1169. ಸಂಸಾರದ ಗುಟ್ಟು (1986)


ಸಂಸಾರದ ಗುಟ್ಟು ಚಲನಚಿತ್ರದ ಹಾಡುಗಳು 
  1. ಕಾವೇರಿ ಓ ಕಾವೇರಿ 
  2. ಹೇ ಚೈತ್ರವೇ ಸುರಿಸೂ ಹೂಮಳೆ 
  3. ಸ್ವಯಂವರ ಸ್ವಯಂವರ 
  4. ಓ ದೇವತೇ ಪ್ರೇಮ ದೇವತೇ 
  5. ತಲಕಾಡು ಮರಗಳಲಿ 
ಸಂಸಾರದ ಗುಟ್ಟು  (1986) - ಕಾವೇರಿ ಓ ಕಾವೇರಿ 
ಸಂಗೀತ : ಸತ್ಯಂ : ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ.

--------------------------------------------------------------------------------------------------------------------------

ಸಂಸಾರದ ಗುಟ್ಟು  (1986) - ಹೇ ಚೈತ್ರವೇ ಸುರಿಸೂ ಹೂಮಳೆ 
ಸಂಗೀತ : ಸತ್ಯಂ : ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ 

ಗಂಡು : ಹೇ.. ಚೈತ್ರವೇ ಸುರಿಸು ಹೂಮಳೆ ಪ್ರೇಯಸಿ ದಾರಿಗೆ 
            ಹೂಗಳ ಹಾಸಿಗೆ ಒಲವಲಿ ನೀ ಹಾಸು... 
            ಕೋಮಲ ರೂಪಸಿ ತಾಳಲು ಈ ಬಿಸಿ ಗಾಳಿಯ ನೀ ಬೀಸು 
ಹೆಣ್ಣು : ಹೇ.. ಚೈತ್ರವೇ ಸುರಿಸು ಹೂಮಳೆ 
          ಹಾಡಿರೇ ಪ್ರಿಯತಮ ಪ್ರೀತಿಯ ಸರಿಗಮ ಕುಣಿಯುತ ನೀ ಹಾಡು    
          ಪ್ರೇಮದ ಸೌರಭ ಎಲ್ಲೇಡೆ ಸೂಸುತ ಕಂಪನ ನೀ ನೀಡು 
ಗಂಡು : ಹೇ.. ಚೈತ್ರವೇ ಸುರಿಸು ಹೂಮಳೆ.... 
 
ಗಂಡು : ಮುತ್ತಿನ ಚಪ್ಪರ ಬೇಕೇ... ಹ್ಹಾ ರತ್ನದ ಪಲ್ಲಕಿ ಸಾಕೇ ... ಆಹಾ 
ಹೆಣ್ಣು : ಊರೆಲ್ಲಾ ಗುಲ್ಲಾಗಬೇಕೇ... ಯಾ...ಯಾ ನಾ ನಾಚಿ ನೀರಾಗಬೇಕೇ ... ಷ್ಯೂರ್ 
ಗಂಡು : ಮದುವೆಯು ಆಗುವರೆಗೆ ಈ ತುಟಿಗಳು ಒಣಗಿರಬೇಕೇ 
ಹೆಣ್ಣು : ಕಾಯೋದಲ್ಲಿದೇ ಸುಖವು ಆತುರ ನಿಂಗೇಕೇ .. 
ಗಂಡು : ನಿನ್ನನು ಅಗಲಿದ ಮೇಲೆ ನಿಲ್ಲದು ನನ್ನಯ ಜೀವ
ಹೆಣ್ಣು : ಅಗಲಿಕೆ ಮದುವೆಗೆ ತಾನೇ ತಾಳಿಕೋ ಆ ನೋವ... 
ಗಂಡು : ಹೇ.. ಚೈತ್ರವೇ ಸುರಿಸು ಹೂಮಳೆ 

ಗಂಡು : ಹೊಗೆಯ ಕಾರಿ ನುಗ್ಗಿ ಬರುವ ಭೂತ ರಾಕ್ಷಸ 
           ಪ್ರೇಮಿಗಳನು ದೂರ ಮಾಡೇ ಏನು ಸಂತಸ 
           ಪ್ರತಿನಿತ್ಯ ನೀನು ಲೇಟು ಬರುವೆಯಲ್ಲವೇ 
           ಇಂದು ಮಾತ್ರ ಏಕೆ ರೈಟು ಕರುಣೆ ಇಲ್ಲವೇ 
           ಅಲ್ಲಿಯೇ ನಿಲ್ಲು ನೀ... ಹಿಂದೆ ತಿರುಗಿ ಹೋಗು ಜಾಣ ನೀ 
ರೈಲು : ಕರಿ ಭೂತ ಕರಿ ಪ್ರೇತ ನಾನಲ್ಲವೋ ನಿಮ್ಮ ಮ್ಯಾಲೇ ನನಗ್ಯಾವ ಹಗೆಯಿಲ್ಲವೋ 
           ಲೇಟಾದ್ರೂ ರೈಟಾದ್ರೂ ನಾ ಓಡುವೇ ..ಈ ನನ್ನ ಕರ್ತವ್ಯ ನಾ ಮಾಡುವೇ .. 
           ಗಾಂಧಿಯ ನಾನು ಹೊತ್ತಿರುವೇ ಗೋಡ್ಸೆಯ ನಾನು ಹೊಯ್ದಿರುವೇ 
           ಬಡವ ಬಲ್ಲಿದ ನನಗೊಂದೇ ನನ್ನನ್ನೂ ಹೋಗಲು ಬಿಡು ಮುಂದೇ ... 
--------------------------------------------------------------------------------------------------------------------------

ಸಂಸಾರದ ಗುಟ್ಟು  (1986) - ಸ್ವಯಂವರ ಸ್ವಯಂವರ 
ಸಂಗೀತ : ಸತ್ಯಂ : ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ರಾಮಕೃಷ್ಣ, ಜಯಚಂದ್ರನ .

ಸ್ವಯಂವರ ಸ್ವಯಂವರ ಸ್ವಯಂವರ ಸ್ವಯಂವರ 
ಕಾವೇರಿ ಪ್ರಿಯತಮ ಸ್ವಯಂವರ ನನ್ನ ಕಾವೇರಿ ಪ್ರಿಯತಮೆ ಸ್ವಯಂವರ 
ಸ್ವಯಂವರ ಆಹಾ... ಓಓಓ ... ಹೇಹೇಹೇಹೇಹೇ 
ಶಿವನ ಧನಸ್ಸು ಮುರಿದನು ಅಂದಿನ ರಾಮ 
ಈ ಮೂರು ಜನರ ಮನಸ್ಸು ಗೆಲುವ ಇಂದಿನ ರಾಮ 
ಶಿವನ ಧನಸ್ಸು ಮುರಿದನು ಅಂದಿನ ರಾಮ 
ಈ ಮೂರು ಜನರ ಮನಸ್ಸು ಗೆಲುವ ಇಂದಿನ ರಾಮ 
ಸ್ವಯಂವರ ಸ್ವಯಂವರ ಇದು ಕಾವೇರಿ ಪ್ರಿಯತಮ ಸ್ವಯಂವರ 
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ 
ಸ್ವಯಂವರ ಆಹಾ... ಓಓಓ ... ಹೇಹೇಹೇಹೇಹೇ 

ಸಂಗೀತ ಸಾಗರವ ಕುಡಿದ ಅಗಸ್ತ್ಯರೇ ರಾಘವೇಂದ್ರರು 
ಗರಿಸಗರಿಗ ಸರಿನಿಸದನಿ ರದನಿದ ಸನಿದಪರಿದಪಮ  
ಸರಿಗ ರಿಗಮ ಗಮಪ... ಪದನಿಗರಿಗಪ.. ಗಮಪ 
ಸಂಗೀತ ಸಾಗರವ ಕುಡಿದ ಅಗಸ್ತ್ಯರೇ ರಾಘವೇಂದ್ರರು 
ಕರಾಟೆ ತರಾಟೆ ಮಾಡೋ ಭೀಮ ಶಕ್ತಿಯೇ ಪರಶುರಾಮನು ಹ್ಹಾ... ಊ ...ಹ್ಹಾ... ಊ ...
ಇಷ್ಟ ದೈವ ಪೂಜೆಗೆ ಇವನಿಗಿಷ್ಟಗೀವ ಪುನೀತ ಸಾವಿತ್ರಿ 
ಇಷ್ಟ ದೈವ ಪೂಜೆಗೆ ಇವನಿಗಿಷ್ಟಗೀವ ಪುನೀತ ಸಾವಿತ್ರಿ 
ಹೊಂದಿಕೆ ಇಲ್ಲದ ಮೂವರ ಕಂಠದ ಮಿಲನದಿ ಚಿತ್ರ ಶಂಖನಾದ... ಶಂಖನಾದ    
ಸ್ವಯಂವರ ಸ್ವಯಂವರ ಇದು ಕಾವೇರಿ ಪ್ರಿಯತಮ ಸ್ವಯಂವರ 
ನನ್ನ ಕಾವೇರಿ ಪ್ರಿಯತಮೆ ಸ್ವಯಂವರ 
ಸ್ವಯಂವರ ಆಹಾ... ಓಓಓ ... ಹೇಹೇಹೇಹೇಹೇ 

ಕೃಷ್ಣ... ಆಆಆ... ನಾವುಗಳು ಬೊಂಬೆಗಳು ಆಡಿಸೋ ಕಲೆಗಾರ ನೀನೇ... 
ನಿನ್ನಯ ನೀತಿಯೇ ಶ್ರೀರಕ್ಷೆಯು ನಿನ್ನಯ ನಾಮವೇ ಮೋಕ್ಷವು 
ಮುರುಳಿ ಲೋಲಾ... ಮೋಹನಗಾನ... ಮಾನಸ ಚೋರ... 
ಗೋಪಿಕಿಶೋರ... ಗಿರಿಧಾರಿ... ವನಮಾಲಿ... ಕೇಶವ... ಮಾಧವ... 
ಕೃಷ್ಣ... ಕೃಷ್ಣ... ಕೃಷ್ಣ... ಕೃಷ್ಣ...       
--------------------------------------------------------------------------------------------------------------------------

ಸಂಸಾರದ ಗುಟ್ಟು  (1986) - ಓ ದೇವತೇ ಪ್ರೇಮ ದೇವತೇ 
ಸಂಗೀತ : ಸತ್ಯಂ : ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ 

ಪ್ರೀತಿಯ ಸವಿಜೇನ ಹೊಳೆ ಬಾಳಲಿ ತಂದ ಅಪ್ಸರೇ ... 
ಹೃದಯವೆಂಬ ಗುಡಿಯಲ್ಲಿ ನೆಲೆಸಿಹ ದೇವಿಯೇ... ಆಆಆಅ 
ಓ ದೇವತೇ ... ಪ್ರೇಮ ದೇವತೇ ... ಜೀವ ತಳೆದ ಅನುರಾಗವೋ 
ಇದು ಪೂರ್ವಜನ್ಮದ ಬಂಧ ತಂದ ರಸ ಯೋಗವೋ.. ಓ... 
ಓ ದೇವತೇ ... ಪ್ರೇಮ ದೇವತೇ ... 

ಎದೆಯಲಿ ನೂತನ ಭಾವನೆ ಮೀಟಿದೆ ಮದನ ಬಾಣವೋ 
ಕಣಕಣದಲೂ ಉಸಿರುಸಿರಲು ಹೊಮ್ಮಿದ ರಸೋನ್ಮಾದವೋ... ಓಯ್ 
ಓ ದೇವತೇ ಪ್ರೇಮ ದೇವತೇ ... ರಸಿಕತೆ ತಂದಿಹ ಶೃಂಗರವೋ 
ಆ ರತಿದೇವಿ ಸೊಬಗ ಪಡೆದ ಪ್ರತಿ ಅವತಾರವೋ... ಹಾಯ್...  
ಓ ದೇವತೇ ... ಪ್ರೇಮ ದೇವತೇ ... ಓ... ಆಆಆಆ ಆಆಆ ಆಆಆ ಆಆಆ 

ಹೃದಯವ ಹೂಮಾಲೆಯಾಗಿ ನಾ ಅರ್ಪಿಸಲೇ... 
ಜೀವವನೇ ಕರ್ಪೂರವಾಗಿ ನಾ ಬೆಳಗಿಸಲೇ... 
ಆರಾಧನೆ ಹಿಂದೆಯ ಅಡಗಿಹ ಆ ವೇದನೆ ಹೇಗೆ ಹೇಳಲಿ... 
ಮನದೇ ದಹಿಸೋ ಬೆಂಕಿ ಜ್ವಾಲೆಯ ಮಾತಿನಲ್ಲಿ ಹೇಗೆ ಹೇಳಲೀ ... ಅಹ್ಹಹ್ಹಾ... ಅಹ್ಹಹ್ಹಾ 

ಈ ಪ್ರೇಮವೂ ಬರಿ ನಟನೆ ಈ ಬಂಧವು ಬರಿ ನಟನೆ 
ಆಹ್ ಆರಾಧನೆ ಬರಿ ನಟನೆ ಆ ವೇದನೆ ಬರಿ ನಟನೆ 
ಈ ನಾಟಕದ ತೆರೆ ಕಳಚಿ ಬಿದ್ದಿಹುದು 
ಇನ್ನ... ಆ ದೇವತೇ ಆ ಗುಡಿಯನು ಅಗಲುವುದು  
ಶೃತಿ ಸೇರದ ಈ ದೀನೇಯ ತೊರೆಯುವುದು 
ಹೊಸ ವೀಣೆಯ ಹೊಸ ನಾದದಿ ಬೆರೆಯುವುದು 

ಸ್ವಾರ್ಥ ಅರಿಯದು ಪ್ರೇಮ ಪರಮಾರ್ಥ ಸ್ವರೂಪವೇ ಪ್ರೇಮ 
ಆ ಪ್ರೇಮಕೆ ಎರಡೇ ಉಪಮಾನ ಅದೇ ಆಗಸವೋ.. ಸಾಗರವೋ 
ಅದ ತಡೆಯಲಾರರು ಕಾಮಿಗಳು ಅದ ಅನ್ನಲಾರರು ದ್ರೋಹಿಗಳು 
ಓ ದೇವತೇ ... ಪ್ರೇಮ ದೇವತೇ ... ಆ ದೇವತೇ ... ಪ್ರೇಮ ದೇವತೇ ...
ಮನದ ನೆಲೆಸಿಹ ಮಾಧವನೇ... ಎದುರಲಿ ನಿಂತಿಹ ರಾಘವನೇ 
ಸಂಗಾತಿ ಜೀವನ.....  ಸಂಗಾತಿ 
-------------------------------------------------------------------------------------------------------------------------

ಸಂಸಾರದ ಗುಟ್ಟು  (1986) - ತಲಕಾಡು ಮರಳಾಗಲಿ 
ಸಂಗೀತ : ಸತ್ಯಂ : ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ.

ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ 
ಎಂದು ಶಾಪವ ಕೊಟ್ಟು ಅಸುನೀಗಿದ ಗರತಿ... 
ಆಲಮೇಲಮ್ಮಾ.... ಓ.. ಆಲಮೇಲಮ್ಮಾ.... 
ಈ ಅಂದದ ಬೋಂಬೆ ಗತಿಯೇನಮ್ಮಾ 
ನೀ ನುಡಿಯಮ್ಮ ಆಲಮೇಲಮ್ಮಾ... 
ಆಲಮೇಲಮ್ಮಾ... ಆಲಮೇಲಮ್ಮಾ... ಆಲಮೇಲಮ್ಮಾ... ಆಲಮೇಲಮ್ಮಾ... 

ಹುತ್ತದ ಮೇಲೆ ಕಾಲನೀಡುವಳೋ ಆಲಮೇಲಮ್ಮಾ... ಆಲಮೇಲಮ್ಮಾ... 
ಹುಲಿಯ ಹೆಜ್ಜೆಯ ಅರಸಿ ನಗುವಳೋ ಆಲಮೇಲಮ್ಮಾ... ಆಲಮೇಲಮ್ಮಾ... 
ಉಡಿಯಲ್ಲಿ ಕೆಂಡ ಕಟ್ಟಿಕೊಂಡವಳು ಮನದಲ್ಲಿ ಜ್ವಾಲೆ ಉರಿದು ನಿಂತವಳು  
ಆಲಮೇಲಮ್ಮಾ... ಆ...ಓ... ಆಲಮೇಲಮ್ಮಾ... 
ಆಲಮೇಲಮ್ಮಾ... ಓ.. ಆಲಮೇಲಮ್ಮಾ... ಆಲಮೇಲಮ್ಮಾ... ಓ.. ಆಲಮೇಲಮ್ಮಾ... 

ಉತ್ತಮ ಗೃಹಣಿ ಇವಳಂತೆ ಆಲಮೇಲಮ್ಮಾ... ಆಲಮೇಲಮ್ಮಾ... 
ಊರಿಗೆ ದೀಪ ಇವಳಂತೆ ಆಲಮೇಲಮ್ಮಾ... ಓ.. ಆಲಮೇಲಮ್ಮಾ... 
ಪ್ರೀತಿಯ ಹೂವು ಇವಳಂತೆ.. ಪತಿಯ ಕಣ್ಮಣಿ ಇವಳಂತೆ 
ಅಣ್ಣನ ಹಾರೈಕೆ ಏನಾಯ್ತು... ಅತ್ತಿಗೆ ಅರ್ಚನೆ ಏನಾಯ್ತು 
ಮಾಡಿದ ಪೂಜೆಯು ಏನಾಯ್ತು... ವೃತಗಳ ಫಲವು ಏನಾಯ್ತು 
ಆಲಮೇಲಮ್ಮಾ... ಓ.. ಆಲಮೇಲಮ್ಮಾ... ಆಲಮೇಲಮ್ಮಾ... ಓ.. ಆಲಮೇಲಮ್ಮಾ... 

ಹೇ.. ಅಂದಿಗೂ ಇಂದಿಗೂ ಒಂದೇ ಕಥೆಯು ಅರೆರೇ ಹೆಣ್ಣಿನ ಬಾಳೆ ಅಗ್ನಿಪರೀಕ್ಷೆಯು 
ಕಣ್ಣೀರಲಿ ಬರೆದ ಕಾವ್ಯವೂ ...  
ಕಣ್ಣೀರಲಿ ಬರೆದ ಕಾವ್ಯವೂ ... ವಿಧಿಯ ಕೈಯಲ್ಲಿ ಆಟದ ಬೊಂಬೆಯು 
ಆಲಮೇಲಮ್ಮಾ... ಓ.. ಆಲಮೇಲಮ್ಮಾ... ಆಲಮೇಲಮ್ಮಾ... ಓ.. ಆಲಮೇಲಮ್ಮಾ... ಓಓಓಓಓಓ 

ರಾಕ್ಷಸನ ಗುಹೆಗೆ ಹೋಗುತಿದೆ ಜಿಂಕೆ ಎಂಥ ಘೋರವಮ್ಮಾ... 
ಯಾರ ಶಾಪವಮ್ಮಾ ಅಗ್ನಿಕುಂಡವೆಂದು ಅರಿತು ಆಹುತಿಯಾಗುವೇಯಾ   
ಚಕ್ರತೀರ್ಥವೆಂದು ತಿಳಿದು ಸುಳಿಗೆ ಬೀಳುವೆಯಾ 
ಕಟುಕನಿವನ ಕತ್ತಿಗೆ ತಲೆಯ ಕೊಡುವೇಯಾ   
ಇಲ್ಲಾ ಚಾಮುಂಡಿ ಅವತಾರ ಮತ್ತೆಗೈವೆಯಾ 
ಆಲಮೇಲಮ್ಮಾ... ಓ.. ಆಲಮೇಲಮ್ಮಾ... ಆಲಮೇಲಮ್ಮಾ... ಓ.. ಆಲಮೇಲಮ್ಮಾ... 
ಅಯ್ಯೋ... ಕಾಮದ ಸರ್ಪವು ಕಾಡಿಹುದೋ ಬುಸುಬುಸುಗುಟ್ಟುತ ಎದ್ದಿಹುದೋ 
ಬಿಚ್ಚಿದ ಹೆಡೆಯನು ಎತ್ತಿಹುದೋ ಕಾರ್ಕೋಟಕ ವಿಷ ಕಕ್ಕಿಹುದೋ.... 
--------------------------------------------------------------------------------------------------------------------------

No comments:

Post a Comment