1389. ರತ್ನಗಿರಿಯ ರಹಸ್ಯ (೧೯೫೭)

ರತ್ನಗಿರಿ ರಹಸ್ಯ ಚಲನಚಿತ್ರದ ಹಾಡುಗಳು
  1. ಶರಣರ ಕಾಯೋ 
  2. ಓ ರಾಜ ಮಹಾರಾಜ 
  3. ಬಾ ಬಾ ಬಾ ಓಡಿ ಬಾ 
  4. ಅಮರ ಮಧುರ ಪ್ರೇಮ 
  5. ಅನುರಾಗದ ಅಮರಾವತೀ 
  6. ಮಹಾ ವೇದಗಳ ಮೇಲಾಣೆ 
  7. ಯೌವ್ವನವೇ ಈ ಯೌವ್ವನವೇ 
  8. ಆನಂದ ಮಹಾದಾನಂದಾ 
  9. ಕಲ್ಯಾಣ ನಮ್ಮ 
  10. ಕಿವಿಯೆರಡೂ ತಾ ಕೇಳಯ್ಯಾ 
  11. ಸುಮಬಾಣ ನೀ ಬಿಡೂ ಮೌನ 
ರತ್ನಗಿರಿಯ ರಹಸ್ಯ (೧೯೫೭) - ಶರಣರ ಕಾಯೋ ಜಗನ್ನಾಥ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಆರ್.ರಾಜಲಕ್ಷ್ಮಿ 

ಶರಣರ ಕಾಯೋ ಜಗನ್ನಾಥ ನೀ ಶರಣರ ಕಾಯೋ ಜಗನ್ನಾಥ 
ಕರುಣೆಯ ತೋರೋ ಭಾಗ್ಯ ವಿಧಾತ 
ಶರಣರ ಕಾಯೋ ಜಗನ್ನಾಥ 

ಕೃತು ಮಧುರಾ ನಿನ್ನ ಪೋಗುಳುವಾ ವೇದ.. 
ವೇದವೇ ನೀಗುವಾ ಪ್ರಣವ ಸುನಾದ.. ಆಆಆ... ಆಆಆ 
ವೇದವೇ ನೀಗುವಾ ಪ್ರಣವ ಸುನಾದ ಅನುದಿನ  ಪಾವನ ಯೋಗವಿನೋದ.. 
ಆನಂದ ತಾಂಡವ ಆಡುವ ಪಾಡನೀ 
ಶರಣರ ಕಾಯೋ ಜಗನ್ನಾಥ 

ಬಾಲ ಮಲ್ಲೆಯನಗೆಂದೇ ಓಡೋಡಿ ಬಂದೇ...  ಆಆಆಅ..   
ಬಾಲ ಮಲ್ಲೆಯನಗೆಂದೇ ಓಡೋಡಿ ಬಂದೇ  
ದಾನವ ಇಂಗಿದೇ ಒಲಿದು ನೀ ನಿಂದೇ 
ನಲ್ಮೆಯ ಶರಣಸಿಯಾಲನ ತಂದೇ 
ಅಗುಳಿನ ಸ್ವರ ಕೇಳೋ ಶರಣಂಬೇ ನೀ 
ಶರಣರ ಕಾಯೋ ಜಗನ್ನಾಥ 

ಕನಕ ಪುರಂದರ.. ಆಆಆ...  
ಕನಕ ಪುರಂದರ ಮಾನಸ ಲೋಲ ಮನದಲಿ ಧೃವನನು ಕಾಯ್ದ ಸುಶೀಲಾ 
ಕಂದ ಪ್ರಸಾದನ ಪೊರೆದ ದಯಾಳ.... ಆಆಆ ಆಆಆ 
ಕಂದ ಪ್ರಸಾದನ ಪೊರೆದ ದಯಾಳ ಮಂಜುಳ ಮುರುಳಿಯ ಗಾನವಿಲೋಲ ನೀ 
ಶರಣರ ಕಾಯೋ ಜಗನ್ನಾಥ 
ಕರುಣೆಯ ತೋರೋ ಭಾಗ್ಯ ವಿಧಾತ 
ಶರಣರ ಕಾಯೋ ಜಗನ್ನಾಥ 
----------------------------------------------------------------------------------------------------
  
ರತ್ನಗಿರಿಯ ರಹಸ್ಯ (೧೯೫೭) - ಓ ರಾಜ ಮಹಾರಾಜ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ರಾಣಿ, ಸರೋಜಿನಿ  

ಓ ರಾಜ ಓ ಮಹಾರಾಜ ಓ ರಾಜ ಓ ಮಹಾರಾಜ 
ಓ ರಾಜ ಮಹಾರಾಜ ಬಾ ಮನ್ವವ 
ನೀ ನಮ್ಮ ಯುವರಾಣಿ ಆಶಾ ವೈಭವ 
ನೀ ನಮ್ಮ ಯುವರಾಣಿ ಆಶಾ ವೈಭವ 
ಓ ರಾಜ ಓ ಮಹಾರಾಜ ಓ ರಾಜ ಓ ಮಹಾರಾಜ 

ಲಲಿತ ಏಕಾಂತ ರಾಗ ಲೀಲೆ ಸರಸ ಶೃಂಗಾರ ಭಾವಾಲೋಲೆ.. ಓಓಓಓ 
ಲಲಿತ ಏಕಾಂತ ರಾಗ ಲೀಲೆ ಸರಸ ಶೃಂಗಾರ ಭಾವಾಲೋಲೆ.. ಓಓಓಓ 
ಮನಸಾರೇ ನಿನ್ನ ತಾ ಬಯಸಿರುವಳು  
ಮನಸಾರೇ ನಿನ್ನ ತಾ ಬಯಸಿರುವಳು ಮುದದಿ ಒಲಿದು ನಲ್ಮೆ ತೋರು 
ಓ ರಾಜ ಓ ಮಹಾರಾಜ ಓ ರಾಜ ಓ ಮಹಾರಾಜ 
---------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಬಾ ಬಾ ಬಾ ಓಡಿ ಬಾ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ರಾಣಿ, ಪಿ.ಲೀಲಾ 

ಬಾ ಬಾ ಬಾ ಓಡಿ ಬಾ ಬಾ ಬಾ ನೀ ಬಾ ಬಾ ಬಾ ಓಡಿ ಬಾ ಬಾ ಬಾ 
ಈ ಧೃವತಾರೇ ನಿನಗೇನೇಯಾದೇ ಬಾಲೇ ಕೋಮಲೇ ಇಲ್ಲೀ    
ಬಾ ಬಾ ಬಾ ಓಡಿ ಬಾ ಬಾ ಬಾ ನೀ ಬಾ ಬಾ ಬಾ ಓಡಿ ಬಾ ಬಾ ಬಾ 

ಓಓಓಓಓ.. ದುಂಬಿ ಹೂವಿನೊಡನಾಡೇ ಏನೊಂದೂ ಕಾಡಿ ಬಡಿದಾಡೇ   
ದುಂಬಿ ಹೂವಿನೊಡನಾಡೇ ಏನೊಂದೂ ಕಾಡಿ ಬಡಿದಾಡೇ   
ಉಲ್ಲಾಸದ ಮನವೆಲ್ಲಾ ಉಯ್ಯಾಲೆಯಂತಾಡುದೇ 
ಉಲ್ಲಾಸದ ಮನವೆಲ್ಲಾ ಉಯ್ಯಾಲೆಯಂತಾಡುದೇ ಇಲ್ಲೀ 
ಬಾ ಬಾ ಬಾ ಓಡಿ ಬಾ ಬಾ ಬಾ ಈ ಮನ್ಮಥ ರಾಜ ನಿನ್ನವನೋಜ ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ 

ಅರಿಯದ ಕನ್ನಿಕೆಯೂ ಕರೆಯದೇ ಬಂದ ಮನ್ಮಥನೇ...  
ನಿನ್ನ ಗಿಳಿಗೇರುದಾತನಲ್ಲಿ ಆಪ್ತ ಸಖ ಚಂದ್ರನಲ್ಲೀ.. 
ಪ್ರೇಮ ಸತಿರತಿಯಲ್ಲಿ ಸುಮಬಾಣ ಬತ್ತಳಿಕೆಯಲ್ಲೀ.. ಎಲ್ಲೀ .. ಎಲ್ಲೀ .. 
ಶೃಂಗಾರವರಿಯನ ಓ ಮಂಗರಾಜ ಬೇಗನೆ ದಯಮಾಡು 
ಶೃಂಗಾರವರಿಯನ ಓ ಮಂಗರಾಜ ಬೇಗನೆ ದಯಮಾಡು 
ನೀ ಗಡಗಡ ಮುನ್ನೋಡು ನೀ ಓಡೋಡು ದೂರ ಓಡೋಡು 

ಕಾಮನಬಿಲ್ಲೇ ನೀನಲ್ಲೇ ಸುಮ ಬಾಳುವೆ ನಿನ್ನ ಕಣ್ಣಲ್ಲೇ  
ಕಾಮನಬಿಲ್ಲೇ ನೀನಲ್ಲೇ ಸುಮ ಬಾಳುವೆ ನಿನ್ನ ಕಣ್ಣಲ್ಲೇ  
ನೀನೇ ರನ್ನದ ಗಿಣಿಯಲ್ಲೇ ಅನುರಾಗದ ಲತೆ ಈ ಜಗದಲ್ಲೇ 
ಬಾ ಬಾ ಬಾ ಓಡಿ ಬಾ ಬಾ ಬಾ ಈ ಮನ್ಮಥ ರಾಜ ನಿನ್ನವನೋಜ ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ 
---------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಅಮರ ಮಧುರ ಪ್ರೇಮ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಪಿ.ಸುಶೀಲಾ 

ಅಮರ ಮಧುರ ಪ್ರೇಮ... ನೀ ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
ಅಮರ ಮಧುರ ಪ್ರೇಮ... ನೀ ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
ಅಮರ ಮಧುರ ಪ್ರೇಮ... ನೀ ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 

ಸದಾನುರಾಗದಿ ತಾ ನಿನಗಾಗೀ ಕಾದಿದೇ ಈ ಸುಮರಾಗೀ .. ಆಆಆ.. ಓಓಓಓಓ  
ಸದಾನುರಾಗದಿ ತಾನಿನಗಾಗೀ ಕಾದಿದೇ ಈ ಸುಮರಾಗೀ .. 
ಸುಮ ಯೌವ್ವನವೂ ಬಾಡುವ ಮೊದಲೇ 
ಸುಮ ಯೌವ್ವನವೂ ಬಾಡುವ ಮೊದಲೇ ಬಾವಗದೇನೋ ನೀ ಬಳಿ ಸಾರೇ 
ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
ಅಮರ ಮಧುರ ಪ್ರೇಮ... ನೀ ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
 
ಮನದಲೀ ಆಸೆಯ ತುಂಬಿದ ಮೇಲೆ ಮರತೇ ಹೂಡಲೂಬಹುದೇ... ಆಆಆ 
ಮನದಲೀ ಆಸೆಯ ತುಂಬಿದ ಮೇಲೆ ಮರತೇ ಹೂಡಲೂಬಹುದೇ... 
ಹಲವೂ ನೆಲವೂ ನಲವೂ ಚೆಲುವೂ 
ಹಲವೂ ನೆಲವೂ ನಲವೂ ಚೆಲುವೂ ಕನಸೂ ಕಥೆಯೋ ಆಗುವ ಮುನ್ನ 
ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
ಅಮರ ಮಧುರ ಪ್ರೇಮ... ನೀ ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ.... 
---------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಅನುರಾಗದ ಅಮರಾವತೀ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಪಿ.ಲೀಲಾ, ಸುಂದರರಾಜನ್ 

ಹೆಣ್ಣು : ಅನುರಾಗದ ಅಮರಾವತೀ 
          ಅನುರಾಗದ ಅಮರಾವತೀ ಅಸಮಾನ ಭಾಗ್ಯದ ರಾಶೀ 
          ನಮ್ಮ ತಣ್ಣಾದ ಪ್ರೇಮದ ಜ್ಯೋತಿ  
          ಅನುರಾಗದ ಅಮರಾವತೀ 
          ಅನುರಾಗದ ಅಮರಾವತೀ ಅಸಮಾನ ಭಾಗ್ಯದ ರಾಶೀ 
          ನಮ್ಮ ತಣ್ಣಾದ ಪ್ರೇಮದ ಜ್ಯೋತಿ  

ಹೆಣ್ಣು : ಆಶಾ ವಿಲಾಸಿಗೇ ರಸದೌತಣ ಬರಿದಾದ ಬಾಳಿಗೇ ನವಚೇತನ 
          ಆಶಾ ವಿಲಾಸಿಗೇ ರಸದೌತಣ ಬರಿದಾದ ಬಾಳಿಗೇ ನವಚೇತನ 
          ಹೊಸ ಹಾಡಿಗೇ .. ಇದು ಸಾಧನ ಜಗವೆಲ್ಲಾ ನೀ ಮರೆಯೋ ಬೃಂದಾವನ 
          ಅನುರಾಗದ ಅಮರಾವತೀ 
ಗಂಡು : ಹಗುಗಾಗಗ ಹಗೆಗಾಗತೀ 
ಹೆಣ್ಣು : ಹಾಗಲ್ಲಾ .. ಹೀಗೆ... ಅನುರಾಗದ ಅಮರಾವತೀ ಅಸಮಾನ ಭಾಗ್ಯದ ರಾಶೀ 
          ನಮ್ಮ ತಣ್ಣಾದ ಪ್ರೇಮದ ಜ್ಯೋತಿ  

ಹೆಣ್ಣು : ಆಆಆ.. ಓಓಓ ... ಆಆಆ ಆಆಆಆ 
          ಹಾಯಾಗೀ ತಂಗಾಳಿ ಒಡನಾಡುತೇ ನವ್ಯ ಮಂದಾರ ಸೌಗಂಧ ತಾ ತುಂಬಿದೇ 
          ಹಾಯಾಗೀ ತಂಗಾಳಿ ಒಡನಾಡುತೇ ನವ್ಯ ಮಂದಾರ ಸೌಗಂಧ ತಾ ತುಂಬಿದೇ 
          ಒಲವೇಲ್ಲಾ ನಲ್ಮೆಯ ಎಳೆಯಾದೀತೇ ಬಾಳೆಲ್ಲಾ ಸವಿಜೇನ ಕಡಲಾಗಿದೇ 
ಇಬ್ಬರು : ಅನುರಾಗದ 
ಗಂಡು  : ಅಮರಾವತೀ ಅನುರಾಗದ ಅಮರಾವತೀ ಅಸಮಾನ ಭಾಗ್ಯದ ರಾಶೀ 
ಹೆಣ್ಣು : ನಮ್ಮ ತಣ್ಣಾದ ಪ್ರೇಮದ ಜ್ಯೋತಿ  

ಗಂಡು : ಕಾವ್ಯವು ಧಾಮಯ ವಾನರಾಣಿಯೇ..  ಯೌವ್ವನ ರಾಣಿಯೇ 
            ಕಾವ್ಯವು ಧಾಮಯ ವಾನರಾಣಿಯೇ ಎನ್ನ ಮಾನಸ ಲೀಲಾ ಕಲಾ ವಾಣಿಯೇ 
            ಕಾವ್ಯವು ಧಾಮಯ ವಾನರಾಣಿಯೇ 
            ಆಡದ ಸುಮಾರಾಣಿ ಬಾ ರಾಗಿಣಿ ... ಆಆಆಅ... ಆಆಆ 
            ಆಡದ ಸುಮಾರಾಣಿ ಬಾ ರಾಗಿಣಿ ಮೋಹದ ಮಧು ನೀಗೆ ಮನಮೋಹಿನೀ... 
            ಮೋಹದ ಮಧು ನೀಗೆ ಮನಮೋಹಿನೀ... ಈ ಜೀವನ ಸುಖಸಾಧನ 
            ಈ ಜೀವನ ಸುಖಸಾಧನ ಜಗವೆಲ್ಲಾ ಮೈಮರೆಯೋ ಬೃಂದಾವನ 
ಇಬ್ಬರು : ಅನುರಾಗದ ಅಮರಾವತೀ
             ಅನುರಾಗದ ಅಮರಾವತೀ ಅಸಮಾನ ಭಾಗ್ಯದ ರಾಶೀ 
             ನಮ್ಮ ತಣ್ಣಾದ ಪ್ರೇಮದ ಜ್ಯೋತಿ  
----------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಮಹಾ ವೇದಗಳ ಮೇಲಾಣೆ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಟಿ.ಎಂ.ಸುಂದರರಾಜನ 

ಮಹಾವೇದಗಳ ಮೇಲಾಣೇ... ದೈವವೂ ಯಾರೆಂದೂ ತಿಳಿ ಮನವೇ.. ತಿಳಿ ಮನವೇ  
ತಾಯಿ ತಂದೆಯ ದೈವ..  
ತಾಯಿ ತಂದೆಯ ದೈವ ಕರುಣದಿ ಕಾಯೋ ಮಮತಾ ಜೀವ 
ಕರುಣದಿ ಕಾಯೋ ಮಮತಾ ಜೀವ   
ತಾಯಿ ತಂದೆಯ ದೈವ..  

ಪಾವನ ವಾತ್ಸಲ್ಯ ನಂದಾದೀಪ.. 
ಪಾವನ ವಾತ್ಸಲ್ಯ ನಂದಾದೀಪ.. ಲೋಲಿಸಿ ಪಾಲಿಸೋ ತಾಳ್ಮೆಯ ರೂಪ 
ತಾಯಿ ತಂದೆಯ ದೈವ..  

ಬಾಳಿನ ಲತೆಯೆಂದೂ ಕರುಳಿನ ಬಾ ನೆರೆವಾ 
ಬಾಳಿನ ಲತೆಯೆಂದೂ ಕರುಳಿನ ಬಾ ನೆರೆವಾ 
ಕಣ್ಮಣಿ ಬಾ ಎಂದೂ ಪ್ರೇಮದಿ ಕರೆವಾ 
ಕಣ್ಮಣಿ ಬಾ ಎಂದೂ ಪ್ರೇಮದಿ ಕರೆವಾ 
ಮಕ್ಕಳೇ ಮಮಪ್ರಾಣ ಎನ್ನುತ ನೆನೆವಾ.. 
ಮಕ್ಕಳೇ ಮಮಪ್ರಾಣ ಎನ್ನುತ ನೆನೆವಾ ಅಕ್ಕರೆ ತುಂಬಿದ ಪುಣ್ಯಸ್ವರೂಪ 
ತಾಯಿ ತಂದೆಯ ದೈವ..  
ಕರುಣದಿ ಕಾಯೋ ಮಮತಾ ಜೀವ   
ತಾಯಿ ತಂದೆಯ ದೈವ..  ತಾಯಿ ತಂದೆಯ ದೈವ..  ತಾಯಿ ತಂದೆಯ ದೈವ..  
----------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಯೌವ್ವನವೇ ಈ ಯೌವ್ವನವೇ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಆರ್.ರಾಜಲಕ್ಷ್ಮಿ 

ಹೆಣ್ಣು :  ಯೌವ್ವನವೇ ಈ ಯೌವ್ವನವೇ ಸುಮದ್ಯುಯಾವೇ ಮಿಂಚಿನ ಮಾಲೆ ಜೀವಗಳೇ 
           ಯೌವ್ವನವೇ ಈ ಯೌವ್ವನವೇ
           ಸೌಂದರ್ಯ ಈ ಸೌಂದರ್ಯ ಯೌವ್ವನದಾತ ದೀಪದ ಮಾಲೆ ಪೂರ್ಣಗಳೇ 
           ಸೌಂದರ್ಯ ಈ ಸೌಂದರ್ಯ 

ಹೆಣ್ಣು : ವರಯೋಗಿ ಮರುಳಾಗಿ ತಲೆಬಾಗುವಾ 
          ವರಯೋಗಿ ಮರುಳಾಗಿ ತಲೆಬಾಗುವಾ ಹಮ್ಮಿರ ತಾನಾಗೀ ವಶನಾಗುವಾ 
          ಯೌವ್ವನವೇ ಈ ಯೌವ್ವನವೇ ಸುಮದ್ಯುಯಾವೇ ಮಿಂಚಿನ ಮಾಲೆ ಜೀವಗಳೇ 
          ಯೌವ್ವನವೇ ಈ ಯೌವ್ವನವೇ

ಹೆಣ್ಣು : ಕಲೆಗಾರ ಬೆರಗಾಗಿ ಕೊಂಡಾಡುವಾ 
          ಕಲೆಗಾರ ಬೆರಗಾಗಿ ಕೊಂಡಾಡುವಾ ಅನುಗಾಲ ಹೊಸದಾದ ಇತೀ ನೀಡುವಾ 
          ಸೌಂದರ್ಯ ಈ ಸೌಂದರ್ಯ ಯೌವ್ವನದಾತ ದೀಪದ ಮಾಲೆ ಪೂರ್ಣಗಳೇ 
          ಸೌಂದರ್ಯ ಈ ಸೌಂದರ್ಯ 

ಹೆಣ್ಣು : ಅತೀ ಚತುರೇ ಪ್ರತಿ ಮೋಜದಲಿ ನಾ ಸದಾ ಮನೋಹರ ವಯ್ಯಾರೇ 
          ಅತೀ ಚತುರೇ ಪ್ರತಿ ಮೋಜದಲಿ ನಾ ಸದಾ ಮನೋಹರ ವಯ್ಯಾರೇ 
          ಲಾವಣ್ಯ ತಾರುಣ್ಯ ಒಂದಾದರೂ ..  
          ಲಾವಣ್ಯ ತಾರುಣ್ಯ ಒಂದಾದರೂ ಸುರಲೋಕ ಸಮವೀರರೇ 
ಕೋರಸ್ : ರಮಣೀಯ ಲಾವಣ್ಯ ಸಂಕೋಲೆಯಾ   
                ರಮಣೀಯ ಲಾವಣ್ಯ ಸಂಕೋಲೆಯಾ ಸುಖಭೋಗ ತಾರುಣ್ಯ ಬಾಗ್ಯೋದಯ    
                ಯೌವ್ವನವೇ ಈ ಯೌವ್ವನವೇ ಸುಮದ್ಯುಯಾವೇ ಮಿಂಚಿನ ಮಾಲೆ ಜೀವಗಳೇ 
                ಯೌವ್ವನವೇ ಈ ಯೌವ್ವನವೇ
----------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಆನಂದ ಮಹಾದಾನಂದಾ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಜಿಕ್ಕಿ, ರಾಣಿ, ಆರ್.ರಾಜಲಕ್ಷ್ಮಿ 

ಹೆಣ್ಣು : ಓಓಓಓಓಓಓ... ಓಓಓಓಓಓಓ... ಓಓಓಓಓಓಓ... ಓಓಓಓಓಓಓ... 
          ಆನಂದ ಮಹದಾನಂದಾ..     
          ಆನಂದ ಮಹದಾನಂದ ಅರಸುತ ನಾರಿಯ ಅಂದ ಚೆಂದಾ 
          ಅರಸುತ ನಾರಿಯ ಅಂದ ಚೆಂದಾ ಆನಂದ ಮಹದಾನಂದಾ..     

ಹೆಣ್ಣು : ಮಧುರ ಮನೋಜ ರಾಜಾಧಿರಾಜ ಆಆಆ.... 
          ಮಧುರ ಮನೋಜ ರಾಜಾಧಿರಾಜ ಮಧುಮಾಲೇ ತಂದಿಹನೇ ಸಖೀ ... 
          ಮಧುಮಾಲೇ ತಂದಿಹನೇ.. ಅದಕ್ಕೇ 
ಎಲ್ಲರು: ಆನಂದ ಮಹದಾನಂದಾ..     
          ಆನಂದ ಮಹದಾನಂದ ಅರಸುತ ನಾರಿಯ ಅಂದ ಚೆಂದಾ 
          ಅರಸುತ ನಾರಿಯ ಅಂದ ಚೆಂದಾ ಆನಂದ ಮಹದಾನಂದಾ..    

ಹೆಣ್ಣು : ಕಾಮಣ್ಣನಿಗೇ ಮನಸೋತು ನಿಂದೂ.. ಆಆಆಅ..   
          ಕಾಮಣ್ಣನಿಗೇ ಮನಸೋತು ನಿಂದೂ ಈ ಶೃಂಗಾರೀ ಬಲು ವಯ್ಯಾರೀ 
          ಈ ಶೃಂಗಾರೀ ಬಲು ವಯ್ಯಾರೀ ಅಡಿಮಯ್ಯಯಾಗುವಳೇ... ಹೌದೂ ..       
          ಅಡಿಮಯ್ಯಾಗುವಳೇ...ತಲಕಾಧೀಶ ತಾನೇದುರಾಗಿ... ಓಓಓಓಓ 
          ತಲಕಾಧೀಶ ತಾನೇದುರಾಗಿ ಗಿಳಿಯಂತೆ ಆಡಿಸುವೇ.. 
          ಆ.. ಒಲುಮೇ ತೋರಿ ಮೋಹವ ಬೀರಿ... ಆಆಆ...   
          ಒಲುಮೇ ತೋರಿ ಮೋಹವ ಬೀರಿ ಕೈಗೊಂಬೆಯಾಗಿಸಲೂ 
          ನಿನ್ನಾ ಕೈಗೊಂಬೆಯಾಗಿಸಲೂ ಹ್ಹಾಹಹ್ಹಹ್ಹಾ  
ಎಲ್ಲರು: ಆನಂದ ಮಹದಾನಂದಾ..     
          ಆನಂದ ಮಹದಾನಂದ ಅರಸುತ ನಾರಿಯ ಅಂದ ಚೆಂದಾ 
          ಅರಸುತ ನಾರಿಯ ಅಂದ ಚೆಂದಾ ಆನಂದ ಮಹದಾನಂದಾ..    
---------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಕಲ್ಯಾಣ ನಮ್ಮ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಪಿ.ಲೀಲಾ, ಸುಂದರರಾಜನ್ 

ಹೆಣ್ಣು : ಕಲ್ಯಾಣ ಈ ಕಲ್ಯಾಣ ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
          ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 
ಗಂಡು : ಕಲ್ಯಾಣ ಈ ಕಲ್ಯಾಣ ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
          ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 
ಹೆಣ್ಣು : ಅಅಅಆಆ ..  ಅಅಅಆಆ ..  ಅಅಅಆಆ ..  ಅಆಆ ..  

ಗಂಡು : ಹಾಯಾದ ಬಾಳೇ ಅನುರಾಗ ಶಾಲೇ.. 
            ಹಾಯಾದ ಬಾಳೇ ಅನುರಾಗ ಶಾಲೆ ಸಂಸಾರ ಸೌಭಾಗ್ಯ ಸಂಬಂಧ ಮಾಲೇ 
            ಕಲ್ಯಾಣ ಈ ಕಲ್ಯಾಣ 
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
              ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 

ಹೆಣ್ಣು : ಕನಸಾದ ಜೀವನ ನನಸಾದ ಮೇಲೆ ಮನಸಾರ ಆಡೋಣ ರಾಸ ಲೀಲೆ (ಅಹ್ಹಹ್ಹಹ್ಹ) 
          ಕನಸಾದ ಜೀವನ ನನಸಾದ ಮೇಲೆ ಮನಸಾರ ಆಡೋಣ ನವರಾಸ ಲೀಲೆ 
ಗಂಡು : ಉಲ್ಲಾಸ ಅದೇ.. ಸಲ್ಲಾಪ ಅದೇ .. 
            ಉಲ್ಲಾಸ ಅದೇ.. ಸಲ್ಲಾಪ ಅದೇ ನಾವೀಗ ಪಾಡೋಣ ರತಿರಾಗ ಮಾಲೇ 
           ಕಲ್ಯಾಣ ಈ ಕಲ್ಯಾಣ ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
           ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 
ಹೆಣ್ಣು : ಅಅಅಆಆ ..  ಅಅಅಆಆ ..  ಅಅಅಆಆ ..  ಅಆಆ ..  

ಹೆಣ್ಣು : ಒಂದಾದ ಈ ನಮ್ಮ ಏಕಾಂತ ವೇಳೆ 
ಗಂಡು : ಮಧುರಾಗಿ ಮಧುರ ಶೃಂಗಾರ ಲೀಲೆ 
            ಸಮಭಾವದ ಸಮ್ಮೋದವೇ ಸಂತೋಷ ದಾಂಪತ್ಯ ಸಂಕೇತವೇ 
            ಕಲ್ಯಾಣ ಈ ಕಲ್ಯಾಣ 
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
              ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 
ಇಬ್ಬರು :  ಕಲ್ಯಾಣ ಈ ಕಲ್ಯಾಣ  ನಮ್ಮ ಕಲ್ಯಾಣ ವೈಭೋಗ ಸಂಗೀತವೇ 
              ಸಂತೋಷ ದಾಂಪತ್ಯ ಸಂಕೇತವೇ ಪ್ರೇಮ ಸಂಕೇತವೇ 
---------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಕಿವಿಯೆರಡೂ ತಾ ಕೇಳಯ್ಯಾ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಆರ್.ರಾಜಲಕ್ಷ್ಮಿ 

ಕಿವಿಯೆರಡೂ ತಾ ಕೇಳಯ್ಯಾ ನಿಮ್ಮ ಕಿವಿಯೆರಡೂ ತಾ ಕೇಳಯ್ಯಾ 
ಕಲ್ಲೂ ಕಲೆಯಾದ ಶೃತಿಯಾದ ಗೆಜ್ಜೇ ನಾದವ ಕೇಳಿ 
ಕಿವಿಯೆರಡೂ ತಾ ಕೇಳಯ್ಯಾ 
ಕಲ್ಲೂ ಕಲೆಯಾದ ಶೃತಿಯಾದ ಗೆಜ್ಜೇ ನಾದವ ಕೇಳಿ 
ಕಿವಿಯೆರಡೂ ತಾ ಕೇಳಯ್ಯಾ 

ನಟರಾಜ ತಾನಾದ... ಆಆಆ... ಆಆಆ.. 
ಶಿವನಟರಾಜ ತಾನಾದ ವನಮಾಲಿ ವಶನಾದ 
ನಟರಾಜ ತಾನಾದ ವನಮಾಲಿ ವಶನಾದ 
ಸ್ವರನಾಟ್ಯ ಸಂಮೋದ ಕವಿ ನೋಡೇ ಮರೆಯಾದ 
ಸ್ವರನಾಟ್ಯ ಸಂಮೋದ ಕವಿ ನೋಡೇ ಮರೆಯಾದ 
ಕಿವಿಯೆರಡೂ ತಾ ಕೇಳಯ್ಯಾ 

ನವರಸ ನಾಟ್ಯದ ನಾದ ಆಲೈಪೇ... ಏಏಏಏಏ 
ನವರಸ ನಾಟ್ಯದ ನಾದ ಆಲೈಪೇ ಇನಿದಾದ ಕಿವಿಯಲ್ಲಿ ದೋಂಡೋಣ ತೋರಿ 
ಇನಿದಾದ ಕಿವಿಯಲ್ಲಿ ದೋಂಡೋಣ ವಾಣಿಯ ವೀಣೆಯ ಸ್ವರನಾದ.. ಆಆಆ....ಆಆಅಅ  ಘನವೇದ 
ವಾಣಿಯ ವೀಣೆಯ ಸ್ವರನಾದ ಘನವೇದ ಕರ್ಣಾಟ ಸಂಗೀತ ಸಾಹಿತ್ಯ ಶೃತಿ ನೋಡೇ 
ಕರ್ಣಾಟ ಸಂಗೀತ ಸಾಹಿತ್ಯ ಶೃತಿ ನೋಡೇ  
ಕಿವಿಯೆರಡೂ ತಾ ಕೇಳಯ್ಯಾ 
ಕಲ್ಲೂ ಕಲೆಯಾದ ಶೃತಿಯಾದ ಗೆಜ್ಜೇ ನಾದವ ಕೇಳಿ 
ಕಿವಿಯೆರಡೂ ತಾ ಕೇಳಯ್ಯಾ 
----------------------------------------------------------------------------------------------------

ರತ್ನಗಿರಿಯ ರಹಸ್ಯ (೧೯೫೭) - ಸುಮಬಾಣ ಬಿಡೂ ಮೌನ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರೀ, ಗಾಯನ : ಜಿಕ್ಕಿ (ಪಿಲ್ಲವಲು ಗಜಪತಿ ಕೃಷ್ಣವೇಣೀ)

ಸುಮ ಬಾಣ ಬಿಡೂ ಮೌನ 
ಸುಮ ಬಾಣ ಬಿಡೂ ಮೌನ ನೀನೇ ಎನ್ನ ಜೀವಧಾರ ಬಾ ಮೋಹನ 
ಸುಮ ಬಾಣ ಬಿಡೂ ಮೌನ 
ಸುಮ ಬಾಣ ಬಿಡೂ ಮೌನ ನೀನೇ ಎನ್ನ ಜೀವಧಾರ ಬಾ ಮೋಹನ 

ಅನುರಾಗದೇ ನಿನ್ನ ಒಡನಾಡುವೇ.. ಓಓಓಓಓ  
ಅನುರಾಗದೇ ನಿನ್ನ ಒಡನಾಡುವೇ ಪ್ರಣಯದಿ ವಿಲಾಸದೇ ಆನಂದ ನೀವೇ  
ಪ್ರಣಯದಿ ವಿಲಾಸದೇ ಆನಂದ ನೀವೇ ಎಣೆಯಾರೂ ನಿನಗಿಲ್ಲವೋ ಓಓಓಓಓ 
ಎಣೆಯಾರೂ ನಿನಗಿಲ್ಲವೋ ಓಓಓಓಓ ನೀನೇ ಎನ್ನ ಜೀವಧಾರ ಬಾ ಮೋಹನ 
ಸುಮ ಬಾಣ ಬಿಡೂ ಮೌನ 
ಸುಮ ಬಾಣ ಬಿಡೂ ಮೌನ ನೀನೇ ಎನ್ನ ಜೀವಧಾರ ಬಾ ಮೋಹನ 

ಸಾಮ್ರಾಜ್ಯ ಯೋಗವ ಸ್ವರ್ಗ ಸುಖಭೋಗವ....ಎನ್ನಾಣೆ ನೀ ಪೊಂದುವೇ .. 
ಮುದದಿ ಮೋಹದ ಗಿಳಿಯೊಡನೇ ಆಡಲೇ ನಿನ್ನ ಆಸ್ತಿಯೇ ಪರಿಪೂಪದೇ... ಏಏಏಏಏ ಏಏಏಏಏ 
ಬಿಗುಮಾನವೋ ಇಲ್ಲ ಪರಿಹಾಸವೋ ಓಓಓಓಓ ... 
ಬಿಗುಮಾನವೋ ಇಲ್ಲ ಪರಿಹಾಸವೋ ಯೋಗಿಯ ಹಾಗಿನ್ನೂ ವೈರಾಗ್ಯವೇಕೋ 
ಯೋಗಿಯ ಹಾಗಿನ್ನೂ ವೈರಾಗ್ಯವೇಕೋ 
ಕಿರುನಗೆ ಬಿರೋ... ಹರುಷದಿ ಬಾರೋ
ಕಿರುನಗೆ ಬಿರೋ... ಹರುಷದಿ ಬಾರೋ ನಾ ನಿನ್ನ ನವಚೇತನ ಓಓಓಓಓ 
ನಾ ನಿನ್ನ ನವಚೇತನ  ಓಓಓಓಓ ನೀನೇ ಎನ್ನ ಜೀವಧಾರ ಬಾ ಮೋಹನ 
ಸುಮ ಬಾಣ ಬಿಡೂ ಮೌನ 
ಸುಮ ಬಾಣ ಬಿಡೂ ಮೌನ ನೀನೇ ಎನ್ನ ಜೀವಧಾರ ಬಾ ಮೋಹನ 
---------------------------------------------------------------------------------------------------- 

No comments:

Post a Comment