ಸಹಧರ್ಮಿಣಿ ಚಿತ್ರದ ಹಾಡುಗಳು
- ಚಂದಿರನಾ ಶೀತಲತೇ
- ಪುಟ್ಟ ಪುಟ್ಟ ಮಕ್ಕಳೇ
- ನಡೆ ನಡೆ ಸರಿಯಾಗಿ
- ಮನುಜ ನೀ ದೇವರ ಆಟದ ಬೊಂಬೆ
ಸಹಧರ್ಮಿಣಿ (೧೯೭೩) - ಚಂದಿರನಾ ಶೀತಲತೇ
ಸಂಗೀತ : ಆರ್.ರತ್ನ ಸಾಹಿತ್ಯ : ಸತ್ಯನಾರಾಯಣ ಗಾಯನ : ಪಿ.ಬಿ.ಶ್ರೀನಿವಾಸ ಪಿ.ಸುಶೀಲಾ
ಗಂಡು : ಚಂದಿರನ.. ಶೀತಲತೇ ..
ಚಂದಿರನ ಶೀತಲತೇ ಕುಸುಮಗಳ ಕೋಮಲತೇ ಭ್ರಮಗಗಳ ಚಪಲತೇ ..
ಭ್ರಮಗಗಳ ಚಪಲತೇ ಮುಗಿಲುಗಳ ಚಂಚಲತೇ
ಒಂದಡೇ ಕಾಣಲೂ ಬಯಸಿದ ಬ್ರಹ್ಮ ಮೂಡಿಪು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....
ಹೆಣ್ಣು : ಚಂದಿರ ಬೆಳಕೇ ಲೋಕವ ಕಳಿಸಿ ಕುಸುಮವು ಅರಳಿ ಕಂಪನು ಸೂಸಿ
ಭ್ರಮರವ ತಾಕೀರ ಹೂವನು ರಮಿಸಿ
ಭ್ರಮರವ ತಾಕೀರ ಹೂವನು ರಮಿಸಿ ಮುಗಿಲದು ಅಲೆದು ಮಳೆಯನು ಸುರಿಸೀ
ಪಡೆಯುವ ಸ್ವಾರ್ಥಕ ತಮ್ಮಯ ಬಾಳಲೀ.. ಚಂದಿರನೇ..
ಗಂಡು : ಹೆಣ್ಣು ಇನಿಯನ ಮನದಲಿ ಬೆಳಗಿ ಮನೆಯನು ತುಂಬಿ
ಹೆಣ್ಣು ಇನಿಯನ ಮನದಲಿ ಬೆಳಗಿ ಮನೆಯನು ತುಂಬಿ
ಪ್ರೀತಿಯ ಕಡಲಲಿ ಜೀವನ ನೌಕೆಯ ಅಂಬಿಗಳಾಗಿ
ಜೀವನ ನೌಕೆಯ ಅಂಬಿಗಳಾಗಿ ಸ್ವಾರ್ಥಕ ಪಡೆವಳು ಬಾಳಿನಲಿ
ಹೆಣ್ಣು : ನೈದಿಲೇ ಅರಳಲೂ ತಿಂಗಳ ಬೆಳಕಲಿ
ನೈದಿಲೇ ಅರಳಲೂ ತಿಂಗಳ ಬೆಳಕಲಿ ತಾರೆಯೂ ಶೋಕಿಗೇ ಕಾರಣ ಇರುಳಲೀ.. ಚಂದಿರನೇ ..
ಗಂಡು : ಚಂದಿರನ ಶೀತಲತೇ ಕುಸುಮಗಳ ಕೋಮಲತೇ ಭ್ರಮಗಗಳ ಚಪಲತೇ ..
ಭ್ರಮಗಗಳ ಚಪಲತೇ ಮುಗಿಲುಗಳ ಚಂಚಲತೇ
ಒಂದಡೇ ಕಾಣಲೂ ಬಯಸಿದ ಬ್ರಹ್ಮ ಮೂಡಿಪು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....
ಒಂದಡೇ ಕಾಣಲೂ ಬಯಸಿದ ಬ್ರಹ್ಮ ಮೂಡಿಪು ಜಗದಲಿ ಹೆಣ್ಣಿನ ಜನ್ಮ
ಚಂದಿರನ.....
ಸಹಧರ್ಮಿಣಿ (೧೯೭೩) - ಪುಟ್ಟ ಪುಟ್ಟ ಮಕ್ಕಳೇ
ಸಂಗೀತ : ಆರ್.ರತ್ನ ಸಾಹಿತ್ಯ : ಸತ್ಯನಾರಾಯಣ ಗಾಯನ : ಪಿ.ಬಿ.ಶ್ರೀನಿವಾಸ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ ಮುತ್ತಿನಂತ ನೀತಿಯ ಕಥೆಯೊಂದು ಕೇಳೀ
ಕಲಿತ ನೀತಿ ಮರೆಯದೇ ನೂರು ವರುಷ ಬಾಳೀ
ನೂರು ವರುಷ ಬಾಳೀ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ ಮುತ್ತಿನಂತ ನೀತಿಯ ಕಥೆಯೊಂದು ಕೇಳೀ
ಕಲಿತ ನೀತಿ ಮರೆಯದೇ ನೂರು ವರುಷ ಬಾಳೀ
ನೂರು ವರುಷ ಬಾಳೀ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
ಇದ್ದರೊಂದು ಊರಿನಲ್ಲಿ ಸೋದರರೂ ನಾಲ್ವರೂ
ಇದ್ದರೊಂದು ಊರಿನಲ್ಲಿ ಸೋದರರೂ ನಾಲ್ವರೂ ಅವರ ಭ್ರಾತ ಪ್ರೇಮಕೇ ಹೋಲಿಕೆ ರಾಮಾಯಾಣ
ಬಾಳಿನಲ್ಲಿ ಸ್ವರ್ಗವನ್ನು ಕಂಡರು ಅವರಲ್ಲಿದ್ದ ಒಮ್ಮತವೇ ಅದಕೇ ಕಾರಣ... ಅದಕೇ ಕಾರಣ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
ಅವರ ಮನೆಯ ಮಂದಿರ ಅದರ ಸ್ವರ್ಣ ಗೋಪುರ
ಅವರ ಮನೆಯ ಮಂದಿರ ಅದರ ಸ್ವರ್ಣ ಗೋಪುರ ಆ ಸಹಧರ್ಮಿಣೀ.. ಅವಳ ಮಮತೇ ಅಪಾರ
ಹರಿಸಿದಳ್ಳೆಲ್ಲರಿಗೂ ಮಾತೃ ಪ್ರೇಮ ಸಾರ
ಹರಿಸಿದಳ್ಳೇಲ್ಲರಿಗೂ ಮಾತೃ ಪ್ರೇಮ ಸಾರ ನಂದನವಾಯಿತು ಆ ಸಂಸಾರ.. ಆ ಸಂಸಾರ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
ಪುಟ್ಟ ಪುಟ್ಟ ಮಕ್ಕಳೇ ಪುಟಾಣಿ ಮಕ್ಕಳೇ
--------------------------------------------------------------------------------------------------------------------------
ಸಹಧರ್ಮಿಣಿ (೧೯೭೩) - ನಡೆ ನಡೆ ಸರಿಯಾಗಿ
ಸಂಗೀತ : ಆರ್.ರತ್ನ ಸಾಹಿತ್ಯ : ಸತ್ಯನಾರಾಯಣ ಗಾಯನ : ಪಿ.ಬಿ.ಶ್ರೀನಿವಾಸ ಎಸ್.ಜಾನಕೀ
ಗಂಡು : ನಡೆ ನಡೆ ಸರಿಯಾಗಿ ಅತ್ತಿಗೇ ನೀ.. ಅತ್ತಿಗೇ ..
ನೆಲವ ನೋಡುತಾ ತಲೆಯ ಬಾಗಿಸೀ..
ನೆಲವ ನೋಡುತಾ ತಲೆಯ ಬಾಗಿಸೀ.. ಮೆಣಸಿನಕಾಯಿ ಅತ್ತಿಗೇ .. ಹೊಯ್ಯ್
ಉರಿ ಮೆಣಸಿನಕಾಯಿ ಅತ್ತಿಗೇ ..
ಹೆಣ್ಣು : ಸರಿಯಾಗಿ ನಡೆಯಮ್ಮಾ ಮೆತ್ತಗೇ .. ಗರ್ವವನ್ನು ತಗ್ಗಿಸಮ್ಮ ತಣ್ಣಗೇ .. ಹೊಯ್..
ಸರಿಯಾಗಿ ನಡೆಯಮ್ಮಾ ಮೆತ್ತಗೇ .. ಗರ್ವವನ್ನು ತಗ್ಗಿಸಮ್ಮ ತಣ್ಣಗೇ ..
ಗಂಡು : ನೀನೂ ದರ್ಪವನ್ನೂ ಕಟ್ಟಿಡಮ್ಮಾ ಮೂಲೆಗೇ ..
ಮಗು : ಚಿಕ್ಕಮ್ಮ ಕೇಳಮ್ಮಾ ...
ಇಬ್ಬರು : ಡೂಮ್ ಡೂಮ್ ಡೂಮ್ ಡೂಮ್ ಡೂಮ್ ಡೂಮ್ ಡೂಮ್ ಡೂಮ್
ಗಂಡು : ಹೆತ್ತ ತಾಯ ಮರೆಯಬೇಕೂ ಮಕ್ಕಳೂ ಚಿಕ್ಕ ತಾಯ ಅಕ್ಕರೆಯ ಮಡಿಲೊಳೂ
ಹೆತ್ತ ತಾಯ ಮರೆಯಬೇಕೂ ಮಕ್ಕಳೂ ಚಿಕ್ಕ ತಾಯ ಅಕ್ಕರೆಯ ಮಡಿಲೊಳೂ
ಹೆಣ್ಣು : ಹೊಕ್ಕ ಮನೆಗೂ ತವರ ಮನೆಗೂ ಮುದ್ದೂ ಹೆಣ್ಣೂ ನೀ
ತರಲೇಬೇಕು ಕೀರ್ತಿಯನ್ನೂ ಗೃಹಿಣಿಯಾಗಿ ನೀ ..
ಇಬ್ಬರು : ಸದ್ದಗೃಹಣಿಯಾಗಿ ನೀ
ಗಂಡು : ನಡೆ ನಡೆ ಸರಿಯಾಗಿ (ಹೊಯ್ ) ಅತ್ತಿಗೇ ನೀ.. ಅತ್ತಿಗೇ .. (ಹೊಯ್ ಹೊಯ್ )
ನೆಲವ ನೋಡುತಾ ತಲೆಯ ಬಾಗಿಸೀ..
ನೆಲವ ನೋಡುತಾ ತಲೆಯ ಬಾಗಿಸೀ.. ಮೆಣಸಿನಕಾಯಿ ಅತ್ತಿಗೇ .. ಓ ಹೊಯ್ಯ್
ಉರಿ ಮೆಣಸಿನಕಾಯಿ ಅತ್ತಿಗೇ ..
--------------------------------------------------------------------------------------------------------------------------
ಸಹಧರ್ಮಿಣಿ (೧೯೭೩) - ಮನುಜ ನೀ ದೇವರ ಆಟದ ಬೊಂಬೆ
ಸಂಗೀತ : ಆರ್.ರತ್ನ ಸಾಹಿತ್ಯ : ಸತ್ಯನಾರಾಯಣ ಗಾಯನ : ಪಿ.ಬಿ.ಶ್ರೀನಿವಾಸ ಪಿ.ನಾಗರಾಜ
ಪಿಬಿ : ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದೂ ಮೂರೇ ದಿನಗಳಾದರೂ ಆಸೆಯೂ ಮೋಹವು ನೂರಾರೂ
ಮನುಜಾ ... ನೀ ದೇವರ ಆಟದ ಬೊಂಬೆ
ಪಿಬಿ : ಜೀವನ ನೌಕೆ ನಡೆಸುವನೂ ನಾಗ : ದೇವರು ಮನಸಿಗೇ ಬಂದಂತೇ ...
ಪಿಬಿ : ಜೀವನ ನೌಕೆ ನಡೆಸುವನೂ
ಇಬ್ಬರು : ದೇವರು ಮನಸಿಗೇ ಬಂದಂತೇ ...
ಪಿಬಿ : ಆಶಾ ಪಾಶದ ಸುಳಿಯಲಿ ಸಿಲುಕಿ
ಇಬ್ಬರು : ಆಶಾ ಪಾಶದ ಸುಳಿಯಲಿ ಸಿಲುಕಿ
ಪಿಬಿ : ತೋಳಲೇಬೇಕು ಕೊನೆವರೆಗೂ..
ಇಬ್ಬರು : ತೋಳಲೇಬೇಕು ಕೊನೆವರೆಗೂ..
ಪಿಬಿ : ಮನುಜಾ ... ನೀ ದೇವರ ಆಟದ ಬೊಂಬೆ
ಪಿಬಿ : ಮಮತೇ ದ್ವೇಷ ಮನುಜನನು
ನಾಗ : ಬಿಡದು ಸಾವಿನ ತುದಿವರೆಗೂ
ಪಿಬಿ : ಮಮತೇ ದ್ವೇಷ ಮನುಜನನು
ಇಬ್ಬರು : ಬಿಡದು ಸಾವಿನ ತುದಿವರೆಗೂ
ಪಿಬಿ : ಭೋಗವೂ ಭಾಗ್ಯವೂ ಬಾರದೂ ಹಿಂದೇ
ಇಬ್ಬರು : ಭೋಗವೂ ಭಾಗ್ಯವೂ ಬಾರದೂ ಹಿಂದೇ
ಪಿಬಿ : ಸಾಗಲೇಬೇಕೂ ಜೊತೆಯಿರದೇ ...
ಇಬ್ಬರು : ಸಾಗಲೇಬೇಕೂ ಜೊತೆಯಿರದೇ ...
ಪಿಬಿ : ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದೂ ಮೂರೇ ದಿನಗಳಾದರೂ ಆಸೆಯೂ ಮೋಹವು ನೂರಾರೂ
ಇಬ್ಬರು : ಮನುಜಾ ... ನೀ ದೇವರ ಆಟದ ಬೊಂಬೆ
ಇದು ಇರುವುದೂ ಮೂರೇ ದಿನಗಳಾದರೂ ಆಸೆಯೂ ಮೋಹವು ನೂರಾರೂ
ಇಬ್ಬರು : ಮನುಜಾ ... ನೀ ದೇವರ ಆಟದ ಬೊಂಬೆ
--------------------------------------------------------------------------------------------------------------------------
No comments:
Post a Comment