1321. ರಾಜೇಶ್ವರಿ (೧೯೮೧)


ರಾಜೇಶ್ವರಿ ಚಲನಚಿತ್ರದ ಹಾಡುಗಳು
  1. ಬಾಳನಂದನದಲ್ಲಿ ಒಂದು ಶುಭ ದಿನದಲ್ಲಿ
  2. ನಿಂಗೂ ನಂಗೂ ಠೂ ಠೂ ಮಮ್ಮಿ
  3. ಪಾಹಿ ಶ್ರೀ ರಾಜ ರಾಜೇಶ್ವರಿ ತಾಯೀ..
  4. ಕೇಳಿರಣ್ಣ ಕೇಳಿ ನಮ್ಮ ‌ಕನ್ನಡ
ರಾಜೇಶ್ವರಿ (೧೯೮೧) - ಬಾಳನಂದನದಲ್ಲಿ ಒಂದು ಶುಭ
ಸಂಗೀತ: ಆರ್.ದಾಮೋದರ್, ಸಾಹಿತ್ಯ: ಎಸ್. ಕೆ.ಕರಿಂಖಾನ, ಗಾಯನ: ಎಸ್.ಪಿ. ಬಿ.

ಆಆಹಹ..ಆಆಅಅ...ಹೂಂಹೂಂ.. ಲಾಲಾಲಾಲ..ಅಹಾಹಾ
ಬಾಳನಂದನದಲ್ಲಿ ಒಂದು ಶುಭದಿನದಲ್ಲಿ ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೋತೆಯಾಯಿತೂ
ಹೆಣ್ಣು ಗಂಡುಗಳಲ್ಲಿ ಕಣ್ಣ ಮಾತುಗಳಲ್ಲಿ
ಹೆಣ್ಣು ಗಂಡುಗಳಲ್ಲಿ ಕಣ್ಣ ಮಾತುಗಳಲ್ಲಿ ಆನಂದಮಯ ರಮ್ಯ
ಒಲವಾಯಿತು...ಬಾಳನಂದನದಲ್ಲಿ...

ಪ್ರೇಮ ಕುಸುಮಗಳರಳಿ ಮದುವೆ ಮಂಗಳವಾಗಿ
ಪ್ರೇಮ ಕುಸುಮಗಳರಳಿ ಮದುವೆ ಮಂಗಳವಾಗಿ
ಒಲಿದ ಮನಗಳ‌ ನಂಟು ಚಿರವಾಯಿತು
ಹೂವೂ ಚೆಲ್ಲಿದ ಹಾದಿ ಚಂದ್ರ ಲೋಕದ ಬೀದಿ
ಹೂವೂ ಚೆಲ್ಲಿದ ಹಾದಿ ಚಂದ್ರ ಲೋಕದ ಬೀದಿ
ಗಂಧರ್ವ ಲೋಕವೇ ಧರೆಗಿಳಿಯಿತು.. ಬಾಳನಂದನದಲ್ಲಿ

ನಲಿವ ಸುಂದರ ಲತೆಯು ಚೆಲುವ ಸುಮವನು ತಾಳಿ
ನಲಿವ ಸುಂದರ ಲತೆಯು ಚೆಲುವ ಸುಮವನು ತಾಳಿ
ಮಧುರ ಕಂಪನ ತರಲಿ ಎಲ್ಲಾ ಧರೆಗೆ ..
ನಮ್ಮ ಪ್ರೇಮದ ಫಲವೂ ನಮ್ಮ ಬಾಳಿನ ನಗುವೂ
ನಮ್ಮ ಪ್ರೇಮದ ಫಲವೂ ನಮ್ಮ ಬಾಳಿನ ನಗುವೂ
ಉಲ್ಲಾಸ ತುಂಬುಲಿದೆ ನಮ್ಮ ಮನೆಗೆ.. ಬಾಳನಂದನದಲ್ಲಿ...

ತಾರೆ ಕಣ್ಣುಗಳಲ್ಲಿ ಚಂದ್ರ ಕೆನ್ನೇಗಳಲ್ಲಿ
ತಾರೆ ಕಣ್ಣುಗಳಲ್ಲಿ ಚಂದ್ರ ಕೆನ್ನೇಗಳಲ್ಲಿ
ದೇವಲೋಕದ ವರವೂ ಮುದ್ದು ಮಗುವು
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ದಿವ್ಯವಾಯಿತು ನಮ್ಮ ಬಾಳಿನ ಒಲವೂ
ಬಾಳನಂದನದಲ್ಲಿ ಒಂದು ಶುಭದಿನದಲ್ಲಿ ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೋತೆಯಾಯಿತೂ.....
ಜೋತೆಯಾಯಿತೂ.....ಜೋತೆಯಾಯಿತೂ...
ಜೋತೆಯಾಯಿತೂ....ಜೋತೆಯಾಯಿತೂ
ಹೂಂ ಹೂಂಹೂಂಹೂಂ...ಆಆಆ..ಲಾಲಲಾಲಲಲಲಾ...
--------------------------------------------------------------------

ರಾಜೇಶ್ವರಿ (೧೯೮೧) - ನಿಂಗೂ ನಂಗೂ ಠೂ ಠೂ ಮಮ್ಮಿ
ಸಂಗೀತ: ಆರ್.ದಾಮೋದರ್, ಸಾಹಿತ್ಯ: ಎಸ್. ಕೆ.ಕರಿಂಖಾನ, ಗಾಯನ: ಪಿ.ಸುಶೀಲಾ

ಹೂಂ... ಅಹ್ಹಹಾ..ಪ್ಲೀಸ್‌.. ಪ್ಲೀಸ್‌.. ಮಮ್ಮಿ... ‌
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ಬೇಡಾ ಕೋಪ ಬೇಡಾ..ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ.. ಛಲ ಮಾಡಬೇಡ....
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ಬೇಡಾ ಕೋಪ ಬೇಡಾ..ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ.. ಛಲ ಮಾಡಬೇಡ....

ಡ್ಯಾಡಿ ನೋಡಿ ನಗುತ್ತಾರೆ ಬುದ್ದಿ ಇಲ್ಲಾ ಎನ್ನುತ್ತಾರೆ
ನಂಗೆ ಮುದ್ದು ನೀಡುತ್ತಾರೆ ನಿಂಗೇ ಗುದ್ದು ಕೋಡುತ್ತಾರೆ
ಹಠ ಮಾಡಬೇಡಾ.. ಹಠ ಮಾಡಬೇಡ...
ಡ್ಯಾಡಿ ನೋಡಿ ನಗುತ್ತಾರೆ ಬುದ್ದಿ ಇಲ್ಲಾ ಎನ್ನುತ್ತಾರೆ
ನಂಗೆ ಮುದ್ದು ನೀಡುತ್ತಾರೆ ನಿಂಗೇ ಗುದ್ದು ಕೋಡುತ್ತಾರೆ
ಹಠ ಮಾಡಬೇಡಾ.. ಹಠ ಮಾಡಬೇಡ...
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ಬೇಡಾ ಕೋಪ ಬೇಡಾ..ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ.. ಛಲ ಮಾಡಬೇಡ....

ಅಲಸೂರ ಟ್ಯಾಂಕ್ ಬೋಟಿಂಗ್ ಇದೇ ನಿನಗೇ ಕರುಸೋದಿಲ್ಲಾ
ಅಲಸೂರ ಟ್ಯಾಂಕ್ ಬೋಟಿಂಗ್ ಇದೇ ನಿನಗೇ ಕರುಸೋದಿಲ್ಲಾ
ವಿಧಾನಸೌಧ ಲೈಟಿಂಗ್ ಇದೇ ನಿಂಗೇ ತೋರಿಸೋದಿಲ್ಲಾ...
ಸ್ಟೇಡಿಯಂ ಸ್ಕೇಟಿಂಗ್‌ ಇದೇ ನಿಂಗೇ ತೋರಿಸೋದಿಲ್ಲಾ
ಚಿಲ್ಡ್ರನ್ಸ್ ಗ್ರೂಪ್ ಕರಾಟೆಗೇ ಕರಕೊಂಡು ಹೋಗೋದಿಲ್ಲಾ
ಹ್ಹೂ...ಹ್ಹಾ.....ಹ್ಹೂ..ಹ್ಹಾ... ಹೇಳದಾಂಗ ನಾನು ಕೇಳೂ ಮಮ್ಮಿ
ಬೇಡಾ ಹಠ ಬೇಡಾ ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ..  ಛಲ ಮಾಡಬೇಡ....
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ಬೇಡಾ ಕೋಪ ಬೇಡಾ..ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ.. ಛಲ ಮಾಡಬೇಡ....

ನಾನು ನಿನ್ನ ಮುದ್ದಿನ ಬೇಬಿ ವಾಯ್ ಆರ್ ಯೂ ಎಂಗ್ರೀ
ಮಮ್ಮಿ
ನಾನು ನಿನ್ನ ಮುದ್ದಿನ ಬೇಬಿ ವಾಯ್ ಆರ್ ಯೂ ಎಂಗ್ರೀ
ಮಮ್ಮಿ
ಕೇಳಿ ಹೇಳಿ ಆಡ್ಕೋತಾರೇ..ರಮ್ಮೀ..ಪಮ್ಮೀ..ನಿಮ್ಮೀ..
ಮಾರ್ನಿಂಗ್ ಇಂದ ಪ್ರಾಬ್ಲಮ್ ಹಾಕಿ ಕನಫ್ರಮ್ ಮಾಡ್ತಿದ್ದ ಬಂದೂ ಕೋಪನಿಂಗೇ ನ್ಯಾಯವೇ ಹೇಳೂ
ಮೊದಲು ಆಯ್ಸ್ ಕ್ರೀಮ್ ತಿಂದು... ಆ...ಪ್ಲೀಸ್‌ ಮಮ್ಮಿ.. ಅಹ್ಹ್
ಕಾಲಿಗೇ ಬಿದ್ದೂ ಕೇಳ್ಕೋತೀನೀ ಬೇಡ ಹಠ ಬೇಡ
ಜನ ನೋಡಿ ‌ನಗುತ್ತಾರೆ ಛಲಾ ಮಾಡಬೇಡ..
ಡ್ಯಾಡಿ ನೋಡಿ ನಗುತ್ತಾರೆ ಛಲ ಮಾಡಬೇಡ..
ಛಲ ಮಾಡಬೇಡ..
ನಿಂಗೂ ನಂಗೂ..ಠೂ..ಠೂ...ಮಮ್ಮಿ...
ಬೇಡಾ ಕೋಪ ಬೇಡಾ..ಜನ ನೋಡಿ ‌ನಗುತ್ತಾರೆ
ಛಲಾ ಮಾಡಬೇಡ.. ಛಲ ಮಾಡಬೇಡ....
--------------------------------------------------------------------

ರಾಜೇಶ್ವರಿ (೧೯೮೧) - ಪಾಹಿ ಶ್ರೀ ರಾಜ ರಾಜೇಶ್ವರಿ ತಾಯೀ..
ಸಂಗೀತ: ಆರ್.ದಾಮೋದರ್, ಸಾಹಿತ್ಯ: ಎಸ್. ಕೆ.ಕರಿಂಖಾನ, ಗಾಯನ: ಪಿ.ಸುಶೀಲಾ, ಪ್ರಭಾಕರರಾವ.

ಹೆಣ್ಣು: ದಯಾಕರೀ..ಗೌರೀ..ಶ್ರೀ ಹರೀ..ದೇವಿ ಅಮೃತ ಸಾಗರೀ..
        ಭೂತ ಪ್ರೇತ ಪಿಶಾಚ ಹಂತ್ರೀ ಮಾಹೀ ಶ್ರೀ ರಾಜರಾಜೇಶ್ವರಿ
        ಪಾಹೀ ಶ್ರೀ ರಾಜರಾಜೇಶ್ವರಿ.. ಪಾಹೀ ಶ್ರೀ ರಾಜರಾಜೇಶ್ವರಿ
        ತಾಯೀ ಶಿವಶಂಕರೀ.. ತಾಯೇ ಅಭಯಂಕರೀ...
        ಮಾಯೇ ಮಹಿಮಾಕರೀ.. ಮಾಯೇ ಮಹಿಮಾಕರೀ..
        ಮಹಿಮಾಕರೀ..
        ಪಾಹೀ ಶ್ರೀ ರಾಜರಾಜೇಶ್ವರಿ ತಾಯೀ ಶಿವಶಂಕರೀ..

ಹೆಣ್ಣು: ನಿನ್ನನೇ ನೆನೆ ನಂಬಿದಂಥ ಭಕ್ತ ವೃಂದವ ಮರೆತೇ ನೀ..
       ದುಷ್ಟ ಶಕ್ತಿಗೇ ಅನವು ನೀಡಿ ಸಲಹು ದಿನ‌ದಿನ ಮರೆವೇ ನೀ
       ವೃಕ್ಷು ಮುಖದಲೀ.. ತಾತನೀಹನೂ.. ಪ್ರೀಯವೇ ನಿನಗೇ
       ಸನಾತನೇ... ಕಂದ ಕೊನೆಯೂಸಿರೆಳೆಯುತಿಹನೋ ಕರುಣೆ
       ಬಾರದೇ ಸ್ವಾಮೀ ನೀ... ಕಾರುಣ್ಯ ರಸಗಂಗೆ ನೀನಾಗೀ
       ಬಾರಮ್ಮಾ.. ಅಮ್ಮಾ.. ಆಅಆ....ಅಮ್ಮಾ.. ಆಅಆ....
       ಬದುಕಿನ ಬನದಲ್ಲಿ ಶಮಿ ತಂಪ ತಾರಮ್ಮಾ...
ಗಂಡು: ಮಂತ್ರ ರೂಪಿಣಿ ಯಂತ್ರ ರೂಪಿಣಿ ಅನ್ಯ‌ಮಂತ
            ವಿನಾಶಿನೀ... ವಿಶ್ವ ಮೋಹಿನೀ..ವಿಶ್ವ‌ ವ್ಯಾಪಿನೀ..
            ಅಗ್ನೀ ಮಂಡಲವಾಸಿನೀ...
            ಅಂಧ ಮೋಚನೇ ಕಾಮದಾಯಿನೇ ಪಾಂಟಿತ್ರಾತ
            ಪ್ರದಾಯಿನೀ....ವೇದ ನಾಶಿನೀ ಲೋಪ ನಾಶಿನೀ
            ಸರ್ವ ಮೃತ್ಯೂ ನೀವಾರಿನೀ...
ಹೆಣ್ಣು: ನಿನ್ನಯಾ ಚಿರಶಕ್ತಿ ಕೆರಳೀ.. ನನ್ನ ಹೃದಯವ ಸೇರಲೀ
           ನಿನ್ನದೇ ಅನಲಾಕ್ಷೀ ತೇಜ ನನ್ನ ನಯನದಿ ಜ್ವಲೀಸಲೀ...
           ಕಣ್ಣ ಭೀಕರ ಡಮರು ನಾದ ನನ್ನದೇ ನುಡಿಯಾಗಲೀ
           ಲೋಕ ಬಾಧಕ ಶೂಲ ಚೇತನ ನನ್ನ ಕೈಬಲ ಆಗಲೀ.....
           ಈ ದೇಹ ಗುಡಿಯಲ್ಲಿ ನೀ ಬಂದು ನೆಲೆಸಮ್ಮಾ...
           ಈ ದೇಹ ಗುಡಿಯಲ್ಲಿ ನೀ ಬಂದು ನೆಲೆಸಮ್ಮಾ...
           ನಿನ್ನಷ್ಟ ಶಕ್ತಿಯಾ ಕರುಣಿಸೂ ಬಾರಮ್ಮಾ..
ಗಂಡು: ಮಾಪು ನಿಷ್ಟಾಂಬೆಯ ಧೋನಿ ಇಷ್ಟಾ ಕುಂಭ ಧ್ರೋಣ
           ಮುದ್ದುಧ್ವಯಾ.. ಭಧ್ರಕಾಳಿ ರುಂಡ ಮಾಲೀ..
           ಲಲಿತ ಜೀವ ಪರಿತ್ರೀಯಾ ಮಾಸ ಮಾಸ ಪುರುಗ
           ತರ್ಪಣ ನಿನಗೆ ಅರ್ಪಣ ಭೈರವೀ..ಒಲಿದು ಈ ನನ್ನ
           ಬಾಹು ನೀಡುತಾ ಮನದಾ ದಿಟ್ಟ ಶಾಂಭವೀ...
ಹೆಣ್ಣು: ಜಲಧೀ ಸಿರಿಯನು ಧರಿಸು ಬಾ ಪವನ ವಾಹನ ಏರಿ ಬಾ
        ಗುಡುಗಿನಲ್ಲಿ ಭೋರಿಸುತ್ತಾ ಬಾ..ಗಗನ ಗರ್ಭವ ಸೀಳಿ ಬಾ
        ಘೋರ ರೂಪವ ತಾಳಿ ಬಾ... ದುಷ್ಟಶಕ್ತಿಯ ಮುರಿದು ಬಾ
        ಖೂಳ ನಾಸಿರ ಬಗಿದು ಬಾ‌ ದುರುಳ ನಾಯಕ ಸಿಗಿದು ಬಾ
        ಸಿಡಿದೆದ್ದೂ ಬಾ... ಸಿಡಿದೆದ್ದೂ ಬಾ...
.       ಪಾಹೀ ಶ್ರೀ ರಾಜರಾಜೇಶ್ವರಿ ತಾಯೀ ಶಿವಶಂಕರೀ..
--------------------------------------------------------------------

ರಾಜೇಶ್ವರಿ (೧೯೮೧) - ಕೇಳಿರಣ್ಣ ಕೇಳಿ ನಮ್ಮ ‌ಕನ್ನಡ
ಸಂಗೀತ: ಆರ್.ದಾಮೋದರ್, ಸಾಹಿತ್ಯ: ಎಸ್. ಕೆ.ಕರಿಂಖಾನ, ಗಾಯನ: ರಮಾ, ಜಯರಾಮ, ದಾಮೋದರ

ಗಂಡು: ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ
           ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ
            ದುಷ್ಟ ಶಕ್ತಿ ದೈವಶಕ್ತಿ ಎದುರೈತರಣ್ಣಾ
ಕೋರಸ್: ದುಷ್ಟ ಶಕ್ತಿ ದೈವಶಕ್ತಿ ಎದುರೈತರಣ್ಣಾ
ಗಂಡು : ದುಷ್ಟ ಶಕ್ತಿ ಉಳಿವಿಲ್ಲ ದೈವ ಶಕ್ತಿ ಅಳಿವಿಲ್ಲಾ
            ಯುಗ ಯುಗದನುಭವ ಸಾರೈತರಣ್ಣಾ..
ಕೋರಸ್: ಯುಗ ಯುಗದನುಭವ ಸಾರೈತರಣ್ಣಾ..
ಗಂಡು: ಹೋಯ್ ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ

ಗಂಡು: ಒಂದು ಕೃತಯುಗದಲ್ಲಿ ಧನುಜ ಹಿರಣ್ಯಕಶಿಪು
           ಲೋಕವನ್ನೇ ದ್ವಂಸ ಮಾಡಿ ಮರೆದಾನರಣ್ಣಾ
ಕೋರಸ್: ಲೋಕವನ್ನೇ ದ್ವಂಸ ಮಾಡಿ ಮರೆದಾನರಣ್ಣಾ
ಗಂಡು: ತಾನೇ ದೇವರೆಂದೂ ಸಾರೀ ಧರ್ಮಪುತ್ರನನ್ನೂ ದೂರಿ
           ದೈವ ಭಕ್ತರನ್ನು ಕಾಡಿ ಮೆರೆದಾನರಣ್ಣಾ..
ಕೋರಸ್: ದೈವ ಭಕ್ತರನ್ನು ಕಾಡಿ ಮೆರೆದಾನರಣ್ಣಾ..
ಗಂಡು: ದೈವ ಶಕ್ತಿ ಸಿಟ್ಟಗೇಳೀ....
            ದೈವ ಶಕ್ತಿ ಸಿಟ್ಟಗೇಳೀ ನರಸಿಂಹ ರೂಪ ತಾಳಿ
            ದುರಳರನ್ನೂ ಹೊಟ್ಟೆ ಬಗೆದು ಸೀಳಿ ಕುಣಿದೈತರಣ್ಣಾ..
ಕೋರಸ್: ದುರಳರನ್ನೂ ಹೊಟ್ಟೆ ಬಗೆದು ಸೀಳಿ ಕುಣಿದೈತರಣ್ಣಾ..
ಗಂಡು: ಹೋಯ್ ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ

ಗಂಡು: ಕಂದ ತೇತ್ರಾಯುಗದಲ್ಲಿ ಕಂಡು ಬಂದ ರಾವಣೇಂದ್ರಾ
           ಲಕ್ಷ ಹೆಂಡ್ರನಾಳುತಿದ್ದ ಕೇಳಬೇಕರಣ್ಣಾ...
ಕೋರಸ್: ಲಕ್ಷ ಹೆಂಡ್ರನಾಳುತಿದ್ದ ಕೇಳಬೇಕರಣ್ಣಾ...
ಗಂಡು: ಭೋಗದಾಸೇ ಹಿಂಗಲಿಲ್ಲಾ ಕಂಡೋರ ಹೆಂಡ್ರ ಬಿಡಲಿಲ್ಲ
           ಲೋಕ ಮಾತೆ ಸೀತೆಯನ್ನೇ ಕದ್ದೋಯ್ದರಣ್ಣಾ...
ಕೋರಸ್: ಲೋಕ ಮಾತೆ ಸೀತೆಯನ್ನೇ ಕದ್ದೋಯ್ದರಣ್ಣಾ...
ಗಂಡು: ದೈವ ಶಕ್ತಿ ರಾಮನಾಗೀ....
            ದೈವ ಶಕ್ತಿ ರಾಮನಾಗೀ ಅಂದೇ ಕೆರಳಿ ಲಂಕೆ ಸಾಗಿ
            ದುರುಳನನ್ನೂ ಬಾಣದಿಂದ ಬಡಿದಹಾಕದಣ್ಣಾ..
ಕೋರಸ್: ದುರುಳನನ್ನೂ ಬಾಣದಿಂದ ಬಡಿದಹಾಕದಣ್ಣಾ..
ಗಂಡು: ಹೋಯ್ ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ

ಗಂಡು: ಕಂದ ದ್ವಾಪರ ಯುಗದಲ್ಲಿ ಕೆಂಡದಂತೆ ಇದ್ದ ಕಂಸ
           ತಂದೆ ಭಾವ ತಂಗಿ ಸೆರೆಯೋಳ ಇಟ್ಟಾನರಣ್ಣಾ..
ಕೋರಸ್: ತಂದೆ ಭಾವ ತಂಗಿ ಸೆರೆಯೋಳ ಇಟ್ಟಾನರಣ್ಣಾ..
ಗಂಡು: ಆರು ತಂಗಿ ಕಂದರನ್ನೂ ಕರುಣೆಯಿಲ್ಲದೇ ಕೊಂದನಲ್ಲ
           ಏಳನೇ ಕಂದ ಗಗನನೇಕ್ಕೆಗರಿ ಮಾಯವಾಯಿತ್ರಣ್ಣಾ
ಕೋರಸ್: ಏಳನೇ ಕಂದ ಗಗನನೇಕ್ಕೆಗರಿ ಮಾಯವಾಯಿತ್ರಣ್ಣಾ
ಗಂಡು: ದೈವಶಕ್ತಿ ಕೃಷ್ಣನಾಗಿ...
            ದೈವಶಕ್ತಿ ಕೃಷ್ಣನಾಗಿ ಹುಟ್ಟಿ ಮುಂದೆ ಮದುವೆಕ್ಕಾಗಿ
            ಜಟ್ಟಿ ಕಾಳಗದಲ್ಲಿ ಕಂಸನ್ನ ಕೊಂದ ಹಾಕಿದರಣ್ಣಾ
ಕೋರಸ್: ಜಟ್ಟಿ ಕಾಳಗದಲ್ಲಿ ಕಂಸನ್ನ ಕೊಂದ ಹಾಕಿದರಣ್ಣಾ
ಗಂಡು:ಹೋಯ್ ಕೇಳಿರಣ್ಣ ಕೇಳಿ ನಮ್ಮ ಕನ್ನಡ ನಾಡಿನ ಸುಜನರೇ

ಗಂಡು: ಹಿಂದಿನ ಮೂರು ಯುಗದಂತೆ ಇಂದಿನ‌ ಕಲಿಯುಗದಲ್ಲು
           ದುಷ್ಟ ಶಕ್ತಿ ಲಟಪಟಿ ನಡದೈತರಣ್ಣಾ....
ಕೋರಸ್: ದುಷ್ಟ ಶಕ್ತಿ ಲಟಪಟಿ ನಡದೈತರಣ್ಣಾ....
ಗಂಡು: ಹುಣ್ಣಿಮೆ ಚಂದ್ರನನ್ನು ಕಂಡು ಬಂದು ರಾಹು
            ನುಂಗುವಂತೇ...
            ದುಷ್ಟ ಶಕ್ತಿ   ‌ಆಟಟೋಪ ಮೀರೈತರಣ್ಣಾ
ಕೋರಸ್: ದುಷ್ಟ ಶಕ್ತಿ   ‌ಆಟಟೋಪ ಮೀರೈತರಣ್ಣಾ
ಗಂಡು: ದೈವ ಶಕ್ತಿ ಮಿಂಚಿನ ಶಬ್ದ...
            ದೈವ ಶಕ್ತಿ ಮಿಂಚಿನ ಶಬ್ದ ದುಷ್ಟ ಶಕ್ತಿ ಬಡಿದಂಗೆ
            ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
ಕೋರಸ್: ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
                ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
               ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
               ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
               ತೆರೆಯ ಮೇಲೆ ನೀವೀಗ ನೋಡಬೇಕರಣ್ಣಾ...
----------------------------------------------------------------



No comments:

Post a Comment