20. ಸೊಸೆ ತಂದ ಸೌಭಾಗ್ಯ (1977)



ಸೊಸೆ ತಂದ ಸೌಭಾಗ್ಯ ಚಿತ್ರದ ಹಾಡುಗಳು 
  1. ರವಿವರ್ಮನ ಕುಂಚದ ಕಲೆ 
  2. ಏಕೆ ಅವಸರವೂ ಹೇಳು 
  3. ಅತ್ತಿಗೆ ತಂಗಿ ನಿನ್ನ ಆಟ 
  4. ದೇಶ ದೇಶದೊಳಗೆ ನಮ್ಮ ದೇಶ ಚಂದ ೩
  5. ಓ ಹೆಣ್ಣೇ ಓ ಹೆಣ್ಣೇ ನಿಲ್ಲು ನಿಲ್ಲು 
  6. ಸಾಕು ಸಾಕು ಎನ್ನುವನೇ ಸಾಹುಕಾರ 
ಸೊಸೆ ತಂದ ಸೌಭಾಗ್ಯ (1977) ರವಿವರ್ಮನ ಕುಂಚದ ಕಲೆ
ಸಾಹಿತ್ಯ : ಆರ್.ಎನ್.ಜಯಗೋಪಾಲ್, ಸಂಗೀತ : ಜಿ.ಕೆ. ವೆಂಕಟೇಶ್, ಗಾಯನ : ಎಸ್.ಜಾನಕೀ ಮತ್ತು ಪಿ.ಬಿ. ಶ್ರೀನಿವಾಸ್

ಹೆಣ್ಣು : ಆ..ಆ‌ಆ.. ಆ..ಆ‌ಆ.. ಅ ಅ ಅ ಅ
ಗಂಡು : ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ ಹೆಣ್ಣು : ಅ ಅ.. ಅ ಅ ಆ
ಗಂಡು : ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ಗಂಡು : ರವಿವರ್ಮನ ಹೆಣ್ಣು : ಅ ಅ
ಗಂಡು : ಕುಂಚದ ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ ಹೆಣ್ಣು : ಆ..ಆ ಆ..ಆ

ಗಂಡು : ಉಯ್ಯಾಲೆಯಾ ಆಡಿ ನಲಿವಾ ರೂಪಸೀ...
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ... ಹೆಣ್ಣು : ಆ.. ಆ ಅ ...ಆ ಅ.ಅ ಅ‌ಅ ಅ‌ಅ
ಗಂಡು : ನನ್ನೊಲವಿನ ಪ್ರೇಯಸಿ
ಗಂಡು : ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ    ಹೆಣ್ಣು : ಅ‌ಆ...ಅ‌ಆ

ಗಂಡು : ಹೂರಾಶಿಯಾ ನಡುವೆ ನಗುವ ಕೋಮಲೇ...
           ಹೂರಾಶಿಯಾ ನಡುವೆ ನಗುವ ಕೋಮಲೇ..
           ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ.. ಹೆಣ್ಣು : ಆ.. ಆ ಅ ...ಆ ಅ.ಅ ಅ‌ಅ ಅ‌ಅ
ಗಂಡು : ಚಿರಯೌವ್ವನ ನಿನ್ನಲ್ಲೇ
ಗಂಡು : ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ಗಂಡು : ರವಿವರ್ಮನ ಹೆಣ್ಣು : ಅ ಅ
ಗಂಡು : ಕುಂಚದ ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ ಹೆಣ್ಣು : ಆ
--------------------------------------------------------------------------------------------------------

ಸೊಸೆ ತಂದ ಸೌಭಾಗ್ಯ (1977) - ಏಕೇ ಅವಸರವು ಹೇಳೂ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್.ಜಾನಕಿ 

ಏಕೇ ಅವಸರವು ಹೇಳೂ
ಕರವನು ಹಿಡಿಯದೆ ಸರಸಕೆ ಕರೆಯದೆ ನೀನೂ
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು........
ಏಕೇ ಅವಸರವು ಹೇಳೂ

ಹಣ್ಣೊಂದಿರೇ ರೆಂಬೆಗೇ ನೋಡಲೂ ಚಂದಾ
ಹೆಣ್ಣೊಂದಿರೇ ಪ್ರೀತಿಸೇ ಬಾಳಿಗೇ ಅಂದಾ
ಹಣ್ಣೊಂದಿರೇ ರೆಂಬೆಗೇ ನೋಡಲೂ ಚಂದಾ
ಹೆಣ್ಣೊಂದಿರೇ ಪ್ರೀತಿಸೇ ಬಾಳಿಗೇ ಅಂದಾ
ನಿನಗೊಂದು ಗುರಿಯಿರಬೇಕು ಸಾಧಿಸೋ ಛಲವಿರಬೇಕು
ಸಿರಿತನ ಪಡೆಯುವ ಆಸೆಯು ಬೇಕು....
ಏಕೇ ಅವಸರವು ಹೇಳೂ
ಕರವನು ಹಿಡಿಯದೆ ಸರಸಕೆ ಕರೆಯದೆ ನೀನೂ
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು........
ಏಕೇ ಅವಸರವು ಹೇಳೂ

ಮಣ್ಣಲ್ಲಿಯೇ ಕಾಣದಾ ಹಾಗಿದೇ ಚಿನ್ನಾ
ಕಡಲಲ್ಲಿಯೇ ಮುತ್ತಿದೇ ಬಲ್ಲೆಯಾ ಚೆನ್ನಾ
ಮಣ್ಣಲ್ಲಿಯೇ ಕಾಣದಾ ಹಾಗಿದೇ ಚಿನ್ನಾ
ಕಡಲಲ್ಲಿಯೇ ಮುತ್ತಿದೇ ಬಲ್ಲೆಯಾ ಚೆನ್ನಾ
ನೀನಾಗೆ ಬಯಸದೆ ಒಂದು ತಾನಾಗೆ ದೊರಕದು ಬಂದು
ನೀನಾಗೆ ಬಯಸದೆ ಒಂದು ತಾನಾಗೆ ದೊರಕದು ಬಂದು
ಶ್ರಮವನು ಪಡದೆ ಎಂದಿಗು ಸಿಗದೂ.......
ಏಕೇ ಅವಸರವು ಹೇಳೂ
ಕರವನು ಹಿಡಿಯದೆ ಸರಸಕೆ ಕರೆಯದೆ ನೀನೂ
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು........
ಏಕೇ ಅವಸರವು ಹೇಳೂ
----------------------------------------------------------------------------------------------------------------------

ಸೊಸೆ ತಂದ ಸೌಭಾಗ್ಯ (1977) - ಅತ್ತಿಗೆ ತಂಗಿ ನಿನ್ನಾ .... 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್.ಪಿ.ಬಿ. ಮತ್ತು ಎಸ್.ಜಾನಕಿ

ಗ : ಅತ್ತಿಗೆ ತಂಗಿ (ಹ್ಹಾಂ ) ನಿನ್ನಾ ಆಟ ನಡೆಯೊದಿಲ್ಲಾ... ಓಡು ಬೇಗನೇ..(ಹೂಂಹುಂ )
      ಅತ್ತೆಯ ಮಗಳ ಬೆಳೆ ಇಲ್ಲಿ ಬೇಯೋದಿಲ್ಲಾ.. ಹೋಗೇ ಸುಮ್ಮನೇ..ಆಂ..
     ಬಿರುಗಾಳಿ ಬಂದಂತೆ ಬಂದೆ ಏಕಿಲ್ಲಿ.. ಬಿರುಸಾದ ಮಾತೇಕೆ ಇಂದು ನನ್ನಲ್ಲಿ
ಹೆ : ಭಾವನ ತಮ್ಮ... (ಹಾಂ) ಭಾವನ ತಮ್ಮ ನಿನ್ನಾ ಆಟ ನಡೆಯೋದಿಲ್ಲ ನಿನ್ನಾ ಕಾಣೇನೇ (ಹೇ)
      ಮಾವನ ಮಗನ ಬೆಳೆ ಇಲ್ಲಿ ಬೇಯೋದಿಲ್ಲಾ ಬಾರೋ ಸುಮ್ಮನೆ
      ನೂರೆಂಟೂ ಮಾತಾಡೋ ಆಸೆ ನಿನ್ನಲ್ಲಿ ಅದಕ್ಕಾಗಿ ನಾ ಬಂದೆ ಬೇಗ ಬಾ ಇಲ್ಲಿ...
ಹೆ : ಭಾವನ ತಮ್ಮ..    ಗ : ಅತ್ತಿಗೆ ತಂಗಿ..
ಹೆ : ಭಾವನ ತಮ್ಮ..    ಗ : ಅತ್ತಿಗೆ ತಂಗಿ..
ಹೆ : ಭಾವನ ತಮ್ಮ..    ಗ : ಅತ್ತಿಗೆ ತಂಗಿ..

ಗ  : ನಿನಗಾಗಿ ಎಲ್ಲೋ ಇರುವ ನಲ್ಲನೊಬ್ಬನು ಅವನು
       ನಿನ್ನ ಮಾತು ಕೇಳಲೆಂದೇ  ಬಳಿಗೆ ಬರುವುನು
       ಹಾಗೆ ಹೀಗೆ ಆಡಬೇಡ.. ಪಾಪ ಅವನ ಕಾಡಬೇಡ...
       ಹಾಗೆ ಹೀಗೆ ಆಡಬೇಡ.. ಪಾಪ ಅವನ ಕಾಡಬೇಡ...
       ಗಂಡುಬೀರಿಯಂತೆ ಆಡಿ ಹೆದರಿಸಬೇಡಾ...
       ಅತ್ತಿಗೆ ತಂಗಿ... (ಹಾಂ )ಅತ್ತಿಗೆ ತಂಗಿ ನಿನ್ನಾ ಆಟ ನಡೆಯೊದಿಲ್ಲಾ... ಓಡು ಬೇಗನೇ..(ಹೇ)
       ಅತ್ತೆಯ ಮಗಳ ಬೆಳೆ ಇಲ್ಲಿ ಬೇಯೋದಿಲ್ಲಾ.. ಹೋಗೇ ಸುಮ್ಮನೇ..
ಗ : ಅತ್ತಿಗೆ ತಂಗಿ..      ಹೆ : ಭಾವನ ತಮ್ಮ..     
ಗ : ಅತ್ತಿಗೆ ತಂಗಿ..   ಹೆ : ಭಾವನ ತಮ್ಮ.. 
ಗ : ಅತ್ತಿಗೆ ತಂಗಿ..     ಹೆ : ಭಾವನ ತಮ್ಮ..     

ಹೆ : ಹಳ್ಳಿ ಹುಂಬನಂತೆ ಏಕೆ ಮಾತನಾಡುವೆ ಗಂಡೇ
      ರಸಿಕತನವು ಕೊಂಚ ಕೂಡ ನಿನ್ನಲಿಲ್ಲವೇ
      ನಾಳೆ ಬರುವ ಆಕೆಯನ್ನು ಕಂಡು ಹೀಗೆ ಓಡಿ ನೀನು
      ನಾಳೆ ಬರುವ ಆಕೆಯನ್ನು ಕಂಡು ಹೀಗೆ ಓಡಿ ನೀನು
      ಚಿಗರು ಮೀಸೆಯ ಮಾನ ಕಳೆಯುವೇನು
      ಭಾವನ ತಮ್ಮ (ಓಯ್) ಭಾವನ ತಮ್ಮ  ನಿನ್ನಾ ಆಟ ನಡೆಯೋದಿಲ್ಲ ನಿನ್ನಾ ಕಾಣೇನೇ
      ಮಾವನ ಮಗನ ಬೆಳೆ ಇಲ್ಲಿ ಬೇಯೋದಿಲ್ಲಾ ಬಾರೋ ಸುಮ್ಮನೆ
ಗ :  ಅತ್ತಿಗೆ ತಂಗಿ ನಿನ್ನಾ ಆಟ ನಡೆಯೊದಿಲ್ಲಾ... ಓಡು ಬೇಗನೇ..
      ಅತ್ತೆಯ ಮಗಳ ಬೆಳೆ ಇಲ್ಲಿ ಬೇಯೋದಿಲ್ಲಾ.. ಹೋಗೇ ಸುಮ್ಮನೇ..
ಗ : ಅತ್ತಿಗೆ ತಂಗಿ..      ಹೆ : ಭಾವನ ತಮ್ಮ..     
ಗ : ಅತ್ತಿಗೆ ತಂಗಿ..   ಹೆ : ಭಾವನ ತಮ್ಮ.. 
ಗ : ಅತ್ತಿಗೆ ತಂಗಿ..     ಹೆ : ಭಾವನ ತಮ್ಮ..     
ಗ : ಅತ್ತಿಗೆ ತಂಗಿ.. ಹೆ : ಭಾವನ ತಮ್ಮ..
------------------------------------------------------------------------------------------------------------------------

ಸೊಸೆ ತಂದ ಸೌಭಾಗ್ಯ (1977) - ದೇಶ ದೇಶದೊಳಗೆ.... 
ಸಾಹಿತ್ಯ: ವಿಜಯನಾರಸಿಂಹ  ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ:ಎಸ್.ಜಾನಕಿ ಮತ್ತು ಎಸ್.ಪಿ.ಬಿ. 

ಗಂಡು : ದೇಶ ದೇಶದೊಳಗೆ ನಮ್ಮ ದೇಶ ಚಂದ
            ದೇಶ ದೇಶದೊಳಗೆ ನಮ್ಮ ದೇಶ ಚಂದ
           ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಹೆಣ್ಣು : ಮಣ್ಣು ಚಿನ್ನ, ಮಾತು ಚೆನ್ನ,  (ಮಣ್ಣು ಚಿನ್ನ, ಮಾತು ಚೆನ್ನ)
           ಮಂದಿ ಒಂದಾಗೇ ಆನಂದ...
ಗಂಡು : ಮಂದಿ ಒಂದಾಗೇ ಆನಂದ
ಎಲ್ಲರು : ದೇಶ ದೇಶದೊಳಗೆ ನಮ್ಮ ದೇಶ ಚಂದ
            ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
            ಮಣ್ಣು ಚಿನ್ನ, ಮಾತು ಚೆನ್ನ, ಮಂದಿ ಒಂದಾಗೇ ಆನಂದ.

ಹೆಣ್ಣು : ತನ್ನನತಾನ ತಾನ ತಂದಾನಾ ತಾನನ ತಾನ ತಂದನ್ನಾನಾ
ಗಂಡು : ಜಗ ಜಗಸಿ ಬಂದವಳೇ ನಗು ನಗುತಾ ನಿಂತವಳೇ
           ಮಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಎಲ್ಲರು :  ಜಗ ಜಗಸಿ ಬಂದವಳೇ ನಗು ನಗುತಾ ನಿಂತವಳೇ
             ಮಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಹೆಣ್ಣು : ಕೆರೆ ಕಟ್ಟೆ  ತುಂಬೈತೆ ಬಡ ಹೊಟ್ಟೆ ಬಿರಿದೈತೆ
          ಕೆರೆ ಕಟ್ಟೆ  ತುಂಬೈತೆ ಬಡ ಹೊಟ್ಟೆ ಬಿರಿದೈತೆ
          ಕೆಸರಿನ ಕೈ ಕಡಗ ಕಟ್ಟೈತೆ.
ಎಲ್ಲರು : ಕೆಸರಿನ ಕೈ ಕಡಗ ಕಟ್ಟೈತೆ  
            ದೇಶ ದೇಶದೊಳಗೆ ನಮ್ಮ ದೇಶ ಚಂದ
            ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
            ಮಣ್ಣು ಚಿನ್ನ, ಮಾತು ಚೆನ್ನ,  ಮಣ್ಣು ಚಿನ್ನ, ಮಾತು ಚೆನ್ನ
           ಮಂದಿ ಒಂದಾಗೇ ಆನಂದ...  ಮಂದಿ ಒಂದಾಗೇ ಆನಂದ

ಗಂಡು : ಸಾಲದ ಬಲೆಯ ಬೀಸಿ ಜೀತದೇ ಜೀವ ತೈಸೋ
            ಸಾಲದ ಬಲೆಯ ಬೀಸಿ ಜೀತದೇ ಜೀವ ತೈಸೋ
            ಸ್ವಾಕಾರಕೆ ಹಮ್ಮು ಇನ್ನಿಲ್ಲ... ಹ್ಹಹ್ಹಾ
           ಜವರಾಯನ ಹಂಗೆ ಜಬರದಸ್ತು ಮಾಡೋ
          ಜಮೀನ್ದಾರನ ಜೋರು ಉಸಿರಿಲ್ಲ...
ಎಲ್ಲರು : ಜಮೀನ್ದಾರನ ಜೋರು ಉಸಿರಿಲ್ಲ...
ಹೆಣ್ಣು : ಹೂಳವಂಗೆ  ಭೂಮಿ ಬೆಳೆಯೋನ್ಗೆ ಹೂವ...
ಎಲ್ಲರು : ಹೂಳವಂಗೆ  ಭೂಮಿ ಬೆಳೆಯೋನ್ಗೆ ಹೂವ
ಹೆಣ್ಣು : ಭೂತಾಯಿ ನಮ್ಮ ಹೇತ್ತವ್ವಾ...   ಭೂತಾಯಿ ನಮ್ಮ ಹೇತ್ತವ್ವಾ

ಹೆಣ್ಣು : ದಿಲ್ಲಿಗೆ ತೌರು ಮನೆ ಹಳ್ಳಿಯಂತೆ...  ದಿಲ್ಲಿಗೆ ತೌರು ಮನೆ ಹಳ್ಳಿಯಂತೆ.. ಅಹ್
ಗಂಡು : ನೇಗಿಲ ಯೋಗಿ ತೌರ ಒಡೆಯನಂತೆ
ಹೆಣ್ಣು :  ಆಳಿಲ್ಲವಂತೆ...  ಅರಸಿಲ್ಲವಂತೆ...
ಗಂಡು : ಮೇಲಿಲ್ಲವಂತೆ...  ಕೀಳಿಲ್ಲವಂತೆ...
ಇಬ್ಬರು : ರಾಮರಾಜ್ಯ ಮರಳಿ  ಹುಟ್ಟಿ ಬಂದೈತಂತೆ
             ಅನ್ನಪೂರ್ಣೆ ಕರುಣೆ ನಮಗೆ  ಸಿಕೈತಂತೆ .. ಆಹ್ ..
             ಅನ್ನಪೂರ್ಣೆ ಕರುಣೆ ನಮಗೆ  ಸಿಕೈತಂತೆ
ಎಲ್ಲರು : ದೇಶ ದೇಶದೊಳಗೆ ನಮ್ಮ ದೇಶ ಚಂದ
            ದೇಶ ದೇಶದೊಳಗೆ ನಮ್ಮ ದೇಶ ಚಂದ
            ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
            ಮಣ್ಣು ಚಿನ್ನ, ಮಾತು ಚೆನ್ನ,  ಮಣ್ಣು ಚಿನ್ನ, ಮಾತು ಚೆನ್ನ
            ಮಂದಿ ಒಂದಾಗೇ ಆನಂದ...  ಮಂದಿ ಒಂದಾಗೇ ಆನಂದ
----------------------------------------------------------------------------------------------------------------------

ಸೊಸೆ ತಂದ ಸೌಭಾಗ್ಯ (1977) - ಓ ಹೆಣ್ಣೇ ನಿಲ್ಲು ನಿಲ್ಲು.... 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್.ಪಿ.ಬಿ. 

ಓ ಹೆಣ್ಣೇ...  ಓ ಹೆಣ್ಣೇ ನಿಲ್ಲು ನಿಲ್ಲು ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೇ ... ತಾಪಕೆ.. ನಾಚಿದೆ ನೋಡು ಕೆಂಡ ಸಂಪಿಗೇ..
ಓ ಹೆಣ್ಣೇ...  ಓ ಹೆಣ್ಣೇ ನಿಲ್ಲು ನಿಲ್ಲು  ಏಳು ಸುತ್ತಿನ ದುಂಡು ಮಲ್ಲಿಗೆ ಹ್ಹಾಂ

ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ...  
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ...  
ಹಠವನ್ನು ಬಿಡು ಕೇರಳದೇ ಇರು ಕೆಣಕದೆ ಇರು ನನ್ನನ್ನು
ಓ ಹೆಣ್ಣೇ...  ಓ ಹೆಣ್ಣೇ ನಿಲ್ಲು ನಿಲ್ಲು ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೇ ... ತಾಪಕೆ.. ನಾಚಿದೆ ನೋಡು ಕೆಂಡ ಸಂಪಿಗೇ..ಹೇ...
ಓ ಹೆಣ್ಣೇ ನಿಲ್ಲು ನಿಲ್ಲು  ಏಳು ಸುತ್ತಿನ ದುಂಡು ಮಲ್ಲಿಗೆ ಟ್ರೂಬ್ಯಾ....

ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ...  ಒಂದನೊಂದು ಸೇರದೇನು ಬಂಗಾರಿ
ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ...  ಒಂದನೊಂದು ಸೇರದೆಂದು  ಬಂಗಾರಿ
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ...  ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ...  
ಕರ ಮುಗಿಯುವೆ ಶರಣೆನ್ನುವೆ ದಯಮಾಡಿಸು ವೈಯ್ಯಾರಿ 
ಓ ಹೆಣ್ಣೇ...  ಓ ಹೆಣ್ಣೇ ನಿಲ್ಲು ನಿಲ್ಲು ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ
ಹೇ... ಕೋಪಕೇ ... ತಾಪಕೆ.. ನಾಚಿದೆ ನೋಡು ಕೆಂಡ ಸಂಪಿಗೇ..ಹೇ...
ಓ ಹೆಣ್ಣೇ...  ಓ ಹೆಣ್ಣೇ ನಿಲ್ಲು ನಿಲ್ಲು  ಏಳು ಸುತ್ತಿನ ದುಂಡು ಮಲ್ಲಿಗೆ ಮಲ್ಲಿಗೆ.. ಹ್ಹಾಂ 
---------------------------------------------------------------------------------------------------------------------

ಸೊಸೆ ತಂದ ಸೌಭಾಗ್ಯ (1977) - ಸಾಕು ಎನ್ನುವನೇ .... 
ಸಾಹಿತ್ಯ: ವಿಜಯನಾರಸಿಂಹ  ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್.ಪಿ.ಬಿ

ಟ್ರೂಅಅಅ...  ಹೇ...  ಹೇ....  ಹೇ...
ಸಾಕು ಎನ್ನುವನೇ ಸಾಹುಕಾರನು ಇನ್ನೂ ಬೇಕು ಇನ್ನೂ ಎಂದು 
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೇ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೇ..
ಸಾಕು ಎನ್ನುವನೇ ಸಾಹುಕಾರನು.... 
ಆ... ಆ... ಆ...  ಹೇ...  ಹೇ...  ಹೇ...  ಆ... 

ಅಷ್ಟಿದ್ದರೇ ಇಷ್ಟು ಬೇಕು ಅಂತಾನೆ ನೊಂದು ಬೆಂದು
ಇಷ್ಟಾದರೇ ಇನ್ನೆಷ್ಟೆಂದು ಅಳುತಾನೆ ಸಾಲದೆಂದು
ಊರನ್ನೇ ನುಂಗೋನಂತೆ ಹಗಲಿರುಳು ಒಂದೇ ಚಿಂತೆ
ಶಾಂತಿಯು ಇಲ್ಲದೇ ದಿನವೂ ಅಲೆವ ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೇ.. .
ಸಾಕು ಎನ್ನುವನೇ ಸಾಹುಕಾರನು....
ಆ... ಆ... ಆ...  ಹೇ...  ಹೇ...  ಹೇ...  ಆ... 

ತಿನ್ನೋಕೆ ಅನ್ನವು ಬೇಕು ನೆರಳೊಂದು ಇರಲೇಬೇಕು
ಓರಗಲ್ಲೇ ಕರಗಿಸುವಂತ ಅತೀ ಆಸೆ ಯಾಕಿರಬೇಕು
ಮೈಯಲ್ಲಿ ಬಲವಿರುವಾಗ ಶ್ರಮದಿಂದ ಬಾಳಬೇಕು ....
ಮೈಯಲ್ಲಿ ಬಲವಿರುವಾಗ ಶ್ರಮದಿಂದ ಬಾಳಬೇಕು
ದುಡಿಯದೆ ಮೋಸದಿ ಮುಳುಗಿರುವಾತ
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೇ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೇ
ಸಾಕು ಎನ್ನುವನೇ ಸಾಹುಕಾರನು.... 
ಆ... ಆ... ಆ...  ಹೇ...  ಹೇ...  ಹೇ...  ಆ... 

ಊರೆಲ್ಲಾ ದೋಚಿ ದೋಚಿ ಎಲ್ಲಿಡುವೆ ಎಲ್ಲವನ್ನು
ಹಸಿದಾಗ ಅನ್ನದಂತೆ ತಿನ್ನುವೆಯಾ ಚಿನ್ನವನ್ನು
ಹುಲಿಯಂತೆ ಬಾಳದೇನೆ ನರಿಯಂತೆ ಆದರೆ ನೀನು
ಹುಲಿಯಂತೆ ಬಾಳದೇನೆ ನರಿಯಂತೆ ಆದರೆ ನೀನು
ಎಲ್ಲರಾ ಶಾಪ ಸುಮ್ಮನೆ ಬಿಡದು
ಹಣ ನಿನ್ನ ಬಂದು ಕಾಪಾಡದೆಂದು
ಶ್ರೀಮಂತನಾದರೇನು ಬಿಕ್ಷುಕನೇ ನೀನು .. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ನೀನು ..
ಸಾಕು ಎನ್ನುವನೇ ಸಾಹುಕಾರನು ಇನ್ನೂ ಬೇಕು ಇನ್ನೂ ಎಂದು 
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೇ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೇ..
ಆ... ಆ... ಆ...  ಹೇ...  ಹೇ...  ಹೇ...  ಟ್ರುಆಅ 
------------------------------------------------------------------------------------------------------------------------

No comments:

Post a Comment