ಸತ್ಯ ಜ್ಯೋತಿ ಚಲನಚಿತ್ರದ ಹಾಡುಗಳು
- ಕಣ್ಣ ಆಡೋ ಮಾತೆ ಹೃದಯದಿಂದ
- ನೀ ನೀಡಿದ ಪ್ರೇಮದ ಸುಖ ತಂದಿದೆ
- ಆನಂದ ಆನಂದ ಆನಂದ ಇಂದು ಆನಂದ
- ಕೃಷ್ಣನ ಕಾಣುವೆಯಾ ಮುಗಿಲೇ
ಸಂಗೀತ : ಇಳೆಯರಾಜ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಕಣ್ಣು ಆಡೋ ಮಾತೆ ಹೃದಯದ ಮೌನ ಭಾವಗೀತೆ
ಅರ್ಥವೂ ನೂರಿದೆ ಸ್ವಂತವಾ ಸಾರಿದೆ
ಕಣ್ಣು ಆಡೋ ಮಾತೆ ಹೃದಯದ ಮೌನ ಭಾವಗೀತೆ
ಅರ್ಥವೂ ನೂರಿದೆ ಸ್ವಂತವಾ ಸಾರಿದೆ
ನಿನ್ನ ಕಣ್ಣ ನೋಟವು ಪ್ರಶ್ನೆ ನೂರು ಕೇಳಿತು
ಸೇರಿದಾಗ ಸಂಶಯ ಪ್ರೀತಿ ಹೂವ ಚೆಲ್ಲಿತು ಕಲ್ಲು ಮನವಿದೂ ಕರಗಿ ಹೋಯಿತು
ಬಂಧ ತಂತು ಕಂದ ನಿಜ ಅಂತರಂಗದಿಂದ
ಕಣ್ಣ ಅಂಚಿನಲ್ಲಿ ಹನಿ ನೀರ ಮುತ್ತನೊಂದ
ವಿಧ್ಯೆಯೆನ್ನಿ ಕಥೆಯೆನ್ನಿ ಇದು ಹೇಳಲಾಗದಂಥ ಬಂಧ
ಕಣ್ಣು ಆಡೋ ಮಾತೆ ಹೃದಯದ ಮೌನ ಭಾವಗೀತೆ
ಅರ್ಥವೂ ನೂರಿದೆ ಸ್ವಂತವಾ ಸಾರಿದೆ
ಬ್ರಹ್ಮ ಬರೆಯುವಾಗ ಅಂದು ಹಾಳೆ ಮುಗುಚಿ ಹೋಯಿತು
ಸತ್ಯ ಇಂದು ಸಾಕ್ಷಿ ಹೇಳಿ ಮಮತೆ ಅಲ್ಲಿ ಮೂಡಿತು
ಎರಡು ಶ್ರುತಿಗಳು ಹೊಂದಿಕೊಂಡಿತು
ಸಾಕು ಇನ್ನು ನೋವು ನಗಲು ಬಾಳಲು
ಸತ್ಯ ಗೆಲ್ಲೊ ವೇಳೆ ಮನ ಗಾಯ ಆರೋ ವೇಳೆ
ಕಂಬನಿಯ ಹೂಳೆ ಹರಿದು ಅದು ಧನ್ಯವಾಗಬೇಕೆಂದು
ಕಣ್ಣು ಆಡೋ ಮಾತೆ ಹೃದಯದ ಮೌನ ಭಾವಗೀತೆ
ಅರ್ಥವೂ ನೂರಿದೆ ಸ್ವಂತವಾ ಸಾರಿದೆ
--------------------------------------------------------------------------------------------------------------------------
ಸತ್ಯ ಜ್ಯೋತಿ (೧೯೮೬) - ನೀ ನೀಡಿದ ಪ್ರೇಮದ ಸುಖ ತಂದಿದೆ
ಸಂಗೀತ : ಇಳೆಯರಾಜ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ನೀಡಿದೆ
ನೀನಾಡೋ ಮಾತೇ ಚೆಂದ ನಿನೋಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು
ಗಂಡು : ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ
ಬಾಳೊಂದು ದೋಣಿ ಅಲ್ಲಿ ನಾವೂ ತೂರಿ ಜೇನಾಟ ಆಡೋ ಆಸೆ ದುಂಬಿ ನಾವಾಗಿ
ಹೆಣ್ಣು : ಕಣ್ಣಲ್ಲಿ ಕಣ್ಣಾ ಇಟ್ಟು ನೋಡು ನನ್ನ ನಲ್ಲ ನಿನ್ನಾಸೆ ಬಿಟ್ಟು ಅಲ್ಲಿ ಬೇರೆ ಏನು ಇಲ್ಲ
ನಿನ್ನಾ ಪ್ರೇಮಾ ಒಂದೇ ಸಾಕೂ ಬೇರೆ ಏನು ಬೇಕಿಲ್ಲ
ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ
ಗಂಡು : ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ನೀಡಿದೆ
ನೀನಾಡೋ ಮಾತೇ ಚೆಂದ ನಿನೋಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು
ಹೆಣ್ಣು : ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ
ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲಾ ನೀನೆಲ್ಲೂ ಅಲ್ಲೇ ಎಲ್ಲ ನಲ್ಲ ಸುಳ್ಳಲ್ಲ
ಗಂಡು : ಬಾಯಾರಿ ದಾಹ ದಾಹ ಎಂದೂ ನಾನು ಬಂದೆ ನನ್ನನ್ನೂ ಕಂಡು ಮೋಹ ಮೋಹ ಎಂದೇ
ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ
ನಿನ್ನಾ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ
ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ನೀಡಿದೆ
ನೀನಾಡೋ ಮಾತೇ ಚೆಂದ ನಿನೋಡೋ ನೋಟ ಚೆಂದ
ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು
--------------------------------------------------------------------------------------------------------------------------
ಸತ್ಯ ಜ್ಯೋತಿ (೧೯೮೬) - ಆನಂದ ಆನಂದ ಆನಂದ ಇಂದು ಆನಂದ
ಸಂಗೀತ : ಇಳೆಯರಾಜ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ
ಆನಂದ ಆನಂದ ಆನಂದ ಇದು ಆನಂದ ಕಂಡೆ ಬಾಳಲ್ಲಿ ನಾ ಹೊಸ ಆನಂದ
ಓ.. ನಲ್ಲ ನಿನ್ನಿಂದ .. ನೀನಂದ ಮಾತಿಂದ
ನನ್ನ ಕಣ್ಣಲ್ಲಿ ಇಂದು ಒಲವನ್ನು ತುಂಬಿದೆ
ನನ್ನ ಎದೆಯಲ್ಲಿ ನೂರು ಹೊಸ ಆಸೆ ತುಂಬಿದೆ
ದಿನವೂ ಬಯಕೆ ಸಾಲದೆ ಚೆಲುವಾ ನನ್ನಾ ಮನಸು ಸೋತಿದೆ
ಹೂವೊಂದನು ನಾ ಬೇಡಲು ಓಡಿ ಬಂದೆ ಈಗ
ಹೂದೋಟವೇ ನೀಡಲು ಮೂಕಾದೆನೂ ಆಗ
ಆನಂದ ಆನಂದ ಆನಂದ ಇದು ಆನಂದ ಕಂಡೆ ಬಾಳಲ್ಲಿ ನಾ ಹೊಸ ಆನಂದ
ನಿನ್ನಾ ಬದುಕಲಿ ಎಂದೂ ಸಿಹಿಯನ್ನೇ ತುಂಬುವೇ
ಸವಿ ಮಾತಾಡಿ ಹಿತವಾ ನೀಡುವೆ ಹೊಸ ಹಾಡಾಗಿ ಜೊತೆಯಾ ಸೇರುವೆ
ಸಂತೋಷದಾ ಸಂಗೀತವೇ ಇನ್ನೂ ಎಂದೂ ನಲ್ಲ
ಈ ಜೋಡಿಗೆ ಸರಿಸಾಟಿಯೇ ಬೇರೆ ಯಾರು ಇಲ್ಲ
ಆನಂದ ಆನಂದ ಆನಂದ ಇದು ಆನಂದ ಕಂಡೆ ಬಾಳಲ್ಲಿ ನಾ ಹೊಸ ಆನಂದ
-------------------------------------------------------------------------------------------------------------------------
ಸತ್ಯ ಜ್ಯೋತಿ (೧೯೮೬) - ಕೃಷ್ಣನ ಕಾಣುವೆಯಾ ಮುಗಿಲೇ
ಸಂಗೀತ : ಇಳೆಯರಾಜ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ .
ಕೃಷ್ಣನ ಕಾಣುವೆಯಾ ಮುಗಿಲೇ ಸಂಗತಿ ಹೇಳುವೆಯಾ
ಕಣ್ಣಲಿ ಪ್ರಿಯನಾ ಮುಖ ಬಂದು ಆ ದೈವ ಎಂದು ಇನ್ನೆಲ್ಲೂ ಕಂಡುದು
ನಿದ್ದೆಯು ಮರೆಯಾಗಿದೆ ಎದೆಯು ವಿರಹದಿ ಬೇಯುತಿದೆ ಎನ್ನ ಕಾತರದೇ ಬಲ್ಲೆ
ಪ್ರೀತಿ ಎಂಬ ಹೂವ ಲತೆಯಲಿ ನೋವು ಅರಳಿದೆ
ಕೃಷ್ಣನ ಕಾಣುವೆಯಾ ಮುಗಿಲೇ ಸಂಗತಿ ಹೇಳುವೆಯಾ
ಕಣ್ಣಲಿ ಪ್ರಿಯನಾ ಮುಖ ಬಂದು ಆ ದೈವ ಎಂದು ಇನ್ನೆಲ್ಲೂ ಕಂಡುದು
ಹುಣ್ಣಿಮೆಯು ಕಾಡಿದೆ ಕಂಗಳು ಕಣ್ಣೆವೆ ಆಗಿದೆ
ಹುಣ್ಣಿಮೆಯು ಕಾಡಿದೆ ಕಂಗಳು ಕಣ್ಣೆವೆ ಆಗಿದೆ
ನಿನ್ನ ಸ್ಪರ್ಶ ಸುಖವಿಲ್ಲದೆ ಬಾಡಿಹೋದ ಹೆಣ್ಣಿನಾ
ಹೂವು ಮುಖ ಎಂದು ನಗುವುದೋ
ಕೃಷ್ಣನ ಕಾಣುವೆಯಾ ಮುಗಿಲೇ ಸಂಗತಿ ಹೇಳುವೆಯಾ
ಕಣ್ಣಲಿ ಪ್ರಿಯನಾ ಮುಖ ಬಂದು ಆ ದೈವ ಎಂದು ಇನ್ನೆಲ್ಲೂ ಕಂಡುದು
--------------------------------------------------------------------------------------------------------------------------
No comments:
Post a Comment