1314. ರಾಜಾಧಿರಾಜ (೧೯೯೨)


ರಾಜಾಧಿರಾಜ ಚಲನಚಿತ್ರದ ಹಾಡುಗಳು
  1. ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
  2. ಲೋಕವೇ ಎದುರಾಗಿ ಬಂದರೂ
  3. ರಾಜಾಧಿರಾಜ ವೀರಾಧಿವೀರ 
  4. ಸಂಬಂಧ ಚೂರಾಗಿ ಈ ಜೀವನಾ
  5. ಡವ ಡವ ಹೃದಯದ ಬೀಟು
  6. ಏರಿದ ಗುಂಗಲೀ
ರಾಜಾಧಿರಾಜ (೧೯೯೨) -  ನಿನ್ನಲ್ಲಿರೋ ಅಂದ ನನಗಾಗಿ
ಸಂಗೀತ: ವಿಜಯಾನಂದ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಬಿ. ಚಿತ್ರಾ

ಗಂಡು: ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು: ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೇ
ಗಂಡು: ನನ ರಾಣಿಯೇ ನನ ಜಾಣೆಯೇ
            ನನ ತೋಳಲಿ ಬಾ ಅಪ್ಪುವೆ
ಹೆಣ್ಣು: ನಿನ ಮಾತಿಗೆ ಈ ಪ್ರೀತಿಗೇ ನನ ನಲ್ಲನೇ ನಾ ನಾಚಿದೆ
ಗಂಡು: ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು: ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೇ

ಗಂಡು: ಚಿನ್ನ ನಾ ದೂರ ಇರಲಾರೆ ಇನ್ನೂ
           ನಿನ್ನ ಮನದಲ್ಲಿ ಮನೆ ಮಾಡುವೆ
           ಚಿನ್ನ ನಾ ದೂರ ಇರಲಾರೆ ಇನ್ನೂ
           ನಿನ್ನ ಮನದಲ್ಲಿ ಮನೆ ಮಾಡುವೆ
ಹೆಣ್ಣು: ನಾನೇ ನೀನು ನನಗಾಗೇ ನೀನು ಬೇರೆ ಎನು ಕಾಣೆನೂ
           ನಾನೇ ನೀನು ನನಗಾಗೇ ನೀನು ಬೇರೆ ಎನು ಕಾಣೆನೂ
ಗಂಡು: ನಿನ ಮಾತು ಒಂದೊಂದು ಹಿತವಾಗಿದೆ
           ಹೊಸ ಹೂವ ಸವಿ ಜೇನ ಹನಿಯಾಗಿದೆ
ಹೆಣ್ಣು: ಒಲವೆಂದರೇನೆಂದು ನಾ ಕಂಡೆ ಇಂದು
ಗಂಡು: ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು: ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೇ

ಹೆಣ್ಣು:  ಇನ್ನೂ ಬಿಸಿಲೇನು ನೆರಳೇನು ಮುಂದೆ
           ನಿನ ಜೊತೆಯಲ್ಲಿ ನಡೆವಾಗ ನಾ
           ಇನ್ನೂ ಬಿಸಿಲೇನು ನೆರಳೇನು ಮುಂದೆ
           ನಿನ ಜೊತೆಯಲ್ಲಿ ನಡೆವಾಗ ನಾ
ಗಂಡು: ನನ್ನ ಬಾಳಾ ಗಗನದಲ್ಲಿ ನೀನೇ ಪೂರ್ಣ ಚಂದ್ರಿಕೆ
            ನನ್ನ ಬಾಳಾ ಗಗನದಲ್ಲಿ ನೀನೇ ಪೂರ್ಣ ಚಂದ್ರಿಕೆ
ಹೆಣ್ಣು: ನನ ಜೀವ ಹಗುರಾಗಿ ತೇಲಾಡಿದೆ
           ಕ್ಷಣಕೊಮ್ಮೆ ನೂರಾರು ಕನಸಾಗಿದೆ
ಗಂಡು: ಊಸಿರಲ್ಲಿ ಉಸಿರಾಗಿ ಆನಂದ ತಂದೆ
           ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು: ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೇ
ಗಂಡು: ನನ ರಾಣಿಯೇ ನನ ಜಾಣೆಯೇ
            ನನ ತೋಳಲಿ ಬಾ ಅಪ್ಪುವೆ
ಹೆಣ್ಣು: ನಿನ ಮಾತಿಗೆ ಈ ಪ್ರೀತಿಗೇ ನನ ನಲ್ಲನೇ ನಾ ನಾಚಿದೆ
ಗಂಡು: ನಿನ್ನಲ್ಲಿರೋ ಅಂದ ನನಗಾಗಿ ಅಲ್ಲವೇನೇ
ಹೆಣ್ಣು: ನಿನ್ನಲ್ಲಿರೋ ಚೆಂದ ನನಗಾಗಿಯೇ ತಾನೇ
---------------------------------------------------------------------

ರಾಜಾಧಿರಾಜ (೧೯೯೨) -  ಲೋಕವೇ ಎದುರಾಗಿ ಬಂದರೂ
ಸಂಗೀತ: ವಿಜಯಾನಂದ, ಸಾಹಿತ್ಯ: ಎಂ.ಎನ್.ವ್ಯಾಸರಾವ, ಗಾಯನ: ಎಸ್.ಪಿ. ಬಿ. ಚಿತ್ರಾ

ಗಂಡು: ಬಾ.. ಪ್ರೀಯ.. ಕಾಮಿನಿ ಈ ಮನಮೋಹಿನಿ
      ಒಡನಾಡಿ ಪ್ರೀತಿಗೇ ಮನವಿಂದು‌ ಮಾಗಿದೆ
      ಮನಸಾರೆ ಪ್ರೇಮಿಗೇ ಹೃದಯವನ್ನೇ ನೀಡಿದೆ ನಿನಗಾಗಿಯೇ
ಹೆಣ್ಣು: ಲೋಕವೇ ಎದುರಾಗಿ ಬಂದರೂ ಬಿಡೆ ನಾನೂ
           ಜೀವನದಾ ಹೊನಲಾಗಿ‌ ಕಂಡೆ ಇಲ್ಲಿ...
           ಬಾ. ಮನಮೋಹನಾ ನೀ ಸುಖ ಸಾಧನಾ... 
           ಬಾ. ಮನಮೋಹನಾ ನೀ ಸುಖ ಸಾಧನಾ...

ಗಂಡು: ಬದುಕೆಂಬ ಆಶಯದಲ್ಲಿ ಗೆಳೆತಿ ನೀನೆ ನನ್ನ ಜೋಡಿ
           ಸಂಗಾತಿ ನಂಬೆ ನನ್ನಾ ಮಿಡಿದೆ ನೀನೆ ಜೀವನಾಡಿ
           ಜೊತೆಗೇ ಸಾಗಿ ಬರುವೆ ದೂರ
ಹೆಣ್ಣು: ಹೂವೂ ನಾರು ಸೇರಿದಂತೆ ಮಾಲೆಯಾಗಿದೆ
           ನನ್ನ ನಿನ್ನ ಪ್ರೇಮದಿಂದ ಬಾಳು ಸಾರವೆ
           ಮನಸು ಮನಸು ಸೇರಿ ಹೋಗಿದೆ
           ಲೋಕವೇ ಎದುರಾಗಿ ಬಂದರೂ ಬಿಡೆ ನಾನೂ
           ಜೀವನದಾ ಹೊನಲಾಗಿ‌ ಕಂಡೆ ಇಲ್ಲಿ...
           ಬಾ. ಮನಮೋಹನಾ ನೀ ಸುಖ ಸಾಧನಾ... 
           ಬಾ. ಮನಮೋಹನಾ ನೀ ಸುಖ ಸಾಧನಾ...

ಹೆಣ್ಣು: ಎದೆಯಲ್ಲಿ ನಿನ್ನಾ ಮೋಹ ದಿನವು ನನ್ನ ಕಾಡುವಾಗ
           ಬರದೇಕೆ ಇಂಥಾ ದಾಹ ಎದುರು ನೀನು ಕಾಣುವಾಗ
           ಬಯಕೆ ಇಂದು ಸೇರಿತೇಕೆ
ಗಂಡು: ಪ್ರೀತಿಯಂಥ ಹಣ್ಣು ನೀಡಿ ತಣಿಸು ಈ ದಿನ
           ಕಣ್ಣಿನಲ್ಲಿ ಪಾಠ ಹೇಳಿದೆ ಚೆಲ್ಲಿದೆ ಮೈಮನ
           ನಗುತಾ ಇರುವೆ ಎನು ಕಾರಣ
ಹೆಣ್ಣು: ಲೋಕವೇ ಎದುರಾಗಿ ಬಂದರೂ ಬಿಡೆ ನಾನೂ
           ಜೀವನದಾ ಹೊನಲಾಗಿ‌ ಕಂಡೆ ಇಲ್ಲಿ...
           ಬಾ. ಮನಮೋಹನಾ ನೀ ಸುಖ ಸಾಧನಾ... 
           ಬಾ. ಮನಮೋಹನಾ ನೀ ಸುಖ ಸಾಧನಾ...
------------------------------------------------------------------

ರಾಜಾಧಿರಾಜ (೧೯೯೨) - ರಾಜಾಧಿರಾಜ ವೀರಾಧಿವೀರ
ಸಂಗೀತ: ವಿಜಯಾನಂದ, ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ: ಎಸ್.ಪಿ. ಬಿ. ಕೋರಸ್

ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ಜಗದಾ ಜನ ಮುದ್ದಾಡುವ ನೀನು ರಾಜಾಧಿರಾಜ ಕಣೋ
ಜನರಾ ಜೊತೆ ಒಂದಾಗುವ ನೀನು ರಾಜಾಧಿರಾಜ ಕಣೋ
ಜನರಾ ಜೊತೆ ಒಂದಾಗುವ ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ಜಗದಾ ಜನ ಮುದ್ದಾಡುವ ನೀನು ರಾಜಾಧಿರಾಜ ಕಣೋ

ಪ್ರೇಮ ಪ್ರೀತಿ ವಿಶ್ವಾಸವು ಜೀವಕೆ ಆಧಾರವೂ
ಕಣ್ಣ ‌ಮುಂದೆ ಎಂದೆಂದಿಗೂ ನಿಮ್ಮದೆ ಆಕಾರವು
ನ್ಯಾಯಕ್ಕಾಗಿ ಹೋರಾಡುವ ನಾಯಕ ಬೇಕಾಗಿದೆ
ಕುರ್ಚಿಗಾಗಿ ಕಚ್ಚಾಡುವ ನಾಯಕ ಸಾಕಾಗಿದೆ
ನಿಮ್ಮಯ ಬಯಕೆ ಪೂರೈಸುವೇ ಅನುಗಾಲವು ಜೊತೆಗಿರುವೆ
ನೊಂದಿಹ ಜನರು ನಕ್ಕಾಗಲೇ ನನ್ನ ಬಾಳಲಿ ಖುಷಿ ಪಡುವೇ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ಜಗದಾ ಜನ ಮುದ್ದಾಡುವ ನೀನು ರಾಜಾಧಿರಾಜ ಕಣೋ

ಓಯ್.. ಅಟೋ ಎಂಬ ಅಂಬಾರಿಯಾ ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ ಊರಲೇ ನಾ ಶೂರನು
ಅಟೋ ಎಂಬ ಅಂಬಾರಿಯಾ ಏರಲು ನಾ ರಾಜನು
ಅಟೋದಲ್ಲಿ ಕೂತಾಗಲೇ ಊರಲೇ ನಾ ಶೂರನು
ಭಾಷೆಯಾ  ಕೋಡುವೆ ನಾನಿಗಲೇ... ಜನಸೇವೆಗೆ ಬದುಕಿರುವೆ
ಲೋಕದಿ ನಾವು ಮುಂದಾಗಲು ನನ್ನ ಪ್ರಾಣ ಮುಡಿಪಿಡುವೇ...
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ಜಗದಾ ಜನ ಮುದ್ದಾಡುವ ನೀನು ರಾಜಾಧಿರಾಜ ಕಣೋ
ಜನರಾ ಜೊತೆ ಒಂದಾಗುವ ನೀನು ರಾಜಾಧಿರಾಜ ಕಣೋ
ಜನರಾ ಜೊತೆ ಒಂದಾಗುವ ನೀನು ರಾಜಾಧಿರಾಜ ಕಣೋ
ಪುಂಡರನ್ನು ಚೆಂಡಾಡೋ ಧೀರ ನಾಡಿನಲ್ಲೇ ಏಕೈಕ ಶೂರ
ರೂಪದಲ್ಲಿ ನೀನು ಗಮಾರ ಕೋಪವೆಂದೂ ನಿನ್ನಿಂದ ದೂರ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ರಾಜಾಧಿರಾಜ ವೀರಾಧಿವೀರ ಶೂರಾಧಿಶೂರ ಕಲಿ ವೀರನೂ
ಜಗದಾ ಜನ ಮುದ್ದಾಡುವ ನೀನು ರಾಜಾಧಿರಾಜ ಕಣೋ
------------------------------------------------------------------

ರಾಜಾಧಿರಾಜ (೧೯೯೨) -  ಸಂಬಂಧ ಚೂರಾಗಿ ಈ ಜೀವನಾ
ಸಂಗೀತ: ವಿಜಯಾನಂದ, ಸಾಹಿತ್ಯ: ದೊಡ್ಡರಂಗೆಗೌಡ, ಗಾಯನ: ಎಸ್.ಪಿ. ಬಿ. 

ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ
ಸ್ನೇಹ ಪ್ರೀತಿ ಇಲ್ಲವಾಗಿ ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ ಬಂಧು ಬಳಗ ದೂರ
ಸಂಸಾರ ಬರಿ ಬೇಸರ ನಂಜಾಯ್ತೆ ನಗೆ ಸಾಗರ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ

ಕೂಡಿ ನಲಿದು ಆಡಿ ಬೆಳೆದು ಬದಲಾಯ್ತೆ
ಹಾದಿಯೂ ಬೇರೆಯಾಗಿ ಎಲ್ಲಾ ನಂಟು ಕನ್ನಡಿ ಗಂಟು
ನೋವಾಯಿತೇ..ಹೃದಯಾಘಾಸಿಯಾಗಿ
ನಿಜ ಅಕ್ಕರೆ ಹೋಯಿತು ಎಲ್ಲಿ ಸಿರಿ ನಲ್ಮೆಯು ತೀರಿತೆ ಇಲ್ಲಿ
ಹೂವಂಥ ಮನಸು ಮುದುಡಿ ಹೋಗಿ ಬಾಳಲಿ ಬಲು ನೊಂದೆ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ

ತಂದೆ ಇರದೆ ತಾಯಿ ಇರದೆ ಗತಿ ಕಾಣದೆ ಆಸರೆ ಕಂಡೆ ಅಂದು
ಎಲ್ಲಾ ಇದ್ದು ಮಮತೆ ಸಿಗದೆ ನೆಲೆ ಕಾಣದೆ ಲೋಕದೇ ಒಂಟಿ
ಇಂದು ಎದೆಯಾಳದ ಭಾವನೆ ಕೊರಗಿ
ಮನದಾಸೆಯ ನಂಬಿಕೆ ಸೊರಗಿ ಹಾಲಂಥ ಸವಿ ಕದಡಿ ಹೋಗಿ
ಬೇಗೆಯಲಿ ನಾ ಸೆರೆಯಾದೆ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ
ಸ್ನೇಹ ಪ್ರೀತಿ ಇಲ್ಲವಾಗಿ ಬದುಕು ಬವಣೆ ಭಾರ
ಆಸೆ ಕನಸು ಒಡೆದು ಹೋಗಿ ಬಂಧು ಬಳಗ ದೂರ
ಸಂಸಾರ ಬರಿ ಬೇಸರ ನಂಜಾಯ್ತೆ ನಗೆ ಸಾಗರ
ಸಂಬಂಧ ಚೂರಾಗಿ ಈ ಜೀವನ
ಸಂತೋಷ ಹಾಡಾಗಿ ದಿನ ವೇದನಾ
------------------------------------------------------------------

ರಾಜಾಧಿರಾಜ (೧೯೯೨) -  ಡವ ಡವ ಹೃದಯದ ಬೀಟು
ಸಂಗೀತ: ವಿಜಯಾನಂದ, ಸಾಹಿತ್ಯ: ರುಧ್ರಮೂರ್ತಿ ಶಾಸ್ತ್ರೀ, ಗಾಯನ: ಎಸ್.ಪಿ. ಬಿ. ಚಿತ್ರಾ

ಗಂಡು: ಡವ ಡವ ಹೃದಯದ ಬೀಟು ಲವ್ ಲವ್‌ ಎನ್ನುತ್ತಿದೆ
ಹೆಣ್ಣು: ಮನಸಿನ ಬಯಕೆಯ ಬೋಟು ಸರಸರ ಓಡುತಿದೆ
ಗಂಡು: ಬಾರೇ ನನ್ನ ಬ್ಯೂಟಿ ನೀನೆ ನನ್ನ ಸ್ವಿಟಿ
ಹೆಣ್ಣು: ನೀನು ತುಂಬಾ ಘಾಟಿ ಮಾತಿನಲ್ಲಿ ಚೂಟಿ
ಗಂಡು: ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು: ಬೆರೆತಾಗ ನಾನು ನೀನು ಅನುರಾಗ
ಗಂಡು: ಡವ ಡವ ಹೃದಯದ ಬೀಟು ಲವ್ ಲವ್‌ ಎನ್ನುತ್ತಿದೆ
ಹೆಣ್ಣು: ಮನಸಿನ ಬಯಕೆಯ ಬೋಟು ಸರಸರ ಓಡುತಿದೆ

ಗಂಡು: ಸಂಗಾತಿಯ ಸಲ್ಲಾಪಕೆ ಜೀವ ಕರಗುತಿದೆ
           ಒಲವಿನ ತೋಳು ಬಳಸುವ ಆಸೆ ಕಾಡಿದೆ ನನ್ನಾಣೆ
ಹೆಣ್ಣು: ಮತ್ತೇರಿದೆ ಮತ್ತೇನಿದೆ ಹೊತ್ತು ಸರಿಯುತಿದೆ
           ಪ್ರತಿ ಕ್ಷಣದಲ್ಲೂ ಎದೆಯೋಳಗೇನೋ ಸವಿಸವಿ ನನ್ನಾಣೆ
ಗಂಡು: ಅದಕ್ಕೆಂದು ಹೇಳಲಾರೆ ಹಿತ ತುಂಬಿ ಮೈಮನ
ಹೆಣ್ಣು: ಇದೇ ನೂರು ಸಾವಿರಾರು ಸುಖ ತಂದ ಯೌವ್ವನ
           ಸೊಗಸಾಗಿ ಜೀವ ಜೀವ ನಲಿವಾಗ
            ಬೆರೆತಾಗ ನಾನು ನೀನು ಅನುರಾಗ
ಗಂಡು: ಡವ ಡವ ಹೃದಯದ ಬೀಟು ಲವ್ ಲವ್‌ ಎನ್ನುತ್ತಿದೆ
ಹೆಣ್ಣು: ಮನಸಿನ ಬಯಕೆಯ ಬೋಟು ಸರಸರ ಓಡುತಿದೆ

ಹೆಣ್ಣು: ತೂಗಾಡಿದೆ ತೇಲಾಡಿದೆ ಮೋಹಾ ಮನಸಲಿ ಹೊಸದಾದ
           ಸಿಹಿ ಸಿಹಿ ನಾದ ಅನುಭವ ಬಂತೀಗ
ಗಂಡು: ಬಂದೆ ಬಳಿ ತಂದೆ ಛಳಿ ದೇಹಾ ನಡುಗುತಿದೆ
            ಹಿಡಿದುಕೋ ನನ್ನ ಬಿಡದಿರು ಚಿನ್ನ ಬಯಸಿದೆ ನಾ ನಿನ್ನಾ
ಹೆಣ್ಣು: ನಗು ಒಂದೇ ಬಾಳಿನಲ್ಲಿ ಜಗ ಎಲ್ಲ ನಮ್ಮದೇ
ಗಂಡು: ಜೋತೆ ಸೇರಿ ಸಾಗುವಾಗ ಮಿತಿ ಇಲ್ಲ ಪ್ರೇಮಕೇ
            ಸೊಗಸಾಗಿ ಜೀವ ಜೀವ ನಲಿವಾಗ
           ಬೆರೆತಾ ನಾನು ನೀನು ಅನುರಾಗ
           ಡವ ಡವ ಹೃದಯದ ಬೀಟು ಲವ್ ಲವ್‌ ಎನ್ನುತ್ತಿದೆ
ಹೆಣ್ಣು: ಮನಸಿನ ಬಯಕೆಯ ಬೋಟು ಸರಸರ ಓಡುತಿದೆ
ಗಂಡು: ಬಾರೇ ನನ್ನ ಬ್ಯೂಟಿ ನೀನೆ ನನ್ನ ಸ್ವಿಟಿ
ಹೆಣ್ಣು: ನೀನು ತುಂಬಾ ಘಾಟಿ ಮಾತಿನಲ್ಲಿ ಚೂಟಿ
ಗಂಡು: ಸೊಗಸಾಗಿ ಜೀವ ಜೀವ ನಲಿವಾಗ
ಹೆಣ್ಣು: ಬೆರೆತಾಗ ನಾನು ನೀನು ಅನುರಾಗ
ಗಂಡು: ಡವ ಡವ ಹೃದಯದ ಬೀಟು ಲವ್ ಲವ್‌ ಎನ್ನುತ್ತಿದೆ
ಹೆಣ್ಣು: ಮನಸಿನ ಬಯಕೆಯ ಬೋಟು ಸರಸರ ಓಡುತಿದೆ
------------------------------------------------------------------

ರಾಜಾಧಿರಾಜ (೧೯೯೨) -  ಏರಿದ ಗುಂಗಲೀ
ಸಂಗೀತ: ವಿಜಯಾನಂದ, ಸಾಹಿತ್ಯ: ಶ್ರೀರಂಗ, ಗಾಯನ: ಮಂಜುಳಾ ಗುರುರಾಜ್

ಏರಿದ ಗುಂಗಿನಲೀ ಎಂತಹ ಥ್ರೀಲ್ ಇದೇಯಾ..
ಮೈ ನವಿರೇಳಿಸುವಾ ಸ್ವರ್ಗವೇ ಇಲ್ಲಿದೆಯಾ..
ಹಾಡುವಾ ಸಂಗಿತಕೇ..ತಾಳದ ಕಾಗುಣಿತಾ
ರಾಗವೂ ರಂಗೇರಲೂ ಮಾಡುವೇ ಈ ಕುಣಿತಾ..
ಧೀಮ್ ಧೀಮತ್..ಧೀಮ್ ಧೀಮತ್..ಧೀಮ್ ಧೀಮತ್
ಧೀಮ್ ಧೀಮ್

ಆ..ಆ..ತುಂಬಿದ ಮತ್ತಿನಲಿ ಲೋಕ ಓಲಾಡಿದೇ...
ಭೂಮಿಯು ಆಲಿನಲೀ ಎಕಾ ಆಗುತಿದೇ..
ಸಾಗರ ಸಾವಿರ ಲಾಗಾ ಹಾಕುತಿದೇ...
ಬಿಸಿ ಬಿಸಿ ಪ್ರಾಯ ತುಂಬಿದಾ ಖುಷಿಯಲೀ ಹಾಡುತಾ..
ಹಾರುವಾ ಜಾರುವಾ ಜಾಲೀ ಮಾಡುವ ಬಾ....
ಆ..ಆ..ಧೀಮ್ ಧೀಮತ್..ಧೀಮ್ ಧೀಮತ್..ಧೀಮ್ ಧೀಮತ್
ಧೀಮ್ ಧೀಮ್

ಆ..ಓದಿದ ಪಂಡಿತರೂ ಬೂದಿ ಹೊಂದಿದರೂ..
ಆಳದ ಅರಸರೂ ಗೋರಿ ಸೇರಿದರೂ...
ಮಾನವ ಜೀವನ ಎನೂ ಶಾಸ್ವತವೂ..
ಬದುಕಿಗೇ ನಾಳೆಯೆನ್ನುವಾ ಭರವಸೆ ಏನಿದೇ..
ಮೋಜಿನ ದಿನ ಆಹಾ ಆಹಾ ಏನು ಮಜಾ...
ಧೀಮ್ ಧೀಮತ್..ಧೀಮ್ ಧೀಮತ್..ಧೀಮ್ ಧೀಮತ್
ಧೀಮ್ ಧೀಮ್
ಏರಿದ ಗುಂಗಿನಲೀ ಎಂತಹ ಥ್ರೀಲ್ ಇದೇಯಾ..
ಮೈ ನವಿರೇಳಿಸುವಾ ಸ್ವರ್ಗವೇ ಇಲ್ಲಿದೆಯಾ..
ಹಾಡುವಾ ಸಂಗಿತಕೇ..ತಾಳದ ಕಾಗುಣಿತಾ
ರಾಗವೂ ರಂಗೇರಲೂ ಮಾಡುವೇ ಈ ಕುಣಿತಾ..
ಧೀಮ್ ಧೀಮತ್..ಧೀಮ್ ಧೀಮತ್..ಧೀಮ್ ಧೀಮತ್
ಧೀಮ್ ಧೀಮ್
------------------------------------------------------------------

No comments:

Post a Comment