ಶಭಾಷ್ ವಿಕ್ರಂ ಚಲನಚಿತ್ರದ ಹಾಡುಗಳು
- ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
- ಬಾರೇ ಬಾರೇ ನನ್ನ ಹಿಂದೆ ಹಿಂದೇ ಹೆಣ್ಣೇ
- ಚಿನ್ನ ಕೇಳಬ್ಯಾಡವೇ ನನ್ನ ಪುರಾಣ
- ಈ ರಾತ್ರಿ ನಾವಲ್ಲಿ ರಯ್ಯರಪ್ಪ
- ನೋಡು ನೋಡು ಸೌಂದರ್ಯವನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್. ಜಾನಕೀ
ಗಂಡು : ಹೃದಯ ವೀಣೆ ಮೀಟಲೂ ಕಣ್ಣೋಟದಲ್ಲಿ ಹೊಸ ರಾಗವನೂ ಹಾಡುತಿದೇ
ಬಳಿ ಬಂದು ಒಮ್ಮೆ ಕೇಳು ಅದು ರಾಗ ಹೇಳು
ಹೆಣ್ಣು : ಪಾ ಪಮರಿಗ ಗ ರೀ ಸನಿ ದ ಗ ರೀ ಸ ಪ ನೀ ಪ ನೀ ಸ ದಿ ಮ ಮ ಮ ಮ ರಿ ಸ ಸ ರೀ
ಮಪ ಪಸ ರಿಮಪ ಸರಿಮಪಾನಿಸಾ ಹೈ ..
ಗಂಡು : ಮನದಿ ಬಯಕೆ ಅರಳುವ ರಾಗ ಒಲವು ಮೂಡಿ ಕುಣಿಸುವ ರಾಗ
ಹೆಣ್ಣು : ಮನಸು ಮನಸು ಬೆರೆಸುವ ರಾಗ ಎದೆಯೊ ಆಸೆ ಹೇಳುವ ರಾಗ
ಗಂಡು : ಪ್ರಣಯದಾ ನುಡಿಯು ಸರಸದಾ ಸುಧೆಯೂ ಅರಿಯಂದೆದೆಯಲಿ
ಸುಖವಾ ಹಿತವಾ ನಾ ಕಂಡೇ ..
ಹೃದಯ ವೀಣೆ ಮೀಟಲೂ ಕಣ್ಣೋಟದಲ್ಲಿ ಹೊಸ ರಾಗವನೂ ಹಾಡುತಿದೇ
ಬಳಿ ಬಂದು ಒಮ್ಮೆ ಕೇಳು ಅದು ರಾಗ ಹೇಳು
ಹೆಣ್ಣು : ಸುಮವು ಅರಳಿ ನಗುತಿರುವಾಗ ಭ್ರಮರ ಹಾಡಿ ನಲಿಯುವ ರಾಗ
ಗಂಡು : ಮರದಿ ಚಿಗುರು ತುಂಬಿರುವಾಗ ಕೋಗಿಲೆ ಹಾಡೋ ಮೋಹಕ ರಾಗ
ಹೆಣ್ಣು : ಸ್ವರಗಳು ಮಧುರ ರಾಗವು ಮಧುರ ಕೇಳುತ ಕೇಳುತ ಇನಿಯ ನಿನಗೆ ನಾ ಸೋತೆ
ಹೃದಯ ವೀಣೆ ಮೀಟಲೂ ಕಣ್ಣೋಟದಲ್ಲಿ ಹೊಸ ರಾಗವನೂ ಹಾಡುತಿದೇ
ಬಳಿ ಬಂದು ಒಮ್ಮೆ ಕೇಳು ಅದು ರಾಗ ಹೇಳು
---------------------------------------------------------------------------------------------------
ಶಭಾಷ್ ವಿಕ್ರಂ (೧೯೮೫) - ಬಾರೇ ಬಾರೇ ನನ್ನ ಹಿಂದೆ ಹಿಂದೇ ಹೆಣ್ಣೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಬಿ.ಎಸ್.ಶಶಿರೇಖಾ
ಗಂಡು : ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಕೊಂಡು ನಿನ್ನ ಬಳಿಗೆ ಓಡಿ ಬಂದೇ
ಅಯ್ಯಯ್ಯಯ್ಯೋ ಬಾರೇ ಬಾ ನನ್ನ ಹಿಂದೆ ಊರ ದಾರಿ ನಿಂಗೆ ತೋರ್ತಿನ ಮುಂದೇ ..
ನೀ ಹುಚ್ಚಳಂತೇ ನೋಡಬೇಡ ಹಿಂದೆ ಮುಂದೆ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಕೊಂಡು ನಿನ್ನ ಬಳಿಗೆ ಓಡಿ ಬಂದೇ
ಗಂಡು : ಹೋಯ್ .. ಬಾರೆ ಬಾರೆ ನನ್ನಾ ಹಿಂದೆ ಹಿಂದೆ ಹೆಣ್ಣೇ ನಂಬಿಕೊಂಡು ನಿನ್ನ ಬಳಿಗೆ ಓಡಿ ಬಂದೇ
ಬಾರೆ ಬಾರೆ ನನ್ನಾ ಹಿಂದೆ ಹಿಂದೆ ಹೆಣ್ಣೇ ನಂಬಿಕೊಂಡು ನಿನ್ನ ಬಳಿಗೆ ಓಡಿ ಬಂದೇ
ನಿನ್ನ ಕಾಣದಾಗಿ ಮುಂದೆ ನೊಂದೆ ಇಂದು ಚಿನ್ನ ನನ್ನಲ್ಲಿ ಜೀವ ತಂದೆ ಹೋಯ್ ..
ಬಾರೇ .. ಬಾರೇ .. ನನ್ನಾ ಹಾಗೆ ವೇಷ ಹಾಕ್ಕೊಂಡ್ ಬಂದವನೇ
ಹೇಯ್ ನನ್ನ ಹಾಡು ಹೇಳ್ಕೊಂಡು ನಿಂತವ್ನೆ ನಂಬಬೇಡ ಇವನನ್ನೂ
ಇವನು ಕತ್ರಿ ನನ್ನಾಣೆ ಸುಳ್ಳಲ್ಲ ಕೇಳೇ ಗಾಯತ್ರೀ ..
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ನಂಬಿಕೊಂಡು ನಿನ್ನ ಬಳಿಗೆ ಓಡಿ ಬಂದೇ
ನಾನು ಇಲ್ಲವೆಂದು ರಾಸ್ಕಲ್ ಬಂದವ್ನೆ ನನ್ನ ವೇಷ ಹಾಕಿ ಸ್ಕೌನ್ಡ್ರಲ್ ನಿಂತವ್ನೆ ರಾಸ್ಕೆಲ್ ಹೋಯ್
ನಂಬಬೇಡ ಇವನನ್ನು ಇವನು ಶುದ್ಧ ಪೋರಿ ನನ್ನಾಣೆ ಸುಳ್ಳಲ್ಲ ಕೇಳೇ ಗಾಯತ್ರಿ
ನಗುತ್ತ... ಶಶಿ ಕುಣಿತಾ... ಎಗರ್ತಾ.. ನಡೀತಾ .. ಲಾಗವಾ ಹಾಕಲೇ ಪಲ್ಟಿಯಾ ಹೊಡೆಯಲೇ
ಛಪಂಗ ಛಪಂಗ ಗಿಲಕ್ ಗಿಲಕ್ ಥಾಥೈ ಥಾಥೈ ಥಾಥೈ
ಹೆಣ್ಣು : ನನ್ ಚೆಲುವ ನಿನ್ನ ನಾನಿಂದು ಕಂಡೆನು ಇಂದು ಇಲ್ಲಿ ಕಂಡು ಬೆರಗಾಗಿ ಹೋದೆನು
ಇನ್ನು ನಿನ್ನ ಬೀಡಲಾರೆ ನಂಬು ನೀ ನನ್ನ ನೀನೆಲ್ಲಿ ಇರುವೆಯೋ ನಾನಲ್ಲಿ ಚೆನ್ನ
ಇನ್ನು ಎಂದು ಮುಂದೆ ಮುಂದೆ ನಲ್ಲ ಬರುವೆ ನಾನು ನಿನ್ನ ಹಿಂದೆ ಹಿಂದೆ
ಗಂಡು : ಇಂಥ ಹುಡುಗಿಯನ್ನೂ ತಳ್ಳು ಹಿಂದೆ ಇನ್ನು ನಾನು ನೀನು ಒಂದೇ ಒಂದೇ
ಹೊಡಿಯಲೇ... ಹೆಣ್ಣು : ಹೂಂ
ಗಂಡು : ಚಚ್ಚಲೇ.. ಹೆಣ್ಣು : ಹೂಂ
ಗಂಡು : ಝಾಡಿಸಿ ಒದೆಯಲೇ ಹೆಣ್ಣು : ಓ
ಗಂಡು : ತಡಿಕೆಕಾ ನಿದಕ್ಕೂ ತಾಂತದಿಗಾಗಿನತುಥೈ ಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯಯ್ಯಯ್ಯಯೋ
---------------------------------------------------------------------------------------------------
ಶಭಾಷ್ ವಿಕ್ರಂ (೧೯೮೫) - ಚಿನ್ನ ಕೇಳಬ್ಯಾಡವೇ ನನ್ನ ಪುರಾಣ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ,
ಚಿನ್ನ ಕೇಳಬ್ಯಾಡ್ವೇ ನನ್ನ ಪುರಾಣ ಈ ಸೀಮೆಗೆಲ್ಲ ನಾನೋ ಜಾಣ
ಚಿನ್ನ ಕೇಳಬ್ಯಾಡ್ವೇ.. ಚಿನ್ನ ಕೇಳಬ್ಯಾಡ್ವೇ.. ಚಿನ್ನ ಕೇಳಬ್ಯಾಡ್ವೇ.. ನನ್ನ ಪುರಾಣ
ಅರೆರೇ ರಾತ್ರಿ ರಾಜರಂತೇ ಊರೆಲ್ಲ ತಿರುಗಾಡಿ ಕಣ್ಣ ಹಾಕಿ ಮನೆಗೆ ಸಿರಿ ಎಲ್ಲ ದೋಚುವೇ
ಅಡ್ಡ ಬಂದ ಜನರನ್ನ ಚಚ್ಚಿ ಹಾಕುವೇ ಮಚ್ಚಿನಿಂದ ತಲೆಯನ್ನು ಕೊಚ್ಚಿ ಹಾಕುವೇ ..
ಭಯವಾ ನಾ ತಿಳಿಯೇ ತರುಣಿ ನೀ ಅರಿಯೇ ..
ನನ್ನಾ ಗೆಲ್ಲೋರು ಯಾರಿಲ್ಲ ಮುತ್ತಿನ ಮಣಿಯೇ ..
ಅರೇ ನನ್ನಾ ತಿಳಿಯೋ ಗಂಡೇ ಇಲ್ಲ ನನ್ನರಗಿಣಿಯೇ
ಗಂಡು ಹುಲಿಯ ಹಾಗೆ ನಾನು ಬಂದಾಗ ಬೆಂಕಿ ಚೆಂಡಿನಂತೇ ನನ್ನ ವೈರಿ ಕಂಡಾಗ
ಬಿಡು ಬಿಡು ನನ್ನ ಮುದ್ದು ಸುಂದರಿ ಅರೇ .. ನನ್ನ ಕಂದಾ ಏಕೆ ನಿಂಗೆ ಹೀಗೆ ಕಣ್ಣೂರಿ ..
ಅರೇ ವಜ್ರದಂತೇ ಹೊಳೆವ ದುಂಡಾದ ಕಣ್ಗಳು ಕೆಂಪಿನಂತೇ ಹೊಳೆವ ರಂಗಾದ ತುಟಿಗಳೂ
ಬೆಳ್ಳಿಯಂತೇ ಹೊಳೆವ ಈ ನಿನ್ನ ಹಲ್ಗಳೂ
ಹೊನ್ನ ಬಣ್ಣ ಬೀರುವ ಈ ಕೈಯ್ಯಿ ಕಾಲ್ಗಳೂ ಹೊನ್ನ ನವ ನಿಧಿಯೋ ಅಯ್ಯೋ ನನ್ನ ಬಿಸಿಯೋ
ನಿನ್ನಾ ಬಿಟ್ಟೋರುಂಟೇ ಹೇಳೇ ಕನ್ಯಾಮಣಿಯೇ ಅರೇ ಬಿಟ್ಟೋರುಂಟೇ ಕೇಳಿ ಮಾರನ ಮರಿಯೇ
ರಾತ್ರಿ ಹೊತ್ತಲ್ಲಿ ನಾನು ಕಳ್ಳನಾಗುವೇ ಬೆಳಗಿನಲ್ಲಿ ನಿನ್ನ ನಲ್ಲ ನಾನಾಗುವೇ ಹಾಂ...
ಕೊಡು ಕೊಡು ನಿನ್ನ ಮನಸೂ ನಂಗೇ ಸುಂದರ ಅರೆ ತಗೋ ತಗೋ ನನ್ನ ಮನಸೂ ಪ್ರೇಮ ಕಿನ್ನರೀ ..
ಚಿನ್ನ ಕೇಳಬ್ಯಾಡ್ವೇ ನನ್ನ ಪುರಾಣ ಈ ಸೀಮೆಗೆಲ್ಲ ನಾನೋ ಜಾಣ
ಚಿನ್ನ ಕೇಳಬ್ಯಾಡ್ವೇ.. ಚಿನ್ನ ಕೇಳಬ್ಯಾಡ್ವೇ.. ಚಿನ್ನ ಕೇಳಬ್ಯಾಡ್ವೇ.. ನನ್ನ ಪುರಾಣ
--------------------------------------------------------------------------------------------------
ಶಭಾಷ್ ವಿಕ್ರಂ (೧೯೮೫) - ಈ ರಾತ್ರಿ ನಾವಲ್ಲಿ ರಯ್ಯರಪ್ಪ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ
ಈ ರಾತ್ರಿ ನಾವಲ್ಲಿ ರಯ್ಯರಪ್ಪ ರಯ್ಯರಪ್ಪ ರಯ್ಯ
ಆ ಸ್ವರ್ಗವಾ ಹೇಗೆ ಬಣ್ಣಿಸಲೀ ಬಣ್ಣಿಸಲೀ ನಾ
ಈ ರಾತ್ರಿ ನಾವಲ್ಲಿ ರಯ್ಯರಪ್ಪ ರಯ್ಯರಪ್ಪ ರಯ್ಯ
ಆ ಸ್ವರ್ಗವಾ ಹೇಗೆ ಬಣ್ಣಿಸಲೀ ಬಣ್ಣಿಸಲೀ ನಾ
ಈ ಒಂಟಿ ಬಾಳಲ್ಲಿ ಹಿತವಿಲ್ಲವೋ ಬದುಕಲ್ಲಿ ಏಕಾಂಗಿ ನೀನಲ್ಲವೋ
ನನ್ನಾಸೆ ಹೇಳೋಕೆ ಸಂಕೋಚವೋ
ಈ ತಾಣ ನಮಗೀಗ ಸರಿಯಿಲ್ಲವೋ ಜೊತೆ ಇರುವೇನೂ ಬಾ ನಲ್ಲ
ಈ ಮೌನವೂ ಬೇಕಿಲ್ಲ ಸರಸದಿ ಬೆರೆಯುವ ಚಿಂತೆಯ ಮರೆಯುವ ಒಂದಾಗುವ
ಈ ರಾತ್ರಿ ನಾವಲ್ಲಿ ರಯ್ಯರಪ್ಪ ರಯ್ಯರಪ್ಪ ರಯ್ಯ
ಆ ಸ್ವರ್ಗವಾ ಹೇಗೆ ಬಣ್ಣಿಸಲೀ ಬಣ್ಣಿಸಲೀ ನಾ
ಕಣ್ಣಲ್ಲಿ ಕನಸನ್ನೂ ಬಾ ತುಂಬುವೇ ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ಕಣ್ಣಲ್ಲಿ ಕನಸನ್ನೂ ಬಾ ತುಂಬುವೇ ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ನಿಜವಾದ ಸಂತೋಷ ನೀ ಹೊಂದುವೇ ಪ್ರತಿ ರಾತ್ರಿ ನನಗಾಗಿ ನೀ ಕಾಯುವೇ
ಸರಸದ ನುಡಿ ಏನೆಂದೂ ಪ್ರಣಯದ ಸುಖ ಹೀಗೆಂದೂ
ಸರಸದ ನುಡಿ ಏನೆಂದೂ ಪ್ರಣಯದ ಸುಖ ಹೀಗೆಂದೂ
ಇರುಳಿನ ಮರೆಯಲಿ ರಸಿಕನೇ ತಿಳಿಸುವೆ ಬಾ ಈಗಲೇ
ಈ ರಾತ್ರಿ ನಾವಲ್ಲಿ ರಯ್ಯರಪ್ಪ ರಯ್ಯರಪ್ಪ ರಯ್ಯ
ಆ ಸ್ವರ್ಗವಾ ಹೇಗೆ ಬಣ್ಣಿಸಲೀ ಬಣ್ಣಿಸಲೀ ನಾ
ಈ ರಾತ್ರಿ ನಾವಲ್ಲಿ ರಯ್ಯರಪ್ಪ ರಯ್ಯರಪ್ಪ ರಯ್ಯ
--------------------------------------------------------------------------------------------------
ಶಭಾಷ್ ವಿಕ್ರಂ (೧೯೮೫) - ನೋಡು ನೋಡು ಸೌಂದರ್ಯವನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಜಕುಮಾರಭಾರತಿ
ಓಂ.. ಓಂ.. ಓಂ.. ಓಂ..
ನೋಡು ನೋಡು ಸೌಂದರ್ಯವನೂ ಆಡು ಆಡು ಸವಿಮಾತನ್ನೂ
ಮಾಡು ಮಾಡು ಧ್ಯಾನವನು ಧ್ಯಾನವನು ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ .. ಓಂ.. ಓಂ.. ಓಂ.. ಓಂ..
ಅರಳಿ ಹೂವಲ್ಲಿ ಕಂಪನ್ನು ತುಂಬಿ ಕೋಗಿಲೆ ಕೊರಳಲ್ಲಿ ಇಂಪನ್ನೂ ತುಂಬಿದ
ಹುಣ್ಣಿಮೆ ಶಶಿಯಲ್ಲಿ ತಂಪನ್ನೂ ತುಂಬಿದ ಮಾನವನೆದೆಯಲ್ಲಿ ನೂರಾಸೆ ತುಂಬಿದ
ಎಲ್ಲೆಲ್ಲೂ ಸೌಂದರ್ಯವೇ .. ಎಲ್ಲೆಲ್ಲೂ ಆನಂದವೇ..
ನೋಡು ನೋಡು ಸೌಂದರ್ಯವನೂ ಆಡು ಆಡು ಸವಿಮಾತನ್ನೂ
ಬಾನಲ್ಲಿ ಬೆಳಗೋಕೆ ರವಿಯನ್ನು ತಂದನು ಭುವಿಯನ್ನೂ ಬೆಳಗೋಕೆ ನನ್ನನ್ನೂ ತಂದನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನೂ
ಬಾನಲ್ಲಿ ಬೆಳಗೋಕೆ ರವಿಯನ್ನು ತಂದನು ಭುವಿಯನ್ನೂ ಬೆಳಗೋಕೆ ನನ್ನನ್ನೂ ತಂದನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನೂ
ಅದಕ್ಕಾಗಿ ಮಾತಾಡಿ ನಾನಿಲ್ಲಿ ಬಂದೇನು ಆ ದೇವರಾ ರೂಪವೇ ನಾನೂ
ನಾನಿರಲೂ ಆನಂದವೇ ..
ನೋಡು ನೋಡು ಸೌಂದರ್ಯವನೂ ಆಡು ಆಡು ಸವಿಮಾತನ್ನೂ
ಮಾಡು ಮಾಡು ಧ್ಯಾನವನು ಧ್ಯಾನವನು ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ .. ಓಂ.. ಓಂ.. ಓಂ.. ಓಂ..
---------------------------------------------------------------------------------------------------
No comments:
Post a Comment