೆ
ನಿನ್ನ ಧನಿ ಕೇಳಿ ನಾ ಓಡಿ ಬಂದೆ ಮಧುರದಾದ ನನ್ನ
ಸೆಳೆದಂತೆ ನಿನ್ನ ರಾಗಕೇ...ನಾ ತಾಳವಾದೇ...
----------------------------------------------------------------------
ರಾಗ ತಾಳ (೧೯೮೨) - ಓ ಚೆಲುವೇ ನಾಟ್ಯದ ಸಿರಿ ನವಿಲೇ..
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ಎಸ್. ಪಿ. ಬಿ, ಬೆಂಗಳೂರ ಲತಾ
ಗಂಡು: ಆಆಅ.. ಲಾಹಹಾ...ಹೂಹಾಹಾ..ಲಾಹಹ..
ಹೆಣ್ಣು: ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ..
ಗಂಡು: ಓ..ಚೆಲುವೇ.. ನಾಟ್ಯದ ಸಿರಿ ನವಿಲೇ..ಹಂಸದ
ನಡೆಯವಳೇ...ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ..... ನಾ ಮೈಮರೆತಿರುವೇ
ಗಂಡು: ನನ್ನ ಮನಸಿನ ಮಂದಿರದೀ ದೇವತೆ ನೀನಾದೇ..
ನನ್ನ ಮಧುರ ಸ್ಮೃತಿಗಳ ಅಲೆಗಳಲಿ ತೇಲುವಾ
ದೋಣಿಯು ನೀ.. ಬಾ ತೀರಕೇ ಕಾಯುತಿದೇ..
ಈ ಹೃದಯವು ಮಿಡಿಯುತಿದೇ....
ಓ..ಚೆಲುವೇ.. ನಾಟ್ಯದ ಸಿರಿ ನವಿಲೇ
ಹೆಣ್ಣು: ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ..
ಗಂಡು: ಆಆಅ.. ಆಹಹಾ...ಆಹಾಹಾ..ಆಹಹ.. ಆಹಾಹ.
ಗಂಡು: ವಿಕಸಿತ ಕುಸುಮಗಳೂ ನಿನ್ನ ಹುಸಿನಗೆ ಮೂಡುವುದು
ತೇಲುವ ಮುಗಿಲನಲೂ ನಿನ್ನ ರೂಪವೇ ಕಾಣುವುದೂ..
ನನ್ನ ದೇಹದ ಪ್ರತಿ ಕಣ ಕಣದಲ್ಲೂ ನೀನೆ ತುಂಬಿರುವೇ
ಕಣ್ಣ ತೆರೆದರೆ ಕಾಣಿಸುವೇ ಈ ಮನದಲಿ ಉಳಿದಿರುವೇ
ಓ..ಚೆಲುವೇ.. ನಾಟ್ಯದ ಸಿರಿ ನವಿಲೇ..ಹಂಸದ
ನಡೆಯವಳೇ...ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ..... ನಾ ಮೈಮರೆತಿರುವೇ
ಸುಂದರಿಯೇ... ನನ್ನಾ ಆಶಾ ಮಂಜರಿಯೇ
ನನ್ನ ತನುಮನ ಅಣುಅಣುವೇ ನಿನ್ನ ಪ್ರೇಮದ
ಪಂಜರದೀ ಜಪಿಸುವ ಗಿಣಿಯಾದೇ.. ಓ.. ಚೆಲುವೇ..
ಓ.. ಚೆಲುವೇ... ಓ.. ಚೆಲುವೇ... ಓ.. ಚೆಲುವೇ...
-------------------------------------------------------------------
ರಾಗ ತಾಳ (೧೯೮೨) - ನಿನ್ನ ಯೌವ್ವನದ ಚೈತ್ರದಲಿ
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ಎಸ್.ಪಿ. ಬಿ, ಎಸ್. ಜಾನಕೀ
ಗಂಡು: ಓಓಓ. ನಾಟ್ಯ ಮಯೂರೀ.. ಮದನ ಮಂದಸ್ಮಿತ
ಕಿಶೋರಿ... ನಯನ ಮನೋಹರಿ..ಬಾ ಹೊರಗೇ...
ನಿನ್ನ ಯೌವ್ವನದ ಚೈತ್ರದಲೀ..ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೇ.. ನಿನ್ನ ಲಾವಣ್ಯ ಜ್ವಾಲೆಯಲಿ
ಮೈಮರೆವೆ ನಾ .. ಕರಗಿ ಶಿಲೆಯಿಂದ ಬಾ ಹೊರಗೇ...
ಹೆಣ್ಣು: ನನ್ನ ತನುವೆಲ್ಲಾ ನೀನಾಗಿ ನರ್ತಿಸುವೇ ವಚನಾಗಿ
ಮನಸೋತು ನಾ ಕಡೆಗೆ ನಿನ್ನ ಗಂಧರ್ವ ಗಾನದಲಿ
ನಾ ಬೆರೆವೆ ಶೃತಿಯಾಗಿ ಮನಸೋತು ನಾ ಕರಗಿ..
ಗಂಡು: ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೇನೂ ನೀ ನರ್ತಿಸುವ ನೆಲದಲ್ಲಿ ಆಆಆ..
ನಿನ್ನ ಅಪ್ಪುಗೆಯ ಬಿಸಿಯಲ್ಲಿ ಕರಗಿ ನೀರಾಗಿ
ಹರಿಯುವೇನೂ ನೀ ನರ್ತಿಸುವ ನೆಲದಲ್ಲಿ ಇನ್ನಾರ
ನೋಟಕೆ ಪರವಶನಾಗಿ..
ಇನ್ನಾರ ನೋಟಕೆ ಪರವಶನಾಗಿ ಝಲ್ಲೆಂದೂ
ಝೇಂಕರಿಸುವೇ ನಿನ್ನ ಕಾಲ್ಗೇಜ್ಜೆಯಾಗಿ ...
ನಿನ್ನ ಯೌವ್ವನದ ಚೈತ್ರದಲೀ..ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೇ.....
ಗಮಪ ಮಪಮ ನಿರಿಗ ನಿರಿಸ ನಿರಿಗಮ ನಿಗಮದ
ಗಮದನಿ ಮದನಿಸ ಗರಿಗರಿರಿದಮಮದಪಮಗರಿಸ
ಗರಿಗರಿರಿದಮಮದಪಮಗರಿಸ
ಗಂಡು: ನನ್ನ ಸಂಗೀತ ಸಾಮ್ರಾಜ್ಯದಲೀ ನಿನ್ನಯ ನಾಟ್ಯ
ಬೆಳಗಲೀ..
ಹೆಣ್ಣು: ಬಳಿ ಸೆಳೆವ ನಿನ್ನ ಗಾನ ಲಹರಿ ನನ್ನ ಹೃದಯ ಸ್ಪಂದನ
ಆಗಲೀ
ಗಂಡು: ನನ್ನ ಮಂದಿರ ಹೇಮಂತದಲಿ ನಿನ್ನ ಭಂಗಿಗಳ ಗುಲಾಬಿ
ಬಿರಿಯಲೀ...
ಹೆಣ್ಣು: ಎಲ್ಲಿಂದಲೋ ಕೂಗಿ ಕರೆದೆಂತಿರುವಾ ನಿನ್ನ ವೇಣು ನಾದ
ನನ್ನ ನಾಟ್ಯಕ್ಕೆ ಚೈತನ್ಯ ಆಗಲೀ...
ಗಂಡು: ನಿನ್ನ ಯೌವ್ವನದ ಚೈತ್ರದಲೀ..ವಿಕಸಿಸುವೇ ಸುಮವಾಗಿ
ಶಿಲೆಯಿಂದ ಬಾ ಹೊರಗೇ.. ನಿನ್ನ ಲಾವಣ್ಯ ಜ್ವಾಲೆಯಲಿ
ಮೈಮರೆವೆ ನಾ .. ಕರಗಿ ಶಿಲೆಯಿಂದ ಬಾ ಹೊರಗೇ...
(ಆಆಆಆಆಆ) ಆಆಅ (ಆಆ ಆಆಅ) ಆಆಅ
-------------------------------------------------------------------
ರಾಗ ತಾಳ (೧೯೮೨) - ಎಂದೂ ಕಾಣದ ಹೊಸ ಬೆಳಕ
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ಎಸ್.ಜಾನಕೀ
ಆಹಾಹಾ..ಆಆಆ..ಆಹಾಹಾ..ಆಆಆ...ಆಹಾಹಾ...ಆಆಆ
ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತೂ
ಎಂದೆಂದೂ ಸವಿಯಾದ ಅನುಭವವಿಂದೂ ಎನ್ನದೇ ಸೇರಿತೂ
ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತೂ
ಎಂದೆಂದೂ ಸವಿಯಾದ ಅನುಭವವಿಂದೂ ಎನ್ನದೇ ಸೇರಿತೂ
ತಂಗಾಳಿಯ ತೆರೆಗಳೂ ಬೀಸುತ ಬಂದೂ
ತಂಗಾಳಿಯ ತೆರೆಗಳೂ ಬೀಸುತ ಬಂದೂ
ಗಂಧದ ಕಾಣಿಕೆ ನನ್ನಡೇ ತಂದೂ
ಗಂಧದ ಕಾಣಿಕೆ ನನ್ನಡೇ ತಂದೂ
ದಿನವೂ ಕೂಗುವ ಕೋಗಿಲೆ ಇಂದೂ ಹೊಸಗಾನವ ಹಾಡಿತು
ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತೂ
ಎಂದೆಂದೂ ಸವಿಯಾದ ಅನುಭವವಿಂದೂ ಎನ್ನದೇ ಸೇರಿತೂ
ಬಾನಿನ ರಂಗಲಿ ಎನೋ ಹೊಳಪು..
ಬಾನಿನ ರಂಗಲಿ ಎನೋ ಹೊಳಪು..
ಎಲ್ಲದರಲ್ಲೂ ತುಂಬಿದೆ ಬೆಳಕು
ಎಲ್ಲದರಲ್ಲೂ ತುಂಬಿದೆ ಬೆಳಕು
ಎಲ್ಲಡೆಯಲ್ಲೂ ಅರಿಯದ ಹೊಸತನ ಮನದಲ್ಲಿ ಮೂಡಿತು
ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತೂ
ಎಂದೆಂದೂ ಸವಿಯಾದ ಅನುಭವವಿಂದೂ ಎನ್ನದೇ ಸೇರಿತೂ
ಒಡಲಲಿ ಹರಿಯಿತು ಒಲವಿನ ಹೊಳೆಯೂ..
ಒಡಲಲಿ ಹರಿಯಿತು ಒಲವಿನ ಹೊಳೆಯೂ..
ಎದೆಯಲಿ ಸುರಿಯಿತು ಜೇನಿನ ಮಳೆಯೂ ಎಲ್ಲೋ ಕೇಳುವ
ಹಕ್ಕಿಗಳ ಇಂಚರ ನನ್ನ ದೆಯಲಿ ಮಿಡಿಯಿತೂ
ಎಂದೂ ಕಾಣದ ಹೊಸ ಬೆಳಕೊಂದು ಇಂದೇ ಮೂಡಿತೂ
ಎಂದೆಂದೂ ಸವಿಯಾದ ಅನುಭವವಿಂದೂ ಎನ್ನದೇ ಸೇರಿತೂ
ಆಹಾಹಾ..ಆಆಆ..ಆಹಾಹಾ..ಆಆಆ...ಆಹಾಹಾ...ಆಆಆ
-------------------------------------------------------------------
ರಾಗ ತಾಳ (೧೯೮೨) - ಓಓಓ.. ಹೆಂಡತಿ ಒಂದ ಮಗ್ಗಲಾಗ
ಸಂಗೀತ: ಎಮ್. ರಂಗ ರಾವ್, ಸಾಹಿತ್ಯ: ನಂದಗೋಪಾಲ ರೆಡ್ಡಿ, ಗಾಯನ: ನಂದಗೋಪಾಲರೆಡ್ಡಿ, ಕೋರಸ್
ಗಂಡು: ಎರಡು ಕೈಯಲ್ಲಿ ಒಂದ ಬಗಲಾಗ
ಸೆಂದಿ ಒಂದ ಕೈಯಾಗ ಸರಾಯಿನೇ ಆಯ್ತೂ ಪರಪಂಚ
ಕೋರಸ್: ಹೌದು ಯಜಮಾನರೇ...
ಗಂಡು: ಇವರಿಬ್ಬರೇ ಇರಬೇಕು ಊರೋರು ಮತ್ತೇ
ಯಾಕ ಬೇಕು ಬೆಳಗಾದ್ರೇ ನಮ್ಮದೇ ಪರಪಂಚ...
ಓಓಓ...ಹೆಂಡತಿ ಒಂದ ಮಗ್ಗಲಾಗ ಸೆಂದಿ ಒಂದ
ಕೈಯಾಗ ಸ್ವರ್ಗಾನೇ ಆಯಿತು ಪರಪಂಚ
ಕೋರಸ: ತಾನಂದನೋ ಸ್ವರ್ಗಾನೇ ಆಯಿತು ಪರಪಂಚ
ಗಂಡು: ಇವರಿಬ್ಬರೇ ಇರಬೇಕೂ ಊರೋರು ಮತ್ತ ಯಾಕ
ಬೇಕೂ ಬೆಳಗೋನು ನಮ್ಮದೇ ಪರಪಂಚ
ಕೋರಸ್: ತಾನಂದನೋ ಬೆಳಗೋನು ನಮ್ಮದೇ ಪರಪಂಚ
ಗಂಡು: ಓಓಓ ... ಕುಡಕೊಂಡ ಬಂದಿದ್ದಾಗ ಉಣ್ಣಾಕ
ಹಿಟ್ಟೇಲ್ಲಾಗ ಹೊಟ್ಟೆ ತುಂಬಾ ಒಲವಣ್ಣ ಸಾಯ್
ಕೋರಸ್: ತಾನಂದನೋ ಹೊಟ್ಟೆ ತುಂಬಾ ಒಲವಣ್ಣ ಸಾಯ್
ಗಂಡು: ಹಗಲೆಲ್ಲಾ ದುಡಿದು ಬಂದ್ರೇ..ಬಾಗಲಾಗೇ ನಗ್ತಾಳೇ..
ಮರಿದಂಗೇ ಕೊಡ್ತಾಳೇ ಸೇಂದಿ...
ಕೋರಸ್: ತಾನಂದನೋ ಬಾಗಲಾಗೇ ಕೊಡ್ತಾಳೇ ಸೇಂದಿ...
ಗಂಡು: ಓಓಓ... ಮೊದಲ ಹೇಳಿ ಬಯಸ್ಕೊಂಡರೇ ಕೊಡದಾಗ
ಹೆಂಗ್ ಇರಲೀ ಒತ್ಸಾ ಬಿಚ್ಚಡ್ತಾಳೇ...ಒಂಟೀ..
ಕೋರಸ್: ತಾನಂದನೋ ಒತ್ಸಾ ಬಿಚ್ಚಡ್ತಾಳೇ...ಹೆಂಡ್ತೀ
ಗಂಡು: ಅಮ್ಮನಂಗೇ ಕಿತ್ತಳೆ ಹೆಂಡ್ರಂಗೇ ಸೆರೆಗ ಹಾಕ್ತಾಳೆ
ಮಗುವಂಗೇ ಮುದ್ದಾಡುತ್ತಾಳೇ...
ಕೋರಸ್: ತಾನಂದನೋ.. ಮಗುವಂಗೇ ಮುದ್ದಾಡುತ್ತಾಳೇ...
ಗಂಡು: ಓಓಓ.ನನ್ನ ಹೆಂಡ್ತೀ ನನ್ನಸೆರೆ ಹಿಂದೆ ಇಬ್ಬರೂನೂ
ಹಾಕದಂಗೇ ಇದ್ದಾಯಿತು... ಸರದಾ ಪರಪಂಚ..
ಕೋರಸ್: ತಾನಂದನೋ ಇದ್ದಾಯಿತು... ಸರದಾ ಪರಪಂಚ..
ಗಂಡು: ಮತ್ತೊಮ್ಮೆ ಒಡೆದಾಗ ಇಬ್ಬರೂನೂ ಇರಬೇಕೂ
ಇಲ್ಲದಿದ್ದರೆ ಜನ್ಮಾನೇ... ಬೇಡಾ
ಕೋರಸ್: ತಾನಂದನೋ...ಇಲ್ಲದಿದ್ದರೆ ಜನ್ಮಾನೇ... ಬೇಡಾ
ಓಓಓ ಓಓಓಓಓ ಓಓಓಓಓಓಒ.
-------------------------------------------------------------------
No comments:
Post a Comment