1115. ರೌಡಿ ಮತ್ತು ಎಂ.ಎಲ್.ಏ (೧೯೯೧)

ರೌಡಿ ಮತ್ತು ಎಂ.ಎಲ್.ಏ ಚಿತ್ರದ ಹಾಡುಗಳು
  1. ಓ.. ಇಂಡಿಯಾ ಓ.. ಇಂಡಿಯಾ ಈ ಪಾಡು ನೋಡು
  2. ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
  3. ರೆಬೆಲ್ ರೆಬೆಲ್ ಹುಡುಗ ಹುಡುಗ
  4. ವಿರಹ ವಿರಹ ವಿರಹ ದಿನವೂ ಇದೆ ಹಣೆಬರಹ
ರೌಡಿ ಮತ್ತು ಎಂ.ಎಲ್.ಏ (೧೯೯೧) - ಓ.. ಇಂಡಿಯಾ ಓ.. ಇಂಡಿಯಾ ಈ ಪಾಡು ನೋಡು
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು
ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು
ದುಡಿಯೋ ಜನಕೆ ಕೆಲಸ ಸಿಕ್ಕದು
ದುಡಿಯೋ ಜನಕೆ ಕೆಲಸ ಸಿಕ್ಕದು ಕಲಿಯೋ ಜನಕ್ಕೆ ಓದು ಸಿಕ್ಕದು
ಗೂಡು ಸಿಕ್ಕದು ಬೆಚ್ಚನೇ ಗೂಡು ಸಿಕ್ಕದು
ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು

ಕೊನೆಗಾಣಿಸೇ ದಾಸ್ಯವ ಹೋರಾಡಿರಲು ಬಾಳೆ ಮುಡಿಪಿಟ್ಟರು.. ಜೀವ ಬಲಿ ಕೊಟ್ಟರು 
ಅವಸಾನದ ರಾತ್ರಿಯೇ ನಲಿದಾಡಿದೆವು ಬಂತು ಸ್ವಾತಂತ್ರ್ಯವು ಬವಣೆ ಆರಂಭವು 
ಒಂದೇ ನೆಲ ಒಂದೇ ಜಲ ನಾನಾ ಜಾತಿ ನಾನಾ ನುಡಿ ನಾನಾ ಗುಡಿ 
ಬದುಕೇ ಭೀತಿ ಸ್ವೇಚ್ಛೆ ಪರನಿಂದೇ ಸ್ತ್ರೀ ಮಾನಾ ಹರಣ ಕುಸಿದು ಕೃಷವಾಗಿ ಸತ್ಯ ನಿತ್ಯ ಮರಣ 
ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು 

ತೂಗಾಡುವ ತೆನೆಗಳೇ ನಿಮಗೆ ಶರಣು ವಿಷವ ನಿಮಗಿತ್ತರು ಅನ್ನ ನಮಗಿಡುವಿರಿ 
ಮಳೆ ಕಾಯುವ ರೈತನೇ ನಿನಗೆ ಶರಣು ನೀನೇ ಹಸಿದಿದ್ದರೂ ಬೆಳೆವೆ ಜಗ ಕಾಯುವೇ 
 ನಿನ್ನ ಮನೆ ಸೂರು ಒಳ ತೇಪೆ ನೂರು ಅಯ್ಯೋ ಬಡಪಾಯಿ ನಿನ್ನ ಕೇಳೋರ್ಯಾರು 
ಸಾಲ ಎದೆ ಮೇಲೆ ಉಸಿರಾಟ ಭಾರ ಕಾಯೋ ಸರಕಾರ ನಿನ್ನಿಂದ ದೂರ 
ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು 
ದುಡಿಯೋ ಜನಕೆ ಕೆಲಸ ಸಿಕ್ಕದು
ದುಡಿಯೋ ಜನಕೆ ಕೆಲಸ ಸಿಕ್ಕದು ಕಲಿಯೋ ಜನಕ್ಕೆ ಓದು ಸಿಕ್ಕದು
ಗೂಡು ಸಿಕ್ಕದು ಬೆಚ್ಚನೇ ಗೂಡು ಸಿಕ್ಕದು
ಓ ಇಂಡಿಯಾ ಓ ಇಂಡಿಯಾ ಈ ಪಾಡು ನೋಡು ಆ ಗಾಂಧಿಗೆ ಆ ಬುದ್ಧಗೇ ಮರು ಜನ್ಮ ನೀಡು
--------------------------------------------------------------------------------------------------------------------------

ರೌಡಿ ಮತ್ತು ಎಂ.ಎಲ್.ಏ (೧೯೯೧) - ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೇ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ

ಕೋರಸ್ : ಕೋಲು ಕೋಲೆನ್ನ ಕೋಲೆ ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
                ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಹೆಣ್ಣು : ಬೆಳ್ಳಿಯ ಬೆಳಕಾದೇ ನೀನು ಹಳ್ಳಿಗೆ ನೆರಳಾದೇ ನೀನು
          ಭೂಮಿನ ಜೊತೆಗಾರ ನೀನು ಉಕ್ಕಿನ ಸರದಾರ ನೀನು
          ನಿನ್ನ ಹೆಸರು ನಮಗೆ ಉಸಿರೂ
ಕೋರಸ್ : ಕೋಲು ಕೋಲೆನ್ನ ಕೋಲೆ ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
                ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ

ಗಂಡು : ಹೊಸ ಜನ್ಮವ ಕೊಟ್ಟ ನನ್ನ ಜನಕೆ ಇದೋ ಕೈಯನು ಮುಗಿವೇ
            ಈ ದೇಶ ಸೆರೆಮನೆಯ ಬೇಲಿಯಲಿ ಬಂದೆ ನಾನೀಗ ನಿಮ್ಮ ಕರುಣೆಯಲಿ
            ಮತ್ತೇ ಬಾಳನು ಕೊಟ್ಟ ನನ್ನ ಊರೇ ಇದೋ ನನ್ನಾಣೆ ಮಾಡುವೇ
            ನ್ಯಾಯ ಮೀರುವ ಕಡೆ ಹೆಬ್ಬಾಗಿಲು ಸತ್ಯ ಸೋಲುವ ಕಡೆ ನೀ ಕಾವಲೂ
ಹೆಣ್ಣು : ಈ ನಮ್ಮ ಸುಗ್ಗಿಯೋ ನಿನ್ನಿಂದ ಹಬ್ಬವೋ ಕೋಲಿನಾಟ ಗೆಜ್ಜೆಯಾಟ ರಂಗಿನಾಟ
          ಸುತ್ತೆಳು ಹಳ್ಳಿ ಹಳ್ಳಿಯಲಿ ಇಲ್ಲಿ ಲೋಕದಲ್ಲಿ ಅಮ್ಮನ ಆಣೆ ಇಂಥೋನ ಕಾಣೆ
ಕೋರಸ್ : ಕೋಲು ಕೋಲೆನ್ನ ಕೋಲೆ ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
                ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ

ಕೋರಸ್ : ಮಚ್ಚೆಯ ವೀರನಿಗೇ ಟುವ್ವಿ ಟುವ್ವಿ ಕಚ್ಚೆಯ ಧೀರನಿಗೇ ಟುವ್ವಿ ಟುವ್ವಿ 
               ಹೆಚ್ಚೆಯ ಹಾಕಿರವ್ವಿ ಟುವ್ವಿ ಟುವ್ವಿ 
ಹೆಣ್ಣು : ಹುಲಿ ಹೊಟ್ಟೇಲಿ ಎಂದೂ ಹೇಡಿ ಮರಿಯು ಹುಟ್ಟೋದು ಕಾಣೆ ತಂದೆಯೇ 
          ನಿನ್ನ ವಂಶದ ಕುಡಿ ನೀಡೊಡು ಬಾ ಹೆತ್ತ ಅಮ್ಮನೇ ನೀನು ಮುದ್ದಾಡು ಬಾ.. 
ಗಂಡು : ಬೂದಿ ಮುಚ್ಚಿದ ಚಿನ್ನ ನೀನು ಮಗುವೇ ನಿನ್ನ ಕಾಣದೆ ಹೋದೆ ಕಣ್ಣ ಕಂಬನಿ ಅದು ಆನಂದಕೆ 
            ನಿನ್ನ ಹೆತ್ತೆವು ಎಂಬ ಸಂತೋಷಕೆ ಈ ನಿಮ್ಮ ಹರಕೆ ಈ ನಿಮ್ಮ ಬಯಕೆ 
            ನನ್ನ ಮೇಲೆ ಇರುವಾಗ ಜಯಮಾಲೆ 
            ಪ್ರೀತಿಯ ಅನ್ನ ಕೊಟ್ಟ ನಿಮ್ಮ ಸೇವೆ ಮಾಡುವೇನು ಮಣ್ಣಿನ ಆಣೆ ಜೀವದ ಆಣೆ 
ಕೋರಸ್ : ಕೋಲು ಕೋಲೆನ್ನ ಕೋಲೆ ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
                ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ 
ಗಂಡು : ಬೆಳ್ಳಿಯ ಬೆಳಕಾದೇ ನೀನು            ಕೋರಸ್ : ಡುಂ ಡುಂ 
ಗಂಡು : ಭೂಮಿಗೆ ನೆರಳಾದೇ ನೀನು          ಕೋರಸ್ : ಡುಂ ಡುಂ 
ಗಂಡು : ಬಾಳಿಗೆ ಒಡನಾಡಿ ನೀನು             ಕೋರಸ್ : ಡುಂ ಡುಂ 
ಗಂಡು : ಪ್ರೀತಿಗೆ ಗುರುವಾದೆ ನೀನು           ಕೋರಸ್ : ಡುಂ ಡುಂ 
ಗಂಡು : ನಿನ್ನ ಹೆಸರು ನನಗೆ ಉಸಿರು         ಕೋರಸ್ : ಡುಂ ಡುಂ 
ಕೋರಸ್ : ಕೋಲು ಕೋಲೆನ್ನ ಕೋಲೆ ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
                ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ 
--------------------------------------------------------------------------------------------------------------------------

ರೌಡಿ ಮತ್ತು ಎಂ.ಎಲ್.ಏ (೧೯೯೧) - ರೆಬೆಲ್ ರೆಬೆಲ್ ರೆಬೆಲ್ ರೆಬೆಲ್ ಹುಡುಗ ಹುಡುಗ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ್

ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್ ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್ ಹುಡುಗಿ ಹುಡುಗಿ
ಹೆಣ್ಣು : ಬ್ಯೂಟಿ ನೀನು ಬಲು ಬ್ಯೂಟಿ
ಗಂಡು : ಸ್ವೀಟಿ ನೀನು ಬಲು ಸ್ವೀಟಿ
ಹೆಣ್ಣು : ಮಂಡ್ಯ ಗೂಳಿ ನೀ ಎದ್ದರೆ ದಾಳಿ
ಗಂಡು : ಮೈಸೂರು ಪಾಕು ನಿನ್ನ ತಿಂದರೇ ಷಾಕು
ಹೆಣ್ಣು : ಬಾ ಸಿಪಾಯಿ ಹೆಣ್ಣಾ ಮಿಠಾಯಿ
ಗಂಡು : ಬಾ ಚಕೋರಿ ಜರಧಾ ಸುಪಾರಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್ ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್ ಹುಡುಗಿ ಹುಡುಗಿ

ಗಂಡು : ಸಿಂಗಲ್ ಮುದ್ದೆ ಸಿಗ್ನಲ್ ಕೊಟ್ಟರೇ ಬರ್ತಾನೆ ರೆಬಲ್ ಬಂದರೆ ಕಾಮನ್ ವಿಸಿಲ್ 
            ಕೊಡತ್ತಾನೆ ಡಕ್ಕು ಡಬಲ್ ಹಾಕಿಸು 
ಹೆಣ್ಣು : ಮಾಡಲ್ ನೈನ್ ಒನ್ ಮಾಡಲ್ ಅಂತ ನಂಗೇ ಲೇಬಲ್ ಹಚ್ಚಿ 
          ಹಾಡಿಗಡಲ್ ಮಾಡಿ ನನ್ನ ಪಾರ್ಜಲ್ ಹೌಸಪುಲ್ 
ಗಂಡು : ಬೆಣ್ಣೆ ಬೆಣ್ಣೆ ಗಟ್ಟಿ ಬೆಣ್ಣೆ ಕರಗಿ ಕಂಪಾಗುವ ಬೆಣ್ಣೆ ನೀ 
ಹೆಣ್ಣು : ಕೂಹೂ ಕೂಹೂ ಮಾಗಿ ಕೂಹೂ ಕೂಗಿ ಇಂಪಾಗುವ ಹಾಡು ನೀ 
ಗಂಡು : ನಿಲ್ಲದ ಸೊಂಟ ಆಹ ಕಾಯುವ ಭಂಟ 
ಹೆಣ್ಣು : ಎಂಟೆದೆ ಭಂಟ ನಿನ್ನ ಸಾಟಿಯೂ ಉಂಟ 
ಗಂಡು : ಬಾ ಮೂರಿ ಒಂಟಿ ವಯ್ಯಾರಿ 
ಹೆಣ್ಣು : ಬಾ ಚಕೋರ ತಂಟೆ ಹಮ್ಮಿರ 
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್ ಹುಡುಗಿ ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್ ಹುಡುಗ ಹುಡುಗ 

ಗಂಡು : ಪೋರಿ ಪೋರಿ ನೀನು ಮಳ್ಳಿ ಗೌರಿ ನೀನು ನಿನ್ನ ಮೆಚ್ಚಿ ನೆಚ್ಚಿ ಆಸೆ ಕಿಚ್ಚು ಹಚ್ಚಿ ಕುಂತೆ ನಾ 
ಹೆಣ್ಣು : ಪೋರ ಪೋರ ನೀನು ನಾರಿ ಚೋರ ನೀನು ನೀನು ಹಲ್ಲು ಬಿಚ್ಚಿ ನನ್ನ ಬೆರಳ ಚುಚ್ಚಿ ನಿಂತೇ ನಾ
ಗಂಡು : ಬೊಂಬೆ ಬೊಂಬೆ ಜಾಣ ಬೊಂಬೆ ಬೊಂಬೆ ಬೇಲೂರಿನ ಬೊಂಬೆ ನೀ
ಹೆಣ್ಣು : ಕಂಬ ಕಂಬ ಕಲ್ಲಿನ ಕಂಬ ಅಲ್ಲಿ ಚಿತ್ತಾರದ ಕಂಬ ನೀ
ಗಂಡು : ಮಲ್ಲಿಗೆ ಹೂವೇ ನಿನ್ನ ಜಡೆಯಿದು ಹಾವೇ
ಹೆಣ್ಣು : ಗಂಡರ ಗಂಡ ನಿನ್ನ ಮಾತಿದು ಗುಂಡ
ಗಂಡು : ಬಾ ಚಿನ್ನಾರಿ ಕನ್ನೇ ಠಕ್ಕಾರಿ
ಹೆಣ್ಣು : ಬಾ ಮುರಾರಿ ನಿಂದೆ ತಿಜೋರಿ
          ರೆಬಲ್ ರೆಬಲ್ ರೆಬಲ್ ರೆಬಲ್ ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್ ಹುಡುಗಿ ಹುಡುಗಿ
ಹೆಣ್ಣು : ಬ್ಯೂಟಿ ನೀನು ಬಲು ಬ್ಯೂಟಿ
ಗಂಡು : ಸ್ವೀಟಿ ನೀನು ಬಲು ಸ್ವೀಟಿ
ಹೆಣ್ಣು : ಮಂಡ್ಯ ಗೂಳಿ ನೀ ಎದ್ದರೆ ದಾಳಿ
ಗಂಡು : ಮೈಸೂರು ಪಾಕು ನಿನ್ನ ತಿಂದರೇ ಷಾಕು
ಹೆಣ್ಣು : ಬಾ ಸಿಪಾಯಿ ಹೆಣ್ಣಾ ಮಿಠಾಯಿ
ಗಂಡು : ಬಾ ಚಕೋರಿ ಜರಧಾ ಸುಪಾರಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್ ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್ ಹುಡುಗಿ ಹುಡುಗಿ
--------------------------------------------------------------------------------------------------------------------------

ರೌಡಿ ಮತ್ತು ಎಂ.ಎಲ್.ಏ (೧೯೯೧) -  ವಿರಹ ವಿರಹ ವಿರಹ ದಿನವೂ ಹಣೆಬರಹ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರ

ಹೆಣ್ಣು : ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
          ರೂಪು ತೇರ ಮಸ್ತಾನ ಪ್ಯಾರ್ ಮೇರಾ ದಿವಾನ್
         ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ ನೀ ಸರಿ ವಿರಹ
         ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಹೆಣ್ಣು : ಈ ಅಂದ ಭಾರ ಚೆಂದ ಭಾರ ಆಸೆ ಭಾರ ಇಳಿಸು ಭಾರ
ಗಂಡು : ಆಹಾ.. ಮಿನುಗುತಾರೆ ಕುಲುಕುತಾರೆ ಬಳುಕುತಾರೆ ಎಲ್ಲಾ ತಾರೇ
ಹೆಣ್ಣು : ಈ ಸೆರೆ ಕನ್ಯಾಸೆರೇ ...               ಗಂಡು : ಈ ಹೋರೇ ಭೂಮಿ ಹೋರೇ
ಹೆಣ್ಣು : ಸಹಿಸೆನು ಸಹಿಸೆನು ಸಹಿಸೆನು     ಗಂಡು : ಸೈರಣೆ ಸೈರಣೆ ಸೈರಣೆ ಸಂತಸ ತರುವೇ ನಾ
          ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಹೆಣ್ಣು : ಆಹಾ.. ನಿದ್ದೆಯಲ್ಲಿ ಸೌಖ್ಯವಿಲ್ಲ ಊಟದಲ್ಲಿ ಸ್ವಾದವಿಲ್ಲಾ
ಗಂಡು : ಹೇ.. ಬಾ ಒಂಟಿ ಬಾಳು ಸಾರವಿಲ್ಲ ಬ್ರಹ್ಮಚಾರ್ಯ ಹೊಂದಲಿಲ್ಲ
ಹೆಣ್ಣು : ಸ್ವಾಗತ ಸುಸ್ವಾಗತ
ಗಂಡು : ಹಾಸಿಗೇ ಹೇ... ಹೂವಾಯಿತೇ
ಹೆಣ್ಣು : ಮರೆಯನು ಮರೆಯನು ಮರೆಯನು ಈ ದಿನ ಮರೆಯನಾ
ಗಂಡು : ಮರೆತರೆ ಮರೆತರೆ ಬರುವೆನು ಪ್ರತಿದಿನ ಹೀಗೇ ನಾ
ಹೆಣ್ಣು : ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
--------------------------------------------------------------------------------------------------------------------------

No comments:

Post a Comment