ರುಧ್ರ ಚಲನಚಿತ್ರದ ಹಾಡುಗಳು
- ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬ ಪ್ರೀತಿ ಮಾತು ನೂರಿದೆ
- ಸಂಗಾತಿ ಬಂದಾಗ ರಿಮ್ಮ ಚಿಮ್ಮ
- ಬುದ್ಧೀ ಹೇಳುತ್ತೆ ಲೋಕ
- ನನ್ನ ತಂಗಿ ಇನ್ನೆಂದು ಅಳಬೇಡವೇ
ಸಂಗೀತ : ಅಮರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬಾ ಪ್ರೀತಿ ಮಾತು ನೂರಿದೆ
ಗಂಡು : ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬಾ ಲಜ್ಜೆ ರಂಗು ಮೂಡಿದೆ
ಹೆಣ್ಣು : ನೀನು ನನ್ನ ಗೆದ್ದ ಮೇಲೆ ನನ್ನದೆಲ್ಲ ನಿನ್ನದೇ ಹೋಯ್ ..
ಗಂಡು : ಬೇಗ ಬಂದು ಹಾಕು ಮಾಲೆ ತಾಳು ತಾಳು ಎನ್ನದೇನೆ ಹೋಯ್
ಹೆಣ್ಣು : ಪ್ರೇಮಲೋಕದಲ್ಲಿ ನಾವು ರಾಜ ರಾಣಿ ಆಗುವ ಯಾರ ಅಂಕೆ ಶಂಕೆ ಇರದೇ ಅಲ್ಲಿ ಆಳುವ
ಗಂಡು : ಬೆಳ್ಳಿ ತೇರ ಮೇಲೆ ಒಂದುಗೂಡಿ ಹೋಗುವ ಯಾವ ಚಿಂತೆ ಸಂತೆ ಇರದೇ ಸುಖದಿ ಬಾಳುವ
ಹೆಣ್ಣು : ಪ್ರೀತಿ ಕಾವ್ಯದಾ ಸ್ಫೂರ್ತಿಯಂತೆ ನೋಡು ಜೀವ ಜೀವ ಸಂಗಮ
ಗಂಡು : ನಿತ್ಯ ನೂತನ ಹಬ್ಬವಂತೆ ನೋಡು ಮೋಹ ದಾಹ ಸಂಭ್ರಮ
ಹೆಣ್ಣು : ನಾನು ನಿನ್ನಲ್ಲಿ ನೀನು ನನ್ನಲ್ಲಿ ಸೇರೇ ಸಂತೋಷವೂ ..
ಗಂಡು : ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬಾ ಲಜ್ಜೆ ರಂಗು ಮೂಡಿದೆ
ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬಾ ಪ್ರೀತಿ ಮಾತು ನೂರಿದೆ
ಗಂಡು : ಪುಟ್ಟ ಪುಟ್ಟ ಮನೆಯ ಕಟ್ಟಿ ಅಲ್ಲಿ ನಾವು ಬಾಳುವ
ರಂಗು ರಂಗು ಕನಸು ಕಂಡು ಕಾಲ ಕಳೆಯುವ
ಹೆಣ್ಣು : ಮುದ್ದು ಮುದ್ದು ಮಕ್ಕಳಾಗಿ ನಾವು ಕೂಡಿ ಆಡುವಾ
ಆಟ ಊಟ ಓಟ ಪಾಠ ಕಲಿಸಿ ನಲಿಯುವಾ
ಗಂಡು : ನಾಳೆ ಎಂಬುದು ಏನು ಅಂದ ನೋಡು ಬೇಗ ಜೋಡಿ ಆಗು ಬಾ.. ಹ್ಹಾಂ ..
ಹೆಣ್ಣು : ತಾಳಿ ಹಾಗೆ ಬಾ ಬೇಗ ಬಂದು ನೀಡು ಮುಂದೆ ಏನು ನೋಡು ಬಾ
ಗಂಡು : ಪ್ರೇಮ ಬಂದಾಗ ಆಸೆ ತಂದಾಗ ಬಾಳೇ ಸಂಗೀತವೂ ..
ಹೆಣ್ಣು : ಚಿಕ್ಕ ಚಿಕ್ಕ ಚಿಕ್ಕ ಕಣ್ಣ ತುಂಬಾ ಪ್ರೀತಿ ಮಾತು ನೂರಿದೆ
ಗಂಡು : ಚಿನ್ನ ಚಿನ್ನ ಚಿನ್ನ ಕೆನ್ನೆ ತುಂಬಾ ಲಜ್ಜೆ ರಂಗು ಮೂಡಿದೆ
ಹೆಣ್ಣು : ನೀನು ನನ್ನ ಗೆದ್ದ ಮೇಲೆ ನನ್ನದೆಲ್ಲ ನಿನ್ನದೇ ಹೋಯ್ ..
ಗಂಡು : ಬೇಗ ಬಂದು ಹಾಕು ಮಾಲೆ ತಾಳು ತಾಳು ಎನ್ನದೇನೆ ಹೋಯ್
--------------------------------------------------------------------------------------------
ರುಧ್ರ (೧೯೮೯) - ಸಂಗಾತಿ ಬಂದಾಗ ರಿಮ್ಮ ಚಿಮ್ಮ
ಸಂಗೀತ : ಅಮರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ. ಚಿತ್ರಾ
ಇಬ್ಬರು : ಸಂಗಾತಿ ಬಂದಾಗ ರಿಮ್ಮ ಚಿಮ್ಮ ರಿಮ್ಮ ಚಿಮ್ಮ
ಸಂಗಾತಿ ಬಂದಾಗ ರಿಮ್ಮ ಚಿಮ್ಮ ರಿಮ್ಮ ಚಿಮ್ಮ
ಸಂತೋಷ ತಂದಾಗ ಹೊಮ್ಮಿ ಬಂತು ಪ್ರೇಮ
ಹೊಸ ಭಾವ ರೋಮ ರೋಮ ಎದೆಯಲ್ಲಿ ಎಂಥ ಸಂಭ್ರಮ
ಗಂಡು : ಆಸೆಯ ರಂಗೇರಿ ತೂಗಾಡಿದೆ ನೀನು ಬಂದಾಗಲೇ
ಹೆಣ್ಣು : ಪ್ರೀತಿ ಮತ್ತೇರಿ ಕುಣಿದಾಡಿದೆ ನಿನ್ನ ಕಂಡಾಗಲೇ
ಗಂಡು : ರತಿದೇವಿಯಾ ಮೈಮಾಟ ಮನ ದೋಚುವಾ ಚೆಲ್ಲಾಟ
ಹೆಣ್ಣು : ನಾ ಕಂಡೆನು ನಿನ್ನಲ್ಲಿ ಆನಂದದಾ ಉಯ್ಯಾಲೆ
ಗಂಡು : ಗೂಡಿನಾ ಹಕ್ಕಿ ಮೆಲ್ಲನೇ
ಹೆಣ್ಣು : ಹಾಡಿದೆ ಬಾರೋ ಮೆಲ್ಲನೇ ..
ಗಂಡು : ಋತುಮಾನ ತಂದ ಸಂಭ್ರಮ
ಇಬ್ಬರು : ಸಂಗಾತಿ ಬಂದಾಗ ರಿಮ್ಮ ಚಿಮ್ಮ ರಿಮ್ಮ ಚಿಮ್ಮ
ಸಂತೋಷ ತಂದಾಗ ಹೊಮ್ಮಿ ಬಂತು ಪ್ರೇಮ
ಹೊಸ ಭಾವ ರೋಮ ರೋಮ ಎದೆಯಲ್ಲಿ ಎಂಥ ಸಂಭ್ರಮ
ಹೆಣ್ಣು : ಬಾಳೇ ಸಂಗೀತ ಜೇನಾಗಿದೇ ಪ್ರೀತಿ ನೀ ಮೀಟಿದೆ
ಗಂಡು : ನೀನೇ ಉಲ್ಲಾಸ ಮಿತಿ ಮೀರಿದೆ ಹಿಗ್ಗು ಮಿತಿ ಮೀರಿದೆ
ಹೆಣ್ಣು : ಕಣ್ಣೋಟದೇ ಸಂಧಾನ ಅನುರಾಗದ ವಿಧಾನ
ಗಂಡು : ಮಳೆಬಿಲ್ಲಿನ ಸಿಂಗಾರ ನನ ನಲ್ಲೆಯ ವಯ್ಯಾರ
ಹೆಣ್ಣು : ಕೋಗಿಲೆ ಕುಹು ಕೂಕ್ಕುಕ್ಕೂ ಕ್ಕೂ
ಗಂಡು : ಹಾಡಿದೆ ತಾನು ಅದೇಕೋ
ಹೆಣ್ಣು : ಮಧುಮಾಸ ಬಂದ ಸಂಭ್ರಮ
ಇಬ್ಬರು : ಸಂಗಾತಿ ಬಂದಾಗ ರಿಮ್ಮ ಚಿಮ್ಮ ರಿಮ್ಮ ಚಿಮ್ಮ
ಸಂತೋಷ ತಂದಾಗ ಹೊಮ್ಮಿ ಬಂತು ಪ್ರೇಮ
ಹೊಸ ಭಾವ ರೋಮ ರೋಮ ಎದೆಯಲ್ಲಿ ಎಂಥ ಸಂಭ್ರಮ
--------------------------------------------------------------------------------------------
ರುಧ್ರ (೧೯೮೯) - ಬುದ್ಧೀ ಹೇಳುತ್ತೆ ಲೋಕ
ಸಂಗೀತ : ಅಮರ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ.
ಬುದ್ಧಿ ಹೇಳುತ್ತೇ ಲೋಕ ನೀ ಕುಡಿದು ಸಾಯಬೇಡವೋ
ಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
ಲೋಕ ಹಂಗನೂ ಕತ್ತರಿಸಿ ನಾನು ದಂಗಾದೆ
ಸುತ್ತ ರಂಗೇರಲೂ ಮತ್ತೇರಿಸಿ ನಾನು ರಂಗಾದೇನು
ಬುದ್ಧಿ ಹೇಳುತ್ತೇ ಲೋಕ ನೀ ಕುಡಿದು ಸಾಯಬೇಡವೋ
ಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
ಸುಖವು ಹೆಚ್ಚಾದರೆ ಕುಣಿಸೋ ಶಕ್ತಿ ಗುಂಡಲ್ಲಿದೆ
ಶೋಕ ಹೆಚ್ಚಾದರೆ ಮರೆಸೋ ಯುಕ್ತಿ ಅದರಲ್ಲಿದೆ
ಎನ್ನುತಾ ಮತ್ತನು ಏರಿಸಿ ಕುಣಿವೆನು ಹಾಗೆಯೇ ಲೋಕದ ಯೋಚನೆ ಬಿಡುವೇನು
ಹಾಡಿ ಜ್ಹಿಮ್ಮಾರೇ ಜ್ಹಿಮ್ಮಾ ಧಿಂ ಎನ್ನುತಾ ತಟ್ಟಾಡುವೇ ...
ಹೀಗೆ ಝಂಮ್ಮಾರೇ ಝುಮ್ಮಾ ನಿನ್ನೊಡನೇ ಒಟ್ಟಾಗುವೇ
ಝುಮ್ಮಂತೇ ಝುಮ್ಮಂತೇ ತಟ್ಟಿ ತಟ್ಟಿ ಚಪ್ಪಾಳೆ
ಬುದ್ಧಿ ಹೇಳುತ್ತೇ ಲೋಕ ನೀ ಕುಡಿದು ಸಾಯಬೇಡವೋ
ಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
ತೊಟ್ಟು ತೊಟ್ಟಾಗಿಯೇ ನಾ ಹೊಡೆದೇ ಸ್ವಲ್ಪ ಪಟ್ಟಾಗಿಯೇಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
ಬಿಟ್ಟೆ ಮರಿಯಾದೆಯಾ ಗುಟ್ಟು ರಟ್ಟಾಗಿಯೇ
ಜೀವನ ನೋವಿನ ನಲಿವಿನ ಸಂಗಮ
ಇಂಥಾ ಲೋಕದಿ ಸೊಗಸಿನ ಸಂಭ್ರಮಾ
ಇಂಥ ಸಂತೋಷದಲ್ಲಿ ನನ್ನೊಳಗೆ ನಾನಿಲ್ಲವೆ
ಎಲ್ಲಾ ಸಂಕೋಚ ದೂಡೋ ಈ ಪಯಣ ಇನ್ನೆಲ್ಲಿಗೋ
ತಪ್ಪೇನು ಮಾಡಿಲ್ಲ ತಪ್ಪು ಅಂದ್ರೇ ಒಪ್ಪೋಲ್ಲ
ಬುದ್ಧಿ ಹೇಳುತ್ತೇ ಲೋಕ ನೀ ಕುಡಿದು ಸಾಯಬೇಡವೋ
ಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
ಲೋಕ ಹಂಗನೂ ಕತ್ತರಿಸಿ ನಾನು ದಂಗಾದೆ
ಸುತ್ತ ರಂಗೇರಲೂ ಮತ್ತೇರಿಸಿ ನಾನು ರಂಗಾದೇನು
ಬುದ್ಧಿ ಹೇಳುತ್ತೇ ಲೋಕ ನೀ ಕುಡಿದು ಸಾಯಬೇಡವೋ
ಮತ್ತೇ ಅನ್ನುತ್ತೆ ಯಾಕೋ ನೀ ಬದುಕಿ ಬಾಳಬೇಡವೋ
---------------------------------------------------------------------------------------------
ರುಧ್ರ (೧೯೮೯) - ನನ್ನ ತಂಗಿ ಇನ್ನೆಂದು ಅಳಬೇಡವೇ
ಸಂಗೀತ : ಅಮರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ. ಮಂಜುಳ
ಗಂಡು : ನನ್ನ ತಂಗಿ ಇನ್ನೆಂದು ಅಳಬೇಡವೇ ಮುಖ ಮಂದಾರ ಬಾಡದಿರಲೀ
ಜಗವೆಲ್ಲ ಸಂತೋಷ ನಿನದಾಗಲೀ ನಿನ್ನ ನೋವೆಂದು ಕಾಡದಿರಲೀ
ಸಿರಿ ಗೌರಿ ಓ.. ಸಿರಿದೇವಿ ಕುಲದೇವಿ ಅಧಿದೇವಿ ನೀನೇ ..
ನನ್ನ ತಂಗಿ ಇನ್ನೆಂದು ಅಳಬೇಡವೇ ಮುಖ ಮಂದಾರ ಬಾಡದಿರಲೀ
ಗಂಡು : ಅಲ್ಲಿ ಚಂದ್ರನಲ್ಲಿ ಕಲೆಯು ಇಹುದು ಮೊಗದಲ್ಲಿ
ಇಲ್ಲಿ ಬೆಳಕು ಚೆಲ್ಲೋ ಹಣತೆ ಕೆಳಗೆ ಬೆಳಕೆಲ್ಲಿ
ಲೋಪ ಒಂದೂ ಇರದ ಜೀವ ಹೇಳು ಎಲ್ಲುಂಟು
ನಾರಿ ಕುಲವೇ ನಾಚುವಂಥ ತಂಗಿ ನಿನಗುಂಟು ಹೂ ಬಳ್ಳಿ ಈ ಮೊಗದಲ್ಲಿ
ಇನ್ನೇಕೆ ಪರಿತಾಪ ಹೂಂ .. ಹೂಂ ..
ನನ್ನ ತಂಗಿ ಇನ್ನೆಂದು ಅಳಬೇಡವೇ ಮುಖ ಮಂದಾರ ಬಾಡದಿರಲೀ
ಗಂಡು : ಕಣ್ಣ ಮಣಿಯೆ ನಿನ್ನಾ ಅಗಲಿ ಇರನು ಈ ಅಣ್ಣ
ರಾಣಿ ಹಾಗೆ ಜಾಣೆ ನೋಡಿಕೊಳ್ಳುವೇ ನನ್ನಾಣೆ
ಮಿನುಗುತಿರುವ ಗುಡಿಯ ಕಲಶ ನಿನ್ನ ಮನಸಂತೇ
ಅಣ್ಣ ತಂಗಿ ಪ್ರೀತಿ ಒಂದೇ ಜಗದೇ ಮಿಗಿಲಂತೆ
ಎಂದೆಂದೂ ಈ ಅನುಬಂಧ ಈ ತಾಯಿಗೆ ಸುಖವಂತೇ ..
ಹೆಣ್ಣು : ನನ್ನ ಅಣ್ಣ ಇನ್ನೆಂದು ಅಳಲಾರೆನು ಬಳಿ ಎಂದೆಂದೂ ನೀನು ಇರಲೂ
ಬದುಕೆಲ್ಲ ಜೊತೆಯಲ್ಲಿ ಕಳೆವಾಸೆಯೂ ನಿನ್ನ ಸಂತೋಷ ನಾ ಬಯಸುವೇ
ನನ್ನ ಅಣ್ಣಾ ... ನನ್ನ ಜೀವಾ... ನನ್ನ ದೈವ .. ಸುಖಭಾವ ನೀನೇ ..
ಗಂಡು : ನನ್ನ ತಂಗಿ ಇನ್ನೆಂದು ಅಳಬೇಡವೇ ಮುಖ ಮಂದಾರ ಬಾಡದಿರಲೀ
ಜಗವೆಲ್ಲ ಸಂತೋಷ ನಿನದಾಗಲೀ ನಿನ್ನ ನೋವೆಂದು ಕಾಡದಿರಲೀ
ಸಿರಿ ಗೌರಿ ಓ.. ಸಿರಿದೇವಿ ಕುಲದೇವಿ ಅಧಿದೇವಿ ನೀನೇ ..
ನನ್ನ ತಂಗಿ ಇನ್ನೆಂದು ಅಳಬೇಡವೇ ಮುಖ ಮಂದಾರ ಬಾಡದಿರಲೀ
---------------------------------------------------------------------------------------------
No comments:
Post a Comment