ರುದ್ರಿ ಚಲನಚಿತ್ರದ ಹಾಡುಗಳು
- ಅಂಥ ಇಂಥ ಹೆಣ್ಣು ನಾನಲ್ಲಾ
- ಏನೋ ಭಾಗ್ಯವೋ ನಾರಿಯೇ ಅದೇನು ಪುಣ್ಯವೋ
- ದೂರ ದೂರ ಹೋಗುವೇ ಏಕಯ್ಯಾ..
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ, ಕೋರಸ್
ಕೋರಸ್ : ಒಹೋ.. ಒಹೋ... ಒಹೋ.. ಒಹೋ... ಒಹೋ.. ಒಹೋ... ಒಹೋ.. ಒಹೋ...
ಹೆಣ್ಣು : ಐಸಾ ಪೈಸಾ ಹೇಳರೋ ..
ಕೋರಸ್ : ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಹೆಣ್ಣು : ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲಾ..

ಆ.. ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಹ್ಹಾ .. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಕೋರಸ್ : ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಹೆಣ್ಣು : ತಂಟೆಗೇ ಬಂದ್ರೇ ಸೊಂಟ ಮುರಿಯುವೇ ಸೊಂಟ ಮುರಿದರೇ ನೀನೂ ಕುಂಟುವೇ ..
ತಂಟೆಗೇ ಬಂದ್ರೇ ಸೊಂಟ ಮುರಿಯುವೇ ಆಹ್ಹಾ.. ಸೊಂಟ ಮುರಿದರೇ ನೀನೂ ಕುಂಟುವೇ ..
ಜಾಗ ಗಂಡು ನನ್ನ ಗೆಲ್ಲೂ ಬಾ... ಹ್ಹಾ.. ಯಾವ ಪುಂಡ ಎದುರು ನಿಲ್ಲುವಾ...
ಕೆಣಕಲು ಬಡಿಯುವೇ.. ಮುದ್ದೆ ಮಾಡುವೇ .. ರಾಗಿ ಮುದ್ದೆ ಮಾಡುವೇ ..
ಆ.. ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಹ್ಹಾ .. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲಾ..
ಆ.. ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಹ್ಹಾ .. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಕೋರಸ್ : ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಹೆಣ್ಣು : ರೋಷ ಬಂದರೇ ಸಿಡಿದು ನಿಲ್ಲುವೇ.. ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ರೋಷ ಬಂದರೇ ಸಿಡಿದು ನಿಲ್ಲುವೇ.. ನಾನು ಹೆಣ್ಣು ಯಮನೇ ಆಗಿ ಕೊಲ್ಲುವೇ ..
ಸ್ನೇಹ ಬೇಡು ಆಗ ಉಳಿಯುವೇ .. ಹ್ಹಾ... ಹೇಳಿದಂತೇ ಕೇಳು ಬದುಕುವೇ ..
ಸರಳೀದೆ.. ಸುಮ್ಮನೇ... ಯಾಕೇ ನರಳುವೇ .. ನೀನೇಕೇ ಕಾಯುವೇ
ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಹ್ಹಾ .. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲಾ..
ಎದುರೂ ಬಿದ್ರೆ ಕೈಯ್ಯಿ ಕಾಲು ಒಂದೂ ಉಳಿಯೋಲ್ಲಾ..
ಆ.. ಅಂಥಾ ಇಂಥಾ ಹೆಣ್ಣು ನಾನಲ್ಲಾ.. ಹ್ಹಾ .. ಇಂಥಾ ಹೆಣ್ಣು ಬೇರೆ ಹುಟ್ಟಿಲ್ಲಾ.. ಇನ್ನೂ ಹುಟ್ಟೋದೂ ಇಲ್ಲಾ..
ಕೋರಸ್ : ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
ಐಸಾ... ಪೈಸಾ ... ಐಸಾ... ಪೈಸಾ ...ನಯಾಪೈಸಾ
--------------------------------------------------------------------------------------------------------------------------
ರುದ್ರಿ (೧೯೮೨) - ಏನೋ ಭಾಗ್ಯವೋ ನಾರಿಯೇ ಅದೇನು ಪುಣ್ಯವೋ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಪಿ.ಸುಶೀಲಾ
ಅತ್ತಿಗೆ : ಏನೋ ಭಾಗ್ಯವೋ ನಾರಿಯೇ ಅದೇನೋ ಪುಣ್ಯವೋ ನಾರಿಯೇ
ಬಂದು ಸೇರಿದೇ ಈ ಮನೆಗೇ ದೇವರ ಪ್ರತಿರೂಪ ನನ್ನೋರೂ....
ಮುದ್ದು ಚಿಲುಮೇ ನಾದಿನಿಯೋ... ನಾದಿನಿಯೂ ..
ಏನೋ ಭಾಗ್ಯವೋ ನಾರಿಯೇ ಅದೇನೋ ಪುಣ್ಯವೋ ನಾರಿಯೇ
ಅತ್ತಿಗೆ : ನೀನೀ ಮನೆಗೇ ಮಗುವಂತೇ ನಾನು ನಿನಗೇ ತಾಯಂತೇ ..
ನೀನೀ ಮನೆಗೇ ಮಗುವಂತೇ ನಾನು ನಿನಗೇ ತಾಯಂತೇ ..
ಮನೆಯೇ ಸ್ವರ್ಗಾ.. ನೀನಿರಲೂ..
ಮನೆಯೇ ಸ್ವರ್ಗಾ.. ನೀನಿರಲೂ.. ಹೀಗೇ ಎಂದೂ ನಗುತಿರಲೂ.. ನಗುತಿರಲೂ..
ಏನೋ ಭಾಗ್ಯವೋ ನಾರಿಯೇ ಅದೇನೋ ಪುಣ್ಯವೋ ನಾರಿಯೇ
ಅತ್ತಿಗೆ : ನಿನಗೂ ತರುವೇ ಜೋಡಿಯನೂ ಆಗ ನಾನೂ ನೋಡುವೆನೂ ..
ನಿನಗೂ ತರುವೇ ಜೋಡಿಯನೂ ಆಗ ನಾನೂ ನೋಡುವೆನೂ ..
ಒಂದೇ ವರುಷಾ ಹುಡುಗಾಟ (ಆಮೇಲೆ)
ಒಂದೇ ವರುಷಾ ಹುಡುಗಾಟ ಮಡಿಲಲಿ ಮಗುವಾ.. ಚೆಲ್ಲಾಟ ...(ಅಹ್ಹಹ್ಹ) ಚೆಲ್ಲಾಟ
ನಾದಿನಿ : ಏನೋ ಭಾಗ್ಯವೋ ನಾರಿಯೇ ಅದೇನೋ ಪುಣ್ಯವೋ ನಾರಿಯೇ
ನೀನೂ ಸೇರಿದೆ ಈ ಮನೆಗೇ ತಂದೆಯ ಹಾಗಿರುವ ನನ್ನಣ್ಣಾ .. ಅಮ್ಮನೂ ಆಗಿ ಅತ್ತಿಗೆಯೂ .. ಅತ್ತಿಗೆಯೂ ..
ಏನೋ ಭಾಗ್ಯವೋ ಅದೇನೋ ಭಾಗ್ಯವೋ ನಾರಿಯೇ
--------------------------------------------------------------------------------------------------------------------------
ರುದ್ರಿ (೧೯೮೨) - ದೂರ ದೂರ ಹೋಗುವೇ ಏಕಯ್ಯಾ..
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಹೆಣ್ಣು : ದೂರ ದೂರ ಹೋಗುವೆ ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟೂ ಬಾರಯ್ಯಾ.. ತಾಳಲಾರೇ ವಿರಹವ ಚೆನ್ನಯ್ಯಾ..
ಗಂಡು : ಯಾರ ಪುಣ್ಯ ಹೀಗೆ ಬಂತೂ ಗೊತ್ತಿಲ್ಲಾ.. ಹ್ಹಹ್ಹ ನನಗೇ ಗೊತ್ತಿಲ್ಲಾ..
ಯಾರ ಪುಣ್ಯ ಹೀಗೆ ಬಂತೂ ಗೊತ್ತಿಲ್ಲಾ.. ನನಗೇ ಗೊತ್ತಿಲ್ಲಾ..
ಅಯ್ಯೋ ಈ ಕಣ್ಣು ಒಳ್ಳೆ ದ್ರಾಕ್ಷಿ ಹಣ್ಣೂ ಅಪ್ಪಾ.. ಈ ಹಣ್ಣು ಬಣ್ಣ ನಿಂಬೆಹಣ್ಣು
ದುರ್ಗಮ್ಮಾ ಕಾಳಮ್ಮಾ ರುಧ್ರಮ್ಮಾ ಕುಳ್ಳಮ್ಮಾ ಬಾರಮ್ಮಾ.. ಅಮ್ಮಾ ಮಾರಮ್ಮಾ..
ಹೆಣ್ಣು : ದೂರ ದೂರ ಹೋಗುವೆ ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟೂ ಬಾರಯ್ಯಾ.. ತಾಳಲಾರೇ ವಿರಹವ ಚೆನ್ನಯ್ಯಾ..
ಹೆಣ್ಣು : ನಿನ್ನ ಹಾಗೇ ಯಾರ ನಾನೂ ಕಂಡಿಲ್ಲಾ.. ಇಂಥ ಗಂಡಿಲ್ಲಾ
ನಿನ್ನ ಹಾಗೇ ಯಾರ ನಾನೂ ಕಂಡಿಲ್ಲಾ.. ಇಂಥ ಗಂಡಿಲ್ಲಾ
ಅಯ್ಯೋ ನೀ ಹೀಗೆ ಕೈಯ್ಯಿ ಹಿಡಿಬೇಡಾ ಅಬ್ಬಾ ಸಾಕಪ್ಪಾ ಹೀಗೆ ಅಳಕಬೇಡಾ
ನಿನ್ನಂತೇ ನಾನೆಲ್ಲ ಚಿಕ್ಕೊಳು ಪುಟ್ಟೋಳು ನಾನಾಪ್ಪಾ.. ಇನ್ನೂ ಸಾಕಪ್ಪಾ.. (ಅಯ್ಯೋ..ಅಯ್ಯೋ)
ದೂರ ದೂರ ಹೋಗುವೆ ಏಕಯ್ಯಾ.. ನೀ ಹೇಳಯ್ಯಾ..

ಗಂಡು : ಇನ್ನೂ ಎಷ್ಟೂ ರಾತ್ರಿ ಹೀಗೆ ಪರದಾಟ ಆ.. ನನಗೇ ಪರದಾಟ
ಇನ್ನೂ ಎಷ್ಟೂ ರಾತ್ರಿ ಹೀಗೆ ಪರದಾಟ ಆ.. ನನಗೇ ಪರದಾಟ
ಹೆಣ್ಣು : ಕರಡಿ ನನ್ನನ್ನೂ ನೀನೇ ಹಣ ಕೊಟ್ಟೂ ಏಕೆ ಹೀಗಂತ ತಾಳಿಕಟ್ಟಿ ಬಿಟ್ಟೂ
ಗಂಡು : ನನ್ನಿಂದ ತಪ್ಪಾಯ್ತು ನಿನ್ನನ್ನೂ ಒಪ್ಪಾಯ್ತು ಸುಸ್ತಾಯ್ತು ಅಬ್ಬಾ ಸುಸ್ತಾಯ್ತು .. ಹ್ಹಹ್ಹಹ್ಹಹ್ಹ..
--------------------------------------------------------------------------------------------------------------------------
ಬಾಳಲಾರೆ ನಿನ್ನ ಬಿಟ್ಟೂ ಬಾರಯ್ಯಾ.. ತಾಳಲಾರೇ ವಿರಹವ ಚೆನ್ನಯ್ಯಾ..
ಹೆಣ್ಣು : ನಿನ್ನ ಹಾಗೇ ಯಾರ ನಾನೂ ಕಂಡಿಲ್ಲಾ.. ಇಂಥ ಗಂಡಿಲ್ಲಾ
ನಿನ್ನ ಹಾಗೇ ಯಾರ ನಾನೂ ಕಂಡಿಲ್ಲಾ.. ಇಂಥ ಗಂಡಿಲ್ಲಾ
ಅಯ್ಯೋ ನೀ ಹೀಗೆ ಕೈಯ್ಯಿ ಹಿಡಿಬೇಡಾ ಅಬ್ಬಾ ಸಾಕಪ್ಪಾ ಹೀಗೆ ಅಳಕಬೇಡಾ
ನಿನ್ನಂತೇ ನಾನೆಲ್ಲ ಚಿಕ್ಕೊಳು ಪುಟ್ಟೋಳು ನಾನಾಪ್ಪಾ.. ಇನ್ನೂ ಸಾಕಪ್ಪಾ.. (ಅಯ್ಯೋ..ಅಯ್ಯೋ)
ದೂರ ದೂರ ಹೋಗುವೆ ಏಕಯ್ಯಾ.. ನೀ ಹೇಳಯ್ಯಾ..
ಬಾಳಲಾರೆ ನಿನ್ನ ಬಿಟ್ಟೂ ಬಾರಯ್ಯಾ.. ತಾಳಲಾರೇ ವಿರಹವ ಚೆನ್ನಯ್ಯಾ..
ಗಂಡು : ಇನ್ನೂ ಎಷ್ಟೂ ರಾತ್ರಿ ಹೀಗೆ ಪರದಾಟ ಆ.. ನನಗೇ ಪರದಾಟ
ಇನ್ನೂ ಎಷ್ಟೂ ರಾತ್ರಿ ಹೀಗೆ ಪರದಾಟ ಆ.. ನನಗೇ ಪರದಾಟ
ಹೆಣ್ಣು : ಕರಡಿ ನನ್ನನ್ನೂ ನೀನೇ ಹಣ ಕೊಟ್ಟೂ ಏಕೆ ಹೀಗಂತ ತಾಳಿಕಟ್ಟಿ ಬಿಟ್ಟೂ
ಗಂಡು : ನನ್ನಿಂದ ತಪ್ಪಾಯ್ತು ನಿನ್ನನ್ನೂ ಒಪ್ಪಾಯ್ತು ಸುಸ್ತಾಯ್ತು ಅಬ್ಬಾ ಸುಸ್ತಾಯ್ತು .. ಹ್ಹಹ್ಹಹ್ಹಹ್ಹ..
--------------------------------------------------------------------------------------------------------------------------
ರುದ್ರಿ (೧೯೮೨) - ದೂರ ದೂರ ಹೋಗುವೇ ಏಕಯ್ಯಾ..
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
--------------------------------------------------------------------------------------------------------------------------
No comments:
Post a Comment