1113. ರಾಮಕೃಷ್ಣ (೨೦೦೪)

ರಾಮಕೃಷ್ಣ ಚಿತ್ರದ ಹಾಡುಗಳು
  1. ಮೂಗುತಿ ಮುತ್ತು ಚೆಂದ ವಾಲೆ ಝುಮಕಿ ಗತ್ತು ಚೆಂದ 
  2. ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನು ಬುದ್ವಂತ 
  3. ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ 
  4. ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ 
  5. ಹಳ್ಳಿ ಹುಡುಗಿ ಹಾಡೋವಾಗ ಮಾತು ಮುಕಾಯ್ತು (ದುಃಖ )
  6. ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ 
ರಾಮಕೃಷ್ಣ (೨೦೦೪) - ಮೂಗುತಿ ಮುತ್ತು ಚೆಂದ ವಾಲೆ ಝುಮಕಿ ಗತ್ತು ಚೆಂದ
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ಹರಿಹರನ್, ಕೋರಸ್

ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ
           ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಮುತ್ತು ಚೆಂದ ಗತ್ತು ಚೆಂದ
ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ 
ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ 
            ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ 
ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ
           ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಮುತ್ತು ಚೆಂದ ಗತ್ತು ಚೆಂದ 

ಗಂಡು : ಬೆರಳಿಟ್ಟರೇ ಈ ರಂಗೀ ನಾಚುತ್ತೇ ಮದರಂಗಿ 
ಕೋರಸ್ : ಆಹ್ ಬೆರಳೇ ಚೆಂದ ಕಣ್ಣಿನ ಬೆರಗಿನಿಂದ  
ಗಂಡು : ಕಾಲಿಟ್ಟರೇ ಗೆಜ್ಜೆಗಳೇ ಜಿಗಿಯುವುದು ಮರುಳಾಗಿ 
ಕೋರಸ್ : ಆಹ್ ನಡಿಗೆ ಚೆಂದ ಕಣ್ಣಿನ ಕಪ್ಪಿಂದ 
ಗಂಡು : ರೆಪ್ಪೆಗಳೇ ಮಿಟುಕಿಸೋ ಹೂವರಳಿಸೋ ಪರಿ ಚೆಂದ 
            ನೆರಳು ಸೋಕೋ ನೆಲವೆಲ್ಲ ಹಸಿರಾಗಿಸೋ ಗುಣ ಚೆಂದ 
            ಕೊಡಚಾದ್ರಿ ತಂಬೆಲ್ಲರೆಲ್ಲ ಕೋರೆದಾ ಬೊಂಬೆ ಚೆಂದ 
ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ
           ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಮುತ್ತು ಚೆಂದ ಗತ್ತು ಚೆಂದ 

ಗಂಡು : ಕಾವೇರಿಯ ಅಲೆಯೊಳಗೆ ಇವಳ ಮುಖವ ಕಂಡಿದ್ದೇ 
ಕೋರಸ್ : ಆಹ್ ಇವಳ ಚೆಂದ ಕಂಡೋನು ಜಾರಿ ಬಿದ್ದ 
ಗಂಡು : ತಂಗಾಳಿಯು ನಾಡು ಒಳಗೆ ಇವಳೂಸಿರನೇ ಸೋಕಿದ್ದೇ 
ಕೋರಸ್ : ಆಹ್ ಸ್ಪರ್ಶ ಚೆಂದ ಧರೆ ಸ್ಪರ್ಶದಿಂದ 
ಗಂಡು : ಮಳೆಹನಿಯಾ ಇಬ್ಬನಿಯಾ ತಿದ್ದಿ ತೀಡೋ ಮುಖ ಚೆಂದ 
           ಚಂದ್ರನನ್ನೇ ನೆನೆಸಿತ್ತು ಅದ್ದಿ ತೆಗೆಯೋ ಎದೆ ಚೆಂದ 
           ಕನ್ನಡಮ್ಮನಾ ಗಂಧದಲ್ಲೇ ಕಣ್ಣು ತುಂಬಿದ ಹೆಣ್ಣು ಚೆಂದ 
          ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ
           ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಮುತ್ತು ಚೆಂದ ಗತ್ತು ಚೆಂದ
ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ 
ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ 
            ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ 
ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ
           ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಕೋರಸ್ : ಮುತ್ತು ಚೆಂದ ಗತ್ತು ಚೆಂದ 
--------------------------------------------------------------------------------------------------------------------------

ರಾಮಕೃಷ್ಣ (೨೦೦೪) - ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನು ಬುದ್ವಂತ
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ಚಿತ್ರಾ

ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ
ನಾನು ಹಾಡೋ ಪದವೇ ನಮ್ಮ ಜಾನಪದ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ

ಅಣ್ಣ ಬಸವಣ್ಣನ ವಚನ ಗೊತ್ತೇ ಇದೆ ದಾಸರ ಸಂಪತ್ತು ಉಳಿದಿದೆ
ಓದೋದಷ್ಟೇ ಇಲ್ಲಿ ನಮ್ಮ ಕಥೆಯಾಗಿದೆ ಒಳ ತಿರುಳು ಯಾರ್ಯಾರಿಗೆ ತಿಳಿದಿದೆ
ಕಾಡುಹರಟೆ ಹೆಚ್ಚಾಯ್ತು ಹರಟೆ ತಟ್ಟೆ ತುಂಬೋಯ್ತು   ದುಡಿಮೆ ಎಂಬ ಮಾತೆಲ್ಲ ದುಡ್ಡಿನ ಹಿಂದೆ ಓಡೋಯ್ತು
ಈ ನಾಡಿನಾ ಈ ಹಾಡಿನಾ ಕೈಗನ್ನಡಿ ನನ್ನ ಪದಗಳೇ ತಾನೇ ಬರೆಯೋ ಮುನ್ನಡಿ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ

ಹತ್ತಿದಷ್ಟು ಬೆಟ್ಟ ಸಿಕ್ಕಿದಷ್ಟು ಬೆಳೆ ಬಿತ್ತೋದೆ ಬೆಳೀತೀವಿ ತಿಳಿದಿಕೋ
ನನ್ನಾ ವಯಸು ಚಿಕ್ಕದು ಆಡೋ ಮಾತು ದೊಡ್ಡದು ಹಾಗಂತ ಜರೀಬೇಡ ಒಪ್ಪಿಕೋ
ನಾಯಿಬಾಲ ಡೋಂಕಂತೆ ಬಿಳಿಯ ಕಾಗೆ ಇಲ್ಲಂತೇ ಎಷ್ಟು ತಿದ್ದಿ ತೀಡಿದರೂ ಮನುಷನ್ ಬುದ್ದಿ ಮಣ್ಣಂತೆ
ಅನುಭವಗಳೇ ನಮ್ಮ ಬೆಳೆಸುವ ಹಳ್ಳಿ ಲಾವಣಿ ನಾನು ಅಕ್ಷರ ಕಲಿಸೋ ಮೇಷ್ಟ್ರ ಮಗಳಮ್ಮಿ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ
ನಾನು ಹಾಡೋ ಪದವೇ ನಮ್ಮ ಜಾನಪದ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
--------------------------------------------------------------------------------------------------------------------------

ರಾಮಕೃಷ್ಣ (೨೦೦೪) - ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ಎಸ್.ಪಿ.ಬಿ.

ಗಂಡು : ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
           ದುಂಡು ಮುಖವು ಬಳ್ಳಾರಿ ಈರುಳ್ಳಿ  ಮುದ್ದಾದ ಬಾಯಿ ಸಿಹಿ ಮಿಠಾಯಿ
          ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಕೋರಸ್ : ಸಕ್ಕರೆಯ ಈ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ         

ಗಂಡು : ಮಡಿಕೇರಿ ಹೆಣ್ಣು ಮಲಗೋಬಾ ಹಣ್ಣು ಬಣ್ಣವು ಚಿನ್ನದ ಅಪರಂಜಿ
            ಕಣ್ಣ ನೋಟವು ಸುಂದರ ಮೈಸೂರು ಕನ್ನಂಬಾಡಿಯ ಕಾರಂಜಿ
           ಕಣ್ಣಾ ಹುಬ್ಬು ಕಾಮನಬಿಲ್ಲೆ ಸೊಂಟ ಮಂಡ್ಯದ ಕಬ್ಬಿಣ ಜಲ್ಲೆ ಕಂಗಳು ನವ್ವಾಲೆ ಬೆನ್ನು ಬೆಣ್ಣೆ ಮಸಾಲೇ
ಕೋರಸ್ : ಕಂಗಳು ನವ್ವಾಲೆ ಬೆನ್ನು ಬೆಣ್ಣೆ ಮಸಾಲೇ
ಗಂಡು : ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
           ದುಂಡು ಮುಖವು ಬಳ್ಳಾರಿ ಈರುಳ್ಳಿ  ಮುದ್ದಾದ ಬಾಯಿ ಸಿಹಿ ಮಿಠಾಯಿ
          ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಕೋರಸ್ : ಸಕ್ಕರೆಯ ಈ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ         

ಕೋರಸ್ : ತುಟಿಯು ಜೇನ ಕೊಡ ಕೆನ್ನೆಯು ಧಾರವಾಡ ಫೇಡ್
               ತಿಲಕ ಇಕ್ಕಿದ ಹಣೆ ಸ್ವೀಟು ಜಿಲೇಬಿ ನುಣ್ಣನೆಯ ಗಲ್ಲ ರಸಗುಲ್ಲ ಕಣ್ಣಮ್ಮಿ
               ಚಿಕ್ಕಮಗಳೂರು ರೋಜಾ ಸಿಕ್ಕಿದರೆ ಸಖತ್ತು ಮಜ
               ಬಳುಕಿ ನಡೆಯುವ ಬಿನ್ನಾಣದ ಜಾಣೆ ಸೊಬಗಿನ ಸೀಮೆಗೆಲ್ಲ ನೀನೇ ಖಜಾನೆ
ಗಂಡು : ಕಣ್ಣಿನ ಲುಕ್ಕು ಗುಂಡಿನ ಕಿಕ್ಕು ಮುಗುಳು ನಗೆ ದಂರೋಟು
            ಊರ್ವಶಿ ಯಾಕೇ ಮೇನಕೇ ಯಾಕೇ ಇವಳ ಸಮ ಯಾರುಂಟು
           ಅಂದದ ಮೈಯ್ಯ ಉಬ್ಬು ತಗ್ಗು ಚೆಂದ ಮೂಗು ಸಂಪಿಗೆ ಮೊಗ್ಗು
           ಫಿಗರು ಟೀನೇಜು ಕಲರ್ ಕೊಡಗು ಆರಂಜು
           ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
           ದುಂಡು ಮುಖವು ಬಳ್ಳಾರಿ ಈರುಳ್ಳಿ  ಮುದ್ದಾದ ಬಾಯಿ ಸಿಹಿ ಮಿಠಾಯಿ
          ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಕೋರಸ್ : ಸಕ್ಕರೆಯ ಈ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ         
--------------------------------------------------------------------------------------------------------------------------

ರಾಮಕೃಷ್ಣ (೨೦೦೪) - ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ಎಸ್.ಪಿ.ಬಿ. ಟಿಪ್ಪು

ಕೋರಸ್ :  ಏಯ್ ದಾರಿಬಿಡಿ ದಾರಿಬಿಡಿ ದಾರಿಬಿಡಿ ಫಾಟಾಫಟು ದಾರಿಬಿಡಿ ಐಸೆಲೆಕ್ ಅರೆರೇ ...
ಗಂಡು : ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
           ವಿಷ್ಣುವರ್ಧನ ಅಂಬರೀಶ ರವಿಚಂದ್ರನ್ ಜಗ್ಗೇಶು ಶಿವಣ್ಣ ಅಪ್ಪು ರಮೇಶು ಉಪ್ಪಿ ದರ್ಶನ ಸುದೀಪು
           ಎಲ್ಲಾರು ಬರ್ತಾರೇ ಎಲ್ಲಾರು ಬರ್ತಾರೆ ನೋಡಲು ಬನ್ನಿ
           ರಂಗಣ್ಣ ವೆಂಕಣ್ಣ ಮಂಜಮ್ಮ ನಂಜಮ್ಮ ಎಲ್ಲರು ಬನ್ನಿ
           ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ

ಗಂಡು : ರೀಲಿನಲ್ಲಿ ರಿಯಲ್ ಲೈಫು ತೋರಿಸೋ ಸಿನಿಮಾ ಭುವಿಯಲ್ಲಿ ತಾರೆಗಳ ಸುತ್ತಿಸೋ ಸಿನಿಮಾ
           ಬೇಡರ ಕಣ್ಣ ನಡಿಗೆ ಅಣ್ಣ ಮಾಡಿಸೋ ಸಿನಿಮಾ ಕಂಡಕ್ಟರು ಸೂಪರ ಸ್ಟಾರು ಆಗಿಸೋ ಸಿನಿಮಾ
           ದಿನವೆಲ್ಲ ಮೈಮುರಿದು ದುಡಿಯೋರು ನಾವಣ್ಣ ಮದ ಮಧ್ಯ ಮನಸಿಗೆ ಸ್ವಲ್ಪ ಖುಷಿ ಬೇಕಣ್ಣ
           ಕಳ್ಳ ಸಿಡಿ ಟಿವಿಯಲ್ಲಿ                      ಕೋರಸ್ : ಮಜ ಎಲ್ಲಿ ಉಂಟಣ್ಣ
ಗಂಡು : ಟಾಕೀಸನಲ್ಲಿ ಸಿಗೋ ಮಜಾ          ಕೋರಸ್ : ಬೇರೆ ಎಲ್ಲೂ ಇಲ್ಲಣ್ಣ
ಗಂಡು : ಎಲ್ಲರು ಬನ್ನಿ ಎಲ್ಲರು ಬನ್ನಿ ನಮ್ಮ ಸಿನಿಮಾಗೇ ...
ಕೋರಸ್ : ಅಣ್ಣೋರು ಬನ್ನೀ ಅಕ್ಕೋರು ಬನ್ನಿ ನಮ್ಮ ಸಿನಿಮಾಗೇ ...
ಗಂಡು : ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ

ಗಂಡು : ಫಾರೀನನು  ನಮ್ಮೂರಲ್ಲೇ ತೋರಿಸೋ ಸಿನಿಮಾ ಹಾಡು ಡ್ಯಾನ್ಸ್ ಫೈಟುಗಳ ಅದ್ಬುತ ಸಿನಿಮಾ
           ಗಾಂಧಿ ಸೀಟು ಬಾಲ್ಕನಿಗೇ ಒಂದೇ ಸಿನಿಮಾ ನಮ್ಮ ನಿಮ್ಮ ಬಾಳು ಸಹ ಒಂಥರ ಸಿನಿಮಾ
           ಶಂಕರನಾಗು ಪುಟ್ಟಣ್ಣ ನಮಗಿಲ್ಲಿ ಸಿಕ್ತಾರೇ ಸಾಧಿಸೋರೆಂದಿಗೂ ಸಾಯೋದಿಲ್ಲ ಅಂತಾರೆ
ಕೋರಸ್ : ಕನ್ನಡ ಜನ ಕನ್ನಡ ಸಿನಿಮಾ ಮೊದಲು ನೋಡಬೇಕಣ್ಣ
ಗಂಡು : ನಮ್ಮ ಜನ ನಮ್ಮತನ                 ಕೋರಸ್ : ಬೆಳೆಸಬೇಕು ಕೇಳ್ರಣ್ಣ
ಕೋರಸ್ : ನೋಡೋಣ ನೋಡೋಣ ಬನ್ನಿ ನಮ್ಮ ಸಿನಿಮಾನಾ ಕಳಿಸೋಣ ಬನ್ನಿ ಕಳಿಸೋಣ   ನಮ್ಮ ನೋವನ್ನ
ಗಂಡು : ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
           ವಿಷ್ಣುವರ್ಧನ ಅಂಬರೀಶ ರವಿಚಂದ್ರನ್ ಜಗ್ಗೇಶು ಶಿವಣ್ಣ ಅಪ್ಪು ರಮೇಶು ಉಪ್ಪಿ ದರ್ಶನ ಸುದೀಪು
           ಎಲ್ಲಾರು ಬರ್ತಾರೇ ಎಲ್ಲಾರು ಬರ್ತಾರೆ ನೋಡಲು ಬನ್ನಿ
           ರಂಗಣ್ಣ ವೆಂಕಣ್ಣ ಮಂಜಮ್ಮ ನಂಜಮ್ಮ ಎಲ್ಲರು ಬನ್ನಿ
           ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
--------------------------------------------------------------------------------------------------------------------------

ರಾಮಕೃಷ್ಣ (೨೦೦೪) - ಹಳ್ಳಿ ಹುಡುಗಿ ಹಾಡೋವಾಗ ಮಾತು ಮುಕಾಯ್ತು
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ಎಸ್.ಪಿ.ಬಿ. ಟಿಪ್ಪು

ಹಳ್ಳಿ ಹುಡುಗಿ ಹಾಡೋವಾಗ ಮಾತು ಮೂಕಾಯ್ತು ಕನಸು ಕಟ್ಟಿ ಕಾಣೋವಾಗ ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು ಮನಸುಗಳು ಬಡವಾಯ್ತು ನಂಬಿರುವ ನಂಬಿಕೆಯೇ ಕಣ್ಣೀರ ಕೊಡವಾಯ್ತು
ಬಾಡೋ ಹೃದಯಕೆ ಯಾಕೇ ಪ್ರೀತಿಯ ಪನ್ನೀರು
ಹಳ್ಳಿ ಹುಡುಗಿ ಹಾಡೋವಾಗ ಮಾತು ಮೂಕಾಯ್ತು ಕನಸು ಕಟ್ಟಿ ಕಾಣೋವಾಗ ಕಣ್ಣು ಕುರುಡಾಯ್ತು

ಮಲ್ಲೆ ಉಯ್ಯಾಲೆಯಲ್ಲಿ ಕೋಟಿ ನಕ್ಷತ್ರ ಎಣಿಸೋ ಹುಚ್ಚುಚ್ಚು ಕನಸೆಲ್ಲ ಪ್ರೀತಿಯು 
ಮುಳ್ಳು ಹೂವಾಗಬಹುದು ಸುಳ್ಳು ನಿಜವಾಗದಮ್ಮ ಹೆಚ್ಚೆಚ್ಚು ಸೊಗಸೆಲ್ಲ ಪ್ರೀತಿಯು 
ಬೀಸೋ ಗಾಳಿ ಬೀಸಿನಲಿ ಅವನ ದಾರಿ ಹುಡುಕಿದೇ ನಾ 
ಮಧುರ ಮಳೆಯ ಆಸೆಯಲಿ ಮರುಳಗಾಡ ಅಲೆದೆ ನಾ 
ಇದು ಪ್ರೀತಿಗೂ ಗೊತ್ತಾಗ್ತದಾ ಸಂಭಾಷಣೆ ಸನಿಹ ಎಂದ ಕೂಡಲೇ ವಿರಹದ ಘರ್ಷಣೆ 
ಹಳ್ಳಿ ಹುಡುಗಿ ಹಾಡೋವಾಗ ಮಾತು ಮೂಕಾಯ್ತು ಕನಸು ಕಟ್ಟಿ ಕಾಣೋವಾಗ ಕಣ್ಣು ಕುರುಡಾಯ್ತು 

ನೆನ್ನೆ ಕಳೆದಾ ನೆನಪು ನಾಳೆ ಕಳೆಯೋ ಒಳಗೆ ಕಳೆದೋಯ್ತು ಅನ್ನೋದೇ ಪ್ರೀತಿಯಾ 
ಊರಾ ಕಣ್ಣು ಬೀಳದೇ ಯಾರ ಮಾತು ಕೇಳದೇ ಎದೆಯಲ್ಲಿ ಬಚ್ಚಿಟ್ಟೆ ಬೆಂಕಿಯಾ 
ಯಾರ ಹಣೆಯ ಬರಹದಲ್ಲಿ ಯಾರ ಹೆಸರು ಕೆತ್ತಿಹುದು 
ತಿದ್ದಿ ತೀಡೋ ಬ್ರಹ್ಮನಿಗೂ ಪ್ರೀತಿ ಹೆಸರು ಮರೆತಿಹುದು 
ಅಯ್ಯೋ ಹೃದಯವೇ ಹೇಳಬಾರದೇ ನಂಗೆ ಉತ್ತರ ಯಾಕೆ ಸಾಯುವ ಪ್ರೀತಿಗೆ ಕಾಯುವೇ ಹತ್ತಿರ 
ಹಳ್ಳಿ ಹುಡುಗಿ ಹಾಡೋವಾಗ ಮಾತು ಮೂಕಾಯ್ತು ಕನಸು ಕಟ್ಟಿ ಕಾಣೋವಾಗ ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು ಮನಸುಗಳು ಬಡವಾಯ್ತು ನಂಬಿರುವ ನಂಬಿಕೆಯೇ ಕಣ್ಣೀರ ಕೊಡವಾಯ್ತು
ಬಾಡೋ ಹೃದಯಕೆ ಯಾಕೇ ಪ್ರೀತಿಯ ಪನ್ನೀರು
ಹಳ್ಳಿ ಹುಡುಗಿ ಹಾಡೋವಾಗ ಮಾತು ಮೂಕಾಯ್ತು ಕನಸು ಕಟ್ಟಿ ಕಾಣೋವಾಗ ಕಣ್ಣು ಕುರುಡಾಯ್ತು
--------------------------------------------------------------------------------------------------------------------------

ರಾಮಕೃಷ್ಣ (೨೦೦೪) - ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಸಂಗೀತ : ಎಸ್ .ಎ.ರಾಜಕುಮಾರ ಸಾಹಿತ್ಯ : ರಾಜೇಶ, ಮಾತಂಗಿ

ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
           ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ ಮಳೆಯಿರಲಿ ಚಿಲಿ ಚಿಲಿ ಮನಸಿನಲಿ ಕಚಗುಳಿ ಇಡೋ ಕನಸಿರಲಿ
ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ
ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ

ಹೆಣ್ಣು : ಹಕ್ಕಿಗಳು ಮೇಲೇರಿ ಈ ಪ್ರೀತಿ ಎಂಬ ಅಂಬಾರಿ ಮೋಡಗಳ ಮೇಲೆ ನಮ್ಮ ಹೆಸರು ಬರೆದಿದೆ 
ಗಂಡು : ಚುಕ್ಕಿಗಳು ಒಂದು ಸೇರಿ ನನ್ನ ಕನಸಲಿ ಒಂದು ಸಾರಿ ನೀನಿಟ್ಟ ಮುತ್ತು ಬೇಕು ಅಂತ ಕುಳಿತಿವೆ 
ಹೆಣ್ಣು : ಆಸೆ ಹದಿನಾರು ಬಿಸಿ ಕನಸು ಮುನ್ನೂರು ಹಾಡೋ ಪ್ರತಿ ನಿಮಿಷ ಮೈಯೆಲ್ಲಾ ಮುಂಗಾರು 
ಗಂಡು : ಹೇಯ್ ನನ್ನಾಸೆ ಜಿಗಿಯೋ ಮುತ್ತಿನ ಕಾರಂಜಿ 
ಹೆಣ್ಣು : ನಿನಲ್ಲಿ ನಲಿಯೋ ನಲಿಯೋ ನನ್ನೆದೆ ಅಪರಂಜಿ 
ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ

ಗಂಡು : ಗಾಳಿಯಲಿ ಗಂಧವಿದೆ ಹೆಣ್ಣಿನಲಿ ಅಂದವಿದೆ ಅಂದಕ್ಕೆ ಗಂಧ ಹಚ್ಚೋ ಗಂಡೆದೆ ಇಲ್ಲಿದೆ 
ಹೆಣ್ಣು : ಹೆಣ್ಣುಗಳು ಒಂದು ಪದ್ಯ ಗಂಡುಗಳು ಒಂದು ಗದ್ಯ ಎರಡೆರಡರ ಮಧ್ಯ ಪ್ರೀತಿ ಸುಮ್ಮನೆ ಕುಳಿತಿದೆ 
ಗಂಡು : ಸಣ್ಣ ನಡು ಸಣ್ಣ ಒಳಗಿಟ್ಟೆ ಮನಸನ್ನ ಕಲಿಸೋ ಗುರುವಿಲ್ಲ ಈ ವಯಸಾ ವ್ಯಾಕರಣ 
ಹೆಣ್ಣು : ವಯ್ಯಾರ ಇಣುಕಿ ಇಣುಕಿ ಕರೆಯೋ ಹೊತ್ತಾಯ್ತು 
ಗಂಡು : ಅಂಗಾಂಗ ಮಿಣುಕಿ ಮಿಣುಕಿ ಎಲ್ಲ ಗೊತ್ತಾಯ್ತು 
           ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ ಮಳೆಯಿರಲಿ ಚಿಲಿ ಚಿಲಿ ಮನಸಿನಲಿ ಕಚಗುಳಿ ಇಡೋ ಕನಸಿರಲಿ
ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ
ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
--------------------------------------------------------------------------------------------------------------------------

No comments:

Post a Comment